S O U L B L I S S

Loading

Bhagavad Gita – Vinayak Rao Bapat – 1

(ಉಪನಿಷತ್ತುಗಳು ಹಿಮಾಲಯ ಪರ್ವತದ ಶಾಂತವಾತಾವರಣದಲ್ಲಿ ಗುರುಶಿಷ್ಯ ಸಂವಾದ ರೂಪದಲ್ಲಿ ಪ್ರಕಟವಾಯಿತು. ಎಲ್ಲಾ ಉಪನಿಷತ್ತುಗಳ ಸಾರವಾದ ಶ್ರೀಮದ್ಭವದ್ಗೀತೆಯು, ಇದಕ್ಕೆ ತೀರ ವ್ಯತಿರಿಕ್ತವಾದ ವಾತಾವರಣದಲ್ಲಿ ಅಂದರೆ ಯುದ್ಧರಂಗದ ಮಧ್ಯದಲ್ಲಿ ಎರಡೂ ಸೇನೆಗಳೂ ಯುದ್ಧಕ್ಕೆ ಸನ್ನದ್ಧರಾಗಿರುವ ತುರುಸು ವಾತಾವರಣದಲ್ಲಿ ಬೋಧಿಸಲ್ಪಟ್ಟಿದೆ. ಯುದ್ಧದ ಮಧ್ಯದಲ್ಲಿ ಯುದ್ಧದಿಂದ ಹಿಮ್ಮೆಟ್ಟಬೇಕೆಂದು ತೀರ್ಮಾನಿಸಿದ ಅರ್ಜುನನಿಗೆ ಉಂಟಾದ ಮೋಹವನ್ನು ಹೋಗಲಾಡಿಸಿ ಅವನಲ್ಲಿ ಕರ್ತವ್ಯ ಜಾಗೃತಿಯನ್ನುಂಟು ಮಾಡುವುದಕ್ಕಾಗಿ ಶ್ರೀಕೃಷ್ಣನು ಗೀತೆಯನ್ನು ಬೋಧಿಸಿ ಅವನನ್ನು ತಿದ್ದಿದನು.

ಮಹಾಭಾರತದ ಯುದ್ಧವು ಕೌರವ – ಪಾಂಡವರಲ್ಲಿ ನಡೆಯಿತು. ನಮ್ಮ ನಿತ್ಯ ಜೀವನದಲ್ಲಿ ಇಂತಹ ಯುದ್ಧವು ನಿತ್ಯವೂ ನಡೆಯುತ್ತಿದೆ. ನಮ್ಮ ಮನಸ್ಸಿನಲ್ಲಿ ಉದ್ಭವಿಸುವ ನೂರಾರು ಅಧಾರ್ಮಿಕ ಅನೈತಿಕ ಆಸೆಗಳ ತರಂಗಗಳನ್ನು ಕೌರವರಿಗೂ, ಅವುಗಳ ಮಧ್ಯದಲ್ಲಿ ಆಗಾಗ್ಗೆ ಎದ್ದು ಕಾಣುವ ಧಾರ್ಮಿಕ ಸದ್ಭಾವಗಳನ್ನು ಪಾಂಡವರಿಗೂ ಹೋಲಸಬಹುದು. ಕೌರವರು ಸೈನ್ಯ ಸಂಖ್ಯೆಯಲ್ಲಿ ಹೆಚ್ಚಾಗಿಯೂ, ಬಲಿಷ್ಠವಾಗಿಯೂ ಇದ್ದಂತೆ ನಮ್ಮಲ್ಲಿ, ಅಧಾರ್ಮಿಕ ಭಾವನೆಗಳು ಸಂಖ್ಯೆಯಲ್ಲಿ ಹೆಚ್ಚಾಗಿವೆ ಮತ್ತು ಬಲಿಷ್ಠವಾಗಿವೆ. ಪಾಂಡವರ ಸಂಖ್ಯೆಯ ಮತ್ತು ಬಲವು ಕಡಿಮೆ ಇದ್ದಂತೆ ನಮ್ಮಲ್ಲಿಯ ಸದ್ಭಾವಗಳು ಸಂಖ್ಯೆಯಲ್ಲಿ ಕಡಿಮೆಯಾಗಿವೆ. ಪಾಂಡವರದು ಧಾರ್ಮಿಕ ಪಕ್ಷ ಅಂತೆಯೇ ನಮ್ಮಲ್ಲಿರುವ ಸದ್ಭಾವಗಳದ್ದೂ ಧಾರ್ಮಿಕ ಪಕ್ಷ. ನಮ್ಮಲ್ಲಿರುವ ದುರ್ಭಾವಗಳು ಕೌರವರಂತೆ ಅಧಾರ್ಮಿಕ ಪಕ್ಷ. ನಮ್ಮ ಮನಸ್ಸಿನಲ್ಲಿ ಧರ್ಮ ಮತ್ತು ಅಧರ್ಮ ಪಕ್ಷಗಳಲ್ಲಿ ಯುದ್ಧವು ನಡೆದಿರುವಾಗ ಅಧರ್ಮ ಪಕ್ಷದ ಸೇನಾಬಲವನ್ನು ಶಕ್ತಿಯನ್ನು ನೋಡಿ ಅರ್ಜುನನು ಹೆದರಿ, ಧೃತಿಗೆಟ್ಟು ಕಂಗಾಲಾದಂತೆ, ಜೀವನು ಸಹ ತನ್ನಲ್ಲಿರುವ ಅಧಾರ್ಮಿಕ ಭಾವಗಳ ಸಂಖ್ಯೆ ಮತ್ತು ಶಕ್ತಿಯನ್ನು ನೋಡಿ ಹೆದರಿ, ಕಂಗಾಲಾಗಿ ಧೃತಿಗೆಡುತ್ತಿರುತ್ತಾನೆ.

ಅರ್ಜುನನು ಶ್ರೀಕೃಷ್ಣನ ಉಪದೇಶದಿಂದ ಜಾಗ್ರತನಾಗಿ, ತನ್ನ ಸ್ವಲ್ಪವೇ ಸೈನ್ಯವನ್ನು ಒಟ್ಟುಗೂಡಿಸಿ ಧೈರ್ಯದಿಂದಲೂ ದೃಢಚಿತ್ತದಿಂದಲೂ, ಯುದ್ಧ ಮಾಡಿ ಗೆದ್ದಂತೆ, ಜೀವನು ಆತ್ಮನ ಸಲಹೆಯಂತೆ ತನ್ನ ಸರ್ವಶಕ್ತಿಯನ್ನು ಒಟ್ಟುಗೂಡಿಸಿ, ಯುದ್ಧ ಮಾಡಿದರೆ ಜಯವು ಕಟ್ಟಿಟ್ಟ ಗಂಟು ಎಂಬುದನ್ನು ಮಹಾಭಾರತ ಯುದ್ಧವು ಸೂಚಿಸುತ್ತದೆ. ಗೀತಾಭ್ಯಾಸಿಗಳಿಗೆ ಈ ಸಂದರ್ಭದಲ್ಲಿ ಕಠೋಪನಿಷತ್ತಿನಲ್ಲಿ ವರ್ಣಿಸಿದ ಉದಾಹರಣೆಯನ್ನು ಹೇಳುವುದು ಉಚಿತ. ಈ ಉದಾಹರಣೆಯಲ್ಲಿ ವೇದಾಂತ ಸಾಧಕರ ವಿವರಗಳಿವೆ. ಪ್ರತಿಯೊಬ್ಬ ವ್ಯಕ್ತಿಯ ಶರೀರವೇ ರಥ. ಈ ರಥವು ಐದು ಇಂದ್ರಿಯಗಳೂ, ಇಂದ್ರಿಯ ವಿಷಯಗಳೆಂಬ್ ಗಳೆಂಬ ತಮ್ಮ ತಮ್ಮ ರಸ್ತೆಯಲ್ಲಿ ರಥವನ್ನು ಎಳೆದುಕೊಂಡು ಹೋಗಲು ಯತ್ನಿಸುತ್ತೇವೆ. ತ್ತಿವೆ
ಬುದ್ದಿಯು ಈ ರಥದ ಸಾರಥಿ. ಅದು ಬಲಿಷ್ಠವಾದ ಇಂದ್ರಿಯಗಳೆಂಬ ಪದರುಗಳ ಲಗಾಮನ್ನು ಬಿಗಿಯಾಗಿ ಹಿಡಿದುಕೊಂಡು, ತಾನು ಹೇಳಿದ ರಸ್ತೆಯಲ್ಲಿ ಮಾತ್ರ ಹೋಗುವಂತೆ ವಿಧಿಸಿ, ಶರೀರದ ಯಜಮಾನನಾದ ಆತ್ಮನನ್ನೂ , ಶರೀರವನ್ನೂ (ರಥ) ನಿರ್ದಿಷ್ಟ ಸ್ಥಳಕ್ಕೆ ಒಯ್ದು ತಲುಪಿಸುತ್ತದೆ. ಗೀತೆಯಲ್ಲಿ ಸಹ ಇದೇ ಉಪಮಾನವಿದೆ. ರಥವನ್ನು ನಡೆಸುತ್ತಿರುವ ಪಾರ್ಥಸಾರಥಿಯು, ಅರ್ಜುನನಿಗೆ ಹೇಗೆ ವರ್ತಿಸಬೇಕು ಮತ್ತು ಯಾವ ಮಾರ್ಗದಲ್ಲಿ ಹೋಗಬೇಕು ಎಂಬುದನ್ನು ಉಪದೇಶಿಸುತ್ತಿರುವುದು ಮಾರ್ಮಿಕವಾಗಿದೆ.

ತನ್ನ ಸರ್ವಶಕ್ತಿಯನ್ನು ಒಟ್ಟುಗೂಡಿಸಿ ಯುದ್ಧ ಮಾಡಿದರೆ ಅವನಿಗೆ ಜಯವು ಕಟ್ಟಿಟ್ಟ ಗಂಟು, ಎಂಬುದನ್ನು ಮಹಾಭಾರತ ಯುದ್ಧವು ಸೂಚಿಸುತ್ತದೆ.
ಮಹಾಭಾರತದ ಇನ್ನೊಂದು ಉದಾಹರಣೆಯಿಂದ ನಾವು ಪಾಠವನ್ನು ಕಲಿಯುವಂತಿದೆ. ಕೌರವರ ತಂದೆಯಾದ ಧೃತರಾಷ್ಟ್ರನು ಹುಟ್ಟು ಕುರುಡನು. ಅವನನ್ನು ಮದುವೆಯಾದ ಗಾಂಧಾರಿಯು ತನ್ನ ಪತಿಗೆ ಸಿಗದಿರುವ ಸುಖವನ್ನು ತಾನು ಅನುಭವಿಸಕೂಡದೆಂದು ತಾನಾಗಿಯೇ ಬೇಕೆಂತಲೇ ತನ್ನ ಕಣ್ಣುಗಳಿಗೆ ಬಟ್ಟೆಯನ್ನು ಕಟ್ಟಿಕೊಂಡು ಜೀವಮಾನವಿಡೀ ಕುರುಡಳಾದಳು. ಇದೇ ರೀತಿಯಾಗಿ ಮನುಷ್ಯನ ಮನಸ್ಸು ಸಹ ಸತ್ಯವಸ್ತುವನ್ನು ನೋಡಲಾರದೆ (ಧೃತರಾಷ್ಟ್ರನಂತೆ) ಕುರುಡಾಗಿದೆ. ಮನಸ್ಸು ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊಂಡು, ಬೇಕಂತಲೇ ಕುರುಡಿಯಾದ ‘ಬುದ್ಧಿ’ ಎಂಬ ಗಾಂಧಾರಿಯ ಜೊತೆಗೆ ವಿವಾಹ ಮಾಡಿಕೊಂಡರೆ ಸತ್ಯವಸ್ತುವು ಪೂರ್ತಿಯಾಗಿ ಕಣ್ಮರೆಯಾಗುತ್ತದೆ. ಗಾಂಧಾರಿಯ ನೂರು ಅಧಾರ್ಮಿಕ ಮಕ್ಕಳಂತೆ ನೂರಾರು ಅಧಾರ್ಮಿಕ ಆಸೆಗಳು, ಭಾವಗಳು, ಮನಸ್ಸಿನಲ್ಲಿ ಎದ್ದು ಬಂದು, ಜೀವಿಯ ಹತ್ತಿರ ನಾನಾ ರೀತಿಯ ಹೀನಕಾರ್ಯಗಳನ್ನು ಮಾಡಿಸುತ್ತವೆ. ಈ ಯುದ್ಧದಲ್ಲಿ ಜೀವಿಯ ಅರ್ಜುನನಂತೆ ಭ್ರಮಿಷ್ಠನಾಗಿ ತನ್ನ ಕರ್ತವ್ಯವು ಏನೆಂಬುದನ್ನು ತಿಳಿಯಲಾರದೆ ತತ್ತರಿಸುತ್ತಿದ್ದಾನೆ. ಈ ಭ್ರಮೆಯನ್ನು ಹೋಗಲಾಡಿಸಿ ಪ್ರತಿಯೊಬ್ಬ ಜೀವಿಯೂ ಜ್ಞಾನವನ್ನು ಪಡೆದು ತನ್ನ ಕರ್ಮಗಳನ್ನು ದಕ್ಷತೆಯಿಂದಲೂ ಯಶಸ್ವಿಯಾಗಿಯೂ ಮಾಡಿ, ಲೋಕ ಹಿತವನ್ನು ಸಾಧಿಸುವುದರ ಜೊತೆಗೆ ತಾನು ಪರಮಾತ್ಮನು ಎಂಬ ಜ್ಞಾನವನ್ನು ನೆಪಮಾಡಿಕೊಂಡು ಜನತೆಗೆ ಉಪಯುಕ್ತವಾಗಲೆಂದು ಶ್ರೀಮದ್ಭಗವದ್ಗೀತೆಯು ಬೋಧಿಸಲ್ಪಟ್ಟಿದೆ.

ಗೀತೆಯ ತತ್ವದಂತೆ, ನಾವು ಅಹಂಕಾರ ರಹಿತವಾಗಿ ಮಾಡಿದ ವಿವಿಧ ಕರ್ಮಗಳು ಅಂತರಂಗದ ಮೇಲೆ ಅಂಟಿಕೊಂಡಿರುವ ವಾಸನೆಗಳ ಹಲವಾರು ಕವಚಗಳನ್ನು ಕ್ರಮೇಣ ಪರಿಹರಿಸಿ, ತೆಳುವಾಗಿsಸಿ, ಅಂತರಂಗವನ್ನು ಶುದ್ಧಿಗೊಳಿಸಿ ನಮ್ಮನ್ನು ಮುಂದಿನ ಜ್ಞಾನಸಾಧನೆಯ ಹಂತಕ್ಕೆ ತರಬೇತಿಗೊಳಿಸುತ್ತದೆ. ಈ ಅಂಶವನ್ನು ಸ್ಪಷ್ಟವಾಗಿ ತಿಳಿಯಬೇಕಾದರೆ ನಾವು ಮನಸ್ಸು ಮತ್ತು ಅವರ ಕಾರ್ಯ ವಿಭಾಗವನ್ನು ವಿವೇಚಿಸುವುದು ಅವಶ್ಯಕ.

ಮನಸ್ಸು ಮನುಷ್ಯನಲ್ಲಿರುವ ಪ್ರಬಲವಾದ ಇಂದ್ರಿಯ. ಮನಸ್ಸೇ ಮನುಷ್ಯ ಎಂದರೂ ತಪ್ಪಲ್ಲ. ಮನಸ್ಸಿನ ವಿಚಾರವಿದ್ದಂತೆ ವ್ಯಕ್ತಿಯಗುಣ ಇರುತ್ತದೆ. ಮನಸ್ಸು ಕ್ಷೋಭೆಗೊಂಡಿದ್ದರೆ, ಆ ಮನುಷ್ಯನೂ ಕ್ಷೋಭೆಗೊಳಗಾಗುತ್ತಾನೆ. ನಮ್ಮ ವಿವೇಚನೆಗೆ ಮನಸ್ಸನ್ನು ಎರಡು ವಿಭಾಗವಾಗಿ ವಿಂಗಡಿಸಬುದು. ಹೊರ ಮನಸ್ಸು ಮತ್ತು ಒಳ ಮನಸ್ಸು ಎಂದು- ಹೊರ ಮನಸ್ಸು ಪ್ರಪಂಚದ ಕಡೆಗೆ ಹೊರಮುಖವಾಗಿದೆ. ಇದು ಪಂಚೇಂದ್ರಿಯಗಳ ಮುಖಾಂತರ ಬಂದ ಸಂವೇದನೆಗಳನ್ನು ಗೃಹಿಸಿ ಒಳಗೊಯ್ದು ಮುಟ್ಟಿಸುತ್ತದೆ. ಒಳ ಮನಸ್ಸು ಈ ಎಲ್ಲಾ ಸಂವೇದನೆಗಳಿಂದ ಉಂಟಾಗುವ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿ ವಿವೇಚನೆ, ಹಿತ– ಅಹಿತಗಳನ್ನಾಗಿ ವಿಭಜಿಸಿ ಮುಂದೆ ಏನು ಮಾಡಬೇಕೆಂಬುದನ್ನು ನಿಶ್ಚಯಿಸಿ ತನ್ನ ನಿಶ್ಚಯದ ಆಜ್ಞೆಯನ್ನು ಐದು ಇಂದ್ರಿಯಗಳ ಮುಖಾಂತರ ಹೊರಕ್ಕೆ ಕಳಿಸಿ ಅನುಗುಣವಾದ ಕಾರ್ಯವನ್ನು ಮಾಡುವಂತೆ ನಿರ್ದೇಶಿಸುತ್ತದೆ. ಹೊರ ಮನಸ್ಸಿಗೆ ‘ಮನಸ್ಸು’ ಎಂತಲೂ ಒಳ ಮನಸ್ಸಿಗೆ ‘ಬುದ್ಧಿ’ ಎಂತಲೂ ಹೇಳಬಹುದು.
ಮನಸ್ಸು ಮತ್ತು ಬುದ್ಧಿ ಇವೆರಡೂ ಹೊಂದಿಕೊಂಡು ಕೆಲಸ ಮಾಡುತ್ತಿರುವಾಗ, ಆ ಮನುಷ್ಯನನ್ನು ಆರೋಗ್ಯವಂತನೆಂದು ತಿಳಿಯಲಾಗುತ್ತದೆ. ಸಂದಿಗ್ಧ ಸಮಯಗಳಲ್ಲಿ ಮನಸ್ಸು ಬುದ್ಧಿಯ ತೀರ್ಮಾನಕ್ಕೆ ತಲೆಬಾಗಿ ವರ್ತಿಸಬೇಕು.

ಆದರೆ ಸಾಮಾನ್ಯವಾಗಿ ಮನಸ್ಸು ಬುದ್ಧಿಗಳಲ್ಲಿ ಭಿನ್ನಾಭಿಪ್ರಾಯವಿರುವುದನ್ನೇ ಕಾಣುತ್ತೇವೆ. ವ್ಯಕ್ತಿಯಲ್ಲಿರುವ ಸ್ವಾರ್ಥ, ಮತ್ತು ಅಹಂಕಾರವೇ ಈ ಭಿನ್ನಾಭಿಪ್ರಾಯಗಳಿಗೆ ಕಾರಣ. ಭಿನ್ನಾಭಿಪ್ರಾಯವು ಹೆಚ್ಚಿದಷ್ಟು ಆಂತರಿಕ ಕ್ಷೋಭೆ ಮತ್ತು ಅಶಾಂತತೆಗಳು ಹೆಚ್ಚುತ್ತವೆ. ಅಶಾಂತತೆಯು ಹೆಚ್ಚಿದಂತೆ ಆ ವ್ಯಕ್ತಿಯು ಹೆಚ್ಚು ಹೆಚ್ಚು ಸ್ವಾರ್ಥಪರನಾಗುತ್ತಾನೆ.
ಎಚ್ಚರಿರುವಾಗ ನಾವೆಲ್ಲರೂ ಕಣ್ಣು, ಕಿವಿ, ನಾಲಿಗೆ, ಮೂಗು ಮತ್ತು ಚರ್ಮ ಎಂಬ ಐದು ಇಂದ್ರಿಯಗಳ ಮುಖಾಂತರ ಹೊರಗಿನ ಪ್ರಪಂಚದ ಜ್ಞಾನವನ್ನು ಮಾಡಿಕೊಳ್ಳುತ್ತೇವೆ. ಇಂದ್ರಿಯಗಳು ಆಯಾಯಾ ಇಂದ್ರಿಯ ವಿಷಯಗಳೊಡನೆ ಸಂಪರ್ಕ ಹೊಂದಿದಾಗ್ಯೆ ನಮ್ಮ ಹೊರಮನಸ್ಸಿನ ಮೇಲೆ ನಾನಾ ತರಹದ ಸಂವೇದನೆಗಳನ್ನುಂಟು ಮಾಡುತ್ತವೆ. ಮನಸ್ಸು ಮತ್ತು ಬುದ್ಧಿಗಳ ನಡುವೆ ‘ಅಹಂಕಾರ’ ಎಂಬ ದಪ್ಪವಾದ ಪರದೆ ಇದೆ. ಹೊರ ಮನಸ್ಸನ್ನು ತಲ್ಪಿದ ಸಂವೇದನೆಗಳು ಅಹಂಕಾರ ಪರದೆಯ ಮೂಲಕ ಹಾಯ್ದು ಹೋಗಿ ಬುದ್ಧಿಯನ್ನು ತಲ್ಪುತ್ತವೆ.

ಅಹಂಕಾರ ಎಂದರೆ, ವ್ಯಕ್ತಿಯ ಹಿಂದಿನ ಜನ್ಮದಲ್ಲಿ ಆಚರಿಸಿದ ವಿವಿಧ ಕರ್ಮಗಳ ಸಂಸ್ಕಾರ ರೂಪವಾದ ವಾಸನೆಗಳ (ಜ್ಞಾಪಕ) ದಟ್ಟವಾದ ಪರದೆ. ವ್ಯಕ್ತಿಯು ಈ ಸಂಚಿತವಾದ ವಾಸನೆಗಳನ್ನು ಬರಿದುಮಾಡಿಕೊಳ್ಳುವುದಕ್ಕಾಗಿ ಅನುಕೂಲವಾದ ವಾತಾವರಣವನ್ನು ಆರಿಸಿಕೊಂಡು ಈಗ ಜನ್ಮವೆತ್ತಿದ್ದಾನೆ. ಹೊರ ಮನಸ್ಸನ್ನು ತಲ್ಪಿದ ಸಂವೇದನೆಗಳು ಅಹಂಕಾರದ ಮೂಲಕ ಹಾಯ್ದು ಹೋಗುವಾಗ ಹಿಂದಿನ ಜನ್ಮದ ವಾಸನೆಗಳಿಗೆ (ಜ್ಞಾಪಕ) ಅನುಸಾರವಾದ ಪರಿಣಾಮವನ್ನು ಹೊಂದಿ ಪಂಚೇಂದ್ರಿಯಗಳ ಮೂಲಕ ಹೊರಬಂದು ಆ ವ್ಯಕ್ತಿಯಿಂದ ಅನುರೂಪವಾದ ವಿವಿಧ ಕಾರ್ಯಗಳನ್ನು ಮಾಡಿಸುತ್ತವೆ. ಜೊತೆಗೆ ಮೊದಲೇ ಸಂಚಿತವಾದ ವಾಸನೆಗಳ ಹೊರೆಯನ್ನು ಹೆಚ್ಚಿಸುತ್ತವೆ. ಈ ವಾಸನೆಗಳು ಹೆಚ್ಚಿದಷ್ಟೂ, ಅಜ್ಞಾನವು ಹೆಚ್ಚಿ ವ್ಯಕ್ತಿಯು ಆತ್ಮನನ್ನು ಮರೆಯುತ್ತಾ ಹೋಗುತ್ತಾನೆ. ಈ ವಿವರವನ್ನು ಕೆಳಗಿನ ಚಿತ್ರದಿಂದ ಹೆಚ್ಚು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು.

ಈಗಾಗಲೇ ಸಂಚಿತವಾಗಿರುವ ವಾಸನೆಗಳ ಹೊರೆಯನ್ನು ಕಡಿಮೆ ಮಾಡಿಕೊಂಡು ಹೊಸವಾಸನೆಗಳು ಸಂಚಯವಾಗದಂತೆ ಪ್ರಪಂಚದಲ್ಲಿದ್ದುಕೊಂಡೇ ವಿವಿಧ ಕರ್ಮಗಳನ್ನು ಮಾಡುವ ಕಲೆಯನ್ನು ಅಂದರೆ ಮನಸ್ಸು ಬುದ್ಧಿಯ ಉಪದೇಶವನ್ನು ಕೇಳಿ ಅದಕ್ಕನುಸಾರವಾಗಿ ವರ್ತಿಸುವಂತಾಗುವ ವಿಧಾನವನ್ನು ಗೀತೆಯು ಬೋಧಿಸುತ್ತದೆ. ಮನಸ್ಸು-ಬುದ್ಧಿಗಳ ನಡುವೆ ಇರುವ ಅಹಂಕಾರ ಎಂಬ ಪರದೆಯನ್ನು ಪರಿಹರಿಸಿ, ಮನಸ್ಸು-ಬುದ್ಧಿಗಳ ಪರಸ್ಪರ ಹೊಂದಾಣಿಕೆಯನ್ನು ಸಾಧಿಸುವ ವಿಧಾನಕ್ಕೆ ‘ಯೋಗ’ ಎಂಬ ಹೆಸರನ್ನು ಕೊಡಲಾಗಿದೆ. ಈ ಯೋಗವನ್ನು ಸಾಧಿಸಿದಾತನು (ಯೋಗಿ) ಮಾಡುವ ಎಲ್ಲಾ ಕರ್ಮಗಳೂ, ದಕ್ಷತೆಯಿಂದ ಸಾಗುತ್ತಿದ್ದು ಅವುಗಳಿಂದ ಸಂಚಿತವಾಸನೆಗಳು ಬರಿದಾಗುತ್ತಾ ಹೋಗುತ್ತವೆ. ಹೊಸ ವಾಸನೆಗಳ ಸಂಚಯವಾಗುವುದಿಲ್ಲ. ಹೀಗೆ ಕ್ರಮೇಣ ಇರುವ ವಾಸನೆಗಳೆಲ್ಲವೂ ಬರಿದಾದ ಮೇಲೆ ಅವನ ಬುದ್ಧಿಯು ಸ್ಫಟಿಕದಂತೆ ಶುಭವಾಗಿ ಬೆಳಗುತ್ತದೆ.

ಈಗ ಅವನು ಆತ್ಮಜ್ಞಾನವನ್ನು ಪಡೆಯಲು ಅರ್ಹನಾಗುತ್ತಾನೆ. ಆತ್ಮಜ್ಞಾನವನ್ನು ಪಡೆಯಬೇಕಾದರೆ ವಿವಿಧ ಕರ್ಮಗಳನ್ನು ಮಾಡುವಾಗ ಅಹಂಕಾರವನ್ನು ತ್ಯಜಿಸಬೇಕಾದುದು ಮೊಟ್ಟಮೊದಲಿನ ಸಾಧನೆ ಎಂದು ಶಂಕರಾಚಾರ್ಯರು ಸ್ಪಷ್ಟೀಕರಿಸಿದ್ದಾರೆ.

ನಿಜವಾಗಿ ವಿಚಾರ ಮಾಡಿದರೆ ಪ್ರತಿಯೊಬ್ಬ ವ್ಯಕಿಯೂ ತನ್ನಲ್ಲಿ ಸಂಚಿತವಾಗಿರುವ ವಾಸನೆಗಳನ್ನು ಬರಿದುಮಾಡಿಕೊಳ್ಳುವುದಕ್ಕೆ ಅನುಕೂಲವಾದ ಶರೀರ ಮಾತಾಪಿತೃಗಳು ಹಾಗೂ ವಾತಾವರಣವನ್ನು ಆರಿಸಿಕೊಂಡು ಈಗ ಜನ್ಮವೆತ್ತಿದ್ದಾನೆ. ಅವನು ಈ ಶರೀರದೊಡನೆ ದೊರೆತ ಇಂದ್ರಿಯಗಳ ಮುಖಾಂತರವೇ ಅಂದರೆ ವಿವಿಧ ಕರ್ಮಗಳ ಮುಖಾಂತರವೇ ತನ್ನ ವಾಸನೆಗಳನ್ನು ಬರಿದುಮಾಡಿಕೊಳ್ಳಬೇಕಾಗಿದೆ.

ಈ ಕಾರ್ಯವು ಒಳಗಿನ ಕಲ್ಮಶವನ್ನು ಹೊರಕ್ಕೆ ಹಾಕುವುದಾಗಿರಬೇಕು. ಆದರೆ ದುರ್ದೈವದಿಂದ ವ್ಯಕ್ತಿಯು ಅಹಂಕಾರ ಯುಕ್ತನಾಗಿ ಇಂದ್ರಿಯ ದ್ವಾರಾ ಮಾಡುವ ವಿವಿಧ ಕರ್ಮಗಳಿಂದ ವಾಸನೆಗಳು ಬರಿದಾಗಲಾರವು, ವಿರುದ್ಧವಾಗಿ ಹೊಸ ಹೊಸ ವಾಸನೆಗಳು ಉತ್ಪನ್ನವಾಗಿ, ಇರುವ ವಾಸನೆಗಳ ಹೊರೆಯನ್ನು ಹೆಚ್ಚಿಸುತ್ತವೆ. ಈ ತಪ್ಪನ್ನು ತಿದ್ದಿಕೊಂಡು, ವಿವಿಧ ರೀತಿಯ ಕರ್ಮಗಳನ್ನು ಮಾಡುತ್ತಿದ್ದಾಗ್ಯೂ ಹೊಸ ವಾಸನೆಗಳು ಉತ್ಪನ್ನವಾಗದಂತೆ ತಡೆದು ಇರುವ ವಾಸನೆಗಳನ್ನು ಬರಿದು ಮಾಡಿಕೊಳ್ಳುವ ಕಲೆಯನ್ನು ಗೀತೆಯು ಉಪದೇಶಿಸುತ್ತದೆ.

ತನ್ನ ಆಂತರಿಕ ಶೋಭೆ ಮತ್ತು ಅಶಾಂತತೆಯಗಳು ಹೆಚ್ಚುತ್ತವೆ. ಅಶಾಂತತೆಯು ಹೆಚ್ಚಿದಂತೆ ಆ ವ್ಯಕ್ತಿಯು ಹೆಚ್ಚು ಹೆಚ್ಚು ಸ್ವಾರ್ಥಪರನಾಗುತ್ತಾನೆ ಮತ್ತು ಹೆಚ್ಚು ಹೆಚ್ಚು ಕೆಳ ಮಟ್ಟಕಿಳಿಯುತ್ತಾನೆ.
ಮಹಾಭಾರತದ ಇನ್ನೊಂದು ಉದಾಹರಣೆಯಿಂದ ನಾವು ಪಾಠವನ್ನು ಕಲಿಯುವಂತಿದೆ.