S O U L B L I S S

Loading

Bhagavad Gita – Vinayak Rao Bapat – Chapter 15

ಹದಿನೈದನೆಯ ಅಧ್ಯಾಯ
ಪುರುಷೋತ್ತಮ ಯೋಗ

ಪೀಠಿಕೆ
ಈ ಮೊದಲು ತಿಳಿಸಿದಂತೆ ಭಗವದ್ಗೀತೆಯ ಮಧ್ಯದ ಆರು ಅಧ್ಯಾಯಗಳಲ್ಲಿ ‘ತತ್ವಮಸಿ’ ಎಂಬ ಮಹಾವಾಕ್ಯದಲ್ಲಿಯ ‘ತತ್’ ಪದದ ವರ್ಣನೆಯಿದೆ. ಹನ್ನೆರಡನೆಯ ಅಧ್ಯಾಯದಲ್ಲಿ ಭಕ್ತಿಯೋಗವನ್ನು ತಿಳಿಸಿ, ಭಕ್ತನು ಮೈಗೂಡಿಸಿಕೊಳ್ಳಬೇಕಾದ ಸದ್ಗುಣಗಳಾವುವು ಎಂಬುದನ್ನು ವಿವರಿಸಲಾಯಿತು. ಈ ಪೂರ್ವತಯಾರಿಯಾದ ಮೇಲೆ ಹದಿಮೂರನೆಯ ಅಧ್ಯಾಯದಲ್ಲಿ ಕ್ಷೇತ್ರಕ್ಷೇತ್ರಜ್ಞನ ವಿಚಾರವನ್ನು ವಿವರಿಸಲಾಯಿತು. ಪರಮಾತ್ಮನು ಅಹಂಕಾರದಿಂದ ಕೂಡಿ ಜೀವ ಎನಿಸಿಕೊಳ್ಳುತ್ತಾನೆಂದೂ, ಈ ಜೀವನು ಅಹಂಕಾರ ಎಂಬ ಅಜ್ಞಾನವನ್ನು ಕಳಚಿ ಹಾಕಿದರೆ ತಾನೇ ಪರಮಾತ್ಮ ಎಂಬ ಜ್ಞಾನವನ್ನು ಪಡೆಯುತ್ತಾನೆಂದೂ ತಿಳಿಸಲಾಯಿತು. ಅದರ ಮುಂದಿನ ಅಧ್ಯಾಯದಲ್ಲಿ ಇದೇ ತತ್ವವನ್ನು ವೈಜ್ಞಾನಿಕ ದೃಷ್ಟಿಯಿಂದ ವಿವರಿಸಲಾಗಿದೆ. ಸತ್ಯ, ರಜಸ್, ತಮಸ್‍ಗಳೆಂಬ ಮೂರು ಗುಣಗಳು ಜೀವನನ್ನು ಶರೀರಕ್ಕೆ ಬಂಧಿಸುತ್ತನೆಂದೂ, ಜೀವನು ಈ ಗುಣಗಳ ಬಲೆಗೆ ಸಿಗದೆ, ಬದಿಗೆ ಸರಿದು ನಿಂತು, ಗುಣಗಳು ತಮ್ಮಷ್ಟಕ್ಕೆ ತಾವೇ ಕೆಲಸಮಾಡುತ್ತವೆ ಎಂಬ ಭಾವದಿಂದ ಅವುಗಳ ಬಗ್ಗೆ ಉದಾಸೀನನಾಗಿದ್ದರೆ, ಅವನು ಗುಣಾತೀತನಾಗಿ ತಾನೇ ಪರಮಾತ್ಮ ಎಂಬ ಜ್ಞಾನವನ್ನು ಪಡೆಯುತ್ತಾನೆಂದು ಸ್ಪಷ್ಟಪಡಿಸಲಾಗಿದೆ.
ನಮ್ಮ ಕಣ್ಣೆದುರಿರಗೆ ಕಾಣುವ ವಸ್ತುಗಳ ಮೂಲಕ ಅವ್ಯಕ್ತ ಪರಮಾತ್ಮನನ್ನು ಕಾಣಬೇಕೆಂದು ಈ ಅಧ್ಯಾಯದಲ್ಲಿ ಬೋಧಿಸಲಾಗಿದೆ. ಸೃಷ್ಟಿಯಾದ ವಸ್ತುಗಳನ್ನು ನಾವು ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಗಳ ಮೂಲಕ ತಿಳಿದುಕೊಳ್ಳುತ್ತೇವೆ. ಮನಸ್ಸನ್ನು ಇನ್ನೂ ಮೇಲಂತಸ್ತಿಗೆ ತೆಗೆದುಕೊಂಡು ಹೋಗಿ ಪರಮಾತ್ಮನ್ನು ಗುರುತಿಸಬೇಕು. ಪ್ರಪಂಚದ ದೃಷ್ಟಿಯಿಂದ ನೋಡುವುದಾದರೆ ಪರಮಾತ್ಮನು ನಾಶವಿಲ್ಲದವನು, ಕೊನೆಯಿಲ್ಲದವನು. ಮತ್ತು ಬದಲಾವಣೆಯಿಲ್ಲದವನು ಎಂದು ವರ್ಣಿಸಲಾಗಿದೆ. ‘ಕ್ಷರ’ದ ಜೊತೆಗೆ ಹೋಲಿಸಿದರೆ ಅವನು ‘ಅಕ್ಷರ’ನು. ಅವನು ಕ್ಷರನೂ ಅಹುದು, ಅಕ್ಷರನೂ ಅಹುದು, ಅವೆರಡರ ಆಚೆಗಿರುವವವನೂ ಅಹುದು. ಹೀಗೆ ಯಾವ ವ್ಯತ್ಯಾಸವನ್ನೂ ಹೊಂದದ ಪರವಸ್ತುವಿಗೆ ಈ ಅಧ್ಯಾಯದಲ್ಲಿ ಪುರುಷೋತ್ತಮ ಎಂದು ಕರೆಯಲಾಗಿದೆ.
‘ಯಾವನು ನನ್ನನ್ನು, ಪುರುಷೋತ್ತಮನೆಂದು ನಿಶ್ಚಯವಾಗಿ ತಿಳಿಯುತ್ತಾನೋ, ಮತ್ತು ನನ್ನನ್ನು ಆ ರೀತಿ ಅರ್ಚಿಸುತ್ತಾನೋ’ ಅವನು ಎಲ್ಲವನ್ನೂ ತಿಳಿದವನಾಗುತ್ತಾನೆ. ಎಂಬ ತೀರ್ಮಾನವನ್ನು ಶ್ರೀಕೃಷ್ಣನು ಹೇಳಿದ್ದಾನೆ. ಪರಮಾತ್ಮನ ನೇರವಾದ ವರ್ಣನೆಯು ಈ ಪುಟ್ಟ ಅಧ್ಯಾಯದಲ್ಲಿ ಇದೆ. ಅನೇಕರು ಈ ಅಧ್ಯಾಯವನ್ನು ಊಟಮಾಡುವ ಮೊದಲು ಪಾಠಮಾಡುತ್ತಾರೆ.

ಹದಿನೈದನೆಯ ಅಧ್ಯಾಯ
ಪುರುಷೋತ್ತಮ ಯೋಗ
ಶ್ರೀ ಭಗವಾನುವಾಚ
ಊಧ್ರ್ವಮೂಲಮಧಃಶಾಖಮಶ್ಚತ್ಥ ಪ್ರಾಹುರವ್ಯಯಮ್ ಮಶ್ವಥಂ | ಅಶ್ವಥಮ್
ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್ || 1 ||
ಅರ್ಥ :- ಈ ಅಶ್ಚತ್ಥ ಮರದ ಬೇರು ಮೇಲುಗಡೆಗೂ, ಶಾಖೆಗಳು ಕೆಳಗಡೆಗೂ ಹರಡಿವೆ ಎಂದೂ, ಇದು ನಾಶವಿಲ್ಲದುದೆಂದೂ, ವೇದಗಳು ಈ ಮರದ ಎಲೆಗಳೆಂದೂ, ಯಾರು ತಿಳಿಯುತ್ತಾರೋ, ಅವನೇ ವೇದವನ್ನೂ ತಿಳಿದವನು.
ಇಲ್ಲಿ ಅಶ್ಚತ್ಥ ಮರವನ್ನು ಪ್ರಪಂಚಕ್ಕೆ ಹೋಲಿಸಲಾಗಿದೆ. ‘ಶ್ಚಃ’ ಎಂದರೆ ನಾಳೆಯವರೆಗೆ ‘ತ್ಥ’ ನಿಲ್ಲತಕ್ಕದ್ದು ‘ಅ’ ಅಲ್ಲ. ಅಂದರೆ ಪ್ರಪಂಚವು ಶಾಶ್ವತವಾಗಿ ನಿಲ್ಲತಕ್ಕದ್ದಲ್ಲ ಎಂದರ್ಥ. ಪ್ರಪಂಚವು ನಿತ್ಯವೂ, ಪ್ರತಿಗಳಿಗೆಯಲ್ಲಿಯೂ ಬದಲಾವಣೆಯನ್ನು ಹೊಂದುತ್ತಿರುವುದರಿಂದ, ಇದು ಒಂದೇ ರೀತಿಯಲ್ಲಿ ಇರುವುದಿಲ್ಲ ಎಂಬ ಭಾವ.
ಈ ಸಂಸಾರ ವೃಕ್ಷವು ಮೇಲುಗಡೆಗೆ ಬೇರುಗಳುಳ್ಳದ್ದಾಗಿದೆ; ಎಂದರೆ ನೋಡುವುದಕ್ಕೆ ವಿಕಾರವಾಗಿ ಕಾಣುತ್ತದೆ. ಏಕೆಂದರೆ ಎಲ್ಲಾ ವೃಕ್ಷಗಳ ಬೇರುಗಳು ಕೆಳಗಡೆಗೆ ಇರುವುದನ್ನು ನಾವು ನೋಡುತ್ತೇವೆ. ಇತಿಹಾಸದಲ್ಲಿ ವಂಶವೃಕ್ಷವನ್ನು ಬರೆಯುವಾಗ, ವಂಶದ ಮೂಲ ಪುರುಷನನ್ನು (ಬೇರು) ಮೇಲುಗಡೆಗೆ ಬರೆದು, ನಂತರ ಬರಬರುತ್ತಾ ಕೆಳಗೆ ಅವನ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಮೊದಲಾದವರ ಹೆಸರುಗಳನ್ನು ಬರೆಯಲಾಗುತ್ತದೆ. ಈ ವೃಕ್ಷವು ಕೆಳಮುಕವಾಗಿ ಬೆಳೆಯುತ್ತಾ ಹೋಗುತ್ತದೆ. ಹೀಗೆಯೇ ಪ್ರಪಂಚ ಎಂಬ ಸಂಸಾರವೃಕ್ಷವು ಪರಮಾತ್ಮನಿಂದ ಪ್ರಾರಂಭವಾಯಿತು. ಅವನೇ ಮೂಲ ಪುರುಷನು ಅದಕ್ಕಾಗಿಯೇ ಬೇರು ಮೇಲಕ್ಕಿದೆ ಎಂದು ಹೇಳಲಾಗಿದೆ.
ಅಶ್ವತ್ಥಮರವು ಇತರೆ ಎಲ್ಲಾ ಮರಗಳಿಗಿಂತಲೂ ಹೆಚ್ಚು ಕಾಲ ಬದುಕುವುದರಿಂದ ಇದು ನಾಶವಿಲ್ಲದುದು ಎಂದು ಹೇಳಲಾಗಿದೆ. ಹಳ್ಳಿಯಲ್ಲಿರುವ ಅಶ್ವತ್ಥಮರವು ಊರಿನ ಜನರ ಅನೇಕ ಪೀಳಿಗೆಗಳನ್ನು ನೋಡುತ್ತಾ ಬದುಕಿರುವುದರಿಂದ, ತರತಮ ಭೇದದಿಂದ ಮಾತ್ರ ಇದು ಅವ್ಯಯ – ಶಾಶ್ವತವಾದುದು ಎಂದು ತಿಳಿದುಕೊಳ್ಳಬೇಕು.
ವೇದಗಳು ಇದರ ಎಲೆಗಳು. ವೇದ ಅಂದರೆ ಜ್ಞಾನ ಅಥವಾ ತಿಳಿವಳಿಕೆ. ಜ್ಞಾನದಿಂದ ನಾವು ಯಾವ ಕಾರ್ಯವನ್ನಾದರೂ ಸಾಧಿಸಬಹುದು. ಜ್ಞಾನದಿಂದ ಜೀವನದಲ್ಲಿ ಮಹತ್ಕಾರ್ಯಗಳನ್ನು ಸಾಧಿಸುವಂತೆ, ನಾನಾ ರೀತಿಯ ಹೊಸ ವಿಷಯಗಳನ್ನು ಕಂಡು ಹಿಡಿಯುವಂತೆ, ಎಲ್ಲಕ್ಕೂ ಮೂಲವಾದ ಪರಮಾತ್ಮನ ಜ್ಞಾನವನ್ನು ಸಹ ಪಡೆಯಬಹುದು. ಎಲೆಗಳು ವೇದಗಳು (ಜ್ಞಾನ) ಎಂದು ಹೇಳಿರುವುದು ಅರ್ಥಗರ್ಭಿತವಾಗಿದೆ. ಗಿq ಗಿಡದ À ಎಲೆಗಳಿಂದ ಗಿಡದಲ್ಲಿಯ ನೀರು ಆವಿಯ ರೂಪವಾಗಿ ಹೋಗುತ್ತದೆ. ಇದನ್ನು ಭರ್ತಿಮಾಡಲು, ಬೇರುಗಳು ಭೂಮಿಯಿಂದ ನೀರನ್ನು ಹೆಚ್ಚು ಹೆಚ್ಚಾಗಿ ಹೀರಿಕೊಳ್ಳುತ್ತವೆ. ನೀರಿನ ಜೊತೆಗೆ ಗಿಡಕ್ಕೆ ಬೇಕಾದ ಪೋಷಕ ವಸ್ತುಗಳನ್ನೂ ಹೀರಿಕೊಳ್ಳುತ್ತವೆ. ಅಂದರೆ ಗಿಡಕ್ಕೆ ಪೋಷಣೆಯನ್ನು ಒದಗಿಸಲು ಗಿಡದ ಎಲೆಗಳೇ ಪ್ರೇರಕವೆಂದಂತಾಯಿತು. ಗಿಡದಲ್ಲಿ ಹೆಚ್ಚು ಎಲೆಗಳಿದ್ದಷ್ಟೂ ಗಿಡವು ಹೆಚ್ಚು ಪುಷ್ಟವಾಗತ್ತದೆ. ಇದೇ ರೀತಿಯಾಗಿ ವೇದಗಳಿಂದ ಜ್ಞಾನವನ್ನು ಪಡೆದು ಮನುಷ್ಯನು ತನ್ನ ಇಷ್ಟಾರ್ಥಗಳೆಲ್ಲವನ್ನೂ ಪೂರೈಸಿಕೊಳ್ಳಬಹುದು. ಅಶ್ವತ್ಥ ಎಂಬ ಈ ಸಂಸಾರ ವೃಕ್ಷವು ಬೇರಿನಿಂದ ಅಂದರೆ ಪರಮಾತ್ಮನಿಂದ ತನ್ನ ಎಲ್ಲಾ ಪೋಷಣೆಗಳನ್ನೂ ಪಡೆಯುತ್ತದೆ. ಈ ಜ್ಞಾನವನ್ನು ತಿಳಿದವನು ವೇದಗಳನ್ನು ತಿಳಿದವನಾಗುತ್ತಾನೆ.

ಅಧಶ್ಚೋಧ್ರ್ವಂ ಪ್ರಸೃತಾಸ್ತಸ್ಯ ಶಾಖಾ
ಗುಣಪ್ರವೃದ್ಧಾ ವಿಷಯಪ್ರವಾಲಾಃ
ಅಧಶ್ಚಮೂಲಾನ್ಯನುಸಂತನಾನಿ
ಕರ್ಮಾನುಬಂಧೀನಿ ಮನುಷ್ಯಲೋಕೇ || 2 ||
ಅರ್ಥ :- ಈ ಮರದ ಕವಲುಗಳು ಕೆಳಕ್ಕೆ ಹಾಗೂ ಮೇಲಕ್ಕೆ ಹರಡಿಕೊಂಡಿವೆ. ಗುಣಗಳಿಂದ ಇವುಗಳ ಪೋಷಣೆಯಾಗುತ್ತದೆ. ಇಂದ್ರಿಯವಿಷಯಗಳು ಅಶ್ವತ್ಥ ಮರದ ಚಿಗುರುಗಳು. ಇದರ ಸಣ್ಣ ಬೇರುಗಳು ಮನುಷ್ಯ ಲೋಕದ ಕಡೆಗೆ, ಕೆಳಗೆ ಹರಡಿ, ಮನುಷ್ಯರನ್ನು ಕರ್ಮಗಳಿಂದ ಬಂಧಿಸುತ್ತವೆ.
ಗೂಢ ವಿಷಯಗಳನ್ನು ವಿವರಿಸುವಾಗ ಪ್ರಪಂಚದಲ್ಲಿ, ನಮ್ಮ ನಿತ್ಯ ವ್ಯವಹಾರದಲ್ಲಿ ಕಾಣಬರುವ ಸ್ಥೂಲವಸ್ತುಗಳನ್ನು ಹೋಲಿಕೆಗಾಗಿ ಆರಿಸಿ ವರ್ಣನೆಯನ್ನು ಮಾಡುವುದು ಅನಿವಾರ್ಯ. ಇಂತಹ ವರ್ಣನೆಯಲ್ಲಿ ಹೋಲಿಕೆಯು ಎಲ್ಲಾ ದೃಷ್ಟಿಯಿಂದಲೂ ಸಮಾನವಾಗಿರುವುದು ಸಾಧ್ಯವೇ ಇಲ್ಲ. ಸಮಾನವಾಗಿರುವ ಗುಣಗಳಷ್ಟನ್ನೇ ಹೋಲಿಕೆಗೆ ತೆಗೆದುಕೊಂಡು, ಆ ರೀತಿ ಹೋಲಿಸುವಾಗ ಇರುವ ಮನೋಭಾವವನ್ನು ಗಮನಿಸಬೇಕೇ ಹೊರತು ಎಲ್ಲಾ ದೃಷ್ಟಿಯಿಂದಲೂ ಹೋಲಿಸಲು ಹೋಗಬಾರದು.
ಶಾಖೆಗಳು ಮೇಲಕ್ಕೆ ಮತ್ತು ಕೆಳಕ್ಕೆ ಹರಡಿವೆ – ಮನುಷ್ಯನ ವೈಯಕ್ತಿಕ ಹಾಗೂ ಪ್ರಾಪಂಚಿಕ ಜೀವನದ ಪ್ರಗತಿಯು, ಕೆಲವು ಸಾರಿ ಉತ್ತಮ ಗುರಿಯನ್ನು ಸಾಧಿಸುತ್ತಾ ಮೇಲುಗಡೆಗೆ, ಪ್ರಗತಿಯ ಕಡೆಗೆ, ಬೆಳೆಯುತ್ತದೆ; ಮತ್ತೆ ಕೆಲವು ಸಾರಿ ಪಾಶವೀವೃತ್ತಿಯು ಹೆಚ್ಚಾಗಿ, ಕೆಳಮಟ್ಟಕ್ಕೆ ಅಂದರೆ ಅವನತಿಯ ಕಡೆಗೆ ಸಾಗಿರುತ್ತದೆ. ಶಾಖೆಗಳು ಮೇಲಕ್ಕೂ, ಕೆಳಕ್ಕೂ ಹರಡಿವೆ ಎಂಬ ವರ್ಣನೆಯಲ್ಲಿ ಈ ಭಾವವನ್ನು ಸೂಚಿಸಲಾಗಿದೆ. (ಹಿಂದೆ ತಿಳಿಸಿದ ಏಣಿಯ ಉಪಮಾನವನ್ನು ನೋಡಿರಿ) ಗುಣಪ್ರವೃದ್ಧಾ:- ಈ ರೀತಿಯಾಗಿ ಪ್ರಗತಿಯ ಇಲ್ಲವೆ ಅವನತಿಯ ಕಡೆಗಿನ ಓಘವು ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿರುವ ‘ಗುಣ’ಗಳ ಪ್ರಭಾವಕ್ಕನುಗುಣವಾಗಿವೆ. ಇವು ಗುಣಗಳಿಂದ ಪುಷ್ಟಿಗೊಂಡು ಆಯಾಯಾ ರೀತಿಯಾಗಿ ಕಾರ್ಯವನ್ನು ಮಾಡುತ್ತವೆ. ಪ್ರತಿಯೊಂದು ಗಿಡದಲ್ಲಿಯೂ ಚಿಗುರುಗಳಿರುತ್ತವೆ. ಅವು ಮುಂದೆ ಶಾಖೋಪಶಾಖೆಗಳಾಗಿರುತ್ತವೆ. ಮನುಷ್ಯನಲ್ಲಿ ಇಂದ್ರಿಯವಿಷಯಗಳು ಈ ಚಿಗುರುಗಳಿದ್ದಂತೆ. ಇವು ಮನಸ್ಸನ್ನು ಆಕರ್ಷಿಸಿ, ಪ್ರಗತಿಯ ದಾರಿಯಿಂದ ಹಿಂದಕ್ಕೆಳೆದು, ವಿಷಯ ಸುಖದಲ್ಲಿ ಮುಳುಗಿಸಿ, ಕ್ರಮೇಣ ಅವನತಿಗಿಳಿಯುವಂತೆ ಮಾಡುತ್ತವೆ. ಸಣ್ಣ ಬೇರುಗಳು ಕೆಳಮುಖವಾಗಿವೆ. ಈ ಅಶ್ವತ್ಥ ಮರದ ತಾಯಿ ಬೇರು ಮೇಲು ಮುಖವಾಗಿದ್ದಾಗ್ಯೂ ಸಣ್ಣ ಬೇರುಗಳು ಮನುಷ್ಯ ಲೋಕದಲ್ಲಿ ಕೆಳಮುಖವಾಗಿ ಹರಡಿವೆ. ಮನಸ್ಸಿನಲ್ಲಿಯ ವಿವಿಧ ವಿಚಾರಗಳು (ವಾಸನೆ) ಈ ಸಣ್ಣ ಬೇರುಗಳಾಗಿವೆ. ಇವೇ ಮನುಷ್ಯನ ಒಳ್ಳೆಯ, ಕೆಟ್ಟ ನಡತೆಗಳಿಗೆ ಕಾರಣವಾಗಿವೆ. ತಾಯಿ ಬೇರಿನಿಂದ ಹೊರಟ ಅನೇಕಾನೇಕ ಸಣ್ಣ ಬೇರುಗಳು ಭೂಮಿಯಲ್ಲಿ ಸುತ್ತಲೂ ಒಳಹೊಕ್ಕು, ಕಲ್ಲು ಮಣ್ಣುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ತನ್ಮೂಲಕ ಮರವು ಭೂಮಿಯಲ್ಲಿ ಭದ್ರವಾಗಿ ನಿಲ್ಲಲು ಸಹಾಯ ಮಾಡುವಂತೆ, ವಾಸನೆಗಳು ವ್ಯಕ್ತಿಯನ್ನು ಆಸೆ-ದ್ವೇಷ, ಲಾಭ-ನಷ್ಟ, ಇತ್ಯಾದಿ ಮೋಹಗಳಿಂದ, ಈ ಸಂಸಾರದಲ್ಲಿ ಬಲವಾಗಿ ಬೇರೂರಿ ನಿಲ್ಲುವಂತೆ ಮಾಡುತ್ತವೆ.
ಈ ಸಂಸಾರ ವೃಕ್ಷವನ್ನು ಕತ್ತರಿಸಿಹಾಕಿ ಪರಮಾತ್ಮನ ಜ್ಞಾನವನ್ನು ಹೇಗೆ ಪಡೆಯಬಹುದೆಂಬುದನ್ನು ಮುಂದಿನ ಎರಡು ಶ್ಲೋಕಗಳಲ್ಲಿಯೂ ವರ್ಣಿಸಲಾಗಿದೆ.
ನ ರೂಪಮಸ್ಯೇಹ ತಥೋಪಲಭ್ಯತೇ _
ನಾಂತೋ ನ ಚಾದಿರ್ನ ಚ ಸಂಪ್ರತಿಷ್ಠಾ
ಅಶ್ಚತ್ಥಮೇನಂ ಸುವಿರೂಢಮೂಲ –
ಮಸಂಗಶಸ್ತ್ರೇಣ ದೃಢೇನ ಛಿತ್ತ್ವಾ || 3 ||
ಅರ್ಥ :- ಈ ಅಶ್ವತ್ಥ ಮರದ ರೂಪವು ಕಣ್ಣಿಗೆ ಕಾಣುವಂತಹದಲ್ಲ. ಅಂತೆಯೇ ತುದಿ, ಮೊದಲು, ಮತ್ತು ತಳಹದಿ ಇವಾವುವೂ ಕಾಣುವುದಿಲ್ಲ. ದೃಢವಾಗಿ ಬೇರು ಬಿಟ್ಟು ನಿಂತಿರುವ ಈ ಅಶ್ವತ್ಥ ಮರವನ್ನು ಮಮಕಾರವಿಲ್ಲದಿರುವಿಕೆ (ಅಸಂಗ) ಎಂಬ ದೃಢವಾದ ಶಸ್ತ್ರದಿಂದ ಕತ್ತರಿಸಿ ಹಾಕಿ.

ತತಃ ಪದಂ ತತ್ಪರಿಮಾರ್ಗಿತವ್ಯಂ
ಯಸ್ಮಿನ್ಗತಾ ನ ನಿವರ್ತಂತಿ ಭೂಯಃ |
ತಮೇವ ಚಾದ್ಯಂ ಪುರುಷಂ ಪ್ರಪದ್ಯೇ
ಯತಃ ಪ್ರವೃತ್ತಿಃ ಪ್ರಸ್ಥತಾ ಪುರಾಣೀ || 4 ||
ಅರ್ಥ :- ಆನಂತರ ಯಾವ ಸ್ಥಾನವನ್ನು ಸೇರಿದರೆ ಪುನಃ ಹಿಂತಿರುಗಿ ಬರುವುದಿಲ್ಲವೋ, ಅಂತಹ ಸ್ಥಾನವನ್ನು ಹುಡುಕಿಕೊಳ್ಳಬೇಕು. ಯಾವನಿಂದ ಪುರಾಣವಾದಂತಹ ಕರ್ಮಗಳ ಚೇತನವು ಹೊರಟಿತೋ, ಅಂತಹ ಆದಿ ಪುರುಷನಲ್ಲಿ ನಾನು ರಕ್ಷಣೆಯನ್ನು ಪಡೆಯುತ್ತೇನೆ.
ಈ ಸಂಸಾರ ವೃಕ್ಷವು ಸತ್ಯವಸ್ತುವನ್ನು ಮರೆಸುವ ‘ಅವಿದ್ಯೆ’ಯಿಂದ ಹುಟ್ಟುತ್ತದೆ. ಸತ್ಯವಸ್ತುವಿನ ಜ್ಞಾನವಾದ ಕೂಡಲೆ ಈ ಸಂಸಾರ ವೃಕ್ಷವು ಕಳಚಿ ಬೀಳುತ್ತದೆ. ಇದನ್ನು ಕತ್ತರಿಸಿ ಹಾಕಲು, ಅಸಂಗ (ಮಮಕಾರವಿಲ್ಲದಿರುವಿಕೆ) ಎಂಬ ಸಾಧನವು ಬೇಕು. ಪ್ರಪಂಚದ ನಿತ್ಯವ್ಯವಹಾರಗಳಲ್ಲಿ ಮನಸ್ಸು ಪ್ರವೇಶಿಸಿದರೆ ಆ ಕಾರ್ಯಗಳಿಂದ ಬಂಧನ ಉಂಟಾಗುತ್ತದೆ ಬಂಧನವು ಬೋಧನವುಂಟಾಗುತ್ತದೆ. ಮನಸ್ಸು ಅವುಗಳನ್ನು ಪ್ರವೇಶಿಸದಿದ್ದರೆ ಬಂಧನವಿಲ್ಲ. ಪ್ರತಿಯೊಂದು ಕಾರ್ಯದಲ್ಲಿಯೂ ನಾನು, ನನ್ನದು ಎಂಬ ಅನುರಾಗವನ್ನು ತ್ಯಜಿಸಿ ಕರ್ಮ ಮಾಡುವ ಮೂಲಕ ಈ ಅಶ್ವತ್ಥ ಮರವನ್ನು (ಸಂಸಾರವೃಕ್ಷವವನ್ನು) ಕತ್ತರಿಸಿ ಹಾಕಬೇಕೆಂದು ಶ್ರೀಕೃಷ್ಣನು ಅರ್ಜುನನಿಗೆ ಹೇಳುತ್ತಿದ್ದಾನೆ. ಈ ರೀತಿ ತಿದ್ದಿದ ಮನಸ್ಸಿನಿಂದ ಪರಮ ಪುರುಷನನನ್ನು ಧ್ಯಾನಿಸಬೇಕೆಂದೂ, ಅವನನ್ನು ಸೇರಿದರೆ ಪುನರ್ಜನ್ಮವಿಲ್ಲವೆಂದೂ ಹೇಳಲಾಗಿದೆ. ಅಶ್ವತ್ಥಮರವೂ ಸಹ ಈ ಪರಮ ಪುರುಷನಿಂದಲೇ ಪೋಷಣೆಯನ್ನು ಪಡೆಯುತ್ತದೆ.
ಎಂತಹ ಸಾಧಕರು ಈ ಗುರಿಯನ್ನು ಮುಟ್ಟಬಲ್ಲರು.
ನಿರ್ಮಾನಮೋಹಾ ಜಿತ ಸಂಗದೋಷಾಃ
ಅಧ್ಯಾತ್ಮನಿತ್ಯಾ ವಿನಿವೃತ್ತಕಾಮಾಃ |
ದ್ವಂದ್ವೈರ್ವಿಮುಕ್ತಾಃ ಸುಖದುಃಖಸಂಜ್ಞೈಃ-
ರ್ಗಚ್ಛಂತ್ಯಮೂಢಾಃ ಪದಮವ್ಯಯಂ ತತ್ || 5 ||
ಅರ್ಥ :- ಅಹಂಕಾರ, ಮತ್ತು ಭ್ರಮೆಗಳನ್ನು ತ್ಯಜಿಸಿದ, ನಾನು, ನನ್ನದು ಎಂಬ ಅಭಿಮಾನವನ್ನು ತೊರೆದ, ಆತ್ಮಧ್ಯಾನದಲ್ಲಿ ನಿರತರಾಗಿರುವ, ಆಸೆಗಳನ್ನು ತ್ಯಜಿಸಿದ, ಸುಖ-ದುಃಖ ಮೊದಲಾದ ದ್ವಂದ್ವಗಳಿಂದ ಬಿಡುಗಡೆಯನ್ನು ಹೊಂದಿದ, ಜಾಣರು ಇಂತಹ ನಾಶರಹಿತವಾದ ಪದವನ್ನು ಸೇರುತ್ತಾರೆ.
ವೇದಾಂತ ಶಾಸ್ತ್ರವು ಕೇವಲ ಓದಿ ಬದಿಗಿಡುವುದಕ್ಕಲ್ಲ- ಅದರಲ್ಲಿ ಹೇಳಿರುವ ವಿಷಯಗಳನ್ನು ತಿಳಿದುಕೊಂಡು, ನಿತ್ಯದ ಆಚರಣೆಯಲ್ಲಿ ತರಬೇಕಾದುದು ಅವಶ್ಯಕ. ಆದುದರಿಂದ ಸಾಧಕನಿಗೆ, ತನ್ನ ಗುರಿಯನ್ನು ತಲುಪುವ ಸಲುವಾಗಿ ಅವಶ್ಯವಾದ ಎಲ್ಲಾ ವಿವರಗಳನ್ನು ಇಲ್ಲಿ ವರ್ಣಿಸಲಾಗಿದೆ. ಸಾಧಕನು ಪಾಲಿಸಬೇಕಾದ, ಮೈಗೂಡಿಸಿ ಕೊಳ್ಳಬೇಕಾದ ಐದು ನಿಯಮಗಳನ್ನು ಈ ಶ್ಲೋಕದಲ್ಲಿ ಹೇಳಲಾಗಿದೆ. ಇವುಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದರೆ ಪರಮಾತ್ಮನ ಜ್ಞಾನವಾಗುತ್ತದೆಂದು ಶ್ರೀಕೃಷ್ಣನು ಘೋಷಿಸಿದ್ದಾನೆ.
ನಿರ್ಮಾನಮೋಹಾಃ – ಅಹಂಕಾರವು ವ್ಯಕ್ತಿಯ, ಶಕ್ತಿಯ ಉತ್ಪ್ರೇಕ್ಷೆಯನ್ನು ಮಾಡಿದಂತೆ, ಭ್ರಮೆಯು ವ್ಯಕ್ತಿಯ ಬೆಲೆಯನ್ನು ಕಡಿಮೆ ಕಟ್ಟುತ್ತದೆ. ಅಹಂಕಾರವು ಪ್ರಬಲವಾಗಿದ್ದರೆ ಹೊಸದಾಗಿ ಏನನ್ನೂ ತಿಳಿದುಕೊಳ್ಳಲಾಗುವುದಿಲ್ಲ, ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವುದಕ್ಕೂ ಆಗುವುದಿಲ್ಲ. ಭ್ರಮೆಯು ಇರುವಾಗ ಸಾರಾಸಾರಾ ವಿಚಾರ ಶಕ್ತಿಯು ಕುಂಠಿತವಾಗಿ ಆ ವ್ಯಕ್ತಿಯು ಯಾವಾಗಲೂ ತಪ್ಪಾಗಿ ನಿರ್ಣಯವನ್ನು ಮಾಡುತ್ತಾನೆ. ಇದರಿಂದ ನಮ್ಮ ಸುತ್ತಮುತ್ತಲಿನ ಪ್ರಪಂಚದ ಸರಿಯಾದ ಜ್ಞಾನವಾಗದೆ, ವ್ಯಕ್ತಿಯು ತನ್ನ ಮೂಗಿನ ನೇರಕ್ಕೆ, ಅಂದರೆ ತಾನು ತಪ್ಪಾಗಿ ತಿಳಿದುಕೊಂಡಂತೆಯೇ ಪ್ರಪಂಚವು ಇದೆ ಎಂದು ನಿರ್ಧರಿಸುತ್ತಾನೆ. ಆದುದರಿಂದ ಮಾನ ಮತ್ತು ಮೋಹಗಳನ್ನು (ಅಹಂಕಾರ ಮತ್ತು ಭ್ರಮೆ) ಗೆಲ್ಲಬೇಕು.
ಜಿತಸಂಗದೋಷಾ:- ಇಂದ್ರಿಯ ವಿಷಯಗಳಿಂದ ಸುಖವು ದೊರೆಯುವುದಿಲ್ಲ ಎಂದು ದೃಢವಾಗಿ ನಂಬಿ ಮನಸ್ಸನ್ನು ಇಂದ್ರಿಯ ವಿಷಯಗಳಿಂದ ಹಿಂದಕ್ಕೆ ಜಗ್ಗಿಕೊಳ್ಳಬೇಕು. ಇಂದ್ರಿಯ ಸುಖಗಳಲ್ಲಿ ಮನಸ್ಸು ಮಗ್ನವಾದರೆ ಜೀವನು ಸಂಸಾರಕ್ಕೆ ಹೆಚ್ಚು ಹೆಚ್ಚು ಬಿಗಿಯಲ್ಪಡುತ್ತಾನೆ. ವಾಸನೆಗಳು ಅಷ್ಟೇ ಹೆಚ್ಚಾಗುತ್ತಾ ಹೋಗುತ್ತವೆ.
ಅಧ್ಯಾತ್ಮನಿತ್ಯಾ :- ಮನಸ್ಸನ್ನು ಇಂದ್ರಿಯ ವಿಷಯಗಳಿಂದ ಹಿಂದಕ್ಕೆ ಜಗ್ಗಿ ಕೊಂಡರೆ ಸಾಲದು, ಅದಕ್ಕೆ ಬೇರೆ ದಾರಿಯನ್ನು ತೋರಿಸಬೇಕು. ಇಲ್ಲದಿದ್ದರೆ ಅದು ಬಲಿತು ಶತ್ರುವಾಗುತ್ತದೆ. ಆದುದರಿಂದ, ಈ ರೀತಿ ಹಿಂದಕ್ಕೆ ಜಗ್ಗಿದ ಮನಸ್ಸಿನಿಂದ ಸತತವಾಗಿ ಆತ್ಮಧ್ಯಾನ ಮಾಡಬೇಕು.
ವಿನಿವೃತ್ತ ಕಾಯಾ :- ಆಸೆಯು ಬುದ್ಧಿಯ ಕಾರ್ಯ, ಆಸೆಯಿದ್ದಂತೆ ವಿಚಾರಗಳು. ಆಸೆಗಳಿದ್ದರೆ ಸಂಸಾರದ ಬಂಧನ. ಆಸೆಗಳೇ ಇಲ್ಲದಿದ್ದರೆ ಮನಸ್ಸು ಶಾಂತವಾಗುತ್ತದೆ, ಯಾವ ಉದ್ವೇಗವೂ ಇರುವುದಿಲ್ಲ. ಏಕಾಗ್ರತೆಯಿಂದ ಧ್ಯಾನಮಾಡಲು ಸುಲಭವಾಗುತ್ತದೆ.
ದ್ವಂದ್ವೈರ್ವಿಮುಕ್ತಾ- ಇವತ್ತು ಸುಖ ಎಂದು ಕಂಡುದುದು ನಾಳೆ ದುಃಖಕರವಾಗುತ್ತದೆ. ಮನಸ್ಸು ಸುಖದುಃಖಗಳಲ್ಲಿ ಮಗ್ನವಾದರೆ ಮನಸ್ಸಿನ ಶಾಂತತೆಯು ನಾಶವಾಗುತ್ತದೆ. ಈಗ ಮನಸ್ಸು ಹೊರಕ್ಕೆ ಓಡುತ್ತದೆ. ಅದನ್ನು ಹಿಡಿತದಲ್ಲಿಟ್ಟುಕೊಳ್ಳಲಾಗುವುದಿಲ್ಲ ಆದುದರಿಂದ ಸುಖ ಬಂದಾಗ ಹಿಗ್ಗುವುದಾಗಲೀ, ದುಃಖ ಬಂದಾಗ ಕುಗ್ಗುವುದಾಗಲೀ ಇರದೆ ಇವೆರಡನ್ನೂ ಉದಾಸೀನತೆಯಿಂದ ಕಾಣಲು ಕಲಿಯಬೇಕು.

ನ ತದ್ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ |
ಮನಃಷಷ್ಠಾನೀಂದ್ರಿಯಾಣಿ ಪ್ರಕೃತಿಸ್ಥಾನಿ ಕರ್ಷತಿ || 6 ||
ಅರ್ಥ :- ಅಲ್ಲಿ, ಆ ಪರಮ ಪುರುಷನಲ್ಲಿ, ಸೂರ್ಯನಾಗಲೀ, ಚಂದ್ರನಾಗಲೀ, ಅಥವಾ ಅಗ್ನಿಯಾಗಲೀ, ಪ್ರಕಾಶವನ್ನು ಬೀರಲಾರರು. ಈ ಸ್ಥಾನವನ್ನು ಸೇರಿದರೆ ಹಿಂತಿರುಗಿ ಬರುವುದೆಂಬುದಿಲ್ಲ. ಅದೇ ನನ್ನ ಪರಮ ಆಶ್ರಯ ಸ್ಥಾನವು.
ಪರಮ ಪುರುಷನನ್ನು ಸೇರಿದರೆ ಹಿಂದಕ್ಕೆ ಬರುವಿಕೆ ಇಲ್ಲ ಎಂದು ಹಿಂದೆ ಹೇಳಿದ ಮಾತನ್ನೇ ಪುನಃ ಹೇಳಲಾಗಿದೆ. ವೇದಾಂತದ ತತ್ವಗಳನ್ನು ಸಾಧ್ಯವಿರುವಲ್ಲೆಲ್ಲಾ ತರ್ಕದ ಆಧಾರದ ಮೇಲೆ ವಿವರಿಸಲಾಗಿದೆ. ಆದರೆ ಕೆಲವು ವಿಷಯಗಳು ತರ್ಕಕ್ಕೆ ನಿಲುಕುವುದಿಲ್ಲ. ಜ್ಞಾನವನ್ನು ಅನುಭವಿಸಿದ ಮಹಾತ್ಮರು ಅಂತಹ ವಿಷಯಗಳು ಶಿಷ್ಯನ ಮನಸ್ಸಿನಲ್ಲಿ ಚನ್ನಾಗಿ ಮೂಡಲಿ ಎಂಬ ಸದಿಚ್ಛೆ ಸದಿಚ್ಛೆಯಿಂದ ಅವುಗಳನ್ನು ಪುನಃ ಪುನಃ ಹೇಳುತ್ತಾರೆ. ಶ್ರೀಕೃಷ್ಣನು ಸಹ ಅದೇ ಪದ್ಧತಿಯನ್ನು ಅನುಸರಿಸಿದ್ದಾನೆ. ಈ ಪರಮ ಪದವಿಯನ್ನು ವರ್ಣಿಸುವುದು ಸಾಧ್ಯವಿಲ್ಲದಿದ್ದಾಗ್ಯೂ ಇಲ್ಲಿ ಅದನ್ನು ಕೃಷ್ಣನು ಸ್ಥೂಲವಸ್ತುಗಳೊಡನೆ ಹೋಲಿಸಿದ್ದಾನೆ.
ನತದ್ಭಾಸಯತೆ ಸೂರ್ಯೊ- ಸೂರ್ಯ, ಚಂದ್ರ, ಅಗ್ನಿ ಇವು ಸ್ಥೂಲವಾದ ಜ್ಯೋತಿಗಳು, ನಮ್ಮ ಇಂದ್ರಿಯಗಳಿಗೆ, ಮನಸ್ಸಿಗೆ, ಬುದ್ಧಿಗೆ ಆತ್ಮ ತೇಜಸ್ಸಿನಿಂದ ಬೆಳಕು ಬರುತ್ತದೆ. ಅಂತೆಯೇ ಆ ಇಂದ್ರಿಯಗಳು ತಮ್ಮ ತಮ್ಮ ಕಾರ್ಯಗಳನ್ನು ಮಾಡುತ್ತವೆ. ಈ ಆತ್ಮ ತೇಜಸ್ಸಿನಿಂದಲೇ ನಮಗೆ ಪ್ರಪಂಚದ ಎಲ್ಲಾ ತರಹದ ಅನುಭವಗಳೂ ಉಂಟಾಗುತ್ತವೆ. ಈ ತೇಜಸ್ಸು ಸ್ವಯಂ ಪ್ರಕಾಶವಾದುದು. ಅದನ್ನು ಬೆಳಗಿಸಲು ಬೇರೆ ಯಾವ ಬೆಳಕಿನ ಅವಶ್ಯಕತೆಯೂ ಇಲ್ಲ. ಸೂರ್ಯ, ಚಂದ್ರ, ಅಗ್ನಿ ಇವು ಸಹ ಆತ್ಮಜ್ಯೋತಿಯ ಬೆಳಕಿನಿಂದಲೇ ಬೆಳಗುವುದರಿಂದ ಈ ಸಣ್ಣ ಬೆಳಕುಗಳು ಆತ್ಮನನ್ನು ಬೆಳಗಿಸಲಾರವು. ಇದೇ ಪರಮ ಪದವಿಯು, ಈ ಪದವಿಯನ್ನು ಪಡೆಯಲು ಇಷ್ಟೆಲ್ಲಾ ದೀರ್ಘಪ್ರಯತ್ನ ಮಾಡಿದಾಗ್ಯೂ, ಆನಂತರ ಪುನಃ ಸುಖದುಃಖಗಳನ್ನು ಅನುಭವಿಸಲು ಈ ಭೂಮಿಯಲ್ಲಿ ಹುಟ್ಟಬೇಕಾಗಬಹುದೇ ಎಂಬ ಸಂಶಯವನ್ನು ಹೋಗಲಾಡಿಸಲು, ಈ ಸ್ಥಾನವನ್ನು ಸೇರಿದರೆ ಪುನಃ ಹುಟ್ಟುವುದಿಲ್ಲ ಎಂಬ ಆಶ್ವಾಸನೆಯನ್ನು ಈ ಶ್ಲೋಕದಲ್ಲಿ ಕೊಡಲಾಗಿದೆ.

ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾನತಃ
ಮನಃಷಷ್ಠಾನೀಂದ್ರಿಯಾಣಿ ಪ್ರಕೃತಿಸ್ಥಾನಿ ಕರ್ಷತಿ || 7 ||
ಅರ್ಥ :- ಸನಾತನನಾದ ನನ್ನ ಒಂದು ಅಂಶವು ಜೀವಲೋಕದಲ್ಲಿ ಜೀವಿಗಳ ಪ್ರಕೃತಿಯಲ್ಲಿ ಸೇರಿ ಐದು ಇಂದ್ರಿಯಗಳು ಮತ್ತು ಆರನೆಯದಾದ ಮನಸ್ಸನ್ನು ಆಕರ್ಷಿಸುತ್ತದೆ.
ಮಮೈವಾಂಶ :- ಇಲ್ಲಿ ಪರಮಾತ್ಮನ ಒಂದು ಅಂಶ ಎಂದು ಹೇಳಿದ್ದರಿಂದ ಅಖಂಡನೂ, ಸರ್ವವ್ಯಾಪಿಯೂ ಆದ ಪರಮಾತ್ಮನಿಂದ ಪ್ರತ್ಯೇಕಿಸಲ್ಪಟ್ಟ ಒಂದು ತುಂಡು ಎಂದು ತಿಳಿಯಬಾರದು. ಕೋಣೆಯ ಒಳಗೆ ಒಂದು ಘಟವಿರುವಾಗ, ಆ ಘಟದೊಳಗಿನ ಆಕಾಶವು ಕೋಣೆಯ ಒಳಗಿನ ಆಕಾಶದ ಒಂದು ಅಂಶ ಎಂದು ಹೇಳಬಹುದು. ಈ ಆಕಾಶವು ಘಟವಿರುವುದರಿಂದ ಕಡಿಮೆಯಾಗುವುದೂ ಇಲ್ಲ. ಘಟವನ್ನು ತೆಗೆದರೆ ಹೆಚ್ಚಾಗುವುದೂ ಇಲ್ಲ. ಆಕಾಶವು ಘಟದಿಂದ ಪರಿಮಿತನಾಗಿರುವಂತೆ ಕಾಣುವ ಭಾಗಕ್ಕೆ ಘಟಕಾಶ ಎನ್ನುತ್ತೇವೆ. ಇದೇ ರೀತಿ ಪರಮಾತ್ಮನು ಅಖಂಡವಾಗಿ ಸರ್ವಪ್ರಪಂಚದಲ್ಲಿ ವ್ಯಾಪಿಸಿದ್ದಾನೆ. ಪ್ರತಿಯೊಂದು ಜೀವಿಗಳೊಳಗೂ ಪರಮಿತ-ನಾಗಿರುವಂತೆ ಕಾಣುತ್ತಾನೆ. ಜೀವಿಗಳ ಶರೀರದೊಳಗಿರುವ ಪರಮಾತ್ಮನನ್ನು, ಘಟಕಾಶದಂತೆ, ಅಖಂಡ ಪರಮಾತ್ಮನ ಒಂದು ಅಂಶ ಎಂದು ವಿವರಣೆಯ ದೃಷ್ಟಿಯಿಂದ ಮಾತ್ರ ಹೇಳಲಾಗಿದೆ. ಶರೀರದೊಳಗಿವು ಪರಮಾತ್ಮನು, ಆ ಜೀವಿಯ ಬದುಕುವಿಕೆ, ಚಲನವಲನಾದಿಗಳು, ಇಂದ್ರಿಯಗಳ ಪಟುತ್ವ. ಮಾನಸಿಕ ವಿಚಾರ, ಮೊದಲಾದ ಎಲ್ಲಾ ಕಾರ್ಯಗಳಿಗೂ ಚೇತನವನ್ನು ಕೊಡುತ್ತಾನೆ. ಇವನೇ ಆ ಶರೀರದಿಂದ ಐದು ಜ್ಞಾನೇಂದ್ರಿಯಗಳಿಂದ ಒಡಗೂಡಿದ ಪರಮಾತ್ಮನು ‘ಜೀವ’ ಎಂಬ ಹೆಸರಿನಿಂದ ಈ ಶರೀರದ ಜೀವನ ಮತ್ತು ಆಗುಹೋಗುಗಳಿಗೆ ಕಾರಣನಾಗುತ್ತಾನೆ. ಈ ಜೀವನು ನಾನೇ ಈ ಶರೀರ ಎಂಬ ಅಹಂಕಾರದಿಂದ ಆವೃತನಾಗಿದ್ದಾನೆ. ಇವನ ಇರುವಿಕೆಗೆ ಸಹ ಪರಮಾತ್ಮನು ಕಾರಣನಾಗಿದ್ದಾನೆ. ಹೀಗೆ ಜೀವನು ಪರಮಾತ್ಮನ ಒಂದು ಕಾಲ್ಪನಿಕ ಅಂಶವೇ ಹೊರತು ನಿಜವಾದ ಅಂಶವಲ್ಲ.

ಶರೀರಂ ಯದವಾಪ್ನೋತಿ ಯಚ್ಚಾಪ್ಯುತ್ಕ್ರಾಮತೀಶ್ಚರಃ |
ಗೃಹೀತ್ವೈತಾನಿ ಸಂಯಾತಿ ವಾಯುರ್ಗಂಧಾನಿವಾಶಯಾತ್ || 8 ||
ಅರ್ಥ :- ಪರಮಾತ್ಮನು ಈ ಶರೀರವನ್ನು ಪಡೆದು, ಅಂದರೆ ಶರೀರದಿಂದ ಬಂಧಿತವಾಗಿದ್ದು, (ಜೀವ) ನಂತರ ಶರೀರವನ್ನು ಬಿಟ್ಟು ಹೋಗುವ ಕಾಲದಲ್ಲಿ (ಮರಣಕಾಲದಲ್ಲಿ) ಚಲಿಸುವ ವಾಯುವು ಹೂವಿನ ಸುವಾಸನೆಯನ್ನು ತೆಗೆದುಕೊಂಡು ಹೋಗುವ ಹಾಗೆ, ಈ ಶರೀರದಿಂದ ಮಾಡಿದ ಒಳ್ಳೆಯ ಹಾಗೂ ಕೆಟ್ಟ ಕರ್ಮಗಳ ವಾಸನೆಯನ್ನು ಸೂಕ್ಷ್ಮರೂಪದಲ್ಲಿ ತೆಗೆದುಕೊಂಡು ಹೋಗುತ್ತಾನೆ.
ಜೀವನು ತನ್ನ ಹಿಂದಿನ ಜನ್ಮದ ಸಂಚಿತ ವಾಸನೆಗಳನ್ನು ಬರಿದು ಮಾಡಿಕೊಳ್ಳಲು ಅನುಕೂಲವಾದ ಶರೀರವನ್ನು ಆರಿಸಿಕೊಂಡು ಜನ್ಮಕ್ಕೆ ಬರುತ್ತಾನೆ. ಈ ಜನ್ಮದಲ್ಲಿ ಹಿಂದಿನ ಜನ್ಮದ ವಾಸನೆಗಳಿಗೆ ಅನುಗುಣವಾದ ಕರ್ಮಗಳನ್ನೂ, ಮಾನಸಿಕ ವಿಚಾರಗಳನ್ನೂ ಮಾಡಿ, ಅವುಗಳಿಂದಲೂ ಬಂಧಿತನಾಗಿ, ಪುನಃ ಈ ಎಲ್ಲಾ ಕರ್ಮಗಳ ವಾಸನೆಗಳನ್ನೂ ಒಟ್ಟು ಕೂಡಿ ಹಾಕಿಕೊಳ್ಳುತ್ತಾನೆ. ಈ ಜನ್ಮದಲ್ಲಿ ಮಾಡಿದ ಎಲ್ಲಾ ಕರ್ಮಗಳ (ಶಾರೀರಿಕ ಹಾಗೂ ಮಾನಸಿಕ) ವಾಸನೆಯು ಅವನ ಅಂತಃಕರಣದ ಮೇಲೆ ಮುದ್ರಿತವಾಗಿರುತ್ತದೆ. ಜೀವನು ಈ ಶರೀರವನ್ನು ಬಿಟ್ಟು ಹೋಗುವಾಗ ಈ ವಾಸನೆಗಳನ್ನು ತೆಗೆದುಕೊಂಡು ಹೋಗಿ, ಮುಂದೆ ಪುನಃ ಆ ವಾಸನೆಗಳ ಭೋಗಕ್ಕೆ ಅನುಕೂಲವಾದಂತಹ ಹೊಸ ಶರೀರವನ್ನು (ಮನುಷ್ಯ, ಪ್ರಾಣಿ ಅಥವಾ ಸಸ್ಯ) ತೆಗೆದುಕೊಳ್ಳುತ್ತಾನೆ. ಜೀವನು ಈ ಶರೀರದ ಒಡೆಯ ಒಡೆನಾದುದರಿಂದ ಅವನಿಗೆ ಇಲ್ಲಿ ‘ಈಶ್ವರ’ ಎಂದು ಹೇಳಲಾಗಿದೆ.

ಶ್ರೋತಂ ಚಕ್ಷುಃ ಸ್ಪರ್ಶನಂ ಚ ರಸನಂ ಘ್ರಾಣಮೇವ ಚ |
ಅಧಿಷ್ಠಾಯ ಮನಶ್ಚಾಯಂ ವಿಷಯಾನುಪಸೇವತೇ ಮನಶ್ಚಾಯಮ್ || 9 ||
ಅರ್ಥ :- ಜೀವನು ಶರೀರದ ಕಿವಿ, ಕಣ್ಣು, ಚರ್ಮ, ನಾಲಿಗೆ, ಮೂಗು ಮತ್ತೆ ಮನಸ್ಸು ಇವುಗಳ ಮೇಲೆ ಅಧಿಕಾರವನ್ನು ಚಲಾಯಿಸುತ್ತಾ, ಅವುಗಳ ಮೂಲಕ ವಿಷಯ ಸುಖಗಳನ್ನು ಅನುಭವಿಸುತ್ತಾನೆ.
ಕಿವಿ, ಕಣ್ಣು ಮೊದಲಾದ ಇಂದ್ರಿಯಗಳು ತಮ್ಮತಮ್ಮ ವಿಷಯಗಳನ್ನು ಗ್ರಹಿಸಿದಾಗ್ಯೂ ಮನಸ್ಸು ಅವುಗಳಲ್ಲಿ ಪ್ರವೇಶಿಸದಿದ್ದರೆ ಆ ವಿಷಯಗಳ ಜ್ಞಾನವು ಜೀವನಿಗಾಗುವುದಿಲ್ಲ. ಉದಾಹರಣೆಗೆ – ನಾವು ಯಾರಾದರೂ ಬಂದು ಮಾತನಾಡಿದಾಗ್ಯೂ ಅದು ನಮಗೆ ತಿಳಿಯುವುದಿಲ್ಲ. ಕಣ್ಣು ಆ ವ್ಯಕ್ತಿಯನ್ನು ನೋಡಿರುತ್ತದೆ. ಕಿವಿಯು ಅವನಾಡಿದ ಶಬ್ದಗಳನ್ನು ಕೇಳಿರುತ್ತದೆ. ಆದರೆ ಮನಸ್ಸು ಅದರಲ್ಲಿ ಪ್ರವೇಶಿಸಲಿಲ್ಲವಾದುದರಿಂದ ಅದಾವ ಜ್ಞಾನವೂ ಜೀವನಿಗಾಗುವುದಿಲ್ಲ. ಆದುದರಿಂದ ಜೀವನು ಮನಸ್ಸಿನ ಮೂಲಕ ಇಂದ್ರಿಯವಿಷಯಗಳ ಜ್ಞಾನವನ್ನು ಪಡೆದು ಆಯಾಯಾ ಇಂದ್ರಿಸುಖಗಳನ್ನು ಭೋಗಿಸುತ್ತಾನೆ. ಎಂದು ಹೇಳಲಾಗಿದೆ.

ಉತ್ಕ್ರಾಮಂತಂ ಸ್ಥಿತಃ ವಾಪಿ ಭುಂಜಾನಂ ವಾ ಗುಣಾನ್ವಿತಮ್ |
ವಿಮೂಢಾ ನಾನುಪಶ್ಯಂತಿ ಪಶ್ಯಂತಿ ಜ್ಞಾನಚಕ್ಷುಷಃ || 10 ||
ಅರ್ಥ :- ಈ ಶರೀರದಲ್ಲಿದ್ದುಕೊಂಡು, ಗುಣಗಳಿಂದ ಕೂಡಿದವನಾಗಿ, ಸುಖದುಃಖಗಳನ್ನು ಭೋಗಿಸುವ, ಮತ್ತು ಈ ಶರೀರವನ್ನು ಬಿಟ್ಟು ಹೋಗುವ ಅವನನ್ನು ಅಜ್ಞಾನಿಗಳು ಕಾಣಲಾರರು. ಜ್ಞಾನದೃಷ್ಟಿಯಿರುವವರು ಮಾತ್ರ ನೋಡಬಲ್ಲರು.
ವ್ಯವಹಾರದಲ್ಲಿ ಸಹ ಯಾವುದಾದರೊಂದು ವಸ್ತುವನ್ನು ಎಲ್ಲರೂ ನೋಡಿದಾಗ್ಯೂ, ಸಾಮಾನ್ಯ ಜನರು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲಾರರು. ಬುದ್ಧಿ ಚುರುಕಾಗಿರುವವರು ಇತರೆ ಜನರಿಗಿಂತ ಹೆಚ್ಚು ಚನ್ನಾಗಿ ತಿಳಿದುಕೊಳ್ಳುತ್ತಾರೆ. ಒಂದು ಉತ್ತಮವಾದ ಸಾಹಿತ್ಯ ಕೃತಿಯನ್ನು ಅನೇಕರು ಓದಬಹುದು. ಆದರೆ ಕೆಲವೇ ಜನರು ಸಾಹಿತ್ಯದ ಸೌಂದರ್ಯವನ್ನು, ಕವಿಯ ಚಮತ್ಕಾರವನ್ನೂ ತಿಳಿಯಬಲ್ಲರು. ಇನ್ನೂ ಕೆಲವೇ ಜನರು, ಆ ಸಾಹಿತ್ಯದಲ್ಲಿ ವರ್ಣಿಸಿದ ತತ್ವವನ್ನೂ, ಭಾವವನ್ನೂ ತಿಳಿಯಬಲ್ಲರು. ವಜ್ರದ ಒಡವೆಯನ್ನು ಎಲ್ಲರೂ ನೋಡಿದಾಗ್ಯೂ, ಸರಾಫನು ಮಾತ್ರ ಆ ವಜ್ರದ ನಿಜವಾದ ಬೆಲೆಯನ್ನು ತಿಳಿಯುತ್ತಾನೆ. ಇದೇ ರೀತಿಯಾಗಿ ನಾವೆಲ್ಲರೂ ಈ ಶರೀರವನ್ನು ಜೀವವಿರುವವರೆಗೂ ನೋಡುತ್ತೇವೆ, ಹಾಗೂ ಬುದ್ಧಿಯಿಂದ ವಿಚಾರಮಾಡುತ್ತೇವೆ. ಆದರೆ ಜ್ಞಾನಿಯು ಮಾತ್ರ ಈ ಶರೀರದ ಬದುಕುವಿಕೆಗೆ ಕಾರಣವಾದ ಅಖಂಡ ಪರಮಾತ್ಮನನ್ನು ತಿಳಿಯಬಲ್ಲನು. ಜ್ಞಾನಿಯು ತನ್ನ ಸತತವಾದ ಸಾಧನೆಯಿಂದ ಅಜ್ಞಾನವನ್ನು ಕಳೆಯಬೇಕೆಂದು ಪರಮಾತ್ಮನನ್ನು ಕಾಣುತ್ತಾನೆ. ಈ ಜ್ಞಾನಕ್ಕೆ ‘ಜ್ಞಾನದ ಕಣ್ಣು’ -ಜ್ಞಾನವೇ ಕಣ್ಣು – ಎಂದು ಹೆಸರು.

ಯತಂತೋ ಯೋಗಿನಶ್ಚೈನಂ ಪಶ್ಶಂತ್ಯಾತ್ಮನ್ಯವಸ್ಥಿತಮ್ |
ಯತಂತೋ„ಪ್ಯಕೃತಾತ್ಮನೋನೈನಂ ಪಶ್ಶಂತ್ಯ ಚೇತಸಃ || 11 ||
ಅರ್ಥ :- ಸಾಧನೆಯಲ್ಲಿ ನಿರತರಾದ ಯೋಗಿಗಳು ಪರಮಾತ್ಮನು ತಮ್ಮ ಆತ್ಮದಲ್ಲಿಯೇ ಇರುವುದನ್ನು ಕಾಣುತ್ತಾರೆ. ಆದರೆ ಯೋಗಸಾಧನೆಯನ್ನು ಮಾಡದೆ ಇರುವ, ಹೃದಯವು ಶುದ್ಧವಾಗಿಲ್ಲದ, ಮೂಢರು ಸಾಧನೆಯನ್ನು ಮಾಡಿದಾಗ್ಯೂ ಅವನನ್ನು ಕಾಣರು.
ಸಾಧನೆಯಲ್ಲಿ ಮುಂದುವರಿದು, ಮನಸ್ಸನ್ನು ಏಕಾಗ್ರವಾಗಿ ಮಾಡಿಕೊಂಡು, ಬುದ್ಧಿಯಲ್ಲಿ ರಾಗ-ದ್ವೇಷ, ಮಮಕಾರಾದಿ ದೋಷಗಳು ಇಲ್ಲದಂತೆ ಶುದ್ಧಗೊಳಿಸಿ ಕೊಂಡ ಸಾರ್ಥಕರು ಸಾಧಕರು ಆತ್ಮಜ್ಞಾನವನ್ನು ಪಡೆಯುತ್ತಾರೆ. ಹೀಗೆ ಬೌದ್ಧಿಕ ದೃಷ್ಟಿಯಿಂದ ಅಭಿವೃದ್ಧಿಯನ್ನು ಹೊಂದದೆ, ಕೇವಲ ಶಾರೀರಿಕವಾಗಿ ಯೋಗಸಾಧನೆಯನ್ನು ಮಾಡಿದ ಸಾಧಕರು ಈ ರೀತಿ ಜಯವನ್ನು ಗಳಿಸುತ್ತಾರೆಂಬ ನಿಯಮವಿಲ್ಲ. ಧಾರ್ಮಿಕ ಸಾಧನೆಯನ್ನು, ಯಂತ್ರದಂತೆ ಕೇವಲ ಶಾರೀರಿಕವಾಗಿ, ವರ್ಷಗಟ್ಟಲೆ ಮಾಡುತ್ತಿರುವ ಹಾಗೂ ಏನೂ ಪ್ರಗತಿಯನ್ನು ಸಾಧಿಸಲಿಲ್ಲವೆಂದು ಗೊಣಗುವ ನೂರಾರು ಸಾಧಕರು ನೋಡಲು ಸಿಗುತ್ತಾರೆ. ಇವರಿಗೆ ಸಾಧನೆಯಲ್ಲಿ ಶ್ರದ್ಧೆ ಇದ್ದಾಗ್ಯೂ ಅವರು ಏಕೆ ಪ್ರಗತಿಯನ್ನು ಸಾಧಿಸಲಿಲ್ಲ ಎಂದು ಆಶ್ಚರ್ಯಪಡುವುದು ಸ್ವಾಭಾವಿಕ, ಇದರ ಕಾರಣವನ್ನು ಈ ಶ್ಲೋಕದಲ್ಲಿ ತರ್ಕಬದ್ಧವಾಗಿ ವಿವರಿಸಲಾಗಿದೆ.
ಇಂತಹ ಸಾಧಕರು ಸತತವಾಗಿ ಪ್ರಯತ್ನಮಾಡುತ್ತಿದ್ದಾಗ್ಯೂ ಅವರ ಮನಸ್ಸು ಶುದ್ಧಗೊಳ್ಳದಿರುವುದರಿಂದ, ಮತ್ತು ಏಕಾಗ್ರವಾಗಿಲ್ಲದಿರುವುದರಿಂದ, ಅವರಿಗೆ ಸರಿಯಾದ ಮಾರ್ಗವನ್ನು ಕಂಡು ಹಿಡಿಯಲು ಮತ್ತು ತಮ್ಮ ದೋಷಗಳನ್ನು ತಿದ್ದಿಕೊಳ್ಳಲು ತಾತ್ವಿಕ ಜ್ಞಾನವಿಲ್ಲದಿರುವುದರಿಂದ, ಅವರು ಸಾಧನೆಯ ಗುರಿಯನ್ನು ಮುಟ್ಟಲಾರರು, ಅಂದರೆ ಆತ್ಮಜ್ಞಾನವನ್ನು ಹೊಂದಲಾರರು.
ಧ್ಯಾನವು ಫಲದಾಯಕವಾಗಬೇಕಾದರೆ ಎರಡು ಅವಶ್ಯಕತೆಗಳು ಪೂರೈಸಲ್ಪಡಬೇಕು.
(1) ಮನಃಶುದ್ಧಿ ಎಂದರೆ ಮನಸ್ಸು ಇಂದ್ರಿಯ ಸುಖಾಭಿಲಾಷೆಯಲ್ಲಿ ಮಗ್ನವಾಗದಂತೆ, ಉದ್ವಿಗ್ನವಾಗದಂತೆ, ಮನಸ್ಸನ್ನು ಇಂದ್ರಿಯ ವಿಷಯಗಳಿಂದ ಹಿಂದಕ್ಕೆ ಜಗ್ಗಿಕೊಂಡು ಆತ್ಮಧ್ಯಾನದ ಕಡೆಗೆ ತಿರುಗಿಸುವುದು,
(2) ಶಾಸ್ತ್ರಾಭ್ಯಾಸದಿಂದ ಆತ್ಮನ ವಿಚಾರವನ್ನು ತರ್ಕಬದ್ಧವಾಗಿ ತಿಳಿದುಕೊಂಡು ಮನಸ್ಸಿನಲ್ಲಿರುವ ಸಂಶಯಗಳನ್ನು (ಆವರಣ) ಪರಿಹರಿಸಿಕೊಳ್ಳುವುದು. ಮತ್ತು ಇದನ್ನು ಗಳಿಸುವ ಸಾಧನೆಯ ಮಾರ್ಗಗಳನ್ನು ತಿಳಿದುಕೊಂಡು ಆಚರಣೆಯಲ್ಲಿ ತರುವುದು.
ಈ ಎರಡು ರೀತಿಯ ಪೂರ್ವ ತಯಾರಿಯನ್ನು ಭಕ್ತಿ ಯೋಗ ಮತ್ತು ಕರ್ಮಯೋಗಗಳ ಮುಖಾಂತರ ಸಾಧಿಸಿಕೊಂಡು ಧ್ಯಾನಮಾಡಿದರೆ ಸಿದ್ಧಿಯನ್ನು ಜಾಗ್ರತೆಯಾಗಿ ಪಡೆಯಬಹುದು. ಸಾರಾಂಶವೇನೆಂದರೆ, ಇಂದ್ರಿಯಗಳನ್ನು ನಿಗ್ರಹಿಸದೆ, ಮನಸ್ಸಿನಿಂದ ಅಹಂಕಾರವನ್ನು, ಕಳಚಿ ಹಾಕದೇ, ಸಾಧನೆಯನ್ನು ಮಾಡಿದರೆ. ಅಂತಹ ಸಾಧಕನು ಎಷ್ಟೇ ದೀರ್ಘಕಾಲ ಸಾಧನೆಯನ್ನು ಮಾಡಿದರೂ ಸಿದ್ಧಿಯನ್ನು ಪಡೆಯಲಾರರು. ಅಂದರೆ ತಮ್ಮ ಆತ್ಮದಲ್ಲಿ ಪರಮಾತ್ಮನನ್ನು ಕಾಣಲಾರರು. ಇಂತಹ ಸಾಧಣೆಯಲ್ಲಿ ಸಾಧನೆ ಹೊರಗಿನ ಶಾರೀರಿಕ ಕರ್ಮಗಳಿಗಿಂತ ಆಂತರಿಕ ಪರಿಶುದ್ಧತೆ ಹಾಗೂ ಪಾವಿತ್ರ್ಯತೆಗಳು ಹೆಚ್ಚು ಮುಖ್ಯ. ಇವುಗಳ ಮೇಲೆಯೇ ಯಶಸ್ಸು ಲಭಿಸಿದೆ, ಎಂಬ ಭಾವವನ್ನು ಈ ಶ್ಲೋಕದಲ್ಲಿ ಹೇಳಲಾಗಿದೆ.
ಸೂರ್ಯ, ಚಂದ್ರ, ಅಗ್ನಿ ಮೊದಲಾದ ಜ್ಯೋತಿಗಳು ಆತ್ಮನನ್ನು ಬೆಳಗಿಸಬಾರದು, ಲಾರರು ಈ ಸ್ಥಾನವನ್ನು ಸೇರಿದರೆ ಪುನರ್ಜನ್ಮವಿಲ್ಲ; ಮತ್ತು ಪರಮಾತ್ಮನ ಒಂದು ಅಂಶವು ಜೀವ ಎನಿಸಿಕೊಳ್ಳುತ್ತದೆ, ಎಂದು ಪರಮಾತ್ಮನನ್ನು ವರ್ಣಿಸಿ, ಮುಂದಿನ ನಾಲ್ಕು ಶ್ಲೋಕಗಳಲ್ಲಿ ಈ ವರ್ಣನೆಯನ್ನು ಮುಂದುವರಿಸಲಾಗಿದೆ.

ಯದಾದಿತ್ಯಗತಂ ತೇಜೋ ಜಗದ್ಭಾಸಮತೇ„ಖಿಲಮ್ |
ಯಚ್ಚಂದ್ರಮಸಿ ಯಚ್ಚಾಗ್ನೌ ತತ್ತೇಜೋ ವಿದ್ಧಿ ಮಾಮಕಮ್ || 12 ||
ಅರ್ಥ :- ಇಡೀ ಜಗತ್ತಿಗೆ ಬೆಳಕನ್ನು ಕೊಡುವ ಸೂರ್ಯನಲ್ಲಿರುವ ತೇಜಸ್ಸು, ಅಂತೆಯೇ ಚಂದ್ರ ಹಾಗೂ ಅಗ್ನಿಗಳಲ್ಲಿರುವ ತೇಜಸ್ಸು ಇವೆಲ್ಲವೂ ನನ್ನ ತೇಜಸ್ಸುಗಳೆಂದು ತಿಳಿ.
ಚಂದ್ರ, ಸೂರ್ಯ, ಅಗ್ನಿ ಇವು ಜ್ಯೋತಿಮೂರ್ತಿಗಳಾದರೂ, ಅವರು ಸಹ ಪರಮಾತ್ಮನ ಸೃಷ್ಟಿ, ಇವುಗಳ ಸೃಷ್ಟಿಗೆ, ಇರುವಿಕೆಗೆ ಹಾಗೂ ನಾಶಕ್ಕೆ ಪರಮಾತ್ಮನೇ ಕಾರಣನು. ಸಣ್ಣ, ದೊಡ್ಡ, ಅತಿದೊಡ್ಡ ಎಲ್ಲಾ ಬಲ್ಬುಗಳನ್ನು ವಿದ್ಯುಚ್ಛಕ್ತಿಯು ಪ್ರಕಾಶಿಸುವಂತೆ, ಚಂದ್ರ, ಸೂರ್ಯ, ಅಗ್ನಿಗಳನ್ನು ಪರಮಾತ್ಮನು ಬೆಳಗಿಸುತ್ತಾನೆ. ಅವನ ಇರುವಿಕೆಯಲ್ಲಿದ್ದರೆ ಇವು ಬಲ್ಬಿನಂತೆ ಕೇವಲ ಜಡವಸ್ತುಗಳು, ಅವು ಯಾವ ಪ್ರಕಾಶವನ್ನೂ ಬೀರಲಾರವು.

ಗಾಮಾವಿಶ್ಯ ಚ ಭೂತಾನಿ ಧಾರಯಾಮ್ಯಹಮೋಜಸಾ |
ಪುಷ್ಣಾಮಿ ಚೌಷಧೀಃ ಸರ್ವಾಃ ಸೋಮೋ ಭೂತ್ವಾರಸಾತ್ಮಕಃ ||13 ||
ಅರ್ಥ :- ನಾನು ಭೂಮಿಯಲ್ಲಿ ಪ್ರವೇಶಿಸಿ, (ಇದ್ದುಕೊಂಡು) ನನ್ನ ಶಕ್ತಿಯಿಂದ ಎಲ್ಲಾ ಜೀವಿಗಳನ್ನೂ ಧರಿಸುತ್ತೇನೆ. ರಸಗಳ ಅಧಿದೇವತೆಯಾದ ಚಂದ್ರನು ನಾನಾಗಿದ್ದು (ಅವನಲ್ಲಿದ್ದುಕೊಂಡು) ಎಲ್ಲಾ ವನಸ್ಪತಿಗಳನ್ನೂ ಬೆಳೆಯಿಸುತ್ತೇವೆ.
ಭೂಮಿಯ ಇತಿಹಾಸವು ಬಹಳ ಪುರಾತನವಾದುದು. ಭೂಮಿಯಲ್ಲಿ ಜನಸಂಖ್ಯೆಯು ಎಷ್ಟೇ ಹೆಚ್ಚಾಗಲೀ ಅದೇ ರೀತಿ ಇತರೆ ಜೀವಿಗಳ, ಹಾಗೂ ಖನಿಜಗಳ ಪ್ರಮಾಣವು ಎಷ್ಟೇ, ಹೆಚ್ಚಾಗಲಿ, ಅವೆಲ್ಲವನ್ನೂ ಧರಿಸಿ, ಅವು ಸುಖವಾಗಿ ಬಾಳುವಂತೆ ಹಾಗೂ ಅಭಿವೃದ್ಧಿಯಾಗುವಂತೆ ಭೂಮಿಯು ರಕ್ಷಣೆಯನ್ನು ಕೊಡುತ್ತದೆ. ಈ ಶಕ್ತಿಯು ಭೂಮಿಗೆ ಪರಮಾತ್ಮನಿಂದ ಬರುತ್ತದೆ. ಪ್ರಪಂಚಕ್ಕೆ ಕಾವನ್ನೂ ಜೀವವನ್ನೂ ಕೊಡುವ ಸೂರ್ಯನ ಶಕ್ತಿಯು ಪರಮಾತ್ಮನಿಂದ ಬರುವಂತೆ, ಎಲ್ಲಾ ಜೀವಿಗಳನ್ನು ಧರಿಸಿ ಪೋಷಿಸುವ ಶಕ್ತಿಯು ಭೂಮಿಗೆ ಪರಮಾತ್ಮನಿಂದಲೇ ಬರುತ್ತದೆ. ಇದೇ ರೀತಿ ಸಸ್ಯಗಳನ್ನು ರಸವತ್ತಾಗಿ ಮಾಡುವ ಹಾಗೂ ಬೆಳೆಯಿಸುವ ಶಕ್ತಿಯು ಚಂದ್ರನಿಗೆ ಪರಮಾತ್ಮನಿಂದ ಸಿಗುತ್ತದೆ. ಚಂದ್ರನನ್ನು ಹಿಂದೂ ಗ್ರಂಥಗಳಲ್ಲಿ ಸಸ್ಯಾಧಿಪತಿ ಎಂದು ಕರೆದಿದ್ದಾರೆ. ಟೊಮ್ಯಾಟೊ ಬೀಜವನ್ನು ಹುಣ್ಣಿಮೆಯ ದಿವಸ ಬಿತ್ತಿ ಹಣ್ಣನ್ನು ಸಹ ಹುಣ್ಣಿಮೆ ದಿವಸ ಕೊಯ್ದು, ಆ ಬೀಜವನ್ನು ಪುನಃ ಬಿತ್ತಿದರೆ ಅದು ಒಳ್ಳೆಯ ಜಾತಿಯ ಫಲವನ್ನು ವಿಫುಲವಾಗಿ ಕೊಡುತ್ತದೆಂದು ಈಚೆಗೆ ಕಂಡು ಹಿಡಿಯಲ್ಪಟ್ಟಿದೆ. ಇದೇ ರೀತಿ ಬೀಜಕ್ಕಾಗಿ ಸಂಗ್ರಹಿಸುವ ಭತ್ತವನ್ನು ಬಿಸಲಿನಲ್ಲಿ ಒಣಗಿಸಿದಂತೆ, ಚಂದ್ರನ ಬೆಳಕಿನಲ್ಲಿ ಸಹ ಬಿಡುವುದರಿಂದ ಆ ಬೀಜದಿಂದ ಬರುವ ಪೈರು ಹುಲುಸಾಗಿರುತ್ತದೆ. ಅದು ಅನೇಕ ರೈತರ ಅನುಭವದಿಂದ ಸಿದ್ಧವಾಗಿದೆ. ಚಂದ್ರನು ಕೆಲವು ವಿಶಿಷ್ಟ ನಕ್ಷತ್ರಗಳಲ್ಲಿರುವಾಗ (ಪುಷ್ಯ ನಕ್ಷತ್ರ) ಔಷಧಿ ಮೂಲಿಕೆಗಳನ್ನು ಸಂಗ್ರಹಿಸಿದರೆ ವಿಶೇಷ ಫಲವನ್ನು ಕೊಡುತ್ತದೆಂದು ಇದೇ ಕಾರಣದಿಂದ ಒಂದು ಔಷಧಿ ಕಲ್ಪಕ್ಕೆ ಪುಶ್ಯಾನುಗ ಎಂಬ ಹೆಸರನ್ನಿಡಲಾಗಿದೆ. ಚಂದ್ರನು ಸಸ್ಯಾಧಿಪತಿ ಎಂಬುದಕ್ಕೆ ಇವು ಕೆಲವು ಉದಾಹರಣೆಗಳು ಈ ಎಲ್ಲಾ ಶಕ್ತಿಯು ಅವನಿಗೆ ಪರಮಾತ್ಮನಿಂದಲೇ ಬರುತ್ತದೆ.

ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ |
ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ || 14 ||
ಅರ್ಥ :- ನಾನು ಎಲ್ಲಾ ಪ್ರಾಣಿಗಳ ಜಠರದಲ್ಲಿ ವೈಶ್ವಾನರ ಎಂಬ ಹೆಸರಿನ ಅಗ್ನಿಯಾಗಿದ್ದುಕೊಂಡು, ಪ್ರಾಣಿಗಳು ತಿನ್ನುವ ನಾಲ್ಕು ತರಹದ ಆಹಾರವನ್ನು ಪ್ರಾಣ ಮತ್ತು ಅಪಾನವಾಯುಗಳ ಸಹಾಯದಿಂದ ಜೀರ್ಣಿಸಿ ರಕ್ತಗತ ಮಾಡುತ್ತೇವೆ. ತ್ತೇನೆ
ಎಲ್ಲಾ ಪ್ರಾಣಿಗಳ ಬದುಕುವಿಕೆಗೆ ಉಷ್ಣತೆಯು ಅವಶ್ಯಕ. ಆ ಉಷ್ಣತೆಯು ಜಠರಾಗ್ನಿಯಿಂದ ಬರುತ್ತದೆ. ಜಠರಾಗ್ನಿಗೆ ಆಹಾರವನ್ನು ಪಚನಮಾಡುವ, ರಕ್ತಗತ ಮಾಡುವ ಮತ್ತು ಶರೀರದ ಉಷ್ಣತೆಯನ್ನು ಕಾಪಾಡುವ ಶಕ್ತಿಯೂ ಪರಮಾತ್ಮನಿಂದ ಬರುತ್ತದೆ. ಆಹಾರದ ಸಾರವು ರಕ್ತಕ್ಕೆ ಸೇರುವಂತೆ ಹಾಗೂ ಶರೀರದ ಎಲ್ಲಾ ಭಾಗಕ್ಕೆ ತಲುಪುವಂತೆ ಮಾಡುವ ಕಾರ್ಯವು ಪ್ರಾಣವಾಯುವಿನದ್ದು, ಅಗ್ನಿಯು ಪ್ರಾಣವಾಯುವಿನೊಡನೆ ಸೇರಿಕೊಂಡು ಈ ಕಾರ್ಯವನ್ನು ಮಾಡುತ್ತದೆ. ನಾಲ್ಕು ತರಹದ ಆಹಾರಗಳೆಂದರೆ, ಜಗಿದು ತಿನ್ನುವ ನುಂಗುವ ಕುಡಿಯುವ ಮತ್ತು ನೆಕ್ಕುವ ವಿವಿಧ ಅನ್ನಪಾನೀಯಗಳು, (ಅಶಿತಂ, ಖಾದತಂ, ಖಾದಿತಮ್ ಪೀತಂ, ಲೇಹ್ಯಂ)

ಸರ್ವಷ್ಯ ಚಾಹಣ ಚಾಹಂ ಹೃದಿ ಸಂನಿಷ್ಟೋ
ಮತ್ತಃ ಸ್ಮøತಿಜ್ರ್ಞಾನಮಪೋಹನಂ ಚ |
ವೇದೈಶ್ಚ ಸರ್ವೈರಹಮೇವ ವೇದ್ಯೋ
ವೇದಾಂತಕೃತದ್ವೇದವಿದೇವ ಚಾಹಮ್ || 15||
ಅರ್ಥ :- ಸರ್ವ ಪ್ರಾಣಿಗಳ ಹೃದಯದಲ್ಲಿಯೂ ನಾನು ನೆಲೆಸಿದ್ದೇನೆ. ನನ್ನಿಂದಲೇ ಅವುಗಳಿಗೆ ಜ್ಞಾಪಕಶಕ್ತಿ, ಜ್ಞಾನ ಮತ್ತು ಅವುಗಳ ಅಭಾವ (ಅಜ್ಞಾನ, ಮರೆವು) ಉಂಟಾಗುತ್ತವೆ. ವೇದಗಳಿಂದ ತಿಳಿಯಬೇಕಾದವನು ನಾನೇ ಸರಿ. ವೇದಾಂತವನ್ನು ಸೃಷ್ಟಿಸಿದವನೂ ನಾನೇ. ವೇದಗಳನ್ನು ತಿಳಿದವನೂ ನಾನೇ ಆಗಿದ್ದೇನೆ.
ಇಲ್ಲಿ ಹೃದಯ ಎಂದರೆ ರಕ್ತ ಶರೀರ ಎಲ್ಲಾ ಭಾಗಗಳಿಗೆ ಹಂಚುವ ಸ್ಥೂಲ ಹೃದಯವಲ್ಲ. ಪ್ರೇಮ, ತಾಳ್ಮೆ, ದಯೆ, ದಾನ, ಕರುಣೆ, ಮೊದಲಾದ ಸದ್ಗುಣಗಳಿಗೆ ಸ್ಥಾನವಾದ ಸೂಕ್ಷ್ಮ ಹೃದಯ ಎಂದು ತಿಳಿಯಬೇಕು. ಪರಮಾತ್ಮನು ಈ ಹೃದಯದಲ್ಲಿದ್ದಾನೆ ಎಂದರೆ ಧ್ಯಾನಕಾಲದಲ್ಲಿ ಸಾಧಕನು ಈ ಹೃದಯದಲ್ಲಿ ಪರಮಾತ್ಮನನ್ನು ಧ್ಯಾನಮಾಡಬೇಕು ಎಂದು ತಿಳಿಯಬೇಕು.
ಜ್ಞಾನ ಮತ್ತು ಮರೆವು ಇವೆರಡರಲ್ಲಿಯೂ ಪರಮಾತ್ಮನಿದ್ದಾನೆಂದು ಹೇಳಲಾಗಿದೆ. ಜ್ಞಾನದಲ್ಲಿ ಪರಮಾತ್ಮನ್ನು ಧ್ಯಾನಿಸಬಹುದು. ಮರವಿನಲ್ಲಿ ಇವನ ಇರುವನ್ನು ಧ್ಯಾನಿಸುವುದು ಹೇಗೆ ಎಂಬ ಅನುಮಾನ ಬರುತ್ತದೆ. ಅದನ್ನೇ ಇಲ್ಲಿ ವಿವರಿಸಲಾಗಿದೆ. ಯಾವುದಾದರೊಂದು ವಿಷಯವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕಾದರೆ, ಅದರ ಬಗ್ಗೆ ಇದುವರೆಗಿದ್ದ ತಪ್ಪು ಕಲ್ಪನೆಗಳನ್ನು ವಿವೇಕದಿಂದ ಕಳಚಿಹಾಕಬೇಕು. ಈ ತಪ್ಪು ಕಲ್ಪನೆಗಳನ್ನು ಮರೆತರೆ ಮಾತ್ರ ಸರಿಯಾದ ವಿಚಾರವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು. ಈ ತರಹದ ಮರವಿನಲ್ಲಿ ಸಹ ಪರಮಾತ್ಮನ ಇರುವನ್ನು ಕಾಣಬೇಕೆಂದು ಇಲ್ಲಿ ಹೇಳಲಾಗಿದೆ. ಹೀಗೆ ಸರ್ವರ ಹೃದಯದಲ್ಲಿಯೂ ಇರುವ ಅವ್ಯಯನೂ, ಅಖಂಡನೂ, ಸರ್ವವ್ಯಾಪಕನೂ, ಆದ ಪರಮಾತ್ಮನನ್ನು ತಿಳಿಯಬೇಕೆಂದು ಎಲ್ಲಾ ವೇದಗಳೂ ಹೇಳುತ್ತವೆ.
ಆತ್ಮನೇ ಸೂರ್ಯ, ಚಂದ್ರ, ಅಗ್ನಿಗಳಿಗೆ ಬೆಳಕನ್ನು ಕೊಡುವವನು. ಭೂಮಿಯ ಧಾರಣಶಕ್ತಿಯೂ, ಚಂದ್ರನ ರಸವರ್ಧನ ಶಕ್ತಿಯೂ, ಇವನಿಂದಲೇ ಲಭಿಸುತ್ತದೆ. ಶರೀರಕ್ಕೆ ಕಾವನ್ನು ಕೊಟ್ಟು ಆಹಾರವನ್ನು ಜೀರ್ಣಿಸಿ, ರಕ್ತಗತ ಮಾಡುವ ವೈಶ್ವಾನರ ಅಗ್ನಿಯು ಪರಮಾತ್ಮನೇ. ಜ್ಞಾನ, ವಿಜ್ಞಾನಗಳು ಮತ್ತು ಅಜ್ಞಾನದ ನಿವಾರಣೆ ಇವು ಅವನ ಅನುಗ್ರಹದಿಂದಲೇ ಸಾಧ್ಯ. ವೇದಗಳಿಂದ ತಿಳಿಯಲ್ಪಡಬೇಕಾದವನು, ವೇದಾಂತವನ್ನು ಬರೆದವನು, ಇವೆಲ್ಲವೂ ಪರಮಾತ್ಮನೇ ಸರಿ. ಒಟ್ಟಿನಲ್ಲಿ ಪ್ರಪಂಚದ ಪ್ರತಿಯೊಂದು ಆಗು ಹೋಗುಗಳು ಸಹ ಪರಮಾತ್ಮನ ಅನುಗ್ರಹ ಅಥವಾ ಒಪ್ಪಿಗೆ ಇಲ್ಲದೆ ನಡೆಯಲಾರವು. ಅಂತಾಗಿ ಪ್ರತಿಯೊಂದರಲ್ಲಿ ಪರಮಾತ್ಮನನ್ನು ಗುರುತಿಸಲು ಪ್ರಯತ್ನಿಸಬೇಕು.
ವಿವಿಧ ಉಪಾಧಿಗಳಲ್ಲಿ ಪರಮಾತ್ಮನನ್ನು ಕಾಣಬೇಕು ಬೇಕೇಂದು ಇದುವರೆಗೆ ಹೇಳಿ, ಈಗ, ನಿರುಪಾಧಿಗಳಲ್ಲಿ ಸಹ ಅವನನ್ನು ಕಾಣಬೇಕೆಂದು ಹೇಳಲಾಗುತ್ತದೆ.

ದ್ವಾವಿಮೌ ಪುರುಷೌ ಲೋಕೇಕ್ಷರಶ್ಚಾಕ್ಷರ ಏವ ಚ |
ಕ್ಷರಃ ಸರ್ವಾಣಿ ಭೂತಾನಿ ಕೂಟಸ್ಥೋ„ಕ್ಷರ ಉಚ್ಯತೇ || 16 ||
ಅರ್ಥ :- ಪ್ರಪಂಚದಲ್ಲಿ ನಾಶವಾಗತಕ್ಕ (ಕ್ಷರ) ಪುರುಷ, ಮತ್ತು ನಾಶವಿಲ್ಲದ ಪುರುಷ (ಅಕ್ಷರ) ಎಂದು ಎರಡು ವಿಧದ ಪುರುಷರಿದ್ದಾರೆ. ಎಲ್ಲಾ ಜೀವಿಗಳು ನಾಶವಾಗತಕ್ಕವುಗಳು. ಕೂಟಸ್ಥನು ನಾಶವಿಲ್ಲದವನು.
ನಾಶವಾಗತಕ್ಕ ಶರೀರಗಳ ಮುಖಾಂತರ ಪ್ರಕಟವಾಗಿರುವ ಜೀವನಿಗೆ ‘ಕ್ಷರ’ ಎನ್ನುತ್ತಾರೆ. ಶರೀರವು ನಾಶವಾಗುವುದರಿಂದ. ಈ ಹೆಸರು. ಇವನು ಶರೀರ ಎಂಬ ನವದ್ವಾರವಿರುವ ಪಟ್ಟಣದಲ್ಲಿ ನೆಲೆಸಿರುವುದರಿಂದ, (‘ಪುರೀ, ಶಯಂತೀತಿ, ಪುರುಷಃ) ಇವನಿಗೆ ಪುರುಷ ಎಂಬ ಹೆಸರು ಬಂದಿದೆ. ಶರೀರವು ನಾಶವಾದ ನಂತರ ಅಂದರೆ ಮೃತಪಟ್ಟ ನಂತರ, ಜೀವನು ಸಹ ಮೃತಪಟ್ಟಂತೆ ಭಾಸವಾಗುವುದರಿಂದ ಇವನಿಗೆ ನಾಶವಾಗತಕ್ಕ ಪುರುಷ ಎಂದು ಹೆಸರು. ವಸ್ತುತಃ ಇವನು ನಾಶವಾಗುವುದಿಲ್ಲ. ಶರೀರ ದೃಷ್ಟಿಯಿಂದ ಹೀಗೆ ಹೇಳಲಾಗಿದೆ. ಇದರೊಡನೆ ಹೋಲಿಸಿ, ಈ ಪುರುಷನಿಗೆ ಚೇತನವನ್ನು ಕೊಡುವ, ಹಾಗೂ ಸರ್ವ ಪ್ರಪಂಚದ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣನಾಗಿರುವ, ಅಖಂಡ ಪರಮಾತ್ಮನಿಗೆ ‘ಅಕ್ಷರ’ ಎಂದು ಹೆಸರು. ಸೊನಗಾರನ ಅಡಿಗಲ್ಲು (ಕೂಟ) ಬಂಗಾರದ ವಿವಿಧ ಆಕಾರದ ಆಭರಣಗಳನ್ನು ಬೇಕಾದಾಕಾರಕ್ಕೆ ತಿದ್ದಲು, ರಚಿಸಲು, ಆಧಾರವಾಗಿದ್ದಾಗ್ಯೂ, ತಾನು ಮಾತ್ರ ಬದಲಾವಣೆಯನ್ನು ಹೊಂದದೇ ಒಂದೇ ರೀತಿಯಾಗಿರುವಂತೆ, ಈ ಪುರುಷನು ಪ್ರಪಂಚದ ವಿವಿಧ ಆಗು ಹೋಗುಗಳಿಂದ ಲಿಪ್ತನಾಗದೆ, ಬದಲಾವಣೆಯನ್ನು ಹೊಂದದೇ ಇರುವುದರಿಂದ ಇವನಿಗೆ ಕೂಟಸ್ಥ ಎಂದು ಕರೆಯಲಾಗಿದೆ.

ಉತ್ತಮ ಪುರುಷಸ್ತ್ವನ್ಯಃ ಪರಮಾತ್ಮೇತ್ಯುದಾಹೃತಃ |
ಯೋ ಲೋಕತ್ರಯಾಮೀವಿಶ್ಯ ಬಿಭರ್ತೃವ್ಯಯ ಈಶ್ವರಃ ಮಾವಿಶ್ಯ || 17 ||
ಅರ್ಥ :- ಇವೆರಡಕ್ಕೂ ಮೀರಿದ ಇನ್ನೊಬ್ಬ ಪುರುಷನಿದ್ದಾನೆ. ಇವನಿಗೆ ಪರಮಾತ್ಮಾ ಎಂದು ಹೆಸರು. (ಪರಮ + ಆತ್ಮಾ), ನಾಶರಹಿತನಾದ ಇವನು ಜಾಗೃತ (ಎಚ್ಚರ) ಸ್ವಪ್ನ, (ಕನಸು) ಮತ್ತು ಸುಷುಪ್ತಿ (ಗಾಢನಿದ್ರೆ) ಎಂಬ ಮೂರು ವಿಧವಾದ ಲೋಕಗಳನ್ನು ಧರಿಸುತ್ತಾನೆ.
ಇದುವರೆಗಿನ ವರ್ಣನೆಯಿಂದ ಮೂರು ತರಹದ ಬೇರೆಬೇರೆ ಪುರುಷ ಎಂದಿದ್ದಾರೆ ಎಂದು ತಿಳಿಯಬಾರದು. ವಸ್ತುತಃ ಮೂವರೂ ಒಬ್ಬನೇ ಪರಮಾತ್ಮನು. ವರ್ಣನಾ ಸೌಕರ್ಯ ದೃಷ್ಟಿಯಿಂದ ಹಾಗೂ ಆವರಣಗಳ ದೃಷ್ಟಿಯಿಂದ ಈ ಮೂರು ಬೇಧಗಳನ್ನು ಮಾಡಲಾಗಿದೆ. ಒಬ್ಬ ಮನುಷ್ಯನು ನೌಕರಿ ಮಾಡುವಾಗ ಅಧಿಕಾರಿಯಾಗುತ್ತಾನೆ, ಮನೆಯಲ್ಲಿ ಮಕ್ಕಳ ತಂದೆಯಾಗುತ್ತಾನೆ, ಹೆಂಡತಿಗೆ ಪತಿಯಾಗುತ್ತಾನೆ. ಆಯಾಯಾ ಸ್ಥಳಗಳಲ್ಲಿ, ಸಂದರ್ಭಗಳಲ್ಲಿ, ಅವನನ್ನು ಬೇರೆ ಬೇರೆ ರೀತಿಯಾಗಿ ತಿಳಿಯುತ್ತೇವೆ. ಆದಾಗ್ಯೂ ಅವನು ಒಬ್ಬನೇ. ಇದೇ ರೀತಿಯಾಗಿ ಪರಮಾತ್ಮನು, ಶರೀರಕ್ಕೆ ಅಂಟಿಕೊಂಡು ಬಂಧಿತನಾಗಿರುವಾಗ ಜೀವ ಅಥವಾ ಕ್ಷರ ಎನಿಸಿಕೊಳ್ಳುತ್ತಾನೆ. ಈ ಕ್ಷರ ಪುರುಷನಿಗೆ ಚೇತನವನ್ನು ಕೊಡುವ, ಮತ್ತು ಶರೀರವು ನಾಶವಾದನಂತರ ಇನ್ನೊಂದು ಶರೀರವನ್ನು ಆರಿಸಿಕೊಂಡು ಅದರಲ್ಲಿ ನೆಲೆಸುವಂತೆ ಮಾಡುವ, ಪುರುಷನಿಗೆ ‘ಅಕ್ಷರಪುರುಷ’ ಎಂದು ಹೆಸರು. ಈ ಎರಡೂ ಪುರುಷರಲ್ಲಿ ವ್ಯಾಪ್ತನಾಗಿ ಅವರಿಬ್ಬರ ಆಧಾರಕ್ಕೆ ಹಾಗೂ ಮೂರು ಲೋಕಗಳ ಆಧಾರಕ್ಕೆ ಕಾರಣನಾದವನಿಗೆ ‘ಪರಮ ಪುರುಷ’ ಎಂದು ಹೆಸರು. ವಾಸ್ತವ್ಯವಾಗಿ ಈ ಮೂರೂ ಪುರುಷರೂ ಒಬ್ಬನೇ. ಆಯಾಯ ಶರೀರ ಅಥವಾ ಕರ್ಮಗಳ ದೃಷ್ಟಿಯಿಂದ ಮೂರು ಭೇದ ಮಾಡಿ ಹೇಳಲಾಗಿದೆ ಅಷ್ಟೆ.
ಒಂದು ಕೊಠಡಿಯೊಳಗೆ ಒಂದು ಪಾತ್ರೆ ಇದೆ ಎಂದಿಟ್ಟುಕೊಳ್ಳೋಣ. ಪಾತ್ರೆಯ ಆಕಾರ ದೃಷ್ಟಿಯಿಂದ ಅದರೊಳಗಿನ ಆಕಾಶಕ್ಕೆ ‘ಘಟಕಾಶ’ ಎನ್ನುತ್ತೇವೆ. ಇದೇ ರೀತಿ ಕೊಠಡಿಯ ಗೋಡೆಗಳ ಆವರಣ ದೃಷ್ಟಿಯಿಂದ ಕೋಣೆಯೊಳಗಿನ ಆಕಾಶಕ್ಕೆ ;ಕೋಣೆಯ ಆಕಾಶ’ ಎನ್ನುತ್ತೇವೆ. ಇವೆರಡೂ ಕಾಲ್ಪನಿಕ, ಆಕಾಶಗಳು ಪಾತ್ರೆಯನ್ನು ಒಡೆದು ಹಾಕಿ, ಗೋಡೆಗಳನ್ನು ಉರುಳಿಸಿ ಬಿಟ್ಟರೆ ಘಟಕಾಶವೂ ಇಲ್ಲ, ಕೋಣೆಯ ಆಕಾಶವೂ ಇಲ್ಲ. ಇವೆರಡೂ ಹೊರಗಿನ ವಿಸ್ತಾರವಾದ ಅಖಂಡವಾದ ಆಕಾಶದಲ್ಲಿ ಲೀನವಾಗುತ್ತವೆ. ಮೇಲೆ ಹೇಳಿದ ಮೂವರು ಪುರುಷರನ್ನು ಸಹ ಇದೇ ರೀತಿಯಾಗಿ ಪರಮಪುರುಷನೆಂದು ತಿಳಿಯಬೇಕು.

ಯಸ್ಮಾತ್‍ಕ್ಷರಮತೀತೋ„ಹಮಕ್ಷರಾದಪಿ ಚೋತ್ತಮಃ |
ಅತೋ„ಸ್ಮಿಲೋಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ || 18 ||
ಅರ್ಥ :- ನಾನು ಕ್ಷರ ಮತ್ತು ಅಕ್ಷರಗಳನ್ನು ದಾಟಿರುವುದರಿಂದ, ಈ ಲೋಕದಲ್ಲಿ ಮತ್ತು ವೇದದಲ್ಲಿ ನನ್ನನ್ನು ಪುರುಷೋತ್ತಮ ಎಂದು ಕರೆಯುತ್ತಾರೆ.
ನಾಶವಾಗುವುದು ಎಂದು ಹೇಳ ಬೇಕಾದರೆ ಅದರ ಹಿನ್ನೆಲೆಯಲ್ಲಿ ನಾಶವಿಲ್ಲದುದು ಇರಬೇಕು. ಪುರುಷೋತ್ತಮನು, ನಾಶವಾಗುವಿಕೆ, ನಾಶವಿಲ್ಲದಿರುವಿಕೆ ಇವುಗಳಾಚೆಗಿದ್ದಾನೆ. ಹಿಂದಿನ ಶ್ಲೋಕದಲ್ಲಿ ಹೇಳಿರುವುದನ್ನೇ ಇಲ್ಲಿ ವಿಶದೀಕರಿಸಲಾಗಿದೆ.

ಯೋ ಮಾಮೇವಮಸಮ್ಮೂಢೋ ಜಾನಾತಿ ಪುರುಷೋತ್ತಮಮ್ |
ಸ ಸರ್ವವಿದ್ಭಜತಿ ಮಾಂ ಸರ್ವಭಾವೇನ ಭಾರತ || 19 ||
ಅರ್ಥ :- ಹೀಗೆ ಮೋಹವನ್ನು ಕಳೆದುಕೊಂಡ ಯಾವನು ನನ್ನನ್ನು ಪುರುಷೋತ್ತಮನೆಂದು ತಿಳಿಯುತ್ತಾನೋ, ಅವನು ಸರ್ವವನ್ನೂ ತಿಳಿದವನಾಗುತ್ತಾನೆ. ಭಾರತನೇ, ಅವನು ತನ್ನ ಎಲ್ಲಾ ಭಾವಗಳಿಂದಲೂ ನನ್ನನ್ನು ಭಜಿಸುತ್ತಾನೆ.
ಮೋಹವನ್ನು ಕಳೆದುಕೊಂಡವನು ಎಂದರೆ ಈ ಶರೀರ, ಮನಸ್ಸು, ಬುದ್ಧಿಗಳು ನಾನು, ಇವುಗಳಿಂದ ಮಾಡುವ ಕರ್ಮಗಳನ್ನು, ವಿಚಾರಗಳನ್ನು ಮಾಡುವವನು ನಾನು, ಎಂಬ ಅಹಂಕಾರವನ್ನು ಕಳಚಿಕೊಳ್ಳುವುದು, ಅಂದರೆ ಜೀವನು ತನ್ನಲ್ಲಿರುವ ಅಹಂಕಾರವನ್ನು ತ್ಯಜಿಸುವುದು, ಪುರುಷೋತ್ತಮನೆಂದು ತಿಳಿಯುವುದೆಂದರೆ ಕೇವಲ ಕಿವಿಯಿಂದ ಕೇಳಿ ತಿಳೀಯುವುದಲ್ಲ. ಬುದ್ಧಿಯಿಂದ ಒಪ್ಪಿ ತಿಳಿಯುವುದೂ ಅಲ್ಲ. ತಾನೇ ಪುರುಷೋತ್ತಮನು ಎಂದು ಅನುಭವಿಸುವುದು. ಜೀವನಲ್ಲಿಯ ಅಹಂಕಾರವು ಇಲ್ಲವಾದರೆ ಉಳಿಯುವುದೇ ಪುರುಷೋತ್ತಮ. ಹೊಸದಾಗಿ ತಿಳಿಯಬೇಕಾದುದೆಂಬುದಿಲ್ಲ. ಇಂತಹವನು ಶ್ರೇಷ್ಠನಾದ ಭಕ್ತನು ಎಂದು ಕೃಷ್ಣನು ಹೇಳಿದ್ದಾನೆ. ಭಕ್ತನು ಎಂದರೆ ಭಕ್ತಿ ಮಾಡುವವನು. ಭಕ್ತಿ ಎಂದರೆ ತಾನು ಮತ್ತು ಭಕ್ತಿ ಮಾಡಲ್ಪಡುವ ವಸ್ತು (ಪರಮಾತ್ಮ) ಇಬ್ಬರೂ ಒಂದೇ ಎಂದು ತಿಳಿಯುವುದು. ಈ ಭಾವವು ಹೆಚ್ಚು ಮೈಗೂಡಿದಷ್ಟು ಭಕ್ತಿಯ ಪ್ರಮಾಣವು ಹೆಚ್ಚಾಗುತ್ತದೆ. ಈಗ ಜೀವನು, ತಾನು ಮತ್ತು ಪರಮಾತ್ಮ ಇಬ್ಬರೂ ಒಂದೇ ಎಂದು ಅನುಭವಿಸುವುದರಿಂದ ಅವನು ಭಕ್ತಶ್ರೇಷ್ಠನೇ ಆಗುತ್ತಾನೆ.
ಇತಿ ಗುಹ್ಯತಮಂ ಶಾಸ್ತ್ರಮಿದಮುಕ್ತಂ ಮಯಾನಘ |
ಏತದ್‍ಬುದ್ಧ್ವಾ ಬುದ್ಧಿಮಾನ್ ನ್ಸ್ಯಾತ್ಕøತಕೃತ್ಯಶ್ಚ ಭಾರತ || 20 ||
ಅರ್ಥ :- ಪಾಪರಹಿತನಾದ ಅರ್ಜುನನೇ, ಈ ರೀತಿಯಾಗಿ ನಿನಗೆ ಅತಿಗುಹ್ಯತಮವಾದ ಈ ಶಾಸ್ತ್ರವನ್ನು ಹೇಳಲಾಯಿತು. ಇದನ್ನು ತಿಳಿಯುವುದರಿಂದ ಮನುಷ್ಯನು ಬುದ್ಧಿವಂತನಾಗುತ್ತಾನೆ. ಮತ್ತು ಅವನು ಮಾಡುವ ಕರ್ಮಗಳು ಫಲಿಸುತ್ತವೆ. ಅಂದರೆ ಅವನು ಕೃತಾರ್ಥನಾಗುತ್ತಾನೆ.
ಹೀಗೆ ಪುರುಷೋತ್ತಮನ್ನು ತಿಳಿದುಕೊಂಡ ಮನುಷ್ಯನು ಬುದ್ಧಿವಂತನಾಗುತ್ತಾನೆ. ಅವನು, ದುಃಖಗಳಿಂದ ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳುವುದಿಲ್ಲ. ಸಾಧನೆಯ ಗುರಿಯಾದ ಈ ಜ್ಞಾನವನ್ನು ಪಡೆದಿರುವುದರಿಂದ ಅವನು ಇನ್ನು ಗಳಿಸಬೇಕಾದುದೇನೂ ಇಲ್ಲ. ಆದ್ದರಿಂದ ಅವನು ಕೃತಕೃತ್ಯನಾಗುತ್ತಾನೆ ಎಂದು ಹೇಳಲಾಗಿದೆ. ಹೀಗೆ ಅವನು ಆನಂದಮಯನಾಗಿ ಬಿಡುತ್ತಾನೆ.
ಓಂ ತತ್ಸದಿತಿ
ಶ್ರೀಮದ್ಭಗವದ್ಗೀತಾಸೂಪನಿಪತ್ಸು ಬ್ರಹ್ಮವಿದ್ಯಾಯಾಂ ಯೋಗ ಶಾಸ್ತ್ರೇ
ಶ್ರೀಕೃಷ್ಣಾರ್ಜುನ ಸಂವಾದೇ ಪುರುಷೋತ್ತಮಯೋಗೋನಾಮ…
ಪಂಚದಶೋ„ಧ್ಯಾಯಃ
*******