S O U L B L I S S

Loading

Bhagavad Gita – Vinayak Rao Bapat – Chapter 9

ಅಧ್ಯಾಯ-9
ರಾಜವಿದ್ಯಾರಾಜಗುಹ್ಯಯೋಗ

ಭಗವಾನ್ ಉವಾಚ
ಇದಂತುತೇಗುಹ್ಯತಮಂ ಪ್ರವಕ್ಷಾಮ್ಯನಸೂಯವೇ |
ಜ್ಞಾನಂ ವಿಜ್ಞಾನಸಹಿತಂಯಜಾÐ್ಞತ್ವಾಮೋಕ್ಷ್ಯಸೇýಶುಭಾತ್ || || 1 ||
ಅರ್ಥ: ತಪ್ಪು ಕಂಡುಹಿಡಿಯುವ ಸ್ವಭಾವವಿ¯್ಲದಿರುವ ಅರ್ಜುನನೇ, ನಾನು ಈಗ ನಿನಗೆ ಅತಿಗುಟ್ಟಾಗಿರುವ, ಮತ್ತು ಅತಿಶ್ರೇಷ್ಠವಾದ ಜ್ಞಾನವನ್ನು ಹಾಗೂ ಅದರ ಅನುಭವವನ್ನು
ತಿಳಿಸುತ್ತೇನೆ. ಇದನ್ನು ತಿಳಿದೆಯಾದರೆ ನೀನು ದುಃಖಮಯವಾದ ಸಂಸಾರದಿಂದ ಬಿಡುಗಡೆಯನ್ನು ಹೊಂದುತ್ತೀಯೆ.
ವೇದಾಂತವನ್ನು ತಿಳಿಯ¯ಪೇಕ್ಷಿಸುವವರು, ಅಂತೆಯೇ ಇತರೆ ಜ್ಞಾನವನ್ನು ತಿಳಿಯಬೇಕೆನ್ನುವವರು, ಅನಾವಶ್ಯಕವಾಗಿ ಉಪದೇಶದಲ್ಲಿಯ ತಪ್ಪುಗಳನ್ನು ಇ¯್ಲವೇ ಲೋಪದೋಷಗಳನ್ನು ಕಂಡು ಆಕ್ಷೇಪವೆತ್ತುತ್ತಾ, ವಿತಂಡವಾದವನ್ನು ಮಾಡಿದರೆ ಅವರು ಯಾವ ಜ್ಞಾನವನ್ನೂ ತಿಳಿದುಕೊಳ್ಳಲಾರರು. ಉಪದೇಶಿಸುವ ವಿಷಯದಲ್ಲಿ, ಹಾಗೂ ಉಪದೇಶದಲ್ಲಿ ಶ್ರದ್ಧೆಯನ್ನಿಟ್ಟು, ಅವನು ಹೇಳುವುದನ್ನು ಸಂಪೂರ್ಣವಾಗಿ ಕೇಳಿ ಆನಂತರ ತನಗೆ ತಿಳಿಯದ ವಿಷಯವನ್ನು ಇ¯್ಲವೆ ತರ್ಕಕ್ಕೆ ಒಪ್ಪದ ವಿಷಯಗಳನ್ನು ಮಾತ್ರ ಪ್ರಶ್ನೆ ಮಾಡಿ ತಿಳಿದುಕೊಳ್ಳಬೇಕೇ ಹೊರತು ವಿತಂಡವಾದವನ್ನು ಮಾಡಬಾರದು. ಇಂತಹ ಶಿಷ್ಯನು ಮಾತ್ರ ಉಪದೇಶಿಸ¯್ಪಡುವ ಜ್ಞಾನದ ಹಾಗೂ ಅದರ ಅನುಭವದ ಒಳಗುಟ್ಟುಗಳನ್ನು ತಿಳಿದುಕೊಳ್ಳ¯ು ಅರ್ಹನು ಎಂಬುದನ್ನು ಸೂಚಿಸುವ ದೃಷ್ಟಿಯಿಂದ ಅರ್ಜುನನನ್ನು ‘ಅನಸೂಯವೇ’ ಎಂಬ ಶಬ್ಧದಿಂದ ಸಂಬೋಧಿಸಲಾಗಿದೆ.

ರಾಜವಿದ್ಯಾರಾಜಗುಹ್ಯಂ ಪವಿತ್ರಮಿದಮುತ್ತಮಮ್ |
ಪ್ರತ್ಯಕ್ಷಾವಗಮಂಧಮ್ರ್ಯಂ ಸುಸುಖಂ ಕರ್ತುಮವ್ಯಯಮ್ || || 2 ||
ಅರ್ಥ: ಈ ಜ್ಞಾನವು ಎ¯್ಲÁ ವಿದ್ಯೆಗಳಲ್ಲಿಯೂ ರಾಜನಂತಿರುವುದೂ ರಾಜನೀತಿಯಂತೆ ಗುಟ್ಟಾಗಿಡ¯್ಪಟ್ಟದ್ದೂ, ಪವಿತ್ರವಾದುದೂ, ಶ್ರೇಷ್ಠವಾದುದೂ, ಪ್ರತ್ಯಕ್ಷವಾಗಿ ಅನುಭವಿಸಿ ತಿಳಿಯ¯್ಪಡಬಹುದಾದುದೂ, ಧಾರ್ಮಿಕ ಗುಣಗಳಿಂದ ಕೂಡಿದುದೂ, ಆಚರಿಸ¯ು ಸು¯ಭವಾದುದೂ, ಮತ್ತು ನಾಶವಿ¯್ಲದುದೂ ಆಗಿದೆ.
ಈ ಅಧ್ಯಾಯದಲ್ಲಿ ಉಪದೇಶಿಸಲಾಗುವ ವೇದಾಂತ ಧರ್ಮದ ಹಿರಿಮೆಯನ್ನು ಈ ಶ್ಲೋಕದಲ್ಲಿ ಸಂಕ್ಷೇಪವಾಗಿ ವರ್ಣಿಸಲಾಗಿದೆ. ಇದು ಎ¯್ಲÁ ಧರ್ಮಗಳಿಗೂ ಶಿಖರ ಪ್ರಾಯವಾಗಿದೆ. ಏಕೆಂದರೆ ಈ ಧರ್ಮದ ಸತ್ಯಾಂಶವು ಸಾಮಾನ್ಯ ಮಾನವನಿಗೆ ತಿಳಿಯದೆ ಇರುವುದರಿಂದ, ಎ¯್ಲರೂ ಇದನ್ನು ತಿಳಿದುಕೊಳ್ಳಬೇಕಾದ ಗುಟ್ಟಾಗಿರುವ ಧರ್ಮವಾಗಿದೆ. ಇದನ್ನು ತಿಳಿದುಕೊಂಡರೆ ಅದು ಅವನನ್ನು ಪವಿತ್ರಗೊಳಿಸುತ್ತದೆ. ಇಷ್ಟೆಲ್ಲಾ ಹಿರಿಮೆ ಇದ್ದರೂ ಸಹ ಇದನ್ನು ಸು¯ಭವಾಗಿ ತಿಳಿದುಕೊಂಡು, ಇವರಲ್ಲಿ ವರ್ಣಿಸಿರುವ ಸತ್ಯವನ್ನು ಅನುಭವಿಸಿ ಕಾಣಬಹುದಾಗಿದೆ. ಈ ಬೋಧವು ಪ್ರತಿಯೊಬ್ಬ ಜೀವಿಗೆ ಸಂಬಂಧಪಟ್ಟ ವೈಜ್ಞಾನಿಕ ಸಾಹಿತ್ಯವಾಗಿದೆ, ಜೊತೆಗೆ ಎ¯್ಲರೂ ಆಚರಿಸುವಂತೆ ಸು¯ಭವಾದುದೂ ಆಗಿದೆ. ಎ¯್ಲರೂ ಆಚರಿಸಬೇಕಾದುದೂ ಆಗಿದೆ.
ಈ ಧರ್ಮದಲ್ಲಿ ಶ್ರದ್ಧೆಯಿಲ್ಲದವರ ಗತಿ ಏನು |
ಅಶ್ರದ್ಧಧಾನಃ ಪುರುಷಾ ಧರ್ಮಸ್ವಾಸ್ಯ ಪರಂತಪ |
ಅಪ್ರಾಪ್ಯ ಮಾಂ ನಿರ್ವರ್ತಂತೇ ಮೃತ್ಯು ಸಂಸಾರವತ್ರ್ಮನಿ || || 3 ||
ಪರಂತಪೆನೇ ವಪನೇ, ಈ ಧರ್ಮದಲ್ಲಿ ಶ್ರದ್ಧೆಯಿಲ್ಲದವರು ನನ್ನನ್ನು ಸೇರಲಾರದೆ, ಜನನಮರಣಗಳಿಂದ ಕೂಡಿದ ಈ ಸಂಸಾರದಲ್ಲಿ ಪುನಃ ಪುನಃ ಜನ್ಮವೆತ್ತುತ್ತಾರೆ.
ಶ್ರದ್ಧೆ ಎಂದರೆ ಮೂಢ ನಂಬಿಕೆಯಲ್ಲ ಶಂಕರಾಚಾರ್ಯರ ವ್ಯಾಖ್ಯಾನವೂ ಇಂತಿದೆ. ಶಾಸ್ತ್ರಗಳ ವರ್ಣನೆ ಮತ್ತು ಗುರುಪದೇಶಗಳನ್ನು ಗುರೂ ಬುದ್ಧಿಯ ವಿಚಾರ ಶಕ್ತಿಯಿಂದ ಸ್ಪಷ್ಟವಾಗಿ ತಿಳಿದುಕೊಂಡು, ಆ ಗುರಿಯನ್ನು ಸಾಧಿಸಲು ಅವಶ್ಯಕವಾದ ರೀತಿಯಲ್ಲಿ ಜೀವನವನ್ನು ಪರಿವರ್ತಿಸಿಕೊಳ್ಳುವುದಕ್ಕೆ ‘ಶದ್ಧೆ’ ಎಂದು ಹೆಸರು. ಜೀವನದ ನಿಯಮಗಳಿಗೆ ‘ಧರ್ಮ’ ಎಂದು ಹೆಸರು ಪ್ರತಿಯೊಂದು ವಸ್ತುಗಳಲ್ಲಿಯೂ ಆಯಾಯಾ ವಸ್ತುವಿನ ಇರುವಿಕೆಗೆ ಅವಶ್ಯಕವಾದ ಗುಣಕ್ಕೆ ಧರ್ಮ ಎಂದು ಹೆಸರು. ಉದಾಹರಣೆ ಬೆಂಕಿಯಲ್ಲಿಯ ಉಷ್ಣತೆ. ಇದೇ ರೀತಿಯಾಗಿ ಮನುಷ್ಯನು ತಾನು ಪರಮಾತ್ಮನು ಎಂಬ ಜ್ಞಾನವನ್ನು ಪಡೆಯಲು, ತಾನು ಸುಖದಿಂದ ಬಾಳಲು ಅವನು ಕೆಲವು ನಿಯಮಗಳನ್ನು ಪಾಲಿಸಬೇಕು. ಇದು ಅವನ ಧರ್ಮ ರಾಜನು ತಾನು ರಾಜನೆಂಬುದನ್ನು ಮರೆತು, ತನ್ನ ಕಿರೀಟ, ವಸ್ತ್ರಾದಿಗಳನ್ನು ಕಿತ್ತು ಬಿಸುಟು, ಸಾಮಾನ್ಯ ಪ್ರಜೆಯಂತೆ ಊರಿನ ಗಲ್ಲಿ ಗಲ್ಲಿಗಳಲ್ಲಿ ತಿರುಗಾಡ ಹತ್ತಿದರೆ ಅವನು ರಾಜಧರ್ಮವನ್ನು ತ್ಯಜಿಸಿ, ಸಾಮಾನ್ಯ ಪ್ರಜೆಯ ಧರ್ಮದನ್ನು ಪಾಲಿಸಿದಂತಾಯಿತು. ಅಂತೆಯೇ ಮಾನವನು, ತಾನು ಪರಮಾತ್ಮನು ಎಂಬುದನ್ನು ಮರೆತು, ಇಂದ್ರಿಯ ವಿಷಯ ಸುಖಗಳೆಂಬ ಓಣಿಗಳಲ್ಲಿ ತಿರುಗಾಡಹತ್ತಿದ್ದಾನೆ. ಅವನಿಗೆ ತನ್ನ ನಿಜಸ್ಥಿತಿಯನ್ನು ತೋರಿಸುವುದಕ್ಕಾಗಿ ಅವನು ಧರ್ಮವನ್ನು ಇಲ್ಲಿ ಬೋಧಿಸಲಾಗಿದೆ.

ಮಯಾ ತತಮಿದಂ ಸರ್ವಂ ಜಗದವ್ಯಕ್ತಮೂರ್ತಿನಾ |
ಮತ್ಸ್ಯಾನಿ ಸರ್ವಭೂತಾನಿ ನ ಚಾಹಂ ತೇಷ್ವವಸ್ಥಿತಃ || || 4 ||
ಅರ್ಥ: ಅವ್ಯಕ್ತನಾದ ನಾನು ಈ ಸಂಪೂರ್ಣ ಜಗತ್ತನ್ನು ಒಳಗೂ ಹೊರಗೂ ವ್ಯಾಪಿಸಿಕೊಂಡಿದ್ದೇನೆ. ಎಲ್ಲಾ ಭೂತಗಳು ನನ್ನಲ್ಲಿವೆ. ಆದರೆ ನಾನು ಅವುಗಳಲ್ಲಿಲ್ಲ.
ಮಯಾತತಮಿದಂ ಸರ್ವಮ್ ಸರ್ವಮ- ನಾನು ಸಂಪೂರ್ಣ ಜಗತ್ತನ್ನೂ ವ್ಯಾಪಿಸಿಕೊಂಡಿದ್ದೇನೆ. ವ್ಯಾಪಕಗುಣವು ಸ್ಥೂಲವಸ್ತುವಿಗಿಂತ, ಸೂಕ್ಷ್ಮವಸ್ತುವಿನಲ್ಲಿ ಹೆಚ್ಚಾಗಿದೆ. ವಸ್ತುವು ಸೂಕ್ಷ್ಮವಾದಷ್ಟು ಅದರ ವ್ಯಾಪಕಗುಣವು ಹೆಚ್ಚುತ್ತದೆ. ಸೂಕ್ಷ್ಮಾತಿಸೂಕ್ಷ್ಮ ವಸ್ತುವಿಗಿಂತಲೂ ಸೂಕ್ಷ್ಮವಾಗಿರುವ ಮತ್ತು ಅದರೊಳಗೆ ಸಹ ವ್ಯಾಪಿಸಿರುವ ಪರವಸ್ತುವು ಇನ್ನೂ ಸೂಕ್ಷ್ಮವಾಗಿರಬೇಕು, ಮತ್ತು ಅದಕ್ಕಿಂತಲೂ ಹೆಚ್ಚು ವ್ಯಾಪಕ ಶಕ್ತಿಯನ್ನು ಹೊಂದಿರಬೇಕು. ಅಂತೆಯೇ ಇದು ಸಂಪೂರ್ಣ ಜಗತ್ತನ್ನೂ ವ್ಯಾಪಿಸಿಕೊಂಡಿದೆ. ಎಲ್ಲಾ ಭೂತಗಳೂ ನನ್ನಲ್ಲಿವೆ ನಾವು ಅವುಗಳಲಿಲ್ಲ. ಪರವಸ್ತುವು ಸಂಪೂರ್ಣ ಜಗತ್ತಿನ ಒಳಗೂ, ಹೊರಗೂ ವ್ಯಾಪಿಸಿಕೊಂಡಿದೆ ಎಂದು ಹೇಳಿ ನಂತರ ಈ ವಾಕ್ಯವನ್ನು ಹೇಳಿರುವುದರಿಂದ ಇದು ಅರ್ಥವಿಲ್ಲದ ಕೇವಲ ಶಬ್ದಾ ಡಂಬರವಿದ್ದಂತೆ ಕಾಣುತ್ತದೆ. ಏಕೆಂದರೆ, ‘ನಾನು ಅವುಗಳಲ್ಲಿಲ್ಲ’ ಎಂಬುದು ‘ಮಯಾ ತತಮಿದಂ ಸರ್ವಮ್’ ಎಂಬುದಕ್ಕೆ ವಿರೋಧವಾಗಿದೆ. ಆದರೆ ಒಳಹೊಕ್ಕು ಆಳವಾಗಿ ವಿಚಾರಮಾಡಿದರೆ ಇದರ ಭಾವವು ತಿಳಿಯುತ್ತದೆ. “ಕಂಬದಲ್ಲಿಯ ಭೂತದಂತೆ” ಭೂತದ ಕಲ್ಪನೆ ಬರಬೇಕಾದರೆ ಕಂಬವಿರಬೇಕು ಕಂಬಕ್ಕೂ ಭೂತಕ್ಕೂ ಯಾವ ತರಹದ ಸಂಬಂಧವಿದೆ ಎಂದು ಕಂಬವನ್ನು ಕೇಳಿದರೆ, ಅದು ತನ್ನಲ್ಲಿ ಭೂತವನ್ನು ಕಂಡ ಅಜ್ಞಾನಿಗೆ ಈ ರೀತಿ ಉತ್ತರವನ್ನು ಹೇಳಬಹುದು. ಭೂತವೂ ನಿಜವಾಗಿಯೂ ನನ್ನಲ್ಲಿದೆ. ಆದರೆ ನಾನು ಭೂತದಲಿಲ್ಲ. “ಇಲ್ಲಿ ಭೂತ ಎಂಬುದು ಮಾನಸಿಕ
ಕಲ್ಪನೆಯೇ ಹೊರತು ನಿಜವಾದ ಭೂತವಲ್ಲ. ಕಂಬನ್ನು ನೋಡಿ ಹೆದರಿದ ಮನುಷ್ಯನ ಮನಸ್ಸಿನ ಕಲ್ಪನೆಯಂದ ಭೂತದ ಸೃಷ್ಟಿಯಾಯಿತು. ಅವನು ಕಂಬವನ್ನೇ ಭೂತವೆಂದು ನಂಬಿದನು. ಇದು ಅಜ್ಞಾನ ಜನ್ಯವಾದದು.

ನ ಚ ಮತ್ಸ್ಯಾನಿ ಭೂತಾನಿ ಪಶ್ಯ ಮೇ ಯೋಗಮೈಶ್ವರಮ್ |
ಭೂತಭೃನ್ನ ಚ ಭೂತಸ್ಥೋ ಮಮಾತ್ಮಾ ಭೂತಭಾವನಃ || || 5 ||
ಅರ್ಥ : ಭೂತಗಳೂ ನನ್ನಲ್ಲಿಲ್ಲ. ನನ್ನ ಈ ಯೋಗ ಮಾಯೆಯನ್ನು ನೋಡು. ಎಲ್ಲಾ ಜೀವಿಗಳಿಗೂ ನಾನೇ ಆಧಾರನಾಗಿದ್ದಾಗ್ಯೂ ನಾನು ಅವುಗಳಲ್ಲಿಲ್ಲ.
ಕನಸಿನಲ್ಲಿ ಕಂಡ ನಾನಾ ತರಹದ ಸುಖಗಳು ಎಚ್ಚಾರದ ಮೇಲೆ ಇಲ್ಲವಾದಂತೆ, ಕನಸಿನಲ್ಲಿ ವಿವಿಧ ರೂಪಗಳನ್ನು ಕಂಡವನೂ, ಎಚ್ಚರಾದನಂತರ ಆ ಯಾವ ರೂಪಗಳೂ ಇಲ್ಲವೆಂದು ಹೇಳುವವನೂ ಒಬ್ಬನೇ. ಕನಸು ಕಾಣುವವನ ದೃಷ್ಟಿಯಿಂದ ಆ ಎಲ್ಲಾ ರೂಪಗಳೂ ನಿಜವಾಗಿದ್ದವು. ಎಚ್ಚರಾದವನ ದೃಷ್ಟಿಯಿಂದ ಅವೆಲ್ಲವೂ ಸುಳ್ಳು ಯಾವುದೂ ಇಲ್ಲ ಆತ್ಮವನ್ನು ಮರೆತಾಗ ಕನಸು ಕಾಣುವವನಂತೆ ಪ್ರಪಂಚದ ಎಲ್ಲಾ ದೃಶ್ಯಗಳೂ ಸತ್ಯ. ಆತ್ಮಜ್ಞಾನವಾದರೆ, ಎಚ್ಚರವಾದವನಂತೆ ಪ್ರಪಂಚದ ಎಲ್ಲಾ ದೃಶ್ಯಗಳೂ ಸುಳ್ಳು.
ಈ ವರ್ಣನೆಯು ಸುಲಭವಾಗಿ ತಿಳಿಯಲಾರದೆಂದು ಊಹಿಸಿ ಶ್ರೀಕೃಷ್ಣನು ಬೇರೆ ರೀತಿಯಲ್ಲಿ ವರ್ಣಿಸುತ್ತಾನೆ.

ಯಥಾಕಾಶಸ್ಥಿತೋ ನಿತ್ಯಂ ವಾಯುಃ ಸರ್ವತ್ರಗೋ ಮಹಾನ್ |
ತಥಾ ಸರ್ವಾಣಿ ಭೂತಾನಿ ಮತ್ಸ್ಯಾನತ್ಯುಪಧಾರಯ || || 6 ||
ಅರ್ಥ: ಮಹಾ ಬಲಶಾಲಿಯಾದ ವಾಯುವು ಎಲ್ಲೆಡೆಯಲ್ಲಿ ಚಲಿಸುತ್ತಿದ್ದಗ್ಯೂ, ಅದು ಯಾವಾಗಲೂ ಆಕಾಶದಲ್ಲಿರುವಂತೆ, ಎಲ್ಲಾ ಭೂತಗಳೂ ನನ್ನಲ್ಲಿವೆ.
ಹಿಂದಿನ ವರ್ಣನೆಯನ್ನು ಜೀರ್ಣಿಸಿಕೊಳ್ಳಲಾರದ ಅರ್ಜುನನಿಗೆ ಅದೇ ವಿಷಯವನ್ನು ಬೇರೊಂದು ರೀತಿಯಲ್ಲಿ ವಿವರಿಸಲಾಗಿದೆ. ಸ್ಥೂಲವಸ್ತುವು ಸೂಕ್ಷ್ಮ ವಸ್ತುವಿನ ಮೇಲೆ ಯಾವ ಪರಿಣಾಮವನ್ನು ಮಾಡಲಾರದು. ನಾವು ಒಬ್ಬ ಕೈದಿಯನ್ನು ಜೈಲಿನಲ್ಲಿ ಬಂಧಿಸಿಡಬಹುದು. ಆದರೆ ಅವನು ಮನಸ್ಸು ಜೈಲಿನಿಂದ ಹೊರಗೆ ಹೋಗಿ. ಅವನ ಸಂಬಂಧಿಕರೊಡನೆ ವಿಹರಿಸುವುದನ್ನು ಬಂಧಿಸಲಾಗುವುದಿಲ್ಲ. ಈ ಭಾವದ ಹಿನ್ನೆಲೆಯಲ್ಲಿ ಮೇಲಿನ ಶ್ಲೋಕವನ್ನು ಅರ್ಥಮಾಡಬೇಕು.
ಗಾಳಿಯು ಆಕಾಶದಲ್ಲಿದೆ ಅಲ್ಲಿಯೇ ಚಲಿಸುತ್ತದೆ, ಬೀಸುತ್ತದೆ, ಸುತ್ತುತ್ತದೆ ಮತ್ತು ಆಕಾಶದ ಹೊರತು ಬೇರೆ ಕಡೆಯಲ್ಲಿ ಇರಲಾರದು ಆಕಾಶವು ವಾಯುವಿಗೆ ಆಧಾರವಾಗಿದೆ. ಅದನ್ನು ಒಳಗೂ ಹೊರಗೂ ವ್ಯಾಪಿಸಿಕೊಂಡಿದೆ. ಆದಾಗ್ಯೂ ಅದು ವಾಯುವಿನಿಂದ ತಡೆಹಾಕಲ್ಪಡುವುದಿಲ್ಲ. ಅಂದರೆ ವಾಯುವು ಅದನ್ನು (ಆಕಾಶ) ಮಿತಗೊಳಿಸಲಾರದು. ಇದರಂತೆಯೇ ಪರಮಾತ್ಮ ಮತ್ತು ಭೂತಗಳ (ಸೃಷ್ಟಿಯಿಂದ ಎಲ್ಲಾ ವಸ್ತುಗಳು) ಸಂಬಂಧವನ್ನು ಊಹಿಸಿಕೊಳ್ಳಬೇಕು. ಪರಮಾತ್ಮನು ಭೂತಗಳಿಗೆ ಆಧಾರನು. ಭೂತಗಳು ಅವನಲ್ಲಿ ಬದುಕುತ್ತವೆ. ಆದಾಗ್ಯೂ ಪರಮಾತ್ಮನು ಅವುಗಳಿಂದ ಲಿಪ್ತನಾಗದೇ, ಬಂಧಿಸಲ್ಪಡದ ಬಂಧಿಸಲ್ಪಡದೇ ಸ್ವತಂತ್ರವಾಗಿರುತ್ತಾನೆ.

ಸರ್ವಭೂತಾನಿ ಕೌಂತೇಯ ಪ್ರಕೃತಿಂ ಯಾಂತಿ ಮಾಮಿಕಾಮ್ |
ಕಲ್ಪವೃಕ್ಷಯೇ ಪುನಸ್ತಾನಿ ಕಲಾಪದೌ ವಿಸೃಜಾಮ್ಯಹಮ್ || || 7 ||
ಅರ್ಥ:- ಎಲ್ಲಾ ಜೀವಿಗಳೂ-ಕೌಂತೇಯನೇ, ಕಲ್ಪಾಂತರದಲ್ಲಿ (ಪ್ರಳಯ ಕಾಲದಲ್ಲಿ ನನ್ನ ಪ್ರಕೃತಿಯಲ್ಲಿ ಸೇರುತ್ತವೆ. ಮುಂದಿನ ಕಲ್ಪವು ಪ್ರಾರಂಭವಾದಾಗ್ಯೆ ನಾನು ಅವುಗಳನ್ನು ಪುನಃ ಬಿಡುತ್ತೇನೆ ಅಂದರೆ ಸ್ಪಷ್ಟಿಸುತ್ತೇನೆ.

ಪ್ರಕೃತಿಂಸ್ವಾಮವಷ್ಟಭ್ಯ ವಿಸೃಜಾಮಿ ಪುನಃ ಪುನಃ |
ಭೂತಗ್ರಾಮಮಿಮಂ ಕೃತ್ಸ್ಮನವಶಂ ಪ್ರಕೃತೇರ್ವಶಾತ್ || || 8 ||
ಅರ್ಥ :- ನನ್ನ ಪ್ರಕೃತಿಯ ಮೂಲಕ ನಾನು ಈ ಎಲ್ಲಾ ಭೂತಸಮುದಾಯಗಳನ್ನೂ ಕೌಂತೇಯನೇ ಸೃಷ್ಟಿ ಮಾಡುತ್ತೇನೆ. ಇವು ಪ್ರಕೃತಿಯ ಸೆಳತಕ್ಕೆ ಸಿಗುವುದರಿಂದ ಪುನಃ ಪುನಃ ಜನ್ಮಕ್ಕೆ ಬರುತ್ತವೆ.
ಹಿಂದೆ ಹೇಳಿದ ವಿಷಯವನ್ನೇ ಈ ಎರಡೂ ಶ್ಲೋಕಗಳಲ್ಲಿ ಬೇರೆ ವಿಧದಿಂದ ಹೇಳಲಾಗಿದೆ. ಹೀಗೆ ಹೇಳುವ ಉದ್ದೇಶವು, ಸೃಷ್ಟಿಕರ್ತನಾದ ಬ್ರಹ್ಮನು ಸಹ ಪರಮಾತ್ಮನ ಅಧೀನನಾಗಿದ್ದಾನೆ. ಎಂಬುದನ್ನು ತಿಳಿಸುವುದಾಗಿದೆ. ಪರಮಾತ್ಮನು ಬ್ರಹ್ಮನಲ್ಲಿದ್ದುಕೊಂಡು ಸೃಷ್ಟಿಯನ್ನು ಮಾಡುತ್ತಾನೆ. ಅದೇ ಪರಮಾತ್ಮನು ಅಹಂಕಾರದಿಂದ ಕೂಡಿಕೊಂಡು ಮನುಷ್ಯನಾಗುತ್ತಾನೆ. ಒಬ್ಬನೇ ಸೂರ್ಯನ ಪ್ರತಿಬಿಂಬವು ತಿಳಿನೀರಿನ ಕೆರೆಯಿಂದ ಬಂದರೆ ಶುಭ್ರವಾಗಿ, ಸ್ಪಷ್ಟವಾಗಿರುತ್ತದೆ, ಅದೇ ಕೊಳಚೆ ನೀರಿನಿಂದ ಬಂದರೆ ಮಬ್ಬಾಗಿ ಅಸ್ಪಷ್ಟವಾಗಿರುತ್ತದೆ, ಅದರಂತೆಯೇ ಬ್ರಹ್ಮನಲ್ಲಿ ಹಾಗೂ ಸಕಲ ಜೀವಿಗಳಲ್ಲಿ ಇರುವ ಪರಮಾತ್ಮನು ಒಬ್ಬನೇ. ಇಲ್ಲಿ ‘ಪ್ರಕೃತೇರ್ವಶಾತ್’ ಎಂದರೆ, ಪರಮಾತ್ಮನು ಸೃಷ್ಟಿಮಾಡಬೇಕೆಂದು ಪ್ರಕೃತಿಗೆ ಅಪ್ಪಣೆ ಮಾಡಿದರೆ, ವಿವಿಧ ವಾಸನೆಗಳಿಂದ ಕೂಡಿದ ಜೀವಿಗಳು, ನಿಸ್ಸಹಾಯಕವಾಗಿ, ಪ್ರಕೃತಿಯು ಹೇಳಿದಂತೆ, ಭೂಮಿಯಲ್ಲಿ ಹುಟ್ಟುತ್ತವೆ. ಇವುಗಳಿಗೆ ಯಾವ ಸ್ವಾತಂತ್ರ್ಯವೂ ಇಲ್ಲ, ಆದ್ದರಿಂದಲೇ ಅವು ಪ್ರಕೃತಿಯ ಅಧೀನದಲ್ಲಿವೆ ಎಂದು ಹೇಳಲಾಗಿದೆ.

ನಚ ಮಾಂ ತಾನಿ ಕರ್ಮಾಣಿ ನಿಬಧ್ನಂತಿ ಧನಂಜಯ |
ಉದಾಸೀನವದಾಸೀನಮಸಕ್ತಂ ತೇಷು ಕರ್ಮಸು || || 9 ||
ಅರ್ಥ:- ಈ ರೀತಿಯ ಸೃಷ್ಟಿ ಕ್ರಮದಲ್ಲಿ, ಧನಂಜಯನೇ, ನಾನು ಆಸಕ್ತನಾಗಿರದೆ ಉದಾಸೀನನಾಗಿರುವುದರಿಂದ, ನನಗೆ ಈ ಕರ್ಮದಿಂದ ಲೇಪವಿಲ್ಲ.
ಚಿತ್ರಮಂದಿರದಿಂದ ಪರದೆಯ ಮೇಲೆ ರೋಮಾಂಚಿತವಾದ, ಭೀಭತ್ಸಕರವಾದ, ಆಹ್ಲಾದದಾಯಕವಾದ, ಇಲ್ಲವೇ ಬೇರೆ ತರಹದ ಎಷ್ಟೇ ಚಿತ್ರಗಳು ಬಂದು ನಟಿಸಿ ಹೋದರೂ, ಅವು ಪರದೆಯ ಮೇಲೆ ಯಾವ ತರಹದ ಮುದ್ರೆಯನ್ನೂ ಒತ್ತುವುದಿಲ್ಲ. ಚಿತ್ರವು ಮುಗಿದ ಮೇಲೆ
ಪರದೆಯು ಮೊದಲಿನಂತೆಯೇ ಶುಭ್ರವಾಗಿ ನಿಷ್ಕಳಂಕವಾಗಿರುತ್ತದೆ. ಪರದೆಯ ಮೇಲೆ
ತೋರಿಸಲ್ಪಡುವ ಎಲ್ಲಾ ಚಿತ್ರಗಳಿಗೂ, ಪರದೆಯು ಆಧಾರವಾಗಿದ್ದಾಗ್ಯೂ ಅದು ಚಿತ್ರಗಳ ಬಗ್ಗೆ ಅನಾಸಕ್ತವಾಗಿರುತ್ತದೆ. ಪರಮಾತ್ಮನು ಸೃಷ್ಟಿಯನ್ನು ಮಾಡುವುದಕ್ಕೆ ಕಾರಣನಾಗಿದ್ದಾಗ್ಯೂ, ಅವನು ಸೃಷ್ಟಿಯ ಕಾರ್ಯದಲ್ಲಿ ಅನಾಸಕ್ತವಾಗಿಯೂ, ಉದಾಸೀನನಾಗಿಯೂ, ಇರುವುದರಿಂದ ಅವನಿಗೆ ಈ ಕರ್ಮದಿಂದ ಲೇಪವಿಲ್ಲ.
ಉಗಿಯ ಇಂಜನ್ನಿನ ಚಲನೆಗೆ ಉಗಿಯು ಕಾರಣವಾಗಿದೆ. ಆ ಯಂತ್ರಕ್ಕೆ ಚಲನಾಶಕ್ತಿಯನ್ನು ಕೊಡುವುದು ಉಗಿಯೇ ಆಗಿದೆ. ಉಗಿಯಿಲ್ಲದಿದ್ದರೆ ಯಂತ್ರವು ಕೇವಲ ಕಬ್ಬಿಣದ ರಾಶಿ. ಇಂಜಿನ್ನು ವೇಳೆಗೆ ಸರಿಯಾಗಿ ಗೊತ್ತಾದ ಸ್ಥಳವನ್ನು ತಲ್ಪಿದರೆ ಉಗಿಯನ್ನು ಯಾರೂ
ಹೊಗಳುವುದಿಲ್ಲ. ಅಂತೆಯೇ ಇಂಜಿನ್ನು ಹಳಿ ತಪ್ಪಿ ಕೆಳಗೆ ಬಿದ್ದರೆ ಉಗಿಯನ್ನು ಯಾರೂ ಬಯ್ಯುವುದಿಲ್ಲ. ಏಕೆಂದರೆ ಉಗಿಯು ಇಂಜಿನ್ನಿಗೆ ಕೇವಲ ಚಾಲನ ಶಕ್ತಿಯನ್ನು ಕೊಡುತ್ತದೆ. ಮತ್ತು ಅದರ ಕಾರ್ಯದಲ್ಲಿ ಅನಾಸಕ್ತವಾಗಿ ಉದಾಸೀನವಾಗಿರುತ್ತದೆ. ಕರ್ಮದ ಪ್ರತಿಕ್ರಿಯೆಯನ್ನು ತಿಳಿಯಬೇಕಾದರೆ, ಕರ್ಮದ ಹಿಂದಿನ ಮನೋಭಾವದಿಂದ ಅಳೆಯಬೇಕು.

ಗೀತೆಯಲ್ಲಿ ‘ಯೋಗ’ ಶಬ್ದದ ಉಲ್ಲೇಖ
ಮಯಾಧ್ಯಕ್ಷೇಣ ಪ್ರಕೃತಿಃ ಸೂಯತೇ ಸುಚರಾಚರಮ್ |
ಹೇತುನಾನೇನ ಕೌಂತೇಯ ಜಗದ್ವಿಪರಿವರ್ತತೇ || || 10 ||
ಅರ್ಥ :- ನನ್ನ ಅಧ್ಯಕ್ಷತೆಯಲ್ಲಿ, ಪ್ರಕೃತಿಯು ಕೌಂತೇಯನೇ, ಈ ಪ್ರಪಂಚ ಚಕ್ರವು ತಿರುಗುತ್ತದೆ.
ಸೃಷ್ಟಿಯ ಕಾರ್ಯವನ್ನು ಮಾಡುವುದು ಪ್ರಕೃತಿ. ಪ್ರಕೃತಿಯು ಈ ಶಕ್ತಿಯನ್ನು ಪರಮಾತ್ಮನಿಂದ (ಪುರುಷ) ಪಡೆಯುತ್ತದೆ. ಇದೇ ಪ್ರಕೃತಿ ಮತ್ತು ಪುರುಷರಿಗಿರುವ ಸಂಬಂಧ. ಪರಮಾತ್ಮನ ಶಕ್ತಿಯ ವಿನಹ ಪ್ರಕೃತಿಯು ಸೃಷ್ಟಿಯನ್ನು ಮಾಡಲಾರದು.

ಅವಜಾನಂತಿ ಮಾಂಮೂಢಾ ಮಾನುಷೀಂ ತನುಮಾಶ್ರಿತಮ್ |
ಪರಂಭಾವಮಜಾನಂತೋ ಮಮಭೂತಮಹೇಶ್ವರಮ್ || || 11 ||
ಅರ್ಥ :- ಮನುಜ ಶರೀರವನ್ನು ಪಡೆದ ನಾನು ಸಾಮಾನ್ಯ ಮನುಷ್ಯನೆಂದು ಮೂಢರು ತಿಳಿಯುತ್ತಾರೆ. ನಾನು ಪರಬ್ರಹ್ಮನೆಂದು ಅವರು ತಿಳಿಯಲಾರರು.

ಮೋಘಾಶಾ ಮೋಘ ಕರ್ಮಾಣೋ ಮೋಕ್ಷ ಮೋಘ ಜ್ಞಾನಾವಿಚೇತನಃ |
ರಾಕ್ಷಸೀಮಾಸುರೀಂಚೈವ ಪ್ರಕೃತಿಂಮೋಹಿನೀ ಶ್ರಿತಾಃ || || 12 ||
ಅರ್ಥ :- ಮೂಢರಾದ ಈ ಜನರು ವ್ಯರ್ಥವಾದ ಆಸೆ, ವ್ಯರ್ಥವಾದ ಕರ್ಮ ಮತ್ತು ವ್ಯರ್ಥವಾದ ಜ್ಞಾನದಿಂದ ಕೂಡಿ, ಭ್ರಮಿಷ್ಟರಾಗಿ, ರಾಕ್ಷಸರ ಮತ್ತು ಅಸುರರ ಪ್ರಕೃತಿಯುಳ್ಳವರಾಗಿರುತ್ತಾರೆ.

ಮಹಾತ್ಮಾನಸ್ತು ಮಾಂ ಪಾರ್ಥ ದೈವೀಂ ಪ್ರಕೃತಿಮಾತ್ರಿತಾಃ ||
ಭಜಂತ್ಯನನ್ಯಮನಸೋ ಜ್ಞಾತ್ವಾ ಭೂತಾದಿಮವ್ಯಯಮ್ || || 13 ||
ಅರ್ಥ :- ಮಹಾತ್ಮರಾದರೋ, ಪಾರ್ಥನೇ, ನನ್ನ ದೈವೀ ಪ್ರಕೃತಿಯನ್ನು ಆಶ್ರಯಿಸಿ ನಾನು ನಾಶವಾಗತಕ್ಕ ಎಲ್ಲಾ ಭೂತಗಳಿಗೂ ಶಾಶ್ವತವಾದ ಆಧಾರವೆಂದು ನಂಬಿ, ನನ್ನನ್ನು ಅನನ್ಯ ಮನಸ್ಸಿನಿಂದ ಭಜಿಸುತ್ತಾರೆ.
ಶ್ರೀಕೃಷ್ಣನು ಈ ವರ್ಣನೆಯಲ್ಲಿ ಉದ್ದಕ್ಕೂ ಶ್ರೇಷ್ಟವಾದುದನ್ನು ಕನಿಷ್ಟವಾದುದರ ಜೊತೆಗೆ ಹೋಲಿಸಿ, ವಿವರಿಸುತ್ತಿದ್ದಾರೆ. ಇಲ್ಲಿ ಸಹ ಅದೇ ಪದ್ಧತಿಯನ್ನು ಅನುಸರಿಸಿದ್ದಾನೆ.
ಮನುಷ್ಯನು ಕೇವಲ ತನ್ನ ಸ್ವಾರ್ಥ ಹಾಗೂ ಇಂದ್ರಿಯಾಭಿಲಾಷೆಯಿಂದ ಪ್ರೇರಿತನಾಗಿ, ತದನುಸಾರವಾದ ಕರ್ಮವನ್ನು ಮಾಡುತ್ತಾ, ತಾನು ಮಾಡಿದುದೇ ಸರಿ ಎಂದು ತಪ್ಪಾಗಿ ತಿಳಿದುಕೊಂಡು, ವಿವೇಕಹೀನನಾಗಿ, ಕ್ರೂರವಾದ ಹಾಗೂ ಹೀನವಾದ ಆಚರಣೆಯುಳ್ಳವನಾಗುತ್ತಾನೆ. ಇಂತಹ ಜನರ ಸಂಖ್ಯೆಯೇ ಹೆಚ್ಚಾಗಿರುವ ಸಮಾಜದಲ್ಲಿ, ಮತ್ತು ಇಂತಹವರು ಅಧಿಕಾರವನ್ನು ನಡೆಯಿಸುತ್ತಿರುವ ದೇಶದಲ್ಲಿ ನೋಡಿದಲ್ಲೆಲ್ಲಾ ಸ್ವಾರ್ಥಪರ, ಕ್ರೂರ, ಹೀನ ವರ್ತನೆಯೂ, ಅನ್ಯಾಯ, ದರೋಡೆಗಳೂ ಕಂಡು ಬರುತ್ತವೆ. ಇಂತಹ ಜನರನ್ನು ರಾಕ್ಷಸರು ಅಥವಾ ಅಸುರರು ಎಂದು ಕರೆಯಲಾಗಿದೆ. ಇವರಲ್ಲಿ ವ್ಯರ್ಥವಾದ ವಿಚಾರದಿಂದ ವ್ಯರ್ಥವಾದ ಆಸೆಯು ಹುಟ್ಟುತ್ತದೆ. ಅವರು ಮಾಡುವ ಕಾರ್ಯವೂ ವ್ಯರ್ಥವಾದದ್ದಾಗುತ್ತದೆ. ಇದಕ್ಕೆ ವಿರುದ್ಧವಾದ ಗುಂಪಿನ ಜನರು – ಮಹಾತ್ಮರು- ಸದ್ವಿಚಾರವನ್ನು ಮಾಡುತ್ತಾ ಇಂದ್ರಿಯಗಳನ್ನು ನಿಗ್ರಹಿಸಿ, ಮನಸ್ಸನ್ನು ಪರಮಾತ್ಮನ ಧ್ಯಾನದಲ್ಲಿ ನಿಲ್ಲಿಸಿ, ಎಲ್ಲಾ ಭೂತಗಳಲ್ಲಿಯೂ ಪರಮಾತ್ಮನೇ ಇದ್ದಾನೆಂದು ನಂಬಿ, ಲೋಕಹಿತವೇ ತಮ್ಮ ಹಿತ ಎಂದು ತಿಳಿದು ಅನನ್ಯಭಕ್ತಿಯಿಂದ ಪರಮಾತ್ಮನನುನ ಭಜಿಸುತ್ತಾರೆ. ಇವರು ದೈವೀ ಪ್ರಕೃತಿಯವರು.

ಸತತಂ ಕೀರ್ತಯಂತೋ ಮಾಂ ಯತಂತಶ್ಚ ದೃಢವ್ರತಾಃ ||
ನಮಸ್ಯಂತಶ್ಚ ಮಾಂ ಭಕ್ತ್ಯಾ ನಿತ್ಯಯುಕ್ತಾ ಉಪಾಸತೇ || || 14 ||
ಅರ್ಥ :- ನಿತ್ಯಯುಕ್ತರು ನನ್ನ ಕೀರ್ತಿಗಳನ್ನು ಯಾವಾಗಲೂ ಹೊಗಳುತ್ತಾ ನನ್ನನ್ನು ಪಡೆಯಬೇಕಂದು, ಸತತವಾಗಿ ಪ್ರಯತ್ನಮಾಡುತ್ತಾ ದೃಢವಾದ ವ್ರತಬದ್ಧರಾಗಿ, ನನ್ನನ್ನೇ ನಮಸ್ಕರಿಸುತ್ತಾ, ಭಕ್ತಿಯಿಂದ ಉಪಾಸನೆ ಮಾಡುತ್ತಾರೆ.
ಈ ಶ್ಲೋಕದಲ್ಲಿ ಸಾಧನೆ ಮಾಡುವ ವಿವರಗಳನ್ನು ಹೇಳಲಾಗಿದೆ. ಜೊತೆಗೆ ಇಲ್ಲಿ ಜ್ಞಾನ,
ಕರ್ಮ ಮತ್ತು ಭಕ್ತಿಯೋಗಗಳ ಸಮನ್ವಯವಿದೆ. ಸಾಧಕನಿಗೆ ಮೂರು ಗುಣಗಳು ಅವಶ್ಯಕ.
(i) ಸ ತತಂಕೀರ್ತಯಂತ : ಪರಮಾತ್ಮನ ಗುಣಗಾನಗಳನ್ನು ಸತತವೂ ಮಾಡುವುದು. ವಾರಕ್ಕೊಮ್ಮೆ ಇಲ್ಲವೆ ನಿರ್ದಿಷ್ಟ ದಿನಗಳಲ್ಲಿ ಅನೇಕ ಜನರ ಸಮೂಹವನ್ನೇ ಸೇರಿಸಿ, ತಾಳಮೇಳಗಳೊಡನೆ ಭಜನೆ ಮಾಡಿದರೆ ಸಾಲದು. ಕೀರ್ತನೆಯ ಬಾಹ್ಯಕರ್ಮಕ್ಕಿಂತ ಆಂತರಿಕವಾಗಿ ಸಾಗಬೇಕು. ಸಾಮೂಹಿಕ ಭಜನೆಯು ಕೆಲವು ದೃಷ್ಟಿಯಿಂದ ಲಾಭಕರವಾದರೂ, ಸಾಧಕನು ಮಾನಸಿಕವಾಗಿ, ಇಲ್ಲವೇ ತಾನೇ ಪ್ರತ್ಯೇಕವಾಗಿ ಪರಮಾತ್ಮನ ಗುಣಗಾನಗಳನ್ನು ಮಾಡಬೇಕು. ಇಲ್ಲವೇ ಅವನ ಅಮೋಘ ಗುಣಗಳನ್ನು ಸ್ಮರಿಸಬೇಕು. ಈ ಕಾರ್ಯವು ಸತತವೂ ಸಾಗಿರಬೇಕು.
(ii) ದೃಢ ವ್ರತಾ: ಸಾಧನೆಯ ವಿಧಿನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಯಮಗಳನ್ನು ಶಾರೀರಿಕವಾಗಿ ಇಲ್ಲವೇ ಮಾನಸಿಕವಾಗಿ ಸಡಿಲುಗೊಳಿಸಬಾರದು. ವ್ರತಬದ್ಧನಾಗಿರುವಾಗ, ಇಲ್ಲವೆ ಸಾಧನೆಯು ಸಾಗಿರುವಾಗ ನಾನಾರೀತಿಯ ಆಕರ್ಷಣೆಗಳು ಬಂದು, ಮನಸದ್ಸು ಸಡಿಲವಾಗಿ, ಅವುಗಳ ಕಡೆಗೆ ಓಡಬಹುದು. ನಿಯಮಗಳನ್ನು ಕೇವಲ ಒಂದು ದಿನದ ಮಟ್ಟಿಗಾಗಿ ಸಡಲಿಸೋಣ ಎಂಬ ವಿಚಾರಬರಬಹುದು. ಆದರೆ ಇದಕ್ಕೆ ಜಗ್ಗದೆ, ನಿಯಮಗಳನ್ನು ದೃಢವಾದ ನಿರ್ಧಾರದಿಂದ ಪ್ರಯತ್ನಪೂರ್ವಕವಾಗಿ (ಯತಂತಃ) ಕಟ್ಟುನಿಟ್ಟಾಗಿ ಪಾಲಿಸಬೇಕು.
(iii) ನಮಸತ್ಯಂತಶ್ಚ – ಹಿಂದೂ ಪದ್ಧತಿಯಂತೆ ಅಡ್ಡಬಿದ್ದು ನಮಸ್ಕಾರ ಮಾಡುವುದೆಂದರೆ, ‘ನನಗೆ ನೀನೇಗತಿ’ ಎಂದು ಶರಣಾಗತನಾದಂತೆ, ಹೊರಗೆ ಶಾರೀರಿಕವಾಗಿ ಪರಮಾತ್ಮನಿಗೆ ಇಲ್ಲವೆ ಗಉರುವಿಗೆ ನಮಸ್ಕಾರ ಮಾಡುತ್ತಾ, ಒಳಗೆ ಕೆಟ್ಟ ವಿಚಾರಗಳ ಯೋಚನೆ ಮಾಡುತ್ತಿರಬಾರದು, ಶಾರೀರಿಕವಾಗಿ ಸಂಪೂರ್ಣ ಶರಣಾಗತನಾದಂತೆ, ಮಾನಸಿಕವಾಗಿ ಸಹ ಆ ಭಾವವು ಮೈಗೂಡಿರಬೇಕು. ಆದ್ದರಿಂದಲೇ ನಮಸ್ಯಂತಶ್ಚ ಎಂದು ಹೇಳಿ ಆಂತರಿಕ ನಮಸ್ಕಾರಕ್ಕೇ ಹೆಚ್ಚು ಪ್ರಾಧಾನ್ಯತೆಯನ್ನು ಕೊಡಲಾಗಿದೆ.
ಭಕ್ತ್ಯಾ: ಇಂತಹ ನಮಸ್ಕಾರವು ಆಂತರಿಕ ಭಕ್ತಿಯಿಂದ ಹುಟ್ಟಿ ಬಂದಿರಬೇಕು. ಭಕ್ತನು ತನ್ನ ಇಷ್ಟ ದೇವತೆಯೊಡನೆ ಹೊಂದಿರುವ ಐಕ್ಯತೆಯೇ ಭಕ್ತಿ.

ಜ್ಞಾನಯಜ್ಞೇನ ಚಾಪ್ಯನ್ಯೇ ಯಜಂತೋ ಮಾಮುಪಾಸತೇ ||
ಏಕತ್ವೇನ ಪೃಥಕ್ವೇನ ಬಹುಧಾ ವಿಶ್ವತೋಮುಖಮ್ || || 15 ||
ಅರ್ಥ :- ಉಳಿದ ಕೆಲವರು ‘ಜ್ಞಾನಯಜ್ಞ’ದಿಂದ, ನಾನು ಮನುಷ್ಯ ರೂಪವನ್ನು ಪಡೆದು ಬಂದವನೆಂದೂ, ಪರಬ್ರಹ್ಮನೆಂದೂ, ಎಲ್ಲಾ ಕಡೆಗೂ ಮುಖವುಳ್ಳವನೆಂದೂ, ನಾನಾ ರೂಪಗಳುಳ್ಳವನೆಂದೂ ಉಪಾಸನೆಮಾಡುತ್ತಾನೆ.
ಅಹಂಕಾರ ಜನ್ಯವಾದ ಅಜ್ಞಾನವನ್ನು ಜ್ಞಾನರೂಪದ ಅಗ್ನಿಯಲ್ಲಿ ಹೋಮಮಾಡಿ, ಅಜ್ಞಾನವನ್ನು ಸುಟ್ಟು ಹಾಕುವುದಕ್ಕೆ ‘ಜ್ಞಾನಯಜ್ಞ’ ಎಂದು ಹೆಸರು. ಜ್ಞಾನಯಜ್ಞವನ್ನು ಮಾಡಲು ಸಾಮಾನ್ಯ ಯಜ್ಞದಂತೆ ಕರ್ಮಾಂಗಗಳಿಲ್ಲ. ಇದರಲ್ಲಿ ವ್ಯಕ್ತಿಯು ಪ್ರಪಂಚದಲ್ಲಿರುವ, ಸೃಷ್ಟಿಯಾದ ಎಲ್ಲಾ ವಸ್ತುಗಳಲ್ಲಿಯೂ, ಪರಮಾತ್ಮನು ಅಖಂಡವಾಗಿದ್ದಾನೆಂದು ತಿಳಿದುಕೊಳ್ಳಲು, ಅನುಭವಿಸಲು ಪ್ರಯತ್ನ ಮಾಡುತ್ತಾನೆ. ಹೊರಗಿನ ನಾಮರೂಪಗಳು ಯಾವುದೇ ಇದ್ದರೂ ಅವೆಲ್ಲವುಗಳಲ್ಲಿಯೂ, ಅವನು, ಅಖಂಡವಾದ ಪರಮಾತ್ಮನನ್ನು ಕಾಣಲು ಯತ್ನಿಸುತ್ತಾನೆ. ವಜ್ರದ ವ್ಯಾಪಾರಿಯು ವಿವಿಧ ರೀತಿಯ ಕುಂದಣಗಳುಳ್ಳ ನಾನಾರೀತಿಯ ವಜ್ರಾಭರಣಗಳನ್ನು ಬೆಲೆ ಕಟ್ಟುವಾಗ ವಜ್ರದ ಯೋಗ್ಯತೆ ಹಾಗೂ ಹಿರಿಮೆಯ್ನಷ್ಟೇ ನೋಡುತ್ತಾನಲ್ಲದೆ ಸುಂದರವಾದ ಕುಂದಣವನ್ನಲ್ಲ. ಏಕೆಂದರೆ ಅವನಿಗೆ ಬೇಕಾದುದು, ಬೆಲೆಯುಳ್ಳದ್ದು. ಆಭರಣದಲ್ಲಿರುವ ವಜ್ರ. ಇದರಂತೆ ಜ್ಞಾನಿಯು ವಿವಿಧ ನಾಮರೂಪಗಳಲ್ಲಿ ಅಂತರಾತ್ಮನಾಗಿರುವ ಪರಮಾತ್ಮನನ್ನು ಕಾಣಬಯಸುತ್ತಾನೆ.
ಜ್ಞಾನಿಯು ಏಕಾಂತದಲ್ಲಿ ಧ್ಯಾನಮಾಡುವಾಗ ಇಲ್ಲವೆ ಯಾವಾಗಲಾದರೊಮ್ಮೆ ಪರಮಾತ್ಮನೊಂದಿಗೆ ಐಕ್ಯತಾಭಾವದಿಂದಿರುತ್ತಾನೆಂದಲ್ಲಿ ನಿಜವಾದ ಜ್ಞಾನಿಯು, ಅತಿ ಜನ ನಿಬಿಡವಾದ, ಗಲಾಟೆಯಿರು ಸಂತೆಯಲ್ಲಿರಲಿ, ಇಲ್ಲವೇ ಏಕಾಂತವಾದ ಗುಹೆಯೊಳಗಿರಲಿ, ಅಥವಾ ಬೇರೆ ಯಾವ ಸ್ಥಳದಲ್ಲಿಯದರೂ ಇರಲಿ. ಇಲ್ಲವೆ ಬೇರೆ ಎಂತಹ ವಾತಾವರಣದಲ್ಲಾದರೂ ಇರಲಿ, ಅವೆಲ್ಲವುಗಳಲ್ಲಿಯೂ ನಾನೂ ಎಲ್ಲಾ ನಾಮ ರೂಪಗಳಲ್ಲಿಯೂ ಪರಮಾತ್ಮನನ್ನೇ ಕಾಣುತ್ತಾನೆ. ಪರಮಾತ್ಮನು ಆಯಾಯಾ ರೂಪಗಳಲ್ಲಿ ನಟಿಸುತ್ತಿರುವುದನ್ನು ಕಾಣುತ್ತಾನೆ. ಹೀಗೆ ಪರಮಾತ್ಮನನ್ನು ನಮ್ಮ ನಿತ್ಯ ಜೀವನದಲ್ಲಿ ಎಲ್ಲಾ ಘಟನೆಗಳಲ್ಲಿಯೂ ಕಾಣಲು ಪ್ರಯತ್ನಿಸಬೇಕೆಂದು ವೇದಾಂತವು ಹೇಳುತ್ತದೆ.
ಎಲ್ಲಾ ವಿಧದ ಮಣ್ಣಿನ ಪಾತ್ರೆಗಳಲ್ಲಿಯೂ ಮಣ್ಣು ಅಖಂಡವಾಗಿ, ಒಂದೊಂದರಲ್ಲಿಯೂ, ಪ್ರತಿಯೊಂದರಲ್ಲಿಯೂ ಇರುವಂತೆ, ಪರಮಾತ್ಮನು ಎಲ್ಲಾ ನಾಮರೂಪಗಳಲ್ಲಿಯೂ, ಪ್ರತಿಯೊಂದರಲ್ಲಿಯೂ, ಎಲ್ಲದರಲ್ಲಿಯೂ ಇದ್ದಾನೆಂದು ತಿಳಿಯಬೇಕು. ಮಣ್ಣಿನ ಪಾತ್ರೆಯಲ್ಲಿ ಕೆಳಗೆ, ಮೇಲೆ, ಒಳಗೆ, ಹೊರಗೆ, ಎಲ್ಲ ಕಡೆಯಲ್ಲಿಯೂ ಮಣ್ಣು ಇರುವಂತೆ, ಪರಮಾತ್ಮನು ಸಹ, ಒಳಗೆ, ಹೊರಗೆ, ನಾನಾರೂಪಗಳಲ್ಲಿ ಎಲ್ಲ ಕಡೆಯೂ ಇದ್ದಾನೆ.

ಅಹಂ ಕ್ರತುರಹಂ ಯಜ್ಞಃ ಸ್ವಧಾಹಮಹಮೌಷಧಮ್ |
ಮಂತ್ರೋ„ಹಮಹಮೇವಾಜ್ಯಮಹಮಗ್ನಿರಹಂ ಹುತಮ್ || || 16 ||
ಅರ್ಥ :- ಹೋಮ ಮಾಡುವ ವಿಧಿ, ಯಜ್ಞ, ಪಿತೃಗಳಿಗೆ ಕೊಡುವ ತರ್ಪಣಾದಿಗಳು, ಔಷಧಿಯ ಗಿಡಮೂಲಿಕೆಗಳು, ವಿವಿಧ ಮಂತ್ರಗಳು, ತುಪ್ಪ, ಬೆಂಕಿ, ಇತರೆ ಹೋಮ ದ್ರವ್ಯಗಳು, ಇವೆಲ್ಲವೂ ನಾನೇ ಆಗಿದ್ದೇನೆ.
ಕರ್ಮಕಾಂಡದ ಯಜ್ಞ ಯಾಗಾದಿಗಳಲ್ಲಿ ಪರಿಚಯವಿದ್ದ ಅರ್ಜುನನಿಗೆ, ಪರಮಾತ್ಮನ, ಸರ್ವವ್ಯಾಪಿತ್ವವನ್ನು ಸ್ಪಷ್ಟೀಕರಿಸಿ ತಿಳಿಸಲು, ಯಜ್ಞದ ಶಬ್ದಗಳನ್ನೇ ಉಪಯೋಗಿಸಿ, ಯಜ್ಞದ ಪ್ರತಿಯೊಂದು ಅಂಗದಲ್ಲಿಯೂ ಪರಮಾತ್ಮನಿದ್ದಾನೆ ಎಂದು ಹೇಳಲಾಗಿದೆ. ಬಂಗಾರದಿಂದ ನಾನಾ ರೀತಿಯ ಆಭರಣಗಳನ್ನು ಮಾಡಿರುವಾಗ ಕಿವಿಯ ಲೋಲಕ್, ಮೂಗು ಬೊಟ್ಟು, ಬಳೆ, ಹಾರ, ಡಾಬು, ಇತ್ಯಾದಿ ಎಲ್ಲಾ ಆಭರಣಗಳಲ್ಲಿಯೂ ಬಂಗಾರವು ಇರುವಂತೆ, ಪ್ರಪಂಚದ ಎಲ್ಲಾ ವಸ್ತು, ಜೀವಿಗಳಲ್ಲಿಯೂ ಪರಮಾತ್ಮನಿದ್ದಾನೆಂದು ತಿಳಿದುಕೊಳ್ಳಬೇಕು.

ಪಿತಾಮಹಮಸ್ಯ ಜಗತೋ ಮಾತಾ ಧಾತಾ ಪಿತಾಮಹಾ ||
ವೇದ್ಯಂ ಪವಿತ್ರಮೋಂಕಾರ ಋಕ್ಸಾಮ ಯಜುರೇವ ಚ || || 17 ||
ಅರ್ಥ :- ನಾನೇ ಪ್ರಪಂಚದ ತಂದೆಯು, ತಾಯಿಯು, ಎಲ್ಲ ಕರ್ಮಗಳ ಫಲವನ್ನು ಕೊಡುವವನು ನಾನೇ. ನಾನು ಈ ಪ್ರಪಂಚದ ಪಿತಾಮಹನು (ಅಜ್ಜ) ತಿಳಿಯಬೇಕಾದ ಪವಿತ್ರವಾದ ಓಂಕಾರವು ನಾನು. ನಾನೇ ಋಕ್, ಯಜುಃ ಮತ್ತು ಸಾಮದೇವತೆಗಳು.

ಗತಿರ್ಭರ್ತಾ ಪ್ರಭುಃ ಸಾಕ್ಷೀ ನಿವಾಸಃ ಶರಣಂ ಸುಹೃತ್ |
ಪ್ರಭವಃ ಪ್ರಲಯಃ ಸ್ಥಾನಂ ನಿಧಾನಂ ಬೀಜಮವ್ಯಯಮ್ || || 18 ||
ಅರ್ಥ :- ಮುಟ್ಟಬೇಕಾದ ಗುರಿಯು ನಾನು. ಪ್ರಪಂಚವನ್ನು ಧರಿಸಿರುವವನು (ಆಧಾರ) ನಾನು. ಪ್ರಪಂಚದ ಒಡೆಯನೂ ನಾನೇ. ಪ್ರಪಂಚವು ಚಲಿಸುವುದನ್ನು ನಾನು ಸಾಕ್ಷಿಯಂತೆ ನೋಡುತ್ತೇನೆ. ನಾನು ಸಜ್ಜನರಿಗೆ ಆಶ್ರಯದಾತನು. ಎಲ್ಲರಿಗೂ ನಾನು ಸ್ನೇಹಿತನು. ಪ್ರಪಂಚದ ಸೃಷ್ಟಿಗೆ ನಾಶರಹಿತವಾದ ಬೀಜದ ಸಂಗ್ರಹ ಸ್ಥಾನವೂ (ಕಣಜ) ನಾನೇ.
ಪ್ರಪಂಚದ ವಿವಿಧ ಸ್ಥಾವರ ಜಂಗಮ ವಸ್ತುಗಳ ಉದಾಹರಣೆಯನ್ನು ಹೇಳಿ, ಅವೆಲ್ಲವುಗಳಲ್ಲಿಯೂ ಪರಮಾತ್ಮನು ತುಂಬಿದ್ದಾನೆಂದೂ, ಅವನ ಆಧಾರದ ವಿನಹ ಅವು ನಿಲ್ಲಲಾರವೆಂದೂ, ಹೇಳಲಾಗಿದೆ. ಪರಮಾತ್ಮನು ಇಡೀ ಪ್ರಪಂಚದಲ್ಲಿ ಅಖಂಡವಾಗಿ ವ್ಯಾಪ್ತನಾಗಿದ್ದಾನೆ. ಈ ಕಲ್ಪನೆಯು ಬರಲೆಂದು ಇಲ್ಲಿ ಕೆಲವು ಉದಾಹರಣೆಗಳನ್ನು ಹೇಳಲಾಗಿದೆ.
ಗತಿ- ನಾನೇ ಪರಮ ಗತಿಯು, ಕಂಬವನ್ನು ಕಂಬವೆಂದು ತಿಳಿದುಕೊಂಡ ಮೇಲೆ, ಭೂತ ಎಂಬ ಕಲ್ಪನೆಯು ನಾಶವಾಗಿ, ಕಂಬ ಎಂಬ ಜ್ಞಾನವು ನಿಶ್ಚಯ-ವಾಗುವಂತೆ, ಅಜ್ಞಾನದಿಂದ, ಪ್ರಪಂಚದ ವಿವಿಧ ನಾಮರೂಪಗಳನ್ನು ಆಯಾಯ ಹೆಸರಿನಿಂದ ತಿಳಿದು ಸುಖ ದುಃಖಕ್ಕೀಡಾದ ಜೀವನು, ಇದನ್ನು ಕಳೆದುಕೊಳ್ಳ ಬೇಕಾದರೆ, ಹೊರಗಿನ ನಾಮರೂಪಗಳು ಅಸತ್ಯವೆಂದೂ, ಅವುಗಳಲ್ಲಿರುವ ಪರಮಾತ್ಮನು ಮಾತ್ರ ಸತ್ಯವೆಂದೂ ತಿಳಿಯಬೇಕು. ಆದ್ದರಿಂದ ಅವನೇ ಗತಿ ಎಂದು ಹೇಳಲಾಗಿದೆ.
ಭರ್ತಾ- ಆಧಾರಭೂತನು. ಮರಳುಗಾಡು, ಮರೀಚಿಕೆಗೆ ಆಧಾರನಾಗಿದ್ದಾನೆ. ಪರಮಾತ್ಮನು ಅಜಾÐನಜನ್ಯವಾದ ಎಲ್ಲಾ ನಾಮರೂಪಗಳಿಗೂ ಆಧಾರನಾಗಿದ್ದಾನೆ.
ಪ್ರಭು- ಒಡೆಯನು, ಅಜ್ಞಾನದಿಂದ ಮನಸ್ಸಿನಲ್ಲುಂಟಾದ ನಾಮರೂಪಗಳಿಗೆ ಪರಮಾತ್ಮನು ಆಧಾರನಾದರೂ, ಅವನು ಅವುಗಳಿಂದ ಲಿಪ್ತನಾಗದೆ, ಶುದ್ಧರೂಪದಲ್ಲಿದ್ದು ಕೊಂಡು, ಅವುಗಳ ಚಲನವಲನಾದಿಗಳನ್ನು ನಿಯಂತ್ರಿಸುತ್ತಾನೆ.
ಸಾಕ್ಷೀಯ- ಸಾಕ್ಷೀ ಈ ರೀತಿಯಾಗಿ ಪ್ರಪಂಚದ ಎಲ್ಲಾ ಕಾರ್ಯಗಳಿಗೂ ಪರಮಾತ್ಮನು ಕಾರಣನಾಗಿ ಚೇತನವನ್ನು ಕೊಟ್ಟರೂ ಸಹ, ಅವನು ಅವಾವುಗಳಿಂದಲೂ ಬಂಧಿತನಾಗದೆ, ಅವುಗಳಾಚೆಗೆ ಸಾಕ್ಷೀ ರೂಪದಲ್ಲಿರುತ್ತಾನೆ. ಚಲನವಲನಾದಿಗಳನ್ನು ಕೇವಲ ನೋಡುತ್ತಿರುತ್ತಾನೆ. ಸಾಕ್ಷೀ ಎಂದರೆ ನಡೆದ ಘಟನೆಗಳನ್ನು ಹತ್ತಿರದಲ್ಲಿ ನಿಂತುಕೊಂಡು ನೋಡಿದವನು. ಅವನು ಆ ಘಟನೆಗಳಲ್ಲಿ ಸೇರಿರುವುದಿಲ್ಲ. ಮತ್ತು ಅವುಗಳಿಂದ ಲಿಪ್ತನಾಗಿರುವುದಿಲ್ಲ. ಬುದ್ಧಿಯ ಅಂತರಂಗದಲ್ಲಿ ಮನಸ್ಸಿನ ಅಖಾಡದಲ್ಲಿ ಶರೀರದ ಆಟದ ಅಂಗಳದಲ್ಲಿ ಮತ್ತು ವಿಸ್ತಾರವಾದ ಬಾಹ್ಯ ಪ್ರಪಂಚದಲ್ಲಿ ನಡೆಯುವ ಎಲ್ಲಾ ತರಹದ ಕಾರ್ಯಗಳಿಗೂ ಪರಮಾತ್ಮನು ಚೇತನವನ್ನು ಕೊಟ್ಟಾಗ್ಯೂ, ಅವುಗಳ ಚಲನವಲನಾದಿಗಳನ್ನು ನಿರ್ಲಿಪ್ತನಾಗಿ ಸಾಕ್ಷಿಯಂತೆ ನೋಡುತ್ತಿರುತ್ತಾನೆ. ಜೀವನು ಯಾವುದೇ ತರಹದ ಒಳ್ಳೆಯ, ಕೆಟ್ಟ ಕೆಲಸಗಳನ್ನು ಎಷ್ಟೇ ಗುಟ್ಟಾಗಿ ಮಾಡಿದಾಗ್ಯೂ, ಅವೆಲ್ಲವನ್ನೂ ಪರಮಾತ್ಮನು ಸಾಕ್ಷಿಯಾಗಿ ನೋಡುತ್ತಾನೆ. ನಾವು ಕೆಟ್ಟ ಕೆಲಸಗಳನ್ನು, ಕೆಟ್ಟ ವಿಚಾರಗಳ ಯೋಚನೆಯನ್ನು ಮಾಡುವಾಗ್ಯೆ ಈ ವಿಷಯವನ್ನು ಸದಾ ಜ್ಞಾಪಕದಲ್ಲಿಟ್ಟುಕೊಳ್ಳಬೇಕು.
ನಿವಾಸ : ವಾಸ ಸ್ಥಾನವು- ಮನೆ, ಸತ್ಯವು ಎಲ್ಲಾ ವಸ್ತುಗಳ ವಾಸಸ್ಥಾನವು.
ಶರಣಮ್- ಆಶ್ರಯಸ್ಥಾನವು ಸಮುದ್ರದಲ್ಲಿ ಬಿರುಗಾಳಿಯಿಂದ ಅಪಾಯ ಕಂಡಾಗ ದೋಣಿಕಾರರು ಹತ್ತಿರದ ಬಂದರದಲ್ಲಿ ಆಶ್ರಯ ಹೊಂದಿದಂತೆ, ವಿಷಯಾಸಕ್ತವಾದ ಮನಸ್ಸು ಬುದ್ಧಿಗಳಲ್ಲಿ ಉತ್ಪನ್ನವಾಗುವ ವಿಚಾರ ತರಂಗಗಳಿಂದ ಅಪಾಯ ಸೂಚನೆ ಕಂಡ ಕೂಡಲೇ ಪರಮಾತ್ಮನನ್ನು ಶರಣ ಹೋದರೆ, ಅಪಾಯದಿಂದ ತಪ್ಪಿಸಿಕೊಳ್ಳಬಹುದು, ಮತ್ತು ಮನಃಶಾಂತಿಯನ್ನು ಗಳಿಸಬಹುದು.
ಸುಹೃತ್ – ಸ್ನೇಹಿತನು. ಇಷ್ಟೆಲ್ಲಾ ಆದಾಗ್ಯೂ ಪರಮಾತ್ಮನು ಎಲ್ಲಾ ಜೀವಿಗಳ
ಸ್ನೇಹಿತನು. ಅಂದರೆ ಕೇವಲ ಸಹಾಯವನ್ನು ಅಪೇಕ್ಷಿಸುವ ಸ್ನೇಹಿತನಲ್ಲ. ಸಹಾಯವನ್ನು ಮಾಡಬೇಕಾದಾಗ್ಯೆ, ಸಂತೋಷದಿಂದಲೂ, ಪ್ರೇಮದಿಂದಲೂ, ತಾನಾಗಿಯೇ ಸಹಾಯ ಮಾಡಬಯಸುವ ಆಪ್ತ ಸ್ನೇಹಿತು.
ಬೀಜಮವ್ಯಮ್ – ಪ್ರಪಂಚದ ಸೃಷ್ಟಿ ಹಾಗೂ ಲಯ ಎರಡೂ ‘ನನ್ನಿಂದಲೇ’ ಆಗತಕ್ಕದ್ದು. ಲಯಕಾಲದಲ್ಲಿ ಪ್ರಪಂಚವೆಲ್ಲಾ ಬೀಜ ರೂಪದಲ್ಲಿ ಸಂಗ್ರಹವಾಗಿ ‘ನನ್ನಲ್ಲಿಯೇ’ ಇರುತ್ತದೆ. ಸೃಷ್ಟಿಯಾಗುವಾಗ ಅವು ಪುನಃ ‘ನನ್ನಿಂದಲೇ’ ಹುಟ್ಟುತ್ತವೆ.

ತಪಾಮ್ಯಹಮಹಂ ವರ್ಷಂ ನಿಗೃಹ್ಣಾಮ್ಯುತ್ತøಜಾಮಿ ಚ |
ಅಮೃತಂ ಚೈವ ಮೃತ್ಯುಶ್ಚ ಸದಸಚ್ಚಾಹಮರ್ಜುನ || || 19 ||
ಅರ್ಥ :- ಅರ್ಜುನನೇ, ಪ್ರಪಂಚಕ್ಕೆ ಉಷ್ಣತೆಯನು ಕೊಡುವವನು ನಾನು. ಮಳೆಯನ್ನು ಸುರಿಸುವವನು, ನಿಲ್ಲಿಸುವವನೂ ನಾನೇ. ಜೀವಿಗಳ ಅಮೃತತ್ವವೂ ಮರಣವೂ ನಾನು. ಪ್ರಪಂಚದಲ್ಲಿರುವ ಸತ್ಯ ಹಾಗೂ ಅಸತ್ಯಗಳೂ ನಾನೇ.
ಸತ್ – ಮತ್ತು ಅಸತ್ ಇವುಗಳನ್ನು ತಿಳಿಯಬೇಕಾದರೆ ಇವೆರಡಕ್ಕಿಂತಲೂ ಬೇರೆಯಾದುದೊಂದು ಬೇಕು. ಪರಮಾತ್ಮನು ಸತ್ ಮತ್ತು ಅಸತ್ ಇವೆರಡಕ್ಕೂ ಚೇತನವನ್ನು ಕೊಟ್ಟು, ಅವುಗಳಿಗೆ ಕಾರಣನಾಗಿದ್ದಾನೆ.
ಕರ್ಮಕಾಂಡೋಕ್ತ ಮಾರ್ಗದಿಂದ ಪೂಜಿಸುವವನು ತಮ್ಮ ಇಷ್ಟಾರ್ಥವನ್ನು ಹೇಗೆ ಪಡೆಯುತ್ತಾನೆ.
ತ್ರೈವಿದ್ಯಾ ಮಾಂ ಸೋಮಪಾಃ ಪೂತಪಾಪಾಃ
ಯಜ್ಞೈರಿಷ್ವ್ದಾಸ್ವರ್ಗತಿಂ ಪ್ರಾರ್ಥಯಂತೇ |
ತೇ ಪುಣ್ಯಮಾಸಾದ್ಯ ಸುರೇಂದ್ರಲೋಕ-
ಮಶ್ನಂತಿ ದಿವ್ಯಾನ್ದಿವಿ ದೇವಭೋಗಾನ್ || || 20 ||
ಅರ್ಥ :- ಮೂರು ವೇದಗಳನ್ನು ತಿಳಿದು, ಸೋಮ ಪಾನವನ್ನು ಮಾಡಿದ. ಪಾಪಗಳನ್ನು ಕಳೆದುಕೊಂಡು ಶುದ್ಧರಾದವರು ಯಜ್ಞಯಾಗಾದಿಗಳಿಂದ ನನ್ನನ್ನು ಅರ್ಚನೆಮಾಡಿ ತಾವು ಅಪೇಕ್ಷೆಪಟ್ಟ ಸ್ವರ್ಗಲೋಕಕ್ಕೆ ಹೋಗುತ್ತಾರೆ. ಅಲ್ಲಿ ದೇವತೆಗಳ ಮಧ್ಯದಲ್ಲಿ ಅನೇಕ ವರ್ಷಗಳ ಕಾಲ ಸ್ವರ್ಗ ಸುಖವನ್ನು ಅನುಭವಿಸುತ್ತಾರೆ.

ತೇ ತಂ ಭುಕ್ತ್ವಾಸ್ವರ್ಗಲೋಕಂ ವಿಶಾಲಂ –
ಕ್ಷೀಣೇ ಪುಣ್ಯೇ ಮರ್ತೃಲೋಕಂ ವಿಶಂತಿ |
ಏವಂ ತ್ರಯೀಧರ್ಮಮನುಪ್ರಪನ್ನಾ –
ಗತಾಗತಂ ಕಾಮಕಾಮಾ ಲಭಂತೇ || || 21 ||
ಅರ್ಥ :- ಅಲ್ಲಿ ಅವರು ವಿಶಾಲವಾದ ಸ್ವರ್ಗಸುಖವನ್ನು ಅನುಭವಿಸಿ, ಅವರ ಪುಣ್ಯವು ಖರ್ಚಾದ ಮೇಲೆ ಪುನಃ ಭೂಲೋಕದಲ್ಲಿ ಜನಿಸುತ್ತಾರೆ. ವೇದೋಕ್ತವಾದ ಯಜ್ಞಯಾಗಾದಿ ಕರ್ಮಗಳಲ್ಲಿ ನಿರತರಾದ ಅವರು ಈ ರೀತಿಯಾಗಿ ಹಿಂದಕ್ಕೂ, ಮುಂದಕ್ಕೂ ತಿರುಗುತ್ತಲೇ ಇರುತ್ತಾರೆ.
ಆಸೆಯಿಲ್ಲದೆ ಪರಮಾತ್ಮನನ್ನು ಧ್ಯಾನಿಸುವವರಿಗೇನಾಗುತ್ತದೆ?

ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮ ಮ ಮ್ ವಹಾಮ್ಯಹಮ್ || || 22 ||
ಅರ್ಥ :- ಅನನ್ಯವಾದ ಭಕ್ತಿಯಿಂದ (ಯಾವ ತರಹದ ಆಸೆಯನ್ನೂ ಇಟ್ಟುಕೊಳ್ಳದೆ) ನನ್ನನ್ನು ಧ್ಯಾನಮಾಡುವವರ ಹಾಗೂ ಉಪಾಸನೆ ಮಾಡುವ ನಿತ್ಯಯುಕ್ತರ ಯೋಗಕ್ಷೇಮದ ಜವಾಬ್ದಾರಿಯನ್ನು ನಾನು ಹೊತ್ತುಕೊಳ್ಳುತ್ತೇನೆ. ಯೋಗ ಎಂದರೆ ಬೇಕಾದುದನ್ನು ಹೊಸದಾಗಿ ಸಂಪಾದಿಸುವುದು. ಕ್ಷೇಮ ಎಂದರೆ ಸಂಪಾದಿಸಿದುದನು ಕಾಪಾಡುವುದು.
ಈ ಪ್ರಾಮುಖ್ಯವಾದ ಶ್ಲೋಕವು ಇಡೀ ಗೀತೆಯ ಮಧ್ಯಭಾಗದಲ್ಲಿರುವುದು (ಸುಮಾರು) ಒಂದು ವಿಶೇಷ. ಇದು ಪ್ರಾಮುಖ್ಯವಾಗಿರುವಂತೆ ಭಾವಪೂರ್ಣವೂ ಆಗಿದೆ. (701 ಶ್ಲೋಕಗಳಿರುವ ಗೀತೆಯಲ್ಲಿ ಇದು 360ನೆಯ ಶ್ಲೋಕ)
ಅನನ್ಯ ಎಂಬ ಶಬ್ದಕ್ಕೆ ಎರಡು ಅರ್ಥವಿದೆ.
(1) ಬೇರೆ ಇಲ್ಲದ್ದು – ಅಂದರೆ ಸಾಧಕನು ತನ್ನ ಅತ್ಮ ಮತ್ತು ಪರಮಾತ್ಮ ಇಬ್ಬರೂ ಒಂದೇ ಎಂಬ ಭಾವವನ್ನೂ ಜ್ಞಾನವನ್ನೂ ಹೊಂದಿ ಧ್ಯಾನಮಾಡುವುದು. (2) ಮನಸ್ಸಿನಲ್ಲಿ ಬೇರೆ ವಿಚಾರವನ್ನು ಚಿಂತಿಸದೆ ಏಕಾಗ್ರತೆಯಿಂದ ಪರಮಾತ್ಮನೊಬ್ಬನನ್ನೇ ಧ್ಯಾನಿಸುವುದು. ಈ ಎರಡೂ ಅರ್ಥಗಳು ಸಾಧುವಾಗಿವೆ. ಹೀಗೆ ಏಕಾಗ್ರತೆಯಿಂದ ಧ್ಯಾನಮಾಡುವ ಸಾರ್ಥಕನ ಯೋಗಕ್ಷೇಮಗಳ ಹೊರೆಯನ್ನು ತಾನು ಹೊತ್ತು ಕೊಂಡಿರುವುದಾಗಿ ಪರಮಾತ್ಮನು ಉಪಾಸನೆಯನ್ನು ಮಾಡುವುದು ಅವಶ್ಯಕ. ಕೇವಲ ಉಪಾಸನೆಯಲ್ಲ ಇದರ ಹಿಂದೆ ‘ಪರಿ’ ಎಂಬ ಉಪಸರ್ಗವಿದೆ. ಇದರ ಅರ್ಥವೇನೆಂದರೆ ಉಪಾಸನೆಯಲ್ಲಿ ಸಂಪೂರ್ಣ ಶಕ್ತಿಯನ್ನೂ ವಿನಿಯೋಗಿಸಬೇಕು. ಏಕಾಗ್ರತೆ, ಸತತ ಪ್ರಯತ್ನ, ಇವುಗಳ ಜೊತೆಗೆ ಸತತವಾಗಿ ಆತ್ಮನಿಗ್ರಹವು (ನಿತ್ಯಾಭಿಯುಕ್ತ ಅಥವಾ ನಿತ್ಯಯುಕ್ತ) ಜೋಡಿಸಬೇಕೆಂದು ಹೇಳಲಾಗಿದೆ.
ಯೇ„ಷ್ಯನ್ಯದೇವತಾ ಭಕ್ತಾ ಯಜಂತೇ ಶ್ರದ್ಧಯಾನ್ವಿತಾಃ |
ತೇ„ಪಿ ಮಾಮೇವ ಕೌಂತೇಯ ಯಜಂತ್ಯವಿಧಿಪೂರ್ವಕಮ್ || || 23 ||
ಅರ್ಥ :- ಭಕ್ತರು ಶ್ರದ್ಧೆಯಿಂದ ಕೂಡಿದವರಾಗಿ ಬೇರೆ ದೇವತೆಗಳನ್ನು ಸಹ ಅರ್ಚಿಸುತ್ತಾರೆ. ಇವರು ಕೌಂತೇಯನೇ, ತಪ್ಪು ದಾರಿಯಿಂದಲೇ ಆದಾಗ್ಯೂ, ಆಯಾ ದೇವತೆಗಳ ಮುಖಾಂತರ ನನ್ನನ್ನೇ ಅರ್ಚಿಸುತ್ತಾರೆ.
ಅಹಂ ಹಿ ಸರ್ವಯಜ್ಞಾನಾಂ ಭೋಕ್ತಾ ಚ ಪ್ರಭು ರೇವಚ |
ನ ತು ಮಾಮಭಿಜಾನಂತಿ ತತ್ತ್ವೇನಾತಶ್ಚ್ಯವಂತಿ ತೇ || || 24 ||
ಅರ್ಥ :- ಏಕೆಂದರೆ ಎಲ್ಲಾ ಯಜ್ಞಗಳ ಒಡೆಯನೂ, ಅವುಗಳನ್ನು ಸ್ವೀಕರಿಸುವವನೂ ನಾನೇ ಆಗಿದ್ದೇನೆ. ಆದರೆ ಜನರು ನನ್ನನ್ನು ತತ್ವಶಃ ತಿಳಿಯದೆ ಪುನಃಪುನಃ ಕೆಳಗೆ ಬೀಳುತ್ತಾರೆ. (ಭೂಲೋಕದಲ್ಲಿ ಹುಟ್ಟುತ್ತಾರೆ).
ಜನರು ಅರ್ಚಿಸುವ ಎಲ್ಲಾ ದೇವತೆಗಳೂ ಪರಮಾತ್ಮನ ಬೇರೆಬೇರೆ ರೂಪಗಳು. ‘ನಾನು’ ಎಲ್ಲಾ ದೇವತೆಗಳಿಗೂ ಒಡೆಯನು, ಚಾಲನಾಶಕ್ತಿ ಕೊಡುವವನು. ಎಂಬುದನ್ನು ತಿಳಿಯದೆ, ಕೆಲವು ಇಷ್ಟಾರ್ಥ ಸಿದ್ಧಿಗಾಗಿ, ಆಸೆಯಿಂದ ಮನುಷ್ಯರು ನಾನಾ ದೇವತೆಗಳನುನ ಅರ್ಚಿಸಿ ‘ನಾನೇ’ ನಿರ್ದಿಷ್ಟಗೊಳಿಸಿದ ಫಲಗಳನ್ನು ಪಡೆಯುತ್ತಾರೆ. ಪರಮಾತ್ಮನು ಸರ್ವವ್ಯಾಪಿಯು, ಸರ್ವಶಕ್ತನು ಎಂಬುದನ್ನು ತಿಳಿಯಲಾರದೇ ವ್ಯಕ್ತಿಗತ ದೇವತೆಗಳನ್ನು ಅರ್ಚಿಸುವುದರಿಂದ ಅವರ ಅರ್ಚನೆಯು ಅಶಾಸ್ತ್ರೀಯ (ಅವಿಧಿ ಪೂರ್ವಕ) ವಾಗುತ್ತದೆ. ಆದಾಗ್ಯೂ, ಅವರು ಅರ್ಚಿಸುವ ದೇವತೆಗಳಲ್ಲಿ ಸಹ ‘ನಾನು’ ಇರುವುದರಿಂದ, ಅವರು ಆ ರೂಪದಲ್ಲಿ ‘ನನ್ನನ್ನೇ’ ಅರ್ಚಿಸಿದಂತಾಗುತ್ತದೆ. ‘ನಾನು’ ಆ ಪೂಜೆಯನ್ನು ಸ್ವೀಕರಿಸುತ್ತೇನೆ ಎಂದು ಪರಮಾತ್ಮನು ಹಿಂದಿನ ಶ್ಲೋಕದಲ್ಲಿ ಹೇಳಿದ್ದಾನೆ. ಇಂತಹ ಭಕ್ತರು ಯಜ್ಞಗಳ ಮೂಲಕ ಅರ್ಚಿಸಿದ ಅರ್ಚನೆಯನ್ನು ‘ನಾನೇ’ ಸ್ವೀಕರಿಸುತ್ತೇನೆ, ಎಂದು ಪರಮಾತ್ಮನು ಹೇಳಿದ್ದಾನೆ. ಆದರೆ ಇಂತಹ ಯಜ್ಞಗಳಿಂದ ಅವರು ‘ನನ್ನನ್ನು’ ವಸ್ತುತಃ ತಿಳಿಯಲಾರದೆ, ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಒಂದಾದ ಮೇಲೊಂದರಂತೆ ನಾನಾ ದೇವತೆಗಳನ್ನು ಅರ್ಚಿಸುತ್ತಾ ಪುನಃ ಪುನಃ ಜನ್ಮವೆತ್ತುತ್ತಲೇ ಇರುತ್ತಾರೆ. ಆದರೆ “ನನ್ನನ್ನು” ಮಾತ್ರ ಪಡೆಯುವುದಿಲ್ಲ.
ಹಿಂದೆ ತಿಳಿಸಿದ “ಯಜ್ಞ”ದ ವ್ಯಾಖ್ಯೆಯಂತೆ, ಈ ಜನರು ಇಂದ್ರಿಯ ಸುಖಾಭಿಲಾಷೆಗಾಗಿ, ಇಂದ್ರಿಯಗಳ ಅಧಿದೇವತೆಗಳನ್ನು ಅರ್ಚಿಸುತ್ತಾ, ನಾನಾ ರೀತಿಯ ಕರ್ಮಗಳಲ್ಲಿ ನಿರತರಾಗಿರುವುದರಿಂದ, ಅವರು ಇಂದ್ರಿಯ ನಿಗ್ರಹವನ್ನಾಗಲೀ ಏಕಾಗ್ರತೆಯನ್ನಾಗಲೀ ಗಳಿಸದೆ, ‘ನನ್ನನ್ನು’ ಧ್ಯಾನಿಸಲಾರದೆ ಸಂಸಾರದ ಬಂಧನದಲ್ಲಿ ಸಿಕ್ಕುತ್ತಾರೆ.

ಯಾಂತಿ ದೇವವ್ರತಾ ದೇವಾನ್ ಪಿತೃನ್ಯಾಂತಿ ಪಿತೃವ್ರತಾಃ |
ಭೂತಾನಿ ಯಾಂತಿ ಭೂತೇಜ್ಯಾಯಾಂತಿ ಮದ್ಯಾಜಿನೋ„ಪಿ ಮಾಮ್ || || 25 ||
ಅರ್ಥ :- ದೇವತೆಗಳನ್ನು ಅರ್ಚಿಸುವವರು ದೇವಲೋಕವನ್ನು, ಪಿತೃಗಳನ್ನು ಅರ್ಚಿಸುವವರು ಪಿತೃಲೋಕವನ್ನೂ, ಭೂತಗಳನ್ನು ಅರ್ಚಿಸುವವರು ಅವುಗಳ ಲೋಕವನ್ನು ಸೇರುತ್ತಾರೆ. ನನ್ನನ್ನು ಅರ್ಚಿಸುವವರು ನನ್ನನ್ನೇ ಸೇರುತ್ತಾರೆ.
ನಾವು ಸದಾ ಯಾವ ಚಿಂತನೆಯನ್ನು ಮಾಡುತ್ತೇವೆಯೋ ಅದರಂತೆ ಆಗುವುದು ಸ್ವಾಭಾವಿಕ. ಇದೇ ತತ್ವವನ್ನು ಇಲ್ಲಿ ವಿವರಿಸಲಾಗಿದೆ. ದೇವತೆಗಳನ್ನು ಅರ್ಚಿಸುವವರು ದೇವಲೋಕವನ್ನು ಸೇರುತ್ತಾರೆ. ಹಿಂದೆ ತಿಳಿಸಿದ ದೇವತೆಗಳು ಎಂಬ ಶಬ್ದ ಅರ್ಥದಂತೆ, ‘ಇಂದ್ರಿಯಗಳ ಅಧಿದೇವತೆಗಳನ್ನು ಅರ್ಚಿಸುವವರು ಇಂದ್ರಿಯ ಸುಖಗಳನ್ನು ಭೋಗಿಸುತ್ತಾರೆ. ಪಿತೃಗಳ ಅರ್ಚನೆಯನ್ನು ಮಾಡುವವರು ಪಿತೃಗಳ ಲೋಕಕ್ಕೆ ಹೋಗುತ್ತಾರೆ. ಇದಕ್ಕೆ ಇನ್ನೊಂದು ಅರ್ಥವನ್ನು ಹೇಳಬಹುದು. ತಮ್ಮ ಪಿತೃಗಳ ಸಂಸ್ಕøತಿ, ಆಚಾರ, ವ್ಯವಹಾರಗಳನ್ನು ತಿಳಿದುಕೊಂಡು, ಅದನ್ನೇ ಧ್ಯಾನಮಾಡುತ್ತಾ, ಅದೇ ರೀತಿಯ ಸಂಸ್ಕøತರಾಗಿ ತಮ್ಮ ಪಿತೃಗಳಂತೆ ಆಗುತ್ತಾರೆ. ಭೂತಗಳನ್ನು ಅರ್ಚಿಸುವವರು ಭೂತಗಳನ್ನು ಸೇರುತ್ತಾರೆ. ಇಲ್ಲಿ ಭೂತಗಳೆಂದರೆ ವ್ಯವಹಾರದಲ್ಲಿರುವ ‘ದೆವ್ವ-ಭೂತ’ ಎಂಬ ಸೂಕ್ಷ್ಮ ಅವ್ಯಕ್ತ ಜೀವಿಗಳು ಎಂಬ ಅರ್ಥದ ಜೊತೆಗೆ ಇನ್ನೊಂದು ಅರ್ಥವೂ ಇದೆ. ಭೂತ ಎಂದರೆ ಪ್ರಪಂಚದ ಮೂಲ ಪಂಚಮಹಾಭೂತಗಳು ಮತ್ತು ಅವುಗಳಿಂದ ಉತ್ಪನ್ನವಾದ ಮೂಲದ್ರವ್ಯಗಳೆಂದೂ ತಿಳಿಯಬಹುದು. ಭೂತಗಳ ಅರ್ಚನೆ ಅಂದರೆ ಪಂಚಮಹಾಭೂತಗಳ ವೈಜ್ಞಾನಿಕ ವಿಶ್ಲೇಷಣೆ ಮತ್ತು ಅವುಗಳಿಗೆ ಸಂಬಂಧಪಟ್ಟ ರಸಾಯನಶಾಸ್ತ್ರ, ಭೌತಶಾಸ್ತ್ರ, ವೈದ್ಯಶಾಸ್ತ್ರ, ಶಿಲ್ಪಶಾಸ್ತ್ರ, ಖಗೋಳಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ ಮೊದಲಾದ ವಿಜ್ಞಾನಗಳನ್ನು ಆರಾಧಿಸುವ ವಿಜ್ಞಾನಿಗಳ ಸತತ ಸಂಶೋಧನೆ ಎಂಬ ಅರ್ಥವೂ ಆಗುತ್ತದೆ ಅಥರ್ವವೇದದಲ್ಲಿ ಎಲ್ಲಾ ಶಾಸ್ತ್ರಗಳನ್ನೂ ವಿವರಿಸಿರುವುದನ್ನು ಸಹ ಕಾಣಬಹುದು. ವಿಜ್ಞಾನಿಗಳು ಈ ರೀತಿಯ ವಿವಿಧ ಶಾಸ್ತ್ರಗಳಲ್ಲಿ ಮಾಡುವ ಅಭ್ಯಾಸ ಹಾಗೂ ಸಂಶೋಧನೆಗಳೂ ಭೂತಗಳ ಅರ್ಚನೆ ಎಂದು ತಿಳಿಯಬೇಕು. ಪರಮಾತ್ಮನನ್ನು ಅರ್ಚಿಸುವವರು ಪರಮಾತ್ಮನನ್ನು ಸೇರುತ್ತಾರೆ.

ನನ್ನ ಅರ್ಚನೆಗೆ ಆಡಂಬರ ಬೇಡ. ಭಕ್ತಿಯೊಂದೇ ಸಾಕು.
ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ |
ತದಹಂ ಭಕ್ತ್ಯಾಪಹೃತಮಶ್ನಾಮಿ ಪ್ರಯತಾತ್ಮನಃ || || 26 ||
ಅರ್ಥ :- ಧರ್ಮ ಎಂದರೆ ನಿರ್ದಿಷ್ಟ ಕರ್ಮಾಂಗಳನ್ನು ಆಚರಿಸುವುದು. ಎಂದು ಅರ್ಜುನನ ಕಲ್ಪನೆಯಿತ್ತು. ಅದು ತಪ್ಪೆಂದು ತೋರಿಸಿ ಆತನನ್ನು ತಿದ್ದಲು ಈ ಶ್ಲೋಕವನ್ನು ಹೇಳಲಾಗಿದೆ. ಭಕ್ತನು ಪರಮಾತ್ಮನಿಗೆ ಅರ್ಪಿಸಿದುದು ಏನು? ಮತ್ತು ಎಷ್ಟು? ಎಂಬುದನ್ನು ಸ್ಥೂಲ ದ್ರವ್ಯಗಳ ಪ್ರಮಾಣದಿಂದ ಅಳೆಯಬಾರದು. ಅದನ್ನು ಹೇಗೆ ಗಳಿಸಿದನು. ಮತ್ತು ಹೇಗೆ ಅರ್ಪಿಸಿದನು ಎಂಬ ಮನೋಭಾವವನ್ನು ನೋಡಿ ನಿರ್ಣಯಿಸಬೇಕು. ಅರ್ಪಿಸಿದ ದ್ರವ್ಯಕ್ಕೆ ಪ್ರಾಪಂಚಿಕ ವ್ಯವಹಾರ ದೃಷ್ಟಿಯಿಂದ ಮಹತ್ತರವಾದ ಬೆಲೆಯಿರಬಹುದು. ಆದರೆ ಅರ್ಪಣೆಯ ಮನೋಭಾವದ ಹಿನ್ನೆಲೆಯು ಭಕ್ತಿಯಿಂದ ಕೂಡಿರದಿದ್ದರೆ, ಅದು ವ್ಯರ್ಥವೇ ಸರಿ. ಅದಕ್ಕೆ ಕಾಸಿನ ಬೆಲೆಯೂ ಇಲ್ಲ. ಇದೇ ರೀತಿಯಾಗಿ ಅರ್ಪಿಸಿದ ದ್ರವ್ಯವು ವ್ಯವಹಾರಿಕವಾಗಿ ಬೆಲೆಯಿಲ್ಲದ ವಸ್ತುವಿರಬಹುದು. – ಕೇವಲ ನೀರು- ಇದನ್ನು ಅರ್ಪಿಸುವಾಗ ಭಕ್ತಿ ಮತ್ತು ಹೃದಯದ ಆದ್ರ್ರತೆಯಿದ್ದರೆ ಅದೇ ಅಮೃತವಾಗುತ್ತದೆ. ಅದಕ್ಕೆ ಬೆಲೆ ಹೆಚ್ಚು. ಹೀಗೆ ಕೊಡುವ ವಸ್ತುವು ಏನೇ ಇರಲಿ, ಅದನ್ನು ಅರ್ಪಿಸುವಾಗ ಭಕ್ತಿ ಮತ್ತು ಹೃದಯದ ಆದ್ರ್ರತೆ ಇರಬೇಕು. ಇಲ್ಲಿ ಅರ್ಪಣೆ ಮಾಡುವಾಗ, ಅರ್ಪಿಸುವ ವಸ್ತು ಕೇವಲ ಒಂದು ಸಾಧನ. ಊಟ ಮಾಡುವಾಗ ನಾವು ಕೈಯನ್ನು ಪದೇ ಪದೇ ತಟ್ಟೆಯಿಂದ ಎತ್ತಿ ಬಾಯಿಯ ಹತ್ತಿರ ಒಯ್ಯುತ್ತೇವೆ. ಆದರೆ ಊಟದ ಕೊನೆಯಲ್ಲಿ ಕೈಯು ಮಾತ್ರ ಮೊದಲಿನಂತೆಯೇ ಇರುತ್ತದೆ. ಆಹಾರವನ್ನು ತಟ್ಟೆಯಿಂದ ತೆಗೆದು ಹೊಟ್ಟೆಗೆ ಹಾಕಲು ಕೈಯು ಒಂದು ಸಾಧನವಾದಂತೆ, ಭಕ್ತನು ತನ್ನ ಭಕ್ತಿಯನ್ನೂ ಶ್ರದ್ಧೆಯನ್ನೂ ಪರಮಾತ್ಮನಿಗೆ ಅರ್ಪಿಸಲು, ತಲುಪಿಸಲು, ಪತ್ರ, ಪುಷ್ಪಾದಿಗಳು ಸಾಧನವಾಗಿವೆ. ಇವುಗಳಿಂದ ಪರಮಾತ್ಮನಿಗೆ ಆಗಬೇಕಾದುದೇನೂ ಇಲ್ಲ. ಏಕೆಂದರೆ ಪರಮಾತ್ಮನೇ ಸೃಷ್ಟಿಸಿದ ಈ ವಸ್ತುಗಳನ್ನು ಅವನ ಹೂದೋಟದಿಂದಲೇ ಕದ್ದು ತಂದ ನಾವು ಅವನಿಗೆ ಅರ್ಪಿಸುತ್ತಿದ್ದೇವಲ್ಲವೇ? ಅಂದರೆ, ಪರಮಾತ್ಮನಿಗೆ ನಾವು ಒಂದು ಬೆಲೆ ಬಾಳುವ ದೊಡ್ಡ ವಸ್ತುವನ್ನು ಕೊಟ್ಟೆವು ಎಂಬ ಅಹಂಕಾರವಿಲ್ಲದೆ, ಅದರ ಹಿನ್ನೆಲೆಯಲ್ಲಿ ಶುದ್ಧ ಮನಸ್ಸು ಮತ್ತು ಭಕ್ತಿ ಇರಬೇಕಾದುದು ಮುಖ್ಯವಾದುದು ಎಂಬುದನ್ನು ತಿಳಿಯುವುದು ಅವಶ್ಯಕ.

ಯತ್ಯದೋಷಿ ಯತ್ಕರೊಶಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್ |
ಯತ್ತಪಸ್ಯಸಿ ಕೌಂತೇಯ ತತ್ಕುರುಷ್ವ ಮದರ್ಪಣಮ್ || || 27 ||
ಅರ್ಥ :- ಕೌಂತೇಯನೇ, ನೀನು ಮಾಡುವ ಎಲ್ಲಾ ಕರ್ಮಗಳು, ತಿನ್ನುವ ಆಹಾರ, ಯಜ್ಞ, ದಾನ, ತಪಸ್ಸು ಇವುಗಳೆಲ್ಲವನ್ನೂ ನನಗೆ ಅರ್ಪಣೆ ಮಾಡಿಬಿಡು (ನಾನು ಅವುಗಳನ್ನು ಸ್ವೀಕರಿಸುತ್ತೇನೆ ಎಂಬ ಭಾವ).
ನಾವು ಪರಮಾತ್ಮನ ಸೇವೆ ಮತ್ತು ಧ್ಯಾನ ಇವುಗಳ ದೃಷ್ಟಿಯಿಂದ ಮಾಡುವ ಎಲ್ಲಾ ಕರ್ಮಗಳಲ್ಲಿಯೂ, ಬಾಹ್ಯ ಕರ್ಮಗಳಿಗಿಂತ ಅದರ ಹಿಂದಿರುವ ಮಾನಸಿಕ ಭಾವಕ್ಕೆ ಬೆಲೆ ಹೆಚ್ಚು. ಕರ್ಮದ ಬೆಲೆಯನ್ನು ಮಾನಸಿಕ ಹಿನ್ನೆಲೆಯಿಂದಲೇ ನಿರ್ಧರಿಸಬೇಕು. ಗೀತೆಯಲ್ಲಿ ಇದೇ ಮಾತನ್ನು ಉದ್ದಕ್ಕೂ ಒತ್ತಿ ಒತ್ತಿ ಹೇಳಲಾಗಿದೆ. ಆದಾಗ್ಯೂ ಸಾಧಕನು ಇದನ್ನು ಪದೇಪದೇ ಮರೆಯುತ್ತಿದ್ದಾನೆ.
ಅನೇಕ ಸಾರಿ ಜನರು “ನನ್ನಲ್ಲಿ ಇಷ್ಟು ಸಂಪತ್ತಿದ್ದರೆ ನಾನು ಪರಮಾತ್ಮನಿಗೆ, ಅದನ್ನು ಕೊಡುತ್ತಿದ್ದೆ. ಇದನ್ನು ಕೊಡುತ್ತಿದ್ದೆ. ಪಾಪಿಯಾದ, ದುರದೃಷ್ಟನಾದ ನನ್ನಲ್ಲಿ ಬಿಡಿಕಾಸೂ ಇಲ್ಲ” ಎಂಬುದಾಗಿ ನಾನಾ ರೀತಿಯಲ್ಲಿ ಪರಿತಪಿಸುವುದನ್ನು ನೋಡುತ್ತೇವೆ. ಸರ್ವ ಸಂಪತ್ತುಗಳಿಗೂ ಒಡೆಯನಾದ ಪರಮಾತ್ಮನಿಗೆ ನಾವು ಕೊಡುವ ವಸ್ತುಗಳಿಂದ ಆಗಬೇಕಾದುದೇನೂ ಇಲ್ಲ. ಮೇಲಾಗಿ ನಾವು ಕೊಡುವ ಯಾವ ವಸ್ತುವೇ ಆದರೂ ಅದು ಪರಮಾತ್ಮನಿಗೇ ಸೇರಿದ್ದಾಗಿದೆ. ಆದುದರಿಂದ ಕೊಡುವುದಕ್ಕೆ ತನ್ನಲ್ಲಿ ಇಲ್ಲ ಎಂಬ ವ್ಯಥೆ ಬೇಡ. ಕೊಡಬೇಕೆಂಬ ಶ್ರದ್ಧೆ ಮತ್ತು ಭಕ್ತಿ ಮಾತ್ರ ಇದ್ದರೆ ಸಾಕು. ಕೇವಲ ಒಂದು ಹೂವಿನ ಎಸಳನ್ನಾಗಲೀ, ಗಿಡದ ಎಲೆಯನ್ನಾಗಲೀ, ಅಥವಾ ಕೇವಲ ನೀರನ್ನಾಗಲೀ ಕೊಟ್ಟರೂ ಸಾಕು ಎಂದು ಪರಮಾತ್ಮನೇ ಸ್ಪಷ್ಟವಾಗಿ ಹೇಳಿದ್ದಾನೆ. ಈ ಶ್ಲೋಕದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮನುಷ್ಯನು ವ್ಯವಹಾರದಲ್ಲಿ ಮತ್ತು ತನ್ನ ಬದುಕಿಗಾಗಿ ಮಾಡುವ ಎಲ್ಲಾ ಕರ್ಮಗಳನ್ನು ಪರಮಾತ್ಮನ ಸೇವೆ ಎಂಬ ದೃಷ್ಟಿಯಿಂದ ಮಾಡಿ ಅವೆಲ್ಲವನ್ನೂ ಅವನಿಗೇ ಅರ್ಪಿಸಿಬಿಡಲಿ ಎಂದು ಹೇಳಿದ್ದಾನೆ. (ತಾನು ಅದನ್ನು ಸ್ವೀಕರಿಸಿ ಸಂತುಷ್ಟಿಪಡುತ್ತೇನೆ ಎಂಬ ಭಾವ). ಹೀಗೆ ಕೃಷ್ಣಾರ್ಪಣ ಬುದ್ಧಿಯಿಂದ ಮಾಡಿದ ಕೆಲಸವು ಸುಂದರವೂ, ಸ್ವಚ್ಛವೂ, ಫಲಪ್ರದವೂ ಆಗುತ್ತದೆ. ಅಲ್ಲದೆ ವಿವಿಧ ಕರ್ಮಗಳನ್ನು ಮಾಡುವಾಗಲೆಲ್ಲಾ ಆ ಪರಮಾತ್ಮನನ್ನು ಜ್ಞಾಪಿಸಿಕೊಳ್ಳಬೇಕು. ಒಂದು ಅಂಗಡಿಯಲ್ಲಿ ನಾನಾ ರೀತಿಯ ಬಟ್ಟೆಗಳಿವೆ, ವ್ಯಾಪಾರಾಸ್ಥನು ಈ ಎಲ್ಲಾ ಬಟ್ಟೆಗಳನ್ನೂ ಗಿರಾಕಿಗೆ ತೋರಿಸುವಾಗ ತಾನು ಕೇವಲ ಹತ್ತಿಯ ಬಟ್ಟೆಗಳನ್ನೇ ಮಾರುತ್ತಿದ್ದೇನೆಂದು ತಿಳಿದುಕೊಂಡಿರಬೇಕು. ಇದೇನೂ ಕಷ್ಟವಲ್ಲ. ಹೀಗೆ ಮಾಡಿದರೆ ಗಿರಾಕಿಗಳಿಗೆ, ಅವು ಉಣ್ಣೆಯ ಅಥವಾ ರೇಷ್ಮೆಯ ಬಟ್ಟೆ ಎಂದು ಮೋಸಗೊಳಿಸುವ, ಇಲ್ಲವೆ ಗೋಣಿ ಬಟ್ಟೆಗಳೆಂದು ಮಾರಿ ಲುಕ್ಸಾನಾಗುವ ಭಯವಿಲ್ಲ. ಸೊನಗಾರನು ತಾನು ವ್ಯವಹರಿಸುವುದು ಚಿನ್ನದಲ್ಲಿ ಎಂದು ಸದಾ ತಿಳಿದುಕೊಂಡಿರುವುದು ಅವನಿಗೆ ಲಾಭಕರ. ಅಂತೆಯೇ ಎಲ್ಲಾ ಕರ್ಮಗಳ ಮಧ್ಯದಲ್ಲಿ ಆ ಕರ್ಮಗಳೆಲ್ಲಾ ಪರಮಾತ್ಮನ ಕರ್ಮಗಳೆಂದು ಭಾವಿಸುವುದು ಲಾಭಕರ.
ಹೀಗೆ ಕರ್ಮ ಮಾಡುವುದರಿಂದ ಏನು ಲಾಭ –
ಶುಭಾಶುಭಫಲೈರೇವಂ ಮೋಕ್ತ್ಯಸೇ ಕರ್ಮಬಂಧನೈಃ |
ಸಂನ್ಯಾಸಯೋಗಯುಕ್ತಾತ್ಮಾ ವಿಮುಕ್ತೋ ಮಾಮುಪೈಷ್ಯಸಿ || || 28 ||
ಅರ್ಥ :- ಹೀಗೆ ನೀನು ಕರ್ಮ ಮಾಡಿದೆಯಾದರೆ, ಕರ್ಮದ ಒಳ್ಳೆಯ ಮತ್ತು ಕೆಟ್ಟ ಫಲಗಳೆಂಬ ಕರ್ಮಬಂಧನಗಳಿಂದ ಬಿಡುಗಡೆಯನ್ನು ಹೊಂದುತ್ತೀಯೆ. ಈ ರೀತಿಯಾಗಿ ಸನ್ಯಾಸಯೋಗದಿಂದ ಕೂಡಿದ ನೀನು ಕರ್ಮ ಬಂಧನದಿಂದ ಮುಕ್ತನಾಗಿ ನನ್ನನ್ನು ಸೇರುತ್ತೀಯೆ. ಗೀತೆಯಲ್ಲಿ ಬೇರೆಬೇರೆ ಮಾರ್ಗಗಳನ್ನು ಉಪದೇಶಿಸಿದಾಗ್ಯೂ ಗುರಿಯು ಮಾತ್ರ ಒಂದೇ ಆಗಿದೆ. ಈ ಎಲ್ಲಾ ಮಾರ್ಗಗಳೂ ಪರಸ್ಪರ ನಿಕಟ ಸಂಬಂಧವನ್ನು ಹೊಂದಿವೆ. ಈ ವಿಭಾಗದಲ್ಲಿ ಪರಮಾತ್ಮನಿಗೆ ಅರ್ಪಣೆ ಮಾಡುವ ವಿಧಾನವನ್ನೂ, ಆ ಮೂಲಕ ಕರ್ಮಬಂಧವನ್ನು ತಪ್ಪಿಸಿಕೊಳ್ಳುವ ರೀತಿಯನ್ನೂ ತಿಳಿಸಲಾಗಿದೆ. ಇದೇ ವಿಷಯವನ್ನು ಹಿಂದೆ ‘ಯಜ್ಞ’ ಭಾವದಿಂದ ಕರ್ಮ ಮಾಡು ಎಂದು ಹೇಳಲಾಗಿದೆ. ನಾವು ಮಾಡುವ ಎಲ್ಲಾ ಕರ್ಮಗಳನ್ನೂ ಪರಮಾತ್ಮನಿಗೆ ಪ್ರೇಮದಿಂದ ಅರ್ಪಿಸಿದರೆ, ನಾವು ಸಂಚಿತ ವಾಸನೆಗಳಿಂದ ಮುಕ್ತರಾಗುತ್ತೇವೆಂದೂ, ಕರ್ಮದಲ್ಲಿ ಅರ್ಪಣಾಬುದ್ಧೀ (ತ್ಯಾಗ-ಸನ್ಯಾಸ) ಯಿರುವುದರಿಂದ, ಹೊಸ ವಾಸನೆಗಳು ಉತ್ಪನ್ನವಾಗುವುದಿಲ್ಲವೆಂದೂ, ಹೀಗಾಗಿ ಆ ಕರ್ಮಬಂಧನದಿಂದ ಮುಕ್ತರಾಗಿ ಪರಮಾತ್ಮನನ್ನು ಸೇರಬಹುದೆಂದೂ ತಾರ್ಕಿಕವಾಗಿ ವಿವರಿಸಲಾಗಿದೆ. ಈ ತರಹದ ಕರ್ಮದಲ್ಲಿ ಅಹಂಕಾರವಿಲ್ಲದಿರುವುದರಿಂದ ಮನಸ್ಸು ಶುದ್ಧವಾಗುತ್ತದೆ. ಅದರಿಂದ ಮನಸ್ಸಿನ ಏಕಾಗ್ರತೆಯೂ, ಆತ್ಮಧ್ಯಾನವೂ ಸಾಧ್ಯವಾಗುತ್ತದೆ.

ಸಮೋಹಂ ಸರ್ವಭೂತೇಷು ನ ಮೇ ದ್ವೇಷ್ಯೋ„ಸ್ತಿ ನ ಪ್ರಿಯಃ |
ಯೇ ಭಜಂತಿ ತು ಮಾಂ ಭಕ್ತ್ಯಾ ಮಯಿ ತೇ ತೇಷು ಚಾಪ್ಯಹಮ್ || || 29 ||
ಅರ್ಥ :- ನಾನು ಎಲ್ಲಾ ಪ್ರಾಣಿಗಳಲ್ಲಿಯೂ ಒಂದೇ ರೀತಿಯಾಗಿದ್ದೇನೆ. ನಾನು ಯಾರನ್ನೂ ದ್ವೇಷಿಸುವುದಿಲ್ಲ. ಇಲ್ಲವೇ ಪ್ರೀತಿಸುವುದಿಲ್ಲ. ಎಲ್ಲರನ್ನೂ ಸಮನಾಗಿ ಕಾಣುತ್ತೇನೆ. ಆದರೆ ಯಾರು ನನ್ನನ್ನು ಭಕ್ತಿಯಿಂದ ಭಜಿಸುತ್ತಾರೋ ಅವರಲ್ಲಿ ನಾನಿದ್ದೇನೆ. ಅವರು ನನ್ನಲ್ಲಿದ್ದಾರೆ.
ಗೀತೆಯು ಯಾರ ಭಿಡೆಗೂ ಸಿಗದೆ, ಯಾವ ಒಂದು ವಿಶಿಷ್ಟಮತವನ್ನೂ ಪ್ರತಿಪಾದಿಸದೆ, ಸತ್ಯಸ್ಥಿತಿಯನ್ನಷ್ಟೇ ತರ್ಕಬದ್ಧವಾಗಿ ಸಮರ್ಥಿಸುತ್ತದೆ. ಈ ಶ್ಲೋಕದಲ್ಲಿ ಸಹ ಸತ್ಯಪ್ರತಿಪಾದನೆಯನ್ನು ಕಾಣಬಹುದು.
ಎಲ್ಲಾ ಜೀವಿಗಳಲ್ಲಿರುವ ಪರಮಾತ್ಮನೂ ಒಬ್ಬನೇ. ಪಾಪಾತ್ಮನಲ್ಲಿರುವವನೇ ಪುಣ್ಯಾತ್ಮನಲ್ಲಿಯೂ ಇದ್ದಾನೆ. ಸೂರ್ಯನು ಶುಭ್ರ, ಪಾರದರ್ಶಕ, ಮಬ್ಬು, ಅಪಾರದರ್ಶಕ, ಹೊಲಸು ಹಾಗೂ ಇತರೆ ಎಲ್ಲಾ ತರಹದ ವಸ್ತುಗಳ ಮೇಲೆ ಏಕರೀತಿಯಾಗಿ ಪ್ರಕಾಶವನ್ನು ಬೀರುತ್ತಾನೆ. ಆಯಾಯಾ ವಸ್ತುಗಳು ತಮ್ಮ ತಮ್ಮ ಶಕ್ತಿಗನುಸಾರವಾಗಿ, ಆ ಪ್ರಕಾಶವನ್ನು ಹಿಂದಕ್ಕೆ ಚೆಲ್ಲಿ, ತನ್ಮೂಲಕ ತಮ್ಮ ತಮ್ಮ ವಸ್ತುಸ್ಥಿತಿಯನ್ನು ತೋರಿಸಿಕೊಳ್ಳುತ್ತವೆ. ಒಂದು ವಸ್ತುವು ಪ್ರಕಾಶಮಾನವಾಗಿ ಕಂಡು ಇನ್ನೊಂದ ಮಬ್ಬಾಗಿ ಕಂಡರೆ ಅದು ಆ ವಸ್ತುವಿನ ದೋಷವೇ ಹೊರತು ಸೂರ್ಯನ ದೋಷವಲ್ಲ. ಇದರಂತೆಯೇ, ಕೃಷ್ಣ, ಬುದ್ಧ, ಶಂಕರಾಚಾರ್ಯರು, ಏಸುಕ್ತಿಸ್ತ, ಸಾಮಾನ್ಯಪ್ರಜೆ, ವಿಜ್ಞಾನಿ, ರೋಗಿಷ್ಟ, ಖೂನಿಗಾರ, ದರೋಡೆಖೋರ, ಒಳ್ಳೆಯವನು, ಕೆಟ್ಟವನು, ಇತ್ಯಾದಿ ಎಲ್ಲಾ ರೀತಿಯ ಜನರಲ್ಲಿಯೂ ಇರುವ ಪರಮಾತ್ಮನು ಒಬ್ಬನೇ. ಆತನಿಗೆ ಯಾರ ಮೇಲೂ ವಿಶೇಷ ಆಕರ್ಷಣೆಯಿಲ್ಲ. ಯಾರ ಮೇಲೂ ದ್ವೇಷವಿಲ್ಲ. ಅವನಿಗೆ ಎಲ್ಲರೂ ಸಮಾನರೇ, ಸೂರ್ಯ ಪ್ರಕಾಶವು ವಿವಿಧ ರೀತಿಯ ಎಲ್ಲಾ ವಸ್ತುಗಳ ಮೇಲೆ ಸಮಾನವಾಗಿ ಬೀಳುವಂತೆ, ಪರಮಾತ್ಮನ ಕೃಪೆಯು ಎಲ್ಲರ ಮೇಲೂ ಒಂದೇ ರೀತಿಯಾಗಿದೆ. ಮನುಷ್ಯರು ತಮ್ಮ ಸಾಧನೆಯಿಂದ ಅಹಂಕಾರವನ್ನು ಕಳಚಿ ಹಾಕಿ, ಮನಸ್ಸನ್ನು ಶುದ್ಧಗೊಳಿಸಿಕೊಂಡಷ್ಟೂ, ಪರಮಾತ್ಮ ಪ್ರಕಾಶವನ್ನು ಹೆಚ್ಚು ಹೆಚ್ಚು ಹಿಂದಕ್ಕೆ ಚೆಲ್ಲಲು ಅಂದರೆ ತಾವು ಹೆಚ್ಚು ಹೆಚ್ಚು ಜ್ಞಾನದ ಸಮೀಪಕ್ಕೆ ಹೋಗಲು ಸಮರ್ಥರಾಗುತ್ತಾರೆ, ಅರ್ಹರಾಗುತ್ತಾರೆ.
ನಾನು ಅವರಲ್ಲಿದ್ದೇನೆ, ಅವರು ನನ್ನಲ್ಲಿದ್ದಾರೆ… ಎಂಬ ವಾಕ್ಯದಿಂದ ಪರಮಾತ್ಮನು ಭಕ್ತರಲ್ಲಿ ಎಷ್ಟು ಕೃಪೆಯನ್ನು ತೋರಿಸುತ್ತಾನೆ, ಆತನು ಎಷ್ಟು ಭಕ್ತರ ಪಕ್ಷಪಾತಿ ಎಂದು ತಿಳಿಯಬಹುದು. ಆದರೆ ವಸ್ತು ಸ್ಥಿತಿ ಹಾಗಲ್ಲ. ಭಕ್ತನು ತಾನು ಮಾಡುವ ಎಲ್ಲಾ ಕಾರ್ಯಗಳನ್ನೂ ಭಕ್ತಿಯಿಂದ ಪರಮಾತ್ಮನಿಗೆ ಅರ್ಪಿಸಿಬಿಡುವುದರಿಂದ, ಭಕ್ತನು ಕರ್ಮಯೋಗಿಯಂತೆ, ಅಹಂಕಾರವನ್ನು ಕ್ರಮೇಣ ಕಳಚಿಕೊಳ್ಳುತ್ತಾನೆ. ತನ್ಮೂಲಕ ಅವನ ಮನಸ್ಸು ಬುದ್ಧಿಗಳು ಶುದ್ಧವಾಗುತ್ತವೆ. ಅವು ಪರಮಾತ್ಮನ ಬೆಳಕನ್ನು ಚನ್ನಾಗಿ ಅನುಭವಿಸುತ್ತವೆ. ಮತ್ತು ಆ ಬೆಳಕನ್ನು ಹೆಚ್ಚು ಚೆನ್ನಾಗಿ ಹಿಂದಕ್ಕೆ ಚಲ್ಲುತ್ತವೆ. ಶುಭ್ರವಾದ ಕಾಚು ಸೂರ್ಯನ ಬೆಳನ್ನು ಹೊರಚೆಲ್ಲುವಂತೆ, ಸಾಮಾನ್ಯ ಮನುಷ್ಯನಾಗಿದ್ದ ಭಕ್ತನು ಈಗ ‘ತಾನೇ ಪರಮಾತ್ಮನು’ ಎಂಬ ಜ್ಞಾನವನ್ನು ಪಡೆಯಲು ಅರ್ಹನಾಗುತ್ತಾನೆ. ಇವನು ಮತ್ತು ಪರಮಾತ್ಮನು ಇಬ್ಬರೂ ಈಗ ಒಂದೇ ಆಗಿರುವುದರಿಂದ ಅವನಲ್ಲಿ ಇವನಿದ್ದಾನೆ, ಇವನಲ್ಲಿ ಅವನಿದ್ದಾನೆ.
ಪರಮಾತ್ಮನ ಜ್ಞಾನವು ಕೇವಲ ಸಜ್ಜನರಿಗೆ ಮಾತ್ರ ಮುಡುಪಲ್ಲ. ಎಲ್ಲರಿಗೂ ಸಾಧ್ಯವಿದೆ.
ಅಪಿ ಚೇತ್ಸುದುರಾಚಾರೋ ಭಜತೇ ಮಾಮನನ್ಯಭಾಕ್ |
ಸಾಧುರೇವ ಸ ಮಂತವ್ಯಃ ಸಮ್ಯಗ್ವ್ಯಮಸಿತೋ ಹಿ ಸಃ || || 30 ||
ಅರ್ಥ :- ಅತಿ ದುರಾಚಾರಿಯಾದ ಮನುಷ್ಯನು ಸಹ ನನ್ನನ್ನು ಅನನ್ಯಭಕ್ತಿಯಿಂದ ಭಜಿಸಿದ್ದೇ ಆದರೆ ಅವನೂ ಸಜ್ಜನನೆಂತಲೇ ತಿಳಿಯಬೇಕು ಏಕೆಂದರೆ ಅವನಲ್ಲಿ ಭಕ್ತಿಯು ಸ್ಥಿರವಾಗಿರುತ್ತದೆ.
ಪಾಪ ಮಾಡುವುವನನ್ನು ತುಚ್ಛವಾಗಿ ಕಾಣುವುದು ಸಾಮಾನ್ಯವಾಗಿದೆ. ಇವನಿಗೆ ಸ್ವರ್ಗದಲ್ಲಿ ಪ್ರವೇಶವಿಲ್ಲೆಂದೂ, ಅವನು ಘೋರ ನರಕದಲ್ಲಿ ತೊಳಲಾಡ-ಬೇಕಾಗುವುದೆಂದೂ ಸಾಮಾನ್ಯ ನಂಬಿಕೆಯಿದೆ. ಆದರೆ ವೇದಾಂತ ತತ್ವದಂತೆ, ಪಾಪಕರ್ಮವು ಕೆಟ್ಟದ್ದಾದರೂ, ಆ ಕರ್ಮವನ್ನು ಮಾಡುವ ಪಾಪಿಯನ್ನು ದ್ವೇಷಿಸಬಾರದು. ಪಾಪಿಯ ಮನಸ್ಸು ಯಾವ ದಿಸೆಯಲ್ಲಿ ಹರಿಯುತ್ತಿದೆ, ಎಂತಹ ವಿಚಾರಗಳನ್ನು ಮಾಡುತ್ತದೆ ಎಂಬುದನ್ನು ಅವನ ವಿವಿಧ ಕರ್ಮಗಳು ತೋರಿಸುತ್ತವೆ. ಅವನ ಮನಸ್ಸನ್ನು ತಿದ್ದಿ, ವಿಚಾರ, ಸರಣಿಯ ದಿಸೆಯನ್ನು ಬದಲಾಯಿಸಿ, ಮನಸ್ಸು ಸದ್ವಿಚಾರಗಳನ್ನೇ ಚಿಂತಿಸುವಂತೆ ಮಾರ್ಪಾಟು ಮಾಡಿದರೆ, ಇವತ್ತಿನ ಪಾಪಿಯು ಮುಂದೆ ಶ್ರೇಷ್ಠವಾದ ಭಕ್ತನಾಗುತ್ತಾನೆ, ಎಂಬುದು ವೇದಾಂತದ ಮತ. ಇಂತಹ ಉದಾಹರಣೆಗಳನ್ನು ಇತಿಹಾಸ ಪುರಾಣಗಳಲ್ಲಿ ಕಾಣಬಹುದು. ಉದಾಹರಣೆ – ವಾಲ್ಮೀಕಿ, ಅತಿಯಾದ ಪಾಪಿಯೂ ಸಹ ಪರಮಾತ್ಮನನ್ನು ಭಜಿಸಬಹುದೆಂದೂ, ಅದಕ್ಕೆ ಮುಕ್ತ ದ್ವಾರವಿದೆ ಎಂದೂ, ಆದರೆ ಅದಕ್ಕೆ ಅನನ್ಯವಾದ ಭಕ್ತಿಯನ್ನು ಬೆಳೆಸಿಕೊಳ್ಳುವುದು ಮಾತ್ರ ಅವಶ್ಯಕವೆಂದೂ ಈ ಶ್ಲೋಕದಲ್ಲಿ ಹೇಳಲಾಗಿದೆ. ಹೀಗೆ ಪಾಪಿಯು ಅನನ್ಯ ಭಕ್ತಿಯಿಂದ ಪರಮಾತ್ಮನನ್ನು ಅರ್ಚಿಸುವುದಾದರೆ, ಅವನು ಕ್ರಮೇಣ ಸಜ್ಜನನಾಗುತ್ತಾನೆಂದೂ, ಅವನನ್ನು ಸಜ್ಜನರ ಗುಂಪಿನಲ್ಲಿಯೇ ಸೇರಿಸಬೇಕೆಎಂದೂ, ಇಲ್ಲಿ ಹೇಳಲಾಗಿದೆ. ಆದರೆ ಇವನಲ್ಲಿಯ ಭಕ್ತಿಯು ಕೇವಲ ತಾತ್ಕಾಲಿಕವಾಗಿರಬಾರದು. (ಕ್ಷಣಿಕ). ಅದು ನಿಶ್ಚಯವಾದ ನಿಶ್ಚಲವಾದ ಭಕ್ತಿಯಾಗಿರಬೇಕು.

ಕ್ಷಿಪ್ರಂ ಭವತಿ ಧರ್ಮಾತ್ಮಾ ಶಶ್ವಚ್ಛಾಂತಿಂ ನಿಗಚ್ಛತಿ |
ಕೌಂತೇಯ ಪ್ರತಿ ಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ || || 31 ||
ಅರ್ಥ :- ಅವನು ಜಾಗ್ರತೆಯಾಗಿ ಧರ್ಮಿಷ್ಟನಾಗುತ್ತಾನೆ ಮತ್ತು ಪರಮಶಾಂತಿಯನ್ನು ಪಡೆಯುತ್ತಾನೆ. ಕೌಂತೇಯನೇ, ನನ್ನ ಭಕ್ತನು ಎಂದಿಗೂ ನಾಶವಾಗುವುದಿಲ್ಲ.
ಧರ್ಮ ಎಂದರೆ ಆಯಾಯಾ ವಸ್ತುಗಳ ಸ್ವಾಭಾವಿಕ ಗುಣ. ಬೆಂಕಿಗೆ ಸುಡುವ ಗುಣ, ನೀರಿಗೆ ನೆನೆಸುವ ಗುಣ ಇದ್ದಂತೆ, ಮನುಷ್ಯನ ಧರ್ಮ ಎಂದರೆ, ಅವನಲ್ಲಿರುವ ಶುದ್ಧ ಆತ್ಮ, ಈ ಆತ್ಮದ ಅಸ್ತಿತ್ವವಿಲ್ಲದಿದ್ದರೆ, ಮನುಷ್ಯನು ಜೀವಿಸಿರುವುದು, ಅವನ ವಿವಿಧ ಚಟುವಟಿಕೆಗಳು, ಅವನ ಶಾರೀರಿಕ, ಹಾಗೂ ಮಾನಸಿಕ ಇತ್ಯಾದಿಗಳು ವ್ಯಕ್ತವಾಗಲಾರವು. ಮೇಲೆ ಹೇಳಿದ ರೀತಿಯಲ್ಲಿ ಭಕ್ತನು ಧರ್ಮಾತ್ಮನಾಗುತ್ತಾನೆಂದರೆ, ಅವನು, “ತಾನು ಶರೀರ, ಮನಸ್ಸು, ಬುದ್ಧಿಗಳಲ್ಲಿ; ತಾನು ಶುದ್ಧ ಪರಮಾತ್ಮನು” ಎಂಬ ಜ್ಞಾನವನ್ನು, ಅದರ ಅನುಭವವನ್ನು ಪಡೆಯುತ್ತಾನೆ, ಎಂದರ್ಥ. ಕೇವಲ ಧಾರ್ಮಿಕ ಸ್ವಭಾವದವನಾಗುತ್ತಾನೆ ಎಂಬುದಕ್ಕಿಂತ ಈ ಅರ್ಥವು ಹೆಚ್ಚು ಸಾಧುವಾಗಿದೆ. ಅನನ್ಯವಾದ ಭಕ್ತಿಯಿಂದ ಕೂಡಿ ಇನ್ನು ಮುಂದೆ ಮಾಡುವ ಉಪಾಸನೆಯಿಂದ ಅವನ ಮನಸ್ಸಿನ ಉದ್ರೇಕವು ಶಾಂತವಾಗಿ, ಮನಸ್ಸು ಏಕಾಗ್ರವಾಗಿ ಅತ್ಮಧ್ಯಾನದಲ್ಲಿ ಲೀನವಾಗಿ ಶಾಂತಿಯನ್ನು ಪಡೆಯುತ್ತದೆ. (ಶಶ್ಚಚ್ಛಾಂತಿಂನಿಗಚ್ಛತಿ). ಇಲ್ಲಿ ಶಾಂತಿ ಎಂದರೆ ಹೊರಗಿನ ಶಾಂತಿಯಲ್ಲ ಮನಸ್ಸಿನ ಆಂತರಿಕ ಶಾಂತತೆ, ಹೊರಗಿನ ವಾತಾವರಣವು ಎಷ್ಟೇ ಪ್ರಕ್ಷುಬ್ಧವಾಗಿದ್ದರೂ, ಭಕ್ತನು ತನ್ನ ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳುತ್ತಾನೆ.
ಈ ಶ್ಲೋಕದ ಕೊನೆಯ ಭಾಗದಲ್ಲಿ, ಶ್ರೀಕೃಷ್ಣನು ಇನ್ನೊಂದು ಮಹತ್ತರವಾದ ಘೋಷಣೆಯನ್ನು ಮಾಡಿದ್ದಾನೆ, ಹೀನತಮವಾದ ಪಾಪಿಷ್ಟನೂ ಸಹ, ಪರಮಾತ್ಮಲ್ಲಿ ಅನನ್ಯವಾದ ಹಾಗೂ ಸ್ಥಿರವಾದ ಭಕ್ತಿಯುಳ್ಳವನಾಗಿ ಪರಮಾತ್ಮನನ್ನು ಅರ್ಚಿಸುವುದಾಗಿದೆ, ಅವನು ಕ್ರಮೇಣ ಪಾಪಗಳಿಂದ ಮುಕ್ತನಾಗಿ ಸಜ್ಜನಾಗುತ್ತಾನೆಂದೂ, ಮುಂದೆ ಕ್ರಮೇಣ ಆತ್ಮಜ್ಞಾನವನ್ನು ಪಡೆಯಲು ಅರ್ಹನಾಗುತ್ತಾನೆಂದೂ ಹೇಳಿ ಇಂತಹ ಭಕ್ತನು ಎಂದಿಗೂ ನಾಶವಾಗುವುದಿಲ್ಲ ಎಂಬ ಮಹತ್ತರವಾದ ಆಶ್ವಾಸನೆಯನ್ನು ಕೊಟ್ಟಿದ್ದಾನೆ. ಆದುದರಿಂದ ಪಾಪಿಯನ್ನು ಯಾರೂ ದ್ವೇಷಿಸಬಾರದು ಎಂಬುದು ವೇದಾಂತದ ಮತ. ಪಾಪಿಗೆ ಮಾನಸಿಕ ಶಿಕ್ಷಣವನ್ನು ಕೊಡುವುದರಿಂದ, ಮಹತ್ತರ ಪಾಪಿಯೂ ಸಹ ಶ್ರೇಷ್ಠವಾದ ಸಾಧುವಾಗಬಹುದು. ಬಟ್ಟೆಯ ಪೆಟ್ಟಿಗೆಯಲ್ಲಿ ಇಡಲ್ಪಟ್ಟ ನಪ್ತಾಲ್ (ಕ್ರಿಮಿನಾಶಕ) ಗುಳಿಗೆಯು, ಬಟ್ಟೆಯು ಹುಳುಗಳಿಂದ ತಿನ್ನಲ್ಪಡದಂತೆ ರಕ್ಷಿಸುವಂತೆ, ಪರಮಾತ್ಮನ ಸತತ ಸ್ಮರಣೆಯು ಆಂತರಿಕ ಮನಸ್ಸನ್ನು ಕೆಟ್ಟ ವಿಚಾರಗಳೆಂಬ ದೌರ್ಬಲ್ಯಗಳಿಂದ ರಕ್ಷಿಸಿ ಕ್ರಮೇಣ ಪರಮಾತ್ಮ ಧ್ಯಾನದ ಕಡೆಗೆ ಒಲಿಯುವಂತೆ ಮಾಡುತ್ತದೆ.
ಮಾಂ ಹಿ ಪಾರ್ಥ ವ್ಯಪಾಶ್ರಿತ್ಯ ಯೇ„ಪಿ ಸ್ಯುಃ ಪಾಪಯೋನಯಃ |
ಸ್ತ್ರಿಯೋ ವೈಶ್ವ್ತಾಸಥಾ ಶೂದ್ರಾಸ್ತೇ„ಪಿ ಯಾಂತಿ ಪರಾಂ ಗತಿಮ್ || || 32 ||
ಅರ್ಥ :- ಪಾರ್ಥನೇ, ನನ್ನನ್ನೇ ಆಶ್ರಯಿಸಿದ ಪಾಪಿಗಳು, ಸ್ತ್ರೀಯರು, ವೈಶ್ಯರು, ಮತ್ತು ಶೂದ್ರರು ಸಹ ಉತ್ತಮವಾದ ಗತಿಯನ್ನು ಹೊಂದುತ್ತಾರೆ.
ಗೀತೆಯಲ್ಲಿ ಹೇಳಲ್ಪಟ್ಟ ವೇದಾಂತದ ಉಪದೇಶವು ಕೇವಲ ಕೆಲವು ನಿರ್ದಿಷ್ಟ ಜಾತಿಯ, ಇಲ್ಲವೇ ನಿರ್ದಿಷ್ಟ ವಿಭಾಗದ ಜನಾಂಗಕ್ಕಲ್ಲ. ಇದು ಪ್ರಪಂಚದಲ್ಲಿರುವ, ಉಚ್ಛ-ನೀಚ, ಮೇಲು-ಕೀಳು, ಸುಸಂಸ್ಕøತ, ಹಿಂದುಳಿದ, ಎಲ್ಲಾ ತರಹದ ಸರ್ವ ಜನತೆಯೂ ಹೇಳಲ್ಪಟ್ಟ, ಸಾರ್ವತ್ರಿಕ ಬೋಧವಾಗಿದೆ. ಸ್ತ್ರೀಯರು, ವೈಶ್ಯರು ಹಾಗೂ ಶೂದ್ರರು, ಉತ್ಕ್ರಾಂತಿಯಲ್ಲಿ ಕೆಳಮಟ್ಟದವರೆಂದೂ, ಅವರು ವೇದೋಕ್ತ ಧಾರ್ಮಿಕ ವಿಚಾರಗಳನ್ನು ತಿಳಿದುಕೊಳ್ಳಲು ಹಾಗೂ ಅದರಂತೆ ಆಚರಿಸಲು ಅನರ್ಹರೆಂದೂ, ಮಹಾಭಾರತದ ಕಾಲದಲ್ಲಿ ತಿಳಿಯಲಾಗಿತ್ತು. ಈ ಭಾವನೆಯು ತಪ್ಪೆಂದೂ, ವೇದಾಂತ ಧರ್ಮವು ಶಾರೀರಿಕ ಬೆಳವಣಿಗೆಯನ್ನು ಸಾಧಿಸುವುದಕ್ಕಲ್ಲವೆಂದೂ, ಮಾನಸಿಕ ವಿಕಾಸದಿಂದ ಅಜ್ಞಾನವನ್ನು ಕಳೆದುಕೊಂಡು, ಜ್ಞಾನವನ್ನು ಸಂಪಾದಿಸುವದಕ್ಕಾಗಿದೆ ಎಂದೂ; ಅಂತೆಯೇ ಸಕಲ ಮನುಷ್ಯರೂ ಇದನ್ನು ತಿಳಿದುಕೊಂಡು ಆಚರಿಸಲು, ಅರ್ಹರೆಂದೂ ಹೇಳಿ, ಅಷ್ಟಕ್ಕೆ ತೃಪ್ತಿ ಪಡದೆ, ಹಿಂದುಳಿದವರೆಂದೂ, ಅನರ್ಹರೆಂದೂ ಗಣಿಸಲಾದ ಸ್ತ್ರೀಯರು, ವೈಶ್ಯರು ಹಾಗೂ ಶೂದ್ರರು ಸಹ ಈ ಬೋಧೆಯ ಉಪದೇಶಕ್ಕೆ ಅರ್ಹರೆಂದು ಸ್ಪಷ್ಟವಾಗಿ ಹೇಳಲಾಗಿದೆ.
ಸ್ತ್ರೀಯರು, ವೈಶ್ಯರು, ಹಾಗೂ ಶೂದ್ರರು ವೇದದ ಉಪದೇಶಕ್ಕೆ ಅನರ್ಹರು ಎಂದು ಹೇಳಿರುವುದರ ಹಿನ್ನೆಲೆಯನ್ನು ಹಾಗು ಭಾವವನ್ನೂ ತಿಳಿದುಕೊಳ್ಳಬೇಕು. ಏಕೆಂದರೆ ವೇದ ಕಾಲದಲ್ಲಿ ಎಷ್ಟೋ ಹೆಂಗಸರು ಧಾರ್ಮಿಕ ವಾದಗಳಲ್ಲಿ ಹಾಗೂ ಚರ್ಚೆಗಳಲ್ಲಿ ಭಾಗವಹಿಸಿರುವುದನ್ನು ಕಾಣಬಹುದು- ಇಲ್ಲಿ ಸ್ತ್ರೀಯರು ಎಂದರೆ ಹೆಚ್ಚಾದ ಪ್ರೇಮವನ್ನೂ ಆಸಕ್ತಿಯನ್ನೂ ಉಳ್ಳವರು ಎಂದು ತಿಳಿದುಕೊಳ್ಳಬೇಕು, ವೈಶ್ಯರೆಂದರೆ ಪ್ರತಿಯೊಂದು ವಿಚಾರದಲ್ಲೂ ತಮ್ಮ ಲಾಭವನ್ನು ಲೆಕ್ಕ ಹಾಕುವವರು ಎಂದರ್ಥ. ಇವರು ಧಾರ್ಮಿಕ ಸಾಧನೆಯಲ್ಲಿ ಸಹ ತಮ್ಮ ಲಾಭದ ಲೆಕ್ಕವನ್ನು ಹಾಕುತ್ತಾರೆ. ಶೂದ್ರರೆಂದರೆ ಮಾನಸಿಕ ವಿಚಾರದಲ್ಲಿ ದಡ್ಡತನ, ಆಲಸ್ಯ ಹಾಗೂ ಜಿಗುಪ್ಸೆಯನ್ನುಳ್ಳವರು. ಈ ಗುಣಗಳುಳ್ಳವರು ಅನನ್ಯಭಕ್ತಿಯಿಂದ ಪರಮಾತ್ಮನ ಸೇವೆಯನ್ನು ಮಾಡುವುದಾದರೆ ಅವರೂ ಸಹ ಕ್ರಮೇಣ ಪರಮಾತ್ಮನನ್ನು ಸಾಧಿಸಲು ಶಕ್ಯವಾಗುತ್ತಾರೆ ಎಂದು ಇಲ್ಲಿ ಘೋಷಿಸಲಾಗಿದೆ.

ಕಿಂ ಪುನಬ್ರ್ರಾಹ್ಮಣಾಃ ಪುಣ್ಯಾ ಭಕ್ತಾ ರಾಜರ್ಷಯಸ್ತಥಾ |
ಅನಿತ್ಯಮಸುಖಂ ಲೋಕಮಿಮಂ ಪ್ರಾಪ್ಯ ಭಜಸ್ವಮಾಮ್ || || 33 ||
ಅರ್ಥ :- ಅಂದ ಮೇಲೆ ಪುಣ್ಯಶಾಲಿಗಳಾದ ಬ್ರಾಹ್ಮಣರೂ, ಭಕ್ತಿಯುಳ್ಳ ರಾಜರ್ಷಿಗಳೂ. ನನ್ನನ್ನು ಸುಲಭವಾಗಿ ಪಡೆಯುತ್ತಾರೆಂಬುದರಲ್ಲಿ ಸಂಶಯವೇನು? ಆದ್ದರಿಂದ ಅನಿತ್ಯವಾದ, ಸುಖವಿಲ್ಲದ, ಭೂಲೋಕದಲ್ಲಿ ಹುಟ್ಟಿದ ನೀನು ನನ್ನನ್ನು ಭಜಿಸು.
ಈ ಪ್ರಪಂಚದಲ್ಲಿ ನಿಜವಾದ ಸುಖವು ಸಿಗುವುದಲ್ಲವೆಂದೂ, ದೊರೆಯುವ ಸುಖವು ಸಹ ಅಲ್ಪಕಾಲವಿರತಕ್ಕದ್ದೆಂದೂ ಹೇಳಿ, ಶಾಶ್ವತವಾದ ಸುಖವನ್ನು ಪಡೆಯುವುದಕ್ಕಾಗಿ, ಅನನ್ಯವಾದ ಭಕ್ತಿಯಿಂದ ಪರಮಾತ್ಮನ ಉಪಾಸನೆಯನ್ನು ಮಾಡಬೇಕೆಂದು, ಅರ್ಜುನನ ಮುಖಾಂತರ ಇಡೀ ಪ್ರಪಂಚಕ್ಕೇ ಹೇಳಲಾಗಿದೆ.
ಯುದ್ಧ ಮಾಡುವಾಗ ಪರಮಾತ್ಮನ ಅರ್ಚನೆ ಮಾಡುವುದು ಹೇಗೆ?
ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು |
ಮಾಮೇವೈಷ್ಯಸಿ ಯುಕ್ತೈವಮಾತ್ಮಾನಂ ಮತ್ಪರಾಯಣಃ || || 34 ||
ಅರ್ಥ :- ನಿನ್ನ ಮನಸ್ಸನ್ನು ನನ್ನಲ್ಲಿ ಸ್ಥಿರಪಡಿಸಿ, ನನ್ನಲ್ಲಿಯೇ ಭಕ್ತಿಯುಳ್ಳವನಾಗಿ, ನೀನು ಮಾಡುವ ಕೆಲಸವನ್ನೂ ನನಗೆ ಕೊಡುವ ಯಜ್ಞದ ಆಹುತಿ ಎಂದು ತಿಳಿದು, (ಯಜ್ಞ ಭಾವದಿಂದ ಕರ್ಮಮಾಡಿ), ನನಗೆ ನಮಸ್ಕಾರ ಮಾಡಿ, ತನ್ಮೂಲಕ ನಿನ್ನ ಆತ್ಮವನ್ನು ನನ್ನ ಆತ್ಮದಲ್ಲಿ ಸೇರಿಸಿ, ನನ್ನ ಹೊರತು ಬೇರೊಬ್ಬರು ಗತಿಯಿಲ್ಲ ಎಂಬುದನ್ನು ತಿಳಿದು, ಯುದ್ಧ ಮಾಡಿದೆಯಾದರೆ ನೀನು ನನ್ನನ್ನೇ ಸೇರುತ್ತೀಯೆ.
ಮನುಷ್ಯನು ತನ್ನ ನಿತ್ಯ ಜೀವನದಲ್ಲಿ ವಿವಿಧ ಕರ್ಮಗಳನ್ನು ಮಾಡುವಾಗ ಯಾವ ರೀತಿಯ ಮನೋಭಾವವನ್ನಿಟ್ಟುಕೊಳ್ಳಬೇಕೆಂಬುದನ್ನು ಈ ಶ್ಲೋಕದಲ್ಲಿ ಸುಂದರವಾಗಿ ವರ್ಣಿಸಲಾಗಿದೆ. ಇದರಲ್ಲಿ ಇಡೀ ಅಧ್ಯಾಯದ ಸಾರಾಂಶವಿದೆ. ಈ ರೀತಿಯಾಗಿ ಕರ್ಮ ಮಾಡಲು, ಮತ್ತು ಮಾನಸಿಕವಾಗಿ ಭಕ್ತಿಯಿಂದ ಪರಮಾತ್ಮನ ಧ್ಯಾನ ಮಾಡಲು, ಬೇರೆಬೇರೆ ಸಂದರ್ಭಗಳು, ಪರಿಸ್ಥಿತಿ, ಅಭ್ಯಾಸ, ಜೀವನ ವಿಧಾನ, ಇವಾವುವೂ ಈ ತರಹದ ಸಾಧನೆಗೆ ಆತಂಕವನ್ನುಂಟು ಮಾಡಲಾರವೆಂದು ಸಹ ಹೇಳಲಾಗಿದೆ. ಹೀಗೆ ನೀನು ಮಾಡಿದೆಯಾದರೆ ನೀನು ‘ನನ್ನನ್ನೇ’ ಸೇರುತ್ತೀಯ ಎಂಬ ಆಶ್ವಾಸವೂ ಇದೆ.
ಓಂ ತತ್ವದಿತಿ
ಶ್ರೀಮದ್ಭಗವದ್ಗೀತಾಸೂಪನಿಪತ್ಸು ಬ್ರಹ್ಮವಿದ್ಯಾಯಾಂ ಯೋಗ ಶಾಸ್ತ್ರೇ
ಶ್ರೀಕೃಷ್ಣಾರ್ಜುನ ಸಂವಾದೇ ರಾಜವಿದ್ಯಾರಾಜಗುಹ್ಯಯೋಗೋನಾಮ…
ನವಮೋ„ಧ್ಯಾಯಃ
*******