S O U L B L I S S

Loading

Bhagavad Gita – Vinayak Rao Bapat – Chapter 17

ಹದಿನೇಳನೆಯ ಅಧ್ಯಾಯ
ಶ್ರದ್ಧಾತ್ರಯ ವಿಭಾಗ ಯೋಗ

ಪೀಠಿಕೆ
ಕರ್ಮವನ್ನು ಮಾಡುವಾಗ ಶಾಸ್ತ್ರಗಳಲ್ಲಿ ಹೇಳಿದ ವಿಧಿಗನುಸಾರವಾಗಿ ಕರ್ಮ ಮಾಡಬೇಕೆಂದು. ಹಿಂದಿನ ಅಧ್ಯಾಯದ ಕೊನೆಯ ಎರಡು ಶ್ಲೋಕಗಳಲ್ಲಿ ಹೇಳಲಾಗಿದೆ. ಈ ವಿವರಗಳನ್ನು ತಿಳಿದುಕೊಳ್ಳಬೇಕಾದರೆ ಶಾಸ್ತ್ರಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ಜ್ಞಾನವನ್ನು ಪಡೆಯಬೇಕು. ಆದರೆ ಇದು ಎಲ್ಲರಿಗೂ ಸಾಧ್ಯವಿಲ್ಲ. ಶಾಸ್ತ್ರಗಳಲ್ಲಿ ಹೇಳಿದ ಮಾರ್ಗದಲ್ಲಿ ಮನುಷ್ಯನಿಗೆ ಶ್ರದ್ಧೆಯಿರಬಹುದು. ಆದರೆ ವಿಧಿನಿಯಮಗಳ ಜ್ಞಾನವಿರುವುದಿಲ್ಲ. ಶ್ರದ್ಧೆಯಿಂದ ಕರ್ಮ ಮಾಡಿದರೆ ಸಾಕಲ್ಲವೇ ಎಂಬ ಪ್ರಶ್ನೆಯು ಸ್ವಭಾವವಾಗಿ ಹುಟ್ಟುತ್ತದೆ. ಅರ್ಜುನನಿಗೆ ಸಹ ಅನುಮಾನವುಂಟಾಗಿ ಇದೇ ತರಹದ ಪ್ರಶ್ನೆಯನ್ನು ಕೇಳಿದ್ದಾನೆ. ಅವನ ಪ್ರಶ್ನೆಯಿಂದಲೇ ಈ ಅಧ್ಯಾಯ ಪ್ರಾರಂಭವಾಗುತ್ತದೆ.
ಸಾಧಕನಲ್ಲಿ ‘ಶ್ರದ್ಧೆ’ ಇರಬೇಕಾದುದು ಅವಶ್ಯಕ ಎಂದು ಹಿಂದೆ ಹೇಳಲಾಗಿದೆ. (ಅ.4 ಶೋ. 39) ಇಲ್ಲಿ ಶ್ರದ್ಧೆಗೆ ಶಾಸ್ತ್ರದಷ್ಟೇ ಮಹತ್ವನ್ನು ಕೊಡಲಾಗಿದೆ. ಆದುದರಿಂದ ಶಾಸ್ತ್ರ ಜ್ಞಾನವಿಲ್ಲದಿರುವಾಗ ಶ್ರದ್ಧೆಯನ್ನು ಅವಲಂಬಿಸಿದರೆ ಸಾಲದೇ ಎಂಬ ಅರ್ಜುನನ ಪ್ರಶ್ನೆಯು ಸಹಜವಾದುದು. ಶಾಸ್ತ್ರದಲ್ಲಿ ವಿಧಿಸಿದ ನಿಯಮಗಳ ಬಗ್ಗೆ ಮಾನಸಿಕ ಒಪ್ಪಿಗೆ ಇದ್ದು, ಮನಸ್ಸು ತನ್ನ ನಿರ್ಣಯವೇ ಸರಿ ಎಂಬ ಏಕಭಾವವು ಅಂತರಂಗದ ಮೂಲಕ ಬರುವುದಕ್ಕೆ ‘ಶ್ರದ್ಧೆ’ ಎಂದು ಹೆಸರು. ಈ ಆಂತರಿಕ ಸ್ಫೂರ್ತಿಯಿಂದಾಗಿ, ಆ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಬೇಕೆಂಬ ಉತ್ಸಾಹವು ತಾನಾಗಿಯೇ ಒಳಗಿನಿಂದ ಉಕ್ಕಿ ಬರುತ್ತದೆ. ಶ್ರದ್ಧೆಯು ಹೃದಯದ ಕೂಗು. ಶ್ರದ್ಧೆಯು ಗುರಿಯನ್ನು ಮುಟ್ಟಲು ನಿರ್ಧಾರವನ್ನೂ ಎಂತಹ ಕಷ್ಟವನ್ನಾದರೂ ಎದುರಿಸುವ ಸಾಹಸವನ್ನೂ ಕೊಡುತ್ತದೆ.
ಶ್ರೀಕೃಷ್ಣನು ಈ ಸಂದರ್ಭವನ್ನುಪಯೋಗ ಮಾಡಿಕೊಂಡು ಅರ್ಜುನನ ಮೂಲಕ, ವಿವಿಧ ರಂಗಗಳಲ್ಲಿ, ಬೇರೆಬೇರೆ ವ್ಯಕ್ತಿಗಳಲ್ಲಿ ಶ್ರದ್ಧೆಯು ಯಾವ ರೂಪದಲ್ಲಿ ಇರುತ್ತದೆ ಎಂಬ ಶಾಸ್ತ್ರೀಯ ಜ್ಞಾನವನ್ನೂ, ಅವರ ವಿವರಗಳನ್ನೂ ಹೇಳಿದ್ದಾನೆ. ಆಹಾರ, ಯಜ್ಞ, ತಪಸ್ಸು, ಮತ್ತು ದಾನಗಳಲ್ಲಿ, ಶ್ರದ್ಧೆಯು ಯಾವ ಯಾವ ತರಹದ್ದಿರುತ್ತದೆ, ಅವುಗಳಲ್ಲಿ ಶ್ರೇಷ್ಠವಾದ ಶ್ರದ್ಧೆ ಯಾವುದು. ಎಂಬುದನ್ನು ಸಶಾಸ್ತ್ರೀಯವಾಗಿ ವಿವರಿಸಿದ್ದಾನೆ. ಇಲ್ಲಿ ಶ್ರದ್ಧೆಯನ್ನು ಸಾತ್ವಿಕ, ರಾಜಸಿಕ, ಮತ್ತು ತಾಮಸಿಕ ಎಂದು ಮೂರು ವಿಭಾಗ ಮಾಡಲಾಗಿದೆ. ಈ ವಿವರಗಳನ್ನು ತಿಳಿದುಕೊಂಡರೆ, ರಾಜಸಿಕ, ತಾಮಸಿಕ ಶ್ರದ್ಧೆಗೂ ಕೆಳಮಟ್ಟದವುಗಳೆಂದೂ ಅವುಗಳನ್ನು ತ್ಯಜಿಸಿ, ಸಾತ್ವಿಕ ಶ್ರದ್ಧೆಯನ್ನು ಮೈಗೂಡಿಸಿಕೊಳ್ಳ ಬೇಕೆಂದೂ ಸ್ಪಷ್ಟವಾಗುತ್ತದೆ ಹೀಗೆ ವಿವರಗಳನ್ನು ತಿಳಿದುಕೊಂಡು ಸಾಧಕನು ತನ್ನಲ್ಲಿರುವ ತಾಮಸಿಕ, ರಾಜಸಿಕ ಶ್ರದ್ಧೆಗಳನ್ನು ಗೆದ್ದು, ಸಾತ್ವಿಕ ಶ್ರದ್ಧೆಯನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಮಾಡಬೇಕು. ಈ ವಿವರಗಳು ಸಾಧಕನ ಮೇಲ್ಮೆಗಾಗಿ ಹಾಗೂ ಸಾಧನೆಗೆ ಪೋಷಕವಾಗಿಯೇ ಹೊರತು ಇನ್ನೊಬ್ಬರನ್ನು ಟೀಕಿಸುವುದಕ್ಕಲ್ಲ ಎಂಬುದನ್ನು ಸದಾ ಜ್ಞಾಪಕದಲ್ಲಿಟ್ಟುಕೊಳ್ಳಬೇಕು.

ಹದಿನೇಳನೆಯ ಅಧ್ಯಾಯ
ಶ್ರದ್ಧಾತ್ರಯ ವಿಭಾಗ ಯೋಗ
ಅರ್ಜುನ ಉವಾಚ
ಯೇ ಶಾಸ್ತ್ರವಿಧಿಮುತ್ಸøಜ್ಯ ಯಜಂತೇ ಶ್ರದ್ಧಾಯಾನ್ವಿತಾಃ |
ತೇಷಾಂ ನಿಷ್ಠಾತು ಕಾ ಕೃಷ್ಣ ಸತ್ತ್ವಮಾಹೋ ರಜಸ್ತಮಃ || 1 ||
ಅರ್ಜುನನು ಹೇಳುತ್ತಾನೆ.
ಅರ್ಥ :- ಕೃಷ್ಣನೆ, ಕೆಲವರು, ಶಾಸ್ತ್ರವಿಧಿಗಳಲ್ಲಿ ಶ್ರದ್ಧೆಯುಳ್ಳವರಾಗಿದ್ದಾಗ್ಯೂ ಅವುಗಳ ಜ್ಞಾನವಿಲ್ಲದಿರುವುದರಿಂದ, ತಮ್ಮ ಶ್ರದ್ಧೆಗನುಸಾರವಾಗಿ ಕರ್ಮ ಮಾಡುತ್ತಾರೆ. ಅವರ ಶ್ರದ್ಧೆಯು ಎಂತಹುದು ಸಾತ್ವಿಕವೋ, ರಾಜಸಿಕವೋ, ತಾಮಸಿಕವೋ-
ಹಿಂದಿನ ಅಧ್ಯಾಯದ ಕೊನೆಯಲ್ಲಿ ಹೇಳಿದ ಶ್ಲೋಕವನ್ನು ಆಧಾರವಾಗಿಟ್ಟುಕೊಂಡು ಶ್ರದ್ಧೆಯ ವಿವರಗಳನ್ನು ತಿಳಿದುಕೊಳ್ಳಲು ಅರ್ಜುನನು ಈ ಪ್ರಶ್ನೆ ಮಾಡಿದ್ದಾನೆ. ಯಜಂತೇ ಶ್ರದ್ಧಯಾನ್ವಿತಾ: ಶ್ರದ್ಧೆಯಿಂದ ಕರ್ಮ ಮಾಡುತ್ತಾರೆ. ಇಲ್ಲಿ ಯಜಂತೇ ಎಂದು ಹೇಳಿರುವುದರಿಂದ ಕರ್ಮಕಾಂಡೋಕ್ತ ಯಜ್ಞ-ಯಾಗಾದಿ ಕರ್ಮಗಳನ್ನು ಮಾಡುತ್ತಾರೆ ಎಂದು ಅರ್ಥವಾಗುತ್ತದೆ. ಹಿಂದೆ ಮೂರನೆಯ ಅಧ್ಯಾಯದಲ್ಲಿ ‘ಯಜ್ಞ’ ಶಬ್ದಕ್ಕೆ ವಿಶೇಷ ಅರ್ಥವನ್ನು ಮಾಡಲಾಗಿದೆ. ಸಮಾಜದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ, ಸಮಾಜ ಇಲ್ಲವೇ ಬಹುಜನರ ಕಲ್ಯಾಣಕ್ಕಾಗಿ ಸಾಮೂಹಿಕ ಕಾರ್ಯಗಳು; ಹಾಗೂ ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕವಾಗಿ ಫಲಾಶೆಯನ್ನು ತ್ಯಜಿಸಿ ಮಾಡುವ ಎಲ್ಲಾ ಕಾರ್ಯಗಳು; ಯಜ್ಞ ಶಬ್ದದೊಳಗೆ ಅಂತರ್ಗತವಾಗುತ್ತದೆಂದು ಹಿಂದೆ ಹೇಳಲಾಗಿದೆ. ಶ್ರದ್ಧೆಯಿಂದ ಮಾಡುವ ಈ ಕರ್ಮಗಳು ಸಾತ್ವಿಕವೋ, ರಾಜಸಿಕವೋ, ತಾಮಸಿಕವೋ ಎಂಬುದು ಅರ್ಜುನನ ಪ್ರಶ್ನೆ.
ಶ್ರೀ ಭಗವಾನುವಾಚ
ತ್ರಿವಿಧಾ ಭವತಿ ಶ್ರದ್ಧಾ ದೇಹಿನಾಂ ಸಾ ಸ್ವಭಾವಜಾ |
ಸಾತ್ತ್ವಿಕೀ ರಾಜಸೀ ಚೈವ ತಾಮಸೀ ಚೇತಿ ತಾಂ ಶೃಣು || 2 ||

ಅರ್ಥ :- ಪ್ರತಿಯೊಬ್ಬ ಮನುಷ್ಯನಲ್ಲಿಯೂ ಸ್ವಾಭಾವಿಕವಾಗಿರುವ ಶ್ರದ್ಧೆಯು ಸಾತ್ವಿಕ, ರಾಜಸಿಕ, ತಾಮಸಿಕ ಎಂದು ಮೂರು ವಿಧವಾಗಿದೆ. ಅವುಗಳನ್ನು ಹೇಳುತ್ತೇನೆ ಕೇಳು.
ಪ್ರತಿಯೊಬ್ಬ ಮನುಷ್ಯನ ಮನಸ್ಸಿನಲ್ಲಿರುವ ಸಾತ್ವಿಕ, ರಾಜಸಿಕ, ತಾಮಸಿಕ, ಭಾವಗಳಿಗನುಸಾರವಾಗಿ ಅವನಲ್ಲಿರುವ ಶ್ರದ್ಧೆಯೂ ಸಹ ಮೂರು ವಿಧವಾಗಿದೆ. ಶ್ರದ್ಧೆಯು ವ್ಯಕ್ತಿಯ ಆಂತರಿಕ ಗುಣವನ್ನು ವ್ಯಕ್ತಪಡಿಸುತ್ತದೆ. ವ್ಯಕ್ತಿಯ ಶಾರೀರಿಕ ಕ್ರಿಯೆಗಳು ಮಾನಸಿಕ ವಿಚಾರಗಳು, ಬೌದ್ಧಿಕ ವಿವೇಕ ಇವೆಲ್ಲವೂ ಅವನ ಶ್ರದ್ಧೆಗೆ ಅನುಗುಣವಾಗಿವೆ.

ಸತ್ತ್ವಾನುರೂಪಾ ಸರ್ವಸ್ಯ ಶ್ರದ್ಧಾ ಭವತಿ ಭಾರತ |
ಶ್ರದ್ಧಾಮಯೋ„ಯಂ ಪುರುಷೋ ಯೋ ಯಚ್ಛದ್ಧಃ ಸ ಏವ ಸಃ || 3 ||
ಅರ್ಥ :- ಪ್ರತಿಯೊಬ್ಬ ಮನುಷ್ಯನಲ್ಲಿರುವ ಶ್ರದ್ಧೆಯೂ ಭಿನ್ನಭಿನ್ನವಾಗಿರುತ್ತದೆ. ಈ ಶ್ರದ್ಧೆಯು ಅವನವನ ಸ್ವಭಾವಕ್ಕನುಸಾರವಾಗಿ ಬಂದಿರುತ್ತದೆ. ಇಲ್ಲಿ ಸ್ವಭಾವ ಎಂದರೆ ಅವನಲ್ಲಿ ಪ್ರಬಲವಾಗಿರುವ ಸಾತ್ವಿಕ, ರಾಜಸಿಕ, ತಾಮಸಿಕ ಗುಣಗಳು ಎಂದರ್ಥ. ಈ ಗುಣಗಳಿಗೆ ಅನುಸಾರವಾಗಿ ಶ್ರದ್ಧೆ ಉಂಟಾಗುತ್ತದೆಯೋ, ಇಲ್ಲವೇ ಶ್ರದ್ಧೆಗೆ ಅನುಗುಣವಾಗಿ ಗುಣಗಳುಂಟಾಗುತ್ತವೆಯೋ ಎಂದು ನಿಶ್ಚಯವಾಗಿ ಹೇಳಲಾಗುವುದಿಲ್ಲ. ಇವೆರಡೂ ಸಮಾನ ಶಕ್ತಿಯುಳ್ಳವುಗಳಾಗಿವೆ. ಇವೆರಡೂ ಪರಸ್ಪರ ಹೊಂದಿಕೊಂಡು ಅವಲಂಬಿಸಿಕೊಂಡು ವರ್ತಿಸುತ್ತವೆ. ಆದಾಗ್ಯೂ ಶ್ರದ್ಧೆಯು ಸ್ವಭಾವವನ್ನುವಲಂಬಿಸಿದೆ ಎಂದು ಗೀತೆಯು ಹೇಳುತ್ತದೆ. ಶ್ರದ್ಧೆಯನ್ನು ಪ್ರಯತ್ನದಿಂದ ತಿದ್ದಿ ಬದಲಾಯಿಸಿ ಕೊಳ್ಳುವುದು ಸಾಧ್ಯವಿದೆ. ಆಗ ವ್ಯಕ್ತಿಯ ಸ್ವಭಾವವು ಸಹ ಬದಲಾಗುತ್ತದೆ. ಇದು ಹೊಸ ಶ್ರದ್ಧೆಗೆ ಅನುಗುಣವಾಗಿರುತ್ತದೆ. ಆದಾಗ್ಯೂ ಸಾಮಾನ್ಯ ಮಾನವನಲ್ಲಿ ಶ್ರದ್ಧೆಯು ಅವನಲ್ಲಿ ಪ್ರಬಲವಾಗಿರುವ ಸತ್ವಾದಿಗುಣಗಳನ್ನು ಅವಲಂಬಿಸಿರುತ್ತದೆ. (ಸತ್ವಾನುರೂಪಾ)

ಯಜಂತೇ ಸಾತ್ತ್ವಿಕಾ ದೇವಾನ್ ಯಕ್ಷರಕ್ಷಾಂಸಿ ರಾಜಸಾಃ
ಪ್ರೇತಾನ್ಭೂತಗಣಾಂಶ್ಚಾನ್ಯೇ ಯಜಂತೇ ತಾಮಸಾ ಜನಾಃ || 4 ||
ಅರ್ಥ:- ಸಾತ್ವಿಕ ಶ್ರದ್ಧೆಯಿರುವವರು ದೇವತೆಗಳನ್ನೂ, ರಾಜಸ ಶ್ರದ್ಧೆಯುಳ್ಳವರು ಯಕ್ಷ ರಾಕ್ಷಸರನ್ನೂ, ತಾಮಸ ಶ್ರದ್ಧೆಯುಳ್ಳವರು ಭೂತಗಳ ಗುಂಪನ್ನೂ ಅರ್ಚಿಸುತ್ತಾರೆ.
ಮನುಷ್ಯನು ವಿವಿಧ ಶಕ್ತಿಗಳನ್ನು ಪೂಜಿಸುತ್ತಾ ತನ್ನ ಇಚ್ಛಿತ ಫಲಗಳನ್ನು ಪಡೆಯಲು ಪ್ರಯತ್ನಿಸುತ್ತಾನೆ. ಇಲ್ಲಿ ಅರ್ಚನೆ ಎಂದರೆ ದೇವರ ಪೂಜೆ ಮಾತ್ರ ಎಂದು ತಿಳಿದು ಕೊಳ್ಳಬಾರದು. ಕೆಲವರು ಇಂದ್ರಿಯ ವಿಷಯಗಳನ್ನೂ, ಕೆಲವರು ಸಂಪತ್ತನ್ನೂ, ಅಧಿಕಾರವನ್ನೂ. ಆರೋಗ್ಯವನ್ನೂ, ಕೆಲವರು ವಿಜ್ಞಾನವನ್ನೂ, ಹೀಗೆ ನಾನಾತರಹದ ಶಕ್ತಿಗಳನ್ನೂ ಅರ್ಚಿಸುತ್ತಾರೆ. ಇದರಲ್ಲಿ ಸಾತ್ವಿಕ ಶ್ರದ್ಧೆ ಇರುವವರು ಶುದ್ಧ ಪರಮಾತ್ಮನ ಅರ್ಚನೆಯನ್ನು ಮಾಡಿ, ಆತ್ಮವಿಕಾಸವನ್ನು ಪಡೆಯುತ್ತಾರೆ. ರಾಜಸಿಕ ಶ್ರದ್ಧೆಯಿರುವವರು ಮಹತ್ವಾಕಾಂಕ್ಷೆಯುಳ್ಳವರಾಗಿ, ಅವುಗಳನ್ನು ಸಾಧಿಸುವುದಕ್ಕಾಗಿ, ತಾವೇ ಆರಿಸಿಕೊಂಡ ಕಾರ್ಯಗಳಲ್ಲಿ ಮಗ್ನರಾಗಿರುತ್ತಾರೆ. ಇಂತಹವರು ತಮ್ಮ ಇಷ್ಟಾರ್ಥಗಳನ್ನು ಪಡೆಯಲು ಯಕ್ಷರು, ರಾಕ್ಷಸರು ಇತ್ಯಾದಿ ಅನುಚರರನ್ನು ಪೂಜಿಸುತ್ತಾರೆ. ಯಕ್ಷರು ಕುಬೇರನ ಸಹಚರರು. ಕುಬೇರನು ಧನಾಧಿಪತಿ. ಅಧಿಕಾರ ಹಾಗೂ ಶಕ್ತಿಗಳ ಮೂರ್ತಿಗಳು ರಾಕ್ಷಸರು, ವ್ಯವಹಾರದಲ್ಲಿ ಜಯವನ್ನು ಗಳಿಸಬೇಕೆನ್ನುವವರೆಲ್ಲರೂ, ಶ್ರೀಮಂತರು ಹಾಗೂ ಅವರ ಅನುಚರರನ್ನೂ, ಅಧಿಕಾರ ಹಾಗೂ ಶಕ್ತಿಯಿರುವವರನ್ನೂ ಆಶ್ರಯಿಸುತ್ತಿರುವುದನ್ನು (ಅರ್ಚಿಸುವುದನ್ನು) ಇವತ್ತು ಸಹ ಕಾಣಬಹುದು.
ತಾಮಸಿಕ ಶ್ರದ್ಧೆಯಿರುವವರು, ಭೂತಗಳನ್ನು ಪ್ರೇತಗಳನ್ನು ಅರ್ಚಿಸುತ್ತಾರೆ. ಅಜ್ಞಾನಿಗಳಾದ, ಮಾನಸಿಕ ವಿಕಾಸವನ್ನು ಹೊಂದದೆ ಇರುವ ಕೆಳಮಟ್ಟದ ಜನರು ತಮ್ಮ ಇಚ್ಛಾಪೂರ್ತಿಯಾಗಿ ಕ್ಷುದ್ರ ದೇವತೆಗಳಾದ ಭೂತ ಪ್ರೇತಗಳನ್ನು ಅರ್ಚಿಸಿ, ತಮ್ಮ ಇಷ್ಟಾರ್ಥವನ್ನು ಪಡೆಯಲು ಪ್ರಯತ್ನಿಸುತ್ತಾರೆ. ಹಣಕ್ಕಾಗಿ ಗೂಂಡಾವೃತ್ತಿಗಿಳಿ-ಯುವವರನ್ನು ಈ ಗುಂಪಿಗೆ ಸೇರಿಸಬಹುದು.

ಅಶಾಸ್ತ್ರವಿಹಿತಂ ಘೋರಂ ತಪ್ಯಂತೇ ಯೇ ತಪೋ ಜನಾಃ |
ದಂಭಾಹಂಕಾರಸಂಯುಕ್ತಾಃ ಕಾಮರಾಗಬಲಾನ್ವಿತಾಃ || 5 ||
ಅರ್ಥ :- ಶಾಸ್ತ್ರಗಳಲ್ಲಿ ಹೇಳದೆ ಇರುವ, ಘೋರತರವಾದ ತಪಸ್ಸನ್ನು ಮಾಡುತ್ತಾ ಕಪಟ, ಅಹಂಕಾರ, ಕಾಮ, ರಾಗ, ಮತ್ತು ಬಲಗಳಿಂದ ಕೂಡಿದವನಾಗಿ,

ಕರ್ಶಯಂತಃ ಶರೀರಸ್ಥಂ ಭೂತಗ್ರಾಮಮಚೇತಸಃ |
ಮಾಂ ಚೈವಾಂತಃಶರೀರಸ್ಥಂ ತಾನ್ವಿದ್ಧ್ಯಾಸುರನಿಶ್ಚಯಾನ್ || 6 ||
ಅರ್ಥ :- ಬುದ್ಧಿಹೀನರಾಗಿ ಶರೀರದಲ್ಲಿರುವ ಎಲ್ಲಾ ಭೂತ ಸಮುದಾಯಗಳನ್ನೂ ಮತ್ತು ಶರೀರಾಂತಸ್ಥನಾದ ನನ್ನನ್ನೂ, ದುಃಖಗೊಳಿಸುವವರು ನಿಶ್ಚಯವಾಗಿಯೂ ಅಸುರರೆಂದು ತಿಳಿ.
ಅತ್ಯುತ್ಸಾಹದಿಂದ ಶಾರೀರಿಕ ಶ್ರಮವೂ, ಮಾನಸಿಕ ಆಯಾಸವೂ ಉಂಟಾಗುತ್ತದೆ. ಧರ್ಮದ ಹೆಸರಿನಲ್ಲಿ ತಪಸ್ಸನ್ನೇ ಮಾಡಿದಾಗ್ಯೂ, ಶಕ್ತಿಯನ್ನು ತಪ್ಪು ದಾರಿಯಲ್ಲಿ ವಿನಿಯೋಗಿಸಿದೆ. ಸಿದರೆ
ಆತ್ಮವಿಕಾಸವಾಗಲಾರದು, ಇಚ್ಛಿತ ಫಲವೂ ಸಿಗಲಾರದು. ಅನೇಕರು ಈ ರೀತಿಯಾಗಿ ತಮ್ಮ ಶಕ್ತಿಯನ್ನು ತಪ್ಪು ದಾರಿಯಲ್ಲಿ ಉಪಯೋಗಿಸಿದೆ, ಯೋಗಿಸಿ ಕೇವಲ ದುಃಖ ಹಾಗೂ ಕಷ್ಟಕ್ಕೀಡಾಗುತ್ತಾರೆ.
ಸದೃಢವಾದ ಶರೀರವುಳ್ಳವರು, ಆತ್ಮಸಾಧನೆಗಾಗಿ ಕೆಲವು ಕ್ಲುಪ್ತಕಾಲದವರೆಗೆ, ಶಾರೀರಿಕ ದಂಡನೆಯನ್ನು ಮಾಡಬೇಕೆಂದು ವಿಧಿಸಿರುವುದುಂಟು, ಆದರೆ ಇಷ್ಟಬಂದಂತೆ ಶಾರೀರಿಕ ದಂಡನೆಯನ್ನು ಮಾಡುವುದು, ಧಾರ್ಮಿಕ ಮಾರ್ಗ ಎನಿಸಿಕೊಳ್ಳಲಾರದು, ಮತ್ತು ಇವುಗಳ ಸಾಧನೆಯಿಂದ ಆತ್ಮವಿಕಾಸವಾಗಲಾರದು. ಶಾರೀರಿಕ ದಂಡನೆಯು ಅನುಭದಿಂದ ಶಾಸ್ತ್ರದಲ್ಲಿ ವಿಧಿಸಿದ ರೀತಿನೀತಿಗಳಿಗನುಸಾರವಾಗಿಯೇ ಇರಬೇಕು. ಕೆಲವರು ಕೇವಲ ಡಂಭಾಚಾರಕ್ಕಾಗಿ ಶಾರೀರಿಕ ದಂಡನೆಯು ನೆಯ ವ್ರತಗಳನ್ನು ಮಾಡುತ್ತಾರೆ. ಮನಸ್ಸು ಇದರ ಜೊತೆಗೆ ಕೂಡದೆ ಡದೇ ಇರುವುದರಿಂದ, ಹಾಗೂ ಈ ರೀತಿಯ ವ್ರತಗಳನ್ನು ಮಾಡುವಾಗ ಮನಸ್ಸು, ಶಾರೀರಿಕವಾಗಿ ಬಹಿಷ್ಕರಿಸಿದ ಭೋಗಗಳಲ್ಲಿ ನಿರತವಾಗುವುದರಿಂದ, ಈ ಕ್ರಮವೆಲ್ಲವೂ ವ್ಯರ್ಥವೇ ಸರಿ. ಒಂದು ವೇಳೆ ಇಂತಹ ವ್ರತ, ತಪಸ್ಸುಗಳಿಂದ ಈ ಜನರು ಕೆಲವು ವಿಶೇಷ ಶಕ್ತಿಗಳನ್ನು ಗಳಿಸಿದ್ದಾಗ್ಯೂ, ಅವರು ಅಷ್ಟರಿಂದಲೇ ತೃಪ್ತರಾಗಿ, ಈ ಶಕ್ತಿಯನ್ನು ವ್ಯವಹಾರದಲ್ಲಿ ತಮ್ಮ ಇಂದ್ರಿಯ ಸುಖ ಭೋಗಗಳ ತೃಪ್ತಿಗಾಗಿ ವಿನಿಯೋಗಿಸಿ ಪುನಃ ವೇಗವಾಗಿ ಹಿಂದಕ್ಕೆ ಸರಿಯುತ್ತಾರೆ. ಪುರಾಣಗಳಲ್ಲಿ ವರ್ಣಿಸಿದ ರಾಕ್ಷಸರು ಹಾಗೂ ಅಸುರರನ್ನು ಈ ಗುಂಪಿಗೆ ಸೇರಿಸಬಹುದು. ಸಾಧನೆಯಲ್ಲಿ ಶಾರೀರಿಕ ಕ್ರಮವನ್ನು ಶ್ರಮ, ಬುದ್ಧಿವಂತಿಕೆಯಿಂದ, ಮಿತವಾಗಿ ವಿನಿಯೋಗಿಸಬೇಕು ಅತಿ ಹಾಗೂ ಸ್ವೇಚ್ಛೆ ಕೂಡದು. ಅದು ಹಿತವಲ್ಲ.

ಆಹಾರಸ್ತ್ವಪಿ ಸರ್ವಸ್ಯ ತ್ರಿವಿಧೋ ಭವತಿ ಪ್ರಿಯಃ |
ಯಜ್ಞ್ಞಸ್ತಪಸ್ತಥಾ ದಾನಂ ತೇಷಾಂ ಭೇದಮಿಮಂ ಶೃಣು || 7 ||
ಅರ್ಥ :- ಎಲ್ಲರಿಗೂ ಅವಶ್ಯಕವಾದ ಹಾಗೂ ಪ್ರಿಯವಾದ ಆಹಾರವು ಮೂರು ವಿಧವಾಗಿದೆ. ಇದೇ ರೀತಿಯಲ್ಲಿ ಯಜ್ಞ, ತಪಸ್ಸು, ದಾನ ಇವು ಸಹ ಮೂರು ವಿಧವಾಗಿವೆ. ಅವುಗಳಲ್ಲಿಯ ಭೇದವನ್ನು ಹೇಳುತ್ತೇನೆ, ಕೇಳು.
ಮನುಷ್ಯನ ಆಂತರಿಕ ಗುಣ, ಹಾಗೂ ಬಾಹ್ಯ ಆಚರಣೆಗಳ ವಿವರವಾದ ವರ್ಣನೆಯನ್ನೂ, ಅವರ ಆಹಾರ, ಆಚಾರ, ವಿಚಾರ ಮತ್ತು ಧಾರ್ಮಿಕ ಕಾರ್ಯ, ಇವುಗಳ ಮೇಲೆ ನಿರ್ಣಯಿಸಬಹುದಾದ ಮುಖ್ಯಗುಣಗಳನ್ನೇ ಮುಂದಿನ ಶ್ಲೋಕದಲ್ಲಿ ವಿವರಿಸಲಾಗಿದೆ. ಇವೆಲ್ಲವೂ ಆಯಾಯಾ ವೃತ್ತಿಯಲ್ಲಿರುವ ಸಾತ್ವಿಕಾದಿ ಗುಣಗಳಿಗೆ ಅನುಗುಣವಾಗಿವೆ. ಈ ಗುಣಗಳನ್ನು ಇನ್ನೊಬ್ಬರ ದೋಷಗಳನ್ನು ಹುಡುಕುವುದಕ್ಕಾಗಿ ಉಪಯೋಗಿಸಲಾಗಿದೆ. ಉಪಯೋಗಿಸದೇ ಪ್ರತಿಯೊಬ್ಬನೂ ತನ್ನ ದೌರ್ಬಲ್ಯವನ್ನೂ, ದೋಷವನ್ನೂ ತಿಳಿದುಕೊಂಡು, ಅವುಗಳನ್ನು ತಿದ್ದಿಕೊಳ್ಳುವುದಕ್ಕೆ ಉಪಯೋಗಿಸಿಕೊಳ್ಳ ಬೇಕೆಂದು ಇನ್ನೊಮ್ಮೆ ಜ್ಞಾಪಕಮಾಡಿಕೊಳ್ಳಬೇಕು.
ಸಾತ್ವಿಕವಾದ ಆಹಾರ
ಆಯುಃಸತ್ತ್ವಬಲಾರೋಗ್ಯಸುಖಪ್ರೀತಿವಿವರ್ಧನಾಃ |
ರಸ್ಯಾಃ ಸ್ನಿಗ್ಧಾಃ ಸ್ಥಿರಾಃ ಹೃದ್ಯಾಃ ಆಹಾರಾಃ ಸಾತ್ತ್ವಿಕಪ್ರಿಯಾಃ || 8 ||
ಅರ್ಥ :- ಆಯಸ್ಸನ್ನು ಹೆಚ್ಚಿಸುವ; ಮನಸ್ಸು ಹಾಗೂ ಶರೀರದ ಆರೋಗ್ಯಕ್ಕೆ ಪೋಷಕವಾದ; ಸುಖವನ್ನೂ, ಸಂತೋಷವನ್ನೂ ಹೆಚ್ಚಿಸುವ; ರಸವತ್ತಾದ, ಸ್ನಿಗ್ಧವಾದ, ಸ್ಥಿರವಾದ; ಹೃದಯಕ್ಕೆ ಆಪ್ಯಾಯಮಾನವಾದ ಆಹಾರವು ಸಾತ್ವಿಕ ಆಹಾರ ಎನಿಸಿಕೊಳ್ಳುತ್ತದೆ.
ಸಾತ್ವಿಕ ಗುಣಗಳಿರುವ ಜನರು ಯಾವ ತರಹದ ಆಹಾರವು ‘ಸತ್ವ’ಯುತ ವಾಗಿರುತ್ತದೆ. ಯಾವ ತರಹದ ಆಹಾರವನ್ನು ಸೇವಿಸುತ್ತಾರೆಂಬುದನ್ನು ವರ್ಣಿಸಲಾಗಿದೆ. ಇವರು ತೆಗೆದುಕೊಳ್ಳುವ ಆಹಾರವು ‘ಸತ್ತ್ವಯುತ’ವಾಗಿರುತ್ತದೆ. ಅಂದರೆ ಅದು ‘ಜೀವನೀಯ’ ಶಕ್ತಿಯನ್ನು ಹೆಚ್ಚಿಸುವಂತಹುದಾಗಿರುತ್ತದೆ; ಧ್ಯಾನ, ತಪಸ್ಸುಗಳಿಗೆ ಅವಶ್ಯಕವಾದಷ್ಟು ವೀರ್ಯವನ್ನು ಬಲವರ್ಧಕ-ಎಂದರೆ ಶಾರೀರ ಬಲಕ್ಕಿಂತ, ಇಂದ್ರಿಯಗಳನ್ನು ನಿಗ್ರಹಿಸುವಂತಹ ಮಾನಸಿಕ ಬಲವನ್ನು ಹೆಚ್ಚಿಸತಕ್ಕದಾಗಿದೆ. ಸಾಧನೆಯನ್ನು ಮಾಡುವಾಗ ಶರೀರದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅವಶ್ಯಕವಾದುದುರಿಂದ, ತನ್ನ ಆರೋಗ್ಯಕ್ಕೆ ಹಿತಕರವಾದ ಆಹಾರವನ್ನು ಮಾತ್ರ ಇವನು ಸೇವಿಸುತ್ತಾನೆ.
ನಾವು ತಿನ್ನುವ ಆಹಾರಕ್ಕನುಸಾರವಾಗಿ, ನಮ್ಮ ಮನಸ್ಸಿನ ಗುಣಗಳುಂಟಾಗುತ್ತವೆ. ಅದೇ ರೀತಿ ಮನಸ್ಸಿನ ಗುಣಕ್ಕನುಸಾವಾಗಿ ಕೆಲವು ವಿಶಿಷ್ಟ ತರಹದ ಆಹಾರಗಳಲ್ಲಿ ರುಚಿ ಹಾಗೂ ಅಪೇಕ್ಷೆಯುಂಟಾಗುತ್ತದೆ. ಜೊತೆಗೆ ನಾವು ಆಹಾರದಲ್ಲಿ ಮಾಡಿಕೊಳ್ಳುವ ಅಭ್ಯಾಸದ ಪರಿಣಾಮವಾಗಿ ಕೆಲವು ವಿಶಿಷ್ಟ ಆಹಾರದಲ್ಲಿ ರುಚಿಯುಂಟಾಗುತ್ತದೆ. ಮಾನಸಿಕವಾಗಿ ಮೇಲ್ಮಟ್ಟಕ್ಕೇರುವ ಅಪೇಕ್ಷೆಯುಳ್ಳವರು ತಮ್ಮ ಅಭ್ಯಾಸ, ಮನಸ್ಸಿನ ಒಲವು, ಇವೆಲ್ಲವನ್ನೂ ತಡೆ ಹಿಡಿದು ಸಾತ್ವಿಕ ಆಹಾರವನ್ನು ಅಭ್ಯಾಸಮಾಡಿಕೊಳ್ಳಬೇಕು.

ಕಟ್‍ವಮ್ಲಲವಣಾತ್ಯುಷ್ಣತೀಕ್ಷ್ಣರೂಪಕ್ಷವಿದಾಹಿನಃ
ಆಹಾರಾಃ ರಾಜಸಸ್ಯೇಷ್ಟಾ ದುಃಖಶೋಕಾಮಯಪ್ರದಾಃ || 9 ||
ಅರ್ಥ:- ಕಾರ, ಹುಳಿ, ಉಪ್ಪು ರಸಗಳುಳ್ಳ ಆಹಾರ, ಉಷ್ಣವೀರ್ಯವುಳ್ಳ ಆಹಾರ, ತೀಕ್ಷ್ಣವಾಗಿರುವ, ರೂಕ್ಷವಾಗಿರುವ (ಜಿಡ್ಡಿಲ್ಲದಿರುವ), ಹುಳಿ ತೇಗನ್ನುಂಟು ಮಾಡುವ ಆಹಾರ, ಇವು ರಾಜಸಗುಣದವರಿಗೆ ಪ್ರಿಯವಾಗಿರುತ್ತವೆ. ಇವು ದುಃಖ, ವ್ಯಥೆ, ಮತ್ತು ರೋಗಗಳನ್ನುಂಟುಮಾಡುತ್ತವೆ.
ಆಸೆಗಳಿಂದ ಕೂಡಿ, ಅದರ ಪೂರ್ತಿಗಾಗಿ ವಿವಿಧ ಕರ್ಮಗಳಲ್ಲಿ ನಿರತರಾಗಿರುವವರು, ಹುಳಿ, ಉಪ್ಪು, ಕಾರ ಹೆಚ್ಚಾಗಿರುವ, ರುಚಿಕಟ್ಟಾದ, ಮತ್ತು ಮಸಾಲೆ ಹೆಚ್ಚಾಗಿರುವ ಆಹಾರವನ್ನು ಪ್ರೀತಿಸುತ್ತಾರೆ. ಈ ಆಹಾರವು ಕೆಲಸ ಮಾಡಲು ಸ್ಫೂರ್ತಿಯನ್ನು ಕೊಡುತ್ತೇನೋ ನಿಜ. ಆದರೆ ಪರಿಣಾಮದಲ್ಲಿ ಆ ವ್ಯಕ್ತಿಯನ್ನು ನಾಲಿಗೆಯ ದಾಸನನ್ನಾಗಿ ಮಾಡುತ್ತದೆ, ಮತ್ತು ಇದರ ಪರಿಣಾಮವು ದುಃಖಕರ. ಸಾಧಕನು ಮಾನಸಿಕ ವಿಕಾಸದ ದೃಷ್ಟಿಯಿಂದ ಮೇಲ್ಮಟ್ಟಕ್ಕೇರಿದಂತೆ, ಅಂದರೆ ಸಾತ್ವಿಕ ಗುಣವನ್ನು ಸಂಪಾದಿಸಿದ ಹಾಗೆ, ರಾಜಸಿಕ ಆಹಾರದಲ್ಲಿ ಅಭಿರುಚಿಯು ತಾನಾಗಿಯೇ ಕ್ರಮೇಣ ಕಡಿಮೆಯಾಗಿ, ಸಾತ್ವಿಕ ಆಹಾರದಲ್ಲಿ ಇಚ್ಛೆಯು ಹೆಚ್ಚಾಗುತ್ತದೆ.

ಯಾತಯಾಮಂ ಗತರಸಂ ಪೂತಿ ಪರ್ಯುಷಿತಂ ಚ ಯತ್ |
ಉಚ್ಛಿಷ್ಟಮಪಿ ಚಾಮೇಧ್ಯಂ ಭೋಜನಂ ತಾಮಸಪ್ರಿಯಮ್ || 10 ||
ಅರ್ಥ :- ತಯಾರು ಮಾಡಿ ಮೂರು ತಾಸು (ಯಾಮ) ಗತಿಸಿರುವುದು, ಒಣಗಿ ಹೋಗಿರುವುದು, ರುಚಿಯಿಲ್ಲದುದು, ಕೊಳೆತಿರುವುದು, ಹಿಂದಿನ ರಾತ್ರಿ ತಯಾರಿಸಲ್ಪಟ್ಟದ್ದು, ಇನ್ನೊಬ್ಬರ ಎಂಜಲಾದುದು, ಹೊಲಸಾದುದು (ಅಪವಿತ್ರ) ಇಂತಹ ಆಹಾರವು ತಾಮಸ ಗುಣದವರಿಗೆ ಪ್ರಿಯವಾಗಿರುತ್ತದೆ.
ತಯಾರು ಮಾಡಿ ಒಂದು ಯಾಮ ಕಳೆದರೆ ಆಹಾರವು ತಣ್ಣಗಾಗಿ ಅದರ ಗುಣವು ಬದಲಾಯಿಸುತ್ತದೆ. ಮತ್ತು ಅದರಲ್ಲಿ ತಾಮಸ ಗುಣವು ಹೆಚ್ಚಾಗುತ್ತದೆ. ಈಗಿನ ನಾಗರಿಕರ ಮನದಲ್ಲಿ ತಯಾರುಮಾಡಿ ಡಬ್ಬಿಯಲ್ಲಿ ಬಂದು ಮಾಡಲ್ಪಟ್ಟ ಆಹಾರ, ಕಾದಿಟ್ಟ ಹಣ್ಣುಗಳು, ಬೇಕೆಂತಲೇ ರೆಫ್ರಿಜರೇಟರ್‍ನಲ್ಲಿ ಕಾದಿಟ್ಟು ಕಾಲಾಂತರದಲ್ಲಿ ಬಳಸುವ ಮೊದಲಿನ ದಿನ ಉಳಿದ ಅನ್ನ, ಪಲ್ಯ, ಹುಳಿ ಮೊದಲಾದ ಸಿದ್ಧ ಅಡಿಗೆ; ಹಾಲು, ಹಣ್ಣು ತರಕಾರಿಗಳು, ಮಾಂಸ, ಇವೆಲ್ಲವೂ ಈ ಗುಂಪಿನಲ್ಲೇ ಸೇರುತ್ತವೆ. ಆಹಾರವನ್ನು ಬೇಯಿಸುವಾಗ ಬಹಳ ಒಣಗಿಸಿದರೆ, ಹೊತ್ತಿಸಿದರೆ, ಅದರ ರಸವು ಬತ್ತಿಹೋಗುತ್ತದೆ. ಮಲಬಾರ ದೇಶದಲ್ಲಿ ರಾತ್ರಿ ಅನ್ನವನ್ನು ನೀರಿನಲ್ಲಿ ಹಾಕಿಟ್ಟು, ಬೆಳಿಗ್ಗೆ ಆ ನೀರನ್ನು ಚೆಲ್ಲಿ ಅನ್ನವನ್ನು ಊಟ ಮಾಡುವ ಪದ್ಧತಿ ಇದೆ. ಇವೆರಡೂ ‘ಗತರಸ’ಕ್ಕೆ ಉದಾಹರಣೆಗಳು. ನೀರಿನಲ್ಲಿಟ್ಟ ಅನ್ನವು ‘ಗತರಸ’ದ ಜೊತೆಗೆ ‘ಪರ್ಯುಷಿತವೂ’ (ರಾತ್ರಿ ಕಳೆದುದು) ಆಗುತ್ತದೆ. ಪೂತಿ- ದುರ್ಗಂಧವಿರುವ ಅಥವಾ ಕೊಳೆತಿರುವ ಆಹಾರ, ಈಗಿನ ದಿನಗಳಲ್ಲಿ ಪ್ರಚಾರಕ್ಕೆ ಬಂದ ಪುಲಾವ್, ಮತ್ತು ಬೆಳ್ಳುಳ್ಳಿ ಹಾಕಿದ ಆಹಾರಗಳು ಈ ಗುಂಪಿಗೆ ಸೇರುತ್ತವೆ. ಪರ್ಯುಷಿತ- ಅಂದರೆ ಆಹಾರವನ್ನು ತಯಾರಿಸಿ ಒಂದು ರಾತ್ರಿ ಇಟ್ಟು ಮಾರನೆಯ ದಿನ ತಿನ್ನುವುದು. ಇದೇ ರೀತಿ ಆಹಾರವನ್ನು ತಯಾರಿಸುವಾಗ ಚೊಕ್ಕಟತನವಿಲ್ಲದಿರುವುದು; ಹೊಲಸಾಗಿರುವ, ಕೆಟ್ಟಿರುವ, ಕೊಳೆತಿರುವ ಪದಾರ್ಥಗಳಿಂದ ತಯಾರಿಸಿದ ಆಹಾರ, ಇನ್ನೊಬ್ಬರ ಎಂಜಲಾದ ಆಹಾರ ಇವೆಲ್ಲವೂ ತಾಮಸಗುಣಗಳಿಗೆ ಪ್ರಿಯವಾಗಿವೆ.

ಅಫಲಾಕಾಂಕ್ಷಿಭಿರ್ಯಜ್ಞೋ ವಿಧಿದೃಷ್ಟೋ ಯ ಇಜ್ಯತೇ |
ಯಷ್ಟವ್ಯಮೇವೇತಿ ಮನಃ ಸಮಾಧಾಯ ಸ ಸಾತ್ತಿಕಃ || 11||
ಅರ್ಥ :- ಫಲದ ಆಸೆಯನ್ನಿಟ್ಟುಕೊಳ್ಳದೆ, ಶಾಸ್ತ್ರದಲ್ಲಿ ವಿಧಿಸಿರುವ ಯಜ್ಞಗಳನ್ನು ತಾನು ಮಾಡಬೇಕಾದುದು ತನ್ನ ಕರ್ತವ್ಯ ಎಂದು ತಿಳಿದು ಆಚರಿಸುವುದು ‘ಸಾತ್ವಿಕ ಯಜ್ಞ’ ಎನಿಸಿಕೊಳ್ಳುತ್ತದೆ.
ಫಲಾಸೆಯನ್ನು ತ್ಯಜಿಸಿ, ಕರ್ತವ್ಯ ದೃಷ್ಟಿಯಿಂದ ಕರ್ಮಮಾಡಬೇಕೆಂದು ಗೀತೆಯು ಉಪದೇಶಿಸುತ್ತದೆ. ಸಾತ್ವಿಕ ಗುಣವುಳ್ಳವರಿಗೆ ಈ ಶಕ್ತಿ ಇದೆ. ಈ ಹಿಂದೆ ವಿವರಿಸಿದಂತೆ, ಕರ್ಮ ಮಾಡುವಾಗ ಫಲಾಸೆಯಿದ್ದರೆ, ಮನಸ್ಸು ಫಲಾಸೆಯಲ್ಲಿಯೇ ನಿರತವಾಗಿರುವುದರಿಂದ, ಕರ್ಮ ಮಾಡುವುದರಲ್ಲಿ ದಕ್ಷತೆಯು ಕಡಿಮೆಯಾಗುತ್ತದೆ. ಶಕ್ತಿಯ ಅಪವ್ಯಯವಾಗುತ್ತದೆ. ಇನ್ನೂ ಹುಟ್ಟದೇ ಇರುವ ಫಲದ ಕಲ್ಪನೆಯಲ್ಲಿ ಮಗ್ನವಾಗಿರುವುದು ಮೂರ್ಖತನವೇ ಸರಿ.
ಶಾಸ್ತ್ರದಲ್ಲಿ ವಿಧಿಸಿರುವ ಕರ್ಮಗಳನ್ನು ಕಾಮ್ಯ, ನಿಷಿದ್ಧ, ನಿತ್ಯ, ನೈಮಿತ್ತಿಕ, ಕರ್ಮಗಳೆಂದು ನಾಲ್ಕು ವಿಧವಾಗಿ ವಿಂಗಡಿಸಬಹುದು. ನಿಷಿದ್ಧ ಕರ್ಮಗಳನ್ನು ಮಾಡಕೂಡದು. ಕೆಲವು ಸಾಧಕರಿಗೆ, ಸಾಧನೆಯ ಪ್ರಾರಂಭದಲ್ಲಿ ಇಟ್ಟು ಕಾಮ್ಯ ಕರ್ಮಗಳನ್ನು ಮಾಡಲು ಹೇಳಿದಾಗ್ಯೂ ಕ್ರಮೇಣ ಅವರು ಸಹ ಫಲಾಸೆಯನ್ನು ಬಿಟ್ಟು ಕರ್ಮ ಮಾಡುವುದನ್ನು ಕಲಿಯಬೇಕು. ನಿತ್ಯಕರ್ಮ ಎಂದರೆ ಪ್ರತಿಯೊಬ್ಬನೂ ತನ್ನ ನಿತ್ಯ ಜೀವನದಲ್ಲಿ ಆಚರಿಸಲೇ ಬೇಕಾದ ಕರ್ಮಗಳು. ಇವುಗಳನ್ನು ಬಿಡುವಂತಿಲ್ಲ. ಕೆಲವು ವಿಶೀಷ್ಟ ಸಂದರ್ಭಗಳಲ್ಲಿ ಮಾತ್ರ ಆಚರಿಸಬೇಕಾದ ವಿಶೇಷ ಕರ್ಮಗಳಿಗೆ ನೈಮಿತ್ತಿಕ ಕರ್ಮ ಎಂದು ಹೆಸರು. ಆ ವಿಶೇಷ ಅವಶ್ಯಕತೆಯು ಪೂರೈಸಿದ ಮೇಲೆ ಈ ಕರ್ಮಗಳನ್ನು ಮಾಡಬೇಕಾಗಿಲ್ಲ. ಇವೆಲ್ಲವೂ ಶಾಸ್ತ್ರವಿಹಿತ ಕರ್ಮಗಳು. ಈ ಕರ್ಮಗಳನ್ನು ಮಾಡುವುದು ಕರ್ತವ್ಯ ಎಂಬ ಭಾವನೆಯಿಂದ ಮಾಡಬೇಕು. ಅವುಗಳ ಫಲದ ಕಡೆಗೆ ಲಕ್ಷ್ಯೆಕೊಡಬಾರದು.

ಅಭಿಸಂಧಾಯ ತು ಫಲಂ ದಂಭಾರ್ಥಮಪಿ ಚೈವ ಯತ್ |
ಇಜ್ಯತೇ ಭರತಶ್ರೇಷ್ಠ ತಂ ಯಜ್ಞಂ ವಿದ್ಧಿ ರಾಜಸಮ್ || 12 ||
ಅರ್ಥ :- ಭರತ ಶ್ರೇಷ್ಠನೇ, ನಿರ್ದಿಷ್ಟ ಫಲವನ್ನು ಗಳಿಸಬೇಕೆಂಬ ಆಸೆಯಿಂದ ಇಲ್ಲವೇ, ಡಂಭದಿಂದ (ಆಡಂಬರದಿಂದ) ಮಾಡುವ ಯಜ್ಞವು ರಾಜಸಯಜ್ಞ ಎಂದು ತಿಳಿ.
ಫಲಾಪೇಕ್ಷೆಯಿಂದ ಕೆಲಸ ಮಾಡುವವರು ಮನಸ್ಸಿನೊಳಗೆ ಬಹಳ ಕಾತರದಿಂದಿರುತ್ತಾರೆ. ಅವರ ಮನಸ್ಸಿಗೆ ನೆಮ್ಮದಿಯಿರುವುದಿಲ್ಲ. ಮುಂದೇನಾಗುತ್ತದೆಯೋ ಎಂಬ ಭೀತಿಯು ಕಾಡಿಸುತ್ತಿರುತ್ತದೆ. ಕರ್ಮವನ್ನು ಮಾಡುತ್ತಿದ್ದಾಗ್ಯೂ ಮನಸ್ಸು ಅದರಲ್ಲಿರದೆ ಭಯ, ಕಾತರಗಳಿಂದ ಕೂಡಿರುತ್ತದೆ. ಇಲ್ಲವೆ ಮುಂದೆ ಸಿಗಬಹುದಾದ ಫಲಭೋಗದ ಕಲ್ಪನೆಗಳಲ್ಲಿ ಮಗ್ನವಾಗಿರುತ್ತದೆ. ಡಂಭದಿಂದ ಯಜ್ಞ ಮಾಡುವವರಿಗೆ, ಅದರಿಂದ ಫಲವನ್ನು ಗಳಿಸಬೇಕೆಂದಿರುವುದಿಲ್ಲ. ಈ ಯಜ್ಞವನ್ನು ಮಾಡಿದುದರಿಂದ ತಾನು ದೊಡ್ಡ ಮನುಷ್ಯರ ಪಂಙÂ್ತಯಲ್ಲಿ ಸೇರಿದಂತಾಯಿತೆಂದೂ, ಎಲ್ಲಾ ಜನರೂ ತನ್ನನ್ನು ಗೌರವಿಸಿ ಹೊಗಳಲೆಂದೂ ಆಸೆ ಇರುತ್ತದೆ. ಜೊತೆಗೆ, ಇಂತಹ ಧಾರ್ಮಿಕ ಕಾರ್ಯಗಳಿಂದ, ತನ್ನಲ್ಲಿರುವ ಲೋಪ, ದೋಷಗಳನ್ನು ಮುಚ್ಚಿಕೊಂಡು ತಾನು ಸಜ್ಜನನೆಂದು ಕರೆಯಿಸಿಕೊಳ್ಳ ಬೇಕೆಂದಿರುತ್ತದೆ. ಇಂತಹ ಯಜ್ಞದಿಂದ ಯಾವ ಫಲವೂ ಇಲ್ಲ.

ವಿಧಿಹೀನ ಮಸೃಷ್ಟಾನ್ನಂ ಮಂತ್ರಹೀನ ಮದಕ್ಷಿಣಮ್ |
ಶ್ರದ್ಧಾವಿರಹಿತಂಯಜ್ಞಂ ತಾಮಸಂಪರಿಚಕ್ಷತೆ || 13 ||
ಅರ್ಥ :- ಶಾಸ್ತ್ರದಲ್ಲಿ ಹೇಳಲ್ಪಟ್ಟ ನಿಯಮಗಳನ್ನು ತ್ಯಜಿಸಿ ಮಾಡುವ, ಅನ್ನದಾನವನ್ನು ಮಾಡದೆ ಇರುವ, ಮಂತ್ರೋಚ್ಛಾರಣೆಯಿಲ್ಲದೆ ಮಾಡುವ, ದಕ್ಷಿಣೆಯನ್ನು ಕೊಡದೆ, ಶ್ರದ್ಧೆಯಿಲ್ಲದೆ ಮಾಡುವ ಯಜ್ಞವು ತಾಮಸಿಕ ಯಜ್ಞ ಎನಿಸಿಕೊಳ್ಳುತ್ತದೆ.
ಈ ತರಹದ ಕರ್ಮಗಳಿಂದ ಇಚ್ಛಿತ ಫಲವೂ ಸಿಗುವುದಿಲ್ಲ, ವ್ಯಕ್ತಿಗಾಗಲೀ, ಸಮಾಜಕ್ಕಾಗಲೀ ಲಾಭವೂ ಇಲ. ಅಸೃಷ್ಟಾನಂ- ಈಗಿನ ನಾಗರೀಕತೆಯ ಧ್ಯೇಯವು ಸಮಾಜದಲ್ಲಿರುವ, ದೇಶದಲ್ಲಿರುವ, ಪ್ರತಿಯೊಬ್ಬರಿಗೂ ಹಾರ, ಆಹಾರ ವಸತಿ ಮತ್ತು ಬಟ್ಟೆಯನ್ನು ಒದಗಿಸಬೇಕೆಂದಿದೆ. ಯಜ್ಞ ಮಾಡುವಾಗ ಸಹ ಅನ್ನ, ವಸ್ತ್ರ, ಮತ್ತು ಭೂಮಿಗಳನ್ನು ವಿಪುಲವಾಗಿ ದಾನ ಮಾಡಬೇಕೆಂದಿದೆ. ಇದರಿಂದ ತನ್ನ ಸುತ್ತುಮುತ್ತಲಿರುವರೊಡನೆ, ತನ್ನಲ್ಲಿರುವ ಸಂಪತ್ತನ್ನು ಹಂಚಿಕೊಂಡಂತಾಗಿದೆ. ಅದರಿಂದ ಅವರಿಗೆ ಸುಖ ಸಿಗುವುದರ ಜೊತೆಗೆ ಕರ್ತನಿಗೆ ಸಂಗ್ರಹ ಮಾಡುವ ಲೋಭವು ತಪ್ಪುತ್ತದೆ. ಇದು ಮೇಲ್ತರದ ಸಾಧನೆಗೆ ಸಹಕಾರಿ.

ದೇವದ್ವಿಜಗುರು ಪ್ರಾಜ್ಞ ಪೂಜನಂಶೌಚಮಾರ್ಜವಮ್ |
ಬ್ರಹ್ಮಚರ್ಯಮಹಿಂಸಾಚ ಶಾರೀರಂ ತಪ ಉಚ್ಯತೆ ಉಚ್ಯತೇ || 14 ||
ಅರ್ಥ :- ದೇವತೆಗಳು, ಬ್ರಾಹ್ಮಣರು, ಗುರುಗಳು, ಬುದ್ಧಿವಂತರು ಇವರ ಅರ್ಚನೆಯನ್ನು ಮಾಡುವುದು, ಚೊಕ್ಕಟವಾಗಿರುವುದು, ಸರಳವಿರುವುದು, ಬ್ರಹ್ಮಚರ್ಯೆಯನ್ನೂ, ಅಹಿಂಸೆಯನ್ನೂ ಪಾಲಿಸುವುದು, ಇವು ಶರೀರದ ತಪಸ್ಸುಗಳು.
ದ್ವಿಜ ಎಂದರೆ ಬ್ರಾಹ್ಮಣ, ಎರಡು ಸಾರಿ ಹುಟ್ಟಿದವನು ಎಂದರ್ಥ. ತಾಯಿಯ ಗರ್ಭದಿಂದ ಹುಟ್ಟಿ ಬಂದ ಮೇಲೆ, ಬ್ರಹ್ಮಚರ್ಯೆಯ ನಿಯಮಗಳನ್ನು ಪಾಲಿಸಿ, ಆಧ್ಯಾತ್ಮಿಕ ಸಾಧನೆಯನ್ನು ಮಾಡುತ್ತಾ, ಆತ್ಮಜ್ಞಾನವನ್ನು ಪಡೆಯುವುದು, ಈ ಸ್ಥಿತಿಗೆ ವೇದಾಂತ ಭಾಷೆಯಲ್ಲಿ ಎರಡನೆಯ ಜನ್ಮ ಎಂದು ಹೆಸರು. ಅಹಂಕಾರ ಎಂಬ ಅಜ್ಞಾನದ ಆವರಣದಿಂದ ಕಳಚಿ ಹೊರಗೆ ಬಂದು, ತಾನೇ ಪರಮಾತ್ಮ ಎಂಬ ಜ್ಞಾನವನ್ನು ಪಡೆದಿರುವಾಗ ಎರಡನೆಯ ಸರಿ ಹುಟ್ಟಿದಂತಾಯಿತು ಎಂದರ್ಥ. ಬ್ರಹ್ಮಚರ್ಯೆ ಎಂದರೆ ಸದಾಕಾಲವೂ ಬ್ರಹ್ಮಜ್ಞಾನದಲ್ಲಿ ನಿರತನಾಗಿರುವುದು. ತಾನು ಮಾಡುವ ಎಲ್ಲಾ ಕಾರ್ಯಗಳಲ್ಲಿಯೂ ಬ್ರಹ್ಮನನ್ನು ಕಾಣುವುದು. ಇಂದ್ರಿಯಗಳನ್ನು ನಿಗ್ರಹಿಸಿ, ಮನಸ್ಸನ್ನು ಏಕಾಗ್ರಮಾಡಿ, ಧ್ಯಾನ ಮಾಡದ ಹೊರತು ಇದು ಸಾಧ್ಯವಿಲ್ಲ. ಈ ಎಲ್ಲಾ ನಿಯಮಗಳೂ ಸೇರಿ ಬ್ರಹ್ಮಚರ್ಯ ಎನಿಸಿಕೊಳ್ಳುತ್ತದೆ.

ಅನುದ್ವೇಗಕರಂ ವಾಕ್ಯಂ ಸತ್ಯಂಪ್ರಿಯ ಹಿತಂಚಯತ್ |
ಸ್ವಾಧ್ಯಾಯಾಭ್ಯಸನಂ ಚೈವ ವಾಙ್ಮಆಯಂತಪ ಉಚ್ಯತೆ || 15 ||
ಅರ್ಥ :- ಮನಸ್ಸಿಗೆ ಉದ್ರೇಕವನ್ನುಂಟು ಮಾಡದಿರುವಂತಹ ಮಾತುಗಳನ್ನಾಡುವುದು, ಸತ್ಯವನ್ನು ನುಡಿಯುವುದು, ಪ್ರಿಯವಾದ ಹಾಗೂ ಹಿತವಾದ ಮಾತುಗಳನ್ನಾಡುವುದು, ವೇದಾಭ್ಯಾಸ ಮಾಡುವುದು, ಇವು ವಾಗಿಂದ್ರಿಯದ ಮೂಲಕ ಮಾಡುವ ತಪಸ್ಸುಗಳು.
ಮಾತು ಮನುಷ್ಯನಲ್ಲಿರುವ ಒಂದು ಬಲವಾದ ಸಾಧನ. ಮಾತಿನ ಮೂಲಕ ಆ ವ್ಯಕ್ತಿಯ ಇಂದ್ರಿಯ ನಿಗ್ರಹ, ಹಾಗೂ ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಉನ್ನತಿಯ ಅಂತಸ್ತು ಎಷ್ಟಿದೆ ಎಂಬುದು ವ್ಯಕ್ತವಾಗುತ್ತದೆ. ಈ ಎಲ್ಲಾ ದೃಷ್ಟಿಯಿಂದಲೂ ಮೇಲ್ಮಟ್ಟಕ್ಕೇರಿದವನ ಮಾತುಗಳು ಅಷ್ಟೇ ಪ್ರಭಾವ ಶಾಲಿಯಾಗಿರುತ್ತವೆ. ಅತಿಯಾಗಿ ಮಾತನಾಡುವುದರಿಂದ ಆಂತರಿಕ ಶಕ್ತಿಯ ಅಪವ್ಯಯವಾಗುತ್ತದೆ. ಸಾಧಕನು ಈ ಆಂತರಿಕ ಶಕ್ತಿಯ ವ್ಯಯವನ್ನು ಮಿತಗೊಳಿಸಿ, ಸಂಗ್ರಹೀತವಾದ ಶಕ್ತಿಯನ್ನು ಇನ್ನೂ ಮೇಲ್ಮಟ್ಟದ ಸಾಧನೆಗೆ ವಿನಿಯೋಗಿಸಬೇಕು ಅಂತೆಯೇ ಮಿತವಾದ, ಹಿತವಾದ ಮಾತು ಹಾಗೂ ಮೌನ ಇವು ಸಾಧಕನಿಗೆ ಶ್ರೇಯಸ್ಕರವಾಗಿವೆ. ಅತಿಯಾದ ಮೌನವೂ ಸಹ ಹಿತವಲ್ಲ. ಇದರಲ್ಲಿಯೂ ಮಿತಿ ಇರಬೇಕು. ಆದುದರಿಂದ ಮಾತನಾಡುವಾಗ ಅನುಸರಿಸ ಬೇಕಾದ ಹಿನ್ನೆಲೆಯನ್ನು ಇಲ್ಲಿ ವಿವರಿಸಲಾಗಿದೆ.
ಅನುದ್ವೇಗರಂವಾಕ್ಯಂ- ನಾವು ಮಾತನಾಡಿದ ಶಬ್ದಗಳಿಂದ ಬೇರೆಯವರ ಮನಸ್ಸು ನೋಯಬಾರದು, ಅವರ ಮನಸ್ಸಿಗೆ ಆಘಾತವಾಗಬಾರದು, ಅಂತಹ ರೀತಿಯಲ್ಲಿ ಆರಿಸಿದ ಮಿತವಾದ ಶಬ್ದಗಳನ್ನು ಉಪಯೋಗಿಸಬೇಕು. ಎದುರಾಳಿಯ ಮೇಲೆ ತಮ್ಮ ಮಾತಿನಿಂದಾದ ಪರಿಣಾಮವು ಕೂಡಲೇ ಅವರ ಮುಖದ ಮೇಲೆ ವ್ಯಕ್ತಪಡಿಸುತ್ತದೆ. ಇದನ್ನು ಮಾತನಾಡುವಾಗ ಗುರುತಿಸಬೇಕು. ಕಣ್ಣು ಮುಚ್ಚಿಕೊಂಡು ಆವೇಶದಿಂದ ಮಾತನಾಡಬಾರದು. ತನ್ನ ಮಾತಿನಿಂದ ಎದುರಾಳಿಯು ಉದ್ವೇಗಗೊಂಡಿರುವನು ಅಥವಾ ನೊಂದಿರುವನು ಎಂದು ತಿಳಿದ ಕೂಡಲೇ, ಸೂಕ್ತವಾದ ಇತರೆ ಮಾತುಗಳಿಂದ ಅವನನ್ನು ಸಮಾಧಾನಪಡಿಸಲು ಹಿಂಜರಿಯಬಾರದು. ಹೀಗೆ ಮಾಡಿದರೆ ಎದುರಾಳಿಯನ್ನು ಗೆದ್ದುಕೊಂಡಂತಾಗುವುದಲ್ಲದೆ, ತನ್ನಿಂದ ಮುಂದೆ ಅಂತಹ ಮಾತುಗಳು ಹೊರಡದಂತೆ ಕ್ರಮೇಣ ತನ್ನ ಮಾತನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತೆ. ನಿಷ್ಠುರವಾದ, ಕಟುವಾದ, ಹೀನವಾದ ಮಾತುಗಳನ್ನಾಡಬಾರದು.
ಸತ್ಯಂಪ್ರಿಯಹಿತಂ- ಸತ್ಯವಾದುದನ್ನೇ ನುಡಿಯಬೇಕು, ಪ್ರಿಯವಾದುದ್ನೇ ನುಡಿಯಬೇಕು, ಹಿತವಾದುದನ್ನು ನುಡಿಯಬೇಕು. ಇಲ್ಲಿ ಪ್ರಿಯ, ಹಿತ ಎಂದರೆ ತನಗಲ್ಲ ಎದುರಾಳಿಗೆ, ಯಾರೊಡನೆ ಮಾತನಾಡಲಾಗುವುದೋ ಅವನಿಗೆ ಪ್ರಿಯ ಮತ್ತು ಹಿತವಾದ ಮಾತುಗಳು. ಇಂತಹ ಮಾತುಗಳು ಎದುರಾಳಿಗೆ ಆಪ್ಯಾಯಮಾನವಾಗುವಂತೆ, ಮಾತನಾಡುವವನಿಗೂ ಹಿತಕರ. ಸತ್ಯವನ್ನೇ ಹೇಳಬೇಕೆಂದು ವಿಧಿಸಲಾಗಿದೆ ನಿಜ. ಆದರೆ ಅನೇಕ ಸಾರಿ ಸತ್ಯವನ್ನು ನುಡಿಯುವುದರಿಂದ ಇಷ್ಟ ಮಿತ್ರರಿಗೆ ಹಾನಿಯಾಗುತ್ತದೆ, ತಾನೂ ಸಹ ಬೇಡಾದವನಾಗುತ್ತಾನೆ. ಆದುದರಿಂದ ಸತ್ಯವನ್ನು ನುಡಿಯುವಾಗ, ಪ್ರಿಯವಾದ ಮತ್ತು ಹಿತವಾದ ಸತ್ಯವನ್ನಷ್ಟೇ ನುಡಿಯಬೇಕು. ಪ್ರಿಯವಿಲ್ಲದ, ಅಹಿತವಾದ ಸತ್ಯವನ್ನು ನುಡಿಯದೆ ಗೌಪ್ಯವಾಗಿಟ್ಟು ಕೊಳ್ಳಬೇಕು. ಅಂತಹ ಸಂದರ್ಭಗಳ್ಲಿ ಮೌನವಾಗಿರುವುದು ವಿಹಿತ.
ಸ್ವಾದ್ಯಾಯಾಭ್ಯಸನಂ- ಸ್ವಾಧ್ಯಾಯಾಭ್ಯಸನಂ ಮೌನವಾಗಿರಬೇಕೆಂದು ಹೇಳಿ, ಅದರಿಂದ ಗಳಿಸಿದ ಶಕ್ತಿಯನ್ನು ವೇದಾಭ್ಯಾಸ ಮಾಡುವುದಕ್ಕೆ ವಿನಿಯೋಗಿಸಬೇಕೆಂದು ಹೇಳಲಾಗಿದೆ. ಇದರಿಂದ ವಿಶೇಷ ಜ್ಞಾನವನ್ನು ಪಡೆದು, ಮನಃಶಾಂತಿಯನ್ನು ಗಳಿಸಿ, ಆತ್ಮವಿಕಾಸವನ್ನು ಸಾಧಿಸಿಕೊಳ್ಳಬಹುದು.

ಮನಃ ಪ್ರಸಾದಃ ಸೌಮ್ಯತ್ವಂ ಮೌನಮಾತ್ಮವಿನಿಗ್ರಹಃ |
ಭಾವಸಂಶುದ್ಧಿರಿತ್ಯೇತತ್ತಪೋಮಾನಸುಚ್ಯತೆ ಮಾನಸಮುಚ್ಯತೇ || 16 ||
ಅರ್ಥ :- ಮನಸ್ಸು ಶಾಂತವಾಗಿರುವುದು, ಮೃದು ಸ್ವಭಾವವಿರುವುದು (ಮೃದು ಹೃದಯವಿರುವುದು), ಮೌನವಾಗಿರುವುದು, ಆತ್ಮನಿಗ್ರಹವಿರುವುದು, ಶುದ್ಧ ವಿಚಾರಗಳಿರುವುದು ಇವು ಮನಸ್ಸಿನಿಂದ ಮಾಡಬಹುದಾದ ತಪಸ್ಸುಗಳು.
ಮನಪ್ರಸಾದ- ಮನಸ್ಸಿನ ಶಾಂತಿಯು ಏಕಾಏಕೀ ಲಭಿಸುವುದಿಲ್ಲ. ಇದನ್ನು ಸತತ ಪ್ರಯತ್ನ ಹಾಗೂ ಸಾಧನೆಯಿಂದ ಸಂಪಾದಿಸಬೇಕು. ಇಂದ್ರಿಯ ನಿಗ್ರಹದ ಜೊತೆಗೆ, ವ್ಯವಹಾರದಲ್ಲಿ ಪ್ರತಿಯೊಬ್ಬರನ್ನೂ ಪ್ರೇಮದಿಂದ ಕಾಣುವ ಅಭ್ಯಾಸವು ಮನಃಶಾಂತಿಗೆ ತುಂಬಾ ಅವಶ್ಯಕ. ಮನಸ್ಸು, ಇಂದ್ರಿಯಗಳ ಮುಖಾಂತರ ವಿಷಯ ಸುಖಗಳ ಕಡೆಗೆ ಓಡುವುದು; ಮತ್ತು ಬಾಹ್ಯ ಸಂಸ್ಪರ್ಶ ಅಥವಾ ಸಂವೇದನೆಗಳು ಇಂದ್ರಿಯಗಳ ಮುಖಾಂತರ ಮನಸ್ಸನ್ನು ತಲ್ಪುವುದು, ಈ ಎರಡೂ ಕಾರಣಗಳಿಂದ ಮನಸದ್ಸು ಮನಸ್ಸು ಉದ್ವೇಗಗೊಳ್ಳುತ್ತದೆ, ಹಾಗೂ ಶಾಂತಿಯನ್ನು ಕಳೆದುಕೊಳ್ಳುತ್ತದೆ. ಈ ಎರಡೂ ಮಾರ್ಗಗಳಿಂದಲೂ ಮನಸ್ಸನ್ನು ನಿಗ್ರಹಿಸಿ, ವಿಷಯಗಳನ್ನು ಮಿತವಾಗಿ ಉಪಯೋಗಿಸುವುದರಿಂದ ಮನಃಶಾಂತಿಯು ಲಭಿಸುತ್ತದೆ.
ಸೌಮ್ಯತ್ವ- ಅಂದರೆ ತನ್ನ ಇಷ್ಟಮಿತ್ರರು ಬಂಧುಗಳು ಹಾಗೂ ಸರ್ವರೊಡನೆಯೂ ದಯಾದ್ರ ಹೃದಯದವ ನಾಗಿರುವುದು. ಇದರಿಂದ ಮನಃಶಾಂತಿಯು ಲಭಿಸಿ ಸಾತ್ವಿಕ ಗುಣವು ವೃದ್ಧಿಯಾಗುತ್ತದೆ.
ಮೌನಮ್- ಎಂದರೆ ಅನಾವಶ್ಯಕವಾದ, ಉದ್ರೇಕವನ್ನುಂಟು ಮಾಡುವ, ಅಹಿತವಾದ, ಅಸತ್ಯವಾದ ಮಾತುಗಳನ್ನಾಡದೇ ಇರುವುದಲ್ಲ. ಮನಸ್ಸಿನಲ್ಲಿ ಅನಾವಶ್ಯಕ, ಉದ್ರೇಕಕರ ವಿವಿಧ ವಿಚಾರಗಳು ಬದಂತೆ ಬರದಂತೆ ಸಹ ನಿಗ್ರಹಿಸಬೇಕು. ಈ ಶಾಂತ ಮನಸ್ಸನ್ನು ಪರಮಾತ್ಮನ ಧ್ಯಾನದಲ್ಲಿ ನಿಲ್ಲಿಸಬೇಕು.
ಆತ್ಮನಿಗ್ರಹ – ಮನುಷ್ಯನಲ್ಲಿ ಪಶುವೃತ್ತಿಯು ಸದಾ ಜಾಗೃತವಾಗಿರುತ್ತದೆ. ಆಸ್ಪದ ಸಿಕ್ಕಾಗಲ್ಲೆಲ್ಲಾ ಅದು ಹೊರಕ್ಕೆ ಬಂದು ಪ್ರಕಟವಾಗುತ್ತದೆ. ಪಶುವೃತ್ತಿಗೆ ಆಸ್ಪದ ಕೊಟ್ಟರೆ ಸಾಧನೆಯ ಏಣಿಯ ಮೆಟ್ಟಿಲನ್ನು ಇಳಿದಂತೆಯೇ ಸರಿ. ಆ ಮದದಿಂದ ಆದುದರಿಂದ ಇಂತಹ ವಿಚಾರಗಳು ಮನಸ್ಸಿನಲ್ಲಿ ಬಂದರೆ, ಅವುಗಳ ಆಸೆಯುಂಟಾದರೆ, ವಿವೇಕದಿಂದ ಅವುಗಳನ್ನು ಕತ್ತರಿಸಿ ಹಾಕಿ ನಿಗ್ರಹಮಾಡಬೇಕು.
ಭಾವಸಂಶುದ್ಧಿ- ನಮ್ಮ ಧ್ಯೇಯವು ಶುದ್ಧವೂ, ಸ್ಥಿರವೂ ಆಗಿರಬೇಕು. ಉಚ್ಛ ಧ್ಯೇಯಗಳಿಲ್ಲದಿದ್ದರೆ, ಉಚ್ಛ ಸಾಧನೆಗಳೂ ಇಲ್ಲ. ಆದುದರಿಂದ ಆತ್ಮಸಾಕ್ಷಾತ್ಕಾರ ಪಡೆಯಬೇಕೆಂಬ ಉಚ್ಛ ಧ್ಯೇಯವನ್ನು ಹೊಂದಿರಬೇಕು. ಹೀಗೆ, ನಿಶ್ಚಯವಾದ, ಅಚಲವಾದ ಧ್ಯೇಯವನ್ನಿಟ್ಟುಕೊಂಡರೆ, ಆ ಧ್ಯೇಯ ಸಿದ್ಧಿಗಾಗಿ ಅನುಕೂಲವಾದ ಮಾರ್ಗದಲ್ಲಿ ಚಲಿಸಬುಹದು. ಧ್ಯೇಯವು ಕೆಳಮಟ್ಟದ್ದಾದರೆ ಅವುಗಳ ಸಾಧನೆಗಾಗಿ ನೀಚ ಕರ್ಮಗಳನ್ನೇ ಮಾಡಬೇಕಾಗುತ್ತದೆ. ಆದುದರಿಂದ ಉಚ್ಛ ಧ್ಯೇಯಗಳನ್ನು ಹೊಂದಿರಬೇಕು.
ಶ್ರದ್ಧಯಾ ಪರಯಾ ತಪ್ತಂ ತಪಸ್ತತ್ರಿವಿಧಂ ನರೈಃ |
ಅಫಲಾಕಾಂಕ್ಷಿಭಿರ್ಯುಕ್ತೈಃ ಸಾತ್ವಿಕಂ ಪರಿಚಕ್ಷತೆ ಚಕ್ಷತೇ || 17 ||
ಅರ್ಥ :- ಹೀಗೆ ಶಾರೀರಿಕ, ವಾಕ್, ಮತ್ತು ಮಾನಸಿಕ ಎಂಬ ಮೂರು ವಿಧವಾದ ತಪಸ್ಸುಗಳನ್ನು ಶ್ರದ್ಧೆಯಿಂದಲೂ, ದೃಢನಿಶ್ಚಯದಿಂದಲೂ ಕೂಡಿ, ಉಚ್ಚ ರೀತಿಯಲ್ಲಿ ಸಾಧನೆ ಮಾಡುವವರು ‘ಸಾತ್ವಿಕರು’ ಎನಿಸಿಕೊಳ್ಳುತ್ತಾರೆ.
ಇಂತಹ ಸಾಧನೆಯಲ್ಲಿ ಸಹ, ಸಾತ್ವಿಕರು ತಮ್ಮ ಸಾಧನೆಯ ಫಲವನ್ನು ತ್ಯಜಿಸಬೇಕು. ಫಲವೆಂದರೆ ಇನ್ನೂ ಹುಟ್ಟದಿರುವ, ಮುಂದೆ ಸಿಗಬಹುದಾದ ಲಾಭ. ಈ ಲಾಭದ ಕಲ್ಪನೆಯಲ್ಲಿ ಶಕ್ತಿಯನ್ನು ವ್ಯಯಮಾಡದೆ, ಡದೇ ಅದನ್ನು ಸಾಧನೆಯನ್ನು ಇನ್ನೂ ದಕ್ಷವಾಗಿ ಮಾಡಲು ವಿನಿಯೋಗಿಸಬೇಕು. ಕರ್ಮವು ಚೆನ್ನಾಗಿ ಮಾಡಲ್ಪಟ್ಟರೆ, ಫಲವು ಬೇಡವೆಂದರೂ ಸಿಕ್ಕೇ ಸಿಗುತ್ತದೆ. ಆದುದರಿಂದ ಫಲದ ಬಗ್ಗೆ ಚಿಂತೆಯನ್ನು ಮಾಡದೆ, ಡದೇ ಅದನ್ನು ತ್ಯಜಿಸಿ ಸಾಧನೆಯನ್ನು ಮಾಡಬೇಕು.

ಸತ್ಕಾರ ಮಾನ ಪೂಜಾರ್ಥಂ ತಪೋ ದಂಭೇನ ಚೈವಯತ್ |
ಕ್ರಿಯತೇ ತ ದಿ ಹ ಪ್ರೋಕ್ತಂ ರಾಜಸಂ ಚಲಮಧ್ರುವಮ್ || 18 ||
ಅರ್ಥ :- ತನ್ನನ್ನು ಎಲ್ಲರೂ ಸತ್ಕರಿಸಬೇಕು, ತನಗೆ ಗೌರವ ಕೊಡಬೇಕು. ಮತ್ತು ತನ್ನನ್ನು ಎಲ್ಲರೂ ಸೇವೆ ಮಾಡಬೇಕು, ಎಂಬ ಆಸೆಯಿಂದ, ಡಂಭಾಚಾರಕ್ಕಾಗಿ ಮಾಡುವ ಶಾರೀರಿಕ, ವಾಕ್, ಮತ್ತು ಮಾನಸಿಕ ತಪಸ್ಸುಗಳು, ಅಲುಗಾಡುವ, ಅಸ್ಥಿರವಾದ, ರಾಜಸಿಕ ತಪಸ್ಸು ಎನಿಸಿಕೊಳ್ಳುತ್ತದೆ. (ಇಂತಹ ಕರ್ಮ ಮಾಡುವವರು ರಾಜಸಿಕರು)
ಆಸೆಯಿಂದ ಕೂಡಿದ ಮನುಷ್ಯನು ತಾನು ಮಾಡುವ ಸಾಧನೆಗಳಿಂದ ಆತ್ಮವಿಕಾಸವನ್ನು ಹೊಂದಬೇಕೆಂದಿರುವುದಕ್ಕಿಂತ, ಪ್ರಪಂಚದಲ್ಲಿ ಎಲ್ಲಾ ರೀತಿಯ ಸೌಕರ್ಯ ಹಾದೂ ಧನ ಮಾನಗಳನ್ನು ಪಡೆಯಬೇಕೆಂದಿರುತ್ತಾನೆ. ಅವನು ಜನರನ್ನು ಮರುಳುಗೊಳಿಸಿ ತನ್ನ ಇಷ್ಟಾರ್ಥವನ್ನು ಪೂರೈಸಿಕೊಳ್ಳುವುದಕ್ಕಾಗಿ, ಸತ್ಪುರುಷನ ಸೋಗನ್ನು ಹಾಕಿಕೊಂಡು, ಶರೀರ, ವಾಕ್, ಮನಸ್ಸುಗಳ ಮೂಲಕ ಸಾತ್ವಿಕ ತಪಸ್ಸನ್ನು ಮಾಡುವವನಂತೆ ನಟಿಸುತ್ತಾನೆ. ಇವನು ಮಾಡುವ ಡಂಭಾಚಾರ ಇಂತಹ ತಪಸ್ಸು ಅಸ್ಥಿರವೂ, ಚಂಚಲವೂ ಆದುದೆಂದು ಶ್ರೀಕೃಷ್ಣನು ಇದನ್ನು ಖಂಡಿಸಿದ್ದಾನೆ. ಏಕೆಂದರೆ ವ್ಯಕ್ತಿಗೆ ಇಚ್ಛಿತಫಲ ಸಿಕ್ಕ ಕೂಡಲೇ ಅವನು ಅಹಂಕಾರಯುತನಾಗಿ, ಇಂದ್ರಿಯ ನಿಗ್ರಹವಿಲ್ಲದೆ, ಈ ಎಲ್ಲಾ ತಪಸ್ಸುಗಳನ್ನೂ ತ್ಯಜಿಸಿಬಿಡುತ್ತಾನೆ. ಆದುದರಿಂದ ಇದು ಅಸ್ಥಿರ ಎಂದು ಹೇಳಲಾಗಿದೆ.

ಮೂಢಗ್ರಾ ಹೇಣಾತ್ಮನೋ ಯ ತ್ವೇಡಯ ಕ್ರಿಯತೆ ತಪಃ |
ಪರಸ್ಯೋತ್ಸಾದನಾರ್ಥಂವಾ ತತ್ತಾ ಮನಸಮುದಾಹೃತಮ್ || 19 ||
ಅರ್ಥ:- ತಪ್ಪಾದ ತಿಳಿವಳಿಕೆಯಿಂದ ಆತ್ಮನಿಗೆ ಹಿಂಸೆಯನ್ನಷ್ಟೇ ಉಂಟುಮಾಡುವ, ಇಲ್ಲವೇ ಬೇರೆಯವರನ್ನು ನಾಶಮಾಡುವ ದೃಷ್ಟಿಯಿಂದ ಮಾಡಲಾಗುವ ಶಾರೀರಿಕ, ವಾಕ್ ಮತ್ತು ಮಾನಸಿಕ ತಪಸ್ಸುಗಳು ತಾಮಸ ತಪಸ್ಸು ಎನಿಸಿಕೊಳ್ಳುತ್ತವೆ. (ಇಂತಹವರು ತಾಮಸಿಕರು)
ಹುಚ್ಚು ಹುಚ್ಚಾದ ಕಲ್ಪನೆಗಳಿಂದ ಕೂಡಿ, ಅವುಗಳಿಂದ ತನಗೆ ಏನೋ ಲಾಭ ಸಿಗುತ್ತದೆಂದು ಭ್ರಮಿಸುತ್ತಾ, ಅವುಗಳ ಸಿದ್ಧಿಗಾಗಿ ತನ್ನ ಶರೀರವನ್ನು ದಂಡಿಸುತ್ತಾ, ಮತ್ತು ತನ್ನ ಎದುರಿಗೆ ಬಂದವರನ್ನೂ, ಸುತ್ತಮುತ್ತಲಿರುವವರನ್ನೂ ಹಿಂಸಿಸುತ್ತಾ ಇಲ್ಲವೆ ನಾಶಮಾಡುತ್ತಾ ಶರೀರ, ವಾಕ್, ಮನಸ್ಸುಗಳ ಮುಖಾಂತರ ಮಾಡುವ ತಪಸ್ಸಿಗೆ ತಾಮಸಿಕ ತಪಸ್ಸು ಎಂದು ಹೆಸರು. ಈ ತಪಸ್ಸು ಪ್ರಾರಂಭದಲ್ಲಿಯೂ ಮತ್ತು ಕೊನೆಯಲ್ಲಿಯೂ ದುಃಖದಾಯಕವಾಗುತ್ತದೆ. ತಾಮಸಗುಣದವರು, ವೇದದಲ್ಲಿ ಹೇಳಿದ ತಪಸ್ಸಿನ ಸ್ಪಷ್ಟವಾದ ಜ್ಞಾನವನ್ನು ತಿಳಿದುಕೊಳ್ಳದೆ, ತಪ್ಪು ತಪ್ಪಾಗಿ ತಿಳಿದುಕೊಂಡು, ತಮ್ಮ ಮನಸದ್ಸಿಗೆ ಬಂದಂತೆ, ತಮ್ಮ ದೃಷ್ಟಿಗೆ ಅನುಕೂಲವಾದ ಅರ್ಥವನ್ನು ಕಲ್ಪಿಸಿಕೊಂಡು, ಅದೇ ತಮ್ಮ ಧ್ಯೇಯ ಎಂಬುದಾಗಿ ನಿಶ್ಚಯಿಸಿ, ಅದರ ಸಿದ್ಧಿಗಾಗಿ ಸ್ವೇಚ್ಛೆಯಾಗಿ ವರ್ತಿಸುತ್ತಾರೆ.
ದಾನವೂ ಸಹ ಮೂರು ವಿಧವಾಗಿದೆ.
ದಾತವ್ಯಮಿತಿಯದ್ದಾನಂ ದೀಯತೆ„ನುಪಕಾರಿಣೆ | ಣೇ
ದೇಶೆಕಾಲೇಚಪಾತ್ರೆಚ ತದ್ದಾನಂ ಸಾತ್ವಿಕಂಮತಮ್ || 20 ||
ಅರ್ಥ :- ದಾನಮಾಡುವುದು ತನ್ನ ಕರ್ತವ್ಯ ಎಂದು ತಿಳಿದುಕೊಂಡು, ಯಾವನಿಗೆ ದಾನವನ್ನು ಕೊಡಲಾಗುವುದೋ ಅವನಿಂದ ಪ್ರತಿಯಾಗಿ ಏನನ್ನೂ ಅಪೇಕ್ಷಿಸದೆ ಯೋಗ್ಯವಾದ ದೇಶ, ಕಾಲ ಮತ್ತು ಪಾತ್ರನಿಗೆ ಕೊಡುವ ದಾನವು ಸಾತ್ವಿಕ ದಾನ ಎನಿಸಿಕೊಳ್ಳುತ್ತದೆ.
ದಾನವನ್ನು ಕೊಡುವಾಗ ಕಾಲ, ದೇಶ, ಮತ್ತು ಪಾತ್ರನನ್ನು ಆರಿಸಿಕೊಳ್ಳಬೇಕು. ಪಾತ್ರನು ಯೋಗ್ಯನಾಗಿರಬೇಕು. ಅಯೋಗ್ಯನಿಗೆ ದಾನಮಾಡಬಾರದು. ಯೋಗ್ಯನಿಗೆ ದಾನ ಮಾಡುವಾಗ ಸಹ, ಅವನಿಂದ ಮುಂದೆ ತನಗೆ ಯಾವುದಾದರೂ ಪ್ರತಿಫಲ ಸಿಗಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸಿಕೊಂಡಷ್ಟೇ ಅಲ್ಲ, ಅಂತಹ ಪ್ರತಿಫಲವನ್ನು ಮನಸ್ಸಿನಲ್ಲಿ ಸಹ ಅಪೇಕ್ಷಿಸ ಕೂಡದು. ಹೀಗೆ ದಾನ ಮಾಡುವುದು ತನ್ನ ಕರ್ತವ್ಯ, ಪರಮಾತ್ಮನು ತನಗೆ ದಾನ ಮಾಡುವ ಶಕ್ತಿಯನ್ನು ಕೊಟ್ಟಿರುವಾಗ “ಅದನ್ನು ಈಗ ಅವಶ್ಯಕತೆಯಿರುವವರಿಗೆ ಹಂಚಿ, ತನ್ಮೂಲಕ ಪರಮಾತ್ಮನ ಸೇವೆಯನ್ನು ಮಾಡುತ್ತೇನೆ”, ಎಂಬ ಭಾವವುಳ್ಳವನಾಗಬೇಕು. ತನ್ನಲ್ಲಿ ಹಣವಿದೆ ಎಂದು ಸ್ವೇಚ್ಛೆಯಾಗಿ ವಿಚಾರವಿಲ್ಲದೆ ದಾನಮಾಡಬಾರದು. ದಾನಮಾಡುವ ಅವಶ್ಯಕತೆ, ಕಾಲ, ದೇಶಗಳನ್ನು ಸಾರಾಸಾರ ವಿಚಾರ ಮಾಡಿ ದಾನಮಾಡಬೇಕು. ಅಪಾತ್ರನಿಗೆ ದಾನಮಾಡಬಾರದು. ವೃಕ್ಷವು ತನ್ನ ಫಲವನ್ನು ತನ್ನ ಹತ್ತಿರ ಬರುವವರೆಲ್ಲರಿಗೂ ಕೊಡುವಂತೆ, ಅದು ಪಾತ್ರಾಪಾತ್ರರ ಬಗ್ಗೆ ವಿಚಾರ ಮಾಡದಂತೆ, ಮನುಷ್ಯನೂ ಸಹ ತನ್ನ ಹತ್ತಿರ ಬೇಡಲು ಬರುವವರೆಲ್ಲರಿಗೂ ಸಾರಾಸಾರ ವಿಚಾರ ಮಾಡದೇ ದಾನಮಾಡಬೇಕೆಂದು ಕೆಲವರು ವಾದಿಸುತ್ತಾರೆ. ಆದರೆ ಗೀತೆಗೆ ಇದು ಮಾನ್ಯವಿಲ್ಲ. ಮನುಷ್ಯನು ಮರವಲ್ಲ. ಅದಕ್ಕಿಂತ ಮೇಲ್ಮಟ್ಟಕ್ಕೇರಿದ್ದಾನೆ. ಅವನಲ್ಲಿ ಸಾರಾಸಾರ ವಿಚಾರ ಮಾಡುವ ಶಕ್ತಿಯಿದೆ. ದಾನಮಾಡುವಾಗ ಸಹ ಅವನು ಈ ಶಕ್ತಿಯನ್ನುಪಯೋಗಿಸಿ ಮನುಷ್ಯನಂತೆ ವರ್ತಿಸಬೇಕೇ ಹೊರತು ಮರದಂತೆ ವರ್ತಿಸಕೂಡದು. ಆದ್ದರಿಂದಲೇ ದಾನ ಮಾಡುವಾಗ ಪಾತ್ರನಿಗೆ ಮಾತ್ರ ಕೊಡಬೇಕೆಂದು ಹೇಳಲಾಗಿದೆ.

ಯತ್ತು ಪ್ರತ್ಯುಪಕಾರಾರ್ಥಂ ಫಲಮುದ್ಧಿಶ್ಯ ವಾ ಪುನಃ |
ದೀಯತೇ ಚ ಪರಿಕ್ಲಿಷ್ಟಂ ತದ್ದಾನಂ ರಾಜಸಂ ಸ್ಮøತಮ್ || 21 ||
ಅರ್ಥ :- ತಾನು ಮಾಡಿದ ದಾನಕ್ಕೆ ಪ್ರತಿಯಾಗಿ ತನಗೆ ಅಷ್ಟೇ ಲಾಭ ಸಿಗಬೇಕೆಂಬ ಅಪೇಕ್ಷೆಯಿಂದ, ಇಲ್ಲವೆ ದಾನಮಾಡುವುದರಿಂದ ಇನ್ನೂ ಹೆಚ್ಚಾದ ಬೇರೆ ಯಾವುದಾದ ರೊಂದು ಲಾಭವನ್ನು ಗಳಿಸಬೇಕೆಂಬ ಆಸೆಯಿಂದ ಕೊಡುವ ದಾನವು, ಮತ್ತು ಮನಸ್ಸಿಲ್ಲದೆ, ಪರಿಸ್ಥಿತಿಯ ಒತ್ತಾಯದಿಂದ ಕೊಡಲಾಗುವ ದಾನವು ರಾಜಸದಾನ ಎನಿಸಿಕೊಳ್ಳುತ್ತದೆ.
ನಮ್ಮ ಇಂದಿನ ವ್ಯವಹಾರದಲ್ಲಿ ಕೊಡಲಾಗುವ ಅನೇಕ ದಾನಗಳು ಈ ಗುಂಪಿಗೆ ಸೇರುತ್ತವೆಂಬುದನ್ನು ಕಾಣಬಹುದು.

ಅದೇಶೇ ಕಾಲೇ ಯದ್ದಾನಮಪಾತ್ರೇಭ್ಯಶ್ಚ ದೀಯತೇ |
ಅಸತ್ಕøತಮವಜ್ಞಾತಂ ತತ್ತಾಮಸಮುದಾಹೃತಮ್ || 22 ||
ಅರ್ಥ :- ಅಯೋಗ್ಯವಾದ ದೇಶ ಮತ್ತು ಕಾಲದಲ್ಲಿ ಅಯೋಗ್ಯನಿಗೆ ಕೊಡಲಾಗುವ ದಾನ, ಪಾತ್ರವನ್ನು ಗೌರವಿಸದೆ, ತುಚ್ಛ ಭಾವದಿಂದ ಕಾಣುತ್ತಾ ಕೊಡುವ ದಾನ, ಇವು ತಾಮಸ ದಾನ ಎನಿಸಿಕೊಳ್ಳುತ್ತವೆ.
ದಾನ ಕೊಡುವ ಭಾವವು ಆಂತರಿಕ ಹೃದಯದಿಂದ ಉಕ್ಕಿ ಬರಬೇಕು. ದಾನ ಕೊಡುವುದರಿಂದ ತನಗೆ ಕೊರತೆಯಾಯಿತು. ತನ್ನಲ್ಲಿರುವುದು ಕಡಿಮೆಯಾಯಿತು, ಎಂದು ಭಾವಿಸುವವನು ದಾನಕೊಟ್ಟಾಗ್ಯೂ ದಾನಮಾಡಿದಂತೆಯೇ ಅಲ್ಲ. ದಾನಮಾಡುವುದರಿಂದ ಲಭಿಸುವ ಆನಂದವು ತಾನು ದಾನಮಾಡಿದ ವಸ್ತುವಿಗಿಂತ ಹೆಚ್ಚು ಬೆಲೆಯುಳ್ಳದ್ದಾಗಿದೆ.

ಓಂ ತತ್ಸದಿತಿ ನಿರ್ದೇಶೋ ಬ್ರಹ್ಮಣ್ಯಸ್ತ್ರಿ ವಿಧಃ ಸ್ಮøತಃ |
ಬ್ರಾಹ್ಮಣಾಸ್ತೇನ ವೇದಾಶ್ಚಯಜ್ಞಾಶ್ಚ ವಿಹಿತಾಃ ಪುರಾ || 23 ||
ಅರ್ಥ :- ಬ್ರಹ್ಮನು ‘ಓಂ’ ‘ತತ್’ ‘ಸತ್’ ಎಂಬ ಮೂರು ಶಬ್ದಗಳಿಂದ ವರ್ಣಿಸಿಲ್ಪಟ್ಟಿದ್ದಾನೆ, ಹಿಂದೆ ಇದರಿಂದಲೇ ಬ್ರಾಹ್ಮಣರು, ವೇದಗಳು, ಮತ್ತು ಯಜ್ಞಗಳು ಸೃಷ್ಟಿಸಲ್ಪಟ್ಟವು.
ಸತ್ಕರ್ಮಗಳನ್ನು ನಾವು ಎಷ್ಟೇ ಚನ್ನಾಗಿ ಮಾಡಿದಾಗ್ಯೂ ನಮ್ಮ ಉದ್ದೇಶವು ನೀಚ ಅಥವಾ ಹೀನವಾಗಿದ್ದರೆ ಫಲವು ಅದಕ್ಕನುಸಾರವಾಗಿರುತ್ತಾರೆ. ಅನೇಕ ಜನರು ಮಾಡುವ ಒಂದೇ ಕಾರ್ಯವು ನೋಡುವುದಕ್ಕ ಒಂದೇ ರೀತಿಯಾಗಿ ಕಂಡರೂ ಫಲದಲ್ಲಿ ಮಾತ್ರ ಅದು ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಭಿನ್ನಭಿನ್ನವಾಗಿರುತ್ತದೆ. ಪರಮಾತ್ಮನನ್ನು ಗುರಿಯಾಗಿಟ್ಟುಕೊಳ್ಳುವುದರಿಂದ ಉದ್ದೇಶವು ಉಚ್ಚ ತರಗತಿಯದಾಗುತ್ತದೆ. ಅಂತೆಯೇ ಫಲವೂ ಸಹ.
ಓಂತತ್ಸತ್ – ‘ಓಂ’ ಎಂಬುದು ಅಚಿಂತ್ಯವಾದ ಶುದ್ಧ ಪರಮಾತ್ಮನನ್ನು ಸೂಚಿಸುತ್ತದೆ. ಇದು ಪೂರ್ಣವಾದುದು. ಜನನವಿಲ್ಲದುದು. ಇದು ಶರೀರ, ಮನಸ್ಸು ಮತ್ತು ಬುದ್ಧಿಗಳಿಗೆ ಓತಪ್ರೋತವಾಗಿ ಹೊಕ್ಕಿಕೊಂಡಿದೆ. ತತ್-ವೇದದಲ್ಲಿ ಈ ಶಬ್ದದಿಂದ ಪರಮ ಗುರಿಯೂ ಬದಲಾವಣೆಯಲ್ಲಿದ್ದುದೂ, ಪರಿಪೂರ್ಣವೂ ಆದ ಪರಮಾತ್ಮನನ್ನು ಸೂಚಿಸಲಾಗಿದೆ. ಸತ್ ಎಂದರೆ ಇರುವಿಕೆ. ಇದು ಪ್ರತಿಯೊಂದು ವಸ್ತುಗಳ ಜೀವಿಗಳ ಇರುವಿಕೆಗೆ, ಚಲನವಲನಾದಿಗಳಿಗೆ ಕಾರಣವಾಗಿದೆ. ಈ ಮೂರು ಶಬ್ದಗಳ ಜೋಡಣೆಯಿಂದಾದ, ‘ಒಂ ತತ್ಸತ್’ ಎಂಬ ಶಬ್ದವು ಅಖಂಡನೂ, ಪರಿಪೂರ್ಣನೂ ಆದ ಪರಮಾತ್ಮನ ತತ್ವವನ್ನೂ, ಮತ್ತು ನಮ್ಮ ಎಲ್ಲಾ ಇರುವಿಕೆ, ಹಾಗೂ ಚಲನವಲನಾದಿಗಳಲ್ಲಿಯೂ ಅವನು ಅಖಂಡನಾಗಿರುವುದನ್ನೂ ಸೂಚಿಸುತ್ತದೆ. ನಾವು ಮಾಡುವ ಎಲ್ಲಾ ತರಹದ ಯಜ್ಞ, ದಾನ, ತಪಸ್ಸುಗಳಲ್ಲಿ ಯಾವುದಾದರೂ ನ್ಯೂನತೆಗಳಿದ್ದರೆ ಇಲ್ಲವೆ ಅವು ಸಾತ್ವಿಕವಾಗಿಲ್ಲದಿದ್ದರೆ, ಅವುಗಳನ್ನು ಮಾಡುವ ಮೊದಲು ‘ಓಂ ತತ್ಸತ್’ ಎಂಬ ಶಬ್ದೋಚ್ಛಾರಣೆ ಮಾಡಿ, ಅವುಗಳನ್ನು ಪರಮಾತ್ಮನಿಗೆ ಅರ್ಪಿಸುತ್ತೇವೆ ಎಂಬ ಭಾವವನ್ನಿಟ್ಟುಕೊಂಡು ಆ ಕರ್ಮಗಳನ್ನು ಮಾಡಿದರೆ ಅವೆಲ್ಲವೂ ಸಾತ್ವಿಕ ಯಜ್ಞ, ದಾನ, ತಪಸ್ಸುಗಳಾಗುತ್ತವೆ ಎಂದು ಶಂಕರಾಚಾರ್ಯರು ಅರ್ಥಮಾಡಿದ್ದಾರೆ.

ತಸ್ಮಾದೋಮಿತ್ಯುದಾಹೃತ್ಯ ಯಜ್ಞದಾನತಪಃಕ್ರಿಯಾಃ |
ಪ್ರವರ್ತಂತೇ ವಿಧಾನೋಕ್ತಾಃ ಸತತಂ ಬ್ರಹ್ಮವಾದಿನಾಮ್ || 24 ||
ಅರ್ಥ :- ಆದುದರಿಂದ ಬ್ರಹ್ಮನನ್ನು ತಿಳಿಯಬೇಕೆಂಬ ಅಪೇಕ್ಷೆಯಿರುವ ಸಾಧಕರು ‘ಓಂ’ ಎಂಬ ಶಬ್ದವನ್ನು ಉಚ್ಚಾರಮಾಡಿ, ಎಲ್ಲಾ ತರಹದ ಯಜ್ಞ, ದಾನ, ತಪಸ್ಸುಗಳನ್ನು ಮಾಡುತ್ತಾರೆ.
‘ಓಂ’ ಎಂಬ ಶಬ್ದವನ್ನುಚ್ಛಾರಮಾಡುವುದರಿಂದ ಪರಮಾತ್ಮನನ್ನು ಜ್ಞಾಪಕ ಮಾಡಿಕೊಂಡಂತಾಗಿ ಆಂತರಿಕ ಶಕ್ತಿಯು ಜಾಗೃತವಾಗುತ್ತದೆ. ಇದರಿಂದ, ಯಜ್ಞ, ದಾನ, ತಪಸ್ಸುಗಳನ್ನು ಮಾಡುವವನು, ‘ನಾನು’ ಎಂಬ ಅಹಂಕಾರವನ್ನು ಕಳೆದುಕೊಂಡು, ಆ ಎಲ್ಲಾ ಕಾರ್ಯಗಳೂ ಪರಮಾತ್ಮನ ಸೇವೆ ಎಂಬ ಜ್ಞಾನದಿಂದ ಅವುಗಳನ್ನು ಪರಮಾತ್ಮನಿಗೆ ಅರ್ಪಿಸಿ ಫಲದ ಬಗ್ಗೆ ಉದಾಸೀನನಾಗಿರುವುದು ಸಾಧ್ಯವಾಗುತ್ತದೆ. ಹೀಗೆ ಮಾಡಿದ ಕಾರ್ಯವು ಶ್ರೇಷ್ಟ ತರಗತಿಯದಾಗಿ ಮನಃಶಾಂತಿಯು ಲಭಿಸುತ್ತದೆ.
ತದಿತ್ಯನಭಿü
ತದಿತ್ಸನಭಿಸಂಧಾಯ ಫಲಂ ಯಜ್ಞತಪಃಕ್ರಿಯಾಃ |
ದಾನಕ್ರಿಯಾಶ್ಚ ವಿವಿಧಾಃ ಕ್ರಿಯಂತೇ ಮೋಕ್ಷಕಾಂಕ್ಷಿಭಿಃ || 25 ||
ಅರ್ಥ :- ಮೋಕ್ಷವನ್ನು ಅಪೇಕ್ಷಿಸುವವರು ‘ತತ್’ ಎಂಬ ಶಬ್ದೋಚ್ಛಾರಣೆ ಮಾಡಿ, ಫಲಾಶೆಯನ್ನು ಬಿಟ್ಟು ಯಜ್ಞ, ದಾನ, ತಪಸ್ಸುಗಳನ್ನು ಮಾಡುತ್ತಾರೆ.
ಕರ್ಮಗಳನ್ನು ಮಾಡುವಾಗ ‘ತತ್’ ಎಂಬುದನ್ನು ಜ್ಞಾಪಕ ಮಾಡಿಕೊಳ್ಳುವುದೂ, ಪರಮಾತ್ಮನನ್ನು ಜ್ಞಾಪಕ ಮಾಡಿಕೊಳ್ಳುವುದೂ, ಎರಡೂ ಒಂದೇ. ಏಕೆಂದರೆ ‘ತತ್’ ಎಂದರೆ ಪರಮಾತ್ಮನೇ ಸರಿ. ಪ್ರಪಂಚದ ಎಲ್ಲಾ ಚರಾಚರವಸ್ತುಗಳಲ್ಲಿ ಅಖಂಡವಾಗಿರುವ ಅವನೇ- ತತ್ ಅಂದರೆ ಪರಮಾತ್ಮನು. ಕುಟುಂಬದ ಹಿತವನ್ನು ಜ್ಞಾಪಕ ಮಾಡಿಕೊಳ್ಳುವುದೆಂದರೆ, ಅದರ ಸಾಧನೆಗಾಗಿ ತನ್ನ ಹಿತವನ್ನು ತ್ಯಾಗಮಾಡುವುದು. ಸಮಾಜದ ಹಿತಕ್ಕಾಗಿ ಕುಟುಂಬದ ಹಿತವನ್ನು ತ್ಯಾಗಮಾಡಬೇಕು. ದೇಶದ ಹಿತಕ್ಕಾಗಿ ಸಮಾಜದ ಹಿತವನ್ನು ತ್ಯಾಗಮಾಡಬಹುದು. ಇಡೀ ಪ್ರಪಂಚದ, ಜನಾಂಗದ ಹಿತಕ್ಕಾಗಿ ದೇಶದ ಹಿತವನ್ನೂ ತ್ಯಾಗಮಾಡಬಹುದು. ಅಂದರೆ ದೊಡ್ಡ ಹಿತವನ್ನು, ಬಹುಜನರ ಹಿತವನ್ನು ಸಾಧಿಸಲು, ಸಣ್ಣ ಅಥವಾ ಕೆಲವೇ ಜನರ ಹಿತವನ್ನು ತ್ಯಾಗಮಾಡಬೇಕು. ಹೀಗೆ ‘ತತ್’ ತತ್ವನ್ನು ತತ್ವವನ್ನು ಜ್ಞಾಪಕ ಮಾಡಿಕೊಳ್ಳಬೇಕು. ಅದರೊಡನೆ ಐಕ್ಯನಾಗಲು, ಅಹಂಕಾರವನ್ನು ತ್ಯಾಗಮಾಡಿ, ಯಜ್ಞ, ದಾನ, ತಪಸ್ಸುಗಳನ್ನು ಮಾಡಿದರೆ, ಈ ದೇಹದ ಅಭಿಮಾನವನ್ನು ತ್ಯಜಿಸಿ, ಅಜ್ಞಾನವನ್ನು ದಾಟಿ, ವಾಸನೆಗಳನ್ನು ಮೀರಿ ಆತ್ಮಜ್ಞಾನವನ್ನು ಪಡೆಯಬಹುದು.

ಸದ್ಭಾವೆ ಸದ್ಭಾವೇ ಸಾಧುಭಾವೆ ಸಾಧುಭಾವೇ ಚಸದಿತ್ಯೇತ್ಪ್ರಯುಜ್ಯತೆ | ಯುಜ್ಯತೇ
ಪ್ರಶಸ್ತೆ ಪ್ರಶಸ್ತೇ ಕರ್ಮಣಿತಥಾಸಚ್ಛಬ್ದಃ ಪಾರ್ಥಯುಜ್ಯತೆ ಯುಜ್ಯತೇ || 26 ||
ಅರ್ಥ :- ಸತ್ಯವಸ್ತುವಾದ ಪರಮಾತ್ಮನನ್ನು, ಸದ್ಗುಣಗಳನ್ನು ಸೂಚಿಸಲು ‘ಸತ್’ ಶಬ್ದವು ಉಪಯೋಗಿಸಲ್ಪಡುತ್ತದೆ. ಪ್ರಾರ್ಥನೆ, ಶುಭಕಾರ್ಯಗಳನ್ನು ಸೂಚಿಸಲು ಸಹ ‘ಸತ್’ ಶಬ್ದವು ಉಪಯೋಗಿಸಲ್ಪಡುತ್ತದೆ.
ಎಲ್ಲಾ ಸದ್ಗುಣಗಳನ್ನೂ, ಸತ್ಕರ್ಮಗಳನ್ನೂ, ಸತ್ಯವನ್ನು, ಸೂಚಿಸಲು ‘ಸತ್’ ಎಂಬ ಶಬ್ದವು ಉಪಯೋಗಿಸಲ್ಪಡುತ್ತದೆ.

ಯಜ್ಞೇ ತಪಸಿದಾನೇಚ ಸ್ಥಿತಿಃ ಸದಿತಿ ಚೋಚ್ಯತೇ |
ಕರ್ಮಚೈವತದರ್ಥೀಯಂ ಸದಿತ್ಯೇವಾಭಿ ಧೀಯತೇ || 27 ||
ಅರ್ಥ :- ಯಜ್ಞ, ತಪಸ್ಸು ಮತ್ತು ದಾನಗಳಲ್ಲಿರುವ ಸ್ಥಿರಬುದ್ಧಿಗೆ ಸಹ ‘ಸತ್’ ಎಂದು ಹೇಳಲಾಗುತ್ತದೆ. ಪರಮಾತ್ಮನ ಜ್ಞಾನಕ್ಕಾಗಿ ಮಾಡಲಾಗುವ ಈ ಕರ್ಮಗಳಿಗೆ ಸಹ ‘ಸತ್’ ಎಂಬ ಹೆಸರಿದೆ.
ಯಜ್ಞ, ತಪಸ್ಸು, ದಾನಗಳಲ್ಲಿರುವ ದೃಢವಾದ ನಂಬಿಕೆ ಹಾಗೂ ಪ್ರೇಮಗಳಗೆ ಸಹ ‘ಸತ್’ ಎಂದು ಹೇಳುತ್ತಾರೆ. ವ್ಯಕ್ತಿಯು ಮಾಡುತ್ತಿರುವ ಯಜ್ಞ, ದಾನ, ತಪಸ್ಸುಗಳು, ಸಾತ್ವಿಕವಾಗಿಲ್ಲದಿದ್ದಾಗ್ಯೂ, ಅವುಗಳನ್ನು ಪ್ರಾರಂಭ ಮಾಡುವ ಮೊದಲು, ‘ಓಂತತ್ಸತ್’ ಎಂದು ಉಚ್ಛಾರ ಮಾಡಿ, ಕರ್ಮಗಳನ್ನು ಮಾಡಿದರೆ, ಆ ಕರ್ಮಗಳು ಪರಮಾತ್ಮನಿಗೆ ಅರ್ಪಿತವಾದಂತಾಗಿ, ಅವು ಸಾತ್ವಿಕ ಕರ್ಮಗಳೇ ಆಗುತ್ತವೆ. ಹೀಗೆ ಉಚ್ಛಾರ ಮಾಡುವಾಗ ವ್ಯಕ್ತಿಯು, ಅಹಂಕಾರವನ್ನು ತ್ಯಜಿಸಿ, ಕರ್ಮಗಳನ್ನು ಪರಮಾತ್ಮನಿಗೆ ಅರ್ಪಿಸುವುದರಿಂದ, ಈ ಕರ್ಮಗಳು ಬಂಧಕಾರಕ ವಾಗಲಾರವು. ಇವುಗಳಿಂದ ಯಾವ ಲೇಪವೂ, ವಾಸನೆಯೂ ಉಂಟಾಗುವುದಿಲ್ಲ. ಜೊತೆಗೆ ಪರಮಾತ್ಮನಿಗೆ ಅರ್ಪಣೆ ಮಾಡುವುದರಿಂದ ಮಾನಸಿಕ ಶಾಂತಿಯು ಲಭಿಸಿ ಮೇಲ್ಮಟ್ಟಕ್ಕೇರಲು ಸಹಾಯವಾಗುತ್ತದೆ. ಸಂಚಿತವಾದ ವಾಸನೆಗಳನ್ನು ಬರಿದು ಮಾಡಿಕೊಳ್ಳಲು ಕರ್ಮಗಳನ್ನು ಮಾಡದೇ ಗತ್ಯಂತರವಿಲ್ಲ. ಇಲ್ಲಿ ಕರ್ಮದಲ್ಲಿಯೂ ಜಾಣತನವೇನೆಂದರೆ, ಇಂತಹ ಕರ್ಮಗಳನ್ನು ಮಾಡಿಯೂ ಅವುಗಳಿಂದ ಪುನಃ ವಾಸನೆಗಳುಂಟಾಗದಂತೆ ನೋಡಿಕೊಳ್ಳುವುದೇ ಆಗಿದೆ. ಆದುದರಿಂದ ‘ಓಂತತ್ಸತ್’ ಎಂದು ಉಚ್ಚಾರ ಪೂರ್ವಕ ಕರ್ಮಗಳನ್ನು ಮಾಡಿ ಅವುಗಳನ್ನು ಪರಮಾತ್ಮನಿಗೆ ಅರ್ಪಿಸಬೇಕೆಂದು ವಿಧಿಸಲಾಗಿದೆ.

ಅಶ್ರದ್ಧಾಯಾ ಹುತಂ ದತ್ತಂ ತಪಸ್ತಪ್ತಂ ಕೃತಂ ಚ ಯತ್
ಸದಿತ್ಯುಚ್ಯತೇ ಪಾರ್ಥ ನ ತತ್ಪ್ರೇತ್ಯ ನೋ ಇಹ || 28 ||
ಅರ್ಥ :- ಶ್ರದ್ಧೆಯಿಲ್ಲದೆ ಮಾಡಲ್ಪಟ್ಟ ಯಜ್ಞ, ದಾನ, ತಪಸ್ಸುಗಳು, ‘ಅಸತ್’ ಎಂದರೆ ನಿರುಪಯುಕ್ತವಾದವುಗಳು. (ಸತ್ ಅಲ್ಲದ್ದು), ಎಂದು ಹೇಳಲ್ಪಟ್ಟಿವೆ. ಇಂತಹ ಕರ್ಮಗಳಿಂದ ಇಹದಲ್ಲಿಯೂ ಸುಖವಿಲ್ಲ, ಪರದಲ್ಲಿಯೂ ಸುಖವಿಲ್ಲ.
ನಮ್ಮ ನಿತ್ಯ ವ್ಯವಹಾರದಲ್ಲಿ ಯಾವ ಕೆಲಸವನ್ನಾದರೂ ಯಶಸ್ವಿಯಾಗಿ ಮಾಡಿ ಪೂರೈಸಬೇಕಾದರೆ, ಆ ಕೆಲಸದಲ್ಲಿ, ಅದರ ಫಲದಲ್ಲಿ ನಮಗೆ ಶ್ರದ್ಧೆಯಿರಬೇಕು. ಶ್ರದ್ಧೆಯಿಲ್ಲದಿದ್ದರೆ, ನಾವು ಹಿಡಿದ ಕೆಲಸವನ್ನು ದಕ್ಷತೆಯಿಂದ ಮಾಡಲಾರೆವು. ಆ ಕೆಲಸವನ್ನು ಮಾಡುವಾಗ ಹಾಗೂ ಆನಂತರ ನಮ್ಮ ಮನಸ್ಸಿನಲ್ಲಿ ಉದ್ವೇಗವೂ, ಅಶಾಂತಿಯೂ ಇರುತ್ತದೆ. ಹೀಗೆ ಅಶ್ರದ್ಧೆಯಿಂದ ಮಾಡಿದ ಕೆಲಸವು ಈ ಲೋಕದಲ್ಲಿ ನಿರುಪಯುಕ್ತವಾಗುತ್ತದೆ. ಮುಂದಿನ ಲೋಕದಲ್ಲಿ ಸಿಗಬಹುದಾದ ಇಲ್ಲವೇ ಈ ಲೋಕದಲ್ಲಿ ಸಿಗಬಹುದಾದ ಫಲದಲ್ಲಿ ಸಹ ಶ್ರದ್ಧೆಯಿಲ್ಲದಿರುವುದರಿಂದ ಆ ಫಲವನ್ನು ಸ್ವೀಕರಿಸಲು ಮನಸ್ಸು ಸಂಪೂರ್ಣ ತಯಾರಿರುವುದಿಲ್ಲ. ಅಂದರೆ ಮನಸ್ಸು ಶಾಂತವಾಗಿರುವುದಿಲ್ಲ. ಇಂತಹ ಕರ್ಮವು ಅಹಂಕಾರದಿಂದ, ವಾಸನೆಯಿಂದ ಬಂಧಿತವಾಗಿರುತ್ತದೆ. ಆದುದರಿಂದ ಮುಂದೆ ಸಹ ಇಂತಹ ಕರ್ಮದಿಂದ ಯಾವ ಫಲವೂ ಸಿಗುವುದಿಲ್ಲ.
ಓಂ ತತ್ಸದಿತಿ
ಶ್ರೀಮದ್ಭಗವದ್ಗೀತಾ ಸೂಪನಿಪತ್ಸು ಬ್ರಹ್ಮವಿದ್ಯಾಯಾಂ ಯೋಗ ಶಾಸ್ತ್ರೇ
ಶ್ರೀಕೃಷ್ಣಾರ್ಜುನ ಸಂವಾದೇ ಶ್ರದ್ಧಾತ್ರಯ ವಿಭಾಗ ಯೋಗೋನಾಮ…
ಸಪ್ತದಶೋ„ಧ್ಯಾಯಃ