S O U L B L I S S

Loading

Bhagavad Gita – Vinayak Rao Bapat – Chapter 18

ಹದಿನೆಂಟನೆಯ ಅಧ್ಯಾಯ
ಮೋಕ್ಷ ಸನ್ಯಾಸ ಯೋಗ
ಪೀಠಿಕೆ
ಶ್ರೀಮದ್ಭಗವದ್ಗೀತೆಯ ಈ ಕೊನೆಯ ಅಧ್ಯಾಯದಲ್ಲಿ ಇದುವರೆಗಿನ ಉಪದೇಶದ ಸಾರವು ಸಂಗ್ರಹಿತವಾಗಿ ಸಂಗ್ರಹಿತ ವರ್ಣಿಸಲ್ಪಟ್ಟಿದೆ. ಎರಡನೆಯ ಅಧ್ಯಾಯದಲ್ಲಿ ಗೀತೆಯ ಸಾರವನ್ನು ಪೀಠಿಕಾರೂಪದಲ್ಲಿ ಹೇಳಿದಂತೆ ಈ ಕೊನೆಯ ಅಧ್ಯಾಯದಲ್ಲಿ ಸಮಾರೋಪ ರೂಪದಲ್ಲಿ ಹೇಳಲಾಗಿದೆ.
ಪರಮಾತ್ಮನು ಸರ್ವಜೀವಿಗಳಲ್ಲಿಯೂ ಅಂತರ್ಗತ ಅಂತರ್ಗನಾಗಿದ್ದು ಅವುಗಳ ಇರುವಿಕೆ ಹಾಗೂ ಚಲನವಲನಾದಿಗಳಿಗೆ ಪ್ರೇರಕನಾಗಿದ್ದಾನೆಂದು ಹೇಳಿ ಪ್ರತಿಯೊಬ್ಬ ಜೀವಿಯು, ಅವನ ಹಿಂದಿನ ಜನ್ಮದ ವಾಸನೆಗಳಿಗನುಸಾರವಾದ ಸ್ವಭಾವ ಹಾಗೂ ಗುಣಗಳುಳ್ಳವನಾಗುತ್ತಾನೆಂದು ತಿಳಿಸಿ, ಈ ಗುಣಗಳನ್ನು ಸಾತ್ವಿಕ, ರಾಜಸಿಕ, ಮತ್ತು ತಾಮಸಿಕ ಎಂದು ಮೂರು ವಿಧವಾಗಿ ವಿಂಗಡಿಸಿ ವರ್ಣಿಸಲಾಗಿದೆ. ಈ ಗುಣಗಳು ಮನುಷ್ಯನ ಜೀವನದಲ್ಲಿ ವ್ಯಕ್ತಪಡುವ ಅವನ ಬುದ್ಧಿವಂತಿಕೆ, ಕರ್ಮ, ಕೌಶಲ್ಯ, ಧೈರ್ಯ, ಸುಖ, ಮೊದಲಾದವುಗಳ ಮೇಲೆ ಪರಿಣಾಮವನ್ನು ಬೀರುತ್ತವೆ ಎಂಬುದನ್ನು ಈ ಅಧ್ಯಾಯದಲ್ಲಿ ವರ್ಣಿಸಲಾಗಿದೆ. ಹಿಂದಿನ ಅಧ್ಯಾಯಗಳಲ್ಲಿ ಸನ್ಯಾಸ ಮತ್ತು ತ್ಯಾಗ ಎಂಬ ಶಬ್ದಗಳನ್ನು ಅನೇಕ ಸಾರಿ ಉಪಯೋಗಿಸಲಾಗಿದೆ. ಈ ಎರಡು ಶಬ್ದಗಳ ವ್ಯಾಖ್ಯೆಯು ಇಲ್ಲಿ ಇನ್ನೊಮ್ಮೆ ಹೇಳಲ್ಪಟ್ಟಿರುವುದನ್ನು ಕಾಣಬಹುದು. ಅರ್ಜುನನು ಈ ಅಧ್ಯಾಯದ ಪ್ರಾರಂಭದಲ್ಲಿ ಈ ಎರಡು ಶಬ್ದಗಳಲ್ಲಿಯ ವ್ಯತ್ಯಾಸವನ್ನು ಪುನಃ ತಿಳಿಸಬೇಕೆಂದು ಕೇಳಿದುದರಿಂದ ಶ್ರೀಕೃಷ್ಣನು ಅವನ ಸಂಶಯವನ್ನು, ತನ್ಮೂಲಕ ಇಡೀ ಜನತೆಯ ಸಂಶಯವನ್ನು ಹೋಗಲಾಡಿಸಲು ಈ ಎರಡೂ ಶಬ್ದಗಳನ್ನೂ ಪುನಃ ವಿವರಿಸಿದ್ದಾನೆ. ಸನ್ಯಾಸ ಮತ್ತು ತ್ಯಾಗ ಇವುಗಳ ಭೇದವನ್ನು ವಿವರಿಸಿ ತ್ಯಾಗದ ಮುಖಾಂತರವೇ ಸನ್ಯಾಸವನ್ನು ಸಾಧಿಸಬೇಕೆಂಬುದನ್ನು ಸ್ಪಷ್ಟೀಕರಿಸಿದ್ದಾನೆ. ತ್ಯಾಗವಿಲ್ಲದ ಸನ್ಯಾಸವು ಕೇವಲ ಡಂಭಾಚಾರ, ಬೂಟಾಟಿಕೆ. ನಮ್ಮ ನಿತ್ಯ ಜೀವನದಲ್ಲಿ ರಾಜಸಿಕ, ತಾಮಸಿಕ ಗುಣಗಳನ್ನು ಗೆದ್ದು, ಸತ್ವಗುಣವನ್ನು ಮೈಗೂಡಿಸಿಕೊಳ್ಳಲು ಅನುಕೂಲವಾಗುವಂತಹ ಅನೇಕ ವಿವರಗಳು ಈ ಅಧ್ಯಾಯದಲ್ಲಿ ಹೇಳಲ್ಪಟ್ಟಿವೆ. ಈ ವಿವರಗಳನ್ನು ತಿಳಿದುಕೊಂಡರೆ ಮನುಷ್ಯನು ಅಹಂಕಾರವನ್ನು ತ್ಯಜಿಸಿ, ತನ್ಮೂಲಕ ಆತ್ಮಜ್ಞಾನವನ್ನು ಪಡೆಯಬಹುದಾಗಿದೆ.

ಅರ್ಜುನ ಉವಾಚ
ಸನ್ಯಾಸಸ್ಯ ಮಹಾಬಾಹೋ ತತ್ತ್ವಮಿಚ್ಛಾಮಿ ವೇದಿತುಮ್ |
ತ್ಯಾಗಸ್ಯ ಚ ಹೃಷಿಕೇಶ ಪೃಥಕ್ಕೇಶಿನಿಷೂದನ || 1 ||
ಅರ್ಜುನನು ಹೇಳುತ್ತಾನೆ
ಅರ್ಥ :- ಮಹಾಬಾಹುವುಳ್ಳ ಕೃಷ್ಣನೇ. ಸನ್ಯಾಸದ ತತ್ವವನ್ನು ತಿಳಿಯಲು ನಾನು ಇಚ್ಛಿಸುತ್ತೇನೆ. ಅಂತೆಯೇ ಹೃಷಿಕೇಶನೇ, ಕೇಶಿ ಕೇಶೀಯನ್ನು ಕೊಂದವನೇ, ತ್ಯಾಗದ ತತ್ವವನ್ನು ಸಹ ತಿಳಿಯಲು ಇಚ್ಛಿಸುತ್ತೇನೆ.
ಸನ್ಯಾಸ, ಮತ್ತು ತ್ಯಾಗ ಎಂಬ ಶಬ್ದಗಳನ್ನು ಗೀತೆಯಲ್ಲಿ ಇದುವರೆಗೆ ಅನೇಕ ಸಾರಿ ಉಪಯೋಗಿಸಲಾಗಿದೆ. ಅರ್ಜುನನು ಇವುಗಳ ತತ್ವವನ್ನೂ, ವ್ಯತ್ಯಾಸವನ್ನೂ ತಿಳಿಯಬೇಕೆಂದು ಕೇಳಿದ್ದರಿಂದ, ಶ್ರೀಕೃಷ್ಣನು, ಸಂಪೂರ್ಣ ವಿವರಗಳನ್ನು ಈ ಅಧ್ಯಾಯದಲ್ಲಿ ವರ್ಣಿಸಿದ್ದಾನೆ. ತ್ಯಾಗವಿಲ್ಲದೆ ಸನ್ಯಾಸವು ಸಾಧ್ಯವಿಲ್ಲ, ಎಂಬ ಮೂಲ ತತ್ವವವನ್ನು ಇಲ್ಲಿ ವಿವರಿಸಲಾಗಿದೆ.
ಕೇಶಿ-ನಿಷೂದನ- ಕೇಶಿಯನ್ನು ಕೊಂದವನು, ಕೇಶಿ ಎಂಬ ದೈತ್ಯನು ಕುದುರೆಯ ರೂಪವನ್ನು ತಾಳಿ ಶ್ರೀಕೃಷ್ಣನನ್ನು ಕೊಲ್ಲಲು ಬಂದನು. ಕೃಷ್ಣನು ಅವನನ್ನು ಸೀಳಿ ಎರಡು ತುಂಡು ಮಾಡಿ ಕೊಂದು ಹಾಕಿದನು. ಅದರಿಂದ ಇವನಿಗೆ ಕೇಶಿನಿಷೂದನ ಎಂದು ಹೆಸರು ಬಂದಿದೆ.
ಶ್ರೀ ಭಗವಾನುವಾಚ
ಕಾಮ್ಯಾನಾಂಕರ್ಮಣಾಂ ನ್ಯಾಸಂ ಸಂನ್ಯಾಸಂ ಕವಯೋ ವಿದುಃ |
ಸರ್ವಕರ್ಮಫಲತ್ಯಾಗಂ ಪ್ರಾಹುಸ್ತ್ಯಾಗಂ ವಿಚಕ್ಷಣಾಃ || 2 ||
ಶ್ರೀ ಭಗವಂತನು ಹೇಳುತ್ತಾನೆ.
ಅರ್ಥ :- ಯಾವುದಾದರೊಂದು ಇಚ್ಛಿತ ಫಲವನ್ನು (ಕಾಮ) ಗಮನದಲ್ಲಿಟ್ಟು ಕೊಂಡು ಅದರ ಪ್ರಾಪ್ತಿಗೋಸ್ಕರ ಮಾಡಲಾಗುವ ಕರ್ಮಗಳನ್ನು ತ್ಯಜಿಸುವುದಕ್ಕೆ ವಿದ್ವಾಂಸರು, ಸನ್ಯಾಸ ಎನ್ನುತ್ತಾರೆ. ಕರ್ಮಗಳ ಫಲವನ್ನು ತ್ಯಜಿಸುವುದಕ್ಕೆ ಬುದ್ಧಿವಂತರು ತ್ಯಾಗ ಎನ್ನುತ್ತಾರೆ.
ಆಸೆಯಿಂದ ಮಾಡುವ ಕರ್ಮಗಳ ಫಲವನ್ನು ತ್ಯಜಿಸುವುದಕ್ಕೆ ತ್ಯಾಗ ಎಂದೂ ಹೆಸರು. ತ್ಯಾಗ ಮತ್ತು ಸನ್ಯಾಸ ಇವೆರಡರಲ್ಲಿಯೂ ಆಸೆಯನ್ನು ತ್ಯಜಿಸುವುದು ಪ್ರಾಮುಖ್ಯವಾಗಿರುವುದರಿಂದ ಇವೆರಡೂ ಒಂದೇ ಎಂದು ಭಾವಿಸಬಹುದು, ಆದರೆ ಅದು ಹಾಗಲ್ಲ. ಇವುಗಳಲ್ಲಿ ವ್ಯತ್ಯಾಸವಿದೆ. ಎರಡರಲ್ಲಿಯೂ ಆಸೆಯನ್ನು ತ್ಯಜಿಸಬೇಕಾಗಿರುವುದು ನಿಜ. ಸನ್ಯಾಸದಲ್ಲಿ ಆಸೆಯಿಂದ ಮಾಡುವ ಕರ್ಮಗಳನ್ನು ತ್ಯಜಿಸಬೇಕೆಂದು ಹೇಳಿದೆ. ಕರ್ಮಗಳನ್ನೇ ಬಿಡಬೇಕೆಂದು ಸನ್ಯಾಸವು ಹೇಳಿದರೆ, ಕರ್ಮಗಳನ್ನು ಅವಶ್ಯಕವಾಗಿ ಮಾಡಲೇಬೇಕೆಂದೂ, ಕರ್ಮಫಲವನ್ನು ಮಾತ್ರ ಬಿಡಬೇಕೆಂದೂ ತ್ಯಾಗವೂ ಹೇಳುತ್ತದೆ. ಇವತ್ತಿನ ಶ್ರಮವು ಕರ್ಮದಲ್ಲಿ ವಿನಿಯೋಗವಾಗುತ್ತದೆ. ಇವತ್ತು ಮಾಡಿದ ಕರ್ಮದಿಂದ ಮುಂದೆ ಫಲಸಿಗುತ್ತದೆ. ಫಲಾಶೆಯನ್ನಿಟ್ಟುಕೊಂಡು ಮಾಡುವ ಕರ್ಮದಲ್ಲಿ, ಮುಂದೆ ಸಿಗುವ ಫಲವನ್ನು, ಅದು ಹುಟ್ಟುವ ಮೊದಲೇ ಈ ದಿನವೇ ಚಿಂತಿಸಿದಂತಾಗುತ್ತದೆ. ಇದರಿಂದ, ಇನ್ನೂ ಹುಟ್ಟದೇ ಇರುವ, ಮುಂದೆ ಎಂದೋ ಹುಟ್ಟುವ ಫಲದ ಚಿಂತನೆಯಲ್ಲಿ ಅನಾವಶ್ಯಕವಾಗಿ ಶ್ರಮವು ವ್ಯಯವಾಗುತ್ತದೆ. ಹಾಗೂ ಅದರಿಂದ ಈ ದಿನ ಮಾನಸಿಕ ಉದ್ರೇಕವುಂಟಾಗುತ್ತದೆ. ಇಂತಹ ಫಲಾಶೆಯನ್ನು ತ್ಯಜಿಸಿ, ಅದರಿಂದ ಸಂಗ್ರಹಿತವಾದ ಮಾನಸಿಕ ಶಕ್ತಿಯನ್ನು ಇವತ್ತಿನ ಕರ್ಮವನ್ನು ದಕ್ಷತೆಯಿಂದ ಮಾಡುವುದರಲ್ಲಿ ವಿನಿಯೋಗಿಸುವುದಕ್ಕೆ ತ್ಯಾಗ ಎಂದು ಹೆಸರು.
ಆಸೆ ಮತ್ತು ಉದ್ವೇಗಗಳು ಮನಸ್ಸಿನಲ್ಲಿ ಅಶಾಂತಿಯನ್ನುಂಟು ಮಾಡುತ್ತವೆ. ಆಸೆಯು ಆಳವಾಗಿದ್ದಷ್ಟು ಮನಸ್ಸಿನ ಅಶಾಂತಿಯು ಹೆಚ್ಚಾಗುತ್ತದೆ. ಹೀಗೆ ಅಶಾಂತವಾದ ಹಾಗೂ ಉದ್ವೇಗ ಉದ್ವೇದಿಂದ ಕೂಡಿದ ಮನಸ್ಸುಳ್ಳವನು ಯಾವ ಕೆಲಸವನ್ನೂ ತಾಳ್ಮೆಯಿಂದ ಮಾಡಲಾರನು. ಆಸೆಯಿಂದ ಕೂಡಿದ ಮನುಷ್ಯನು ಅದರ ಪ್ರಾಪ್ತಿಗಾಗಿ ಕೊನೆಮೊದಲಿಲ್ಲದೆ ಕಾತರತೆ, ಕುತೂಹಲಗಳಿಂದ ಕೂಡಿ ಕರ್ಮವನ್ನು ಮಾಡುತ್ತಾನೆ. ಮುಂದೆ ಎಂದೋ ಸಿಗಬಹುದಾದ ಫಲವು ತನಗೆ ಈ ದಿನವೇ ಸಿಕ್ಕಂತೆ ಭಾವಿಸಿಕೊಂಡು ಮನಸ್ಸಿನಲ್ಲಿ ನಾನಾತರಹದ ಕಲ್ಪನೆಗಳ ಕನಸುಗಳನ್ನು ಕಾಣುತ್ತಾನೆ. ಹೀಗಾಗಿ ಅವನ ಶಕ್ತಿಯು ವಿನಾಕಾರಣ, ಕಲ್ಪನೆಯಲ್ಲಿಯೇ ವ್ಯಯವಾಗಿ ಅವನು ದುಃಖಿಯಾಗುತ್ತಾನೆ. ಮನಸ್ಸು ಅಶಾಂತವಾಗಿರುವುದರಿಂದ, ಅವನು ಇವತ್ತಿನ ಕಾರ್ಯವನ್ನು ದಕ್ಷತೆಯಿಂದ ಮಾಡಲಾಗದೆ ಉಪೇಕ್ಷಿಸುತ್ತಾನೆ. ಇವತ್ತು ಕರ್ಮವನ್ನು ಸರಿಯಾಗಿ ಮಾಡದಿದ್ದರೆ ನಾಳೆ ಅದರ ಸಂಪೂರ್ಣ ಫಲ ಸಿಗುವುದಾದರೂ ಹೇಗೆ? ಇವತ್ತು ಭೂಮಿಯನ್ನು ಉತ್ತು, ಬಿತ್ತಿ, ಕಾಲಕಾಲಕ್ಕೆ ನೀರನ್ನುಣಿಸಿ ಕೃಷಿಕರ್ಮಗಳನ್ನು ಸರಿಯಾಗಿ ಮಾಡಿದರೆ ಮಾತ್ರ ನಾಳೆ ಪೈರು ಸಿಗುತ್ತದೆ. ಇವತ್ತು ಕೃಷಿಯನ್ನೇ ಮಾಡದಿದ್ದರೆ, ಅಥವಾ ಅರ್ಧಂಬರ್ಧ ಮಾಡಿದರೆ ನಾಳೆ ಹುಲುಸಾದ ಪೈರು ಸಿಗುವುದೆಂತು? ಆದುದರಿಂದ ಇವತ್ತು ಕರ್ಮಮಾಡುವಾಗ ಆ ಕರ್ಮದ ಫಲಾಪೇಕ್ಷೆಯನ್ನು ತ್ಯಾಗಮಾಡಿ, ಕರ್ಮವನ್ನು ದಕ್ಷತೆಯಿಂದ ಮಾಡಬೇಕೆಂದು ಹೇಳಲಾಗಿದೆ. ಇದಕ್ಕೆ ತ್ಯಾಗ ಎಂದು ಹೆಸರು. ಸನ್ಯಾಸ ಮತ್ತು ತ್ಯಾಗ ಇವೆರಡೂ, ನಾವು ಕರ್ಮದಲ್ಲಿ ಅನುಸರಿಸಬೇಕಾದ ಕೆಲವು ವಿಶಿಷ್ಟ ನಿಯಮಗಳನ್ನು, ಶಿಸ್ತನ್ನು ಸೂಚಿಸುತ್ತವೆ. ಅಂತೂ ಕರ್ಮವನ್ನು ಬಿಡದೆ ಸತತವೂ ದಕ್ಷತೆಯಿಂದ ಮಾಡುತ್ತಿರ-ಬೇಕೆಂದು ಗೀತೆಯು ಹೇಳುತ್ತದೆ. ಕರ್ಮದ ಹಿಂದಿನ (ಕಾಮ) ಮತ್ತು ಮುಂದಿನ (ಫಲ) ಸಂಬಂಧಗಳನ್ನು ಕತ್ತರಿಸಿ ಹಾಕಿ ಇವತ್ತಿನ ಕರ್ಮವನ್ನು ದಕ್ಷತೆಯಿಂದಲೂ, ಬುದ್ಧಿವಂತಿಕೆಯಿಂದಲೂ ಮಾಡಬೇಕು.

ತ್ಯಾಜ್ಯಂ ದೋಷವದಿತ್ಯೇತೇ ತ್ಯೇಕೇ ಕರ್ಮಪ್ರಾಹುರ್ಮನಿಷಿಣಃ |
ಯಜ್ಞದಾನಪತಃ ಕರ್ಮ ನ ತ್ಯಾಜ್ಯಮಿತಿ ಚಾಪರೆ ಚಾಪರೇ || 3 ||
ಅರ್ಥ :- ಎಲ್ಲಾ ಕರ್ಮಗಳೂ ದೋಷಯುಕ್ತವಾದವುಗಳು ಆದ್ದರಿಂದ ಅವುಗಳನ್ನು ತ್ಯಜಿಸಬೇಕು ಎಂದು ಕೆಲವು ವೇದಾಂತಿಗಳು ಹೇಳುತ್ತಾರೆ. ಇನ್ನು ಕೆಲವರು ಯಜ್ಞ, ದಾನ, ತಪಸ್ ಎಂಬ ಕರ್ಮಗಳನ್ನು ಮಾತ್ರ ತ್ಯಜಿಸಬಾರದೆಂದು ಹೇಳುತ್ತಾರೆ.
ಎಲ್ಲಾ ಕರ್ಮಗಳಿಂದಲೂ ‘ವಾಸನೆ’ ಉಂಟಾಗುವುದರಿಂದ ಕರ್ಮಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದು ಸಾಂಖ್ಯ ವೇದಾಂತಿಗಳು ಹೇಳುತ್ತಾರೆ. ಇನ್ನು ಕೆಲವರು ಆಸೆಯಿಂದ ಮಾಡುವ ಕರ್ಮಗಳು, ಮತ್ತು ದುರ್ಮಾಗಕ್ಕೆ ಎಳೆದುಕೊಂಡು ಹೋಗುವ ಕರ್ಮಗಳು ಮಾತ್ರ ದೋಷಯುತವಾದವುಗಳೆಂದೂ, ಅವುಗಳನ್ನೂ ತ್ಯಜಿಸಬೇಕೂ; ಬೇಕು ಸನ್ಮಾರ್ಗಕ್ಕೆ, ಆತ್ಮವಿಕಾಸಕ್ಕೆ ಸಾಧಕವಾದ ಯಜ್ಞ, ದಾನ, ತಪಸ್ಸುಗಳನ್ನು ಮಾಡಲೇ ಬೇಕಂದೂ ಹೇಳುತ್ತಾರೆ. ಜ್ಞಾನಿಯು ಸರ್ವಕರ್ಮಗಳನ್ನು ತ್ಯಜಿಸಬೇಕೆಂದೂ, ಕರ್ಮಯೋಗಿಯು ಮಾತ್ರ ಕರ್ಮಗಳನ್ನು ಮಾಡಬೇಕೆಂದೂ ಶಂಕರಾಚಾರ್ಯರು ಭಾಷ್ಯ ಬರೆದಿದ್ದಾರೆ. ಶ್ರೀಕೃಷ್ಣನು ಉಪದೇಶಿಸಿದ ತತ್ವಕ್ಕನುಸಾರವಾಗಿ, ಫಲಾಸೆಯನ್ನಿಟ್ಟುಕೊಂಡು ಮಾಡುವ ಕರ್ಮಗಳು ತ್ಯಾಜವಾಗಿವೆ. ಪ್ರತಿಯೊಂದು ಕರ್ಮವನ್ನು ಕರ್ತವ್ಯ ದೃಷ್ಟಿಯನ್ನಿಟ್ಟುಕೊಂಡು ಅಹಂಭಾವವನ್ನು ತ್ಯಜಿಸಿ, ಫಲಾಸೆಗಳನ್ನು ಇಚ್ಛಿಸದೆ, ಪ್ರತಿಯೊಬ್ಬನೂ ಅವಶ್ಯಕವಾಗಿ ಮಾಡಲೇಬೇಕು. ಈ ರೀತಿಯ ಕರ್ಮಗಳ ಮುಖಾಂತರವೇ ಪರಮಾತ್ಮನ ಅರ್ಚನೆಯನ್ನು ಮಾಡಬೇಕು.

ನಿಶ್ಚಯಂ ಶೃಣು ಮೇ ತತ್ರ ತ್ಯಾಗೇ ಭರತಸತ್ತಮ |
ತ್ಯಾಗೋ ಹಿ ಪುರುಷವ್ಯಾಘ್ರ ತ್ರಿವಿಧಃ ಸಂಪ್ರಕೀರ್ತಿತಃ || 4 ||
ಅರ್ಥ :- ಭರತ ಶ್ರೇಷ್ಠನೇ. ತ್ಯಾಗದ ವಿಷಯದಲ್ಲಿ ನನ್ನ ನಿಶ್ಚಯ ಅಭಿಪ್ರಾಯವನ್ನು ಹೇಳುತ್ತೇನೆ ಕೇಳು. ಪುರುಷಶ್ರೇಷ್ಠನೇ, ತ್ಯಾಗವು ಮೂರು ವಿಧವಾಗಿದೆ.
ಮನುಷ್ಯರಲ್ಲಿ ಸ್ವಭಾವವಾಗಿ ಸಂಗ್ರಹಮಾಡುವ ಬುದ್ಧಿ ಇದೆ. ತ್ಯಾಗಮಾಡಲು ಎಲ್ಲರೂ ಇಷ್ಟಪಡುವುದಿಲ್ಲ. ಆದುದರಿಂದ ಈ ತ್ಯಾಗದ ತಾತ್ವಿಕವಿವರಗಳನ್ನು ಶ್ರೀಕೃಷ್ಣನು ಹೇಳಲು ಪ್ರಾರಂಭಿಸಿದ್ದಾನೆ. ಅರ್ಜುನನ ಮನಸ್ಸನ್ನು ಈ ವರ್ಣನೆಯ ಕಡೆಗೆ ಆಕರ್ಷಿಸುವುದಕ್ಕಾಗಿ, ಅವನ ಮನಸ್ಸನ್ನು ಪ್ರೋತ್ಸಾಹಿಸುವುದಕ್ಕಾಗಿ ಅವನನ್ನು ಭರತಸತ್ತಮ, ಪುರುಷವ್ಯಾಘ್ರ ಎಂದು ಎರಡು ರೀತಿಯಲ್ಲಿ ಸಂಬೋಧಿಸಿ ಹೊಗಳಿದ್ದಾನೆ, ತ್ಯಾಗವು ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಎಂದು ಮೂರು ವಿಧವಾಗಿದೆ.

ಯಜ್ಞದಾನತಪಃಕರ್ಮ ನ ತ್ಯಾಜ್ಯಂ ಕಾರ್ಯಮೇವ ತತ್ |
ಯಜ್ಞೋ ದಾನಂ ತಪಶ್ಚೈವ ಪಾವನಾನಿ ಮನೀಷಿಣಾಮ್ || 5 ||
ಅರ್ಥ :- ಯಜ್ಞ, ದಾನ ಮತ್ತು ತಪಸ್ಸುಗಳನ್ನು ತ್ಯಾಗಮಾಡಬಾರದು. ಪ್ರತಿಯೊಬ್ಬರೂ ಇವುಗಳನ್ನು ಮಾಡಲೇಬೇಕು. ಯಜ್ಞ, ದಾನ, ತಪಸ್ಸುಗಳು ಬುದ್ಧಿವಂತರನ್ನು ಪುನೀತಗೊಳಿಸುತ್ತವೆ.
ಯಜ್ಞ, ದಾನ, ತಪಸ್ಸುಗಳಿಂದ ವ್ಯಕ್ತಿಯ ಮನಸ್ಸು, ಬುದ್ಧಿಗಳು ಶಿಸ್ತಿಗೊಳಪಟ್ಟು, ವಿಕಾಸವನ್ನು ಹೊಂದಿ, ಪರಮ ಗುರಿಯಾದ ಆತ್ಮಜ್ಞಾನವನ್ನು ಹೊಂದುವ ಯೋಗ್ಯತೆಯನ್ನು ಪಡೆಯುತ್ತವೆ. ಬುದ್ಧಿವಂತರಾದ ಜನರು, ಉತ್ಕ್ರಾಂತಿಪಥದಲ್ಲಿ ಜಾಗ್ರತೆಯಾಗಿ ಮೇಲಕ್ಕೇರಲು ಇಷ್ಟಪಡುವುದರಿಂದ, ಯಜ್ಞ, ದಾನ, ತಪಸ್ಸುಗಳು ಅವರಲ್ಲಿ ಅಹಂಭಾವವನ್ನು ನಾಶಮಾಡಿ, ಮನಸ್ಸನ್ನು ಏಕಾಗ್ರ ಮಾಡಿ ಆತ್ಮಧ್ಯಾನದಲ್ಲಿ ನಿರತವಾಗುವಂತೆ ಮಾಡುತ್ತವೆ. ಈ ಕಾರ್ಯಗಳಿಂದ ಅವರು ಮನಃಶಾಂತಿಯನ್ನು ಗಳಿಸುತ್ತಾರೆ.

ಏತಾನ್ಯಪಿತು ಕರ್ಮಾಣಿ ಸಂಗಂ ತ್ಯಕ್ತ್ವಾ ಫಲಾನಿಚ |
ಕರ್ತವ್ಯಾನೀತಿ ಮೇ ಪಾರ್ಥ ನಿಶ್ಚಿಂತಂಮತಮುತ್ತಮಮ್ || 6 ||
ಅರ್ಥ :- ಈ ಕರ್ಮಗಳನ್ನಾದರೂ ಸಹ, ಅವುಗಳಲ್ಲಿ ಮೋಹವನ್ನೂ, ಮಮಕಾರವನ್ನೂ ಹಚ್ಚಿಕೊಳ್ಳದೆ, ಫಲಾಶೆಯನ್ನು ಬಿಟ್ಟು, ಕರ್ತವ್ಯ ಎಂಬ ದೃಷ್ಟಿಯಿಂದ ಮಾಡಬೇಕು. ಇದು ನನ್ನ ನಿಶ್ಚಿತವೂ, ಉತ್ತಮವೂ ಆದ ಅಭಿಪ್ರಾಯವು.
ಆಸೆ ಮತ್ತು ಅಹಂಕಾರ ಇವು ಎರಡೂ ಬಂಧನಕರವಾಗಿವೆ. ಅಹಂಕಾರವು ತನ್ನ ಆಸೆಯನ್ನು ಪೂರೈಸಿಕೊಳ್ಳಲು ಪ್ರಯತ್ನಿಸುವಾಗ ಸುತ್ತುಮುತ್ತಲಿನ, ವಸ್ತುಗಳೊಡನೆ ಹೊಂದುವ ಸಂಬಂಧಕ್ಕೆ, ಮೋಹಕ್ಕೆ, ‘ಸಂಗ’ ಎಂದು ಹೆಸರು. ಒಮ್ಮೆ ಯಾವುದಾದರೂ ವಿಷಯದಲ್ಲಿ ಮೋಹವುಂಟಾಯಿತೆಂದರೆ, ಅದನ್ನು ಗಳಿಸುವುದಕ್ಕಾಗಿ, ಮನುಷ್ಯನು ಎಂತಹ ನೀಚಕಾರ್ಯಗಳನ್ನಾದರೂ ಮಾಡುತ್ತಾನೆ. ಈ ಕೆಲಸವು ಪ್ರಾರಂಭವಾಗುವುದರÉೂಳಗೇನೇ, ಅದರಿಂದ ಲಭಿಸುವ ಫಲ ಮತ್ತು ಅವುಗಳ ಭೋಗಗಳ ಬಗ್ಗೆ ಮನಸ್ಸಿನಲ್ಲಿ ನಾನಾತರಹದ ಕಲ್ಪನೆಗಳಿಗೆ ಪ್ರಾರಂಭವಾಗುತ್ತದೆ. ಹೀಗಾಗಿ ಆ ಕರ್ಮದಲ್ಲಿ ಯಶಸ್ಸನ್ನು ಗಳಿಸಲು ಮನಸ್ಸನ್ನು ಸಂಪೂರ್ಣವಾಗಿ ವಿನಿಯೋಗಿಸಲು ಆಗದಿರುವುದರಿಂದ, ಕರ್ಮದಲ್ಲಿಯ ದಕ್ಷತೆಯು ಕಡಿಮೆಯಾಗುತ್ತದೆ. ಯಜ್ಞ, ದಾನ, ತಪಸ್ಸುಗಳನ್ನು ಬಿಡಕೂಡದೆಂಬುದು ತನ್ನ ಮತ ಎಂದು ಕೃಷ್ಣನು ಹೇಳಿದ್ದಾನೆ. ಇದುವರೆಗೆ ಇದು ಶಾಸ್ತ್ರದ ಮತ ಎಂದು ಹೇಳಿದ್ದ ಕೃಷ್ಣನ ಧಾಟಿಯು ಈಗ ಬದಲಾಗಿದೆ. ಅರ್ಜುನನು ಶ್ರೀಕೃಷ್ಣನ ಉಪದೇಶವನ್ನು ಕೇಳಿ, ಅವನಲ್ಲಿ ತುಂಬಾ ಶ್ರದ್ಧೆ ಹಾಗೂ ಭಕ್ತಿಯುಳ್ಳವನಾಗಿರು ವುದರಿಂದ, ಅವನಿಗೆ ಈಗ ಋಷಿಗಳ ವಾಕ್ಯಕ್ಕಿಂತಲೂ, ಶ್ರೀಕೃಷ್ಣನ ವಾಕ್ಯವು ಹೆಚ್ಚು ರುಚಿಸಹತ್ತಿದೆ. ಅದರಲ್ಲಿ ಹೆಚ್ಚು ಶ್ರದ್ಧೆಯುಂಟಾಗಿದೆ. ಇದನ್ನರಿತು ಶ್ರೀಕೃಷ್ಣನು ಈ ರೀತಿಯಾಗಿ, ಇದು ನನ್ನ ಮತ ಎಂದು ಹೇಳಿದ್ದಾನೆ.
ತಾಮಸತ್ಯಾಗದ ಲಕ್ಷಣ
ನಿಯತಸ್ಯತು ಸನ್ಯಾಸಃಕರ್ಮಣೋನೋಪಪದ್ಯತೇ | ಮೋಹಾತ್ತಸ್ಯಪರಿತ್ಯಾಗಸ್ತಾಮಸಃಪರಿಕೀರ್ತಿತಃ || 7 ||
ಅರ್ಥ :- ಪ್ರತಿಯೊಬ್ಬನೂ ಅವಶ್ಯಕವಾಗಿ ಮಾಡಲೇಬೇಕಾದ ಕರ್ತವ್ಯ ಕರ್ಮಗಳನ್ನು ತ್ಯಜಿಸುವುದು ಯೋಗ್ಯವಲ್ಲ. ಅಜ್ಞಾನದಿಂದ ಇಂತಹ ಕರ್ಮಗಳನ್ನು ತ್ಯಜಿಸಿದರೆ ಅದಕ್ಕೆ ‘ತಾಮಸ ತ್ಯಾಗ’ ಎನ್ನುತ್ತಾರೆ.
ಮನುಷ್ಯನು ಜೀವಿಸಿರಲು ತನ್ನ ಹಾಗೂ ಸಮಾಜದ ದೃಷ್ಟಿಯಿಂದ ಅವಶ್ಯಕವಾಗಿ ಕೆಲವು ಕರ್ಮಗಳನ್ನು ಮಾಡಲೇಬೇಕು. ಇವು ನಿತ್ಯಕರ್ಮಮ ನೈಮಿತ್ತಿಕ ಕರ್ಮ, ಮತ್ತು ವಿಶೇಷ ಕರ್ಮ ಎಂದು ಮೂರು ವಿಧವಾಗಿವೆ. ಮನುಷ್ಯನು ಜೀವಿಸಿರುವವರೆಗೂ, ಸಾಮಾಜಿಕ ಜೀವನವನ್ನು ನಡೆಸುತ್ತಿರುವವರೆಗೂ ಸಮಾಜದಿಂದ ಲಾಭವನ್ನು ರಕ್ಷಣೆಯನ್ನೂ ಪಡೆಯುತ್ತಿರುವವರೆಗೂ, ತಾನು ಸಮಾಜಕ್ಕೆ ಪ್ರತಿಯಾಗಿ ಏನನ್ನಾದರೂ ಸಲ್ಲಿಸಲೇ ಬೇಕು. ಸಮಾಜದ ಸಾಲವನ್ನು, ಋಣವನ್ನು ತೀರಿಸಲೇ ಬೇಕು. ಜೊತೆಗೆ ಸಮಾಜದ ಬೆಳವಣಿಗೆಗೆ, ಅಭಿವೃದ್ಧಿಗೆ ತನ್ನ ಕೈಲಾದಷ್ಟು ಸಹಾಯವನ್ನೂ ನೀಡಬೇಕು. ಈ ದೃಷ್ಟಿಯಿಂದ ಪ್ರತಿಯೊಬ್ಬನೂ, ಇಂತಿಂತಹ ಕರ್ಮಗಳನ್ನು ಮಾಡಲೇಬೇಕೆಂದು ಸಮಾಜವು ವಿಧಿಸಿದೆ. ಈ ಕರ್ಮಗಳನ್ನು ತಪ್ಪದೆ ಅವಶ್ಯಕವಾಗಿ ಮಾಡಲೇಬೇಕು. ಇದೇ ರೀತಿಯಾಗಿ ವೈದಿಕಕರ್ಮಗಳನ್ನು ಸಹ ತ್ಯಜಿಸುವಂತಿಲ್ಲ. ಏಕೆಂದರೆ ಇವು ಸಮಾಜದ ಪೋಷಣೆಗೆ ಸಹಾಯಕವಾಗಿವೆ. ಪ್ರಪಂಚದ ವ್ಯವಹಾರದಲ್ಲಿ ಕಾನೂನಿನ ಜ್ಞಾನವಿಲ್ಲವೆಂಬ ನೆವದಿಂದ ತಪ್ಪು ಮಾಡಿದವನು ಹೇಗೆ ಶಿಕ್ಷೆಗೊಳಗಾಗಬೇಕೋ, ಅದೇ ರೀತಿ, ನೈತಿಕ ಹಾಗೂ ಅಧ್ಯಾತ್ಮಿಕ ರಾಜ್ಯದಲ್ಲಿ ಸಹ ಆ ನಿಯಮಗಳು ಗೊತ್ತಿಲ್ಲವೆಂದರೆ ಶಿಕ್ಷೆಯನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. ಹೀಗೆ ಗೊತ್ತಿಲ್ಲವೆಂಬ ಅಜ್ಞಾನದಿಂದ ಯಜ್ಞ, ದಾನ, ತಪಸ್ಸುಗಳನ್ನು ಮಾಡದಿದ್ದರೆ ಅದು ತಾಮಸತ್ಯಾಗ ವಾಗುತ್ತದೆ.
ರಾಜಸ ತ್ಯಾಗದ ಲಕ್ಷಣ
ದುಃಖಮಿತ್ಯೇವ ಯತ್ಕರ್ಮ ಕಾಯಕ್ಲೇಶಭಯಾತ್ತ್ಯಜೇತ್ |
ಸ ಕೃತ್ವಾ ರಾಜಸಂ ತ್ಯಾಗಂ ನೈವ ತ್ಯಾಗಫಲಂ ಲಭೇತ್ || 8 ||
ಅರ್ಥ :- ಕರ್ಮ ಮಾಡುವುದರಿಂದ ತನ್ನ ಶರೀರ ಮನಸ್ಸುಗಳಿಗೆ ದುಃಖವುಂಟಾಗುತ್ತದೆಂಬ ನೆವದಿಂದ ಕರ್ಮಗಳನ್ನು ತ್ಯಾಗಮಾಡಿದರೆ ಅದು ರಾಜಸ ತ್ಯಾಗವಾಗುತ್ತದೆ. ಇಂತಹ ತ್ಯಾಗಕ್ಕೆ ನಿಜವಾಗಿ ತ್ಯಾಗದಿಂದ ಲಭಿಸಬೇಕಾದ ಫಲವು ಸಿಗಲಾರದು.
ಅರ್ಜುನನು ತನ್ನ ಕರ್ತವ್ಯ ಕರ್ಮವನ್ನು ಅಂದರೆ ಯುದ್ಧಕರ್ಮವನ್ನು ಮಾಡಲು ಹಿಂಜರಿದ್ದನು. ಇದು ರಾಜಸತ್ಯಾಗ.
ಸಾತ್ವಿಕ ತ್ಯಾಗ
ಕಾರ್ಯಮಿತ್ಯೇವ ಯತ್ಕರ್ಮ ನಿಯತಂ ಕ್ರಿಯತೇ„ರ್ಜುನ |
ಸಂಗಂ ತ್ಯಕ್ತ್ವಾಫಲಂ ಚೈವ ಸ ತ್ಯಾಗಃ ಸಾತ್ತ್ವಿಕೋ ಮತಃ || 9 ||
ಅರ್ಥ :- ಅರ್ಜುನನೇ, ತಾನು ಮಾಡವು ಕರ್ಮವು ತನ್ನ ಕರ್ತವ್ಯವಾದುದರಿಂದ ಅದನ್ನು ತಾನು ಮಾಡಲೇಬೇಕು ಎಂದು ತಿಳಿದುಕೊಂಡು, ಆ ಕರ್ಮದಲ್ಲಿ ಮೋಹನವನ್ನು ಹೊಂದದೆ ಫಲಾಶೆಯನ್ನು ಬಿಟ್ಟು (ತ್ಯಾಗ), ಕರ್ತವ್ಯ ದೃಷ್ಟಿಯಿಂದ ಕರ್ಮ ಮಾಡಿದರೆ ಇಂತಹ ತ್ಯಾಗವು ಸಾತ್ವಿಕ ತ್ಯಾಗ ಎನಿಸಿಕೊಳ್ಳುತ್ತದೆ.
ಸಾತ್ವಿಕ ತ್ಯಾಗದಲ್ಲಿ ಕರ್ಮ ಮಾಡುವುದು ಅತ್ಯವಶ್ಯಕ. ಆದಾಗ್ಯೂ ಇದಕ್ಕೆ ‘ತ್ಯಾಗ’ ಎಂಬ ಹೆಸರನ್ನು ಕೊಡಲಾಗಿದೆ. ಏಕೆಂದರೆ, ಇಲ್ಲಿ ಕರ್ಮ ಮಾಡುವುದು ಅವಶ್ಯಕವಾದಾಗ್ಯೂ, ಮನೋಭಾವವು ತ್ಯಾಗವಾಗಿದೆ. ಮನಸ್ಸಿನಲ್ಲಿ ಫಲವನ್ನು ತ್ಯಾಗ ಮಾಡಿರುವುದರಿಂದ ಈ ಕರ್ಮವು ಬಂಧನಕರವಲ್ಲ. ಆದುದರಿಂದ ಇಲ್ಲಿ ಫಲತ್ಯಾಗವನ್ನು ಗಮನದಲ್ಲಿಟ್ಟುಕೊಂಡು ‘ತ್ಯಾಗ’ ಎಂದು ಹೇಳಲಾಗಿದೆ. ಉಪವಾಸವಿರುವವನು, ಉಪವಾಸವನ್ನು ತ್ಯಾಗ ಮಾಡುವುದು ಎಂದರೆ ಆಹಾರವನ್ನು ಸೇವಿಸುವುದು, ಅರ್ಥಾತ್ ಆಹಾರವನ್ನು ಸೇವಿಸುವ ಕರ್ಮವನ್ನು ತ್ಯಾಗ ಮಾಡುವುದು ಎಂದಂತೆ. ಮೇಲಿನ ಮೂರೂ ಶ್ಲೋಕಗಳಲ್ಲಿಯೂ ತ್ಯಾಗ ಎಂಬ ಶಬ್ದವನ್ನು ಕರ್ಮ ತ್ಯಾಗಕ್ಕೆ ಉಪಯೋಗಿಸಿರದೆ, ಅದರ ಹಿಂದಿನ ಮನೋಭಾವವನ್ನು ಸೂಚಿಸಿ ಉಪಯೋಗಿಸಲಾಗಿದೆ. ತ್ಯಾಗವು ಮನುಷ್ಯನನ್ನು ದಕ್ಷ, ಕುಶಲ ಹಾಗೂ ಯಶಸ್ವಿಯಾದ ಕರ್ಮಯೋಗಿನ್ನಾಗಿ ಮಾಡುತ್ತದೆ.

ನ ದ್ವೇಷ್ಟ್ಯಕುಶಲಂ ಕರ್ಮ ಕುಶಲೇ ನಾನುಷಜ್ಜತೇ |
ತ್ಯಾಗೀ ಸತ್ತ್ವಸಮಾವಿಷ್ಟೋ ಮೇಧಾವೀ ಛಿನ್ನಸಂಶಯಃ || 10 ||
ಅರ್ಥ:- ಸತ್ವಗುಣದಿಂದ ಕೂಡಿದ ತ್ಯಾಗಿಯು ಬುದ್ಧಿವಂತನಾಗಿರುವುದರಿಂದಲೂ, ಜ್ಞಾಪಕಶಕ್ತಿಯುಳ್ಳವನಾಗಿರುವುದರಿಂದಲೂ, ಸಂಶಯಗಳಲ್ಲಿ ಸಮನಾಗಿರುವÀÅದರಿಂದಲೂ, ತನಗೆ ಇಷ್ಟವಿಲ್ಲದ, ಕರ್ಮವನ್ನು ದ್ವೇಷಿಸುವುದೂ ಇಲ್ಲ, ಇಷ್ಟವಿರುವ ಕರ್ಮವನ್ನು ಅತಿಯಾಗಿ ಪ್ರೀತಿಸುವುದೂ ಇಲ್ಲ.
ಮೇಲೆ ತಾತ್ವಿಕ ತ್ಯಾಗವನ್ನು ವರ್ಣಿಸುವಾಗ, “ಕರ್ಮಮಾಡುವುದು ತನ್ನ ಕರ್ತವ್ಯ” (ಕಾರ್ಯಮಿತಿ) ಎಂಬ ಭಾವದಿಂದ ಫಲಾಸೆಯನ್ನು ಬಿಟ್ಟು ಕರ್ಮ ಮಾಡಬೇಕೆಂದು ಹೇಳಿದ ಮಾತು ಅರ್ಜುನನಿಗೆ ಸಂಪೂರ್ಣವಾಗಿ ಅರ್ಥವಾಗಲಿಲ್ಲವೆಂದು ಪ್ರಾಯಶಃ ಊಹಿಸಿ, ಇಲ್ಲವೆ ಈ ಭಾವವನ್ನು ಅವನ ಮುಖದ ಮೇಲೆ ಕಂಡು ಶ್ರೀಕೃಷ್ಣನು ಈಗ ಇನ್ನೂ ಹೆಚ್ಚಿನ ವಿವರಣೆಯನ್ನು ಕೊಡುತ್ತಿದ್ದಾನೆ. ಇಂತಹ ಮನುಷ್ಯನು ಎಲ್ಲಾ ಕರ್ಮಗಳನ್ನು ತನ್ನ ಕರ್ತವ್ಯ ಎಂಬ ದೃಷ್ಟಿಯಿಂದ ಮಾಡುವುದರಿಂದಲೂ, ಕರ್ಮಫಲದಲ್ಲಿ ಅವನಿಗೆ ಆಸಕ್ತಿಯಿಲ್ಲದಿರುವುದರಿಂದಲೂ, ತಾನು ಮಾಡುತ್ತಿರುವ ಕರ್ಮವು ತನಗೆ ಇಷ್ಟವಿಲ್ಲದ್ದಾದರೆ ಅದನ್ನು ದ್ವೇಷಿಸುವುದಿಲ್ಲ. ಇಷ್ಟವಿರುವುದಾದರೆ ಪ್ರೀತಿಸುವುದೂ ಇಲ್ಲ. ಎರಡೂ ತರಹದ ಕರ್ಮಗಳನ್ನು ಒಂದೇ ರೀತಿಯಾಗಿ, ತನ್ನ ಕರ್ತವ್ಯ ಎಂಬ ದೃಷ್ಟಿಯಿಂದ, ದಕ್ಷತೆಯಿಂದ ಮಾಡುತ್ತಾನೆ. ಹೀಗೆ ಕರ್ಮವನ್ನು ಮಾಡುವುದರಲ್ಲಿಯೇ ಅವನು ಆನಂದವನ್ನು ಕಾಣುತ್ತಾನೆ. ಬೇಡಾದ ಕರ್ಮವನ್ನು ಮಾಡಬೇಕಾಯಿತಲ್ಲಾ ಎಂದು ವ್ಯಥೆಪಟ್ಟು ಶೋಕ ಸಂತಪ್ತನಾಗುವುದಿಲ್ಲ. ತನಗಿಷ್ಟವಿರುವ ಕರ್ಮವನ್ನು ಮಾಡುವ ಅವಸರ ಸಿಕ್ಕಿತೆಂದು ಆ ಕರ್ಮದಲ್ಲಿ ಮೋಹವನ್ನು ಹೊಂದುವುದೂ ಇಲ್ಲ. ಇವನ ಮನಸ್ಸಿನಲ್ಲಿ ಹೊಟ್ಟೆಕಿಚ್ಚು, ಕೋಪ, ಆಸೆ, ಲೋಭ, ಮೊದಲಾದ ಉದ್ವೇಗಳುಂಟಾದರೆ ಅವನು ಅವುಗಳ ಕಡೆಗೆ ಉಪೇಕ್ಷೆಯಿಂದಿರುತ್ತಾನೆ. ಅವುಗಳ ಬಗ್ಗೆ ಚಿಂತಿಸುವುದಿಲ್ಲ. ಅವುಗಳಿಂದ ತನ್ನ ಮನಃಶಾಂತಿಯು ಕದಡಲು ಆಸ್ಪದ ಕೊಡುವುದಿಲ್ಲ. ಇಂತಹ ಮನುಷ್ಯನನ್ನು ನಿಜವಾದ ವಿದ್ಯಾವಂತನೆಂದೂ ಸುಸಂಸ್ಕøತನೆಂದೂ ಕರೆಯಬೇಕು. ಸಂಸ್ಕಾರವನ್ನು ಹೊಂದದಿರುವವನ ಮನಸ್ಸು ಗಾಳಿಗೆ ಸಿಕ್ಕ ತರಗೆಲೆಯಂತೆ ಮಾನಸಿಕ ಉದ್ವೇಗಗಳಿಂದ ಅಲ್ಲೋಲಕಲ್ಲೋಲವಾಗಿ ಸಿಕ್ಕ ಕಡೆಗೆ ಕೊಚ್ಚಿಕೊಂಡು ಹೋಗುತ್ತಾ ಅದೇ ವಿಚಾರದಲ್ಲಿ ಏಳುತ್ತಾ, ಬೀಳುತ್ತಾ ಒದ್ದಾಡುತ್ತಿರುತ್ತದೆ. ಪ್ರಾಣಿಗಳಿಗೆ ಇಂತಹ ಮಾನಸಿಕ ಉದ್ವೇಗವನ್ನು ತಡೆದುಕೊಳ್ಳುವ ಶಕ್ತಿಯಿಲ್ಲ. ಆದರೆ ಮನುಷ್ಯನಾದವನು ಇವುಗಳನ್ನು ಗೆದ್ದು ತನ್ನ ಹತೋಟಿಯಲ್ಲಿಟ್ಟು ಕೊಳ್ಳಬಲ್ಲನು. ಪ್ರಪಂಚದಲ್ಲಿ ಕೆಲವೇ ಜನರು ಇಂತಹ ತ್ಯಾಗವನ್ನು ಮಾಡಬಲ್ಲರು. ಇದು ಎಲ್ಲರಿಗೂ ಸಾಧ್ಯವಿಲ್ಲ. ಆದುದರಿಂದ ಸಾಮಾನ್ಯ ಜನರು ಕರ್ಮಫಲವನ್ನಾದರೂ ಬಿಡಲಿ ಎಂದು ಹೇಳಲಾಗಿದೆ.

ನ ಹಿ ದೇಹಭೃತಾ ಶಕ್ಯಂ ತ್ಯಕ್ತುಂ ಕರ್ಮಾಣ್ಯಶೇಷತಃ |
ಯಸ್ತು ಕರ್ಮಫಲತ್ಯಾಗೀ ಸ ತ್ಯಾಗೀತ್ಯಭಿಧೀಯತೇ || 11 ||
ಅರ್ಥ :- ಶರೀರವನ್ನು ಧರಿಸಿರುವ ಮಾನವನು ಕರ್ಮಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ಶಕ್ಯವಿಲ್ಲ. ಆದುದರಿಂದ ಯಾರು ಕರ್ಮಫಲವನ್ನು ತ್ಯಾಗಮಾಡುತ್ತಾರೋ ಅವನಿಗೇ ತ್ಯಾಗಿ ಎಂದು ಹೇಳಲಾಗುತ್ತದೆ.
ಮನಃಶಾಂತಿಯನ್ನು ಗಳಿಸಲು ಸನ್ಯಾಸದ ಸಾಧನೆ ಮಾಡಿಕೊಂಡು ಸಂಸಾರದ ಜವಾಬ್ದಾರಿಯನ್ನು ಕಿತ್ತೊಗೆದು, ಕಾಡಿಗೆ ಹೋಗಿ ಅಲ್ಲಿ ಶಾಂತಿಯಿಂದ ಇರಬೇಕೆಂದು, ಸಾಮಾನ್ಯ ಬೇಜವಾಬ್ದಾರಿ ಮನುಷ್ಯ ಭಾವಿಸಬಹುದು. ಅಂತಹವರಿಗೆ ಇಲ್ಲಿ ಎಚ್ಚರಿಕೆಯನ್ನು ಕೊಡಲಾಗಿದೆ. ದೇಹವಿರುವವರೆಗೂ ಪ್ರತಿಯೊಬ್ಬನೂ ಒಂದಲ್ಲ ಇನ್ನೊಂದು ರೀತಿಯ ಕರ್ಮವನ್ನು ಮಾಡಲೇಬೇಕು. ಕರ್ಮವನ್ನು ಸಂಪೂರ್ಣವಾಗಿ ತ್ಯಜಿಸಲು ಸಾಧ್ಯವೇ ಇಲ್ಲ. ನಾವು ಜೀವಿಸುವುದಕ್ಕಾದರೂ, ಆಹಾರವನ್ನು ಸೇವಿಸುವ ಕರ್ಮವನ್ನಾದರೂ ಮಾಡಬೇಕು. ಬಾಹ್ಯಕರ್ಮಗಳನ್ನೂ ಒಂದು ವೇಳೆ ಬಿಟ್ಟರೂ, ಅಂಗಾಂಗಗಳ ಚಲನವಲನ, ಶಾರೀರಿಕ ರಕ್ತ ಸಂಚಲನ, ಅನ್ನಪಾಚನ, ಮಾನಸಿಕ ವಿಚಾರ ಇತ್ಯಾದಿ ಕರ್ಮಗಳಾದರೂ ಜೀವಿಸಿರುವತನಕ ನಡದೇ ನಡೆಯುತ್ತದೆ. ಶರೀರವಿರುವ ಪ್ರತಿಯೊಂದು ಪ್ರಾಣಿಯೂ, ಕ್ರಿಮಿಕೀಟಾದಿಗಳು ಸಹ ಚಲನವಲನಾದಿ ಕರ್ಮಗಳನ್ನು ಮಾಡಿಯೇ ಮಾಡುತ್ತವೆ. ಜೀವಿಸಿರುವ ತನಕ ನಡೆದೇ ನಡೆಯುತ್ತದೆ. ಈ ತರಹದ ಕರ್ಮಗಳು ಪ್ರಾಣಿಗಳು ಜೀವಂತವಾಗಿರುವ ಲಕ್ಷಣಗಳು. ಕರ್ಮವು ನಿಂತರೆ ಜೀವವು ಕೊನೆಗೊಂಡಂತೆಯೇ ಸರಿ. ಹೀಗೆ ಕರ್ಮವು ಅನಿವಾರ್ಯ ಎಂದ ಮೇಲೆ ನಾವು ಮಾಡುವ ಕರ್ಮವನ್ನು ಜಾಣತನದಿಂದ ಮಾಡಿದರೆ ಜೀವನವು ಸುಖಮಯವಾಗುತ್ತದೆ. ಗೀತೆಯು ಇದನ್ನೇ ಹೇಳುತ್ತದೆ.
ಸಾತ್ವಿಕ ತ್ಯಾಗವು ಎಲ್ಲರಿಗೂ ಸಾಧ್ಯವಿಲ್ಲ. ಆದಾಗ್ಯೂ ಎಲ್ಲರೂ ಪ್ರಯತ್ನದಿಂದ ಕರ್ಮಫಲತ್ಯಾಗ ಮಾಡಬಹುದು. ಹೀಗೆ ಕರ್ಮಫಲವನ್ನು ತ್ಯಾಗಮಾಡುವವನಿಗೆ ತ್ಯಾಗೀ ಎಂದು ಹೆಸರು.

ಅನಿಷ್ಟಮಿಷ್ಟಂ ಮಿಶ್ರಂ ಚ ತ್ರಿವಿಧಂ ಕರ್ಮಣಃ ಫಲಮ್ |
ಭವತ್ಯತ್ಯಾಗಿನಾಂ ಪ್ರೇತ್ಯ ನ ತು ಸಂನ್ಯಾಸಿನಾಂ ಕ್ವಚಿತ್ || 12 ||
ಅರ್ಥ :- ತ್ಯಾಗ ಭಾವವಿಲ್ಲದೆ ಸಂಸಾರದಲ್ಲಿ ಕರ್ಮಮಾಡುವವರಿಗೆ, ಅವನ ಮರಣದ ನಂತರ, ಬೇಡಾದುದು, ಬೇಕಾದುದು, ಮತ್ತು ಮಿಶ್ರ ಎಂಬ ಮೂರು ವಿಧದ ಫಲವು ದೊರೆಯುತ್ತದೆ. ಆದರೆ ಸನ್ಯಾಸಿಗಳಿಗೆ ಇವಾವುದೂ ಇಲ್ಲ.
ನಾವು ಮಾಡಿದ ಕರ್ಮದ ಪರಿಣಾಮವು ಮನಸ್ಸಿನ ಮೇಲುಂಟಾಗುತ್ತದೆ. ಒಳ್ಳೆಯ, ಕೆಟ್ಟ, ಮಿತ್ರ ಹಾಗೂ ಇತರೆ ಎಲ್ಲಾ ತರಹದ ಕರ್ಮಗಳೂ ತಮ್ಮ ತಮ್ಮ ಮುದ್ರೆಗಳನ್ನು ಸೂಕ್ಷ್ಮರೂಪದಲ್ಲಿ ಮನಸ್ಸಿನ ಮೇಲೆ ಅಚ್ಚೊತ್ತುತ್ತವೆ. ಇವುಗಳಿಗೆ ‘ಸಂಸ್ಕಾರ’ ಅಥವಾ ‘ವಾಸನೆ’ ಎಂದು ಹೇಳುತ್ತಾರೆ. ಈ ವಾಸನೆಗಳು ಸತ್ವಗುಣಯುಕ್ತವಾಗಿದ್ದರೆ ಜೀವನು ಮುಂದಿನ ಜನ್ಮದಲ್ಲಿ, ಈ ವಾಸನೆಗಳನ್ನು ಭೋಗಿಸಲು ಸಹಾಯಕವಾದ ಸತ್ವಗುಣಯುಕ್ತವಾದ ಶರೀರವನ್ನೇ ಆರಿಸಿಕೊಳ್ಳುತ್ತಾನೆ. ವಾಸನೆಯು ಕೆಳಮಟ್ಟಕ್ಕಾಗಿ ಇಂದ್ರಿಯ ಸುಖಗಳನ್ನೇ ಅಪೇಕ್ಷಿಸುವುದಾದರೆ, ಅದಕ್ಕೆ ಸಹಾಯಕವಾದ ಕೆಳಮಟ್ಟದ ಶರೀರವನ್ನು ಆರಿಸಿಕೊಳ್ಳುತ್ತಾನೆ. ಎರಡೂ ತರಹದ ಮಿಶ್ರವಾಸನೆಯಿದ್ದರೆ ಪುನಃ ಈಗಿನಂತಹ ಶರೀರವನ್ನೇ ಆರಿಸಿಕೊಳ್ಳುತ್ತಾನೆ. ಪ್ರತಿಯೊಬ್ಬನಲ್ಲಿಯೂ ಮೇಲ್ಮಟ್ಟಕ್ಕೇರಬೇಕೆಂಬ ಅಭಿಲಾಷೆ ಇದೆ. ಆದರೆ ಮೃಗೀಯ ಇಂದ್ರಿಯ ಲಾಲಸೆಗಳು ಇಂದ್ರಿಯಲಲಾಟಗಳು ಲಾಲಸೆಗಳು ಸಹ ಜಾಗೃತವಾಗಿದ್ದು ನಮ್ಮನ್ನು ಆ ಕಡೆಗೆ ಎಳೆಯುತ್ತವೆ. ನಾವು ಸಾತ್ವಿಕ ವಿಚಾರಗಳನ್ನೇ ಮಾಡುತ್ತಾ ಸಾತ್ವಿಕ ಕರ್ಮಗಳಲ್ಲಿ ನಿರತವಾಗಿದ್ದರೆ, ನಮ್ಮಲ್ಲಿ ಕ್ರಮೇಣ ಸತ್ವಗುಣಗಳು ವೃದ್ಧಿಯಾಗುತ್ತವೆ. ಮತ್ತು ಮನಸ್ಸಿನ ಮೇಲೆ ಇದೇ ತರಹದ ವಾಸನೆಗಳುಂಟಾಗುತ್ತವೆ. ಮಧ್ಯಕ್ಕೆ ನಿಲ್ಲಿಸಿದ್ದ ಸಾಧನೆಗಳನ್ನು ಮುಂದುವರಿಸಲು ಅನುಕೂಲವಾಗುವಂತಹ ಮೇಲ್ಮಟ್ಟದ ಮನೋಬುದ್ಧಿಗಳಿರುವ ಶರೀರವನ್ನೂ, ಆ ಸಾಧನೆಗೆ ಅನುಕೂಲವಾಗುವಂತಹ ವಾತಾವರಣವನ್ನು ಆರಿಸಿಕೊಂಡು ಜೀವನು ಮುಂದಿನ ಜನ್ಮವನ್ನು ಪಡೆಯುತ್ತಾನೆ. ಅಂದರೆ ಈ ಜನ್ಮದಲ್ಲಿ ಸಾತ್ವಿಕ ಗುಣವನ್ನು ಹೆಚ್ಚಿಸಿಕೊಂಡರೆ, ಮುಂದಿನ ಜನ್ಮದಲ್ಲಿ ಅದೇ ಗುಣಗಳನ್ನು ಈಗ ಬಿಟ್ಟಲ್ಲಿಂದ ಮುಂದಕ್ಕೆ ವೃದ್ಧಿಪಡಿಸಿಕೊಂಡು. ಕ್ರಮೇಣ ಗುರಿಯತ್ತ ಸಾಗಬಹುದು. ರಾಜಸಿಕ, ತಾಮಸಿಕ ಸಂಸ್ಕಾರಗಳಲ್ಲಿ ಸಹ ಇದೇ ರೀತಿಯಾಗಿ ಮುಂದಿನ ಜನ್ಮದಲ್ಲಿ ರಾಜಸಿಕ, ತಾಮಸಿಕ ಶರೀರಗಳನ್ನು ಪಡೆಯುವಂತೆ ಮಾಡುತ್ತವೆ. ಆದುದರಿಂದ ಈ ಜನ್ಮದಲ್ಲಿ ಸತ್ಕರ್ಮಗಳನ್ನು ಮಾಡಬೇಕೆಂದೂ, ಕರ್ಮಫಲವನ್ನು ತ್ಯಜಿಸಿ ಕರ್ಮಮಾಡಿ ತ್ಯಾಗಿಯಾಗಬೇಕೆಂದೂ, ಹೇಳಲಾಗಿದೆ. ಇನ್ನೂ ಮುಂದೆ ಹೋಗಿ ಕರ್ಮಮಾಡುವಾಗ ಯಾವ ಕಾಮ್ಯವನ್ನು ಇಟ್ಟುಕೊಳ್ಳದೆ ಕರ್ಮದ ಬಗ್ಗೆ ಮನಸ್ಸಿನಲ್ಲೇಳುವ ಎಲ್ಲಾ ಭಾವಗಳನ್ನೂ ತ್ಯಜಿಸಿ, ಕರ್ಮ ಮಾಡುವ ಸನ್ಯಾಸಿಗೆ, ಆ ಕರ್ಮಗಳಿಂದ ಯಾವ ತರಹದ ವಾಸನೆಗಳು ಉಂಟಾಗುವುದಿಲ್ಲವೆಂದೂ ಹೇಳಲಾಗಿದೆ.

ಪಂಚೈತಾನಿ ಮಹಾಬಾಹೋ ಕಾರಣಾನಿ ನಿಭೋಧಮೇ |
ಕೃತಾಂತೇ ಸಾಂಖ್ಯೆಕೃತಾಂತೆಪ್ರೋಕ್ತಾನಿ ಸಿದ್ಧಯೇ ಸರ್ವಕರ್ಮಣಾಮ್ || 13 ||
ಅರ್ಥ :- ಮಹಾಬಾಹುವೇ ಪ್ರತಿಯೊಂದು ಕರ್ಮಗಳೂ ಸಿದ್ಧಿಯಾಗಲು ಅವಶ್ಯಕವಾಗಿ ಬೇಕಾದ, ಸಾಂಖ್ಯಶಾಸ್ತ್ರದಲ್ಲಿ ಹೇಳಲ್ಪಟ್ಟ ಐದು ಕಾರಣಗಳನ್ನು ಹೇಳುತ್ತೇನೆ ಕೇಳು-
ಕರ್ಮವನ್ನು ಮಾಡುವಾಗ ಅಹಂಭಾವವನ್ನೂ, ಫಲಾಶೆಯನ್ನು ಬಿಟ್ಟು ಕರ್ಮಮಾಡಬೇಕು ಎಂದು ಹೇಳಲಾಯಿತಷ್ಟೆ, ಕರ್ಮ ಎಂದರೇನು, ಅದು ಆಗುವ ಬಗೆ ಹೇಗೆ ಎಂಬ ಕರ್ಮದ ಆಂತರಿಕ ಹಾಗೂ ಬಾಹ್ಯವಿವರಗಳನ್ನು ವರ್ಣಿಸಲು ಶ್ರೀಕೃಷ್ಣನು ಪ್ರಾರಂಭಿಸಿದ್ದಾನೆ. ಪ್ರತಿಯೊಂದು ಕರ್ಮಗಳೂ ಯಶಸ್ವಿಯಾಗಿ ಸಾಧಿಸಲ್ಪಡ ಬೇಕಾದರೆ ಐದು ಸಹಕಾರಿ ಕಾರಣಗಳು ಬೇಕು. ಇದು ಕರ್ಮದ ಐದು ಅವಯವಗಳು. ಐದೂ ಅವಯವಗಳಿದ್ದರೆ ಕರ್ಮವು ಯಶಸ್ವಿಯಾಗುತ್ತದೆ. ಒಂದು ಅಥವಾ ಹೆಚ್ಚು ಲೋಪವಾದರೆ ಕರ್ಮದಲ್ಲಿ ನ್ಯೂನತೆಯುಂಟಾಗುತ್ತದೆ.

ಅಧಿಷ್ಠಾನಂ ತಥಾ ಕರ್ತಾ ಕರಣಂ ಚ ಪೃಥಗ್ವಿಧಮ್ |
ವಿವಿಧಾಶ್ಚ ಪೃಥಕ್ವೇಷ್ಟಾ ದೈವಂ ಚೈವಾತ್ರ ಪಂಚಮಮ್ || 14 ||
ಅರ್ಥ :- ಕರ್ಮ ಮಾಡುವ ಕ್ಷೇತ್ರ (ಶರೀರ) ಕರ್ಮ ಮಾಡುವವನು ನಾನು ಎಂಬ ಜೀವ, ಕರ್ಮ ಮಾಡಲು ಬೇಕಾಗುವ ಬೇರೆಬೇರೆ ಇಂದ್ರಿಯಗಳು, (ಸಲಕರಣಗಳು), ಇಂದ್ರಿಯಗಳಿಂದ ಮಾಡಲಾಗುವ ಬೇರೆ ಬೇರೆ ರೀತಿಯ ಎಲ್ಲಾ ಚಲನವಲನಾದಿಗಳು. ಮತ್ತು ದೈವ ಹೀಗೆ ಐದು ಅಂಶಗಳು ಪ್ರತಿಯೊಂದು ಕರ್ಮವಾಗುವುದಕ್ಕೂ ಅವಶ್ಯಕವಾಗಿ ಬೇಕು.
ಕರ್ಮವು ಯಶಸ್ವಿಯಾಗಿ ಸಾಂಗಗೊಳ್ಳಲು ಐದು ಕಾರಣಗಳಾವುವು ಎಂಬುದನ್ನು ಇಲ್ಲಿ ವರ್ಣಿಸಲಾಗಿದೆ.
ಮೊಟ್ಟ ಮೊದಲನೆದು ಅಧಿಷ್ಟಾನ- ಶರೀರ, ಅಥವಾ ಕಾರ್ಯಕ್ಷೇತ್ರ ಈ ಶರೀರದ ಮುಖಾಂತರವೇ ಜ್ಞಾನೇಂದ್ರಿಯಗಳ ಸಂವೇದನಗಳು ಮನಸ್ಸನ್ನು ಮುಟ್ಟುತ್ತವೆ. ಮನಸ್ಸು, ಯಾವ ರೀತಿ ಕರ್ಮಮಾಡಬೇಕೆಂದು ಕರ್ಮೇಂದ್ರಿಯಗಳಿಗೆ ಆ ರೀತಿಯಾಗಿ ಕರ್ಮೇಂದ್ರಿಯಗಳಿಗೆ ಅಪ್ಪಣೆಯನ್ನು ನೀಡುತ್ತವೆಯೋ ಆ ರೀತಿಯಾಗಿ ಕರ್ಮೇಂದ್ರಿಯಗಳು ಅಪ್ಪಣೆಯನ್ನು ಪಾಲಿಸುತ್ತವೆ. ಶರೀರವು ಜಡವಾದುದರಿಂದ ಅದಕ್ಕೆ ಕರ್ಮಮಾಡಲು ಚೇತನವನ್ನು ಕೊಡುವವನಿಗೆ ಕರ್ತಾ- ಎಂದು ಹೆಸರು ಇವನೇ ಅಹಂಕಾರದಿಂದ ಕೂಡಿದ ಜೀವ- ಜೀವನಿಲ್ಲದಿದ್ದರೆ ಶರೀರವು ಏನೂ ಮಾಡಲಾರದು. ಅಂತೆಯೇ ಶರೀರವಿಲ್ಲದಿದ್ದರೆ ಜೀವನು ಸಹ ಯಾವ ಕಾರ್ಯವನ್ನು ಮಾಡಲಾರನು. ಆದುದರಿಂದ ಇವೆರಡೂ ಬೇಕೇ ಬೇಕು. ಜೀವನು ತನ್ನ ಅಪೇಕ್ಷೆಗಳನ್ನು ಶರೀರದ ಮುಖಾಂತರ ಪಡೆಯುತ್ತಾನೆ. ಅಂತೆಯೇ ಶರೀರವು ಸತತವೂ ಕರ್ಮವನ್ನು ಮಾಡುವಂತೆ ಅದಕ್ಕೆ ಪ್ರೇರಣೆಯನ್ನೂ, ಚಾಲನಾ ಶಕ್ತಿಯನ್ನು ಕೊಡುತ್ತಾನೆ. ವಾಸನೆಗಳಿಂದ ಕೂಡಿದ ಜೀವನು ಜ್ಞಾನೇಂದ್ರಿಯಗಳ ಮೂಲಕ ತನ್ನ ಆಸೆಗಳನ್ನು ಭೋಗಿಸುತ್ತಾನೆ. ಈ ಜ್ಞಾನೇಂದ್ರಿಯಗಳಿಗೆ ‘ಕರಣ’ ಎಂದು ಹೆಸರು. ಜ್ಞಾನೇಂದ್ರಿಯಗಳು ವಿಷಯ ಜ್ಞಾನವನ್ನು ಹಾಗೂ ಅನುಭವವನ್ನು ಪಡೆಯಬಲ್ಲವೇ ಹೊರತು, ಕರ್ಮಗಳನ್ನು ಮಾಡಲಾರವು. ಕರ್ಮಮಾಡಲು ಕರ್ಮೇಂದ್ರಿಯಗಳಿವೆ. ಈ ಇಂದ್ರಿಯಗಳಿಗೆ ಗಳ ಚಲನವಲನಾದಿಗಳಿಗೆ ‘ಚೇಷ್ಟಾ’ ಎಂದು ಹೆಸರು. ಜ್ಞಾನೇಂದ್ರಿಯಗಳ ಪೈಕಿ ಪ್ರತಿಯೊಂದು ಇಂದ್ರಿವೂ, ಒಂದೊಂದು ಪಂಚಭೂತಗಳಿಂದ, ನಿಯಂತ್ರಿಸಲ್ಪಟ್ಟಿದೆ. ಈ ಪಂಚಭೂತಗಳು ಜ್ಞಾನೇಂದ್ರಿಯಗಳ ಅಧಿದೇವತೆಗಳೆಂದು ಪರಿಗಣಿಸಲ್ಪಟ್ಟಿವೆ. ಇವು ಆಯಾಯಾ ಇಂದ್ರಿಯಗಳಿಗೆ ಪಟುತ್ವವನ್ನು ಕೊಡುತ್ತವೆ. ಇಂದ್ರಿಯಗಳು ಸಾಕಷ್ಟು ಶಕ್ತಿಯುತವಾಗಿಲ್ಲದಿದ್ದರೆ, ತಮ್ಮ ತಮ್ಮ ಕಾರ್ಯಗಳನ್ನೂ ದಕ್ಷತೆಯಿಂದ ಮಾಡಲಾರವು. ಆದುದರಿಂದ ಐದು ಇಂದ್ರಿಯಗಳಿಗೆ ಕಾರ್ಯಪಟುತ್ವವನ್ನು ಕೊಡುವ ಐದು ದೇವತೆಗಳು ಸಹ ಕರ್ಮವಾಗಲು ಅವಶ್ಯಕವಾದ ಕಾರಣಗಳ ಸಾಧನಗಳೇ ಪೈಕಿ ಒಂದು ಎಂದು ಗ್ರಹಿಸಲಾಗಿದೆ.

ಶರೀರವಾಙ್ಮನೋಭಿರ್ಯತ್ಕರ್ಮ ಪ್ರಾರಭತೇ ನರಃ |
ನ್ಯಾಯಂ ವಾ ವಿಪರೀತಂ ವಾ ಪಂಚೈತೇ ತಸ್ಯಹೇತವಃ || 15 ||
ಅರ್ಥ :- ಮನುಷ್ಯನು ತನ್ನ ಶರೀರ, ಮಾತು, ಮನಸ್ಸುಗಳಿಂದ ಮಾಡುವ ಎಲ್ಲಾ ತರಹದ ಒಳ್ಳೆಯ ಹಾಗೂ ಕೆಟ್ಟ ಕರ್ಮಗಳಿಗೂ ಈ ಐದು ಕಾರಣಗಳಿವೆ.
ವ್ಯವಹಾರದಲ್ಲಿಯ ಪ್ರತಿಯೊಂದು ಕರ್ಮಗಳಾವುವುದಕ್ಕೂ ಈ ಐದೂ ಸಲಕರನಗಳೂ ಒಟ್ಟಾಗಿ ಇರಬೇಕು. ಈ ಐದು ಕಾರಣಗಳು ಮೋಟಾರಿನ ಇಂಜಿನ್ ಇದ್ದಂತೆ. ಇಂಜನ್ನು ಚನ್ನಾಗಿದ್ದರೆ ಮಾತ್ರ ಬಾಲಕನು ಅದನ್ನು ಬೇಕಾದ ಕಡೆಗೆ ನಡೆಯಿಸಿಕೊಂಡು ಹೋಗಬಲ್ಲನು. ಆದರೆ ಪೆಟ್ರೋಲಿಲ್ಲದಿದ್ದರೆ ಈ ಇಂಜಿನ್ನು ನಿರುಪಯುಕ್ತ. ಪರಮಾತ್ಮನು ಈ ಶರೀರದಲ್ಲಿದ್ದುಕೊಂಡು ಅಹಂಕಾರದಿಂದ ಆವೃತನಾಗಿ (ಜೀವ) ಈ ಶರೀರದ ಚಲನವಲನಾದಿಗಳಿಗೆ ಕಾರಣನಾಗಿದ್ದಾನೆ, ಮತ್ತು ತಾನು ಪರಮಾತ್ಮ ಎಂಬುದನ್ನು ಮರೆತುಬಿಟ್ಟಿದ್ದಾನೆ.

ತತ್ರೈª ವಂÀ ಸತುತಿ ಕರ್ತಾರಮಾತ್ಮನಂ ಕೇವಲಂ ತು ಯಃ |
ಪಶ್ಶತ್ಯಕೃತಬುದ್ಧಿತ್ವಾನ್ನ ಸ ಪಶ್ಯತಿ ದುರ್ಮತಿಃ || 16 ||
ಅರ್ಥ :- ಹೀಗೆ ಕರ್ಮವಾಗಲು ಐದು ಕಾರಣಗಳಿದ್ದಾಗ್ಯೂ ತಾನೇ ಎಲ್ಲಾ ಕೆಲಸಗಳನ್ನು ಮಾಡುವವನು ಎಂದು ಸರಿಯಾದ ಜ್ಞಾನವಿಲ್ಲದ ಯಾವನು ತಿಳಿಯುತ್ತಾನೋ, (ಜೀವನು) ಅಂತಹ ಬುದ್ಧಿಹೀನನು ಸರಿಯಾಗಿ ಕಾಣಲಾರನು. ಅಂದರೆ ನಿಜಸ್ಥಿತಿಯನ್ನು ಸರಿಯಾಗಿ ತಿಳಿದುಕೊಳ್ಳಲಾರನು.
ಕರ್ಮಗಳಾಗಲು ಮೇಲೆ ಹೇಳಿದ ಐದು ಕಾರಣಗಳು ಅವಶ್ಯಕವಾಗಿ ಬೇಕು, ಎಂಬುದನ್ನು ಹೇಳಿ, ಜೀವನು ಅಜ್ಞಾನದಿಂದ ತಾನೇ ಈ ಎಲ್ಲಾ ಕರ್ಮಗಳನ್ನು ಮಾಡುವವನು, ಈ ಕರ್ಮಗಳ ಫಲಗಳಿಗೆ ತಾನೇ ಅಧಿಕಾರಿಯು ಎಂದು ತಪ್ಪಾಗಿ ತಿಳಿದುಕೊಂಡು, ಕರ್ಮದಲ್ಲಿ ಜಯವು ಸಿಕ್ಕಾಗ ಸಂತೋಷದಿಂದ ಹಿಗ್ಗಿ ಕುಣಿಯುತ್ತಾ, ಸೋಲುಂಟಾದಾಗ ದುಃಖದಿಂದ ವ್ಯಥೆಪಡುತ್ತಾ ಬಂಧನಕ್ಕೆ ಈಡಾಗುತ್ತಾನೆ, ಕರ್ಮಗಳಾಗುವುದು ತನ್ನೊಬ್ಬನಿಂದಲೇ ಅಲ್ಲ, ಅದಕ್ಕೆ ಇತರೆ ನಾಲ್ಕು ಸಹಾಯಕ ಕಾರಣಗಳಿವೆ, ಇವೆಲ್ಲವುಗಳ ಸಹಕಾರದಿಂದ ಸಂಯೋಗದಿಂದ ಕರ್ಮವು ಯಶಸ್ವಿಯಾಗುತ್ತದೆ ಎಂಬ ತತ್ವವನ್ನು ತಿಳಿದುಕೊಂಡವನು ಕರ್ಮದ ಗುಟ್ಟನ್ನು ಸರಿಯಾಗಿ ತಿಳಿದುಕೊಂಡವನಾಗುತ್ತಾನೆ. ಇವನು, ಕರ್ಮವು ಯಶಸ್ವಿಯಾದಾಗ್ಯೆ ಹಿಗ್ಗುವುದೂ ಇಲ್ಲ, ಸೋಲುಂಟಾದಾಗ್ಯೆ ಕುಗ್ಗುವುದೂ ಇಲ್ಲ, ಎರಡರಲ್ಲಿಯೂ ಉದಾಸೀನನಾಗುತ್ತಾನೆ, ಏಕೆಂದರೆ ಅವನಿಗೆ ತಾನು ಮಾಡುವವನು ಎಂಬ ಅಭಿಮಾನವಿಲ್ಲ. ಕರ್ಮ ಮಾಡುವವನು ಪರಮಾತ್ಮನು ಎಂದು ಸಾಮಾನ್ಯ ಮಾನವನು ತಿಳಿಯುತ್ತಾನೆ. ಇದು ತಪ್ಪು, ಪರಮಾತ್ಮನು ಯಾವ ಕರ್ಮಗಳನ್ನೂ ಮಾಡುವುದಿಲ್ಲ. ಅಹಂಭಾವದಿಂದ ಕೂಡಿದ ಜೀವನು, “ಕರ್ಮ ಮಾಡುವವನು ತಾನೇ ಸರಿ” ಎಂದು ತಿಳಿಯುವುದು ಸಹ ತಪ್ಪು ಎಂದು ಇಲ್ಲಿ ಹೇಳಲಾಗಿದೆ. ಹೀಗೆ ತಪ್ಪಾಗಿ ತಿಳಿಯಲು ಅವನ ಬುದ್ಧಿಯ ಅವಿವೇಕವೇ ಕಾರಣ. ಜೀವನು, ತಾನು ಪರಮಾತ್ಮ ಎಂಬುದನ್ನು ಮರೆತು ತಾನೇ ಶರೀರ ಎಂಬ ಅಹಂಕಾರಕ್ಕೊಳಗಾಗಿರುವುದರಿಂದ, ಇವನನ್ನು ‘ದುರ್ಮತಿ’ ಎಂದು ಕರೆಯಲಾಗಿದೆ. ಎಂದರೆ ಇವನಿಗೆ ನಿಜವಾದ ಜ್ಞಾನದ ಅರಿವಿಲ್ಲ.
ಯಸ್ಯ ನಾಹಂಕೃತೋ ಭಾವೋ ಬುದ್ಧಿರ್ಯಸ್ಯನಲಿಪ್ಯತೆ | ತೇ
ಹತ್ವಾಪಿಸ ಇಮಾಂ ಲ್ಲೋಕಾನ್ನಹಂತಿನನಿಬಧ್ಯತೆ ತೇ || 17 ||
ಅರ್ಥ :- ಯಾವನು ಅಹಂಭಾವವನ್ನು ತ್ಯಜಿಸಿದ್ದಾನೋ ಯಾವನ ಬುದ್ಧಿಯು ವಾಸನೆಗಳಿಂದ ಲೇಪವನ್ನು ಹೊಂದಿಲ್ಲವೋ, ಅವನು ಈ ಜನರನ್ನೆಲ್ಲಾ ಕೊಂದಾಗ್ಯೂ ಸಹ, ಕೊಂದಂತಲ್ಲ, ಅಂದರೆ ಆ ಕೊಂದಕಾರ್ಯದಿಂದ ಅವನು ಬಂಧಿತನಾಗುವುದಿಲ್ಲ.
ಮನುಷ್ಯನು, ‘ನಾಶಮಾಡುವವನು’ ಎಂಬ ಅಹಂಭಾವವನ್ನು ತ್ಯಜಿಸಿ, ತನ್ನ ಮನಸ್ಸು ಬುದ್ಧಿಗಳಿಂದ ಕಾಮ, ಕ್ರೋಧ, ಲೋಭಾದಿಗಳನ್ನು ಕಳಚಿ ಹಾಕಿ, ಪ್ರಪಂಚದಲ್ಲಿ ಕರ್ತವ್ಯ ದೃಷ್ಟಿಯಿಂದ ಯಾಮ ವಕರ್ಮವನ್ನು ಮಾಡಿದಾಗ್ಯೂ, ಆ ಕರ್ಮಗಳಿಂದ ಅವನು ಲಿಪ್ತನಾಗುವುದಿಲ್ಲ, ಅಂದರೆ ಆ ಕರ್ಮಗಳು ಅವನ ಮನಸ್ಸಿನ ಮೇಲೆ ಯಾವ ವಾಸನೆ (ಸಂಸ್ಕಾರ)ಗಳನ್ನೂ ಮೂಡಿಸುವುದಿಲ್ಲ. ಅಂತೆಯೇ ಆ ಕರ್ಮಗಳಿಂದ ಅವನು ಬಂಧಿತನಾಗುವುದಿಲ್ಲ. ಹೀಗೆಂದ ಮಾತ್ರಕ್ಕೆ ಜ್ಞಾನಿಯು ಸಂಸಾರದಲ್ಲಿ ಯಾವ ಕೆಲಸವನ್ನೂ ಮಾಡದೇ ಕಲ್ಲಿನಂತಿರುತ್ತಾನೆ ಎಂದು ಅರ್ಥವಲ್ಲ. ಅವನು, ತಾನು ಮಾಡುವ ಎಲ್ಲಾ ಕರ್ಮಗಳನ್ನೂ ದಕ್ಷತೆಯಿಂದ ಮಾಡಿದಾಗ್ಯೂ, ಅದರಲ್ಲಿ ಅವನಿಗೆ ಕರ್ತವ್ಯ ಹಾಗೂ ಲೋಕಸಂಗ್ರಹ ದೃಷ್ಟಿ ಇದ್ದೇ ಇರುತ್ತದೆಯೇ ಹೊರತು, ಕರ್ಮದ ಫಲಾಫಲಗಳಿಂದ ಅವನು ಬಂಧಿತನಾಗಿರುವುದಿಲ್ಲ. ಕರ್ಮವು ಒಳ್ಳೆಯ ಫಲವನ್ನು ಕೊಡಲಿ-ಇಲ್ಲವೆ ಕೆಟ್ಟ ಫಲವನ್ನು ಕೊಡಲಿ ಅವೆರಡೂ ಅವನಿಗೆ ಒಂದೇ ಸಮ. ಅದರಲ್ಲಿ ಅವನ ಲಕ್ಷೆಯಿರುವುದಿಲ್ಲ. ಕರ್ಮಮಾಡುವುದರಲ್ಲಷ್ಟೇ ಅವನ ಲಕ್ಷೆ ಇರುತ್ತದೆ. ಆದುದರಿಂದ ಇಂತಹ ಕರ್ಮಗಳಿಗಿಂದ ಅವನಲ್ಲಿ ಹೊಸದಾದ ಯಾವ ವಾಸನೆಗಳೂ ಹುಟ್ಟುವುದಿಲ್ಲ.
ಶ್ರೀಕೃಷ್ಣನು, ತಾತ್ವಿಕ ಹಿನ್ನೆಲೆಯನ್ನು ಈ ರೀತಿಯಾಗಿ ವಿವರಿಸಿ, ಶತ್ರುಗಳನ್ನು ಕೊಂದರೆ ಪಾಪ ಎಂದು ಹೆದರಿದ್ದ ಅರ್ಜುನನ ಪ್ರಶ್ನೆಗೆ ಈಗ ನೇರವಾದ ಉತ್ತರವನ್ನೂ ಕೊಡುತ್ತಿದ್ದಾನೆ. ಮೇಲಿನ ಮನೋಭಾವದಿಂದ ಕೂಡಿದ ಜ್ಞಾನದಿಂದ ಅರ್ಜುನನೇ, “ನೀನು ಈಗ ಎಲ್ಲಾ ಶತ್ರುಗಳನ್ನು ಕೊಂದರೂ, ನಿನಗೆ ಈ ಕರ್ಮವು ಬಂಧನಕರವಲ್ಲ” ಎಂಬ ತೀರ್ಮಾನವನ್ನು ಆಶ್ವಾಸನವನೂ ಕೊಟ್ಟಿದ್ದಾನೆ. ನಮ್ಮ ಈಗಿನ ನಿತ್ಯ ವ್ಯವಹಾರದಲ್ಲಿ ಸಹ ಈ ತತ್ವದ ಅನುಭವವನ್ನು ಪಡೆಯಬಹುದು. ಒಬ್ಬ ವ್ಯಕ್ತಿಯು ಖೂನಿ ಮಾಡಿದರೆ ಅವನಿಗೆ ಅದು ಬಂಧನವನ್ನುಂಟು ಮಾಡುತ್ತದೆ. ಕಾನೂನಿನ ದೃಷ್ಟಿಯಿಂದ ಅವನು ಶಿಕ್ಷೆಗೆ ಅರ್ಹನಾಗುತ್ತಾನೆ. ಆದರೆ ಇನ್ನೊಬ್ಬರು ದೇಶರಕ್ಷಣೆಯ ದೃಷ್ಟಿಯಿಂದ ಸೈನ್ಯಕ್ಕೆ ಸೇರಿ ಎಷ್ಟು ಜನರನ್ನು ಖೂನಿ ಮಾಡಿದರೂ ಅವನನ್ನು ಯಾರೂ ಖೂನಿಗಾರನೆನ್ನುವುದಿಲ್ಲ. ಅವನಿಗೆ ಕರ್ಮದಿಂದ ಲೇಪವೂ ಇಲ್ಲ. ಇದಕ್ಕೆ ವಿರೋಧವಾಗಿ ಅವನು ಹೆಚ್ಚು ಜನರನ್ನು ಲೂಟಿ ಖೂನಿ ಮಾಡಿದಷ್ಟು ಅವನ ಕೀರ್ತಿಯು ಹೆಚ್ಚುತ್ತದೆ. ಅವರನ್ನು ಹೆಚ್ಚು ಶೂರ ಎನ್ನುತ್ತೇವೆ. ಏಕೆಂದರೆ ಈ ಖೂನಿ ಕರ್ಮದಲ್ಲಿ ಅವನಿಗೆ ‘ಮಮಕಾರ’ವಿಲ್ಲ. ದೇಶದ ಹಿತವೇ ಅವನ ಗುರಿಯಾಗಿತ್ತು. ಮೊದಲನೆಯ ಖೂನಿಗಾರನು ಸ್ವಾರ್ಥದಿಂದ ಪ್ರೇರಿತನಾಗಿದ್ದನು. ಆದ್ದರಿಂದ ಅವನಿಗೆ ಆ ಕರ್ಮದಿಂದ ‘ವಾಸನೆ’ ಇದೆ. ಎರಡನೆಯವನಿಗೆ ‘ವಾಸನೆ’ ಇಲ್ಲ. ಇದೇ ರೀತಿಯಾಗಿ ಈಗ ಅರ್ಜುನನು ಎಲ್ಲಾ ಸೈನಿಕರನ್ನು ಕೊಂದಾಗ್ಯೂ ಅವನಿಗೆ ಆ ಕರ್ಮದಿಂದ ಯಾವ ‘ವಾಸನೆ’ಯೂ ಉಂಟಾಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.

ಜ್ಞಾನಂ ಜ್ಞೇಯಂ ಪರಿಜ್ಞಾತಾ ತ್ರಿವಿಧಾ ಕರ್ಮಚೋದನಾ |
ಕರಣಂ ಕರ್ಮ ಕರ್ತೇತಿ ತ್ರಿವಿಧಃ ಕರ್ಮಸಂಗ್ರಹಃ || 18 ||
ಅರ್ಥ :- ಜ್ಞಾನ, ಜ್ಞೇಯ ಮತ್ತು ಜ್ಞಾತಾ ಇವು ಮೂರು ಕರ್ಮಪ್ರೇರಕಗಳು, ಕರಣ, ಕರ್ಮ ಮತ್ತು ಕರ್ತೃ ಇವು ಮೂರು ಕರ್ಮಸಂಗ್ರಹಗಳು (ಆಧಾರ).
ಶ್ರೀಕೃಷ್ಣನು ಈ ಹಿಂದೆ ಕರ್ಮದ ಐದು ಕಾರಣಗಳನ್ನು ತಿಳಿಸಿ ಈಗ ಕರ್ಮದ ಬಗ್ಗೆ ಹೆಚ್ಚಿನ ಶಾಸ್ತ್ರೀಯ ವಿವರಗಳನ್ನು ತಿಳಿಸುತ್ತಿದ್ದಾನೆ. ಪ್ರತಿಯೊಂದು ಕರ್ಮಕ್ಕೂ ಮೂರು ಪ್ರೇರಕಗಳಿವೆ ಜ್ಞಾನ- ಅಂದರೆ ಕರ್ಮದ ವಿಚಾರದಲ್ಲಿ ತಿಳಿದುಕೊಳ್ಳ ಬೇಕಾದ ಶಾಸ್ತ್ರೀಯ ವಿವರಗಳು. ಜ್ಞೇಯ- ತಿಳಿಯಲ್ಪಟ್ಟದ್ದು. ತಿಳಿಯಲ್ಪಡುವ ವಿಷಯ. ಜ್ಞಾತಾ- ತಿಳಿಯುವವನು. ಹೀಗೆ ತಿಳಿಯುವವನು, ತಿಳಿಯಲ್ಪಟ್ಟದ್ದು, ಮತ್ತು ತಿಳಿಯ ಬೇಕಾದ ಜ್ಞಾನ ಇವುಗಳಿಗೆ ವೇದಾಂತ ಭಾಷೆಯಲ್ಲಿ, ‘ತ್ರಿಪುಟಿ’ ಎಂದು ಹೆಸರು. ಇವು ಮೂರೂ ಸೇರಿ ಕಾರ್ಯಮಾಡುವ ಪ್ರೇರಣೆಯುಂಟಾಗುತ್ತದೆ.
ಕರ್ಮಬೋಧನೆಯು, ತಿಳಿಯಲ್ಪಡುವವನಲ್ಲಿ (ಕರ್ತಾ) ಉತ್ಪನ್ನವಾಗುವ ಆಸೆಗಳಿಂದ ಇಲ್ಲವೇ, ಹಿಂದಿನ ಜನ್ಮದಲ್ಲಿ ಸಂಚಿತವಾದ ವಾಸನೆಗಳಿಂದ ಹುಟ್ಟುತ್ತದೆ. ಕರ್ಮಮಾಡುವ ಪ್ರಚೋದನೆಯಾದ ಮೇಲೆ ಕರ್ಮಮಾಡಲು ಒಂದು ಆಧಾರಬೇಕು. ಶರೀರದಲ್ಲಿರುವ ಇಂದ್ರಿಯಗಳು, ಕರ್ಮ, ಮತ್ತು ಕರ್ತಾ ಇವು ಮೂರು ಕರ್ಮ ಮಾಡಲು ಆಧಾರಭೂತಗಳಾಗಿವೆ. ಇವಕ್ಕೆ ‘ಕರ್ಮಸಂಗ್ರಹ’ ಎಂದು ಹೆಸರು. ಈ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿಯೂ ಜೀವನು, ‘ಕರ್ಮ ಮಾಡುವವನು ನಾನು’ ಎಂದು ತಿಳಿದುಕೊಳ್ಳುತ್ತಾನೆ. ಜೀವನಿಗೆ ಕರ್ಮಫಲದಲ್ಲಿ ಆಸೆಯಿರುವವರೆಗೂ, ಮಾಡುವವನು ನಾನು ಎಂಬ ಅಹಂಭಾವವಿರುತ್ತದೆ. ಕರ್ಮಫಲಾಸೆಯನ್ನು ತ್ಯಜಿಸಿದರೆ ಈ ಅಸಂಭಾವವು ಕಳಚಿಹೋಗುತ್ತದೆ.
ಪ್ರತಿಯೊಬ್ಬ ಮನುಷ್ಯನೂ ವಿವಧ ರೀತಿಯ ಪ್ರೇರಣೆಗಳಿಂದ ಪ್ರೇರಿತವಾಗಿ ಭಿನ್ನಭಿನ್ನ ರೀತಿಯಲ್ಲಿ ಕರ್ಮ ಮಾಡುತ್ತಾರೆ. ಇದರ ವಿಶ್ಲೇಷಣೆಯನ್ನು ಮಾಡುವುದಕ್ಕಾಗಿ ಶ್ರೀಕೃಷ್ಣನು, ಈ ಪ್ರೇರಣೆಗಳು ಸಹ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಗುಣಗಳನ್ನು ಅವಲಂಬಿಸಿವೆ ಎಂಬುದನ್ನು ವರ್ಣಿಸುತ್ತಿದ್ದಾನೆ.

ಜ್ಞಾನಂ ಕರ್ಮ ಚ ಕರ್ತಾ ಚ ತ್ರಿಧೈವ ಗುಣಭೇದತಃ |
ಪ್ರೋಚ್ಯತೇ ಗುಣಸಂಖ್ಯಾನೇ ಯಥಾವಚ್ಛøಣು ತಾನ್ಯಪಿ || 19 ||
ಅರ್ಥ :- ಜ್ಞಾನ, ಕರ್ಮ ಮತ್ತು ಕರ್ತಾ ಇವು ಸಹ ಸತ್ವ, ರಜ, ತಮೋಗುಣ ಭೇದಕ್ಕನುಸಾರವಾಗಿ ಮೂರು ವಿಧಗಳಾಗಿವೆ. ಅವುಗಳನ್ನೂ ಹೇಳುತ್ತೇವೆ ಕೇಳು
ಸಾತ್ವಿಕ ಜ್ಞಾನದ ಲಕ್ಷಣ
ಸರ್ವಭೂತೇಷು ಯೇನೈಕಂ ಭಾವಮಮ್ಯಯಮೀಕ್ಷತೇ |
ಅವಿಭಕ್ತಂ ವಿಭಕ್ತೇಷು ತಜ್ಞಾನಂ ವಿದ್ಧಿ ಸಾತ್ತ್ವಿಕಮ್ || 20 ||
ಅರ್ಥ :- ಸರ್ವಭೂತಗಳಲ್ಲಿಯೂ ಬೇರೆ ಬೇರೆಯಾಗಿ ಕಾಣುವ ಅವ್ಯಕ್ತ ಪರಮಾತ್ಮನು ಅವೆಲ್ಲವುಗಳಲ್ಲಿಯೂ ಅಖಂಡವಾಗಿ ವ್ಯಾಪ್ತನಾಗಿರುವುದನ್ನು ತಿಳಿಯುವ ಜ್ಞಾನಕ್ಕೆ ಸಾತ್ವಿಕ ಜ್ಞಾನ ಎಂದು ಹೆಸರು.
ಇಲ್ಲಿ ಹೇಳಲಾಗುವ ಜ್ಞಾನ, ಕರ್ಮ, ಕರ್ತಾ, ಇವುಗಳ ಸಾತ್ವಿಕ, ರಾಜಸಿಕ, ಭೇದಗಳನ್ನು, ಇನ್ನೊಬ್ಬರ ದೋಷಗಳನ್ನು ಕಂಡು ಹಿಡಿಯಲು ಉಪಯೋಗಿಸದೆ, ತನ್ನ ನ್ಯೂನತೆಗಳನ್ನು ಕಂಡು ಹಿಡಿದು ತಿದ್ದಿಕೊಳ್ಳಲು ಉಪಯೋಗಿಸಬೇಕು.
ನಮ್ಮೆದುರಿಗೆ ನೂರಾರು, ಬೇರೆ ಬೇರೆ ಆಕಾರ ದ ಬಲ್ಬುಗಳಿವೆ. ಆದರೆ ಅವೆಲ್ಲಕ್ಕೂ ಚೇತನವನ್ನು ಕೊಡುವ ವಿದ್ಯುಚ್ಛಕ್ತಿ ಒಂದೇ ಆಗಿದೆ. ಅಂತೆಯೇ ನೂರಾರು ಘಟಕಗಳಲ್ಲಿ ಒಂದೇ ಅಖಂಡ ಆಖಾಶವು ಆಕಾರವುವ್ಯಾಪ್ತವಾಗಿದೆ. ಇದೇ ರೀತಿಯಾಗಿ ಪ್ರಪಂಚದಲ್ಲಿರುವ ನಾನಾತರಹದ ಭೂತಗಳು ಬೇರೆ ಬೇರೆಯಾಗಿದ್ದಾಗ್ಯೂ, ಅವೆಲ್ಲವುಗಳಲ್ಲಿಯೂ ಅವ್ಯಕ್ತ ಪರಮಾತ್ಮನು ಅಖಂಡವಾಗಿ ವ್ಯಾಪ್ತನಾಗಿದ್ದು ಅವುಗಳ ಇರುವಿಕೆ ಮತ್ತು ಚಲನ ವಲನಾದಿಗಳಿಗೆ ಕಾರಣನಾಗಿದ್ದಾನೆ. ಇಂತಹ ಅಖಂಡ ಜ್ಞಾನಕ್ಕೆ ಸಾತ್ವಿಕ ಜ್ಞಾನ ಎಂದು ಹೆಸರು.
ರಾಜಸ ಜ್ಞಾನದ ಲಕ್ಷಣ
ಪೃಥಕ್ತ್ವೇನ ತು ಯಜ್ಜ್ಞಾನಂ ನಾನಾಭಾವಾನ್ಪ್ರಥಗ್ವಿಧಾನ್ |
ವೇತ್ತಿ ಸರ್ವೇಷು ಭೂತೇಷು ತಜ್ಞಾನಂವಿದ್ಧಿರಾಜಸಮ್ || 21 ||
ಅರ್ಥ :- ಪ್ರಪಂಚದಲ್ಲಿರುವ ಎಲ್ಲಾ ಜೀವಿಗಳಲ್ಲಿಯೂ ಬೇರೆಬೇರೆ ಪ್ರತ್ಯೇಕ ‘ಜೀವ’ರಿದ್ದಾರೆ ಎಂದು ತಿಳಿಯುವ ಜ್ಞಾನವು ರಾಜಸಜ್ಞಾನ ಎನಿಸಿಕೊಳ್ಳುತ್ತದೆ.
ರಾಜಸಜ್ಞಾನವುಳ್ಳವನು ಪ್ರತಿಯೊಂದು ಪ್ರಾಣಿಗಳಲ್ಲಿರುವ ಜೀವನೂ ಬೇರೆ ಬೇರೆ ಎಂದು ತಿಳಿಯುತ್ತಾನೆ. ಒಬ್ಬ ಪರಮಾತ್ಮನೇ ಎಲ್ಲರಲ್ಲಿಯೂ ಅಖಂಡವಾಗಿ ವ್ಯಾಪ್ತನಾಗಿದ್ದಾನೆ ಎಂದು ತಿಳಿಯುವ ಸಾಮಥ್ರ್ಯ ಅವನಿಗಿರುವುದಿಲ್ಲ. ಇಷ್ಟೇ ಅಲ್ಲದೆ ಇವನು ಎಲ್ಲಾ ಜೀವಿಗಳನ್ನೂ ಮನುಷ್ಯರು, ಪ್ರಾಣಿಗಳು, ಕ್ರಿಮಿ ಕೀಟಾದಿಗಳು, ಎಂದು ಬೇರೆ ಬೇರೆ ರೀತಿಯಾಗಿ ವಿಂಗಡಿಸುತ್ತಾನೆ. ಇವರೆಲ್ಲರಲ್ಲಿಯೂ ಅಂತರ್ಗತನಾದ ಅಖಂಡ ಪರಮಾತ್ಮನನ್ನು ಇವನು ಕಾಣಲಾರನು.
ತಾಮಸ ಜ್ಞಾನದ ಲಕ್ಷಣ
ಯತ್ತು ಕೃತ್ಸ್ನವದೇಕಸ್ಮಿನ್ಕಾರ್ಯೇ ಸಕ್ತಮಹೈತುಕಮ್ |
ಅತತ್ತ್ವಾರ್ಥವದಲ್ಪಂ ಚ ತತ್ತಾಮಸಮುದಾಹ್ಯತಮ್ ಮುದಾಹೃತಮ್
|| 22 ||
ಅರ್ಥ :- ತಾನು ಹಿಡಿದಿರುವ ಮಾರ್ಗವೇ ಪರಿಪೂರ್ಣವಾದುದೆಂದು ತಿಳಿಯುತ್ತಾ, ಅದರ ತಾತ್ವಿಕ ಕಾರಣವನ್ನಾಗಲೀ, ತರ್ಕವನ್ನಾಗಲೀ ಗಮನಕ್ಕೆ ತೆಗೆದುಕೊಳ್ಳದೆ, ಅದೇ ಸರಿ ಎಂದು ಹಠಹಿಡಿಯುವ ಜ್ಞಾನವು ತಾಮಸಜ್ಞಾನ ಎನಿಸಿಕೊಳ್ಳುತ್ತದೆ.
ತಾಮಸಜ್ಞಾನವುಳ್ಳವರು ಆತ್ಮಸಾಧನೆಯಲ್ಲಿ ಯಾವ ರೀತಿಯ ಬುದ್ಧಿಯುಳ್ಳವರಾಗಿರುತ್ತಾರೆಂದು ಇಲ್ಲಿ ತಿಳಿಸಲಾಗಿದೆ. ಇವರು ಯಾವ ವಿಚಾರ ಇಲ್ಲವೆ ತರ್ಕವನ್ನೂ ಒಪ್ಪದೇ, ಮೂಢನಂಬಿಕೆಯಿಂದ, ತಾವು ಹಿಡಿದ ಮಾರ್ಗವೇ ಸರಿ ಎಂಬ ಹಟವುಳ್ಳವರಾಗಿ, ಅದು ಸರಿಯೋ ತಪ್ಪೋ ಎಂದು ತಿಳಿದುಕೊಳ್ಳುವ ಗೋಜಿಗೂ ಹೋಗದೇ, ಅದೇ ಸರ್ವಸ್ವವೆಂದೂ, ಅದೇ ಸರಿಯಾದ ಮಾರ್ಗವೆಂದೂ ನಂಬುತ್ತಾರೆ. ಪ್ರಪಂಚದಲ್ಲಿ ಸೃಷ್ಟಿಯಾಗಿರುವ ಪ್ರತಿಯೊಂದು ಜೀವಿಗಳೂ, ವಸ್ತುಗಳೂ ತಮ್ಮ ಸುಖಕ್ಕಾಗಿಯೇ ಸೃಷ್ಟಿಸಲ್ಪಟ್ಟಿವೆ ಎಂದು ತಪ್ಪಾಗಿ ತಿಳಿಯುತ್ತಾರೆ. ಇದೇ ರೀತಿಯಾಗಿ ಎಲ್ಲಾ ಜ್ಞಾನವನ್ನು ವಿಪರೀತರವಾಗಿ ತಿಳಿಯುತ್ತಾರೆ.
ಹೀಗೆ ಇವರು ಪ್ರಪಂಚವನ್ನು ತಮ್ಮ ಭ್ರಾಮಕ ವಿಚಾರ ಹಾಗೂ ಹಟದ ಬುದ್ಧಿಯಿಂದ ಅಳೆಯುತ್ತಾ, ವಸ್ತು ಸ್ಥಿತಿಯನ್ನು ಸರಿಯಾಗಿ ತಿಳಿಯಲಾರದೆ, ಪ್ರಪಂಚವು ತಮ್ಮ ವಿಚಾರಕ್ಕನುಸಾರವಾಗಿಯೇ ಇದೆ ಎಂದು ತಪ್ಪಾಗಿ ತಿಳಿಯುತ್ತಾರೆ. ಸತ್ಯದಲ್ಲಿ ನಂಬಿಕೆಯಿಲ್ಲದೇ, ಎಲ್ಲಾ ವಸ್ತುಗಳಲ್ಲಿಯೂ ಅತಿಯಾದ ಮಮಕಾರವನ್ನು ಹೊಂದಿ, ತಮ್ಮ ಸ್ವಾರ್ಥಸಾಧನೆಗಾಗಿ ಒರಟುತನದಿಂದಲೂ, ನಿಷ್ಠುರತನದಿಂದಲೂ ವರ್ತಿಸುತ್ತಾರೆ. ಇವರ ದೃಷ್ಟಿಯು ಕೇವಲ ಸ್ವಾರ್ಥಸಾಧನೆಯಲ್ಲಿಯೇ, ನಿರತವಾಗಿರುವುದರಿಂದ ಇವರ ಬುದ್ಧಿಯನ್ನು ‘ಅಲ್ಪಮ್’ ಎಂದು ಕರೆಯಲಾಗಿದೆ- ಸಂಕುಚಿತ ಬುದ್ಧಿ ಎಂದರ್ಥ.
ಸಾತ್ವಿಕ ಬುದ್ಧಿಯು, ಸರ್ವಜೀವಿಗಳಲ್ಲಿಯೂ ಅವ್ಯಕ್ತಪರಮಾತ್ಮನು ಅಖಂಡ-ವಾಗಿರುವುದನ್ನು ಕಾಣುತ್ತದೆ. ರಾಜಸಬುದ್ಧಿಯು, ಎಲ್ಲಾ ಜೀವಿಗಳಲ್ಲಿರುವ ಜೀವರೂ ಬೇರೆ ಬೇರೆ ಎಂದು ತಿಳಿಯುತ್ತದೆ. ತಾಮಸ ಬುದ್ಧಿಯು ಪ್ರತಿಯೊಂದೂ ತಾನೇ ಎಂದೂ, ಇಡೀ ಪ್ರಪಂಚವು ತನಗಾಗಿಯೇ ಸೃಷ್ಟಿಯಾಗಿದೆ ಎಂದು ತಿಳಿಯುತ್ತದೆ. ಮತ್ತು ಇದೇ ರೀತಿಯಾಗಿ ಪ್ರತಿಯೊಂದನ್ನೂ ವಸ್ತುಸ್ಥಿತಿಗೆ ವಿಪರೀತವಾಗಿ ಅಂದರೆ ತಪ್ಪು ತಪ್ಪಾಗಿ ತಿಳಿಯುತ್ತದೆ.
ಕರ್ಮವು ಸಹ ಮೂರುವಿಧ.
ನಿಯತಂ ಸಂಗರಹಿತಮರಾಗದ್ವೇಷತಃ ಕೃತಮ್ |
ಅಫಲಪ್ರೇಪ್ಸುನಾ ಕರ್ಮ ಯತ್ತತಾತ್ತ್ವಿಕಮುಚ್ಯತೇ || 23 ||
ಅರ್ಥ :- ಶಾಸ್ತ್ರದಿಂದ ವಿಧಿಸಲ್ಪಟ್ಟ, ರಾಗದ್ವೇಷಗಳಿಲ್ಲದೇ ಮಾಡುವ, ಮತ್ತು ಫಲಾಪೇಕ್ಷೆಯನ್ನು ಬಿಟ್ಟು ಮಾಡುವ ಕರ್ಮಗಳು ಸಾತ್ವಿಕ ಕರ್ಮ ಎನಿಸಿಕೊಳ್ಳುತ್ತವೆ.
ಸಾತ್ವಿಕ ಕರ್ಮವು ಶ್ರೇಷ್ಠವಾದುದು. ಇದರಿಂದ ಆಂತರಿಕ ಶಾಂತಿ ದೊರೆಯುತ್ತದೆ. ವ್ಯಕ್ತಿಯು ಮಾಡಲೇಬೇಕೆಂದು ಹೇಳಲ್ಪ ಟ್ಟ ಕರ್ಮವು ಈ ಗುಂಪಿಗೆ ಸೇರಿದ್ದು. ಇಲ್ಲಿ ಮಾಡಲಾಗುವ ಕರ್ಮವನ್ನು ಕರ್ಮಕ್ಕಾಗಿ, ಲೋಕಹಿತಕ್ಕಾಗಿ, ಕರ್ತವ್ಯ ದೃಷ್ಟಿಯಿಂದ ಮಾಡಲಾಗುವುದರಿಂದ ಇಂತಹ ಕರ್ಮದಿಂದ ಹೊಸ ‘ವಾಸನೆ’ಗಳಿಲ್ಲ. ಈ ಕರ್ಮಗಳಲ್ಲಿ ರಾಗದ್ವೇಷಗಳಿಲ್ಲದಿರುವುದರಿಂದ ಇವುಗಳನ್ನು ಆತ್ಮಸ್ಫೂರ್ತಿಯಿಂದ ಮಾಡಬಹುದಾಗಿದೆ. ಹೀಗಾಗಿ ಇಂತಹ ಕರ್ಮಗಳು ಆತ್ಮವಿಕಾಸಕ್ಕೆ ಮತ್ತು ಮನಃಶಾಂತಿಗೆ ಪೋಷಕವಾಗಿವೆ.
ನಮ್ಮ ಕಾಲು ಎಡವಿ, ಹೆಬ್ಬೆರಳು ಕಲ್ಲಿಗೆ ತಾಗಿ ಗಾಯವಾದರೆ ಇಡೀ ಶರೀರವೇ ಬಗ್ಗಿ ಅದರ ಸೇವೆಯಲ್ಲಿ ಮಗ್ನವಾಗುತ್ತದೆ. ಅಂದಮಾತ್ರಕ್ಕೆ, ಶರೀರಕ್ಕೆ ಈ ಕಾಲುಬೆರಳಿನ ಮೇಲೆ ಇತರ ಭಾಗಗಳಿಗಿಂತ ಹೆಚ್ಚು ಪ್ರೇಮವಿದೆ ಎಂದಾಗಲೀ, ಮೋಹವಿದೆ ಎಂದಾಗಲೀ ಅರ್ಥವಲ್ಲ. ವ್ಯಕ್ತಿಗೆ ಇಡೀ ದೇಹವೂ ತನ್ನದೇ, ಅದರ ಎಲ್ಲಾ ಅವಯಗಳೂ ತನ್ನವೇ ಅವನು ಎಲ್ಲಾ ಅವಯವಗಳಲ್ಲಿಯೂ ಇದ್ದಾನೆ. ಇದೇ ರೀತಿಯಾಗಿ ಜ್ಞಾನಿಗಳು, ಋಷಿ ಮುನಿಗಳು, ಸರ್ವಜೀವಜಂತುಗಳನ್ನೂ ತಮ್ಮಂತೆಯೇ ಕಾಣುತ್ತಾರೆ. ಅವೆಲ್ಲವುಗಳಲ್ಲಿಯೂ ಪರಮಾತ್ಮನನ್ನೇ ಕಾಣುತ್ತಾರೆಯೇ, ಹೊರತು ಹೊರಗಿನ ರೂಪಗಳನ್ನಲ್ಲ. ಅಂತೆಯೇ ಅವರು ಎಲ್ಲಾ ಜೀವಿಗಳಿಗೂ ಕೈಲಾದಷ್ಟು ಸೇವೆಯನ್ನು ಮಾಡುತ್ತಾರೆ ಇದು ಸಾತ್ವಿಕ ಕರ್ಮ.

ಜeಟeಣe ಠಿಚಿge bಡಿeಚಿಞ
ರಾಜಸಿಕ ಕರ್ಮ
ಯತ್ತು ಕಾಮೇಪ್ಪುನಾ ಕರ್ಮ ಸಾಹಂಕಾರೇಣ ವಾ ಪುನಃ
ಕ್ರಿಯತೇ ಬಹುಲಾಯಾಸಂ ತದ್ರಾಜಸಮುದಾಹೃತಮ್ || 24 ||
ಅರ್ಥ :- ನಿರ್ದಿಷ್ಟ ಫಲವನ್ನು (ಆಸೆ) ಪಡೆಯಬೇಕೆಂಬ ಉದ್ದೇಶದಿಂದ ಮಾಡುವ ಕರ್ಮ, ಅಹಂಕಾರದಿಂದ ಮಾಡಿದ ಕರ್ಮ, ಮತ್ತು ಅತಿಯಾದ ಶಾರೀರಿಕ ಶ್ರಮದಿಂದ ಮಾಡಿದ ಕರ್ಮ ಇವು ರಾಜಸ ಕರ್ಮಗಳು.
ಅಹಂಕಾರದಿಂದ ಮತ್ತು ಫಲಾಸೆಯಿಂದ ಮಾಡಿದ ಕರ್ಮಗಳಲ್ಲಿ ಅತಿಯಾದ ಶಾರೀರಿಕ ಹಾಗೂ ಮಾನಸಿಕ ಶ್ರಮವು ವ್ಯಯವಾಗುವುದರಿಂದ ಆಯಾಸವು ಹೆಚ್ಚಾಗುತ್ತದೆ. ಅಹಂಕಾರವು ಹೆಚ್ಚಾದ ಹಾಗೆ ಪರಿಶ್ರಮವೂ ಹೆಚ್ಚಾಗುತ್ತದೆ. (ಪ್ರತಿಭಟನೆ ಯಿರುವುದರಿಂದ). ಪ್ರತಿಭಟನೆ ಹಾಗೂ ಆತಂಕಗಳು ಒದಗಿದ ಹಾಗೆ ಅವುಗಳನ್ನು ಗೆಲ್ಲುವುದಕ್ಕಾಗಿ ಶಾರೀರಿಕ ಶ್ರಮದ ಜೊತೆಗೆ ಮಾನಸಿಕ ಶ್ರಮವೂ, ಉದ್ವೇಗವೂ ಸಹ ಹೆಚ್ಚಾಗುತ್ತದೆ. ಹೀಗೆ ಕರ್ಮ ಮಾಡುವಾಗ ಮಾನಸಿಕ ಉದ್ವೇಗವಿರುವುದರಿಂದ, ಮನಸ್ಸಿನಲ್ಲಿ ಏಳಬಹುದಾದ ಆತಂಕಗಳ ಭೀತಿ, ಹಾಗೂ ಕರ್ಮವು ಯಶಸ್ವಿಯಾಗುತ್ತದೆಯೋ ಇಲ್ಲವೋ ಎಂಬ ಬಗ್ಗೆ ಕಾತರ, ಇವು ಸದಾ ಜಾಗೃತವಾಗಿರುತ್ತವೆ. ಇದರಿಂದಾಗಿ ಕರ್ತನಿಗೆ ಸದಾ ಮಾನಸಿಕ ಅಶಾಂತತೆಯಿರುತ್ತದೆ. ಇವು ರಾಜಸಿಕ ಕರ್ಮಗಳು. ರಾಜಕೀಯ ಮುಂದಾಳುಗಳು, ಸಾಮಾಜಿಕ ಕಾರ್ಯಕರ್ತರು, ಉದ್ಯಮಿಗಳು, ಅತಿ ಉತ್ಸಾಹಿ ತಂದೆ ತಾಯಿಗಳು (ಮಕ್ಕಳ ರಕ್ಷಣೆಯ ಬಗ್ಗೆ) ಮತಾಂಧ ಧರ್ಮ ಪ್ರಚಾರಕರು, ಹಣದ ಲೇವಾದೇವಿ ಮಾಡುವವರು, ಮೊದಲಾದವರ ಕರ್ಮಗಳು ರಾಜಸಿಕ ಕರ್ಮದ ಉದಾಹರಣೆಗಳಾಗಿವೆ.
ತಾಮಸ ಕರ್ಮದ ಲಕ್ಷಣ
ಅನುಬಂಧಂ ಕ್ಷಯಂ ಹಿಂಸಾಮನವೇಕ್ವ್ಯ ಪೇಕ್ಷ್ಯ ಚ ಪೌರುಷಮ್ |
ಮೋಹಾದಾರಭ್ಯತೇ ಕರ್ಮ ಯತ್ತತ್ತಾಮಸಮುಚ್ಯತೇ || 25 ||
ಅರ್ಥ :- ತಾನು ಮಾಡುವ ಕರ್ಮಗಳ ಸಾಧಕಬಾಧಕಗಳು, ನಷ್ಟ, ಹಿಂಸೆ, ತನ್ನ ಶಕ್ತಿ ಇವಾವುದನ್ನೂ ಲಕ್ಷೆಗೆ ತೆಗೆದುಕೊಳ್ಳದೆ, ಅಜ್ಞಾನದಿಂದ ಮಾಡುವ ಕರ್ಮವು ತಾಮಸ ಕರ್ಮ ಎನಿಸುತ್ತದೆ.
ಕರ್ಮವನ್ನು ಮಾಡುವಾಗ ಅದು ಯೋಗ್ಯವೋ, ಅಯೋಗ್ಯವೋ; ಅದರಿಂದೊಗಬಹುದಾದ ಲಾಭವೇನು, ಹಾನಿ ಏನು, ಅದಕ್ಕೆ ತಗಲುವ ಶಕ್ತಿ ಹಾಗೂ ಧನವ್ಯಯ ಎಷ್ಟು; ಆ ಕರ್ಮದಿಂದ ಯಾರ್ಯಾರಿಗೆ ಎಷ್ಟೆಷ್ಟು ಹಾನಿಯಾಗುತ್ತದೆ. ತನ್ನ ಯೋಗ್ಯತೆಯ ದೃಷ್ಟಿಯಿಂದ ಅದನ್ನು ಮಾಡಬಹುದೇ ಇಲ್ಲವೇ, ಆ ಕರ್ಮವನ್ನು ಮಾಡಲು ತನ್ನ ಶಕ್ತಿಸಾಮಥ್ರ್ಯ ಎಷ್ಟಿದೆ ಇತ್ಯಾದಿ ಯಾವ ವಿಚಾರಗಳನ್ನೂ ಗಮನಕ್ಕೆ ತಂದುಕೊಳ್ಳದೇ, ಸಾಧಕ ಬಾಧಕಗಳನ್ನು ವಿಚಾರಿಸದೇ, ತಪ್ಪು ತಿಳುವಳಿಕೆಯಿಂದ, ತಾನು ಮಾಡಿದ್ದೇ ಸರಿ ಎಂದು ತಿಳಿದುಕೊಂಡು, ಅಜ್ಞಾನದಿಂದ ಮಾಡುವ ಕರ್ಮಗಳು ತಾಮಸ ಕರ್ಮ ಎನಿಸಿಕೊಳ್ಳುತ್ತವೆ. ಕುಡುಕುತನ, ಜೂಜು, ಲಂಚ ಮೊದಲಾದವು ಇದಕ್ಕೆ ಕೆಲವು ಉದಾಹರಣೆಗಳು. ಈ ಜನರು ಕೇವಲ ತತ್ಕಾಲದಲ್ಲಿ ಲಭಿಸುವ ಸುಖಕ್ಕೆ ಮರುಳಾಗಿ, ಸಂಸಾರದಲ್ಲಿ ತಮ್ಮನ್ನು ಅವಲಂಬಿಸಿರುವವರ ಮೇಲೆ ಈ ಕರ್ಮಗಳಿಂದ ಯಾವ ದುಷ್ಟಪರಿಣಾಮಗಳಗುತ್ತವೆಂಬುದನ್ನು ಸಹ ಲಕ್ಷಿಸದೇ ಇರುತ್ತಾರೆ. ಇಂತಹ ಕರ್ಮಗಳು ಕ್ರಮೇಣ ಅವರ ಚಟವಾಗಿ ಅಭ್ಯಾಸವಾಗಿ ಬಿಟ್ಟು ಮುಂದೆ ಅವುಗಳಿಂದ ತಪ್ಪಿಸಿಕೊಳ್ಳಲು ಅಸಾಧ್ಯವಾಗುತ್ತವೆ.
ತಾಮಸ ಕರ್ಮಗಳು ತತ್ಕಾಲದಲ್ಲಿಯೇ ದುಃಖವನ್ನುಂಟು ಮಾಡುತ್ತವೆ. ರಾಜಸ ಕರ್ಮಗಳು ಕಾಲಾಂತರದಲ್ಲಿ ದುಃಖವನ್ನುಂಟು ಮಾಡುತ್ತವೆ. ಸಾತ್ವಿಕ ಕರ್ಮಗಳು ಸದಾಕಾಲ ಮನಸ್ಸಿನಲ್ಲಿ ಶಾಂತಿಯನ್ನೂ ಆನಂದವನ್ನೂ ಉಂಟುಮಾಡುತ್ತವೆ.
ಸಾತ್ವಿಕ ಕರ್ತನ ಲಕ್ಷಣ
ಮುಕ್ತಸಂಗೋ„ನಹಂವಾದೀ ಧೃತ್ಯುತ್ಸಾಹಸಮನ್ವಿತಃ
ಸಿದ್ಧ್ಯಸಿದ್ಧ್ಯೋರ್ನಿರ್ವಿಕಾರಃ ಕರ್ತಾ ಸಾತ್ತ್ವಿಕ ಉಚ್ಯತೇ || 26 ||
ಅರ್ಥ :- ಮೋಹವಿಲ್ಲದಿರುವ, ನಾನೇ ಮಾಡುವವನು ಎಂಬ ಅಹಂಕರವಿಲದ, ವಿಲ್ಲದ ಸ್ಥಿರತೆ ಮತ್ತು ಉತ್ಸಾಹಗಳಿಂದ ಕೂಡಿದ, ಕರ್ಮವು ಸಿದ್ಧಿಸಲಿ ಇಲ್ಲವೆ ಸಿದ್ಧಿಯಾಗದಿರಲಿ ಎರಡೂ ಸಂದರ್ಭಗಳಲ್ಲಿಯೂ ಮನಸ್ಸಿನ ಶಾಂತತೆಯನ್ನು ಕಳೆದುಕೊಳ್ಳದೇ ಒಂದೇ ರೀತಿಯಾಗಿಟ್ಟುಕೊಳ್ಳುವ, ಕರ್ತನು ಸಾತ್ವಿಕ ಕರ್ತ ಎನಿಸಿಕೊಳ್ಳುತ್ತಾನೆ.
ಸತ್ವ, ರಜಸ್ಸು, ತಮೋಗುಣಗಳು ಮನುಷ್ಯನ ಮನಸ್ಸು ಬುದ್ಧಿಗಳ ಮೇಲೆ ತಮ್ಮ ಪರಿಣಾಮವನ್ನು ಬೀರುವುದರಿಂದ ‘ಕರ್ತ’ನು ಸಹ ಆಯಾಯಾ ಕಾಲದಲ್ಲಿ ಪ್ರಬಲವಾಗಿರುವ ಗುಣಗಳಿಗನುಸಾರವಾಗಿ ಭಿನ್ನಭಿನ್ನವಾಗಿ ವರ್ತಿಸುತ್ತಾನೆ. ಇದೇ ರೀತಿ ಮನುಷ್ಯನಲ್ಲಿ ಯಾವುದಾದರೂ ಒಂದೇ ಗುಣವು ಸದಾಕಾಲವೂ ಪ್ರಬಲವಾಗಿರಬಹುದು. ಈ ದೃಷ್ಟಿಯಿಂದ ಕರ್ತನನ್ನು ಸಾತ್ವಿಕ, ರಾಜಸಿಕ, ಮತ್ತು ತಾಮಸಿಕ ಕರ್ತ ಎಂದು ಮೂರು ವಿಧವಾಗಿ ವಿಂಗಡಿಸಲಾಗಿದೆ.
ಸಾತ್ವಿಕ ಕರ್ತನು, ತನ್ನ ಸಂಬಂಧಿಕರು, ಸ್ನೇಹಿತರು, ತನಗೆ ಬೇಕಾದವರು, ಎಂದು ಮೋಹದಿಂದ ಕೂಡಿರುವುದಿಲ್ಲ. ಅವನಲ್ಲಿ ಅಹಂಕಾರವೂ ಇಲ್ಲ. ಕರ್ಮವನ್ನು ಮಾಡುವಾಗ ಅವನು ಯಾವ ಭೇದವನ್ನು ಮಾಡದೆ ತನ್ನ ಕರ್ಮದಿಂದ ಬಹು ಜನರ ಹಿತವನ್ನು ಸಾಧಿಸುವ ಗುರಿಯನ್ನಷ್ಟೇ ಇಟ್ಟುಕೊಂಡಿರುತ್ತಾನೆ. ತಾನು ಯಾವುದಾದರೂ ಮಹಾಕಾರ್ಯವನ್ನು ಸಾಧಿಸಿರುವಾಗ, ಜನರು ಅವನನ್ನು ಆ ರೀತಿಯಾಗಿ ಹೊಗಳಬಹುದೇ ಹೊರತು, ತಾನು ಅಂತಹ ಹಿರಿಯ ಕಾರ್ಯವನ್ನು ಸಾಧಿಸಿದೆನೆಂದು ಜಂಬ ಕೊಚ್ಚಿ ಕೊಳ್ಳುವುದಿಲ್ಲ; ಏಕೆಂದರೆ ಅವನು ಅಹಂಕಾರಯುತನಾಗಿಲ್ಲ ಮತ್ತು ಅವನು ತನ್ನ ಕರ್ಮವನ್ನು ಪರಮಾತ್ಮನಿಗೆ ಅರ್ಪಿಸಿಬಿಟ್ಟಿರುತ್ತಾನೆ. ಆದಾಗ್ಯೂ ಕರ್ಮವನ್ನು ಮಾಡುವಾಗ ಅವನು ಕರ್ಮದ ಯಶಸ್ಸಿನ ಬಗ್ಗೆ ಸ್ಥಿರತೆ, ಜಿಗುಟುತನ, ಹಾಗೂ ಕಾರ್ಯಪಟುತ್ವ, ಮತ್ತು ಉತ್ಸಾಹಗಳನ್ನು ತ್ಯಜಿಸುವುದಿಲ್ಲ. ಮಧ್ಯದಲ್ಲಿ ವಿಘ್ನವೊದಗಿದರೆ ಇವನ ಧೃತಿ ಹಾಗೂ ಉತ್ಸಾಹಗಳು ಪುಟಗೊಟ್ಟಂತೆ ಜಾಗೃತವಾಗಿ ಅವನು ಕಾರ್ಯವನ್ನು ಯಶಸ್ವಿಯಾಗಿ ಸಾಂಗಗೊಳಿಸುವಂತೆ ಮಾಡುತ್ತವೆ. ಈತನು ಜಯದಲ್ಲಿ ಹಿಗ್ಗುವುದೂ ಇಲ್ಲ. ಸೋಲಿನಲ್ಲಿ ಕುಗ್ಗುವುದೂ ಇಲ್ಲ. ಫಲವು ತನಗೆ ಸಂಬಂಧಪಟ್ಟಿದ್ದಲ್ಲವೆಂದೂ, ತಿಳಿದುಕೊಂಡು ಉದಾಸೀನನಾಗಿರುತ್ತಾನೆ. ಆಸ್ಪತ್ರೆಯಲ್ಲಿ ದಕ್ಷತೆಯಿಂದ ಸೇವೆಯಲ್ಲಿ ನಿರತಳಾಗಿರುವ ದಾದಿಯ ಉದಾಹರಣೆಯನ್ನು ಹೇಳಬಹುದು. ರೋಗಿಯ ಸೇವೆಯಲ್ಲಿ ಅವಳು ನಿರತಳಾಗಿದ್ದಾಗ್ಯೂ, ತಾನು ರೋಗಿಯನ್ನು ರೋಗಮುಕ್ತನನ್ನಾಗಿ ಮಾಡುತ್ತೇನೆಂದು ಅವಳು ತಿಳಿಯುವುದಿಲ್ಲ. ಏಕೆಂದರೆ ಈ ಕಾರ್ಯಕ್ಕೆ, ಅದರ ಹಿಂದೆ ವೈದ್ಯನ ಬುದ್ಧಿವಂತಿಕೆ ಹಾಗೂ ದಕ್ಷತೆಯ ಕಾರಣವಾಗಿದೆ ಎಂದು ಅವಳು ಸದಾ ತಿಳಿದಿರುತ್ತಾಳೆ. ಅವಳಲ್ಲಿ ಧೃತಿ ಹಾಗೂ ಉತ್ಸಾಹಗಳಿರುವುದರಿಂದ ತಾಳ್ಮೆಯಿಂದ ಸೇವೆಯಲ್ಲಿ ನಿರತಳಾಗಿರುತ್ತಾಳೆ. ರೋಗಿಯು ರೋಗಮುಕ್ತನಾದರೆ ಅವಳು ಸಂತೋಷ ಪಡುವುದೂ ಇಲ್ಲ. ಮರಣ ಹೊಂದಿದರೆ ದುಃಖಪಡುವುದೂ ಇಲ್ಲ. ಹಾಗೆ ಮಾಡಲು ಅವಳಿಗೆ ವ್ಯವಧಾನವೂ ಇಲ್ಲ. ಸೇವೆ ಮಾಡುವುದಷ್ಟೇ ತನ್ನ ಕರ್ತವ್ಯ ಎಂದು ಅವಳು ತಿಳಿದುಕೊಂಡು ಸದಾ ಸೇವೆಯಲ್ಲಿಯೇ ನಿರತಳಾಗಿರುತ್ತಾಳೆ.
ರಾಜಸಿಕ ಕರ್ತನ ಲಕ್ಷಣ
ರಾಗೀ ಕರ್ಮಫಲಪ್ಸುರ್ಲುಬ್ಧೋ ಹಿಂಸಾತ್ಮಕೋ„ಶುಚಿಃ |
ಹರ್ಷಶೋಕಾನ್ವಿತಃ ಕರ್ತಾ ರಾಜಸಃ ಪರಿಕೀರ್ತಿತಃ || 27 ||
ಅರ್ಥ :- ಕಾಮಾಸ್ತಕನಾದವನು, ನಿರ್ದಿಷ್ಟ ಫಲವನ್ನು ಸಾಧಿಸಲು ಕರ್ಮ ಮಾಡುವವನು, ಲೋಭಿಯು, ತನ್ನ ಕಾರ್ಯಸಾಧನೆಯಲ್ಲಿ, ಅವಶ್ಯವಾದರೆ ಪರಹಿಂಸೆ ಮಾಡುವವನು, ಅಶುಚಿಯಾಗಿರುವವನು, ಇಂತಹ ಕರ್ತನು ರಾಜಸಕರ್ತ ಎನಿಸಿಕೊಳ್ಳುತ್ತಾನೆ.
ರಾಜಸಕರ್ತನು ನಾನಾತರಹದ ಆಸೆಗಳಲ್ಲಿ ಮುಳುಗಿ, ತನ್ನ ಇಷ್ಟಾರ್ಥ ಸಿದ್ಧಿಗಾಗಿ ವಿವಿಧ ಕಾರ್ಯಗಳಲ್ಲಿ ನಿರತನಾಗಿರುತ್ತಾನೆ. ಎದುರಿಗೆ ವಿಘ್ನಗಳು ಬಂದರೆ ಹೆದರದೆ, ತನ್ನ ಗುರಿಯನ್ನು ಸಾಧಿಸಲು ಪರರನ್ನು ಹಿಂಸಿಸಲು ಸಹ ಹೇಸದೆ ಧೈರ್ಯದಿಂದ ಕಾರ್ಯನಿರತನಾಗುತ್ತಾನೆ. ಇವನ ಆಸೆಗಳು ಪೂರೈಸಲ್ಪಟ್ಟಹಾಗೆ ಇನ್ನೂ ವೃದ್ಧಿಯಾಗುತ್ತಲೇ ಹೋಗುತ್ತವೆ. ಅವುಗಳಿಗೆ ಕೊನೆಯೇ ಇಲ್ಲ. ಇನ್ನೂ ಹೆಚ್ಚು ಹೆಚ್ಚು ಸಂಪಾದಿಸಬೇಕೆಂಬ ಕಾತರತೆಯೂ, ಸಂಗ್ರಹಬುದ್ಧಿಯೂ ಹೆಚ್ಚುತ್ತದೆ. ಇವನು ಕ್ರಮೇಣ ಲೋಭಿಯಾಗುತ್ತಾನೆ. ತನ್ನ ಗುರಿಯನ್ನು ಸಾಧಿಸುವುದಕ್ಕಾಗಿ ಏನನ್ನು ಬೇಕಾದರೂ ಮಾಡಲು ತಯಾರಾಗುತ್ತಾನೆ. ನೀತಿನಿಯಮಗಳು ಇವನಿಗೆ ತುಚ್ಛವಾಗಿ (ಅಶುಚಿಃ) ಕಾಣುತ್ತವೆ. ಇವನು ಶಾಂತನಾಗಿರುವಾಗ ಒಳ್ಳೆ ಸಾತ್ವಿಕನಂತೆ, ಧಾರ್ಮಿಕ ಪುರುಷನಂತೆ ಕಂಡಾಗ್ಯೂ, ತನ್ನ ಇಷ್ಟಾರ್ಥವನ್ನು ಸಾಧಿಸಿಕೊಳ್ಳುವಾಗ ಯಾವುದನ್ನೂ ಗಮನಿಸದೆ ನೀತಿ ಹಾಗೂ ಧಾರ್ಮಿಕ ನಿಯಮಗಳನ್ನು ಸ್ವೇಚ್ಛೆಯಾಗಿ ಉಲ್ಲಂಘಿಸುತ್ತಾನೆ. ಇವನ ಮನಸ್ಸು ಸದಾಕಾಲವೂ ಉದ್ರೇಕಗೊಂಡಿರುವುದರಿಂದ ಇವನಿಗೆ ಮನಃಶಾಂತಿ ಎಂಬುದೇ ಇಲ್ಲ. ಸುಖ ದುಃಖಗಳಿಂದ ಇವನು ತುಂಬಾ ಬಳಲುತ್ತಾನೆ.
ತಾಮಸ ಕರ್ತನ ಲಕ್ಷಣ
ಅಯುಕ್ತಃ ಪ್ರಾಕೃತಃ ಸ್ತಬ್ಧಃ ಶಠೋ ನೈಷ್ಕøತಿಕೋ„ಲಸಂ ಲಸಃ |
ವಿಷಾದೀ ದೀರ್ಘಸೂತ್ರೀ ಚ ಕರ್ತಾ ತಾಮಸ ಉಚ್ಯತೇ || 28 ||
ಅರ್ಥ :- ಮನಸ್ಥೈರ್ಯವಿಲ್ಲದಿರುವುದು, ಅಸಭ್ಯತನ, ನೀತಿ ವಿವೇಕಗಳಿಗೆ ಜಗ್ಗದಿರುವುದು, ಮೋಸಮಾಡುವುದು, ಮತ್ಸರ, ಸೋಮಾರಿತನ, ಎದೆಗುಂದದಿರುವಿಕೆ, ಕಾಲ ವಿಳಂಬ ಮಾಡುವುದು ಇವು ತಾಮಸಕರ್ತನ ಲಕ್ಷಣಗಳು.
ಅಯುಕ್ತ- ಎಂದರೆ ಮನಸ್ಸನ್ನು ನಿಗ್ರಹಿಸಲಾರದವನು. ಇಂತಹವನು ಮನಸ್ಸನ್ನು ಸ್ಥಿಮಿತವಾಗಿಟ್ಟುಕೊಳ್ಳಲಾರನು. ಚಂಚಲವಾದ ಮನಸ್ಸು ಎಳೆದುಕೊಂಡು ಹೋದ ಹಾಗೆ ಅವನ ವಿಚಾರವೂ ಬದಲಾಗುತ್ತಾ ಇರುತ್ತದೆ, ಇವನ ಮನಸ್ಸು ಬುದ್ಧಿಯ ವಿವೇಕಕ್ಕೆ ಒಳಪಡದೆ ಇರುವುದರಿಂದ ಮನಸ್ಸಿನ ವಿಚಾರಗಳಲ್ಲಿ ಪರಸ್ಪರ ಹೊಂದಾಣಿಕೆ ಇ ಯಿರುವುದಿಲ್ಲ. ಇವನ ವಿಚಾರಗಳೂ, ಆಸೆ ಆಕಾಂಕ್ಷೆಗಳೂ, ತೀರ ಕೆಳಮಟ್ಟದ್ದಾಗಿರುತ್ತವೆ. ಇಂತಹವನು ವ್ಯವಹಾರದಲ್ಲಿ ನೀತಿಗೆಟ್ಟವನಾಗಿ ಅಸಭ್ಯನಂತೆ ವರ್ತಿಸುತ್ತಾನೆ. ಇವನಿಗೆ ಯಾರಾದರೂ ಹಿತೈಷಿಗಳು ಇವನ ತಪ್ಪನ್ನು ತೋರಿಸಿದರೆ, ಅವನು ಅವುಗಳನ್ನು ಒಪ್ಪಿಕೊಳ್ಳುವುದಿಲ್ಲ. ತಾನು ಮಾಡಿದುದೇ ಸರಿ ಎಂದು ಹಟ ಸಾಧಿಸುತ್ತಾನೆ (ಸ್ತಬ್ಧಃ) ಇಂತಹ ಮನುಷ್ಯನು ತನ್ನ ಕಾರ್ಯವನ್ನು ಸಾಧಿಸುವುದಕ್ಕಾಗಿ ಎಂತಹ ಹೀನತ£ ರ Àವಾದ ಮೋಸವನ್ನು (ಶಠ)ಮಾಡಲೂ ಸಹ ಹಿಂಜರಿಯುವುದಿಲ್ಲ. ತನ್ನ ಕಾರ್ಯ ಜಾಲವನ್ನು ಗುಟ್ಟಾಗಿ ರಚಿಸಿ, ಹೊರಗೆ ಯಾರಿಗೂ ಅದರ ಸುಳಿವು ಸಹ ತಿಳಿಯದಂತೆ ವರ್ತಿಸುತ್ತಾನೆ. ಆದುದರಿಂದ ಇವನು ನಂಬಿಕೆಗೆ ಅರ್ಹನಲ್ಲ.
ನೈಷ್ಕøತಿಕ:- ಸಂಬಂಧಿಕರಲ್ಲಿ, ಸ್ನೇಹಿತರಲ್ಲಿ ಬೇಕಂತಲೇ ಕಾಲು ಕೆರೆದು ಜಗಳವಾಡಿ, ಅವರಿಗೆ ಮೋಸಮಾಡಿ, ಸೇಡು ತೀರಿಸಿಕೊಳ್ಳುವ ಇಲ್ಲವೇ ಇನ್ನೂ ನೀಚತನಕ್ಕಿಳಿದು ಅವರನ್ನು ಕೊಲ್ಲುವುದಕ್ಕೂ ಹಿಂಜರಿಯದ ಸ್ವಭಾವವುಳ್ಳವನು. ಇವನು ಸ್ವಭಾವವಾಗಿ ಇಂತಹ ಕಾರ್ಯವನ್ನು ಮಾಡಲು ಸೋಮಾರಿಯಾಗಿರುತ್ತಾನೆ. ಆದರೆ ನೀಚತನ, ಕಳ್ಳತನ, ದರೋಡೆ, ಲೂಟಿ, ಮೊದಲಾದ ಕಾರ್ಯಗಳನ್ನು ಮಾಡಿ ಹಣಗಳಿಸಲು ಉತ್ಸುಕನಾಗಿರುತ್ತಾನೆ. ಇವನು ಯಾವಾಗಲೂ ಅನೀತಿಯ ಮಾರ್ಗವನ್ನೇ ಅನುಸರಿಸುತ್ತಾನೆ.
ಆಲಸಃ

ವಿಷಾದೀ- ಎದೆಗುಂದಿದವನು, ಅಧೀರನು, ಇವನು ಸಂಸಾರದಲ್ಲಿ ಬಂದೊದಗುವ ಸವಾಲುಗಳನ್ನು, ಕಷ್ಟನಷ್ಟಗಳನ್ನು ಧೈರ್ಯದಿಂದ ಎದುರಿಸಲು ಹಿಂಜರಿಯುತ್ತಾನೆ. ಸಂಸಾರದ ಜಂಜಾಟವನ್ನು ತಪ್ಪಿಸಿಕೊಂಡು, ಎಲ್ಲೋ ಒಂದು ಮೂಲೆಯಲ್ಲಿ ತನ್ನ ಇಂದ್ರಿಯಗಳ ಸುಖದಲ್ಲಿ ಲೋಲುಪನಾಗಿರಲು ಇಷ್ಟಪಡುತ್ತಾನೆ.
ದೀರ್ಘಸೂತ್ರೀ- ಸಂಸಾರದಲ್ಲಿ ಒದಗುವ ಪ್ರಶ್ನೆಗಳನ್ನು ಕರಿಣ ಸಂದರ್ಭಗಳನ್ನು ಜಾಗ್ರತೆಯಾಗಿ ಹಾಗೂ ಸ್ಥಿರವಾಗಿ ತೀರ್ಮಾನ ಮಾಡಲಾರದವನು. ಹೀಗೆ ಮಾಡಬೇಕೋ, ಹಾಗೆ ಮಾಡಬೇಕೋ, ಎಂದು ಮನಸ್ಸು ಹೊಯ್ದಾಡುತ್ತಲೇ ಇರುತ್ತದೆ. ನಂತರ ಒಂದು ತೀರ್ಮಾನಕ್ಕೆ ಬಂದ ಮೇಲೆ ಸಹ (ಈ ತೀರ್ಮಾನವು ಅಸ್ಪಷ್ಟವಾಗಿರುತ್ತದೆ) ಅದನ್ನು ಕಾರ್ಯರೂಪಕ್ಕೆ ತರುವಷ್ಟು ಮನೋದಾಢ್ರ್ಯತೆಯಿರುವುದಿಲ್ಲ. ಹೀಗಾಗಿ ತೀರ್ಮಾನವನ್ನು ಕ್ರಮೇಣ ಮುಂದೂಡುತ್ತಾ ಹೋಗುತ್ತಾನೆ. ಕೊನೆಗೆ ತೀರ್ಮಾನ ಮಾಡುವ ಹೊತ್ತಿಗೆ ಕಾಲವಿಳಂಬವಾಗಿರುತ್ತದೆ. ದೀರ್ಘಸೂತ್ರಿತ್ರೀ ಎಂದರೆ ದೀರ್ಘಕಾಲದವರೆಗೂ ಹಗೆಯನ್ನು ಸಾಧಿಸುವವನು ಎಂದು ಕೆಲವರು ಅರ್ಥಮಾಡುತ್ತಾರೆ. ಇವು ತಾಮಸ ಕರ್ತನ ಲಕ್ಷಣಗಳು.
ಸಾಧಕನು ತನ್ನಲ್ಲಿ ರಾಜಸಿಕ, ಹಾಗೂ ತಾಮಸಿಕ ಗುಣಗಳು ಕಂಡು ಬಂದರೆ ಅವುಗಳನ್ನು ಕೂಡಲೆ ನಿಗ್ರಹಿಸಿ, ಜಯಿಸಿ, ಸತ್ವ ಗುಣಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಮಾಡಬೇಕೆಂಬ ಉದ್ದೇಶದಿಂದ ಶ್ರೀಕೃಷ್ಣನು ಈ ಗುಣಗಳನ್ನು ಇಷ್ಟು ವಿವರವಾಗಿ ವರ್ಣಿಸಿದ್ದಾನೆ.

ಬುದ್ಧೇರ್ಭೇದಂ ಧೃತೇಶ್ಚೈವ ಗುಣತಸ್ತ್ರಿವಿಧಂ ಶೃಣು |
ಪ್ರೋಚ್ಯಮಾನಮಶೇಷೇಣ ಪೃಥಕ್ತ್ವೇನ ಧನಂಜಯ || 29 ||
ಅರ್ಥ :- ಧನಂಜಯನೇ, ಬುದ್ಧಿ ಮತ್ತು ಧೃತಿಗಳ ಮೂರು ಭೇದಗಳನ್ನು ಬೇರೆ ಬೇರೆಯಾಗಿ ವರ್ಣಿಸುತ್ತೇನೆ, ಕೇಳು
ಧೃತಿ- ಎಂದರೆ ಬುದ್ಧಿಯಿಂದ ನಿಶ್ಚಯಿಸಲ್ಪಟ್ಟ ವಿಷಯವನ್ನು ಪ್ರತ್ಯಕ್ಷವಾಗಿ ಆಚರಣೆಗೆ ತಂದು ಯಶಸ್ವಿಯಾಗಿ ಕೊನೆಮುಟ್ಟಿಸುವ ಶಕ್ತಿ. ಇದಕ್ಕೆ ಧೈರ್ಯ ಎಂದೂ ಹೇಳುತ್ತಾರೆ.
ಸಾತ್ವಿಕ ಬುದ್ಧಿಯ ಲಕ್ಷಣ
ಪ್ರವೃತ್ತಿಂ ಚ ನಿವೃತ್ತಿಂಚ ಕಾರ್ಯಾಕಾರ್ಯೇ ಭಯಾಭಯೇ |
ಬಂಧಂ ಮೋಕ್ಷಂ ಚ ಯಾ ವೇತ್ತಿ ಬುದ್ಧಿಃ ಸಾ ಪಾರ್ಥ ಸಾತ್ವಿಕೀ || 30 ||
ಅರ್ಥ :- ಕರ್ಮಮಾರ್ಗ ಮತ್ತು ಸನ್ಯಾಸಮಾರ್ಗ, ಮಾಡಬೇಕಾದ ಕಾರ್ಯ ಮತ್ತು ಮಾಡಬಾರದ ಕಾರ್ಯ, ಭಯ ಮತ್ತು ಅಭಯ, ಬಂಧ ಮತ್ತು ಮೋಕ್ಷ ಇವುಗಳಲ್ಲಿಯ ಭೇದವನ್ನು ತಿಳಿದುಕೊಳ್ಳುವ ಬುದ್ದಿಯು ಸಾತ್ವಿಕ ಬುದ್ಧಿ ಎನಿಸಿಕೊಳ್ಳುತ್ತದೆ.
ನಿರೀಕ್ಷಿಸುವುದು, ವಿಮರ್ಶಿಸುವುದು, ವಿಭಜನೆ ಮಾಡುವುದು, ಆಶಿಸುವುದು, ಜ್ಞಾಪಿಸಿಕೊಳ್ಳುವುದು, ಇತ್ಯಾದಿಗಳು ಬುದ್ಧಿಯ ಕಾರ್ಯಗಳು. ಈ ಎಲ್ಲಾ ಕಾರ್ಯಗಳಲ್ಲಿ ಒಳ್ಳೆಯದು – ಕೆಟ್ಟದ್ದು, ಧರ್ಮ-ಅಧರ್ಮ, ನೀತಿ-ಅನೀತಿ, ಇವುಗಳನ್ನು ವಿಮರ್ಶೆ ಮಾಡಿ ಮಾಡಬೇಕಾದ ಕಾರ್ಯಗಳನ್ನು (ಪ್ರವೃತ್ತಿ) ಮಾಡುವಂತೆ, ಪ್ರೇರಣೆ ಕೊಡುವುದು ಮತ್ತು ತ್ಯಜಿಸಬೇಕಾದ ಕಾರ್ಯಗಳನ್ನು (ನಿವೃತ್ತಿ) ತ್ಯಜಿಸುವಂತೆ ಧೈರ್ಯವನ್ನು ಕೊಡುವುದು ಇವು ಬುದ್ಧಿಯ ಕಾರ್ಯ. ಸಾತ್ವಿಕ ಬುದ್ಧಿಯು ಯಾವಾಗಲೂ ಯೋಗ್ಯವಾದ, ಸರಿಯಾದ, ನ್ಯಾಯಸಮ್ಮತವಾದ ತೀರ್ಮಾನವನ್ನು ಕೊಡುತ್ತದೆ.
ಭಯಾಭಯ- ಅಧರ್ಮಕ್ಕೆ ಹೆದರದೆ ಅದನ್ನು ಎದುರಿಸುವ ಧೈರ್ಯ ಹಾಗೂ ಕೆಚ್ಚೆದೆ ಇರುವುದರ ಜೊತೆಗೆ, ಧರ್ಮಕ್ಕೆ ಹೆದರುವ ಮೃದು ಹೃದಯವಿರಬೇಕು. ಇದು ಸಾತ್ವಿಕ ಬುದ್ಧಿಯ ಲಕ್ಷಣ.
ಬಂಧಂ-ಮೋಕ್ಷಂ- ಯಾವ ಕಾರ್ಯಗಳು ಜೀವನವನ್ನು ಸಂಸಾರಕ್ಕೆ ಇನ್ನೂ ಹೆಚ್ಚಾಗಿ ಬಿಗಿದು ಕಟ್ಟುತ್ತವೆ. ಅಂದರೆ ಯಾವ ಕಾರ್ಯಗಳು ವಾಸನೆಗಳಿಗೆ ಕಾರಣವಾಗುತ್ತವೆ. ಯಾವ ಕಾರ್ಯವನ್ನು ಮಾಡಿದರೆ ಇರುವ ವಾಸನೆಗಳು ಬರಿದಾಗಿ ಹೊಸವಾಸನೆಗಳಿಗೆ ಕಾರಣವಾಗುವುದಿಲ್ಲ ಎಂಬುದನ್ನು ಸಾತ್ವಿಕ ಬುದ್ಧಿಯನ್ನು ತಿಳಿಸುತ್ತದೆ.
ರಾಜಸ ಬುದ್ಧಿಯ ಲಕ್ಷಣ
ಯಯಾ ಧರ್ಮಮಧರ್ಮಂ ಚ ಕಾರ್ಯಂ ಚಾಕಾರ್ಯಮೇವ ಚ |
ಅಯಥಾವ್ಪ್ರಜಾನಾತಿ ಬುದ್ಧಿಃ ಸಾ ಪಾರ್ಥ ರಾಜಸೀ || 31 ||
ಅರ್ಥ :- ಪಾರ್ಥನೇ, ಧರ್ಮಾಧರ್ಮಗಳು, ಕಾರ್ಯ-ಅಕಾರ್ಯ, ಇವುಗಳನ್ನು ತಪ್ಪು ರೀತಿಯಲ್ಲಿ ತಿಳಿಯುವ ಬುದ್ಧಿಯ ರಾಜಸಬುದ್ಧಿ ಎನಿಸಿಕೊಳ್ಳುತ್ತದೆ.
ರಾಜಸ ರಾಜಸಿ ಬುದ್ಧಿಯಿರುವ ವ್ಯಕ್ತಿಯಲ್ಲಿ ಆಸೆ ಆಕಾಂಕ್ಷೆಗಳು ಉಲ್ಬಣವಾಗಿರುವುದರಿಂದ ಧರ್ಮಾಧರ್ಮ, ಕಾರ್ಯಾಕಾರ್ಯಗಳ ವಿಮರ್ಶೆಯನ್ನು ಮಾಡುವಾಗ, ತನ್ನ ಸ್ವಾಭಾವಿಕ ಆಸೆಗಳ ಪೂರ್ತಿಗೆ ಅನುಕೂಲವಾದ ತೀರ್ಮಾನವನ್ನೇ ಮಾಡುತ್ತಾನಲ್ಲದೇ, ನ್ಯಾಯವಾದ ತೀರ್ಮಾನವನ್ನು ಮಾಡುವುದಿಲ್ಲ.
ತಾಮಸಬುದ್ಧಿಯ ಲಕ್ಷಣ
ಅಧರ್ಮಂ ಧರ್ಮಮಿತಿ ಯಾ ಮನ್ಯತೇ ತಮಸಾವೃತಾ |
ಸರ್ವಾರ್ಥಾನ್ವಿಪರೀತಾಂಶ್ಚ ಬುದ್ಧಿಃ ಸಾ ಪಾರ್ಥ ತಾಮಸೀ || 32 ||
ಅರ್ಥ :- ಪಾರ್ಥನೇ, ಅಜ್ಞಾನದಿಂದ ಆವೃತನಾಗಿ ಅಧರ್ಮವನ್ನು ಧರ್ಮವೆಂತಲೂ, ಧರ್ಮವನ್ನು ಅಧರ್ಮವೆಂತಲೂ, ಹೀಗೆ ಪ್ರತಿಯೊಂದನ್ನೂ ಅದಕ್ಕೆ ವಿಪರೀತವಾಗಿ ತಿಳಿಯುವ ಬುದ್ಧಿಗೆ ತಾಮಸಬುದ್ಧಿ ಎಂದು ಹೆಸರು.
ತಾಮಸ ಬುದ್ಧಿಯು ಯ ಮನುಷ್ಯನಲ್ಲಿ ಅಹಂಕಾರ, ಅಜ್ಞಾನಗಳಿರುವುದರಿಂದ ಬುದ್ಧಿಯು ಮಂಕಾಗಿರುತ್ತದೆ. ಸಾಕಷ್ಟು ವಿಕಾಸವನ್ನು ಹೊಂದಿರುವುದಿಲ್ಲ. ಕೇವಲ ಶಾರೀರಿಕ ಮಟ್ಟದ ವಿಚಾರವನ್ನು ಮಾತ್ರ ಮಾಡುವ ಸಾಮಥ್ರ್ಯವಿರುತ್ತದೆ. ಪ್ರತಿಯೊಂದನ್ನೂ ತಪ್ಪು ತಪ್ಪಾಗಿ ತಿಳಿಯುತ್ತದೆ ಹಾಗೂ ತಪ್ಪಾಗಿ ತೀರ್ಮಾನಮಾಡುತ್ತದೆ.
ಸಾತ್ವಿಕ ಧೃತಿಯ ಲಕ್ಷಣ
ಧೃತ್ಯಾ ಯಯಾ ಧಾರಯತೇ ಮನಃಪ್ರಾಣೇಂದ್ರಿಯಕ್ರಿಯಾಃ |
ಯೋಗೇನಾವ್ಯಭಿಚಾರಿಣ್ಯಾ ಧೃತಿಃ ಸಾ ಪಾರ್ಥ ಸಾತ್ತ್ವಿಕೀ || 33 ||
ಅರ್ಥ :- ಪಾರ್ಥನೇ ಯೋಗದ ಮೂಲಕ ಮನಸ್ಸು, ಪ್ರಾಣ, ಮತ್ತು ಇಂದ್ರಿಯಗಳನ್ನು ನಿಗ್ರಹಿಸುವ ದೃಢವಾದ ಸಾಮಥ್ರ್ಯಕ್ಕೆ ಸಾತ್ವಿಕ ಧೃತಿ ಎಂದು ಹೆಸರು.
ಧೃತಿ ಎಂದರೆ ಪ್ರತಿಯೊಬ್ಬ ವ್ಯಕ್ತಿಯಲ್ಲಿರುವ ಗುಪ್ತವಾದ ಆಂತರಿಕ ಮಾನಸಿಕ ಸ್ಥೈರ್ಯ. ಗೊತ್ತಾದ ಗುರಿಯನ್ನು ತಲ್ಪುವ ಸಾಧನೆಯಲ್ಲಿ ಎದುರಿಗೆ ಆತಂಕಗಳು ಎಷ್ಟೇಬಂದಾಗ್ಯೂ, ಅವೆಲ್ಲವನ್ನೂ, ಧೈರ್ಯದಿಂದ, ಬುದ್ಧಿವಂತಿಕೆಯಿಂದ, ಸಾಹಸದಿಂದ, ಸತತ ಪ್ರಯತ್ನದಿಂದ ಎದುರಿಸಿ ಕಾರ್ಯವನ್ನು ಸಾಧಿಸುವ ಆಂತರಿಕ ಗುಪ್ತ ಸ್ಥೈರ್ಯ. ಈ ಶಕ್ತಿಯು ಪ್ರತಿಯೊಬ್ಬರಲ್ಲಿಯೂ ಇದ್ದಾಗ್ಯೂ, ಇಂದ್ರಿಯ ನಿಗ್ರಹವಿಲ್ಲದೆ ದೇ, ಇಂದ್ರಿಯ ಭೋಗವಿಲಾಸಗಳ ಲೋಲುಪತೆಯಲ್ಲಿ ಮಗ್ನವಾಗಿರುವವರಲ್ಲಿ ಜಾಗೃತವಾಗಿರುವುದಿಲ್ಲ. ಉಚ್ಚವಾದ ಧ್ಯೇಯಗಳನ್ನಿಟ್ಟುಕೊಂಡು, ಇಂದ್ರಿಯಗಳು, ಮನಸ್ಸು, ಮತ್ತು ಸರ್ವ ಚಟುವಟಿಕೆಗಳನ್ನು ನಿಗ್ರಹಿಸಿ, ಧ್ಯೇಯವನ್ನು ಸಾಧಿಸುವ ಪ್ರಯತ್ನದಲ್ಲಿ ವಿನಿಯೋಗಿಸುವ ಈ ಆಂತರಿಕ ಶಕ್ತಿಗೆ ಸಾತ್ವಿಕ ಧೃತಿ ಎಂದು ಹೆಸರು. ಪ್ರಾಣ ಎಂದರೆ ಕರ್ಮೇಂದ್ರಿಯಗಳು. ಸಾಧಿಸಬೇಕಾದ ಉಚ್ಚ ಧ್ಯೇಯದಲ್ಲಿ ಮನಸ್ಸನ್ನು ಸ್ಥಿರವಾಗಿ ನಿಲ್ಲಿಸಿದರೆ ಮಾತ್ರ, ಅದನ್ನು ಇಂದ್ರಿಯ ವಿಷಯಗಳಿಂದ ಹಿಂದಕ್ಕೆ ಎಳೆದು ಕೊಳ್ಳಬಹುದು. ಆದುದರಿಂದ ಇಲ್ಲಿ ‘ಯೋಗೇನ’ ಎಂದು ಹೇಳಲಾಗಿದೆ. ಧ್ಯಾನದಲ್ಲಿ ನಿರತನಾಗುವುದರಿಂದ ಮನಸ್ಸನ್ನು ಇಂದ್ರಿಯ ವಿಷಯಗಳಿಂದ ಹಿಂದಕ್ಕೆಳೆದು, ಏಕಾಗ್ರಮಾಡಿ, ಮನಸ್ಥೈರ್ಯವನ್ನೂ ಶಾಂತಿಯನ್ನೂ ಗಳಿಸಬಹುದು.
ರಾಜಸ ಧೃತಿಯ ಲಕ್ಷಣ
ಯಯಾ ತು ಧರ್ಮಕಾಮಾರ್ಥಾನ್ಧøತ್ಯಾ ಧಾರಯತೇ„ರ್ಜುನ |
ಪ್ರಸಂಗೇನ ಫಲಾಕಾಂಕ್ಷೀ ಧೃತಿಃ ಸಾಪಾರ್ಥ ರಾಜಸೀ || 34 ||
ಅರ್ಥ :- ಪಾರ್ಥನೆ, ಫಲಾಪೇಕ್ಷೆಯಿಂದ ಧರ್ಮ, ಕಾಮ ಮತ್ತು ಅರ್ಥ ಸಾಧನೆಗಾಗಿ ಅವಶ್ಯಕವಾದ ಕರ್ಮಗಳನ್ನು ಮಾಡಲು ಇರುವ ಧೃತಿಗೆ ರಾಜಸಧೃತಿ ಎಂದು ಹೆಸರು.
ತನ್ನ ಧರ್ಮ (ಕರ್ತವ್ಯ), ಹಣ ಹಾಗೂ ಸುಖ (ಕಾಮ) ಇವುಗಳನ್ನು ಸಾಧಿಸಬೇಕೆಂಬ ಆಸೆಯಿಂದ, ಹಾಗೂ ಆ ಸುಖಗಳನ್ನು ಅನುಭವಿಸ ಬೇಕೆಂಬ ಇಚ್ಛೆಯಿಂದ ಕರ್ಮಮಾಡುವ ಸ್ಥೈರ್ಯಕ್ಕೆ ರಾಜಸ ಧೃತಿ ಎಂದು ಹೆಸರು. ಇದರಲ್ಲಿ ಧರ್ಮಾರ್ಥಕಾಮಗಳ ಜೊತೆಗೆ ಮೋಕ್ಷವನ್ನು ಹೇಳದೇ ಇರುವುದನ್ನು ಗಮನಿಸಬೇಕು. ರಾಜಸಧೃತಿ ಇರುವವನಿಗೆ ಸಂಸಾರಸುಖದ ಅಭಿಲಾಷೆಯಷ್ಟೇ ಇರುತ್ತದೆಯೇ ಹೊರತು ಮೋಕ್ಷದ ಆಸೆ ಇರುವುದಿಲ್ಲ. ಅವನಿಗೆ ಧರ್ಮವನ್ನು ಆಚರಿಸುವಾಗ ಸ್ವರ್ಗಭೋಗದ ಆಸೆ ಇರುತ್ತದೆ. ಅರ್ಥವನ್ನು ಗಳಿಸುವಾಗ ಅದರಿಂದ ಈ ಲೋಕದಲ್ಲಿ ಎಲ್ಲಾ ಸುಖವನ್ನೂ, ಅಧಿಕಾರವನ್ನೂ, ಪಡೆಯುವ ಆಸೆ ಇರುತ್ತದೆ. ಕಾಮದಿಂದ ಎಲ್ಲಾ ಇಂದ್ರಿಯ ಭೋಗಗಳನ್ನು ಗಳಿಸಿ ಅನುಭವಿಸಬೇಕೆಂಬ ಆಸೆ ಇರುತ್ತದೆ.
ತಾಮಸ ಧೃತಿಯ ಲಕ್ಷಣ
ಯಯಾ ಸ್ವಪ್ನಂ ಭಯಂ ಶೋಕಂ ವಿಷಾದಃ ಮದಮೇವ ಚ |
ನ ವಿಮುಂಚತಿ ದುಮೇ ರ್ಮೇ ಧಾಃ ಧೃತಿಃ ಸಾ ಪಾರ್ಥ ತಾಮಸೀ || 35 ||
ಅರ್ಥ :- ಪಾರ್ಥನೇ ಮೂರ್ಖನಾದವನು ನಿದ್ರೆ ಭಯ, ಶೋಕ, ಭಿನ್ನತೆ, ಮದ ಇವುಗಳನ್ನು ಬಿಡುವುದಿಲ್ಲ. ಅಂತಹ ಧೃತಿಗೆ ತಾಮಸಧೃತಿ ಎಂದು ಹೆಸರು.
ನಮ್ಮಲ್ಲಿ ಬಹುಜನರು ತಾಮಸಧೃತಿಯನ್ನು ಹೊಂದಿವರಾಗಿದ್ದೇವೆ. ನಾವು ನಮ್ಮ ಮನಸ್ಸಿನಲ್ಲಿ ನಾನಾರೀತಿಯ ಭವಿಷ್ಯದ ಸ್ವಪ್ನಗಳನ್ನು ಕಾಣುತ್ತಾ, ಕಲ್ಪನೆ, ಹೆದರಿಕೆ, ಉದ್ವೇಗ, ದುಃಖ, ಮೊಂಡುತನ, ಉತ್ಸಾಹಹೀನತೆ ಇವುಗಳಲ್ಲಿ ಮುಳುಗಿರುವುದರಿಂದ ನಮ್ಮ ಧೃತಿಯು ತಾಮಸಧೃತಿ ಎಂದೇ ಹೇಳಬೇಕು. ಇಲ್ಲಿ ಸ್ವಪ್ನ- ಎಂದರೆ ನಿದ್ರೆ ಎಂದು ಅರ್ಥ ಮಾಡುವುದಕ್ಕಿಂತ ನಾನಾತರಹದ ಭವಿಷ್ಯದ ಸ್ವಪ್ನಗಳನ್ನು ಕಾಣುವುದು, ಎಂದು ಅರ್ಥ ಮಾಡುವುದು ಹೆಚ್ಚು ಸಮಂಜಸವಾಗಿದೆ. ಇಲ್ಲಿ ಮನಸ್ಸು ನಿದ್ರಿಸುತ್ತಾ ಸ್ವಪ್ನವನ್ನು ಕಾಣುತ್ತಿರುತ್ತದೆ. ವಸ್ತುತಃ ಇಲ್ಲವೇ ಇರುವುದರನ್ನು ಇದ್ದಂತೆ ಕಾಣುವುದಕ್ಕೆ ಸ್ವಪ್ನ ಎಂದು ಹೆಸರು. ಭವಿಷ್ಯವು ಇನ್ನೂ ಹುಟ್ಟಲಿಲ್ಲ. ಅದರ ವಿಚಾರವಾಗಿ ಕಲ್ಪಿಸುವುದೆಲ್ಲವೂ ಸ್ವಪ್ನವೇ ಸರಿ. ತಾಮಸಿಕ ಧೃತಿಯುಳ್ಳವರು ಈ ತರಹದ ಸ್ವಪ್ನ ಲೋಕದಲ್ಲಿ ವಿರಹಿಸುತ್ತಾರೆ. ಇವರಲ್ಲಿಯ ಭಯವು ಸಹ ಕಾಲ್ಪನಿಕವಾದುದು. ಇವರು ಮುಂದೆ ಒದಗಬಹುದಾದ ಭಯವನ್ನು ಕಲ್ಪಿಸಿಕೊಂಡು ದುಃಖಕ್ಕೀಡಾಗುತ್ತಾರೆ. ಆದರೆ ವಸ್ತುತಃ ಆ ಭಯವು ಇರುವುದೂ ಇಲ್ಲ. ಬರುವುದೂ ಇಲ್ಲ. ಅನೇಕರು ತಾವು ಮಾರನೆಯ ದಿನ ಬೆಳಗಾಗುವುದರೊಳಗೆ ಸಾಯುತ್ತೇವೆಂದು ಸ್ವಪ್ನ ಕಂಡು ಹೆದರಿ, ಮಾರನೆಯ ದಿನ ಆರೋಗ್ಯವಾಗಿ ಎದ್ದು ತಮ್ಮ ಕೆಲಸದಲ್ಲಿ ನಿರತರಾಗಿರುವ ಅನುಭವವನ್ನು ಕಂಡಿದ್ದೇವೆ. ಕೇಳಿದ್ದೇವೆ. ಇವೆಲ್ಲವೂ ಕಾಲ್ಪನಿಕ ಭಯ. ಶೋಕ- ಎಂದರೆ ಹಿಂದೆ ನಡೆದು ಹೋದ ವಿಷಾದಕರ ಇಲ್ಲವೇ ದುಃಖದಾಯಕ ಘಟನೆಗಳಿಗಾಗಿ ದುಃಖಪಡುವುದು. ವಿಷಾದ ಎಂದರೆ ಭವಿಷ್ಯದಲ್ಲಿ ಒದಗಬಹುದೆಂದು ನಾವು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುವ ಭಯದಿಂದ ಈ ದಿನ ದುಃಖ ಪಡುವುದು ಮದಮ್- ಮೂರ್ಖನ ದೆ ಆ ಸೆಯಿಂದ ಕೂಡಿದ ಅಹಂಕಾರ ಇಲ್ಲವೇ ಸೊಕ್ಕಿನ ವರ್ತನೆಗಳು. ಇವೆಲ್ಲಕ್ಕೂ ತಾಮಸಿಕ ಧ್ವನಿ ಎಂದು ಹೆಸರು.
ಮೂರು ವಿಧದ ಸುಖಗಳು
ಸುಖಂ ತ್ವಿದಾನೀಂ ತ್ರಿವಿಧಂ ಶೃಣು ಮೇ ಭರತರ್ಷಭ |
ಅಭ್ಯಾಸಾದ್ರಮತೇ ಯತ್ರ ದುಃಖಾಂತಂ ಚ ನಿಗಚ್ಛತಿ || 36 ||
ಅರ್ಥ :- ಭರತ ಶ್ರೇಷ್ಠನೇ, ಸುಖವು ಸಹ ಮೂರು ವಿಧವಾಗಿದೆ. ಇದನ್ನು ವರ್ಣಿಸುತ್ತೇನೆ ಕೇಳು. ಜೀವನು ತನ್ನ ಪ್ರಯತ್ನಕ್ಕನುಗುಣವಾಗಿ ದುಃಖವನ್ನು ಪರಿಹರಿಸಿಕೊಂಡು ಮೂರು ತರಹದ ಸುಖಗಳನ್ನು ಅನುಭವಿಸುತ್ತಾ ನೆ ರೆ. ಇದುವರೆಗೆ ಕರ್ಮದ ಕಾರಣಗಳಿಂದ ಕಾರಣಗಳಾದ ಜ್ಞಾನ, ಕರ್ತಾ, ಕರ್ಮ ಇವುಗಳನ್ನೂ, ಕರ್ಮ ಪ್ರಚೋದಕಗಳಾದ ಬುದ್ಧಿ, ಧೃತಿಗಳನ್ನು ವಿವರಿಸಲಾಯಿತು. ಕರ್ಮ ಮಾಡುವಾಗ ಪ್ರತಿಯೊಬ್ಬ ಕರ್ತನೂ, ತನಗಿರುವ ಜ್ಞಾನದಿಂದ ಕರ್ಮ ಮಾಡುವ ಪ್ರೇರಣೆಯನ್ನು ಪಡೆದು, ತನ್ನ ಬುದ್ಧಿಯ ಹಿಡಿತ ಹಾಗೂ ಧೃತಿಯ ಸಾಮಥ್ರ್ಯಗಳಿಂದ ಕರ್ಮವನ್ನು ಮಾಡುತ್ತಾನೆಂಬುದನ್ನು ಇದುವರೆಗೆ ತಿಳಿಸಿದ್ದೇವೆ. ಈಗ, ಕರ್ಮ ಮಾಡುವ ಉದ್ದೇಶ ಏನು, ಎಂಬುದನ್ನು ವಿವರಿಸಲಾಗುತ್ತದೆ. ಪ್ರತಿಯೊಬ್ಬನೂ ಸುಖವನ್ನು ಪಡೆಯಬೇಕೆಂಬ ಅಭಿಲಾಷೆಯಿಂದ ಕರ್ಮ ಮಾಡುತ್ತಾನೆ.
ಕರ್ಮ ಮಾಡುವ ಗುರಿಯು ಸುಖಸಂಪಾದನೆ. ಇದು ಪ್ರತಿಯೊಬ್ಬರಲ್ಲಿಯೂ ಒಂದೇ ಸಸಮನಾಗಿದ್ದಾಗ್ಯೂ, ಪ್ರತಿಯೊಬ್ಬ ವ್ಯಕ್ತಿಯಲ್ಲಿರುವ ಕರ್ಮ ಕಾರಣಗಳು, ಧೃತಿ ಹಾಗೂ ಬುದ್ಧಿಗಳು ಭಿನ್ನಭಿನ್ನವಾಗಿರುವುದರಿಂದ, ಕರ್ಮಮಾಡುವ ವಿಧಾನಗಳು ಹಾಗೂ ವಿವರಗಳು ಸಹ ಪ್ರತಿಯೊಬ್ಬರಲ್ಲಿಯೂ ಭಿನ್ನಭಿನ್ನವಾಗಿವೆ. ಹೀಗೆ ಭಿನ್ನವಾಗಿರುವ ನಾನಾತರಹದ ಕರ್ಮಗಳ ಮೂಲಕ ಪ್ರಪಂಚದಲ್ಲಿರುವ ಪ್ರತಿಯೊಬ್ಬ ಜೀವನೂ ತನ್ನ ತನ್ನ ಪ್ರಕೃತಿ ಜನ್ಯವಾದ ಸಾತ್ವಿಕ, ರಾಜಸಿಕ, ಮತ್ತು ತಾಮಸಿಕ ಸುಖಗಳನ್ನು ಅನುಭವಿಸಲು ಪ್ರಯತ್ನಿಸುತ್ತಾನೆ. ಅದಕ್ಕಾಗಿ ಈ ಮೂರು ವಿಧವಾದ ಸುಖಗಳನ್ನು ಕೃಷ್ಣನು ಹೇಳಿದ್ದಾನೆ.
ಅಭ್ಯಾಸಾತ್- ತನ್ನ ಪ್ರಕೃತಿ ಸ್ವಭಾವ ಜನ್ಯವಾದ ಈ ಗುಣಗಳನ್ನು ತಿಳಿದುಕೊಂಡು ವ್ಯಕ್ತಿಯು ತನ್ನ ದುಃಖಕ್ಕೆ ಕಾರಣವಾದ ಲೋಪದೋಷಗಳನ್ನು ಕಂಡು ಹಿಡಿದು, ಬುದ್ಧಿವಂತಿಕೆ ಹಾಗೂ ಪ್ರಯತ್ನದಿಂದ ತನ್ನ ನಡತೆ ಹಾಗೂ ಆಚಾರಗಳನ್ನು ತಿದ್ದಿಕೊಂಡರೆ ಆ ಪ್ರಯತ್ನಕ್ಕೆ ತಕ್ಕಂತೆ ದುಃಖವನ್ನು ಸಂಪೂರ್ಣವಾಗಿ ಇಲ್ಲವೇ ಭಾಗಶಃ ನಿವಾರಿಸಿಕೊಳ್ಳಬಹುದು.
ಸಾತ್ವಿಕ ಸುಖದ ಲಕ್ಷಣ
ಯತ್ತದಗ್ರೇ ವಿಷಮಿವ ಪರಿಣಾಮೇ„ಮೃತೋಪಮಮ್ |
ತತ್ಸುಖಂ ಸಾತ್ತ್ವಿಕಂ ಪ್ರೋಕ್ತಮಾತ್ಮಬುದ್ಧಿಪ್ರಸಾದಜಮ್ || 37 ||
ಅರ್ಥ :- ಪ್ರಾರಂಭದಲ್ಲಿ ವಿಷದಂತೆ ದುಃಖಕರವಾಗಿ ಕಂಡರೂ, ಪರಿಣಾಮದಲ್ಲಿ ಅಮೃತದಂತೆ ಸಂತೋಷವನ್ನೂ ಆನಂದವನ್ನೂ ಕೊಡುವ, ಪರಿಶುದ್ಧವಾದ ಆತ್ಮ ಮತ್ತು ಬುದ್ಧಿಗಳಿಂದ ಹುಟ್ಟಿದ ಸುಖಕ್ಕೆ ಸಾತ್ವಿಕ ಸುಖ ಎಂದು ಹೆಸರು.
ನಾವು ಪ್ರಯತ್ನಮಾಡದೇ ತಾನಾಗಿಯೇ ಸುಖ ದೊರೆತರೆ ನಮಗೆ ಆ ಸುಖದ ಬೆಲೆ ತಿಳಿಯುವುದಿಲ್ಲ. ಶ್ರೀಮಂತನ ಮಗನಿಗೆ ಅಪಾರವಾದ ಆಸ್ತಿ ಸಿಕ್ಕಾಗ, ಅವನಿಗೆ ಹಣದ ಬೆಲೆ ತಿಳಿಯುವುದಿಲ್ಲ. ಆದರೇ ಆದೆ ತಾನೇ ಸ್ವತಃ ಸತತವಾಗಿ ಶ್ರಮಪಟ್ಟು, ನಾನಾತರಹದ ಕಷ್ಟಗಳನ್ನು ಎದುರಿಸಿ, ಆ ಶ್ರಮದ ಫಲವಾಗಿ ನಂತರ ಸುಖ ಸಿಕ್ಕರೆ ಆ ಸುಖವು ಹೆಚ್ಚು ಆನಂದದಾಯಕವಾಗುತ್ತದೆ. ಇದೇ ರೀತಿಯಾಗಿ ಸಾತ್ವಿಕ ಸುಖವು ಕೂಡ ಪ್ರಾರಂಭದಲ್ಲಿ ಸಾಧನೆ-ಇಂದ್ರಿಯ ನಿಗ್ರಹಗಳ ಮುಖಾಂತರ ಸಾಧಿಸಬೇಕಾಗಿರುವುದರಿಂದ, ಮೊದಲು ಕಷ್ಟಕರವಾಗಿ ಕಂಡಾಗ್ಯೂ ಆ ನಂತರ ಅಂದರೆ ಇಂದ್ರಿಯ ನಿಗ್ರಹವನ್ನು ಸಾಧಿಸಿದ ನಂತರ ಅದು ತುಂಬಾ ಆನಂದದಾಯಕವಾಗಿ ಕಾಣುತ್ತದೆ. ಇಂದ್ರಿಯ ನಿಗ್ರಹದ ಮುಖಾಂತರ ಗಳಿಸಿದ ಈ ಸುಖವು ಸಾಮಾನ್ಯವಾದುದೇನೂ ಅಲ್ಲ. ಆತ್ಮನಿಗ್ರಹ ಮತ್ತು ಬೌದ್ಧಿಕ ಶಿಸ್ತುಗಳ ಮುಖಾಂತರಗಳಿಸಿದ ಈ ಸುಖದಿಂದ ಮನಸ್ಸು ಬುದ್ಧಿ, ಆತ್ಮ ಇವುಗಳಲ್ಲಿಯ ಅಜ್ಞಾನವು ಪರಿಹಾರವಾಗುವುದರಿಂದ, ಆ ವ್ಯಕ್ತಿಯು ಬುದ್ಧಿ ಮತ್ತು ಆತ್ಮ ಇವುಗಳ ಪ್ರಸಾದವನ್ನೂ ಪಡೆಯುತ್ತಾನೆ- ಸಾಧನೆಗಳ ಪರಿಣಾಮವಾಗಿ ಅಂತಃಕರಣದಲ್ಲಿ ಉದಯಿಸುವ ಆನಂದಕ್ಕೆ ‘ಪ್ರಸಾದ’ ಎಂದು ಹೆಸರು. ಇದಕ್ಕೆ ಆತ್ಮಾನಂದ, ಸಾತ್ವಿಕ ಸುಖ ಎಂಬ ಹೆಸರೂ ಇದೆ. ಧಾರ್ಮಿಕ ಜೀವನದಿಂದ ಸಿದ್ಧಿಯನ್ನು ಪಡೆದ ಪ್ರತಿಯೊಬ್ಬರೂ ಈ ಸುಖವನ್ನು ಅನುಭವಿಸುತ್ತಾರೆ.

ರಾಜಸ ಸುಖದ ಲಕ್ಷಣ
ವಿಷಯೇಂದ್ರಿಯಸಂಯೋ ಗಾಗದ್‍ಯತ್ತದಗ್ರೇ„ಮೃತೋಪಮಮ್ |
ಪರಿಣಾಮೇ ವಿಷಮಿವ ತತ್ಸುಖಂ ರಾಜಸಂ ಸ್ಮøತಮ್ || 38 ||

ಅರ್ಥ :- ಇಂದ್ರಿಯಮವಿಷಯಗಳ ಸಂಯೋಗದಿಂದ ಲಭಿಸುವ ಸುಖವು ಪ್ರಾರಂಭದಲ್ಲಿ ಅಮೃತದಂತೆ ಆನಂದಮಯವಾಗಿ ಕಂಡಾಗ್ಯೂ, ಕಾಲಾಂತರದಲ್ಲಿ (ಪರಿಣಾಮದಲ್ಲಿ) ವಿಷದಂತೆ ದುಃಖದಾಯಕವಾಗುತ್ತದೆ. ಈ ಸುಖಕ್ಕೆ ರಾಜಸ ಸುಖ ಎಂದು ಹೆಸರು.
ಇಂದ್ರಿಯ ವಿಷಯಗಳಿಂದ ಲಭಿಸುವ ಸುಖವು ಆ ಕಾಲದಲ್ಲಿ ಪರಮ ಪ್ರಿಯವಾಗಿಯೂ, ಪರಮ ಶ್ರೇಷ್ಠವಾಗಿಯೂ ಕಾಣುತ್ತದೆ. ಆ ಹೊತ್ತಿನಲ್ಲಿ, ಆ ಸುಖದ ಎದುರಿಗೆ ಬೇರೆ ಯಾವ ಸುಖವೂ ಬೇಕೆನಿಸುವುದಿಲ್ಲ. ಆದರೆ ಇದು ಕೇವಲ ಕ್ಷಣಿಕವಾದುದು. ಸ್ವಲ್ಪಕಾಲದಲ್ಲಿಯೇ ವ್ಯಕ್ತಿಯು ಈ ಸುಖಾನುಭವದಿಂದ ಸುಸ್ತಾಗಿ, ಆ ಸುಖವನ್ನು ಅನುಭವಿಸುವ ಶಕ್ತಿಯ್ನು ಕಳೆದುಕೊಳ್ಳುತ್ತಾನೆ. ಈಗ ಆ ಸುಖ ವಸ್ತುಗಳನ್ನು ನೋಡಲು ಸಹ ಬೇಡವೆನಿಸುತ್ತದೆ ಈಗ ಬಲಾತ್ಕಾರದಿಂದ ಈ ಸುಖವನ್ನು ಅನುಭವಿಸಿದೆ ಅವನಿಗೆ ಈ ಸುಖವಾಗದೆ ದುಃಖವೇ ಆಗುತ್ತದೆ. ಮೇಲಾಗಿ ಈ ಸುಖವನ್ನು ಅನುಭವಿಸಿದ ಹಾಗೆ ಇಂದ್ರಿಯಗಳ ಶಕ್ತಿಯು ಹ್ರಾಸವಾಗುತ್ತಾ ಹೋಗುತ್ತದೆ. ಈ ಕಾಲದಲ್ಲಿ ಪುನಃ ಇಂದ್ರಿಯಭೋಗದಲ್ಲಿ ನಿರತವಾಗುವುದರಿಂದ, ಇಂದ್ರಿಯ ಶಕ್ತಿ ಇನ್ನೂ ಕಡಿಮೆಯಾಗುತ್ತದೆ. ಹೀಗಾಗಿ ಶಾರೀರಿಕ ಹಾಗೂ ಮಾನಸಿಕ ದುಃಖವುಂಟಾಗುತ್ತದೆ ಆದುದರಿಂದ ಈ ಸುಖವು ಪರಿಣಾಮದಲ್ಲಿ ದುಃಖಕರ ಎನ್ನಲಾಗಿದೆ.
ತಾಮಸ ಸುಖದ ಲಕ್ಷಣ
ಯದಗ್ರೇ ಚಾನುಬಂಧೇ ಚ ಸುಖಂ ಮೋಹನಮಾತ್ಮನಃ |
ನಿದ್ರಾಲಸ್ಯಪ್ರಮಾದೋತ್ಥಂ ತತ್ತಾಮಸಮುದಾಹೃತಮ್ || 39 ||
ಅರ್ಥ :- ಪ್ರಾರಂಭದಲ್ಲಿ ಮತ್ತು ಪರಿಣಾಮದಲ್ಲಿ ಸಹ ಆತ್ಮನಲ್ಲಿ ಮೋಹವನ್ನೂ, ಅಜ್ಞಾನವನ್ನೂ ಉಂಟುಮಾಡುವ ಮತ್ತು ನಿದ್ರೆ, ಆಲಸ್ಯ ಹಾಗೂ ಪ್ರಮಾದ (ಎಚ್ಚರಗೇಡಿತನ) ಗಳಿಂದ ಉತ್ಪನ್ನವಾಗುವ ಸುಖವು ತಾಮಸಸುಖ ಎನಿಸಿಕೊಳ್ಳುತ್ತದೆ.
ತಾಮಸ ಸುಖವು, ಜೀವಿಯನ್ನು ಮೋಹಗೊಳಿಸಿ, ಅವನಲ್ಲಿ ಆತ್ಮಜ್ಞಾನವನ್ನು ಪಡೆಯಬೇಕೆನ್ನುವ, ತನ್ನ ಸ್ವಾರ್ಥ ತ್ಯಾಗದಿಂದ ಬೇರೆಯವರ ಹಿತವನ್ನು ಸಾಧಿಸಬೇಕೆನ್ನುವ ಉಚ್ಚ ಧ್ಯೇಯಗಳನ್ನು ಮತ್ತು ಇತರೆ ಸದ್ಗುಣಗಳನ್ನು ಮಂಕುಗೊಳಿಸುತ್ತದೆ ಇಂತಹ ಸುಖವನ್ನೇ (ತಾಮಸ) ದೀರ್ಘಕಾಲದವರೆಗೆ ಅನುಭವಿಸುತ್ತಾ ಹೋದರೆ, ಅದು ಉಚ್ಛ ಧ್ಯೇಯಗಳನ್ನು ಸಂಪೂರ್ಣ ಮುಚ್ಚಿ ಹಾಕಿ ಸುಳ್ಳನ್ನು ಸತ್ಯವನ್ನಾಗಿಯೂ ಅಧರ್ಮವನ್ನು ಧರ್ಮವನ್ನಾಗಿಯೂ ತಿಳಿಯುವಂತೆ ತಪ್ಪು ತೀರ್ಮಾನವನ್ನು ಕೈಗೊಳ್ಳುತ್ತದೆ. ಇವನಿಗೆ ಇಂತಹ ಸುಖವು ನಿದ್ರೆ, ಸೋಮಾರಿತನ ಕಾಲ ¼ Àಹರಣ ಮಾಡುವಿಕೆ ಮತ್ತು ಎಚ್ಚರಗೇಡಿತನ ಇವುಗಳಿಂದ ಲಭಿಸುತ್ತದೆ- ಇದು ಕೇವಲ ಶಾರೀರಿಕಮಟ್ಟದ ಸುಖ-
ನಿದ್ರೆ- ಪ್ರತಿನಿತ್ಯವೂ ಅನುಭವಿಸುವ ನಿದ್ರೆಯನ್ನು ಇಲ್ಲಿ ಹೇಳಲಿಲ್ಲ. ಆತ್ಮಜ್ಞಾನವನ್ನು ಪಡೆಯುವ ಇಷ್ಟವಿಲ್ಲದಿರುವ ಸ್ಥಿತಿಗೆ ವೇದಾಂತ ದೃಷ್ಟ್ಯಾ ನಿದ್ರಾ ಎಂದು ಹೆಸರು. ಇಂತಹ ವ್ಯಕ್ತಿಯು ಕೇವಲ ಇಂದ್ರಿಯ ಸುಖಗಳಲ್ಲಿಯೇ (ಶಾರೀರಿಕ) ಮಗ್ನನಾಗಿರುತ್ತಾನೆ. ಆಲಸ್ಯ- ಸಂಸಾರದಲ್ಲಿ ಬರುವ ವಿವಿಧ ಸಮಸ್ಯೆಗಳನ್ನು ಎದುರಿಸುವ ಸಾಮಥ್ರ್ಯದ ಅಭಾವಕ್ಕೆ ಆಲಸ್ಯ ಎಂದು ಹೆಸರು. ಈ ದೌರ್ಬಲ್ಯದಿಂದಾಗಿ ಬುದ್ಧಿಯು ಉದ್ವೇಗವನ್ನೂ ಹೊಂದಿ ಸಮಸ್ಯೆಗಳನ್ನೂ, ಸರಿಯಾಗಿ ಎದುರಿಸಲಾರದೆ ತತ್ತರಿಸುತ್ತದೆ. ಪ್ರಮಾದ- ಜೀವನದ ವಿವಿಧ ಸಮಸ್ಯೆಗಳನ್ನು ಎದುರಿಸಬೇಕಾದ ಸಂದರ್ಭವೊದಗಿದಾಗ ಬುದ್ಧಿಯು ಸಾಮಾನ್ಯವಾಗಿ ಸರಿಯಾದ ಮಾರ್ಗವನ್ನು ಸೂಚಿಸುತ್ತದೆ. ಆದರೆ ಕೆಳಮನಸ್ಸು ನಾನಾ ಕಾರಣಗಳನ್ನು ಮುಂದುಮಾಡಿ, ಆ ಸನ್ಮಾರ್ಗವನ್ನು ಒಪ್ಪದೆ, ಅದಕ್ಕೆ ಲಕ್ಷವನ್ನು ಕೊಡದೆ, ಎಚ್ಚರಗೇಡಿತನದಿಂದ ವರ್ತಿಸುತ್ತದೆ. ಕ್ರಮೇಣ ಇದೇ ಅಭ್ಯಾಸವಾಗಿ ಆ ವ್ಯಕ್ತಿಯು ಸನ್ಮಾರ್ಗಗಳಿಂದ ದೂರ ದೂರ ಸರಿಯುತ್ತಾ ಪಶುವೃತ್ತಿಗಳಿಯುತ್ತಾನೆ. ಇವು ತಾಮಸ ಸುಖಗಳು.

ನ ತದಸ್ತಿ ಪೃಥಿವ್ಯಾಂ ವಾ ದಿವಿ ದೇವೇಷು ವಾ ಪುನಃ |
ಸತ್ತ್ವಂ ಪ್ರಕೃತಿಜೈರ್ಮುಕ್ತಂ ಯದೇಭಿಃ ಸ್ಯಾತ್ತ್ರಿಭಿರ್ಗುಣೈಃ || 40 ||
ಅರ್ಥ :- ಪ್ರಕೃತಿ ಜನ್ಯವಾದ ಈ ಮೂರು ಗುಣಗಳಿಲ್ಲದ ಜೀವನು ಭೂಮಿಯಲ್ಲಾಗಲೀ, ದೇವಲೋಕದಲ್ಲಾಗಲೀ, ದೇವತೆಗಳಲ್ಲಾಗಲೀ, ಎಲ್ಲಿಯೂ ಸಿಗುವುದಿಲ್ಲ.
ಪ್ರತಿಯೊಬ್ಬ ಮನುಷ್ಯನೂ ಪ್ರಕೃತಿಜನ್ಯವಾಗಿ, ತನಗೆ ಸ್ವಭಾವವಾಗಿ ಬಂದ ಗುಣಗಳಿಗನುಸಾರವಾಗಿ ವರ್ತಿಸುತ್ತಲೇ ಇರುತ್ತಾನೆ. ಈ ಗುಣಗಳಲ್ಲಿದವನು ಭೂಲೋಕ, ಸ್ವರ್ಗಲೋಕಗಳಲ್ಲಾಗಲೀ, ದೇವತೆಗಳಲ್ಲಾಗಲೀ ಯಾರೂ ಸಿಗುವುದಿಲ್ಲ ಎಂದು ಹೇಳಲಾಗಿದೆ, ಅಂದರೆ ಪ್ರತಿಯೊಬ್ಬರಲ್ಲಿ ಈ ಗುಣಗಳು ತರತಮ ಭೇದದಿಂದ ಇದ್ದೇ ಇವೆ. ಪ್ರಪಂಚದಲ್ಲಿಯ ಎಲ್ಲಾ ಜೀವರ ಗುಣಗಳ ಒಟ್ಟು ಸೃಷ್ಟಿಗೆ ‘ಮಾಯೆ; ಎಂದು ಹೆಸರು. ಪ್ರತಿಯೊಬ್ಬ ಜೀವಿಯೂ ಈ ಮಾಯೆಯಿಂದ ಬಂಧಿತನಾಗಿದ್ದಾನೆ. ಆದ್ದರಿಂದ ಪ್ರತಿಯೊಬ್ಬನಲ್ಲಿಯೂ ಸತ್ವ ರಜ ತಮೋಗುಣಗಳಿರುವುದು ಸ್ವಾಭಾವಿಕ. ಇದುವರೆಗೆ ತಿಳಿಸಿದ ವಿಧಾನಗಳಿಂದ, ವ್ಯಕ್ತಿಯು ತನ್ನಲ್ಲಿರುವ ರಜೋಗುಣ, ತಮೋಗುಣಗಳನ್ನು ಗೆದ್ದು ಅವುಗಳ ಪ್ರಾಬಲ್ಯವನ್ನು ಕಡಿಮೆಮಾಡಿ, ಸತ್ವಗುಣವನ್ನು ಜಾಗೃತಗೊಳಿಸಿಕೊಳ್ಳಬೇಕು. ಈ ವರ್ಣನೆಯನ್ನು ಇನ್ನೊಬ್ಬರ ದೌರ್ಬಲ್ಯವನ್ನು ಇಲ್ಲವೇ ದೋಷವನ್ನು ಹುಡುಕಿ ತೆಗೆದು ಟೀಕೆ ಮಾಡಲು ಉಪಯೋಗಿಸದೇ ದೆ, ತನ್ನ ದೋಷಗಳನ್ನ ತಿದ್ದಿಕೊಳ್ಳಲು ಮಾತ್ರ ಉಪಯೋಗಿಸಬೇಕೆಂದು ಇನ್ನೊಮ್ಮೆ ಒತ್ತಿ ಹೇಳುವುದು ಅವಶ್ಯಕ.
ಈ ಗುಣಗಳ ಪ್ರಾಬಲ್ಯಕ್ಕನುಗುಣವಾಗಿ ಇಡೀ ಜನತೆಯನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಮುಂದಿನ ಶ್ಲೋಕದಲ್ಲಿ ಬರುವ ವರ್ಣನೆಯನ್ನು ಈ ಕೆಳಗಿನ ಕೋಷ್ಟಕದಿಂದ ತಿಳಿದುಕೊಳ್ಳಬಹುದು.
ಕೋಷ್ಟಕ – 2 ನಾಲ್ಕು ವರ್ಣಗಳು
ಗುಣಗಳು I
ಬ್ರಾಹ್ಮಣ II
ಕ್ಷತ್ರಿಯ III
ವೈಶ್ಯ Iಗಿ
ಶೂದ್ರ
ಸತ್ವ ಸೇಕಡ.80 ಸೇ.15 ಸೇ. 5 ಸೇ.5
ರಜಸ್ಸು ಸೇಕಡ.15 ಸೇ.80 ಸೇ. 80 ಸೇ.5
ತಮಸ್ಸು ಸೇಕಡ.5 ಸೇ.5 ಸೇ. 15 ಸೇ.90
ಈ ನಾಲ್ಕು ರೀತಿಯ ವಿಭಜನೆಯು ಕೇವಲ ಭಾರತ ದೇಶಕ್ಕೆ ಮಾತ್ರ ಹೇಳಿದ್ದಲ್ಲ. ಇದನ್ನು ಇಡೀ ಪ್ರಪಂಚಕ್ಕೇ ಅನ್ವಯಿಸಬಹುದು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಎಂಬ ಹೆಸರಿನ ಅಪ್ರಚಾರವೂ, ತಪ್ಪು ಕಲ್ಪನೆಗಳೂ, ಮತ್ತು ಅವಕ್ಕೆ ಅವಕಾಶವೂ ಉಂಟಾಗಿರುವುದರಿಂದ, ಈ ಹೆಸರುಗಳು ಸಹ ಅನೇಕರಿಗೆ ಬೇಡವೆನ್ನಿಸುತ್ತವೆ. ಇಲ್ಲವೆ ಜಿಗುಪ್ಸೆಯನ್ನುಂಟು ಮಾಡುತ್ತವೆ. ಆದುದರಿಂದ ಈಗಿನ ಕಾಲಕ್ಕನುಸಾರವಾಗಿ ಈ ಹೆಸರುಗಳನ್ನು ಮರೆತು, ಮೂಲ ತತ್ವವನ್ನು ಆಧರಿಸಿ ಈ ನಾಲ್ಕು ಗುಂಪುಗಳಿಗೆ ಬೇರೆ ರೀತಿಯ ನಾಮಕರಣ ಮಾಡಿದರೆ ಈ ವಿಭಜನೆಯ ಸಾಧುತ್ವವೂ, ವ್ಯಾಪಕತ್ವವೂ ಅರಿವಾಗುತ್ತದೆ I ವಿಜ್ಞಾನಿಗಳು ಹಾಗೂ ಯೋಜನಾ ತಯಾರಕರು. II ರಾಜಕಾರಣಿಗಳು, III ಉದ್ಯೋಗಸ್ಥರು Iಗಿ ಕೂಲಿಕಾರರು. ಈ ವಿಭಜನೆಯಲ್ಲಿ ಪ್ರತಿಯೊಂದು ಗುಂಪಿನವರೂ ತಮ್ಮ ಮೇಲಿನ ಗುಂಪಿನವರನ್ನು ಗೌರವಿಸುತ್ತಾರೆ.

ಬ್ರಾಹ್ಮಣಕ್ಷತ್ರಿಯವಿಶಾಂ ಶೂದ್ರಾಣಾಂ ಚ ಪರಂತಪ |
ಕರ್ಮಾಣಿ ಪ್ರವಿಭಕ್ತಾನಿ ಸ್ವಭಾವಪ್ರಭವೈರ್ಗುಣೈಃ || 41 ||
ಅರ್ಥ :- ಪರಂತಪನೇ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಇವರ ಕರ್ಮಗಳು ಅವರವರ ಸ್ವಾಭಾವಿಕ ಪ್ರಕೃತಿಗೆ ಅನುಗುಣವಾಗಿ ವಿಂಗಡಿಸಲ್ಪಟ್ಟಿವೆ.
ಮೇಲಿನ ಕೋಷ್ಟಕದಲ್ಲಿ ತಿಳಿಸಿದ ಗುಣಗಳಿಗೆ ಅನುಸಾರವಾಗಿ ಬ್ರಾಹ್ಮಾಣಾದಿ ವರ್ಣದವರ ಗುಣಗಳು ಅವರವರಿಗೆ ಸ್ವಭಾವವಾಗಿ ಬಂದಿರುತ್ತವೆ. ಈ ಆಧಾರದ ಮೇಲೆ ಸಮಾಜದಲ್ಲಿ ಎಲ್ಲಾ ವರ್ಣದವರ ಕರ್ಮಗಳು, ನಿರ್ದೇಶಿಸಲ್ಪಟ್ಟಿವೆ. ಪ್ರತಿಯೊಂದು ವರ್ಣದವರಲ್ಲಿಯೂ ಬೇರೆಬೇರೆ ಗುಣಗಳಿರುವುದರಿಂದ ಅವರ ಕರ್ಮಗಳೂ ಸಹ ಸ್ವಭಾವವಾಗಿ ಭಿನ್ನವಾಗಿರಲೇ ಬೇಕು. ಬ್ರಾಹ್ಮಣನ ಕರ್ಮಗಳಿಗಿಂತ ಕ್ಷತ್ರಿಯನ ಕರ್ಮಗಳು ಭಿನ್ನವಾಗಿವೆ. ವೈಶ್ಯ ಮತ್ತು ಶೂದ್ರರ ಕರ್ಮಗಳು ಬ್ರಾಹ್ಮಣ, ಕ್ಷತ್ರಿಯ ಕರ್ಮಗಳಿಗಿಂತ ಭಿನ್ನವಾಗಿವೆ. ತಮೋಗುಣವು ಕ್ರಮೇಣ ರಜೋಗುಣವಾಗಿ ಮಾರ್ಪಾಟಾಗುವಂತೆಯೂ ನಂತರ ಅದು ಸತ್ವಗುಣವಾಗುವಂತೆಯೂ, ಅನುಕೂಲವಾಗುವ ಹಾಗೆ ಎಲ್ಲಾ ವರ್ಣದವರ ಕರ್ಮಗಳು ಶಾಸ್ತ್ರದಲ್ಲಿ ವಿಧಿಸಲ್ಪಟ್ಟಿವೆ. ಮನುಷ್ಯನ ಕರ್ಮ ಮಾಡುವ ಸಾಮಥ್ರ್ಯ, ಅಹಂಕಾರ, ಜ್ಞಾನ, ಬುದ್ಧಿ ಶಕ್ತಿ, ಧೃತಿ, ಮನಸ್ಸಿನ ಶಾಂತಿ, ಇವುಗಳ ಮೇಲೆ ಅವನು ಯಾವ ವರ್ಣಕ್ಕೆ ಸೇರಿದವನು ಎಂಬುದನ್ನು ನಿರ್ಧರಿಸಿಕೊಳ್ಳಬೇಕು. ಎಲ್ಲಾ ವರ್ಣದವರಲ್ಲಿ ಯಾವ ಯಾವ ಗುಣಗಳು ಪ್ರಧಾನವಾಗಿರುತ್ತವೆಂದು ತಿಳಿಸಿರುವಲ್ಲಿ, ಆಯಾಯಾ ಗುಣಗಳು ಪ್ರಬಲವಾಗಿದ್ದು, ಇತರೆ ಎರಡು ಗುಣಗಳು ಕಡಿಮೆ ಪ್ರಮಾಣದಲ್ಲಿರುತ್ತವೆಂದು ತಿಳಿಯಬೇಕು. ಇದನ್ನು ತಿಳಿದುಕೊಳ್ಳಲು ಕೋಷ್ಟಕದಲ್ಲಿ ಗುಣಗಳ ಸೇಕಡಾವಾರು ಪ್ರಮಾಣಗಳನ್ನು ಊಹಿಸಿ ಕೊಡಲಾಗಿದೆ. ಈ ಎಲ್ಲಾ ಗುಂಪಿನ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಈ ಪ್ರಮಾಣವು ಭಿನ್ನಭಿನ್ನವಾಗಿರಬಹುದು. ಒಂದೇ ವ್ಯಕ್ತಿಯಲ್ಲಿ ಸಹ, ಕಾಲಕಾಲಕ್ಕೆ ಅವನ ಮಾನಸಿಕ ವಿಚಾರ ಆಚಾರಗಳಿಗೆ ಅನುಗುಣವಾಗಿ ಸಹ ಈ ಪ್ರಮಾಣದಲ್ಲಿ ಹೆಚ್ಚು ಕಡಿಮೆಯಾಗಬಹುದು. ಇಲ್ಲಿ ತಿಳಿಸಿದ ಪ್ರಮಾಣವು ಕರಾರುವಾಕ್ಕು ಪ್ರಮಾಣವಲ್ಲ. ಸ್ಥೂಲ ಕಲ್ಪನೆಯನ್ನು ಮೂಡಿಸುವುದಕ್ಕಾಗಿ ಅನುಮಾನದಿಂದ ಕೊಡಲಾದ ಅಂಕಗಳು. ಈ ಪ್ರಮಾಣವು ಹಿಂದೆ ತಿಳಿಸಿರುವಂತೆ ಹೆಚ್ಚು ಕಡಿಮೆಯಾಗುತ್ತಿರಬಹುದು. ಗುಣಕರ್ಮಗಳ ಆಧಾರದ ಮೇಲೆ ವಿಭಾಗಿಸಲ್ಪಟ್ಟ ಬ್ರಾಹ್ಮಣ, ಕ್ಷತ್ರ, ವೈಶ್ಯ, ಶೂದ್ರ, ಎಂಬ ವರ್ಣಭೇದಗಳು, ಈಚೆಗೆ ಆರ್ಷೇಯ ರೀತಿಯ ಹಕ್ಕಾಗಿ ಪರಿಣಮಿಸಿದ್ದರಿಂದ ಈ ಹೆಸರಿನಲ್ಲಿ ಅರ್ಥವಿಲ್ಲದಂತಾಗಿದೆ. ಆದಾಗ್ಯೂ ಈ ವಿಭಜನೆಗೆ ಮೂಲಭೂವಾದ, ಆಧಾರವಾದ, ತಾತ್ವಿಕ ಹಿನ್ನೆಲೆಯನ್ನು ಮಾತ್ರ ಇವತ್ತಿಗೂ ಎಲ್ಲರೂ ಒಪ್ಪುವಂತಹದ್ದಾಗಿದೆ.
ನಾಲ್ಕು ವರ್ಣದವರ ಸಾಮಾಜಿಕ ಕರ್ಮಗಳಾವುವು
ಶಮೋ ದಮಸ್ತಪಃ ಶೌಚಂ ಕ್ಞಾಂತಿರಾರ್ಜವಮೇವ ಚ |
ಜ್ಞಾನಂ ವಿಜ್ಞಾನಮಾಸ್ತಿಕ್ಯಂ ಬ್ರಹ್ಮಕರ್ಮ ಸ್ವಭಾವಜಮ್ || 42 ||
ಅರ್ಥ :- ಶಮ, ದಮ, ತಪಸ್ಸು, ಶುಚಿತ್ವ, ಕ್ಷಮಿಸುವ ಸ್ವಭಾವ, ಸರಳತನ, ಜ್ಞಾನ, ವಿಜ್ಞಾನ, ದೇವರಲ್ಲಿ ನಂಬಿಕೆ ಇವು ಬ್ರಾಹ್ಮಣನ ಸ್ವಾಭಾವಿಕ ಕರ್ಮಗಳು.
ಬ್ರಾಹ್ಮಣನ ಸ್ವಭಾವಕ್ಕನುಗುಣವಾಗಿ ವ್ಯವಹಾರದಲ್ಲಿ, ಅವರ ಸ್ವಾಭಾವಿಕ ಶಾರೀರಿಕ ಹಾಗೂ ಮಾನಸಿಕ ಕರ್ಮಗಳು ಯಾವ್ಯಾವುವು ಎಂಬುದನ್ನು ಇಲ್ಲಿ ವರ್ಣಿಸಲಾಗಿದೆ. ಶಮ- ಶಾಂತವಾದ ಮತ್ತು ಪ್ರಸನ್ನವಾದ ಮನಸ್ಸು, ಇದನ್ನು ಸಾಧಿಸಲು ಮನಸ್ಸನ್ನು ಮನಸ್ಸು ಇಂದ್ರಿಯ ವಿಷಯೋಪಭೋಗಗಳ ಕಡೆಗೆ ಓಡದಂತೆ ನಿಗ್ರಹಿಸಬೇಕು. ಇದನ್ನು ಕೇವಲ ಬಾಹ್ಯ ಇಂದ್ರಿಯಗಳಿಂದ ನಿಗ್ರಹಿಸಿದರೆ ಸಾಲದು, ಶಮ ಎಂಬ ಶಬ್ದವು ಶಾರೀರಿಕ ನಿಗ್ರಹಕ್ಕಿಂತ, ಆಂತರಿಕ, ಮಾನಸಿಕ ನಿಗ್ರಹವನ್ನೇ ಸೂಚಿಸುತ್ತದೆ. ಕ್ರರ್ಮೇಂದ್ರಿಯಗಳು ವಿಷಯ ಸುಖದಲ್ಲಿ ಮಗ್ನವಾಗದಂತೆ ಬಲಾತ್ಕಾರವಾಗಿ ತಡೆದು ನಿಗ್ರಹಿಸುವುದಕ್ಕೆ ಶಮ ಎಂದು ಹೆಸರು. ತಪಸ್ಸ್- ಮನಸ್ಸನ್ನು ಇಂದ್ರಿಯ ವಿಷಯಗಳಿಂದ ಹಿಂದಕ್ಕೆಳೆದು ಕೊಂಡದ್ದರ ಪರಿಣಾಮವಾಗಿ ಸಂಗ್ರಹವಾದ ಶಕ್ತಿಯನ್ನು ಸರಿಯಾದ ಲಾಭಕರ ಮಾರ್ಗದಲ್ಲಿ ಪರಿಣಾಮವಾಗಿ ಸಂಗ್ರಹವಾದ ಶಕ್ತಿಯನ್ನು, ಮಾರ್ಗದಲ್ಲಿ ವಿನಿಯೋಗಿಸಬೇಕು. ಇದಕ್ಕಾಗಿ ಮನಸ್ಸನ್ನು ಪರಮಾತ್ಮನ ಧ್ಯಾನದಲ್ಲಿ ಏಕಾಗ್ರಮಾಡ ಬೇಕೆಂದು ವಿಧಿಸಲಾಗಿದೆ. ಇದಕ್ಕೆ ‘ತಪಸ್ಸು’ ಎಂದು ಹೆಸರು. ಶೌಚಮ್- ಸಾಧಕನು ತನ್ನ ಶರೀರ, ಮನಸ್ಸು, ತಾನು ವಾಸವಾಗಿರುವ ಸ್ಥಳ ಹಾಗೂ ಸುತ್ತಲಿನ ವಾತಾವರಣ, ಮತ್ತು ತಾನು ಉಪಯೋಗಿಸುವ ಎಲ್ಲಾ ವಸ್ತುಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು. ಮನಸ್ಸಿನಲ್ಲಿ ಕೆಟ್ಟ ವಿಷಯಗಳನ್ನು ಚಿಂತಿಸಬಾರದು. ಕೆಟ್ಟ ಮಾತುಗಳನ್ನಾಡಬಾರದು. ಕ್ಷಾಂತಿ- ತಾನು ಶಾಂತನಾಗಿರುವುದರ ಜೊತೆಗೆ, ತನಗೆ ಯಾರಾದರೂ ಅಹಿತವನ್ನು ಇಲ್ಲವೇ ಕೆಡುಕನ್ನು ಮಾಡಿದರೆ, ಅವರ ಮೇಲೆ ಕೋಪಗೊಳ್ಳದೆ, ಅವರನ್ನು ಕ್ಷಮಿಸುವ ಸ್ವಭಾವವಿರಬೇಕು. ಈ ಗುಣವನ್ನು ಸಾಧಿಸಿಕೊಂಡರೆ ಇವನಿಗೆ ಯಾರ ಮೇಲೂ ದ್ವೇಷವೇ ಉಂಟಾಗುವುದಿಲ್ಲ ಆರ್ಜವಮ್- ಸರಳತನ ಎಲ್ಲಾ ವ್ಯವಹಾರಗಳಲ್ಲಿಯೂ, ಯಾವ ಕಪಟವೂ, ದುರುದ್ದೇಶವೂ ಇವನಿಗಿಲ್ಲದಿರುವುದರಿಂದಲೂ, ಪ್ರತಿಯೊಂದರಲ್ಲಿಯೂ ಸರಳತನ ವಿರುವುದರಿಂದಲೂ, ಇವನಿಗೆ ಯಾವುದರ, ಯಾರ ಹೆದರಿಕೆಯೂ ಇಲ್ಲ. ಆದರೆ ಅಧರ್ಮಕ್ಕೆ, ಅನೀತಿಗೆ ಮಾತ್ರ ಹೆದರುತ್ತಾನೆ. ಜ್ಞಾನ- ವ್ಯವಹಾರ, ಆಧ್ಯಾತ್ಮಿಕ, ಮತ್ತು ಉಪನಿಷತ್ತು ಮೊದಲಾದ ಶಾಸ್ತ್ರಗಳ ಜ್ಞಾನವಿರುವುದು. ವಿಜ್ಞಾನ- ಶಾಸ್ತ್ರಾಭ್ಯಾಸದಿಂದ ದೊರೆತ ಬೌದ್ಧಿಕ ಜ್ಞಾನದ ಜೊತೆಗೆ ಆ ಜ್ಞಾನದ ಅನುಭವ ಹಾಗೂ ಅದರ ಪ್ರತ್ಯಕ್ಷ ಆಚರಣೆಗಳಿಗೆ ವಿಜ್ಞಾನ ಎಂದು ಹೆಸರು. ಇದನ್ನು ಪ್ರತ್ಯಕ್ಷ ಅನುಭವದಿಂದ ಪಡೆಯಬೇಕೇ ಹೊರತು, ಪುಸ್ತಕ ಅಭ್ಯಾಸದಿಂದಲ್ಲ- ಆಸ್ತಿಕ್ಯಮ್- ಈ ಎಲ್ಲಾ ಜ್ಞಾನವನ್ನು ತಿಳಿದರೆ ಸಾಲದು. ಪ್ರಪಂಚದ ಸೃಷ್ಟಿ, ಸದ್ಗತಿ, ಸ್ಥಿತಿ ಲಯಗಳಿಗೆ, ಪರಮಾತ್ಮನು ಕಾರಣವೆಂದು ಅವನ ಇಚ್ಛೆಯ ವಿನಹ ಯಾವುದೂ ನಡೆಯಲಾರದೆಂದೂ, ಇರುವ ಸ್ಥಿರವಾದ ನಂಬಿಕೆಗೆ ಆಸ್ತಿಕತೆ ಎಂದು ಹೆಸರು. ಈ ಎಲ್ಲಾ ಗುಣಗಳೂ ಬ್ರಾಹ್ಮಣನಲ್ಲಿವೆ. ಬ್ರಾಹ್ಮಣನೆಂದುಕೊಳ್ಳುವವನು, ಅಥವಾ ಬ್ರಾಹ್ಮಣನಾಗಲು ಇಷ್ಟಪಡುವವನು ಈ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು.

ಶೌರ್ಯಂತೇಜೋ ಧೃತಿರ್ದಾಕ್ವ್ಯಂ ಯುದ್ಧೇ ಚಾಪ್ಯಪಲಾಯನಮ್ |
ದಾನಮೀಶ್ಚರಭಾವಶ್ಚ ಕ್ಷಾತ್ರಂ ಕರ್ಮ ಸ್ವಭಾವಜಮ್ || 43 ||
ಅರ್ಥ :- ಶೂರತನ, ತೇಜಸ್ಸು, ಧೈರ್ಯ, ದಕ್ಷತೆ, ಯುದ್ಧಕ್ಕೆ ಹೆದರಿ ಓಡಿ ಹೋಗದಿರುವುದು. ದಾನ ಮಾಡುವ ಉದಾರತನ, ತಾನು ಪ್ರಜೆಗಳ ಒಡೆಯನು ಎಂಬ ಭಾವ ಇವು ಕ್ಷತ್ರಿಯ ಗುಣಗಳು.
ಕ್ಷತ್ರಿಯನಲ್ಲಿ ರಜೋಗುಣವು ಪ್ರಧಾನವಾಗಿದೆ. ಕ್ಷತ್ರಿಯನೆಂದರೆ ಕ್ಷತ್ರಿಯ ತಾಯಿ, ತಂದೆಗಳ ಮಗನೆಂದು ಇಲ್ಲಿ ಹೇಳಲಿಲ್ಲ. ಕೆಲವು ವಿಶಿಷ್ಟ ಲಕ್ಷಣಗಳುಳ್ಳವನನ್ನು ಮಾತ್ರ ಕ್ಷತ್ರಿಯನೆಂದು ಶ್ರೀಕೃಷ್ಣನು ಹೇಳಿದ್ದಾನೆ. (ಇದೇ ರೀತಿ ಬ್ರಾಹ್ಮಣ ಹಾಗೂ ಇತರೆ ವರ್ಣದವರನ್ನು ತಿಳಿಯಬೇಕು.) ಶೌರ್ಯ ಮತ್ತು ತೇಜ- ಶೂರತನದಿಂದ ಯುದ್ಧ ಮಾಡುವುದು ಮತ್ತು ಸಮಸ್ಯೆಗಳನ್ನು ಧೈರ್ಯದಿಂದ ದಿಟ್ಟತನದಿಂದ ಎದುರಿಸುವುದು. ಧೃತಿ- ಹಿಡಿದ ಕಾರ್ಯವನ್ನು ಸಾಧಿಸಲು ಅವಶ್ಯಕವಾದುದು ಮಾನಸಿಕ ಸ್ಥೈರ್ಯ, ಜಿಗುಟುತನ, ಮತ್ತು ಬಂದ ವಿಘ್ನಗಳನ್ನು ಎದುರಿಸುವ ಧೈರ್ಯ-ದಕ್ಷಂ- ತನ್ನ ಕರ್ಮದ ಬಗ್ಗೆ, ಅಂದರೆ ಯಾವ ಯಾವ ಸಂದರ್ಭಗಳಲ್ಲಿ ಯಾವತರಹದ ವಿಶೇಷ ಲಕ್ಷ್ಯವನ್ನು ಪೂರೈಸಬೇಕು ಎಂಬ ಬಗ್ಗೆ ಸದಾ ಜಾಗೃತನಾಗಿರುವುದು. ಹಾಗೂ ಕರ್ಮವನ್ನು ಯಶಸ್ವಿಯಾಗಿಸಲು, ಅವಶ್ಯಕವಾದ ಇತರೆ ರೀತಿಯ ಎಚ್ಚರಿಕೆಯನ್ನು ವಹಿಸಿ, ಕಾರ್ಯನಿತರವಾಗಿರುವುದು, ಅಪಲಾಯನಮ್ – ಯುದ್ಧದಲ್ಲಿ ಇಲ್ಲವೆ ತಾನು ಹಿಡಿದ ಕಾರ್ಯದಲ್ಲಿ ಯಶಸ್ಸು ಲಭಿಸಲಿಲ್ಲವೆಂದಾಗಲೀ, ಇಲ್ಲವೇ ವಿಘ್ನಗಳು ಬಲವಾಗಿವೆ ಎಂದಾಗಲೀ, ಹೆದರಿ, ಅಳುಕಿ, ಕಾರ್ಯವಿಮುಖನಾಗಿ ಹಿಂದಕ್ಕೆ ಓಡಿಹೋಗದಿರುವುದು. ಅಂತೆಯೇ ಹಿಡಿದ ಕಾರ್ಯವನ್ನು ಗುರಿಮುಟ್ಟಿಸದೇ ಬಿಡದಿರುವುದು. ಕ್ಷತ್ರಿಯನು ಹೆದರಿ ಓಡಿ ಹೋಗುವ ಹೇಡಿತನವನ್ನು ತೋರಿಸುವುದಿಲ್ಲ. ದಾನಮ್- ಕ್ಷತ್ರಿಯ ಕ್ಷತ್ರಿಯನು ಅನೇಕ ಆಶ್ರಿತರ ಸಹಾಯವನ್ನು ಪಡೆಯುವುದರಿಂದ ತನ್ನಲ್ಲಿರುವ ಸಂಪತ್ತಿನಲ್ಲಿ ಸ್ವಲ್ಪ ಭಾಗವನ್ನು ಅವರಿಗೂ ಹಂಚಿ ಅವರೂ ಸಹ ಸುಖವಾಗಿರುವಂತೆ ಮಾಡಬೇಕು. ಹೀಗೆ ಅವರ ಅನೇಕ ಸುಖವನ್ನು ಸಾಧಿಸಲು ಉದಾರ ಹೃದಯದವನಾಗಿದ್ದರೆ ಮಾತ್ರ ಆಶ್ರಿತರ ಪ್ರೇಮವನ್ನು ಸಂಪಾದಿಸಬಹುದು. ಈಶ್ವರಭಾವ- ಜನರ ಮುಖಂಡನಿಗೆ ತನ್ನಲ್ಲಿ ಆತ್ಮವಿಶ್ವಾಸವಿರಬೇಕು. ತಾನು ಎಲ್ಲರ ಮುಖಂಡ, ಅವರಿಗೆ ಮಾರ್ಗದರ್ಶಕ, ಎಂಬ ವಿಶ್ವಾಸವಿಲ್ಲದಿದ್ದರೆ ಅವನು ಮುಖಂಡನಾಗಲಾರನು. ಅವನು ತನ್ನ ಧೈರ್ಯ, ಸ್ಥೈರ್ಯ, ದಕ್ಷತೆ, ದಾನ, ಮೊದಲಾದ ಸದ್ಗುಣಗಳಿಂದ ತನ್ನ ಸುತ್ತಮುತ್ತಲಿರುವ ಜನರಲ್ಲಿ ಸ್ಫೂರ್ತಿಯನ್ನು ತುಂಬಿ, ಅವರನ್ನು ಕಾರ್ಯಪ್ರವೃತ್ತಿರನ್ನಾಗಿ ಮಾಡುವುದರ ಜೊತೆಗೆ ಅವರನ್ನು ಅವರು ತನ್ನನ್ನು ಗೌರವಿಸುವಂತೆ ಸಹ ಆಕರ್ಷಿಸಿಕೊಳ್ಳಬೇಕು. ಇದಕ್ಕೆ ಈಶ್ವರ ಭಾವ ಎಂದು ಹೆಸರು. ಕ್ಷತ್ರಿಯನು, ರಾಜಕೀಯ ಮುಖಂಡನು ಈ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು.

ಕೃಷಿಗೌರಕ್ವ್ಯವಾಣಿಜ್ಯಂ ವೈಶ್ಯಕರ್ಮ ಸ್ವಭಾವಜಮ್ |
ಪರಿಚರ್ಯಾತ್ಮಕಂ ಕರ್ಮ ಶೂದ್ರಸ್ಯಾಪಿ ಸ್ವಭಾವಜಮ್ || 44 ||
ಅರ್ಥ :- ಭೂಮಿಯ ಕೃಷಿ ಮಾಡುವುದು, ಗೋಪಾಲನೆ ಮಾಡುವುದು, ವ್ಯಾಪಾರ, ಇವು ವೈಶ್ಯನ ಸ್ವಾಭಾವಿಕ ಕರ್ಮಗಳು. ಮೇಲಿನ ಮೂರು ವರ್ಗದವರ ಸೇವೆ ಮಾಡುವುದು ಶೂದ್ರನ ಸ್ವಾಭಾವಿಕ ಕರ್ಮಗಳು.
ಪ್ರತಿಯೊಬ್ಬ ವ್ಯಕ್ತಿಯ ಮನೋಬುದ್ಧಿಗಳಲ್ಲಿ ವಿಶಿಷ್ಟ ಗುಣಗಳಿರುವುದರಿಂದ, ಆ ಗುಣಗಳಿಗೆ ಅನುಸಾರವಾಗಿ ಅವನ ಸ್ವಭಾವವುಂಟಾಗುತ್ತದೆ. ಅಂದರೆ ಅವನು ತನ್ನ ಸ್ವಭಾವಕ್ಕನುಗುಣವಾದ ಕರ್ಮಗಳನ್ನು ಮಾಡಲು ಅನುಕೂಲವಾಗುವಂತಹ ಶರೀರ, ಮನಸ್ಸುಗಳನ್ನು ಪಡೆದಿದ್ದಾನೆ. ನೆಲದ ಮೇಲೆ ಸುಗಮವಾಗಿ ಚಲಿಸಬಲ್ಲ ಮೋಟಾರು ನೀರಿನಲ್ಲಿ ಚಲಿಸಲಾರದು. ನೀರಿನಲ್ಲಿ ಸುಖವಾಗಿ ಚಲಿಸುವ ಹಡಗು ಆಕಾಶದಲ್ಲಿ ಚಲಿಸಲಾರದು. ಅಂದರೆ ಅವುಗಳಲ್ಲಿ ಆಯಾಯಾ ವಿಶಿಷ್ಟ ಕಾರ್ಯಸಾಧನೆಗೆ ಅನುಕೂಲವಾಗುವಂತಹ ಸಾಧನ ಸಾಮಗ್ರಿಗಳಿರುವುದರಿಂದ, ಅವು ಆ ವಿಶಿಷ್ಟ ಕಾರ್ಯವನ್ನು ಮಾತ್ರ ಮಾಡಬಲ್ಲವೇ ಹೊರತು, ತಮಗೆ ಶಕ್ತಿಯಿಲ್ಲದ ಬೇರೆ ಕಾರ್ಯಗಳನ್ನು ಮಾಡಲಾರವು. ಏಕೆಂದರೆ ಆ ಬೇರೆ ಕಾರ್ಯಕ್ಕೆ ಬೇರೆ ತರಹದ ಸಾಧನ ಸಾಮಗ್ರಿಗಳೇ ಬೇಕು. ಇದರಂತೆಯೇ ಮೇಲಿನ ನಾಲ್ಕು ವರ್ಣಗಳ ಕರ್ಮಗಳನ್ನು ತಿಳಿದುಕೊಳ್ಳಬೇಕು. ರಜೋಗುಣದವನು ವ್ಯವಹಾರದ ಕರ್ಮಗಳನ್ನು ಮಾಡುವುದರಲ್ಲಿ ದಕ್ಷನಾಗಿದ್ದಾನೆಯೇ ಹೊರತು, ಅವನು ಸತ್ವಗುಣದವನಂತೆ ಜ್ಞಾನವಿಜ್ಞಾನಗನ್ನು ಸಂಪಾದಿಸುವುದಕ್ಕಾಗಲೀ, ಧ್ಯಾನಮಾಡುವುದಕ್ಕಾಗಲೀ ಅರ್ಹನಾಗುವುದಿಲ್ಲ. ಅಂತೆಯೇ ಕ್ಷತ್ರಿಯನು ದಕ್ಷತೆಯಿಂದ ಮಾಡಬಲ್ಲ ಕೆಲಸವನ್ನು ವೈಶ್ಯ ಅಥವಾ ಶೂದ್ರನು ಅಷ್ಟೇ ದಕ್ಷತೆಯಿಂದ ಮಾಡಲಾರನು. ಸಮಾಜದಲ್ಲಿ ಪ್ರತಿಯೊಂದು ವರ್ಣದವನೂ, ತನತನಗೆ ನಿರ್ದಿಷ್ಟವಾದ ಕರ್ಮವನ್ನು ಮಾಡುವುದರಿಂದ, ತನ್ನ ಗುಣಗಳನ್ನು ಈ ಮೇಲಿನ ಗುಣಕ್ಕೆ ಪರಿವರ್ತಿಸಿಕೊಂಡು, ಕೊನೆಯಲ್ಲಿ ಸತ್ವಗುಣ ಪ್ರಧಾನವಾಗುವಂತೆ, ಮಾರ್ಪಡಿಸಿಕೊಳ್ಳಬಹುದಾದ ಸಾಕರ್ಯವಿದೆ. ಈ ವರ್ಣಧರ್ಮ ವಿಭಾಗದಲ್ಲಿ, ಇಲ್ಲಿ ಬ್ರಾಹ್ಮಣಮ, ಕ್ಷತ್ರಿಯ, ಶೂದ್ರ ಎಂದರೆ ಆಯಾಯಾ ಜಾತಿ ತಂದೆ ತಾಯಿಗಳ ಹೊಟ್ಟೆಯಲ್ಲಿ ಹುಟ್ಟಿದವ ಎಂದು ಅರ್ಥಮಾಡಿದರೆ ಗೊಂದಲಕ್ಕೆ ಕಾರಣವಾಗುತ್ತದೆ. ಗೀತೆಗೆ ಇದು ಮಾನ್ಯವಲ್ಲ. ಆಯಾಯ ವಿಶಿಷ್ಟ ಗುಣಗಳನ್ನು ಹೊಂದಿದವರು ಎಂದೇ ಅರ್ಥಮಾಡಬೇಕು.
ಮೇಲೆ ವರ್ಣಿಸಿದ ನಾಲ್ಕು ವರ್ಣಗಳ ಜನರಲ್ಲಿ ಪ್ರತಿಯೊಬ್ಬರಲ್ಲಿರುವ ಮಾನಸಿಕ ಶಕ್ತಿ, ಸ್ವಭಾವಗಳಿಗೆ ಪೋಷಕವಾಗುವಂತಹ ಹಾಗೂ ಸುಲಭವಾದಂತಹ ಕರ್ಮಗಳನ್ನು ವಿಧಿಸಲಾಗಿದೆ. ಒಂದು ತರಹದ ಕೆಲಸ ಮಾಡುವ ಯೋಗ್ಯತೆ ಇರುವವನನ್ನು ಆ ಕೆಲಸದಿಂದ ತಪ್ಪಿಸಿ ಅವನಿಂದ ಆಗದ ಬೇರೆ ಕೆಲಸಮಾಡಲು ಹಚ್ಚಿದರೆ, ಅವನು ಕೆಲಸವನ್ನು ಹಾಳು ಮಾಡುವುದಷ್ಟೇ ಅಲ್ಲ, ತನ್ನ ಅವನತಿಯನ್ನು ಗಳಿಸಿಕೊಳ್ಳುತ್ತಾನೆ. ಉದಾಹರಣೆ ಒಬ್ಬ ಕ್ಷತ್ರಿಯನನ್ನು ಇನ್ನೊಬ್ಬನ ಸೇವೆ ಮಾಡಬೇಕೆಂದು ಹೇಳಿ, ಯಜಮಾನನಿಗೆ ಗಾಳಿ ಹಾಕುತ್ತಿರಬೇಕೆಂದು ನಿಯಮಿಸಿದರೆ ಅವನು ಸಂದರ್ಭದ ಒತ್ತಾಯದಿಂದ ಒಪ್ಪಿ ಕೆಲಸವನ್ನು ಮಾಡಬಹುದು. ಆದರೆ ಸ್ವಲ್ಪೇ ಕಾಲದಲ್ಲಿ ಅವನು ಸುತ್ತಲಿನ ಜನರ ಮೇಲೆ ತನ್ನ ಪ್ರಭಾವವನ್ನು ಬೀರಿ ಬೇರೊಬ್ಬನು ತನ್ನ ಕೈ ಕೆಳಗಿನವನು ತನಗೆ ಗಾಳಿ ಹಾಕುತ್ತಾ ಇರಬೇಕೆಂದು ಅಪ್ಪಣೆ ಮಾಡುತ್ತಾನೆ. ಇದೇ ರೀತಿ, ವೈಶ್ಯನನ್ನು ದೇವಸ್ಥಾನದ ಪೂಜಾರಿಯ ಕೆಲಸಕ್ಕೆ ನೇಮಿಸಿದರೆ, ಸ್ವಲ್ಪ ಕಾಲದಲ್ಲಿಯೇ ಪವಿತ್ರವಾದ ದೇವಸ್ಥಾನವು ವ್ಯಾಪಾರ ಅಂಗಡಿಯಾಗಿ ಮಾರ್ಪಡುತ್ತದೆ. ಅದೇ ವೈಶ್ಯನು ಸರ್ಕಾರದ ಮುಖ್ಯ ಅಧಿಕಾರಿಯಾಗಿ ನೇಮಿಸಲ್ಪಟ್ಟರೆ, ಅವನು ತನ್ನ ಸ್ವಭಾವಕ್ಕನುಗುಣವಾಗಿ ಸರ್ಕಾರವೇ ವ್ಯಾಪಾರದ ವ್ಯವಹಾರವನ್ನು ನಡೆಸುವಂತೆ ಮಾಡುತ್ತಾನೆ.
ಹೀಗೆ ಪ್ರತಿಯೊಬ್ಬನೂ ತನ್ನಲ್ಲಿರುವ ಗುಣ, ಹಾಗೂ ವಾಸನೆಗಳಿಗೆ ಅನುಗುಣವಾಗಿ, ತಾನು ಯಾವ ವರ್ಣಕ್ಕೆ ಸೇರಿದವನೆಂದು ತಿಳಿದುಕೊಂಡು, ಅದಕ್ಕೆ ಅನುಗುಣವಾದ ಕರ್ಮವನ್ನು ಮಾಡುವುದರಿಂದ, ಅವನು ಕ್ರಮೇಣ ಮೇಲಿನ ಗುಣಗಳನ್ನು ಮೈಗೂಡಿಸಿಕೊಳ್ಳುತ್ತಾ ಮುಂದೆ ಆತ್ಮವಿಕಾಸವನ್ನು ಗಳಿಸಿಕೊಳ್ಳಬಹುದಾಗಿದೆ. ಇದಕ್ಕೆ ಅನುಕೂಲವಾದ ಮಾರ್ಗವನ್ನು ತೋರಿಸುವುದಕ್ಕಾಗಿಯೇ ವರ್ಣ ವಿಭಜನೆಯಾಗಿದೆ. ತನ್ನ ಸ್ವಭಾವಕ್ಕೆ ಅನುಗುಣವಾದ ಕರ್ಮಗಳನ್ನು ಮಾಡುವುದರಿಂದ, ಸಂಚಿತ ವಾಸನೆಗಳೆಲ್ಲವನ್ನೂ ಬರಿದುಮಾಡಿಕೊಂಡು, ಮುಂದೆ ಏಕಾಗ್ರತೆಯಿಂದ ಧ್ಯಾನದಲ್ಲಿ ನಿರತನಾಗಬಹುದು. ಇದೇ ಮಾತನ್ನು ಮುಂದಿನ ಶ್ಲೋಕದಲ್ಲಿ ಹೇಳಲಾಗಿದೆ.

ಸ್ವೇ ಸ್ವೇ ಕರ್ಮಣ್ಯಭಿರತಃ ಸಂಸಿದ್ಧಿಂ ಲಭತೇ ನರಃ |
ಸ್ವಕರ್ಮನಿರತಃ ಸಿದ್ಧಿಂ ಯಥಾ ವಿಂದತಿ ತತ್ಚ್ರುಣು || 45 ||
ಅರ್ಥ :- ಪ್ರತಿಯೊಬ್ಬನೂ ತನ್ನತನ್ನ ಸ್ವಾಭಾವಿಕ ಕರ್ಮಗಳಲ್ಲಿ ನಿರತನಾಗುವುದರಿಂದ ಹೀಗೆ ಹೇಗೆ ಸಿದ್ಧಿಯನ್ನು ಪಡೆಯುತ್ತಾನೆಂಬುದನ್ನು ಹೇಳುತ್ತೇನೆ ಕೇಳು.
ಇಲ್ಲಿ ಕರ್ಮವನ್ನು ಮಾಡುವುದೆಂದರೆ, ಪ್ರತಿಯೊಬ್ಬನೂ ಈ ಕರ್ಮವನ್ನು ತಾನು ಅವಶ್ಯವಾಗಿ ಮಾಡಲೇಬೇಕು, ಅವು ತನ್ನ ಕರ್ತವ್ಯ ಎಂದು ತಿಳಿದುಕೊಂಡು, ಅಹಂಕಾರವನ್ನು ತ್ಯಜಿಸಿ, ಫಲಾಪೇಕ್ಷೆಯಿಲ್ಲದೆ, ಅದು ಪರಮಾತ್ಮನ ಸೇವೆ ಎಂಬ ಭಾವದಿಂದ ಕರ್ಮಮಾಡಿದರೆ, ಇಂತಹ ಕರ್ಮಗಳಿಂದ ಸಂಚಿತ ಯ ವಾಸನೆಗಳೆಲ್ಲವೂ ಬರಿದಾಗುತ್ತವೆ. ಅಹಂಕಾರ ಮತ್ತು ಫಲಾಪೇಕ್ಷೆಯನ್ನು ತ್ಯಜಿಸುವುದರಿಂದ ಹೊಸವಾಸನೆಗಳುಂಟಾಗುವುದಿಲ್ಲ. ಆದ್ದರಿಂದ ಅವನು ಜಾಗ್ರತೆ ಸಿದ್ಧಿಯನ್ನು ಪಡೆಯುತ್ತಾನೆ.

ಯತಃ ಪ್ರವೃತ್ತಿಭೂತಾನಾಂ ಯೇನ ಸರ್ವಮಿದಂ ತತಮ್ |
ಸ್ವಕರ್ಮಣಾ ತಮಭ್ಯಚ್ರ್ಯ ಸಿದ್ಧಿಂ ವಿಂದತಿ ಮಾನವಃ || 46 ||
ಅರ್ಥ :- ಯಾವುದರಿಂದ ಈ ಎಲ್ಲಾ ಭೂತಗಳ ಸೃಷ್ಟಿಯಾಯಿತೋ, ಮತ್ತು ಯಾವುದು ಈ ಎಲ್ಲಾ ಭೂತಗಳಲ್ಲಿಯೂ ವ್ಯಾಪಸಿಕೊಂಡಿದೆಯೋ, ಆ ಪರವಸ್ತುವನ್ನು ತನ್ನ ಸ್ವಭಾವಜನ್ಯವಾದ ಕರ್ಮ ಮಾಡುವುದರ ಮೂಲಕ ಅರ್ಚನೆ ಮಾಡಿದರೆ ಮನುಷ್ಯನು ಸಿದ್ಧಿಯನ್ನು ಪಡೆಯುತ್ತಾನೆ.
ಪ್ರತಿಯೊಬ್ಬ ಮನುಷ್ಯನೂ ತನ್ನ ಸ್ವಭಾವಕ್ಕನುಗುಣವಾದ ಕರ್ಮಗಳನ್ನು ಮಾಡುತ್ತಿರುವಾಗ ತನ್ನ ದೇಹದಲ್ಲಿರುವ, ತನ್ನ ಎಲ್ಲಾ ಚೇತನಗಳಿಗೂ ಕಾರಣವಾದ ಆತ್ಮನನ್ನು ಸದಾಕಾಲವೂ ಧ್ಯಾನಿಸುತ್ತಾ ಇರಬೇಕು. ಸ್ವಭಾವ ಜನ್ಯವಾದ ಕರ್ಮವನ್ನು ಮಾಡುವುದು, ಆತ್ಮನ ಸೇವೆ ಮಾಡಿದಂತೆ ಎಂದು ಭಾವಿಸಿ, ಕರ್ಮ ಮಾಡಬೇಕು. ಸಂಗೀತಗಾರನು ಗಾಯನ ಮಾಡುವಾಗ ಸದಾಕಾಲವೂ ಹಿಮ್ಮೇಳದಲ್ಲಿ ನುಡಿಸಲ್ಪಡುತ್ತಿರುವ ಶ್ರುತಿಯನ್ನು ಲಕ್ಷ್ಯದಲ್ಲಿಟ್ಟುಕೊಂಡು ಹಾಡುವಂತೆ! ನರ್ತಕಿಯು ಸದಾಕಾಲವೂ ತಾಳವನ್ನು ಗಮನದಲ್ಲಿಟ್ಟುಕೊಂಡು ವಿವಿಧ ಭಂಗಿಗಳಲ್ಲಿ ಕುಣಿಯುವಂತೆ, ಜೀವನು ಸದಾಕಾಲವೂ ಆತ್ಮನನ್ನು ಧ್ಯಾನಿಸುತ್ತಾ ಕರ್ಮಗಳನ್ನು ಮಾಡಿ, ಅವುಗಳನ್ನು ಪರಮಾತ್ಮನಿಗೆ ಅರ್ಪಿಸಿದರೆ, ಈ ಕರ್ಮಗಳಿಂದ ಹೊಸ ವಾಸನೆಗಳುಂಟಾಗದೆ, ಸಂಚಿತ ವಾಸನೆಗಳು ಬರಿದಾಗಿ ಅವನು ಸಿದ್ಧಿಯನ್ನು ಪಡೆಯುತ್ತಾನೆ. ಹೀಗೆ ಮಾಡಿದರೆ ಇವನು ಮಾಡುವ ಕರ್ಮವು ಪರಮಾತ್ಮನ ಅರ್ಚನೆಯಾಗುತ್ತದೆ. ಸೂಕ್ಷ್ಮವಾದ ಈ ರೀತಿಯ ಪರಿವರ್ತನೆಯಿಂದ ಕರ್ಮದ ರೂಪವೇ ಬದಲಾಗುತ್ತದೆ.

ತ್ರೇ ಶ್ರೇ ಯಾನ್ಸ್ವಧರ್ಮೋ ವಿಗುಣಃ ಪರಧರ್ಮಾತ್ಸ್ವನುಷ್ಠಿತಾತ್ |
ಸ್ವಭಾವನಿಯತಂ ಕರ್ಮ ಕುರ್ವನ್ನಾಪ್ನೋತಿ ಕಿಲ್ಬಿಷಮ್ || 47 ||
ಅರ್ಥ :- ತನ್ನ ಧರ್ಮವು ಒಳ್ಳೆಯದಲ್ಲವೆಂದು ಕಂಡಾಗ್ಯೂ, ಬೇರೆಯವರ ಧರ್ಮವನ್ನು ತಾನು ಇನ್ನೂ ಚೆನ್ನಾಗಿ ಆಚರಿಸಬಲ್ಲನೆಂದು ಕಂಡಾಗ್ಯೂ, ತನ್ನ ಧರ್ಮವೇ ಹೆಚ್ಚು ಶ್ರೇಯಸ್ಕರವು. ಏಕೆಂದರೆ ಸ್ವಭಾವಜನ್ಯವಾದ ಕರ್ಮವನ್ನು ಆಚರಿಸುವುದರಿಂದ ಪಾಪವು ಲಭಿವುಸುದಿಲ್ಲ.
ಪ್ರತಿಯೊಂದು ಗುಂಪಿಗೆ (ವರ್ಣ) ಸೇರಿದ ಮನುಷ್ಯನ ಕರ್ಮಗಳು ಅವನವನ ಸ್ವಭಾವಿಕ ಗುಣಗಳಿಗನುಸಾರವಾಗಿ ಶಾಸ್ತ್ರದಿಂದ ವಿಧಿಸಲ್ಪಟ್ಟಿವೆ. ಸ್ವಾಭಾವಿಕ ಗುಣಗಳು, ಆಯಾಯಾ ವ್ಯಕ್ತಿಯಲ್ಲಿ ಸಂಚಯವಾದ ವಾಸನೆಗಳಿಗನುಸಾರವಾಗಿರುತ್ತವೆ. ಪ್ರಬಲವಾಗಿರುವ ಈ ವಾಸನೆಗಳನ್ನು ಭೋಗಿಸಿಯೇ ಅವುಗಳನ್ನು ಬರಿದು ಮಾಡಿಕೊಳ್ಳಬೇಕು. ಸ್ವಾಭಾವಿಕ ಕರ್ಮಗಳನ್ನು ಮಾಡುವುದೇ ಇದಕ್ಕೆ ದಾರಿ. ಈ ಕರ್ಮಗಳನ್ನು ಕರ್ತವ್ಯ ದೃಷ್ಟಿಯಿಂದ ಮಾಡುವುದರಿಂದ ಫಲಾಶೆಯನ್ನು ತ್ಯಜಿಸಿ ಕರ್ಮ ಮಾಡಲು ಸಾಧ್ಯವಾಗುತ್ತದೆ. ಫಲಾಸೆಯಿಲ್ಲದಿರುವುದರಿಂದ ಈ ಕರ್ಮಗಳಿಂದ ಪುನಃ ಹೊಸ ವಾಸನೆಗಳು ಹುಟ್ಟುವುದಿಲ್ಲ. ಹೀಗೆ ಒಂದೇ ಕಾರ್ಯದಿಂದ ಏಕಕಾಲಕ್ಕೆ ಎರಡು ಫಲಗಳನ್ನು ಗಳಿಸಿಕೊಂಡಂತಾಗುತ್ತದೆ ಇದಕ್ಕೆ ವಿರುದ್ಧವಾಗಿ, ತನ್ನ ಸ್ವಭಾವಕ್ಕೆ ವಿರುದ್ಧವಾದ ಕರ್ಮಗಳನ್ನು ಮಾಡುವುದಾದರೆ, ಆ ವ್ಯಕ್ತಿಯು ಸಂಚಿತವಾದ ವಾಸನೆಯ ಹೊರೆಯನ್ನು ಬರಿದು ಮಾಡಿಕೊಳ್ಳುವ ಆಸ್ಪದವೇ ಇರದೆ, ವಾಸೆನೆಗಳ ಹೊರೆಯ ಭಾರವಾಗುತ್ತಾ ಹೆಚ್ಚುತ್ತಾ ಹೋಗುತ್ತದೆ. ಮನಸ್ಸಿನ ಮೇಲೆ ಇದರ ಪರಿಣಾಮವು ಸತತವಾಗಿರುತ್ತದೆ. ತಾನು ಆರಿಸಿಕೊಂಡ ಬೇರೆ ವರ್ಣದ ಕರ್ಮವು, ಕೇವಲ ಫಲಾಶೆಯಿಂದ ಮಾತ್ರ ಆರಿಸಿಕೊಂಡದ್ದಾದ್ದರಿಂದ, ಈ ಕರ್ಮವನ್ನು ಮಾಡಿದ ಹಾಗೆಲ್ಲಾ ಅದರಿಂದ ಹೊಸ ವಾಸನೆಗಳುಂಟಾಗುತ್ತವೆ. ಮೊದಲೇ ಸೂಚಿತವಾದ ವಾಸನೆಗಳ ಹೊರೆಯ ಜೊತೆಗೆ ಈ ಹೊಸ ವಾಸನೆಗಳೂ ಸೇರಿ, ಆ ಹೊರೆಯು ಇನ್ನೂ ಹೆಚ್ಚಾಗುತ್ತದೆ. ಅಂದರೆ ಇಂತಹ ಕರ್ಮಗಳಿಂದ ಸಂಚಿತ ವಾಸನೆಗಳನ್ನು ಬರಿದು ಮಾಡಿಕೊಳ್ಳುವುದರ ಬದಲು, ವಾಸನೆಗಳ ಹೊರೆಯನ್ನು ಹೆಚ್ಚಿಸಿಕೊಂಡಂತಾಗುತ್ತದೆ. ಆದುದರಿಂದ ಇಂತಹ ಕರ್ಮಗಳಿಂದ ಬಂಧನವು ಇನ್ನೂ ಹೆಚ್ಚಾಗುತ್ತದೆ. ಇದಕ್ಕಾಗಿಯೇ, ಪರಧರ್ಮಕ್ಕಿಂತ ಸ್ವಧರ್ಮವೇ ಶ್ರೇಷ್ಠವಾದದ್ದೆಂದು ಹೇಳಲಾಗಿದೆ. ಇದೇ ಭಾವವನ್ನು ಹಿಂದೆ ಮೂರನೆಯ ಅಧ್ಯಾಯದ 35ನೇ ಶ್ಲೋಕದಲ್ಲಿ ವಿವರಿಸಲಾಗಿದೆ. ಈ ವಿಷಯವು ಸಾಧಕನಿಗೆ ಮುಖ್ಯವು ಅವಶ್ಯಕವೂ ಆದುದರಿಂದ ಇಲ್ಲಿ ಪುನಃ ಹೇಳಲಾಗಿದೆ.
ಮೇಲೆ ವಿವರಿಸಿದ ತರ್ಕವನ್ನು ಒಪ್ಪದವರು ಈ ಕೆಳಗಿನ ಅಂಶಗಳನ್ನು ಮನನ ಮಾಡಿದರೆ ಈ ಬೋಧದ ಸತ್ಯಾಂಶವು ಸ್ಪಷ್ಟವಾಗುತ್ತದೆ. (1) ಸರ್ಪದ ಹಲ್ಲಿನಲ್ಲಿರುವ ವಿಷವು ಸರ್ಪವನ್ನು ಕೊಲ್ಲಲಾರದು. (2) ಮದವನ್ನುಂಟು ಮಾಡುವ ಹುಳಿ ಹೆಂಡದಲ್ಲಿ ಜೀವಿಸುವ ಜೀವಾಣುಗಳು ಎಂದಿಗೂ ಮದೋನ್ಮತ್ತವಾಗುವುದಿಲ್ಲ. (3) ಸೊಳ್ಳೆಯ ಹೊಟ್ಟೆಯಲ್ಲಿ ಜೀವಿಸಿರುವ ಮಲೇರಿಯಾ ರೋಗದ ಜೀವಾಣುಗಳು ಸೊಳ್ಳೆಯ ಮುಖಾಂತರ ಮನುಷ್ಯನ ರಕ್ತವನ್ನು ಸೇರಿ ಅವನಿಗೆ ಮಲೇರಿಯಾ ಜ್ವರವನ್ನುಂಟು ಮಾಡಿದಾಗ್ಯೂ, ಸೊಳ್ಳೆಯು ಮಾತ್ರ ಎಂದಿಗೂ ಮಲೇರಿಯಾ ರೋಗದಿಂದ ನರಳುವುದಿಲ್ಲ. ಇದೇ ರೀತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಸ್ವಭಾವವು ಅವನನ್ನು ನಾಶಮಾಡುವುದಿಲ್ಲ. ಹಾವಿನ ವಿಷವನ್ನು ತೆಗೆದು ಮದ್ಯಕ್ಕೆ ಹಾಕಿದರೆ ಅಲ್ಲಿರುವ ಜೀವಾಣುಗಳು ಸಾಯುತ್ತವೆ. ಅಂತೆಯೇ ಕ್ಷತ್ರಿಯನು ತನ್ನ ಸ್ವಭಾವಕ್ಕೆ ವಿರುದ್ಧವಾದ ಬ್ರಾಹ್ಮಣನ ಕರ್ಮವನ್ನು ಮಾಡುವುದಾದರೆ ತಾನಾಗಿಯೇ “ಹರಾಕಿರಿ”ಯನ್ನ ಮಾಡಿಕೊಂಡಂತೆ, ತನ್ನ ಘಾತವನ್ನು ಮ ಮಾಡಿಕೊಂಡಂತೆ ಆಗುತ್ತದೆ.
ಪ್ರಪಂಚದಲ್ಲಿ ಪ್ರತಿಯೊಂದು ಗುಂಪಿನವರ (ವರ್ಣ) ಅವಶ್ಯಕತೆಯೂ ಇದೆ. ಎಲ್ಲರೂ ಸಮರಸದಿಂದ ಹೊಂದಿಕೊಂಡು ಜೀವಿಸಿದರೆ ಜೀವನವು ಸುಗಮವಾಗುತ್ತದೆ. ಪ್ರತಿಯೊಂದು ಗುಂಪಿನವನೂ, ಇನ್ನೊಂದು ಗುಂಪಿನವನು ಮಾಡಲು ಆಗದ ಕಾರ್ಯಗಳನ್ನು ಸುಲಭವಾಗಿ ಮಾಡುತ್ತಿದ್ದಾರೆ. ಕರ್ಮದಲ್ಲಿ ಹೆಚ್ಚು, ಕಡಿಮೆ, ಹಿರಿದು, ಕಿರಿದು ಎಂಬ ಭಾವಗಳಿಲ್ಲ. ಈ ಭೇದವು ಸ್ವಾರ್ಥ ಸಾಧಕನ ಅಪಪ್ರಚಾರದಿಂದ ಉಂಟಾಗಿದೆ. ಪ್ರತಿಯೊಬ್ಬನೂ ತನ್ನತನ್ನ ಕರ್ಮಗಳನ್ನು ಮಾಡುವುದರಿಂದ ಕರ್ಮವು ಚೆನ್ನಾಗಿ ಸುಗಮವಾಗಿ ಸಾಗುವುದರ ಜೊತೆಗೆ ಸಮಾಜದಲ್ಲಿ ಶಾಂತಿ ಸಮಾಧಾನಗಳೂ, ಅಭಿವೃದ್ಧಿಯೂ ಲಭಿಸುತ್ತವೆ. ಪ್ರಪಂಚದಲ್ಲಿ ಸೃಷ್ಟಿಯಾದುದೆಲ್ಲವೂ ಪ್ರಪಂಚದ ಇರುವಿಕೆಗೆ ಅವಶ್ಯಕ. ನಿರರ್ಥಕವಾದುದು ಯಾವುದೂ ಇಲ್ಲ. ಉಪಯೋಗವಿಲ್ಲ ಎಂದು ಕಂಡ ಆ ವಿಷಯದಲ್ಲಿ ನಮಗೆ ಜ್ಞಾನವಿಲ್ಲ ಎಂದಷ್ಟೇ ಹೇಳಬೇಕು. ಒಳ್ಳೆಯದು ಅವಶ್ಯವಿದ್ದಂತೆ ಕೆಟ್ಟದ್ದೂ, ಅವಶ್ಯಕವಿದೆ. ಪಾಂಡವರ ಗುಣಗಳು ಶ್ರೇಷ್ಠವೇನೋ ಅಹುದು. ಕೌರವರ ದುರ್ಗುಣಗಳೂ ಅಷ್ಟೇ ಹಿರಿದು, ಏಕೆಂದರೆ ಇದು ಇಲ್ಲದಿದ್ದರೆ ಪ್ರಪಂಚವೇ ಸಾಗುತ್ತಿರಲಿಲ್ಲ. ಪಾಂಡವರ ಹಿರಿತನವೂ ವ್ಯಕ್ತವಾಗುತ್ತಿರಲಿಲ್ಲ. ಮಹಾಭಾರತ ಯುದ್ಧವೂ ನಡೆಯುತ್ತಿರಲಿಲ್ಲ. ತನ್ಮೂಲಕ ಲಭಿಸಿದ ಶ್ರೀಮದ್ಭಗವದ್ಗೀತೋಪದೇಶವು ನಮಗೆ ಲಭಿಸುತ್ತಲೇ ಇರಲಿಲ್ಲ. ಆದುದರಿಂದ ಯಾವುದನ್ನೂ ದೂಷಿಸಬಾರದು. ತುಚ್ಛೀಕರಿಸಬಾರದು. ಎಲ್ಲವೂ ಪರಮಾತ್ಮನ ಸೃಷ್ಟಿಯೇ ಆದುದರಿಂದ ಎಲ್ಲದರಲ್ಲಿಯೂ, ಪರಮಾತ್ಮನ ಇರುವಿಕೆಯನ್ನು ಕಾಣಲು ಪ್ರಯತ್ನಿಸಬೇಕು.

ಸಹಜಂ ಕರ್ಮ ಕೌಂತೇಯ ಸದೋಷಮಪಿ ನ ತ್ಯಜೇತ್ |
ಸರ್ವಾರಂಭಾ ಹಿ ದೋಷೇಣ ಧೂಮೇನಾಗ್ನಿರಿವಾವೃತಾಃ || 48 ||
ಅರ್ಥ:-ಕೌಂತೇಯನೇ, ತನ್ನ ಪ್ರಕೃತಿಗೆ ಸಹಜವಾದ ಕರ್ಮಗಳು. ದೋಷಯುತವಾದವುಗಳೆಂದು ಕಂಡಾಗ್ಯೂ ಅವುಗಳನ್ನು ತ್ಯಜಿಸಬಾರದು. ಏಕೆಂದರೆ ಬೆಂಕಿಯು ಹೊಗೆಯಿಂದ ಆವರಿಸಲ್ಪಟ್ಟಂತೆ ಎಲ್ಲಾ ಕರ್ಮಗಳೂ ದೋಷಯುತವಾದವುಗಳೇ ಆಗಿವೆ.
ಕೃಷ್ಣನು, ಇಲ್ಲಿ ಪ್ರತಿಯೊಬ್ಬನೂ ಸ್ವಭಾವ ಜನ್ಯವಾದ ಕರ್ಮಗಳನ್ನು ಮಾಡಲೇ ಬೇಕೆಂಬ ತತ್ವವನ್ನು ವಿವೇಚಿಸಿ, ಕೊನೆಯಲ್ಲಿ ತನ್ನ ನಿರ್ಣಯವನ್ನು ಹೇಳಿದ್ದಾನೆ. ಮತ್ತು ಸ್ವಭಾವಜನ್ಯವಾದ ಕರ್ಮವನ್ನು ಏನೇ ಆದರೂ ತ್ಯಜಿಸಬಾರದೆಂದು ಹೇಳಿದ್ದಾನೆ. ಅವಸರದಿಂದ ಈ ಶ್ಲೋಕದ ಮೇಲ್ನೋಟದ ಅರ್ಥವನ್ನೇ ಗ್ರಹಿಸುವವರಿಗೆ ಇದು ಧಾರ್ಮಿಕ ಮೂಢನಂಬಿಕೆ ಎಂದು ಕಾಣಬಹುದು. ಆದರೆ ಅಳವಾಗಿ ವಿಚಾರಮಾಡಿದರೆ ಇದು ತರ್ಕಬದ್ಧವಾದುದು ಎಂದು ತಿಳಿಯುತ್ತದೆ. ಸ್ವಭಾವ ಸಿದ್ಧವಾದ ಕರ್ಮಗಳನ್ನು, ಅವು ದೋಷಯುಕ್ತವೆಂದು ಕಂಡಾಗ್ಯೂ ಮಾಡಲೇ ಬೇಕೆಂಬ ಬಲಾತ್ಕಾರಕ್ಕೆ ಗಂಟು ಬಿದ್ದು, ದೋಷಯುತವಾದ ಕರ್ಮಗಳನ್ನು ಮಾಡಬೇಕೆಂದು ಹೇಳಲಿಲ್ಲ. ಈ ವ್ಯತ್ಯಾಸವನ್ನು ಗಮನಿಸಬೇಕು.
ಎಲ್ಲಾ ಕರ್ಮಗಳೂ ದೋಷಯುತಗಳಾಗಿವೆ. ಇಲ್ಲಿ ದೋಷವು ಕರ್ಮದಲ್ಲಿರದೆ. ಕರ್ಮ ಮಾಡುವಾಗ ಕರ್ತನು ಅಹಂಭಾವದಿಂದ ಕೂಡಿ, ‘ನಾನು ಕರ್ಮ ಮಾಡುವವನು, ನಾನು ಕರ್ಮಫಲಕ್ಕೆ ಅಧಿಕಾರಿಯು; ಎಂದು ತಪ್ಪಾಗಿ ತಿಳಿದುಕೊಳ್ಳುವುದರಲ್ಲಿದೆ. ಏಕೆಂದರೆ ಈ ಅಜ್ಞಾನದಿಂದ ಕರ್ಮದ ಸಂಸ್ಕಾರವು ಮನಸ್ಸಿನ ಮೇಲೆ ಮುದ್ರಿತವಾಗಿ ವಾಸನೆಗೆ ಕಾರಣವಾಗುತ್ತದೆ. ವಾಸನೆಗೆ ಕಾರಣವಾಗುವ ಕರ್ಮಗಳೆಲ್ಲವೂ ದೋಷಯುತವಾದವುಗಳು. ವಾಸನೆಗಳುಂಟಾಗದಂತೆ ಮಾಡುವ ಕರ್ಮಗಳು ನಿರ್ದೋಷವಾಗಿವೆ. ಅದು ಪಾಪಕರವಲ್ಲ. ಬೆಂಕಿಯು ಹೊಗೆಯ ದೋಷದಿಂದ ಕೂಡಿರುವಂತೆ, ಕರ್ಮವು ವಾಸನೆ ಎಂಬ ದೋಷದಿಂದ ಕೂಡಿದೆ. ಉರಿಯುವ ಬೆಂಕಿಗೆ ಗಾಳಿಯು ಸರಿಯಾಗಿ ಸಾಕಷ್ಟು ಸಿಗುವಂತೆ ಮಾಡಿದರೆ ಹೊಗೆಯು ಕಡಿಮೆಯಾಗುವಂತೆ, ಕರ್ಮಗಳನ್ನು ಮಾಡುವಾಗ ಅಹಂಭಾವವನ್ನು ತ್ಯಜಿಸಿ, ಕರ್ತವ್ಯ ದೃಷ್ಟಿಯಿಂದ ಕರ್ಮ ಮಾಡಿದರೆ ಅದು ದೋಷವಿಲ್ಲದ್ದಾಗುತ್ತದೆ, ಅಂತರಂಗವು ಶುದ್ಧವಾಗಿ, ದೈವೀಶಕ್ತಿಯು ಜಾಗೃತವಾದ ಹಾಗೆ ಅಹಂಕಾರವು ಕಡಿಮೆಯಾಗುತ್ತದೆ.

ಆಸಕ್ತಬುದ್ಧಿಃ ಸರ್ವತ್ರ ಜಿತಾತ್ಮಾ ವಿಗತಸ್ಪøಹಃ |
ನೈಷ್ಕಮ್ರ್ಯಸಿದ್ಧಿಂ ಪರಮಾಂ ಸಂನ್ಯಾಸೇನಾಧಿಗಚ್ಛತಿ || 49 ||
ಅರ್ಥ:-ಯಾವುದರಲ್ಲಿಯೂ ಆಸಕ್ತಿಯನ್ನು ಹಚ್ಚಿಕೊಳ್ಳದೆ, ಆತ್ಮನಿಗ್ರಹವುಳ್ಳವನಾಗಿ, ಫಲಾಶೆಯನ್ನು ತ್ಯಜಿಸಿ, ಕರ್ಮಮಾಡುವವನು ವೈಷಮ್ಯ ನೈಷ್ಕಮ್ರ್ಯ ಸಿದ್ಧಿಯನ್ನು (ನಿಷ್ಕಾಮ ಕರ್ಮದಲ್ಲಿ ಸಿದ್ಧಿಯನ್ನು) ಪಡೆಯುತ್ತಾನೆ.
ಆಸೆಗಳನ್ನು ತ್ಯಜಿಸಿ, ಅಹಂಕಾರವನ್ನು ಬಿಟ್ಟು ಕರ್ಮಮಾಡುವುದರಿಂದ ನೈಷ್ಕಮತ್ಸ ನೈಷ್ಕಮ್ರ್ಯ ಸಿದ್ಧಿಯು ದೊರೆಯುತ್ತದೆಂದು ಹೇಳಲಾಗಿದೆ. ಆಸೆಗಳು ಅಜ್ಞಾನದ ಮಕ್ಕಳು. ಆಸೆಯಿಂದ ವಿಚಾರಗಳು ಹುಟ್ಟುತ್ತವೆ. ವಿಚಾರಗಳಿಂದ ಬಾಹ್ಯ ಕರ್ಮಗಳು ಮಾಡಲ್ಪಡುತ್ತವೆ. ಆದುದರಿಂದ ನಮ್ಮ ಎಲ್ಲಾ ದುಷ್ಕರ್ಮಗಳಿಗೂ ಅಜ್ಞಾನವೇ ಮೂಲಕಾರಣ. ಆತ್ಮಜ್ಞಾನವಾಗವುದರಿಂದ ಅಜ್ಞಾನವು ಪರಿಹಾರವಾಗುತ್ತದೆ ಆಗ ಎಲ್ಲಾ ವಾಸನೆಗಳು ಕಳಚಿಹೋಗುತ್ತವೆ. ಇಂತಹ ಸಿದ್ಧತಿಗೆ ನೈಷ್ಕಮ್ರ್ಸಸಿದ್ಧಿ ಎಂದು ಹೆಸರು. ಇದನ್ನು ಹೇಗೆ ಗಳಿಸಬೇಕೆಂಬುದನ್ನು ಇಲ್ಲಿ ವರ್ಣಿಸಲಾಗಿದೆ.
ಸಂಸಾರದಿಂದ ಹೆದರಿ ಓಡಿಹೋದರೆ ಈ ಸ್ಥಿತಿಯನ್ನು ಗಳಿಸಲಾರವುದಿಲ್ಲ. ಇದನ್ನು ಇಲ್ಲಿಯೇ ಸಂಸಾರದಲ್ಲಿದ್ದುಕೊಂಡೇ ಬದುಕಿರುವಾಗಲೇ ಗಳಿಸಬೇಕು ಪ್ರತಿಯೊಬ್ಬನೂ ತನ್ನ ಸ್ವಭವಕ್ಕನುಗುಣವಾಗಿ ತನ್ನ ಪಾಲಿಗೆ ಬಂದ ಕರ್ಮಗಳನ್ನು ಅವು ಪರಮಾತ್ಮನ ಸೇವೆ ಎಂಬ ಭಾವದಿಂದ ಅಹಂಕಾರವನ್ನು ತ್ಯಜಿಸಿ, ಫಲಾಸೆಯಿಲ್ಲದೇ, ಮಾಡುವುದರಿಂದ ಸಂಚಿತವಾದ ವಾಸನೆಗಳೆಲ್ಲವೂ ಬರಿದಾಗಿ, ಹೊಸವಾಸನೆಗಳು ಹುಟ್ಟದೆ, ಅಂತಃಕರಣವು ಶುದ್ಧವಾಗಿ ಆತನು ನೈಷ್ಕಮ್ರ್ಯ ಸಿದ್ಧಿಯನ್ನು ಪಡೆಯುತ್ತಾನೆ. ಇದನ್ನು ಸಾಧಿಸಲು ಸ್ವಭಾವಜನ್ಯ ಕರ್ಮಗಳನ್ನು ಮಾಡುವುದು ಶ್ರೇಯಸ್ಕರ ಮಾರ್ಗ ಎಂದು ಹೇಳಲಾಗಿದೆ.
ಆಸಕ್ತ ಅಸತ್ತ ಬುದ್ಧಿಃ ಸರ್ವತ್ರ- ಬುದ್ಧಿಯು ಇಂದ್ರಿಯ ವಿಷಯ ಸುಖಗಳಲ್ಲಿ ಓಡದೆ, ಪರಮಾತ್ಮನ ಚಿಂತೆಯಲ್ಲಿರುವುದು. ಹೊರಗಿನ ಇಂದ್ರಿಯ ಸುಖಗಳಲ್ಲಿ ನಿರಾಸಕ್ತನಾಗಿರುವುದು.

ಸಿದ್ಧಿಂಪ್ರಾಪ್ತೋ ಯಥಾ ಬ್ರಹ್ಮತಥಾಪ್ನೋತಿ ನಿಬೋಧ ಮೇ |
ಸಮಾಸೇನೈವ ಕೌಂತೇಯ ನಿಷ್ಠಾ ಜ್ಞಾನಸ್ಯ ಯಾ ಪರಾ || 50 ||
ಅರ್ಥ :- ಕೌಂತೇಯನೇ, £ಜeಟeಣe ನೈಷ್ಕಮ್ರ್ಸ ಸಿದ್ಧಿಯನ್ನು ಹೊಂದಿದ ಅವನು ಶ್ರೇಷ್ಠಜ್ಞಾನದ ಪರಮನಿಧಿಯಾದ ಬ್ರಹ್ಮನನ್ನು ಹೇಗೆ ಹೋಗಿ ಸೇರುತ್ತಾನೆಂಬುದನ್ನು ಹೇಳುತ್ತೇನೆ ಕೇಳು
ಸಾಧನೆಯಲ್ಲಿ ಮುಂದುವರಿದಷ್ಟೂ, ಮನಸ್ಸು ಪ್ರಸನ್ನವಾಗಿ ಏಕಾಗ್ರವಾದಷ್ಟೂ, ಮನಸ್ಸಿನ ದೋಷಗಳು ಕಡಿಮೆಯಾದಷ್ಟೂ, ಹೆಚ್ಚು ಹೆಚ್ಚು ಆತ್ಮಜ್ಞಾನವು ಲಭಿಸುತ್ತದೆಂಬುದನ್ನು ಇಲ್ಲಿ ಸೂಚಿಸಲಾಗಿದೆ. ಮನಸ್ಸು ಇಂದ್ರಿಯ ವಿಷಯಗಳಿಂದ ಹಿಂದೆ ಸರಿದ ಹಾಗೆ ಆತ್ಮಜ್ಞಾನವು ಸಮೀಪಿಸುತ್ತದೆ. ಇಂದ್ರಿಯಗಳು ಮನಸ್ಸಿನ ಅಧೀನಕ್ಕೊಳಪಟ್ಟು, ಬುದ್ಧಿಯು ಸಂಗ್ರಹಿತವಾದಹಾಗೆ, ಅಜ್ಞಾನವನ್ನು ಕಳೆದುಕೊಂಡು, ಧ್ಯಾನದಲ್ಲಿ ಏಕಾಗ್ರತೆಯನ್ನು ಸಾಧಿಸಬಹುದು. ಆತ್ಮಜ್ಞಾನದ ಅನುಭವವಾಗುವವರೆಗೂ ಅಹಂಕಾರವು ಸಂಪೂರ್ಣವಾಗಿ ಅಳಿಯುವುದಿಲ್ಲ. ಸಂಪೂರ್ಣ ಇಂದ್ರಿಯ ನಿಗ್ರಹವೂ ಸಾಧಿಸುವುದಿಲ್ಲ. ಈ ಅನುಭವವನ್ನು ಪಡೆಯುವ ವಿಧಾನವನ್ನು ಈಗ ಹೇಳುವುದಾಗಿ ತಿಳಿಸಿ, ಅದನ್ನು ಚೆನ್ನಾಗಿ ತಿಳಿದುಕೊಳ್ಳಬೇಕೆಂದು ಸೂಚಿಸಿ, ಮುಂದಿನ ಎರಡು ಶ್ಲೋಕಗಳಲ್ಲಿ ವಿವರಗಳನ್ನು ತಿಳಿಸಲಾಗಿದೆ.

ಬುದ್ಧ್ಯಾ ವಿಶುದ್ಧಯಾ ಯುಕ್ತೋ ಧೃತ್ಯಾತ್ಮಾನಂ ನಿಯಮ್ಯ ಚ |
ಶಬ್ದದೀನ್ವಿಷಯಾಂಸ್ತ್ಯಕ್ತ್ವಾ ರಾಗದ್ವೇಷೌ ವ್ಯುದಸ್ಯ ಚ || 51 ||
ಅರ್ಥ :- ಬುದ್ಧಿಯನ್ನು ಶುದ್ಧಗೊಳಿಸಿಕೊಂಡು, ಧೈರ್ಯದಿಂದ ಮನಸ್ಸು ಮತ್ತು ಇಂದ್ರಿಯಗಳ ನಿಗ್ರಹವನ್ನು ಸಾಧಿಸಿ, ಶಬ್ದ ಸ್ಪರ್ಶಾದಿ ಇಂದ್ರಿಯ ವಿಷಯಗಳನ್ನು ತ್ಯಜಿಸಿ, ರಾಗ ದ್ವೇಷಷಗಳನ್ನು ನಿಗ್ರಹಿಸಿ;
ಬುದ್ಧ್ಯಾವಿಶುದ್ಧಯಾ- ಬುದ್ಧಿಯಲ್ಲಿರುವ ವಾಸನೆಗಳೆಲ್ಲವನ್ನೂ ಬರಿದು ಮಾಡಿಕೊಂಡು, ಅದರಲ್ಲಿ ಹೊಸವಾಸನೆಗಳು ಸಂಚಯವಾಗದಂತೆ ಮಾಡಿಕೊಂಡರೆ (ಅಹಂಕಾರವನ್ನು ತ್ಯಜಿಸಿ ಕರ್ಮ ಮಾಡುವುದರ ಮೂಲಕ) ಬುದ್ಧಿಯು ಪರಿಶುದ್ಧವಾಗುತ್ತದೆ. ವಾಸನೆಗಳು ಅಂದರೆ, ಇಂದ್ರಿಯಗಳ ಮುಖಾಂತರ ವಿವಿಧ ಸುಖಗಳನ್ನು ಅನುಭವಿಸಬೇಕೆಂಬ ಕರ್ಮ ಸಂಸ್ಕಾರಗಳು, ಬುದ್ಧಿಯ ಅಪವಿತ್ರ್ಯತೆಗೆ ಕಾರಣ. ಇವುಗಳನ್ನು ಹೋಗಲಾಡಿಸಿಕೊಳ್ಳುವುದು ಬುದ್ಧಿಯ ಪಾವಿತ್ರ್ಯತೆಗೆ ಅತ್ಯವಶ್ಯಕ ಧೃತ್ಯಾತ್ಮನಂ ನಿಯಮ್ಯಚ – ಧ್ಯಾನಮಾಡುವಾಗ ಮನಸ್ಸು, ಇಂದ್ರಿಯಗಳ ಮುಖಾಂತರ ಇಂದ್ರಿಯ ವಿಷಯಗಳ ಕಡೆಗೆ ಓಡಿ ಹೋಗುವುದರಿಂದ ಅದು ಧ್ಯಾನಕ್ಕೆ ವಿಘ್ನವನ್ನುಂಟು ಮಾಡುತ್ತದೆ. ಆದುದರಿಂದ ಮನಸ್ಸು ಮನಸ್ಸನ್ನು ಇಂದ್ರಿಯಗಳ ಮುಖಾಂತರ ಹೊರಕ್ಕೆ ಹೋಗದಂತೆ ನಿಗ್ರಹಿಸಬೇಕು. ಇದು ಸುಲಭವಾಗಿ ಸಾಧಿಸುವುದಿಲ್ಲ. ಇದಕ್ಕೆ ಸತತವಾದ ಪ್ರಯತ್ನ, ಜಿಗುಟುತನ ಮತ್ತು ಧೈರ್ಯಗಳು ಬೇಕು. ಇದಕ್ಕೆ ‘ಧೃತಿ’ ಎಂದು ಹೆಸರು. ಹಿಂದೆ ತಿಳಿಸಿದ ಶಮದಮಾದಿಗಳ ಮುಖಾಂತರ ಇದನ್ನು ಸಾಧಿಸಬೇಕು.
ಶಬ್ದಾದಿನ್ವಿಷಯುಸ್ತ್ಯತ್ತ್ವಾ- ಶಬ್ದದೀನ್ವಿಷಯಾಂಸ್ತ್ಯಕ್ತಾ ಮನಸ್ಸು ಇಂದ್ರಿಯಗಳ ಮುಖಾಂತತರ ಹೊರಕ್ಕೆ ಹೋಗುವುದನ್ನು ನಿಗ್ರಹಿಸಬೇಕೆಂದು ತಿಳಿಸಲಾಯಿತು. ಈಗ ಹೊರಗಿನ ಇಂದ್ರಿಯ ವಿಷಯಗಳು ಮನಸ್ಸನ್ನು ಆಕರ್ಷಿಸಿದಂತೆ ನಿಗ್ರಹಿಸಬೇಕೆಂಬುದನ್ನು ಹೇಳಲಾಗಿದೆ. ಇಂದ್ರಿಯ ವಿಷಯಗಳು ಇಂದ್ರಿಯಗಳ ಮುಖಾಂತರ (ಹೊರಗಿನಿಂದ) ಒಳಗೆ ಪ್ರವೇಶಿಸಿ, ನಾನು ಮುಂದು ತಾನು ಮುಂದು ಎಂದು ಮನಸ್ಸನ್ನು ಆಕರ್ಷಿಸುತ್ತಿರುವಾಗ, ಅವುಗಳ ಬಲೆಗೆ ಸಿಕ್ಕದೆ ಅವುಗಳನ್ನು ನಿಗ್ರಹಿಸಬೇಕು. ಹಿಂದೆ ಹೀಗೆ ಮನಸ್ಸನ್ನು ಒಳಗಿನಿಂದ ಮತ್ತು ಹೊರಗಿನಿಂದ, ಎರಡೂ ಕಡೆಯಿಂದಲೂ ನಿಗ್ರಹಿಸುವುದು ಅವಶ್ಯಕ.
ರಾಗದ್ವೇ ಷೌ ಷಾ ವ್ಯುದಸ್ಯಚ – ಮನಸ್ಸಿನಲ್ಲಿ ಅಪೇಕ್ಷೆ ಮತ್ತು ದ್ವೇಷಗಳುಂಟಾಗದಂತೆ ಮನಸ್ಸನ್ನು ಸಮಸ್ಥಿತಿಯಲ್ಲಿಟ್ಟುಕೊಳ್ಳಬೇಕು.
ವಿವಿಕ್ತಸೇವೀ ಲಘ್ವಾಶೀ ಯತವಾಕ್ಕಾಯಮಾನಸಃ |
ಧ್ಯಾನಯೋಗಪರೋ ನಿತ್ಯಂ ವೈರಾಗ್ಯಂ ಸಮುಪಾಶ್ರಿತಃ || 52 ||
ಅರ್ಥ :- ಏಕಾಂತವಾಸ ಮಾಡುತ್ತಾ ಲಘುವಾದ ಆಹಾರವನ್ನು ಸೇವಿಸಿ, ಮಾತು ಶರೀರ ಮತ್ತು ಮನಸ್ಸುಗಳನ್ನು ನಿಗ್ರಹಿಸಿ, ಇಂದ್ರಿಯ ಸುಖಗಳಲ್ಲಿ ವೈರಾಗ್ಯವನ್ನು ಹೊಂದಿ, ಯಾವಾಗಲೂ, ಏಕಾಗ್ರವಾಗಿ ಧ್ಯಾನಮಾಡುತ್ತಾ ಇರಬೇಕು.
ವಿವಿಕ್ತಸೇವೀ – ಹಿಂದೆ ಹೇಳಿದ ರೀತಿಯಲ್ಲಿ ಶಾರೀರಿಕ, ಮಾನಸಿಕ, ಮತ್ತು ಬೌದ್ಧಿಕ ರೀತಿಯಲ್ಲಿ ಪೂರ್ವತಯಾರಿಯನ್ನು ಮಾಡಿಕೊಂಡು, ಧ್ಯಾನಮಾಡಲು ಏಕಾಂತ ಸ್ಥಳದಲ್ಲಿ ಕುಳಿತುಕೊಳ್ಳಬೇಕು. ಮನೆಯಲ್ಲಿ ಆರಿಸಿಕೊಳ್ಳಬೇಕು. ಹಗಲಿನಲ್ಲಿ, ಮನೆಯಲ್ಲಿ, ತಾನು ವಾಸಿಸುವ ಸ್ಥಳದಲ್ಲಿಯೇ ಸಾಧ್ಯವಿದ್ದ ಮಟ್ಟಿಗೂ ಗಲಾಟೆಯಿಲ್ಲದ, ಜನಸಂದಣಿ ಇಲ್ಲದ ಏಕಾಂತ ಸ್ಥಳವನ್ನು ಆರಿಸಿಕೊಳ್ಳಬೇಕು. ಹಗಲಿನಲ್ಲಿ, ಮನೆಯಲ್ಲಿ ಇಂತಹ ಏಕಾಂತ ಸ್ಥಳ ಸಿಗದಿದ್ದರೆ, ರಾತ್ರಿಯ ಕಾಲದಲ್ಲಿ. ಎಲ್ಲರೂ ಮಲಗಿರುವಾಗ ಸಿಕ್ಕೇ ಸಿಗುತ್ತದೆ. ಅದೇ ಏಕಾಂತ ಸ್ಥಳವೆಂದು ತಿಳಿದು, ಆಗಲಾದರೂ, ಮುಂದೆ ಹೇಳುವ ರೀತಿಯಲ್ಲಿ ಧ್ಯಾನಮಾಡಬೇಕು.
ಲಘ್ವಾಶೀ- ಧ್ಯಾನಮಾಡುವ ಸಾಧಕನ ಆಹಾರವು ಅತಿಯಾಗಿರಬಾರದು. ಅದರಿಂದ ಜಡತ್ವವುಂಟಾಗುತ್ತದೆ. ಆಹಾರವಿಲ್ಲದೆ ಉಪವಾಸವನ್ನೂ ಮಾಡಬಾರದು. ಇದರಿಂದ ಧ್ಯಾನಮಾಡಲು ಶಕ್ತಿ ಬರುವುದಿಲ್ಲ. ಆದುದರಿಂದ ಎರಡೂ ಅತಿಗಳನ್ನು ತ್ಯಜಿಸಿ ಲಘುವಾದ ಆಹಾರವನ್ನು ಸೇವಿಸಬೇಕು. ಯತವಾಕ್ಕಾಯ ಮಾನಸ- ಇಲ್ಲಿ ತಾನು ಕಾಯ ಎಂದರೆ ಕರ್ಮೇಂದ್ರಿಯಗಳನ್ನೂ, ವಾಕ್ ಎಂದರೆ ಜ್ಞಾನೇಂದ್ರಿಯಗಳನ್ನೂ ಸೂಚಿಸಲಾಗಿದೆ. ಮನಸ್ಸು ಇಂದ್ರಿಯ ವಿಷಯಗಳ ಕಡೆಗೆ ಓಡದಂತೆ ತಡೆಹಿಡಿಯಬೇಕು. ವಸ್ತುತಃ ಮನಸ್ಸು ಜ್ಞಾನೇಂದ್ರಿಯಗಳನ್ನು ಪ್ರವೇಶಿಸಿದರೆ ಈ ಇಂದ್ರಿಯಗಳಿಂದ ಸಂವೇದನೆಯನ್ನು ಸ್ವೀಕರಿಸಿ ವಿಷಯಗಳ ಚಿಂತನೆಯನ್ನುಂಟು ಮಾಡುತ್ತದೆ. ನಂತರ ಕರ್ಮೇಂದ್ರಿಯಗಳಲ್ಲಿ ಪ್ರವೇಶಿಸಿ ಅವುಗಳ ಮೂಲಕ ವಿಷಯ ಸುಖಗಳನ್ನು ಭೋಗಿಸುತ್ತದೆ. ಹೀಗೆ ಎರಡೂ ತರಹದ ಕರ್ಮಗಳಿಗೂ ಮನಸ್ಸು ಇಂದ್ರಿಯಗಳಲ್ಲಿ ಪ್ರವೇಶಿಸುವುದೇ ಕಾರಣ. ಆದುದರಿಂದ ಒಳಗೆ ಬರುವ ಮತ್ತು ಹೊರಗೆ ಹೋಗುವ ಎರಡೂ ತರಹದ ಸಂವೇದನೆಗಳುಂಟಾದಾಗ್ಯೆ ಮನಸ್ಸು ನಿರಾಸಕ್ತವಾಗಿರುವಂತೆ ನಿಗ್ರಹಿಸಬೇಕೆಂಬುದನ್ನು ಇಲ್ಲಿ ಸೂಚಿಸಲಾಗಿದೆ. ಹೀಗೆ ನಿಗ್ರಹಿಸಿದ ಮನಸ್ಸನ್ನು ಈಗ ಪರಮಾತ್ಮನ ಧ್ಯಾನದಲ್ಲಿ ಏಕಾಗ್ರ ಮಾಡಬೇಕು
(ಧ್ಯಾನಯೋಗ ಪರೋನಿತ್ಯಂ) ಅಖಂಡವಾದ ಈ ಧ್ಯಾನದಿಂದ ಹೆಚ್ಚು ಹೆಚ್ಚು ಆನಂದವು ಲಭಿಸುತ್ತದೆ.
ವೈರಾಗ್ಯಂ ವೈಆಗ್ಯಂಸಮುಪಾಶ್ರಿತಃ- ವೈರಾಗ್ಯ ಎಂದರೆ ಕೇವಲ ಇಂದ್ರಿಯ ನಿಗ್ರಹವಲ್ಲ. ಇಂದ್ರಿಯಗಳಿಂದ ಸಿಗುವ ಸುಖವು ನಿಜವಾದ ಸುಖವಲ್ಲ. ಅದು ತಾತ್ಕಾಲಿಕವಾದುದು, ಮುಂದೆ ಅದು ದುಃಖವನ್ನುಂಟು ಮಾಡುತ್ತದೆ ಎಂಬುದನ್ನು ತಿಳಿದುಕೊಂಡಿರುವಂತೆ, ಆತ್ಮಧ್ಯಾನದಿಂದ ಸಿಗುವ ಸುಖವೇ ನಿಜವಾದ ಸುಖ, ಅದು ದುಃಖವಿಲ್ಲದ ಸುಖ ಎಂಬ ದೃಢವಾದ ನಂಬಿಕೆಯಿಂದ ಕೂಡಿ ಇಂದ್ರಿಯ ಸುಖಗಳಲ್ಲಿ ಸ್ವಭಾವವಾಗಿ ಅಂತರಂಗದೊಳಗಿನಿಂದ ಜಿಗುಪ್ಸೆ ಹುಟ್ಟುವುದಕ್ಕೆ ವೈರಾಗ್ಯ ಎಂದು ಹೆಸರು. ಇಂದ್ರಿಯ ವಿಷಯಗಳಲ್ಲಿ ಜಿಗುಪ್ಸೆ ಹುಟ್ಟುವುದರ ಜೊತೆಗೆ, ಆತ್ಮಧ್ಯಾನದಲ್ಲಿ ಆಸಕ್ತಿಯು ಹೆಚ್ಚಾಗುವುದು ಸಹ ವೈರಾಗ್ಯದ ಪ್ರಮುಖ ಲಕ್ಷಣವಾಗಿದೆ. ಇವೆರಡೂ ಒಟ್ಟಾಗಿ ಇರಬೇಕು. ಮನಸ್ಸಿನ ಹಳೆಯ ವಿಷಯಗಳನ್ನು ಮರೆತು ಹೊಸ ವಿಷಯಗಳ ಚಿಂತನೆ ಪ್ರಾರಂಭವಾದ ಹಾಗೆ, ಹೊಸ ವಿಚಾರಗಳ ಓಘವೇ ಬಲವಾಗುತ್ತದೆ. ಉತ್ತಮ ವಿಚಾರಗಳ್ಲಿ ಮನಸ್ಸು ಪ್ರವೇಶಿಸಿದರೆ ಉತ್ತಮ ವಿಚಾರಗಳ ಪ್ರವೃತ್ತಿಯು ಹೆಚ್ಚಾಗುತ್ತದೆ. ಇಂದ್ರಿಯ ವಿಷಯಗಳಲ್ಲಿ ಓಡುತ್ತಿದ್ದ ಮನಸ್ಸನ್ನು ನಿಗ್ರಹಿಸಿದರೆ ಅದು ಕ್ರಮೇಣ ವಿಷಯ ಸುಖವನ್ನು ಮರೆಯುತ್ತದೆ. ಹೀಗೆ ತಿದ್ದಿದ ಮನಸ್ಸನ್ನು ಆತ್ಮಧ್ಯಾನದಲ್ಲಿ ಏಕಾಗ್ರಮಾಡಿದರೆ ಆ ವಿಷಯದಲ್ಲಿಯೇ ಅದರ ಪ್ರವೃತ್ತಿಯ ಓಘವು ಬಲವಾಗುತ್ತಾ ಹೋಗುತ್ತದೆ. ಇದಕ್ಕೆ ಸತತವಾದ, ತೀವ್ರ ಪ್ರಯತ್ನ ಅವಶ್ಯಕ.
ಈ ತರಹದ ಧ್ಯಾನವು ಫಲಿಸಬೇಕಾದರೆ ಕೆಲವು ವಿಶಿಷ್ಟ ತರಹದ ಆಂತರಿಕ ಶಕ್ತಿಯನ್ನು ಅಭ್ಯಾಸದಿಂದ ಗಳಿಸಿಕೊಳ್ಳಬೇಕು.
ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಪರಿಗ್ರಹಮ್ |
ವಿಮುಚ್ಯ ನಿರ್ಮಮಃ ಶಾಂತೋ ಬ್ರಹ್ಮಭೂಯಾಯ ಕಲ್ಪತೇ || 53 ||
ಅರ್ಥ :- ಅಹಂಕಾರ, ಬಲ, ದರ್ಪ, ಕಾಮ, ಕ್ರೋಧ, ದುರಾಶೆ, ಮತ್ತು ಸಂಗ್ರಹ ಬುದ್ಧಿ ಇವುಗಳನ್ನು ತ್ಯಜಿಸಿ, ಮಮಕಾರವಿಲ್ಲದವನಾಗಿ, ಶಾಂತಮನಸ್ಸುಳ್ಳವನಾದರೆ ಅವನು ಬ್ರಹ್ಮನಾಗಲು ಅರ್ಹನಾಗುತ್ತಾನೆ.
ಸಾಧಕನು ಶಾರೀರಿಕ ದೃಷ್ಟಿಯಿಂದ, ಹೊರಗಿನಿಂದ ಸಾಧಿಸಬೇಕಾದ ಅಂಶಗಳನ್ನು ಹಿಂದಿನ ಶ್ಲೋಕದಲ್ಲಿ ತಿಳಿಸಿ, ಆಂತರಿಕ ತಯಾರಿಯು ಯಾವ ರೀತಿ ಸಾಧಿಸಲ್ಪಡಬೇೀಕೆಂದು ಇಲ್ಲಿ ಹೇಳಲಾಗಿದೆ. ಈ ವಿವರಣೆಯ ದೃಷ್ಟಿಯಿಂದ ಹೇಳಲಾದ ಎಲ್ಲ ಗುಣಗಳೂ ಅಹಂಕಾರದ ಬೇರೆಬೇರೆ ಮುಖಗಳಾಗಿವೆ. ಆದುದರಿಂದ ಅಹಂಕಾರವನ್ನು ಸಂಪೂರ್ಣವಾಗಿ ಜಯಿಸುವುದು ಪ್ರಥಮ ಧ್ಯೇಯವಾಗಿರಬೇಕು. ಹೀಗೆ ಅಹಂಕಾರವನ್ನು ಜಯಿಸಿ, ಬಲ, ದರ್ಪ, ಮೊದಲಾದ ದುರ್ಗುಣಗಳನ್ನು ನಿಗ್ರಹಿಸಿ, ಮನಸ್ಸನ್ನು ಇಂದ್ರಿಯ ವಿಷಯಗಳಿಂದ ಹಿಂದಕ್ಕೆಳೆದು, ಆತ್ಮಧ್ಯಾನದಲ್ಲಿ ನಿಲ್ಲಿಸಬೇಕು. ಹೀಗೆ ಮಾಡಿದರೆ ಆ ಸಾಧಕನು ಬ್ರಹ್ಮಜ್ಞಾನವನ್ನು ಹೊಂದಲು ಅರ್ಹನಾಗುತ್ತಾನೆ. ಇಷ್ಟರಿಂದಲೇ ಬ್ರಹ್ಮಜ್ಞಾನವಾಗುವುದಿಲ್ಲ. ಆ ಅನುಭವವನ್ನು ಪಡೆಯಲು ಈಗ ಪೂರ್ವತಯಾರಿಯನ್ನು ಮಾಡಿಕೊಂಡು, ಅವಶ್ಯವಾದ ಯೋಗ್ಯತೆಯನ್ನು ಗಳಿಸಿಕೊಂಡಂತಾಯಿತು ಅಷ್ಟೇ.

ಬ್ರಹ್ಮಭೂತಃ ಪ್ರಸನ್ನಾತ್ಮಾ ನ ಶೋಚತಿ ನ ಕಾಂಕ್ಷತಿ
ಸಮಃ ಸರ್ವೇಷು ಭೂತೇಷು ಮದ್ಭಕ್ತಿಂ ಲಭತೇ ಪರಾಮ್ || 54 ||
ಅರ್ಥ :- ಹೀಗೆ ಸಾಧನೆಯಿಂದ ಬ್ರಹ್ಮನಾಗುತ್ತಿರುವವನು ಪ್ರಸನ್ನ ಚಿತ್ತವುಳ್ಳವನಾಗಿರುತ್ತಾನೆ. ಅವನು ಯಾಯ ವುದಕ್ಕೂ ಚಿಂತೆಮಾಡುವುದಿಲ. ಏನನ್ನೂ ಅಪೇಕ್ಷಿಸುವುದಿಲ್ಲ. ಎಲ್ಲಾ ಭೂತಗಳನ್ನೂ ಸಮದೃಷ್ಟಿಯಿಂದ ಕಾಣುತ್ತಾನೆ. ಅವನು ನನ್ನಲ್ಲಿ ಹಿರಿದಾದ ಭಕ್ತಿಯನ್ನು ಹೊಂದಿರುತ್ತಾನೆ.
ಹಿಂದೆ ತಿಳಿಸಿದಂತೆ ಅಹಂಕಾರ, ಬಲ, ದರ್ಪಾದಿಗಳನ್ನು ಕಳೆದುಕೊಂಡು, ಧ್ಯಾನಮಗ್ನನಾಗಿರುವಾಗ ಸಾಧಕನು ಆಂತರಿಕ ಶಾಂತಿಯನ್ನು ಅನುಭವಿಸುತ್ತಾನೆ. ಹೀಗೆ ಗಳಿಸಿದ ಶಾಂತಿಯು ಕ್ಷಣಕಾಲ ನಿಂತು ಓಡಿಹೋಗದೆ ಸ್ಥಿರವಾಗಿ ಉಳಿಯುವಂತೆ ಮಾಡಬೇಕು. ಹೊರಗಿನ ಕರ್ಮಗಳಲ್ಲಿ ‘ನಾನು ಮಾಡುವವನು’ ಎಂಬ ಅಹಂಕಾರವನ್ನು ತ್ಯಜಿಸಿದಾಗ್ಯೂ. ಅಂತರಂಗದಲ್ಲಿ ‘ನಾನು ಭೋಗಿಸುವವನು’ ಎಂಬ ಅಹಂಕಾರವು ಇದ್ದೇ ಇರುತ್ತದೆ. ಈಗ ಈ ಅಹಂಕಾರವು (ಭೋಕ್ತøತ್ತಭಾವ) ಜಾಗೃತವಾಗಿ ಸಾಧಕನ ಮನಸ್ಸು ಬುದ್ಧಿಗಳನ್ನು ಅಲ್ಲೋಲಕಲ್ಲೋಲ ಮಾಡುತ್ತದೆ. ನಂಜುರಳೆ ಹುಳವನ್ನು ಕತ್ತರಿಸಿ ಎರಡು ತುಂಡು ಮಾಡಿದರೆ ಅದು ಎರಡು ಬೇರೆ ಬೇರೆ ಹುಳುಗಳಾಗುವಂತೆ, ನಾನು ಮಾಡುವವನು (ಕರ್ತಾ) ಎಂಬ ಅಹಂಕಾರವನ್ನು ಗೆದ್ದರೆ, ಉಳಿದ ಇನ್ನೊಂದು ತುಂಡಾದ ‘ನಾನು ಭೋಗಿಸುವವನು’ ಎಂಬ ಅಹಂಕಾರವು ಈಗ ಜಾಗೃತವಾಗುತ್ತದೆ. ಈ ಅಹಂಕಾರವು (ಭೋಕ್ತಾ) ಮೊದಲಿನ ಅಹಂಕಾರಕ್ಕಿಂತ ಹೆಚ್ಚು ಅಮಾಯಕವಾದುದು. ಅಪಾಯಕರ ಸಾಧಕನು ಇದಕ್ಕೆ ಬಲಿಯಾದರೆ ಅಧೋಗತಿಗಿಳಿಯುತ್ತಾನೆ. ಅನೇಕ ಸಾಧಕರು ಹಾಗೂ ಸನ್ಯಾಸಿಗಳು ತಮ್ಮ ತೀವ್ರವಾದ ಸಾಧನೆಯಿಂದ ಮೇಲ್ಮಟ್ಟಕ್ಕೇರಿ ಮನಃಶಾಂತಿಯನ್ನು ಗಳಿಸಿಕೊಂಡಾಗ್ಯೂ, ತಮ್ಮ ದೌರ್ಬಲ್ಯದಿಂದಾಗಿ, ‘ನಾನು ಭೋಗಿಸುವವನು’ ಎಂಬ ಅಹಂಕಾರವನ್ನು ಗೆಲ್ಲಲಾರದೆ, ಅದರ ಸೆಳೆತಕ್ಕೆ ಸಿಕ್ಕಿಬಿದ್ದು, ಸಾಧನೆಯಿಂದ ಹಿಮ್ಮುಖರಾಗಿ, ಪುನಃ ಸಂಪೂರ್ಣ ಅಹಂಕಾರದಿಂದ ಆವೃತರಾಗಿ, ಪತಿತ ರಾಗುತ್ತಿರುವ ಉದಾಹರಣೆಯನ್ನು ಕಾಣಬಹುದು. ಆದುದರಿಂದ ಈ ಎರಡನೆಯ ಅಹಂಕಾರವನ್ನು ಗೆಲ್ಲುವುದು ಸಹ ಅವಶ್ಯಕ.
ಬ್ರಹ್ಮಭೂತ- ಎಂದರೆ ಬ್ರಹ್ಮನಾದವನು ಎಂದು ತಿಳಿಯಬಾರದು. ತನ್ನ ಸಾಧನೆಯಿಂದ ಬ್ರಹ್ಮನಾಗಲು ಮೇಲ್ಮಟ್ಟಕ್ಕೇರುತ್ತಿರುವವನು ಎಂದರ್ಥ.
ಪ್ರಸನ್ನಾತ್ಮಾ- ಮನಸ್ಸು ಇಂದ್ರಿಯಗಳಲ್ಲಿ ಓಡದೆ ಧ್ಯಾನಮಗ್ನವಾದಾಗಿನ ಶಾಂತಸ್ಥಿತಿ.
ನಶೋಚತಿ ನಕಾಂಕ್ಷತಿ – ಸಾಧಕನು ಈಗ ಪರಮಾತ್ಮನಿಗೆ ಸಂಪೂರ್ಣವಾಗಿ ಶರಣಾಗತನಾಗಿರುವುದರಿಂದಲೂ, ಇಂದ್ರಿಯವಿಷಯಜನ್ಯ ಸುಖಗಳಲ್ಲಿ ವೈರಾಗ್ಯವನ್ನು ಹೊಂದಿರುವುದರಿಂದಲೂ, ಆತ್ಮಧ್ಯಾನದಲ್ಲಿಯೇ ನಿಜವಾದ ಆನಂದವನ್ನು ಕಾಣುತ್ತಿರುವುದರಿಂದಲೂ, ಈತನು ತನ್ನ ಶರೀರದ ರಕ್ಷಣೆಯ ದೃಷ್ಟಿಯಿಂದ ಯಾವ ಚಿಂತೆಯನ್ನು ಮಾಡುವುದಿಲ್ಲ ಹಾಗೂ ಏನನ್ನೂ ಅಪೇಕ್ಷಿಸುವುದಿಲ್ಲ. ತನಗೆ ಬೇಕಾದುದನ್ನು ಪರಮಾತ್ಮನು ಕಾಲಕಾಲಕ್ಕೆ ಒದಗಿಸುತ್ತಾನೆ. ಆದುದರಿಂದ ಯಾವ ಭೂತಗಳಲ್ಲಿಯೂ ಭೇದಭಾವವನ್ನು ಮಾಡುವುದಿಲ್ಲ.
ಮದ್ಭಕ್ತಿಂ ಮದ್ಭಕ್ತಿ ಲಭತೇ ಪರಾಮ್ – ಮನಸ್ಸು ಏಕಾಗ್ರವಾಗಿ ಪರಮಾತ್ಮನನ್ನು ಧ್ಯಾನಮಾಡುತ್ತಾ ಹೋದ ಹಾಗೆ, ಸಾಧಕನು ತಾನು ಮತ್ತು ಪರಮಾತ್ಮ ಇಬ್ಬರೂ ಒಂದೇ ಎಂದು ತಿಳಿದು ತಾನು ಪರಮಾತ್ಮನಲ್ಲಿ ಲೀನವಾಗಿ ಬಿಡುತ್ತಾನೆ. ಈ ಅನುಭವವು ಸ್ವಲ್ಪೇಕಾಲ ಇದ್ದಾಗ್ಯೂ ಸಹ ಅದರಿಂದ ಅವನು ಪರಮಾತ್ಮನಲ್ಲಿ ಶ್ರೇಷ್ಠವಾದ ಭಕ್ತಿಯನ್ನು ಹೊಂದುತ್ತಾನೆ.

ಭಕ್ತ್ಯಾ ಮಾಮಭಿಜಾನಾತಿ ಯಾವಾನ್ಯಶ್ಚಾಸ್ಮಿ ತತ್ತ್ವತಃ |
ತತೋ ಮಾಂ ತತ್ತ್ವತೋ ಜ್ಞಾತ್ವಾವಿಶತೇ ತದನಂತರಮ್ || 55 ||
ಅರ್ಥ :- ಈ ಭಕ್ತಿಯಿಂದ, ಅವನು, ನಾನು ಯಾರು, ಹೇಗೆ ಎಂಬುದನ್ನು ತತ್ವತಃ ತಿಳಿಯುತ್ತಾನೆ. ಹೀಗೆ ತಿಳಿದುಕೊಂಡು ಅವನು ಪರಮಾತ್ಮನೇ ಆಗಿ ಬಿಡುತ್ತಾನೆ.
ಭಕ್ತ್ಯಾಮಾಮಭಿಜಾನಾತಿ ಪರಮಾತ್ಮನಲ್ಲಿರುವ ಪ್ರೇಮಕ್ಕೆ ಭಕ್ತಿ ಎಂದು ಹೆಸರು. ಸಾಧಕನು ತಾನು ಮತ್ತು ಪರಮಾತ್ಮ ಇಬ್ಬರೂ ಒಂದೇ ಎಂದು ಎಷ್ಟರಮಟ್ಟಿಗೆ ತಾದಾತ್ಮ್ಯವನ್ನು ಹೊಂದಿದ್ದಾನೋ, ಅದರ ಮೇಲೆ, ಅವನಿಗೆ ಪರಮಾತ್ಮನಲ್ಲಿ ಎಷ್ಟು ಭಕ್ತಿ ಇದೆ ಎಂದು ತಿಳಿಯಬೇಕು. ಸಾಧಕನು ತನ್ನ ಅಹಂಕಾರವನ್ನು ಮರೆತು, ಎಲ್ಲವೂ ತನ್ನ ಶರೀರದ ಅವಶ್ಯಕತೆಗಳು ಸಹ, ಪರಮಾತ್ಮನ ಇಷ್ಟದಂತೆಯೇ ನಡೆಯುತ್ತಿವೆ. ಅದರಲ್ಲಿ ತನ್ನದೇನೂ ಇಲ್ಲ. ಅವನ ಸೇವೆ ಮಾಡುವುದಷ್ಟೇ ತನ್ನ ಕರ್ತವ್ಯ ಎಂದು ತಿಳಿಯಹತ್ತಿದರೆ, ಅವನು ಹೆಚ್ಚು ಹೆಚ್ಚು ಆಳವಾಗಿ ಪರಮಾತ್ಮಾನುಭವವನ್ನು ಪಡೆಯುತ್ತಾನೆ. ಆಗ ಅವನು ‘ತಾನು ಯಾರು, ನಾನು ಎಲ್ಲಿಂದ ಬಂದೆ’ ಎಂಬುದನ್ನು ತಿಳಿಯುತ್ತಾನೆ. ಯಾವಾನ್ಯಶ್ಚಾಸ್ಮಿ ತತ್ತ್ವತಃ ಉಪನಿಷತ್ತುಗಳ ಅಧ್ಯಯನದಿಂದ, ಪರಮಾತ್ಮ ಎಂದರೆ ಯಾರು, ಅವನ ಸ್ವರೂಪ ಎಂತಹದು ಎಂಬ ತಾತ್ವಿಕ ಜ್ಞಾನವುಂಟಾಗುತ್ತದೆ. ಹೀಗೆ ಬುದ್ಧಿಯಿಂದ ತಿಳಿದ ಜ್ಞಾನವನ್ನು ಭಕ್ತನು ಅನುಭವಿಸಿ ತಿಳಿಯುತ್ತಾನೆ. ಹೀಗೆ ಅನುಭವವನ್ನು ಹೊಂದಿದ ನಂತರ ವಿಶತೆ ವಿಶತೇ ತದನಂತರಮ್- ಅವನು ಪರಮಾತ್ಮನನ್ನು ಪ್ರವೇಶಿಸುತ್ತಾನೆ. ಅಂದರೆ ತಾನೇ ಪರಮಾತ್ಮ ಎಂಬ ಅನುಭವವನ್ನು ಹೊಂದುತ್ತಾನೆ. ಅವನು ಪರಮಾತ್ಮನನ್ನು ಸೇರುತ್ತಾನೆ ಅಥವಾ ಪ್ರವೇಶಿಸುತ್ತಾನೆ ಎಂದರೆ, ಪರಮಾತ್ಮನು ಇಲ್ಲದಿದ್ದ ಸ್ಥಳವನ್ನು ಬಿಟ್ಟು ಅವನು ಇರುವ ಸ್ಥಳಕ್ಕೆ ಹೋಗುತ್ತಾನೆ ಎಂದರ್ಥವಲ್ಲ. ಕನಸು ಕಾಣುವವನು ಎಚ್ಚರಾದ ಕೂಡಲೇ ತಾನೇ ಎಚ್ಚರಾದವನಾಗುವಂತೆ, ಸಾಧಕನು ಅಹಂಕಾರವನ್ನು ಕಳೆದುಕೊಂಡು ಪರಮಾತ್ಮನ ಜ್ಞಾನವನ್ನು ಪಡೆದ ಕೂಡಲೇ, ತಾನೇ ಪರಮಾತ್ಮನಾಗುತ್ತಾನೆ. ಕನಸು ಕಾಣುವವನು, ‘ತಾನು’ ಕನಸು ಕಾಣುವವರೆಗೂ ಹೇಗೆ ಎಚ್ಚರಾಗುವುದು ಸಾಧ್ಯವಿಲ್ಲವೋ, ಹಾಗೆಯೇ ಸಾಧಕನಲ್ಲಿ ಅಹಂಕಾರವಿರು-ವವರೆಗೂ ಪರಮಾತ್ಮಜ್ಞಾನವಿಲ್ಲ.
ಸರ್ವಕರ್ಮಾಣ್ಯಪಿ ಸದಾ ಕುರ್ವಾಣೋ ಮದ್ವ್ಯಪಾಶ್ರಯಃ |
ಮತ್ಪ್ರಸಾದಾದವಾಪ್ನೋತಿ ಶಾಶ್ವತಂ ಪರಮವ್ಯಯಮ್ || 56 ||
ಅರ್ಥ :- ಎಲ್ಲಾ ಕರ್ಮಗಳನ್ನು ಮಾಡುತ್ತಿರುವಾಗ ನನ್ನಲ್ಲಿ ಶರಣು ಹೋಗು. ನನ್ನ ಅನುಗ್ರಹದಿಂದ ಶಾಶ್ವತವೂ, ಅವ್ಯಯವೂ (ನಾಶರಹಿತ) ಆದ ಆ ಸ್ಥಾನವನ್ನು ಹೊಂದುತ್ತೀಯ.
ಸಾಧಕನ ಸಿದ್ಧಿಗೆ ಅವಶ್ಯಕವಾದ ಇನ್ನೊಂದು ವಿಧಿಯನ್ನು ಇಲ್ಲಿ ತಿಳಿಸಲಾಗಿದೆ. ಅಹಂಕಾರವನ್ನು ಬಿಟ್ಟು ತನ್ನ ಕರ್ತವ್ಯವನ್ನು ಮಾಡುತ್ತಿರುವಾಗ, ಕರ್ಮಫಲವನ್ನು ಪರಮಾತ್ಮನಿಗೆ ಅರ್ಪಿಸುವುದರ ಜೊತೆಗೆ ಕರ್ಮ ಮಾಡುವಾಗಲೆಲ್ಲಾ ಸದಾಕಾಲವೂ ಪರಮಾತ್ಮನ ಚಿಂತನೆಯನ್ನು ಮಾಡುತ್ತಾ, ಮಾನಸಿಕವಾಗಿ ಆತನಿಗೆ ಶರಣು ಹೋಗಿ ಕರ್ಮ ಮಾಡಬೇಕೆಂದೂ, ಈ ರೀತಿ ಕರ್ಮ ಮಾಡಿದರೆ ಪರಮಾತ್ಮನು ಅವನನ್ನು ಅನುಗ್ರಹಿಸುತ್ತಾನೆಂದೂ, ಅದರ ಪರಿಣಾಮವಾಗಿ ಸಾಧಕನು ಪರಮ ಶಾಂತಿಯನ್ನು ಹೊಂದುತ್ತಾನೆಂದೂ ಹೇಳಲಾಗಿದೆ. ಪರಮಾತ್ಮನ ಪ್ರಸಾದ ಎಂದರೆ ಸಾಧಕನಲ್ಲಿ ಅಂತರಿಕವಾಗಿ ಉದಯಿಸುವ ಶುದ್ಧಬುದ್ಧಿ. ಈ ಶುದ್ಧಬುದ್ಧಿ ಇರುವಾಗ ಅದು ಕೂಡಲೇ ಪರಮಾತ್ಮನ ಜ್ಞಾನವನ್ನು ಪಡೆಯುತ್ತದೆ. (ಅ.18 ಶ್ಲೋ. 51 ಸಹ ನೋಡಿರಿ.)
ಇದುವರೆಗಿನ ವಿವರಣೆಯಲ್ಲಿ ಜ್ಞಾನಮಾರ್ಗ, ಭಕ್ತಿಮಾರ್ಗ, ಕರ್ಮಮಾರ್ಗಗಳನ್ನು ಸಂಕ್ಷೇಪವಾಗಿ ಪುನಃ ವರ್ಣಿಸಲಾಯಿತು. ಮದ್ಭಕ್ತಿಂ ಲಭತೇ ತೆ ಪರಾಮ್ (ಅ. 18. ಶ್ಲೋಲ 54). ಮಾಮ್‍ವಿಶತೇ ತದನಂತರಮ್ (ಅ. 18-55) ಆಪ್ನೋತಿ ಶಾಶ್ವತಮ್ ಪದಮವ್ಯಯಮ್ (ಅ. 18-56), ಹೀಗೆ ಮಾರ್ಗಗಳು ಬೇರೆ ಬೇರೆ ಆದಾಗ್ಯೂ ಗುರಿಯು ಮಾತ್ರ ಒಂದೇ ಆಗಿದೆ. ಗೀತೆಯ ಉಪದೇಶದಲ್ಲಿ ಬಾಹ್ಯ ಸಾಧನೆಗೆ ಬೆಲೆಯನ್ನು ಕೊಟ್ಟಾಗ್ಯು, ಆಂತರಿಕ ಮಾನಸಿಕ ಭಾವಕ್ಕೆ ಹಾಗೂ ಅಂತರಂಗದ ಪಾವಿತ್ರ್ಯತೆಗೆ ಹೆಚ್ಚಿನ ಮಹತ್ವವನ್ನು ಕೊಡಲಾಗಿದೆ. ಶರೀರ, ಮನಸ್ಸು, ಬುದ್ಧಿಗಳನ್ನು ಹದಗೊಳಿಸಿ, ಪರಮಾತ್ಮನ ಧ್ಯಾನದ ಕಡೆಗೆ ತಿರುಗಿಸಲು ಭಕ್ತಿ, ಕರ್ಮ, ಮತ್ತು ಜ್ಞಾನ ಎಂಬ ಮೂರ ಮಾರ್ಗಗಳನ್ನು ತೋರಿಸಲಾಗಿದೆ. ಪ್ರತಿಯೊಂದನ್ನೂ ಸ್ವತಂತ್ರವಾಗಿ ಆಚರಿಸಬಹುದಾದಾಗ್ಯೂ, ಇವು ಮೂರನ್ನೂ ನ್ನು ಒಟ್ಟಾಗಿ ಆಚರಸಿದರೆ, ಶರೀರ, ಮನಸ್ಸು, ಬುದ್ಧಿಗಳು ಒಂದೇ ಸಾರಿ ಪರಿಶುದ್ಧವಾಗಿ ಗುರಿಯನ್ನು ಜಾಗ್ರತೆಯಾಗಿ ತಲುಪಬಹುದೆಂಬ ಮಧುರ ಮಾರ್ಗವನ್ನು ಗೀತೆಯು ಉಪದೇಶಿಸಿದೆ.

ಚೇತಸಾ ಸರ್ವಕರ್ಮಾಣಿ ಮಯಿ ಸಂನ್ಯಸ್ಯ ಮತ್ಪರಃ |
ಬುದ್ಧಿಯೋಗಮುಪಾಶ್ರಿತ್ಯ ಮಚ್ಛ್ತಿತಃ ಸತತಂ ಭವ || 57 ||
ಅರ್ಥ :- ಎಲ್ಲಾ ಕರ್ಮಗಳನ್ನೂ ಮಾನಸಿಕವಾಗಿ ನನಗೆ ಅರ್ಪಿಸಿ, ಸಾಧಿಸ ಬೇಕಾದ ಪರಮ ಗುರಿಯು ನಾನೇ ಎಂದು ದೃಢವಾಗಿ ನಂಬಿ, ಬುದ್ಧಿಯೋಗವನ್ನಾಶ್ರಯಿಸಿ, ನಿನ್ನ ಮನಸ್ಸನ್ನು ನನ್ನಲ್ಲಿಯೇ ಸ್ಥಿರಪಡಿಸು
ಅಹಂಕಾರವನ್ನೂ, ಅಹಂಕಾರಜನ್ಯ ಆಸೆಗಳನ್ನೂ ತ್ಯಜಿಸಿ, ತಾನು ಮಾಡುವ ಸರ್ವಕರ್ಮಗಳನ್ನೂ ಪರಮಾತ್ಮನಿಗೆ ಅರ್ಪಿಸಿಬಿಡಬೇಕು. ಇದು ಕರ್ಮಯೋಗದ ಗುಟ್ಟು, ಕರ್ಮಫಲವನ್ನು ತ್ಯಜಿಸಿ ಕರ್ಮ ಮಾಡಿ (ನಿಷ್ಕಾಮ ಕರ್ಮ), ಆ ಕರ್ಮವು ಪರಮಾತ್ಮನ ಸೇವೆ ಎಂದು ಅವನಿಗೆ ಅರ್ಪಿಸುವುದಕ್ಕೆ ‘ಬುದ್ಧಿಯೋಗ’ ಎಂಬ ಹೆಸರನ್ನು ಗೀತೆಯಲ್ಲಿ ಕೊಡಲಾಗಿದೆ. ಇದನ್ನೇ ನಿಷ್ಕಾಮ ಕರ್ಮಯೋಗ ಎಂದು ಸಹ ಕರೆಯಲಾಗಿದೆ. (ಅ.2-39, ಅ-3-30)

ಮಚ್ಚಿತ್ತಃ ಸರ್ವದುರ್ಗಾಣಿ ಮತ್ಪ್ರಸಾದಾತ್ತರಿಷ್ಠಸಿ |
ಅಥ ಚೇತ್ತ್ವಮಹಂಕಾರಾನ್ನ ಶ್ರೋಷ್ಯಸಿ ವಿನಂಕ್ವ್ಯಸಿ || 58 ||
ಅರ್ಥ :- ಈ ರೀತಿಯಾಗಿ ನನ್ನಲ್ಲಿ ಮನಸ್ಸನ್ನು ನಿಲ್ಲಿಸಿದರೆ, ನನ್ನ ಅನುಗ್ರಹದಿಂದ ಎಲ್ಲಾ ಕಷ್ಟಗಳನ್ನು ಸುಲಭವಾಗಿ ದಾಟುತ್ತೀಯೆ. ಒಂದು ವೇಳೆ ಅಹಂಕಾರದಿಂದ ನನ್ನ ಈ ಮಾತನ್ನು ನೀನು ಕೇಳುವುದಿಲ್ಲವಾದರೆ ನೀನು ನಾಶವಾಗುತ್ತೀಯೆ.
ಅರ್ಜುನನಿಗೆ ಈಗ ತೀರ್ಮಾನರೂಪದಲ್ಲಿ ಸರಿಯಾದ ಮಾರ್ಗವನ್ನು ನೇರವಾಗಿ ಬೊಟ್ಟು ಮಾಡಿ ತೋರಿಸುವ ಅವಶ್ಯಕತೆ ಇತ್ತು. ಅದಕ್ಕಾಗಿಯೇ ಇಲ್ಲಿ ತೀರ್ಮಾನ ರೂಪದಲ್ಲಿ ಹೇಳಲಾಗಿದೆ. ಎಲ್ಲಾ ಕರ್ಮಗಳನ್ನು ಮಾಡುವಾಗಲೂ ಮನಸ್ಸು “ನನ್ನಲ್ಲಿ ನೆಲೆಸಿರಲಿ” ಏಕೆಂದರೆ ಪರಮಾತ್ಮನ ಇಷ್ಟದ ವಿನಹ ಯಾವ ಕರ್ಮಗಳೂ ನಡೆಯಲಾರವು ಹೀಗೆ ಮನಸ್ಸಿನಿಂದ ಪರಮಾತ್ಮನ ಚಿಂತನೆಯನ್ನು ಮಾಡುತ್ತಿದ್ದರೆ ಪರಮಾತ್ಮನ ಪ್ರಸಾದದಿಂದ ಶುದ್ಧಬುದ್ಧಿಯನ್ನು ಹೊಂದಿ, ಆಂತರಿಕ ಸ್ಫೂರ್ತಿಗನುಗುಣವಾಗಿ ಕರ್ಮಮಾಡಲು ಸಾಧ್ಯವಾಗುತ್ತದೆ. ಮನಸ್ಸು ಯಾವ ಆತಂಕವನ್ನೂ ಒಡ್ಡುವುದಿಲ್ಲ.
ನಮ್ಮ ನಿತ್ಯ ವ್ಯವಹಾರಗಳಲ್ಲಿ ಬುದ್ಧಿಯು ತಪ್ಪು ತೀರ್ಮಾನವನ್ನು ಕೈಗೊಂಡಾಗ್ಯೆ ನಾವು ತಪ್ಪು ಕಾರ್ಯಗಳನ್ನು ಮಾಡುತ್ತೇವೆ. ಆಂತರಿಕ ಮೈಗೀಯ ಸ್ವಭಾವಗಳ ಪ್ರಭಾವದಿಂದ ನಮ್ಮ ಬುದ್ಧಿಯು ಅನೇಕ ಸಾರಿ ತಪ್ಪು ತೀರ್ಮಾನವನ್ನು ಮಾಡಬಹುದು. ಆದುದರಿಂದ ಸಾಧಕನು, ಭಕ್ತನು, ಈ ಬಗ್ಗೆ ಸದಾ ಜಾಗೃತನಾಗಿರಬೇಕು. ಬುದ್ಧಿಯನ್ನು ಶುದ್ಧಿಗೊಳಿಸಲು, ಜಾಗೃತಗೊಳಿಸಲು, ಪರಮಾತ್ಮನ ಇರುವಿಕೆಯನ್ನು ಸದಾ ಜ್ಞಾಪಕ ಮಾಡಿಕೊಳ್ಳುತ್ತಿರ ಬೇಕು. ಪ್ರತಿಯೊಂದು ಕಾರ್ಯಗಳೂ ಅವನ ಪ್ರೇರಣೆಯಿಂದಲೇ ಸಾಗುತ್ತಿವೆ. ಅವುಗಳ ಹಿಂದೆ ಆತನ ಅನುಗ್ರಹವಿದೆ. ಎಂಬುದನ್ನು ಸೂಕ್ಷ್ಮಬುದ್ಧಿಯಿಂದ ಕಾಣಲು ಪ್ರಯತ್ನಪಡಬೇಕು. ಒಂದು ದೇಶದ ರಾಯಭಾರಿಯು ಬೇರೆ ದೇಶದಲ್ಲಿ ಅಧಿಕಾರದಲ್ಲಿದ್ದಾಗ ತಾನು ತನ್ನ ದೇಶವನ್ನೂ ದೇಶದ ಹಿತವನ್ನೂ ಮರೆಯದೇ ಪ್ರತಿಯೊಂದು ವಿಷಯದಲ್ಲಿಯೂ, ತನ್ನ ದೇಶದ ಪರವಾಗಿ ವರ್ತಿಸುವಂತೆ, ಭಕ್ತನು ಈ ಶರೀರದಲ್ಲಿರುವಾಗ ತಾನು ಪರಮಾತ್ಮನ “ದೂತ”ನು, “ರಾಯಭಾರಿಯು” ಎಂದು ತಿಳಿದು ಸವಕರ್ಮಗಳನ್ನು ಪರಮಾತ್ಮನ ಕರ್ಮಗಳೆಂದು ಆಚರಿಸಬೇಕು.
ಪರಮಾತ್ಮನನ್ನು ಸತತವಾಗಿ ಜ್ಞಾಪಿಸಿಕೊಳ್ಳುತ್ತಿದ್ದರೆ ಅವನ ಪ್ರಸಾದವು ಹೇಗೆ ದೊರೆಯುತ್ತದೆ ಎಂಬುದನ್ನು ಶ್ರೀಕೃಷ್ಣನು ಇಲ್ಲಿ ವರ್ಣಿಸಿದ್ದಾನೆ. ನಮಗೆ ಒದಗುವ ಬಹುಶಃ ಪ್ರತಿಯೊಂದು ವಿಘ್ನಗಳು ಕಾಲ್ಪನಿಕವಾದವುಗಳು, ನಮ್ಮ ಮನಸ್ಸಿನಲ್ಲಿ ಉದ್ಭವಿಸಿದ ಕಾಲ್ಪನಿಕ ಕಾತರ ಹಾಗೂ ಭಯ ಜನ್ಯವಾದವುಗಳಾಗಿವೆ. ಪರಮಾತ್ಮನ ಪ್ರಸಾದ ಎಂದರೆ ನಮ್ಮ ಮನಸ್ಸನ್ನು ಏಕಾಗ್ರಮಾಡಿ ಪರಮಾತ್ಮನ ಧ್ಯಾನದಲ್ಲಿ ನಿಲ್ಲಸಿದಾಗ ಲಭಿಸುವ ಮಾನಸಿಕ ಶಾಂತಿ ದಯಾಳುವಾದ ಪರಮಾತ್ಮನು ತನ್ನ ಭಕ್ತರಿಗೆ ಯಾವಾಗಲೂ ವಿಶೇಷ ರಿಯಾಯಿತಿಯನ್ನು ಇಲ್ಲವೇ ವಿಶೇಷ ಕರುಣೆಯನ್ನು ತೋರುತ್ತಾನೆಂದು ಅರ್ಥವಲ್ಲ. ಪರಮಾತ್ಮನ ಕರುಣೆಯ ಸದಾಕಾಲವೂ ಸರ್ವೆಡೆಯಲ್ಲಿಯೂ ವ್ಯಾಪ್ತವಾಗಿದೆ. ಆ ಕರುಣೆಯನ್ನು ಗ್ರಹಿಸುವ, ಸ್ವೀಕರಿಸುವ, ಶಕ್ತಿ ಯಾರ್ಯಾರಿಗಿದೆಯೋ ಅವರೆಲ್ಲರಿಗೂ ಅದು ಲಭಿಸುತ್ತವೆ. ಸೂರ್ಯನ ಬೆಳಕು ಇಡೀ ಪ್ರಪಂಚವನ್ನೇ ಬೆಳಗುತ್ತದೆ. ನಾವು ಮನೆಯ ಕಿಟಕಿಯನ್ನು ಮುಚ್ಚಿಕೊಂಡು ಮನೆಯ ಒಳಗಡೆ ಕುಳಿತಿದ್ದರೆ, ಸೂರ್ಯನ ಬೆಳಕು ನಮಗೆ ಸಿಗಲಾರದು. ಯಾರ್ಯಾರು ತಮ್ಮ ಮನೆಯ ಕಿಟಕಿಗಳನ್ನೂ ತೆರೆದು ಸೂರ್ಯನ ಬೆಳಕನ್ನು ಸ್ವಾಗತಿಸುತ್ತಾರೋ, ಅವರೆಲ್ಲರಿಗೂ ಆಯಾಯಾ ಪ್ರಮಾಣದಲ್ಲಿ ಬೆಳಕು ಸಿಗುತ್ತದೆ. ಸೂರ್ಯನು ಇವರ ಮೇಲೆ ವಿಶೇಷ ‘ಪ್ರಸಾದ’ವನ್ನು ಮಾಡಿದನು ಎಂದು ಇದರ ಅರ್ಥವಾಗುವುದಿಲ್ಲ. ಎಲ್ಲರ ಮೇಲೂ ಅವನ ಪ್ರಸಾದವಿದೆ. ಬೇಡವೆಂದು ಅಡಗಿ ಕುಳಿತವರಿಗೆ ಅದು ಸಿಗಲಿಲ್ಲ. ಬೇಕೆಂದು ಸ್ವಾಗತಿಸಿದವರಿಗೆ ಅದು ಸಿಕ್ಕಿತು. ಇದರಂತೆಯೇ ಪರಮಾತ್ಮನನ್ನು ಸದಾಕಾಲವೂ ಜ್ಞಾಪಿಸಿಕೊಳ್ಳುತ್ತಿರುವ ಮೂಲಕ ನಮ್ಮ ಹೃದಯದ ಬಾಗಿಲನ್ನು ತೆರೆದಿಟ್ಟರೆ ಪರಮಾತ್ಮನ ‘ಪ್ರಸಾದ’ವು ಹೃದಯದೊಳಕ್ಕೆ ಪ್ರವೇಶಿಸುತ್ತದೆ. ನಾವಾಗಿಯೇ ಈ ಬಾಗಿಲನ್ನು ಮುಚ್ಚಿಟ್ಟು ಅವಿತುಕೊಂಡರೆ ಅದು ದೊರೆಯುವುದಿಲ್ಲ. ಈ ರೀತಿಯಾಗಿ ಸಾಧನೆ ಮಾಡಿದಂತೆಲ್ಲಾ ಪರಮಾತ್ಮನ ‘ಪ್ರಸಾದ’ವು ಹೆಚ್ಚು ಹೆಚ್ಚು ಲಭಿಸುತ್ತಾ ಹೋಗುತ್ತದೆ.
ಪರಮಾತ್ಮನನ್ನು ಹೀಗೆ ಪದೇಪದೇ ಜ್ಞಾಪಿಸಿಕೊಳ್ಳುತ್ತಿರುವುದರಿಂದ ನಮ್ಮ ಆಂತರಿಕ ಶಕ್ತಿಯು ಜಾಗೃತವಾಗುತ್ತದೆ, ಮತ್ತು ಬಲಯುತವಾಗುತ್ತದೆ. ಅಂತೆಯೇ ವಿಷಯ ಸುಖಗಳ ಅಭಿಲಾಷೆ ಮತ್ತು ಇತರೆ ಎಲ್ಲಾ ದುರ್ಗುಣಗಳ ಹಾಗೂ ದೌರ್ಬಲ್ಯಗಳ ಕಸುವು ಕಡಿಮೆಯಾಗುತ್ತದೆ. ಮೃಗೀಯ ಗುಣಗಳು ಅಡಗುತ್ತವೆ, ಸದ್ಗುಣಗಳು ವೃದ್ಧಿಯಾಗುತ್ತವೆ. ಈಗ ಭಕ್ತನು ತಾನು ಪುಟಕೊಟ್ಟ ಬಂಗಾರದಂತೆ ಪ್ರಭೆಯಿಂದ ಕೂಡಿ ಶಕ್ತಿಯುತನಾದವನಾಗುತ್ತಾನೆ.
ಪರಮಾತ್ಮನು, ಇದೇ ಉಸುರಿನಲ್ಲಿ ಒಂದು ಎಚ್ಚರಿಕೆಯನ್ನೂ ಸಹ ಕೊಟ್ಟಿದ್ದಾನೆ. “ನನ್ನ ಮಾತನ್ನು ಅಹಂಕಾರದಿಂದ ಕೇಳದಿದ್ದರೆ ನಾಶವಾಗುತ್ತೀಯ” ಇದು ಪರಮಾತ್ಮನು ಅರ್ಜುನನ್ನು ಇಲ್ಲವೆ ಭಕ್ತರನ್ನು ಹೆದರಿಸಲು ಹೇಳಿದ ಮಾತಲ್ಲ, ಅಥವಾ ಧರ್ಮಶಾಸ್ತ್ರವು ಪ್ರತಿಯೊಬ್ಬರೂ ತನ್ನ ಕಟ್ಟಳೆಯಂತೆ ನಡೆಯಲಿ ಎಂದು ಬೀರಿದ ಬೆದರಿಕೆಯೂ ಅಲ್ಲ ಅಥವಾ ಭಕ್ತನಿಗೆ ತೋರಿಸುವ ನರಕದ ಭೀತಿಯೂ ಅಲ.್ಲ ಆದರೆ ಇದು ಸತ್ಯ ಸ್ಥಿತಿಯನ್ನು ಸ್ಪಷ್ಟವಾಗಿ ತೆರೆದಿಟ್ಟದ್ದಾಗಿದೆ. ದಾರಿಹೋಕನಿಗೆ ಮುಂದೆ ಸಿಗುವ ಎರಡು ಕವಲು ದಾರಿಗಳನ್ನು ತೋರಿಸಿ, ಒಂದು ದಾರಿಯಿಂದ ಹೋದರೆ ಗುರಿಯನ್ನು ಸುಗಮವಾಗಿ ಮುಟ್ಟಬಹುದೆಂದೂ ಇನ್ನೊಂದು ದಾರಿಯು ವಿಘ್ನಗಳಿಂದ ಕೂಡಿದ್ದಾಗಿದ್ದು, ಮುಂದೆ ಅದು ಒಂದು ಕಂದಕಕ್ಕೆ ಕರೆದುಕೊಂಡು ಹೋಗುತ್ತವೆಂದೂ, ಕರುಣೆಯಿಂದ ಮುಂಚಿತವಾಗಿ ಸೂಚಿಸಿದ್ದಾಗಿದೆ. ಇದರಂತೆಯೇ, ಪರಮಾತ್ಮನು ಬಿಡುಗಡೆಯ ಹಾಗೂ ಬಂಧನದ ಎರಡೂ ದಾರಿಗಳನ್ನು ತೋರಿಸಿದ್ದಾನೆ. ಆಂತರಿಕವಾದ ಮೃಗೀಯ ವಾಸನೆಗಳೇ ಬಲವಾಗಿರುವವನಿಗೆ ಇಂತಹ ಉಪದೇಶಗಳು ಹಿಡಿಸುವುದಿಲ್ಲ. ಅವನು ಅಹಂಕಾರಯುತವಾಗಿ ಧರ್ಮ, ನೀತಿಗಳನ್ನು ತುಳಿದು, ತನ್ನ ಇಂದ್ರಿಯ ಸುಖಗಳನ್ನೇ ಬಯಸುತ್ತಾನೆ. ಇಂತಹವನು ಅದಕ್ಕನುಗುಣವಾದ ಫಲವನ್ನೇ ಅನುಭವಿಸಬೇಕಾದುದು ಪ್ರಕೃತಿಯು ನಿಯಮ.

ಯದಹಂಕಾರಮಾಶ್ರಿತ್ಯ ನ ಯೋತ್ಸ್ಯ ಇದಿ ಮನ್ಯಸೇ |
ಮಿಥ್ಥೈಷ ವ್ಯವಸಾಯಸ್ತೇ ಪ್ರಕೃತಿಸ್ತ್ವಾಂ ನಿಯೋ ಕ್ಷಸಿ ಕ್ತø ಕ್ಷಸಿ ತಿ || 59 ||
ಅರ್ಥ :- ನೀನು ಅಹಂಕಾರದಿಂದ ಕೂಡಿ, ‘ನಾನು ಯುದ್ಧ ಮಾಡುವುದಿಲ್ಲ’ ಎಂದು ತೀರ್ಮಾನ ಮಾಡುವುದಾದರೆ, ನಿನ್ನ ನಿಶ್ಚಯವು ಉಪಯೋಗವಿಲ್ಲದ್ದಾಗುತ್ತದೆ. ಏಕೆಂದರೆ ನಿನ್ನ ಸ್ವಾಭಾವಿಕ ಪ್ರಕೃತಿಯು ನಿನ್ನಿಂದ ಯುದ್ಧಮಾಡಿಸಿಯೇ ಬಿಡುತ್ತದೆ.
ಇದುವರೆಗೆ ಕೇಳಿದ ವೇದಾಂತ ತತ್ವವನ್ನು ಶ್ರೀಕೃಷ್ಣನು ಈಗ ನೇರವಾಗಿ ಅರ್ಜುನನಿಗೆ ಹೋಲಿಸಿ ಹೇಳುತ್ತಿದ್ದಾನೆ. ಪ್ರತಿಯೊಂದು ತತ್ವಗಳನ್ನು ಸಂಬಂಧವಿರುವಲ್ಲೆಲ್ಲಾ ನಮ್ಮ ಜೀವನದೊಡನೆ ಹೋಲಿಸಿಕೊಂಡರೆ ಅವು ನಮಗೆ ಹೆಚ್ಚು ಸ್ಪಷ್ಟವಾಗಿ ಅರ್ಥವಾಗುತ್ತವೆ. ಅದೇ ರೀತಿ ಇಲ್ಲಿ ಅರ್ಜುನನಿಗೆ ನೇರವಾಗಿ ಹೇಳಲಾಗಿದೆ. ಅರ್ಜುನನು ಅವನ ಸ್ವಭಾವಗಳಿಗನುಸಾವಾಗಿ ಕ್ಷತ್ರಿಯನಾದುದರಿಂದ, ಯುದ್ಧಮಾಡುವುದಿಲ್ಲ. ಎಂಬ ಅವನ ಈಗಿನ ನಿರ್ಣಯವು ಕ್ಷಣಿಕವಾದುದು, ತಾತ್ಕಾಲಿಕವಾದುದು. ಯುದ್ಧದ ಕಾವು ಏರಿದಂತೆ, ಅವನ ಕ್ಷಾತ್ರತೇಜವು ಉಕ್ಕೇರಿ, ಮೇಲಕ್ಕೆದ್ದು ಬಂದು, ಅವನಿಗೆ ತಿಳಿಯದಂತೆಯೇ, ಅವನು ಯುದ್ಧ ಮಾಡಲು ಉದ್ಯುಕ್ತನಾಗುವಂತೆ ಮಾಡುತ್ತದೆ.

ಸ್ವಭಾವಜೇನ ಕೌಂತೇಯ ನಿಬದ್ಧಃ ಸ್ವೇನ ಕರ್ಮಣಾ |
ಕರ್ತುಂ ನೇಚ್ಛಸಿ ಯನ್ಮೋಹಾತ್ಕರಿಷ್ಯಸ್ಯವಶೋ„ಪಿ ತತ್ || 60 ||
ಅರ್ಥ :- ಕೌಂತೇಯನೇ, ನಿನ್ನ ಹಿಂದಿನ ಜನ್ಮದ ಕರ್ಮಕ್ಕನುಗುಣವಾದ ಸ್ವಭಾವದಿಂದ (ಗುಣ) ಕೂಡಿದವನಾದ ನೀನು, ಮೋಹದಿಂದ ಯುದ್ಧ ಮಾಡುವುದಿಲ್ಲ ಎಂದು ಇಚ್ಛಿಸಿದಾಗ್ಯೂ, ಸ್ವಭಾವವು ನಿನ್ನಿಂದ ಆ ಕಾರ್ಯವನ್ನು ಮಾಡಿಸಿಯೇ ಬಿಡುತ್ತದೆ.
ಪ್ರತಿಯೊಬ್ಬನೂ ತನ್ನಲ್ಲಿ ಸ್ವಭಾವವಾಗಿ ಬಂದಿರುವ ಸತ್ವ, ರಜ, ತಮೋಗುಣಗಳಿಗೆ ಅನುಸಾರವಾಗಿ ಕರ್ಮಮಾಡುತ್ತಾನೆ. ಅದನ್ನೇ ಪುನಃ ಹೇಳಲಾಗಿದೆ. ಅರ್ಜುನನು ರಜೋಗುಣದವನು. ಗುಣಕರ್ಮ ವಿಭಾಗ ದೃಷ್ಟಿಯಿಂದ ಅವನು ಕ್ಷತ್ರಿಯನು, ಯುದ್ಧ ಮಾಡುವುದು ಅವನ ಸ್ವಾಭಾವಿಕ ಕರ್ಮವಾಗಿದೆ. ಇವನಲ್ಲಿ ಉತ್ಪನ್ನವಾಗಿರುವ ಕನಿಕರವು ತಾತ್ಕಾಲಿಕವಾದುದು, ಅಜ್ಞಾನಜನ್ಯವಾದುದು, ಅವನು ಸಾತ್ವಿಕ ಗುಣದವನಂತೆ ಯುದ್ಧದಿಂದ ಹಿಮ್ಮೆಟ್ಟಿ ಧ್ಯಾನಮಗ್ನನಾಗಲಾರನು. ಏಕೆಂದರೆ ಅವನಲ್ಲಿರುವ ರಜೋಗುಣವು ಇದಕ್ಕೆ ಅನುಕೂಲವಾಗಿಲ್ಲ. ಈಗ ಅವನು ಯುದ್ಧ ಮಾಡುವುದಿಲ್ಲ ಎಂದು ಹೇಳಿದಾಗ್ಯೂ ಅವನಲ್ಲಿರುವ ರಜೋಗುಣವು ಕ್ಷಾತ್ರವೃತ್ತಿಯನ್ನು ಹೆಚ್ಚು ಕಾಲ ಸಹಿಸುವುದಿಲ್ಲ. ಸ್ವಲ್ಪಕಾಲದ ನಂತರ ಅವನಿಗೇ ತಿಳಿಯದಂತೆ ಅವನನ್ನು ಯುದ್ಧ ಪ್ರವೃತ್ತನನ್ನಾಗಿ ಮಾಡಿಯೇ ಬಿಡುತ್ತದೆ. ಶತ್ರುಗಳು ಆಕ್ರಮಣವನ್ನು ಪ್ರಾರಂಭಿಸಿ ಹತ್ಯಾಕಾಂಡವನ್ನು ಪ್ರಾರಂಭಿಸಿದರೆ ಸಾಕು, ಅವನಿಗೆ ತಿಳಿಯದಂತೆಯೇ ಅವನು ಯುದ್ಧರಂಗಕ್ಕಿಳಿಯುತ್ತಾನೆ. ಇದು ಸ್ವಾಭಾವಿಕವಾದುದು.

ಈಶ್ವರ ಸರ್ವಭೂತಾನಾಂ ಹೃದ್ಧೇಶೇ„ರ್ಜುನ ತಿಷ್ಠತಿ |
ಭ್ರಾಮಯನ್ಸರ್ವಭೂತಾನಿ ಯಂತ್ರಾರೂಢಾನಿ ಮಾಯಯಾ || 61 ||
ಅರ್ಥ :- ಪರಮಾತ್ಮನು ಪ್ರತಿಯೊಂದು ಜೀವಿಗಳ ಹೃದಯದಲ್ಲಿಯೂ ನೆಲೆಸಿದ್ದಾನೆ. ಅರ್ಜುನನೇ, ಅವನು ತನ್ನ ಮಾಯೆಯಿಂದ ಎಲ್ಲಾ ಜೀವಿಗಳೂ, ಚಕ್ರದ ಮೇಲಿನ ಮಡಿಕೆಗಳಂತೆ, ತಿರುಗುವಂತೆ ಮಾಡುತ್ತಾನೆ.
ಈ ಹಿಂದೆ ಪರಮಾತ್ಮನನ್ನು ಸದಾಕಾಲವೂ ಜ್ಞಾಪಿಸಿಕೊಳ್ಳುತ್ತಿರಬೇಕೆಂದು ಹೇಳಿ, ಅದನ್ನು ಹೇಗೆ ಸಾಧಿಸಬೇಕೆಂಬ ವಿವರವನ್ನು ಇಲ್ಲಿ ಹೇಳಲಾಗಿದೆ. ಪರಮಾತ್ಮನು ಪ್ರಪಂಚದಲ್ಲಿರುವ ಎಲ್ಲಾ ವಸ್ತುಗಳ ಸೃಷ್ಟಿ, ಇರುವಿಕೆ, ಚಲನವಲನಾದಿಗಳಿಗೆ ಕಾರಣನಾಗಿದ್ದಾನೆಂದೂ, ಪ್ರತಿಯೊಂದೂ ಆತನ ಇಷ್ಟದಂತೆ ನಡೆಯುತ್ತದೆಂದೂ, ತಿಳಿದುಕೊಂಡು; ಹೆಜ್ಜೆ ಹೆಜ್ಜೆಗೂ, ಪ್ರತಿಯೊಂದು ವಸ್ತುವಿನಲ್ಲಿ ಹಾಗೂ ಅವುಗಳ ಚಲನವಲನಾದಿಗಳಲ್ಲಿ ಪರಮಾತ್ಮನು ಇರುವುದನ್ನು ಕಾಣಲು, ಅವನ ಜ್ಞಾಪಕ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಅವನ ಇರುವಿಕೆ ಯಿಂದ ಸರ್ವ ಚಲನವಲನಾದಿಗಳು ನಡೆಯುವುದರಿಂದ ಅವನನ್ನು ‘ಈಶ್ವರ’ನೆಂದು ತಿಳಿಯಬೇಕು. ಪರಮಾತ್ಮನು ಸರ್ವರ ಹೃದಯದಲ್ಲಿಯೂ ಇದ್ದುಕೊಂಡು, ಅವರ ಮುಖಾಂತರ ಎಲ್ಲಾ ಚಲನವಲನಗಳನ್ನು ಮಾಡುತ್ತಾನೆಂದು ತಿಳಿಯಬೇಕು.

ತಮೇವ ಶರಣಂ ಗಚ್ಛ ಸರ್ವಭಾವೇನ ಭಾರತ |
ತತ್ಪ್ರಸಾದಾತ್ಪರಾಂ ಶಾಂತಿಂ ಸ್ಥಾನಂ ಪ್ರಾಪ್ಸ್ಯಸಿಶಾಶ್ವತಮ್ || 62 ||
ಅರ್ಥ :- ಭಾರತನೇ, ನಿನ್ನ ಸಂಪೂರ್ಣ ಮನಸ್ಸು ಬುದ್ಧಿಗಳನ್ನು ಅರ್ಪಿಸಿ, ಅವನಿಗೇ ಶರಣು ಹೋಗು. ಅವನ ಅನುಗ್ರಹದಿಂದ ನೀನು ಪರಮಶಾಂತಿಯನ್ನೂ, ಶಾಶ್ವತ ಸ್ಥಾನವನ್ನೂ ಸೇರುತ್ತೀಯೆ. ಮನುಷ್ಯನ ಎಲ್ಲಾ ದುಃಖಗಳಿಗೆ ಹಾಗೂ ದೌರ್ಬಲ್ಯಗಳಿಗೆ ಅಹಂಕಾರವು ಕಾರಣವಾಗಿದೆ. ಆದುದರಿಂದ ಅಹಂಕಾರವನ್ನು ಬಿಟ್ಟು, ಸರ್ವಾರ್ಪಣ ಬುದ್ಧಿಯಿಂದ ಪರಮಾತ್ಮನಿಗೆ ಶರಣು ಹೋಗಬೇಕೆಂದು ಹೇಳಲಾಗಿದೆ ಅಹಂಕಾರವನ್ನು ತ್ಯಜಿಸುವುದು ಸಿದ್ಧಿಯನ್ನೂ ಪಡೆಯಲು ಅವಶ್ಯಕವಾದುದರಿಂದ, ಇದನ್ನು ತ್ಯಜಿಸಬೇಕೆಂದು ಗೀತೆಲ್ಲಿ ಪದೇ ಪದೇ ಬೇರೆ ಬೇರೆ ರೀತಿಯಲ್ಲಿ ಹೇಳಲಾಗಿದೆ. ಪ್ರತಿಯೊಬ್ಬನೂ, ತನ್ನ ಹೃದಯದಲ್ಲಿ ನೆಲೆಸಿರುವ, ತನ್ನ ಎಲ್ಲಾ ಚೇತನಗಳಿಗೂ, ಇದುವರೆಗೂ ಇರುವಿಕೆ ಗೂ ಕಾರಣವಾದ, ಅಖಂಡನೂ, ಅವ್ಯಕ್ತನೂ, ಸರ್ವವ್ಯಾಪಿಯೂ ಆದ ಪರಮಾತ್ಮನಿಗೆ ಶರಣು ಹೋಗಬೇಕೆಂದು ತಿಳಿಸಲಾಗಿದೆ. ಪರಮಾತ್ಮನ ಅನುಗ್ರಹವನ್ನು ಸ್ವೀಕರಿಸಲು, ಅಹಂಕಾರ ತ್ಯಾಗದ ಮೂಲಕ ಅವನಲ್ಲಿ ಶರಣು ಹೋಗಿ ನಮ್ಮ ಹೃದಯ ದ ಕವಾಟವನ್ನು ತೆರೆದರೆ, ಅಖಂಡವಾಗಿ ವ್ಯಾಪ್ತವಾಗಿರುವ ಅವನ ಅನುಗ್ರಹವು (ಪ್ರಸಾದ) ನಮ್ಮ ಹೃದಯವನ್ನು ಪ್ರವೇಶಿಸುತ್ತದೆ. ಅದರಿಂದ ಮನಃಶಾಂತಿಯು ಲಭಿಸಿ, ತಾನೇ ಪರಮಾತ್ಮನು ಎಂಬ ಅಖಂಡ ಜ್ಞಾನವುಂಟಾಗುತ್ತದೆ. ಇದೇ ಜೀವನದ ಪರಮಗುರಿಯಾಗಿದೆ.

ಇತಿ ತೇ ಜ್ಞಾನಾಮಾಖ್ಯಾತಂ ಗುಹ್ಯಾದ್ಗುಹ್ಯತರಂ ಮಯಾ |
ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾ ಕುರು || 63 ||
ಅರ್ಥ :- ಈ ರೀತಿಯಾಗಿ ಅತಿಯಾಗಿ ಗುಟ್ಟಾಗಿರುವ ಈ ಆತ್ಮಜ್ಞಾನವು ನನ್ನಿಂದ ನಿನಗೆ ಬೋಧಿಸಲ್ಪಟ್ಟಿತು. ಅದನ್ನು ಸಂಪೂರ್ಣವಾಗಿ ವಿಮರ್ಶೆಮಾಡಿ, ನಿನಗೆ ಸೂಕ್ತ ಕಂಡಂತೆ ಮಾಡು.
ಈ ರೀತಿಯಾಗಿ ಶ್ರೀಕೃಷ್ಣನು ತನ್ನ ಉಪದೇಶವನ್ನು ಮುಗಿಸಿ; ತನಗೆ ಯೋಗ್ಯಕಂಡಂತೆ ತೀರ್ಮಾನಮಾಡಿ ಅಂದರೆ ಯುದ್ಧ ಮಾಡಬೇಕೋ, ಬೇಡವೋ ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯವನ್ನು ಅರ್ಜುನನಿಗೇ ಬಿಟ್ಟಿದ್ದಾನೆ. ಇದು ಗೀತೆಯಂ ಕೊನೆಯ ಶ್ಲೋಕ ಎಂದು ಪರಿಗಣಿಸಬಹುದು. ಏಕೆಂದರೆ ಗ್ರಂಥದ ಕೊನೆಯ ಶ್ಲೋಕದಲ್ಲಿ “ಇತಿ” ಎಂದು ಹೇಳುವ ಸಂಪ್ರದಾಯವಿದೆ. ಈ ಶ್ಲೋಕದಲ್ಲಿ ಸಹ ಈ ಶಬ್ದವನ್ನುಪಯೋಗಿಸಲಾಗಿದೆ. ಜ್ಞಾನವನ್ನು ಓದಿ ತಿಳಿದುಕೊಂಡರೆ ಸಾಲದು. ಅದನ್ನು ಬುದ್ಧಿಯ ವಶಕ್ಕೆ ಒಪ್ಪಿಸಿ, ಸಂಪೂರ್ಣ ವಿಚಾರಮಾಡಿ, ನಂತರ ಸೂಕ್ತವೆಂದು ಕಂಡರೆ ಒಪ್ಪಿಕೊಳ್ಳಬೇಕು. ಇದಕ್ಕೆ ಜ್ಞಾನದಿಂದ ಲಭಿಸಿದ ಬುದ್ಧಿವಂತಿಕೆ ಎನ್ನಬಹುದು. ಶ್ರೀಕೃಷ್ಣನು ಹೇಳಿದ್ದಾನೆಂದು ಅರ್ಜುನನು ಒಪ್ಪಕೂಡದೆಂಬುದನ್ನೂ, ಹಿಂದೂ ಧರ್ಮದಲ್ಲಿ ಹೀಗೆಯೇ ಮಾಡಬೇಕೆಂಬ ಯಾವ ಧಾರ್ಮಿಕ ಬಲಾತ್ಕಾರ ಅಥವಾ ಒತ್ತಾಯವಿಲ್ಲವೆಂಬುದನ್ನೂ ತಿಳಿಸುವುದಕ್ಕಾಗಿ ಆಖೈರು ತೀರ್ಮಾನವನ್ನು ಮಾಡುವ ಸ್ವಾತಂತ್ರ್ಯವನ್ನು ಶ್ರೀಕೃಷ್ಣನು ಅರ್ಜುನನಿಗೆ ಬಿಟ್ಟಿದ್ದಾನೆ. ಇದು ಹಿಂದೂ ಧರ್ಮದ ವೈಶಿಷ್ಟ್ಯ.
ಮಹಾಭಾರತ ಯುದ್ಧದಲ್ಲಿ ಶ್ರೀಕೃಷ್ಣನು ಕೇವಲ ಸಾರಥಿ. ಅರ್ಜುನನು ಇಷ್ಟಪಟ್ಟಂತೆ ರಥವನ್ನು ನಡೆಸುವುದಷ್ಟೇ ಅವನ ಕೆಲಸ. ಯುದ್ಧದಿಂದ ಅವನು ಸ್ವತಃ ಗಳಿಸಬೇಕಾದು ಏನೂ ದೇನೂ ಇರಲಿಲ್ಲ. ಆದಾಗ್ಯೂ ತನ್ನ ಯಜಮಾನನು ಅಜ್ಞಾನದಿಂದ ಆವೃತನಾಗಿ ಮಾನಸಿಕ ಅಶಾಂತಿ ಹಾಗೂ ಅಧೈರ್ಯಗಳಿಂದ ದಿಕ್ಕು ತೋಚದೆ ಭ್ರಾಂತನಾಗಿ ಯುದ್ಧಮಾಡುವುದಿಲ್ಲವೆಂದು ನಿರ್ಧರಿಸಿದಾಗ್ಯೆ, ಅವನ ತಪ್ಪುಗಳನ್ನು ಅವನಿಗೆ ತೋರಿಸುವುದು, ತನ್ನ ಕರ್ತವ್ಯವೆಂದು ಬಗೆದು, ಶ್ರೀಕೃಷ್ಣನು ಗೀತೆಯನ್ನು ಉಪದೇಶಿಸಿ, ಅರ್ಜುನನ್ನು ಪರಿವರ್ತಿಸಿ, ತನ್ನ ಶಿಷ್ಯನನ್ನಾಗಿ ಮಾಡಿಕೊಂಡನು, ಆದಾಗ್ಯೂ ಅರ್ಜುನನು ಹೀಗೆಯೇ ಮಾಡಬೇಕೆಂದು ಒತ್ತಾಯಪಡಿಸದೆ, ಅವನೇ ವಿಚಾರಮಾಡಿ, ಸೂಕ್ತ ಕಂಡಂತೆ ಮಾಡಬಹುದೆಂಬ ಸ್ವಾತಂತ್ರ್ಯವನ್ನು ಅರ್ಜುನನಿಗೆ ಕೊಟ್ಟಿರುವುದನ್ನು ಗಮನಿಸಬೇಕು.

ಸರ್ವಗುಹ್ಯತಮಂ ಭೂಯಃ ಶೃಣು ಮೇ ಪರಮಂ ವಚಃ |
ಇಷ್ಟೋ„ಸಿ ಮೇ ದೃಢಮಿತಿ ತತೋ ವಕ್ತ್ಯಾಮಿ ತೇ ಹಿತಮ್ ||64 ||
ಅರ್ಥ :- ಅತಿಗುಹ್ಯತರವಾದ ನನ್ನ ಈ ಶ್ರೇಷ್ಠವಾದ ಮಾತುಗಳನ್ನು ಕೇಳು ನೀನು ನನಗೆ ಪ್ರಿಯನಾದುದರಿಂದ ನಿನಗೆ ಹಿತವಾದುದನ್ನೇ ಹೇಳುತ್ತೇನೆ.
ಶ್ರೀಕೃಷ್ಣನು ತನ್ನ ಉಪದೇಶವನ್ನು ಮುಗಿಸಿ, ಅರ್ಜುನನು ವಿಚಾರಮಾಡಿ ತನಗೆ ಇಷ್ಟಬಂದಂತೆ ವರ್ತಿ ಸ ಬಹುದಂತೆ ಸಿದಂತೆ ಹೇಳಿದ ಮೇಲೆ, ಅರ್ಜುನನ ಮುಖದ ಮೇಲೆ ಇನ್ನೂ ಸಂಶಯವು ವ್ಯಕ್ತಪಟ್ಟಿತು. ಅವನು ಈ ಬೋಧವನ್ನು ಇನ್ನೂ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಿಲ್ಲವೆಂಬುದನ್ನು ಕಂಡು, ಶ್ರೀಕೃಷ್ಣನು, ಇನ್ನೂ ಸ್ಪಷ್ಟವಾಕ್ಯದಲ್ಲಿ ಹೇಳಬೇಕೆಂದು ಬಯಸಿ, “ನನ್ನ ಈ ಶ್ರೇಷ್ಠವಾದ ಮಾತುಗಳನ್ನು ಕೇಳು” ಎಂದು ಹೇಳಿದ್ದಾನೆ. ಕಠೋಪನಿಷತ್ತಿನಲ್ಲಿ ಸಹ ಇಂತಹ ಸಂದರ್ಭ ಬಂದಿದೆ. ಧರ್ಮರಾಜನು ನಚಿಕೇತನಿಗೆ ಉಪದೇಶ ಮಾಡಿ ಪೂರೈಸಿದ ನಂತರ, ಶಿಷ್ಯನು ತನಗೆ ಬ್ರಹ್ಮನ ವಿಷಯಜ್ಞಾನವನ್ನು ಬೋಧಿಸಬೇಕೆಂದು ಕೇಳುತ್ತಾನೆ. ಈ ವಿವರಗಳನ್ನು ಧರ್ಮರಾಜನು ಮೊದಲೇ ತಿಳಿಸಿದಾಗ್ಯೂ, ಈ ಜ್ಞಾನವನ್ನು ಸಾಧಿಸಲು ಶಿಷ್ಯನು ಅನುಸರಿಸಬೇಕಾದ ನಿಯಮಗಳ ಬಗ್ಗೆ ಮುಂದೆ ಪುನಃ ಕೆಲವು ಶ್ಲೋಕಗಳಲ್ಲಿ ವಿವರಗಳನ್ನು ತಿಳಿಸಿದ್ದಾನೆ. ಶ್ರೀಕೃಷ್ಣನು ಸಹ ಅರ್ಜುನನ ಮೇಲಿನ ಪ್ರೇಮದಿಂದ ಹೀಗೆಯೇ ಮಾಡಿದ್ದಾನೆ.

ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು |
ಮಾಮೇವೈಪ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋ„ಸಿ ಮೇ || 65 ||
ಅರ್ಥ :- ನಿನ್ನ ಮನಸ್ಸನ್ನು ನನ್ನಲ್ಲಿ ಏಕಾಗ್ರಮಾಡಿ ನಿಲ್ಲಿಸು, ನನ್ನಲ್ಲಿ ಭಕ್ತಿಯನ್ನಿಡು, ನನಗೋಸ್ಕರವಾಗಿ ಯಜ್ಞಗಳನ್ನು ಮಾಡು, ನನಗೆ ನಮಸ್ಕಾರಮಾಡು. ಹೀಗೆ ಮಾಡಿದೆಯಾದರೆ ನೀನು ನನ್ನನ್ನೇ ಸೇರುತ್ತೀಯೆ. ನೀನು ನನಗೆ ಪ್ರಿಯನಾದುದರಿಂದ ನಿನಗೆ ಇದರ ಬಗ್ಗೆ ಭರವಸೆಯನ್ನು ಕೊಡುತ್ತೇನೆ.
ವೇದಾಂತದ ತತ್ವಗಳು ಮನಸ್ಸಿಗೆ ಜಾಗ್ರತೆಯಾಗಿ ಹಿಡಿಯುವುದಿಲ್ಲವಾದುದರಿಂದ ಅವುಗಳನ್ನು ಪುನಃ ಪುನಃ ಬೇರೆ ರೀತಿಯಲ್ಲಿ ವರ್ಣಿಸಬೇಕಾಗುತ್ತದೆ. ಶಿಷ್ಯನ ಮನಃಶಕ್ತಿಯನ್ನು ನೋಡಿಕೊಂಡು ಈ ವಿವರಗಳನ್ನು ಪುನಃ ಪುನಃ ವರ್ಣಿಸದೇ ಬೇರೆ ಮಾರ್ಗವಿಲ್ಲ. ಶಾಸ್ತ್ರಕಾರರು ಈ ಪದ್ಧತಿಯನ್ನುನುಸರಿಸಿರುವಂತೆ ಶ್ರೀಕೃಷ್ಣನೂ ಅನುಸರಿಸಿದ್ದಾನೆ. ಸರ್ವವೇದಾಂತಸಾರವನ್ನು ಸಂಗ್ರಹಿಸಿ
(1) ನನ್ನಲ್ಲಿ ಮನಸ್ಸನ್ನು ನಿಲ್ಲಿಸು.
(2) ನನ್ನ ಭಕ್ತನಾಗು,
(3) ನನಗೋಸ್ಕರ ಯಜ್ಞಮಾಡು ಮತ್ತು
(4) ನನಗೆ ನಮಸ್ಕಾರಮಾಡು. ಶರಣು ಹೋಗು ಎಂದು ನಾಲ್ಕು ಪುಟ್ಟ ಮಾತುಗಳಲ್ಲಿ ಹೇಳಲಾಗಿದೆ. ಇಷ್ಟು ಸುಲಭವಾಗಿ ಕಾಣವ ಈ ಮಾರ್ಗದಲ್ಲಿ ಶಿಷ್ಯನಿಗೆ ವಿಶ್ವಾಸವು ಹುಟ್ಟದೆ ಇರಬಹುದು ಎಂದು ಊಹಿಸಿ, ಅದಕ್ಕೆ ಆಸ್ಪದ ಕೊಡಬಾರದೆಂದು “ನೀನು ಹೀಗೆ ಮಾಡಿದೆಯಾದರೆ, ನನ್ನನ್ನೇ ಸೇರುತ್ತೀಯ” ಎಂಬ ಸ್ಪಷ್ಟ ಭರವಸೆಯನ್ನು ಕೊಡಲಾಗಿದೆ. ಶ್ರೀಕೃಷ್ಣನಿಗೆ ಅರ್ಜುನನಲ್ಲಿ ಪ್ರೇಮವಿರುವುದರಿಂದ ಹಿಗೆ ಸಂಕ್ಷೇಪವಾಗಿ ನೇರವಾದ ಮಾರ್ಗವನ್ನು ಸೂಚಿಸಿದ್ದಾನೆ. ಪ್ರೇಮವಿರುವಲ್ಲಿ ಯಾವಾಗಲೂ ಸತ್ಯಾಂಶವು ಅಂತರಂಗದಿಂದ ಹೊರಚಿಮ್ಮುತ್ತದೆ, ಎಂಬುದನ್ನು ಇಲ್ಲಿ ವ್ಯಕ್ತಪಡಿಸಲಾಗಿದೆ.
ಹಿಂದೂ ಧರ್ಮವನ್ನುಳಿದು ಇತರೆ ಬೇರೆ ಎಲ್ಲಾ ಧರ್ಮಗಳಲ್ಲಿಯೂ, ಸಾಧಿಸಬೇಕಾದ ಗುರಿಯ, ಧರ್ಮೋಪದೇಶದವನಿಗಿಂತ ಭಿನ್ನವಾಗಿದೆ. ಆದರೆ ಗೀತೆಯಲ್ಲಿ ಮಾತ್ರ ಎರಡೂ ಒಂದೇ ಆದ್ದರಿಂದ ಶ್ರೀಕೃಷ್ಣನು “ನೀನು ನನ್ನನ್ನೇ ಸೇರುತ್ತೀಯ” ಎಂದು ಸ್ಪಷ್ಟವಾಗಿ ಹೇಳಿದ್ದಾನೆ. ಇಲ್ಲಿ ಕೃಷ್ಣ ಎಂದರೆ ಅರ್ಜುನನ ಸಾರಥಿಯಾದ ಕೃಷ್ಣನಲ್ಲ. ಗೀತೆಯಲ್ಲಿ ಉದ್ದಕ್ಕೂ ಶ್ರೀಕೃಷ್ಣನು, “ನಾನೇ ಪರಮಾತ್ಮನು” ಎಂಬ ಭಾವದಿಂದ ‘ನಾನು’ ಎಂಬ ಶಬ್ದವನ್ನು ಉಪಯೋಗಿಸಿದ್ದಾನೆ. ಇಲ್ಲಿ ಸಹ ಅದೇ ಭಾವವಿದೆ.
ಪರಮಾತ್ಮನಲ್ಲಿ ಮನಸ್ಸನ್ನು ಏಕಾಗ್ರಮಾಡಿ, ಅವನಲ್ಲಿ ಭಕ್ತಿಯನ್ನು ಹೊಂದಿ, ಮಾಡುವ ಎಲ್ಲಾ ಕರ್ಮಗಳನ್ನೂ, ಯಜ್ಞಗಳನ್ನೂ ಅವನಿಗೆ ಅರ್ಪಣೆಮಾಡಿ, ಫಲಾಶೆಯನ್ನಿಟ್ಟುಕೊಳ್ಳದೆ ಅವನಿಗೆ ಸಂಪೂರ್ಣ ಶರಣಾಗತನಾದರೆ ಭಕ್ತನು ಅವನನ್ನೇ ಸೇರುತ್ತಾನೆ ಎಂಬ ಇದುವರೆಗಿನ ಉಪದೇಶದ ಸಾರವನ್ನು ಶ್ರೀಕೃಷ್ಣನು ಇನ್ನೊಮ್ಮೆ ಸಂಕ್ಷೇಪವಾಗಿ ಹೇಳಿದ್ದಾನೆ. ನೀರಿನಂತೆ ಜ್ಞಾನವೂ ಸಹ ಎತ್ತರದಿಂದ ಕೆಳಕ್ಕೆ ಹರಿಯುತ್ತದೆ ಭಕ್ತನು, ಸಾಧಕನು, ಈ ಜ್ಞಾನವನ್ನು ಗಳಿಸಬೇಕಾದರೆ ಪರಮಾತ್ಮನಿಗೆ ಶರಣಾಗತನಾಗಿ ನಮಸ್ಕಾರ ಮಾಡಬೇಕು. ಆಗ ಜ್ಞಾನವು ಇದರೊಳಗೆ ಹರಿದು ಬಂದು ಸೇರುತ್ತದೆ.

ಸರ್ವಧರ್ಮಾನ್ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ |
ಅಹಂ ತ್ವಾಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ || 66 ||
ಅರ್ಥ :- ಎಲ್ಲಾ ಧರ್ಮಗಳನ್ನೂ ತ್ಯಜಿಸಿ (ಶರೀರ, ಮನಸ್ಸು ಮತ್ತು ಬುದ್ಧಿಗಳ ಧರ್ಮ) ನನ್ನನ್ನೇ ಶರಣು ಹೋಗು ನಾನು ನಿನ್ನನ್ನು ಎಲ್ಲಾ ಪಾಪಗಳಿಂದಲೂ ಮುಕ್ತನನ್ನಾಗಿಡುತ್ತೇನೆ. ಚಿಂತಿಸಬೇಡ.
ಧರ್ಮ ಎಂದರೆ ವಸ್ತುವಿನ ಇರುವಿಕೆಯ ನಿಯಮ. ಉಷ್ಣತೆಯು ಬೆಂಕಿಯ ಧರ್ಮ. ಉಷ್ಣವಿಲ್ಲದೇ ಬೆಂಕಿ ಇರಲಾರದು. ಎಲ್ಲಾ ವಸ್ತುಗಳಿಗೂ ಅಶ್ಯಕ ಧರ್ಮ ಮತ್ತು ಸಹಕಾರಿ ಧರ್ಮ ಎಂದು ಎರಡು ಧರ್ಮಗಳಿವೆ. ಮೇಲೆ ಹೇಳಿದುದು ಅವಶ್ಯಕ ಧರ್ಮಗಳು. ಈ ಅವಶ್ಯಕ ಧರ್ಮಗಳಿಲ್ಲದೆ ಆಯಾಯಾ ವಸ್ತುಗಳು ಇರಲಾರವು. ಬೆಂಕಿಯ ಜ್ಞಾಲೆಯ ಉದ್ದ, ಅಗಲ, ಇವು ಸಹಕಾರಿ ಧರ್ಮಗಳು, ಅವು ಕಾಲಕಾಲಕ್ಕೆ ಸಂದರ್ಭಕ್ಕೆ ತಕ್ಕಂತೆ ವ್ಯತ್ಯಾಸವಾಗಬಹುದು. ಆದರೆ ಉಷ್ಣತೆಯು ಮಾತ್ರ ಅವಶ್ಯಕಧರ್ಮ. ಅದು ವ್ಯತ್ಯಾಸವಾಗುವುದಿಲ್ಲ.
ಮನುಷ್ಯನ ಶರೀರದ ಆಕಾರ, ಬಣ್ಣ, ಅಳತೆ, ಬುದ್ಧಿವಂತಿಕೆ, ಗುಣಗಳು ಇವು ಭಿನ್ನಭಿನ್ನವಾಗಿದ್ದಾಗ್ಯೂ ಪ್ರತಿಯೊಬ್ಬರಲ್ಲಿಯೂ ಸಮಾನವಾಗಿರುವ ‘ಚೇತನಾವಸ್ತು’ (ಆತ್ಮ) ಮನುಷ್ಯನ ಸಾಮಾನ್ಯಧರ್ಮ, ಆತ್ಮವಿಲ್ಲದಿದ್ದರೆ ಮನುಷ್ಯನು ಜೀವಿಸಲಾರನು. ಮನುಷ್ಯನ ನೈತಿಕ, ಕೌಟುಂಬಿಕ, ಸಾಮಾಜಿಕ ಹಾಗೂ ಇತರ ಧರ್ಮಗಳು ಭಿನ್ನ ಭಿನ್ನವಾಗಿರಬಹುದು. ಆತ್ಮನಿಗೆ ಸಂಬಂಧಪಟ್ಟ ಅಂದರೆ ಆತ್ಮಜ್ಞಾನವನ್ನು ಪಡೆಯ ಬೇಕೆಂಬ ಧರ್ಮವು ಎಲ್ಲರಿಗೂ ಸಮಾನವಾಗಿದೆ.
ಈ ಶ್ಲೋಕದಲ್ಲಿ ಪರಮಾತ್ಮನು, ಸಾಧಕನಿಗೆ ಸುಲಭವಾದ ಅನೇಕ ದಾರಿಯನ್ನು ತೋರಿಸಿದ್ದಾನೆ. ಈ ದಾರಿಯಲ್ಲಿ ಚಲಿಸಬೇಕಾದರೆ ಮೂರು ಷರತ್ತುಗಳು ಪೂರೈಸಲ್ಪಡಬೇಕು. (1) ಎಲ್ಲಾ ಧರ್ಮಗಳನ್ನೂ ಬಿಟ್ಟು ಧ್ಯಾನಮಗ್ನನಾಗಬೇಕು. (2) ಧ್ಯಾನಕಾಲದಲ್ಲಿ ಅಹಂಕಾರವನ್ನು ತ್ಯಜಿಸಿ ಪರಮಾತ್ಮನಿಗೆ ಶರಣು ಹೋಗಬೇಕು. (3) ಮನಸ್ಸಿನಲ್ಲಿ ಯಾವ ಚಿಂತೆಯನ್ನೂ ಮಾಡಬಾರದು ಸಾಧಕನು ಹೀಗೆ ಮಾಡಿದ್ದೇ ಆದರೆ ಅವನನ್ನು ಎಲ್ಲಾ ಪಾಪಗಳಿಂದ ಬಿಡುಗಡೆ ಮಾಡುವುದಾಗಿ ಪರಮಾತ್ಮನು ಆಶ್ವಾಸನೆಯನ್ನು ಕೊಟ್ಟಿದ್ದಾನೆ. ಈ ಉಪದೇಶವು ಪ್ರಪಂಚದಲ್ಲಿರುವ ಎಲ್ಲಾ ಮನುಷ್ಯರಿಗೂ ಅನ್ವಯಿಸುತ್ತಾರೆ. ಇದಕ್ಕೆ ಜಾತಿ, ದೇಶ, ಕಾಲ ಭೇದಗಳಿಲ್ಲ.
ಅಹಂಕಾರದಿಂದ ಕೂಡಿದ ಜೀವನು ಶಾರೀರಿಕವಾಗಿ ನೋಡುವ, ಮಾನಸಿಕವಾಗಿ ತಿಳಿದುಕೊಳ್ಳುವ, ಹಾಗೂ ಬೌದ್ಧಿಕವಾಗಿ ವಿಚಾರ ಮಾಡುವ ಪ್ರತಿಯೊಂದು ಇಂದ್ರಿಯ ಧರ್ಮಗಳನ್ನು ತ್ಯಜಿಸಿ, ಪರಮಾತ್ಮನಿಗೆ ಶರಣು ಹೋಗಬೇಕೆಂದು ‘ಸರ್ವ-ಧರ್ಮಾನ್ಯರಿತ್ಯಜ್ಯ’ ಸರ್ವಧರ್ಮಾನ್ಪರಿತ್ಯಜ್ಯ ಎಂಬ ಶಬ್ದಗಳಲ್ಲಿ ಸೂಚಿಸಲಾಗಿದೆ. ಧ್ಯಾನಕಾಲದಲ್ಲಿ ಈ ರೀತಿಯ ತ್ಯಾಗವು ಅತೀ ಅವಶ್ಯಕ. ಇವುಗಳನ್ನು ತ್ಯಜಿಸದಿದ್ದರೆ ಅಹಂಕಾರವು ನಾಶವಾಗಲಾರದು. ಅಹಂಕಾರ ಇರುವವರೆಗೂ ಏಕಾಗ್ರತೆ ಇಲ್ಲ. ಏಕಾಗ್ರತೆ ಇಲ್ಲದಿದ್ದರೆ ಆತ್ಮಜ್ಞಾನವಿಲ್ಲ. ಆದುದರಿಂದ ಈ ರೀತಿ ಅಹಂಕಾರವನ್ನು ತ್ಯಜಿಸಬೇಕೆಂದು ಹೇಳಲಾಗಿದೆ. ಮನಸ್ಸನ್ನು ಇಂದ್ರಿಯಗಳಿಂದ ಹಿಂದಕ್ಕೆಳೆದುಕೊಂಡರೆ ಸಾಲದು. ಅದನ್ನು ಬೇರೆ ದಾರಿಯಲ್ಲಿ ಸ್ಥಿರವಾಗಿ ನಿಲ್ಲಿಸಬೇಕು. ಅದಕ್ಕಾಗಿಯೇ ‘ಮಾಮೇರಂಶರಣಂ ವ್ರಜ’ ಮಾಮೇಕಂ ಶರಣಂ ವ್ರಜ ‘ನನ್ನೊಬ್ಬನನ್ನೇ ಶರಣು ಹೋಗು’ ಎಂಬ ದಾರಿ ತೋರಿಸಲಾಗಿದೆ. ಅಹಂಕಾರವನ್ನು ತ್ಯಜಿಸಿ ಧ್ಯಾನಮಾಡುತ್ತಾ, ಪರಮಾತ್ಮನಿಗೆ ಸಂಪೂರ್ಣ ಶರಣಾಗತನಾದ ಮೇಲೆ, ಮಂದೆ ಯಾವ ಚಿಂತೆಯನ್ನೂ ಮಾಡಬಾರದೆಂದು ಹೇಳಿ, ತನ್ಮೂಲಕ ಮಾನಸಿಕ ಉದ್ರೇಕಗಳನ್ನು ಜಯಿಸಬೇಕೆಂದು ಹೇಳಲಾಗಿದೆ. ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳಬೇಕೆಂಬ ಚಿಂತೆಯೂ ಇರಬಾರದು. ಈ ಹಿಂದೆ ಸಹ ಇದೇ ಮಾತನ್ನು ‘ನ ಕಿಂಚಿದಪಿ ಚಿಂತಯೇತ್’ (ಅ. 6-25) ಎಂದು ಹೇಳಲಾಗಿದೆ. ಹೀಗೆ ಮಾಡಿದರೆ “ನಿನ್ನನ್ನು ಎಲ್ಲಾ ಪಾಪಗಳಿಂದಲೂ ಬಿಡುಗಡೆ ಮಾಡುತ್ತೇನೆ” ಎಂಬ ಆಶ್ವಾಸನೆಯನ್ನು ಕೊಡಲಾಗಿದೆ. ಕರ್ಮದಲ್ಲಿಯ ಪಾಪ ಎಂದರೆ ಅದರಿಂದುಂಟಾಗುವ ‘ವಾಸನೆ’. ಅಹಂಕಾರವನ್ನು ತ್ಯಜಿಸಿ ಮಾಡಿದ ಧ್ಯಾನಾದಿ ಕರ್ಮಗಳು ಪುನರ್ಜನ್ಮಕ್ಕೆ ಕಾರಣವಾಗುವುದಿಲ್ಲ. ಏಕೆಂದರೆ ಅವುಗಳಿಂದ ಹೊಸ ‘ವಾಸನೆ’ಗಳು ಹುಟ್ಟುವುದಿಲ್ಲ. ಒಳ್ಳೆಯ ವಾಸನೆಗಳು ಉತ್ತಮ ವಿಚಾರಗಳಿಗೂ, ಕೆಟ್ಟ ವಾಸನೆಗಳು ಕೆಟ್ಟ ವಿಚಾರಗಳಿಗೂ ಕಾರಣವಾಗುತ್ತವೆ. ಸಾಧಕನು ಈಗ ಅಹಂಕಾರವನ್ನು ಬಿಟ್ಟು, ಮನ್ಸು ಬುದ್ಧಿಗಳನ್ನು ದಾಟಿ, ಆತ್ಮಧ್ಯಾನ ಮಾಡುವುದರಿಂದ ಇಂತಹ ಕರ್ಮಗಳು ಹೊಸ ವಾಸನೆಗಳಿಗೆ, ಅಥವಾ ಪುನರ್ಜನ್ಮಕ್ಕೆ ಕಾರಣವಾಗುವುದಿಲ್ಲ. ಅವನಿಗೆ ಮೋಕ್ಷಸಿಗುತ್ತದೆ. ಈ ಬಗ್ಗೆ ಪರಮಾತ್ಮನು “ಮೋಕ್ಷಯಿಷ್ಯಾಮಿ ಮಾಶುಚ” ಎಂದು ಸ್ಪಷ್ಟವಾಗಿ ಆಶ್ವಾಸನೆಯನ್ನು ಕೊಟ್ಟಿದ್ದಾನೆ.

ಇದಂ ತೇ ನಾತಪಸ್ಯಾಯ ನಾಭಕ್ತಾಯ ಕದಾಚನ |
ನ ಚಾಶುಶ್ರೂಷವೇ ವಾಚ್ಯಂ ನ ಚ ಮಾಂ ಯೋ„ಭ್ಯಸೂಯತಿ ಯಿತಿ || 67 ||
ಅರ್ಥ :- ಈ ಬೋಧವನ್ನು ತಪಸ್ಸಿಲ್ಲದವನಿಗೆ, ನನ್ನಲ್ಲಿ ಭಕ್ತಿ ಇಲ್ಲದವನಿಗೆ, ಅಥವಾ ಇದನ್ನು ಕೇಳಲು ಇಷ್ಟವಿಲ್ಲದವನಿಗೆ ಇಲ್ಲವೇ, ಈ ಬೋಧದಲ್ಲಿ ದ್ವೇಷವಿರುವವನಿಗೆ ಹೇಳಕೂಡದು.
ಪ್ರತಿಯೊಂದು ಶಾಸ್ತ್ರವನ್ನೂ ಅಭ್ಯಾಸ ಮಾಡುವುದಕ್ಕೆ ಶಿಷ್ಯನಲ್ಲಿ ಕೆಲವು ನಿರ್ದಿಷ್ಟ ಗುಣಗಳಿರಬೇಕು. ಅದರ ಜೊತೆಗೆ ಕೆಲವು ದುರ್ಗುಣಗಳು ಇಲ್ಲವೆಂಬುದನ್ನೂ ನಿರ್ಧರಿಸಿಕೊಳ್ಳಬೇಕು. ಹೀಗೆ ಆಯಾಯಾ ಶಾಸ್ತ್ರ ಬೋಧನೆಗೆ ಯೋಗ್ಯವಾದ ಶಿಷ್ಯನನ್ನು ಆರಿಸಿಕೊಂಡು ಬೋಧಮಾಡಿದರೆ, ಅವನು ಆ ಜ್ಞಾನವನ್ನು ಸುಲಭವಾಗಿ ಸ್ವೀಕರಿಸಿ ಜೀರ್ಣಿಸಿಕೊಳ್ಳುತ್ತಾನೆ, ಮತ್ತು ಅದರಿಂದ ಸ್ವಹಿತವನ್ನೂ, ಲೋಕಹಿತವನ್ನೂ ಸಾಧಿಸುತ್ತಾನೆ. ಅಪಾತ್ರನಲ್ಲಿ ಜ್ಞಾನೋಪದೇಶ ಮಾಡಿದರೆ ಅದು ನಿರುಪಯೋಗವಾಗುತ್ತದೆ, ದುರುಪಯೋಗವಾಗುತ್ತದೆ. ಇಲ್ಲವೇ ಅದರ ಬಗ್ಗೆ ಅನಾವಶ್ಯಕವಾಗಿ ಅಪಪ್ರಚಾರವಾಗುತ್ತದೆ. ಈ ಹಿನ್ನೆಲೆಯನ್ನನುಸರಿಸಿ, ಯಾರ್ಯಾರಿಗೆ ಈ ಬೋಧವನ್ನು ಹೇಳಕೂಡದೆಂದು ಮೊದಲು ಬೊಟ್ಟು ಮಾಡಿ ತೋರಿಸಲಾಗಿದೆ. ಗೀತೆಯ ಉಪದೇಶವನ್ನು ಪಡೆಯಬೇಕೆನ್ನುವವರು. ಈ ದುರ್ಗುಣಗಳನ್ನೂ, ದೌರ್ಬಲ್ಯಗಳನ್ನೂ ಕಳೆದುಕೊಂಡು, ಮುಂದೆ ತಿಳಿಸಲಾಗುವ ಯೋಗ್ಯತೆಯನ್ನು ಗಳಿಸಿಕೊಂಡರೆ, ಗೀತೋಪದೇಶದಿಂದ ಅವರು ಇಚ್ಛಿತ ಲಾಭವನ್ನು ಪಡೆಯಬಹುದಾಗಿದೆ.
ನಾತಪಸ್ಕಾಯ- ಶರೀರ ಮನಸ್ಸುಗಳನ್ನು ಹತೋಟಿಯಲ್ಲಿಟ್ಟುಕೊಳ್ಳದೇ, ಅವು ಸ್ವೇಚ್ಛೆಯಾಗಿ ಚಲಿಸುವಂತೆ ಬಿಟ್ಟು, ತನ್ಮೂಲಕ ತಮ್ಮ ಶಾರೀರಿಕ ಹಾಗೂ ಮಾನಸಿಕ ಶಕ್ತಿಗಳನ್ನು ತಪ್ಪು ಮಾರ್ಗದಲ್ಲಿ ಉಪಯೋಗಿಸುವವರು ಎಂದರ್ಥ. ಇಂತಹವರಿಗೆ ಗೀತೆಯನ್ನು ಉಪದೇಶಿಸಬಾರದು. ಶರೀರ ಮನಸ್ಸುಗಳನ್ನು ನಿಗ್ರಹಿಸಿ, ಅದರಿಂದ ಸಂಚಿತವಾದ ಶಕ್ತಿಯನ್ನು ಆತ್ಮಧ್ಯಾನದಲ್ಲಿ ವಿನಿಯೋಗಿಸುವುದಕ್ಕೆ ‘ತಪಸ್’ ಎಂದು ಹೆಸರು. ಈ ತಪಸ್ಸಿನಿಂದ (1) ಶಕ್ತಿಯ ದುರ್ವಿನಿಯೋಗದ ನಿಗ್ರಹ, (2) ಶಕ್ತಿಯ ಮಿತವ್ಯಯ, (3) ಉಳಿದ ಶಕ್ತಿಯ ಸಂಗ್ರಹ ಮತ್ತು ಅದನ್ನು ಆತ್ಮವಿಕಾಸಕ್ಕೆ ಉಪಯೋಗಿಸುವಿಕೆ ಈ ಕಾರ್ಯಗಳು ಏಕಕಾಲಕ್ಕೆ ಸಾಧಿಸಲ್ಪಡುತ್ತವೆ. ತಪಸ್ಸಿಲ್ಲದಿದ್ದವರು ಗೀತೆಯ ಉಪದೇಶವನ್ನು ಗ್ರಹಿಸಲಾರರು. ನಾಭಕ್ತಾಯ- ಮನುಷ್ಯನ ಪರಮ ಗುರಿಯಾದ ಆತ್ಮಜ್ಞಾನದ ಸಾಧನೆಯ ಬಗ್ಗೆ ವಿಶ್ವಾಸವಿಲ್ಲದವನು. ಇಂತಹವರಿಗೆ ಈ ಜ್ಞಾನವನ್ನು ಉಪದೇಶಿಸುವುದು ವ್ಯರ್ಥ. ನ ಚಾ ಶುಶ್ರೂಷವೇ- ಈ ಬೋಧವನ್ನು ಕೇಳಲು ಇಷ್ಟವಿಲ್ಲದವರಿಗೆ ಇದನ್ನು ಬೋಧಿಸಬಾರದು. ಏಕೆಂದರೆ ಅವರು ಅದನ್ನು ಕೇಳಿ ತಿಳಿದುಕೊಳ್ಳದೆ ಇರುವುದರಿಂದ ಬೋಧೆಯು ವ್ಯರ್ಥವಾಗುತ್ತದೆ. ನ ಚ ಮಾಂ ಯೋ„ಭ್ಯಸೂಯತೇ – ಯಾರು ನನ್ನನ್ನು ದ್ವೇಷಿಸುತ್ತಾರೋ ಅವರಿಗೂ ಗೀತೆಯನ್ನು ಬೋಧಿಸಬಾರದು. ಇಲ್ಲಿ ನಾನು ಎಂದರೆ ಪರಮಾತ್ಮ ಎಂದು ಅರ್ಥವಾಗುವಂತೆ, ತನ್ನ ಗುರು, ಅಥವಾ ಗೀತೆಯಲ್ಲಿಯ ವೇದಾಂತ ತತ್ವ ಎಂಬ ಅರ್ಥವೂ ಆಗುತ್ತದೆ. ಪರಮಾತ್ಮನನ್ನು, ಗುರುವನ್ನು ವೇದಾಂತವನ್ನು ದ್ವೇಷಿಸುವವನಿಗೆ ಈ ಶಾಸ್ತ್ರವನ್ನು ಬೋಧಿಸಿದರೆ ಅವನು ಅವುಗಳನ್ನು ತಿಳಿದುಕೊಳ್ಳುವುದೂ ಇಲ್ಲ. ಅಭ್ಯಾಸ ಮಾಡುವುದೂ ಇಲ್ಲ. ಆದರೆ ಅದರಲ್ಲಿರುವ ತನ್ನ ವಾದಕ್ಕೆ ಬೇಕಾದ ಶಬ್ದಗಳನ್ನು ಆರಿಸಿ ತೆಗೆದುಕೊಂಡು, ಗೀತೆಯನ್ನು ಟೀಕಿಸುವುದಕ್ಕೂ, ತನ್ನ ಸ್ವಾರ್ಥವನ್ನೂ ಸಾಧಿಸಿಕೊಳ್ಳುವುದಕ್ಕೂ ಉಪಯೋಗಿಸಿ ಕೊಳ್ಳುತ್ತಾನೆ. ಜೊತೆಗೆ ಅವನು, ಭಕ್ತರಲ್ಲಿ ಗೀತೆಯ ಬಗ್ಗೆ ಕೇವಲ ಸಂಶಯವನ್ನುಂಟು ಮಾಡುತ್ತಾನೆ. ಆದುದರಿಂದ ಇಂತಹವರಿಗೆ ಗೀತೆಯನ್ನು ಬೋಧಿಸಕೂಡದು.
ಗೀತೆಯನ್ನು ಓದಿದ ಮಾತ್ರಕ್ಕೆ ಕೇಳಿದ ಮಾತ್ರಕ್ಕೆ ಜ್ಞಾನೋದಯವಾಗುತ್ತದೆ, ಪುಣ್ಯ ಸಿಗುತ್ತದೆ, ಎಂದು ತಿಳಿದುಕೊಳ್ಳುವುದು ತಪ್ಪು. ಈ ಜ್ಞಾನದ ಅನುಭವವನ್ನು ಪಡೆಯಲು ಬೇಕಾಗುವ ಮಾನಸಿಕ ಬದಲಾವಣೆಯು ಕೇವಲ ಒಂದೆರಡು ದಿನಗಳಲ್ಲಿ ಲಭಿಸತಕ್ಕದ್ದಲ್ಲ. ಇದನ್ನು ಸತತವಾದ ಅಭ್ಯಾಸದಿಂದ ಗಳಿಸಬೇಕು. ಶಿಷ್ಯನಲ್ಲಿ, ಸಾಧಕನಲ್ಲಿ ಮೇಲಿನ ದುರ್ಗುಣಗಳು ಇಲ್ಲವೇ ದೌರ್ಬಲ್ಯಗಳಿದ್ದರೆ ಮೊದಲು ಅವುಗಳನ್ನು ತಿದ್ದಿಕೊಳ್ಳಬೇಕು.
ಭಕ್ತರಿಗೆ ಗೀತೆಯನ್ನು ಉಪದೇಶಿಸುವುದರ ಲಾಭ
ಯ ಇಮಂ ಪರಮಂ ಗುಹ್ಯಂ ಮದ್ಭಕ್ತೇಷ್ವಭಿಧಾಸ್ಯತಿ |
ಭಕ್ತಿಂ ಮಯಿ ಪರಾಂ ಕೃತ್ವಾ ಮಾಮೇವೈಷ್ಯತ್ಯಸಂಶಯಃ || 68 ||
ಅರ್ಥ :- ಯಾರು ನನ್ನಲ್ಲಿ ಭಕ್ತಿಯನ್ನು ಮಾಡುತ್ತಾ ಗುಹ್ಯವೂ ಶ್ರೇಷ್ಠವೂ ಆದ ಈ ಬೋಧವನ್ನು ನನ್ನ ಭಕ್ತರಿಗೆ ಉಪದೇಶ ಮಾಡುತ್ತಾರೋ, ಅವರು ಸಂಶಯವಿಲ್ಲದೆ ನನ್ನನ್ನೇ ಸೇರುತ್ತಾರೆ.
ತಾನು ಸಾಧಿಸಬೇಕಾದ ಗುರಿಯಲ್ಲಿ (ಆತ್ಮ) ಏಕಭಾವವನ್ನು ಹೊಂದುವುದಕ್ಕೆ ಭಕ್ತಿ ಎಂದು ಹೆಸರು. ಈ ಬೋಧವನ್ನು ಸ್ವೀಕರಿಸುವ ಶಿಷ್ಯನಿಗಷ್ಟೇ ಭಕ್ತಿಯಿದ್ದರೆ ಸಾಲದು. ಉಪದೇಶ ಮಾಡುವ ಗುರುವಿಗೆ ಸಹ ಈ ಭಕ್ತಿಯು ಅವಶ್ಯಕ. ಗುರುವು ಭಕ್ತಿಯುತವಾಗದಿದ್ದರೆ ಅವನು ಮಾಡುವ ಉಪದೇಶವು ಕೇವಲ ಬೌದ್ಧಿಕ ಹಾಗೂ ಶಾಬ್ದಿಕ ಚಮತ್ಕಾರವಷ್ಟೇ ಆಗುತ್ತದೆಯೇ ಹೊರತು, ಅದು ಹೃದಯದಿಂದ ಬಂದಿದ್ದಲ್ಲದವಾದ್ದರಿಂದ ಅದರಲ್ಲಿ ಅಂತರಂಗದ ಆದ್ರ್ರತೆಯಿರುವುದಿಲ್ಲ. ಇದು ಭಕ್ತನ, ಶ್ರೋತೃವಿನ ಅಂತರಂಗವನ್ನು ತಲುಪುವುದಿಲ್ಲ. ಗುರುವಿನ ಮಾತುಗಳು ಬೌದ್ಧಿಕವಾಗಿ ಪ್ರಶಂಸಿಸಲ್ಪಡಬಹುದು ಅಷ್ಟೆ. ಆದರೆ ಅದು ಕೇವಲ ಬುಡುಬುಡಕೆಯ ಶಬ್ದ ಒಳಗೆ ಬರೇ ಟೊಳ್ಳು. ಹೀಗಾಗಿ ಅದರಿಂದ ಶಿಷ್ಯನಿಗೂ ಉಪಯೋಗವಿಲ್ಲ, ಆದರೆ ಗುರುವು ಈ ಬೋಧದಲ್ಲಿ ಭಕ್ತಿಯನ್ನು ಹೊಂದಿ, ಈ ಜ್ಞಾನದ ಅನುಭವವನ್ನು ಪಡೆದು, ನಂತರ ಭಕ್ತನಿಗೆ ಉಪದೇಶ ಮಾಡಿದರೆ ಅದು ಫಲವತ್ತಾದ ಭೂಮಿಯಲ್ಲಿ, ಉತ್ತಮವಾದ ಬೀಜವನ್ನು ಬಿತ್ತಿದಂತಾಗಿ ಶಿಷ್ಯನ ಅಂತರಂಗಕ್ಕೆ ತಲುಪುತ್ತದೆ. ಇಂತಹ ಗುರುವು ಸಹ ಈ ರೀತಿಯಲ್ಲಿ ಬೋಧಮಾಡುವುದರ ಮೂಲಕ ಆತ್ಮನಲ್ಲಿ ಐಕ್ಯವಾಗುತ್ತಾನೆ. ಇದರಲ್ಲಿ ಸಂಶಯವಿಲ್ಲ, ಎಂಬ ಆಶ್ವಾಸನೆ ಇಲ್ಲಿದೆ.
ಗೃಹಸ್ಥನು ಪ್ರತಿನಿತ್ಯವೂ ಮಾಡಬೇಕಾದ ಯಜ್ಞದಲ್ಲಿ ಋಷಿ ಯಜ್ಞವು ಒಂದಾಗಿದೆ. ಶಾಸ್ತ್ರಗಳಲ್ಲಿ ವಿಹಿತವಾದ ಮೇಲಿನ ಉಪದೇಶವನ್ನು ತಾನು ತಿಳಿದುಕೊಂಡು ಅನುಭವಿಸಿ, ನಂತರ ನಿತ್ಯವೂ ಶಾಸ್ತ್ರಾಭ್ಯಾಸ ಮಾಡುತ್ತಾ ಯೋಗ್ಯವಾದ ಶಿಷ್ಯನಿಗೆ ಉಪದೇಶ ಮಾಡುವುದಕ್ಕೆ ‘ಋಷಿಯಜ್ಞ’ ಎಂದು ಹೆಸರು. ಇದೇ ಮಾತನ್ನು ತೈತ್ತರೀಯ ಉಪನಿಷತ್ತಿಲ್ಲಿ, ಗುರುವು, ವಿದ್ಯಾಭ್ಯಾಸವನ್ನು ಮುಗಿಸಿಕೊಂಡು ಮನೆಗೆ ಹಿಂತಿರುಗಿ ಹೋಗುವ ಶಿಷ್ಯನಿಗೆ, ‘ಸ್ವಾಧ್ಯಾಯ ಪ್ರವಚನೇ ಚ’ ಎಂಬ ಸೂತ್ರದಲ್ಲಿ ಹೇಳಿದ್ದಾನೆ. ಪ್ರತಿಯೊಬ್ಬ ವಿದ್ವಾಂಸನೂ ತಾನು ಕಲಿತ ಜ್ಞಾನವನ್ನು ಪುನಃ ಪುನಃ ಅಧ್ಯಯನ ಮಾಡಿ, ಅನುಭವಿಸಿ, ಯೋಗ್ಯವಾದ ಶಿಷ್ಯನಿಗೆ ಬೋಧಿಸಬೇಕಾದುದು ಅವಶ್ಯಕ. ಗೀತೆಯನ್ನು ಓದಿ, ಕೇಳಿ, ತಿಳಿದುಕೊಂಡು, ಸಾಧನೆಯಿಂದ ಅನುಭವವನ್ನು ಪಡೆದಿರುವವರು ಈ ರೀತಿ ಉಪದೇಶ ಮಾಡುವುದರಿಂದ ಅವರು ಸಹ ಪರಮಾತ್ಮನನ್ನು ಸೇರುತ್ತಾರೆ ಎಂಬ ಆಶ್ವಾಸನೆ ಇಲ್ಲಿದೆ.

ನ ಚ ತಸ್ಮಾನ್ಮನುಷ್ಯೇಷು ಕಶ್ಚಿನ್ಮೇ ಪ್ರಿಯಕೃತ್ತಮಃ ಕಶಿ ನ್ಮೇ ್ಚನ್ಮೆ ಪ್ರಿಯ ಕ್ಷತ್ತಮಃ |
ಭವಿತಾ ನ ಚ ಮೇ ತಸ್ಮಾದನ್ಯಃ ಪ್ರಿಯತರೋ ಭುವಿ || 69 ||

ಅರ್ಥ :- ನನಗೆ ಪ್ರಿಯವಾದ, ಇನ್ನೂ ಹೆಚ್ಚಿನ ಸೇವೆ ಮಾಡುವ ಮನುಷ್ಯರಲ್ಲಿ ಇವನಿಗಿಂತ ಹೆಚ್ಚಿನವರು ಬೇರೆಯಾರೂ ಇಲ್ಲ, ಮತ್ತು ಇವನಿಗಿಂತ ನನಗೆ ಪ್ರಿಯರಾದವರು ಭೂಮಿಯಲ್ಲಿ ಬೇರೆ ಯಾರೂ ಇರಲಾರರು.
ಗೀತೆಯಲ್ಲಿ ಉಪದೇಶಿಸಿದ ತತ್ವವನ್ನು ತಾನು ಸ್ವತಃ ತಿಳಿದುಕೊಂಡು, ಅನುಭವಿಸಿ, ಅದನ್ನು ಭಕ್ತರಲ್ಲಿ ಪ್ರಚಾರ ಮಾಡುವುದು ಶ್ರೇಷ್ಠವಾದ ಕಾರ್ಯ ಎಂಬುದನ್ನು ಶ್ರೀಕೃಷ್ಣನು ಇಲ್ಲಿ ಹೇಳಿದ್ದಾನೆ. ಇಂತಹ ಪ್ರಚಾರಕನಿಗಿಂತ ಹೆಚ್ಚು ಪ್ರಿಯರಾದವರು ಬೇರೆ ಯಾರೂ ಇಲ್ಲವೆಂದೂ, ಮುಂದೆ ಸಹ ಯಾರೂ ಇರಲಾರರೆಂದೂ ಸ್ಪಷ್ಟವಾಗಿ ಹೇಳಲಾಗಿದೆ. ಅಂದರೆ ಇವನು ಪರಮಾತ್ಮನಿಗೆ ಅತ್ಯಂತ ಪ್ರಿಯನಾದವನ ಎಂದರ್ಥ-

ಅಧ್ಯೇಷ್ಯತೇಚ ತೆಚ ಇಮಂ ಧರ್ಮ್ಯಂ ಸಂವಾದಮಾವಯೋಃ |
ಜ್ಞಾನಯಜ್ಞೇನ ತೇನಾಹಮಿಷ್ಟಃ ಸ್ಯಾಮಿತಿ ಮೇ ಮತಿಃ || 70 ||
ಅರ್ಥ :- ನಮ್ಮಿಬ್ಬರ ಈ ಧಾರ್ಮಿಕ ಈ ಸಂವಾದವನ್ನು ಯಾರು ಪಠಣ ಮಾಡುತ್ತಾರೋ, ಅವರು ಜ್ಞಾನಯಜ್ಞದ ರೂಪದಲ್ಲಿ ನನ್ನನ್ನು ಅರ್ಚಿಸುತ್ತಾರೆ. ಇದು ನನ್ನ ಮತವು.
ಗೀತೆಯನ್ನು ಶಿಷ್ಯನಿಗೆ ಉಪದೇಶ ಮಾಡುವವನ ಪ್ರಶಂಸೆಯನ್ನು ಮಾಡಿ, ಗೀತೆಯನ್ನು ಓದುವವನೂ ಸಹ ಪರಮಾತ್ಮನ ಅರ್ಚನೆಯನ್ನು ಮಾಡಿದಂತಾಗುತ್ತದೆ ಎಂದು ಶ್ರೀಕೃಷ್ಣನು ಹೇಳಿದ್ದಾನೆ. ಮೊದಮೊದಲು ಸ್ಪಷ್ಟವಾಗಿ ಅರ್ಥವಾಗದಿದ್ದರೂ, ಗೀತೆಯನ್ನು ಓದುತ್ತಾ ಹೋಗುವುದರಿಂದ, ಸಾಧಕನು ತನಗೆ ಗೊತ್ತಿಲ್ಲದಂತೆ ಗೀತೆಯ ಬೋಧದ ಕಡೆಗೆ ಆಕರ್ಷಿಸಲ್ಪಡುತ್ತಾನೆ. ಕ್ರಮೇಣ ಹೆಚ್ಚು ಹೆಚ್ಚು ಆಳವಾಗಿ ಅಭ್ಯಾಸ ಮಾಡಿ, ಆ ಜ್ಞಾನವನ್ನು ಚೆನ್ನಾಗಿ ತಿಳಿದುಕೊಳ್ಳುತ್ತಾನೆ, ಮುಂದೆ ಅದನ್ನು ಆಚರಣೆಗೆ ತರುತ್ತಾನೆ. ಹೀಗೆ ಆತನು ಗೀತೆಯಲ್ಲಿ ಉಲ್ಲೇಖಿಸಿದ ಸದ್ಗುಣಗಳನ್ನು ಕ್ರಮೇಣ ಮೈಗೂಡಿಸಿಕೊಂಡು, ತನ್ನಲ್ಲಿಯ ಸಾತ್ವಿಕ ಸ್ವಭಾವವನ್ನು ಜಾಗೃತಗೊಳಿಸಿಕೊಂಡು, ಧ್ಯಾನದಲ್ಲಿ ನಿರತನಾಗಿ ಆತ್ಮಾನಂದವನ್ನು ಪಡೆಯಲು ಪ್ರಯತ್ನ ಮಾಡುತ್ತಾನೆ. ಇದಕ್ಕೆ ಕಾರಣೀಭೂತವಾದ ಗೀತೆಯ ಉಪದೇಶ ಹಾಗೂ ಗೀತೆಯ ಪಠಣ, ಇವೆರಡನ್ನೂ ಶ್ರೀಕೃಷ್ಣನು ‘ಜ್ಞಾನಯಜ್ಞ’ ಎಂದು ಕರೆದು, “ಇವರಿಬ್ಬರೂ ಜ್ಞಾನಯಜ್ಞದ ಮುಖಾಂತರ ಪರಮಾತ್ಮನ ಅರ್ಚನೆಯನ್ನು ಮಾಡುವವರು” ಎಂದಿದ್ದಾರೆ.
ಗೀತೆಯ ಅಭ್ಯಾಸದಿಂದ ಆ ವ್ಯಕ್ತಿಯಲ್ಲಿರುವ ಜ್ಞಾನಾಗ್ನಿಯು ಪ್ರಖರವಾಗುತ್ತದೆ. ಸಾಧಕನು ತನ್ನ ಅಜ್ಞಾನ, ಅಶ್ರದ್ಧೆ, ಮೋಹ ಮೊದಲಾದ ದೌರ್ಬಲ್ಯಗಳನ್ನು ಈ ಜ್ಞಾನಾಗ್ನಿಯಲ್ಲಿ ಅಹುತಿಯಾಗಿ ಹಾಕಿ ದುರ್ಗುಣಗಳನ್ನು ಕಳೆದುಕೊಳ್ಳುತ್ತಾನೆ, ಮತ್ತು ಸುಗುಣಗಳನ್ನು ಜಾಗೃತಗೊಳಿಸಿಕೊಳ್ಳುತ್ತಾನೆ. ತುಕ್ಕು ಹಿಡಿದ ಕಬ್ಬಿಣವನ್ನು ಬೆಂಕಿಯಲ್ಲಿ ಹಾಕಿ ಸುಟ್ಟರೆ, ಜಂಗು ಸುಟ್ಟು ಕೆಳಕ್ಕೆ ಬಿದ್ದು, ಕಬ್ಬಿಣವು ಸ್ವಚ್ಛವಾಗುವಂತೆ, ಜ್ಞಾನಯಜ್ಞದಲ್ಲಿ ಜಾಗೃತವಾದ ಅಗ್ನಿಯಿಂದ ಮನುಷ್ಯನ ಅಜ್ಞಾನ, ಅಹಂಕಾರಗಳು ಸುಟ್ಟು ಹೋಗಿ ಮನುಷ್ಯನು ಶುದ್ಧನೂ, ಪವಿತ್ರನೂ ಆಗುತ್ತಾನೆ. ಉಪದೇಶ ಮಾಡುವವನು ಹಾಗೂ ಗೀತೆಯನ್ನು ಓದುವವನು ಇವರ ಪ್ರಶಂಸೆಯನ್ನು ಮಾಡಿ, ಉಪದೇಶವನ್ನು ಕೇಳುವವರ ಪ್ರಶಂಸೆಯನ್ನು ಮಾಡಲಾಗುತ್ತದೆ.

ಶ್ರದ್ಧಾವಾನನಸೂಯಶ್ಚ ಶ್ರುಣುಯಾದಪಿಯೋನರಃ |
ಸೋ„ಪಿಮುಕ್ತಃಶುಭಾಂಲ್ಲೋಕಾನ್ಪ್ರಾಪ್ನುಯಾತ್ಪುಣ್ಯಕರ್ಮಣಾಮ್||71 ||
ಅರ್ಥ :- ಯಾವನು ಈ ಗೀತೆಯ ಉಪದೇಶದಲ್ಲಿ, ದ್ವೇಷಬುದ್ಧಿಯನ್ನು ತ್ಯಜಿಸಿ, ಅದನ್ನು ಶ್ರದ್ಧೆಯಿಂದ ಕೇಳುತ್ತಾನೋ, ಅವನೂ ಸಹ ಮುಕ್ತನಾಗಿ ಪುಣ್ಯಕರ್ಮಗಳನ್ನು ಮಾಡುವವರು ಸೇರುವ ಉತ್ತಮ ಲೋಕಗಳಿಗೆ ಹೋಗುತ್ತಾನೆ.
ಶ್ರದ್ಧೆ ಎಂದರೆ, ನಿಶ್ಚಯವಾದ ನಂಬಿಕೆ ಮತ್ತು ವಿಶ್ವಾಸ. ಶಾಸ್ತ್ರಗಳಲ್ಲಿ ಶ್ರದ್ಧೆ ಎಂದರೆ (1) ಶಾಸ್ತ್ರಗಳಲ್ಲಿ ವಿವರಿಸುವ ಗೂಢ ತತ್ವಗಳನ್ನು ತಿಳಿದುಕೊಳ್ಳುವುದು. (2) ಅದನ್ನು ಜೀರ್ಣಿಸಿಕೊಂಡು ಸಂಪೂರ್ಣ ಅರ್ಥಮಾಡಿಕೊಳ್ಳುವುದು, (3) ಮತ್ತು ಆ ತತ್ವಗಳನ್ನು ಆಚರಣೆಯಲ್ಲಿ ತಂದು ಅನುಭವಿಸುವುದು, ಈ ಮೂರೂ ಕಾರ್ಯಗಳೂ ಸೇರುತ್ತವೆ. ಜಿಚಿiಣh is ಣhe biಡಿಜ ಣhಚಿಣ ಜಿeeಟs ಣhe ಟighಣ ಚಿಟಿಜ siಟಿgs ತಿheಟಿ ಣhe ಜಚಿತಿಟಿ is sಣiಟಟ ಜಚಿಡಿಞ –ಖಚಿbiಟಿಜಡಿಚಿಟಿಚಿಣh ಖಿಚಿgoಡಿe
ಆನಂದ ಸಾಮ್ರಾಜ್ಯವು ನಮ್ಮಲ್ಲಿಯೇ ಇದೆ. ಸ್ವರ್ಗವು ಹೊರಗೆಲ್ಲಿಯೂ ಇಲ್ಲ. ಅದು ಇಲ್ಲಿಯೇ, ನಮ್ಮೊಳಗೇ ಇದೆ. ಸುಖ ಮತ್ತು ದುಃಖ ಎರಡೂ ನಮ್ಮಲ್ಲಿವೆ. ಗೀತೆಯಲ್ಲಿ ಹೇಳಿರುವಂತೆ ಸನ್ಮಾರ್ಗದ ಆಚರಣೆಯಲ್ಲಿ ನಾವು ಮುಂದುವರಿದಷ್ಟೂ, ಹೆಚ್ಚು ಹೆಚ್ಚು ಆತ್ಮವಿಕಾಸವನ್ನು ಹೊಂದಿ, ಅಜ್ಞಾನವನ್ನು ಕಳೆದುಕೊಂಡು, ಮನಃಶಾಂತಿಯನ್ನೂ, ಸುಖವನ್ನೂ ಅನುಭವಿಸುತ್ತೇವೆ.

ಕಚ್ಚಿದೇತಚ್ಛ್ರುತಂ ಪಾರ್ಥ ತ್ವಯೈಕಾಗ್ರೇಣ ಚೇತಸಾ |
ಕಚ್ಚಿದಜ್ಞಾನಸಂಮೋಹಃ ಪ್ರನಷ್ಪಸ್ತೇ ಧನಂಜಯ || 72 ||
ಅರ್ಥ :- ಪಾರ್ಥನೇ ಇದುವರೆಗೆ ನಾನು ಹೇಳಿದುದೆಲ್ಲವನ್ನೂ ಏಕಾಗ್ರಮನಸ್ಸಿನಿಂದ ಕೇಳಿ ತಿಳಿದುಕೊಂಡೆಯಾ? ಧನಂಜಯನೇ, ಅಜ್ಞಾನದಿಂದ ನಿನಗುಂಟಾದ ಮೋಹವೆಲ್ಲವೂ ನಿವಾರಣೆಯಾಯಿತೇ?
ಅರ್ಜುನನ ಮೋಹವು ಸಂಪೂರ್ಣವಾಗಿ ನಷ್ಟವಾಗಿದೆ ಎಂದು ಶ್ರೀಕೃಷ್ಣನಿಗೆ ಗೊತ್ತಾಗಿದ್ದಾಗ್ಯೂ, ತನ್ನ ಉಪದೇಶದಿಂದ ಅರ್ಜುನನಲ್ಲಿ ಯಾವ ಪರಿಣಾಮವಾಗಿದೆ ಎಂಬುದನ್ನು ಸ್ಪಷ್ಟವಾಗಿ ಅವನ ಬಾಯಿಯಿಂದಲೇ ಕೇಳಿ ತಿಳಿದುಕೊಳ್ಳುವುದಕ್ಕಾಗಿ ಈ ನೇರವಾದ ಪ್ರಶ್ನೆಯನ್ನು ಕೇಳಿದ್ದಾನೆ.
ಅರ್ಜುನ ಉವಾಚ
ನಷ್ಟೋ ಮೋಹಃ ಸ್ಮøತಿರ್ಲಬ್ಧಾ ತ್ವತ್ಪ್ರಸಾದಾನ್ಮಯಾಚ್ಯುತ |
ಸ್ಥಿತೋ„ಸ್ಮಿ ಗಹಸಂದೇಹಃ ಕರಿಷ್ಯೇ ವಚನಂ ತವ || 73 ||
ಅರ್ಥ :- ಅಚ್ಯುತನೇ, ನಿನ್ನ ಅನುಗ್ರಹದಿಂದ ನನ್ನ ಮೋಹವು ನಿವಾರಣೆಯಾಗಿದೆ. ನನಗೆ ಜ್ಞಾನ (ಎಚ್ಚರ)ವುಂಟಾಗಿದೆ. ಈಗ ನಾನು ಮಾನಸಿಕ ಹೊಯ್ದಾಟವಿಲ್ಲದೇ ಸ್ಥಿರವಾಗಿದ್ದೇನೆ. ನನ್ನ ಸಂಶಯಗಳೆಲ್ಲವೂ ನಿವಾರಣೆಯಾಗಿವೆ. ಈಗ ನಿನ್ನ ಮಾತಿನಂತೆ ವರ್ತಿಸುತ್ತೇನೆ.
ಅರ್ಜುನನು ತನ್ನ ಸ್ಥಿತಿಯನ್ನು ತಾನೇ ಸಂಪೂರ್ಣವಾಗಿ ವರ್ಣಿಸಿದ್ದಾನೆ. ಶ್ರೀಕೃಷ್ಣನು, ಹೇಳಿದ್ದಾನೆಂಬ ಮೂಢನಂಬಿಕೆಯಿಂದ ಅವನಲ್ಲಿ ಪರಿವರ್ತನೆಯಾಗಲಿಲ್ಲ. ಶ್ರೀಕೃಷ್ಣನ ಬೋಧದಿಂದ ಅವನ ಅಜ್ಞಾನ, ಹಾಗೂ ತಪ್ಪು ತಿಳಿವಳಿಕೆಗಳು ನಿವಾರಣೆಯಾಗಿ ಅವನಿಗೆ ಜ್ಞಾನೋದಯವಾಗಿದೆ. ಮನಸ್ಸು ಸ್ಥಿರವಾಗಿದೆ. ಸಾರಾಸಾರ ವಿಚಾರಮಾಡಿ ತನ್ನ ಕರ್ತವ್ಯವೇನು ಎಂದು ತಿಳಿದುಕೊಳ್ಳುವ ಜ್ಞಾನವು ಲಭಿಸಿದೆ. ತಾನು ಕ್ಷತ್ರಿಯನು, ತನ್ನ ಸ್ವಭಾವವೇನು, ತನ್ನ ಧರ್ಮ ಯಾವುದು, ತನ್ನ ಕರ್ತವ್ಯವೇನು ಎಂಬ ಅರಿವುಂಟಾಗಿದೆ. ಇವೆಲ್ಲವೂ ಗೀತೆಯ ಉಪದೇಶವನ್ನು ಸ್ಪಷ್ಟವಾಗಿ ತಿಳಿದು ಕೊಂಡದ್ದರಿಂದ ಲಭಿಸಿದೆ.
ಅರ್ಜುನನ ಮನಸ್ಸಿನಲ್ಲುಂಟಾಗಿದ್ದ ಉದ್ರೇಕ, ಕಾತರ, ಸಂಶಯ, ದುಃಖ, ವೈರಾಗ್ಯ, ಜಿಗುಪ್ಸೆ, ಹೆದರಿಕೆ, ದೌರ್ಬಲ್ಯ, ಇವೆಲ್ಲವೂ ನಿವಾರಣೆಯಾಗಿ, ಅವನು ತನ್ನ ಕರ್ತವ್ಯದ ಬಗ್ಗೆ ಯಾವ ಸಂದೇಹವೂ ಇಲ್ಲದೇ, ಸ್ಥಿರಬುದ್ಧಿಯುಳ್ಳವನಾಗಿದ್ದಾನೆ. ಈಗ ಶ್ರೀಕೃಷ್ಣನು ಹೇಗೆ ಹೇಳುತ್ತಾನೋ, ಅದರಂತೆ ವರ್ತಿಸಲು ತಯಾರಾಗಿದ್ದಾನೆ. ಗೀತೆಯ ಉಪದೇಶವನ್ನು ತಿಳಿದುಕೊಂಡು, ಮನನಮಾಡಿ, ಆಚರಣೆಯಲ್ಲಿ ತರುವುದರಿಂದ ಪ್ರತಿಯೊಬ್ಬ ಸಾಧಕನೂ, ಇದೇ ರೀತಿಯಾಗಿ ತನ್ನ ಮನೋದೌರ್ಬಲ್ಯವನ್ನೂ, ಸಂಶಯವನ್ನೂ ಕಳೆದುಕೊಂಡು, ತನ್ನ ನಿಜವಾದ ಕರ್ತವ್ಯವೇನೆಂಬುದನ್ನು, ಸರಿಯಾಗಿ, ಸ್ಪಷ್ಟವಾಗಿ ತಿಳಿದುಕೊಂಡು, ಆಂತರಿಕ ಮನಸ್ಸು ನುಡಿಯುವಂತೆ ಸನ್ಮಾರ್ಗದಲ್ಲಿ ಪ್ರವರ್ತಿಸಬಲ್ಲವನಾಗುತ್ತಾನೆ.
ಸಂಜಯ ಉವಾಚ
ಇತ್ಯಹಂ ವಾಸುದೇವಸ್ಯ ಪಾರ್ಥಸ್ಯ ಚ ಮಹಾತ್ಮನಃ |
ಸಂವಾದಮಿಮಮಶ್ರೌµ ಮ Àದು ದ್ಭುತಂ ರೋಮಹರ್ಷಣಮ್ || 74 ||
ಸಂಜಯನು ಹೇಳುತ್ತಾನೆ.
ಅರ್ಥ :- ವಾಸುದೇವ ಮತ್ತು ಮಹಾತ್ಮನಾದ ಪಾರ್ಥ ಇವರಿಬ್ಬರಲ್ಲಿಯ, ರೋಮಾಂಚವನ್ನುಂಟು ಮಾಡತಕ್ಕಂತಹ, ಮತ್ತು ಅದ್ಭುತವಾದ ಈ ಸಂಭಾಷಣೆಯನ್ನು ನಾನು ಈ ರೀತಿಯಾಗಿ ಕೇಳಿದೆನು.
ಹದಿನೆಂಟು ಅಧ್ಯಾಯದ ಶ್ರೀಮದ್ಭಗವದ್ಗೀತೆಯು ಮಹಾಭಾರತದಲ್ಲಿ ಭೀಷ್ಮಪರ್ವತದ ಒಂದು ಭಾಗ. ಸಂಜಯನು ಯುದ್ಧವಾರ್ತೆಯನ್ನು ಧೃತರಾಷ್ಟ್ರನಿಗೆ ಕೇಳಿಸುತ್ತಿರುವಾಗ, ಮಧ್ಯದಲ್ಲಿ ಅರ್ಜುನನ ವಿಷಾದವನ್ನು ಪರಿಹರಿಸುವುದಕ್ಕಾಗಿ ಶ್ರೀಮದ್ಭಗವದ್ಗೀತೆಯು ಬೋಧಿಸಲ್ಪಟ್ಟುದ್ದರಿಂದ, ಅದನ್ನು ತಾನು ಕೇಳಿದಂತೆ ಧೃತರಾಷ್ಟ್ರನಿಗೆ ವರ್ಣಿಸಿದ್ದಾನೆ. ಗೀತೆಯ ಉಪದೇಶವು ಮುಗಿದ ನಂತರ ಆರಿಸಿದ ಕೆಲವೇ ಶ್ಲೋಕಗಳಲ್ಲಿ ಸಂಜಯನು ಗೀತೆಯ ಮಹಾತ್ಮೆ, ಅರ್ಜುನನ ದೌರ್ಬಲ್ಯವು ನಿವಾರಣೆಯಾಗಿ ಅವನು ಯುದ್ಧಮಾಡಲು ಸಿದ್ಧನಾದ ಚಮತ್ಕಾರ, ಗೀತೆಯ ಶ್ರವಣದಿಂದ ತನಗುಂಟಾದ ಆನಂದ, ಇವೆಲ್ಲವನ್ನೂ ಸಂಕ್ಷೇಪವಾಗಿ ವರ್ಣಿಸಿದ್ದಾನೆ.
ಮಹಾಭಾರತ ಯುದ್ಧವನ್ನು ಧೃತರಾಷ್ಟ್ರನು ಇನ್ನಾದರೂ ನಿಲ್ಲಿಸಲಿ ಎಂಬ ಆಸೆ ಸಂಜಯನಿಗಿತ್ತು ಏಕೆಂದರೆ ಯುದ್ಧವನ್ನು ನಿಲ್ಲಿಸುವ ಅಧಿಕಾರ ಹಾಗೂ ಶಕ್ತಿ ಧೃತರಾಷ್ಟ್ರನಿಗೆ ಮಾತ್ರ ಇತ್ತು. ಆದುದರಿಂದ ಅರ್ಜುನನು, ಅಜ್ಞಾನವನ್ನು ಕೊಡವಿಹಾಕಿ ಯುದ್ಧಮಾಡಲು ತಯಾರಾಗಿ ನಿಂತುದನ್ನೂ, ಕೃಷ್ಣನ ಅನುಗ್ರಹವು ಅವನ ಮೇಲಿರುವುದನ್ನು ತಿಳಿಸಿ, ಅದರಿಂದ ಕೌರವರ ಮೇಲಾಗುವ ಪರಿಣಾಮವನ್ನು ಪರೋಕ್ಷವಾಗಿ ಸೂಚಿಸಿದ್ದಾನೆ. ಆದರೆ ಧೃತರಾಷ್ಟ್ರನ ಕಣ್ಣು ಕುರುಡಾಗಿದ್ದಂತೆ ಬುದ್ಧಿಯೂ ಕುರುಡಾಗಿತ್ತು.
ಸಂಜಯನು ವ್ಯಾಸರಿಗೆ ತನ್ನ ಕೃತಜ್ಞತೆಯನ್ನು ಅರ್ಪಿಸುತ್ತಾನೆ.
ವ್ಯಾಸಪ್ರಸಾದಾಚ್ಛ್ರುತವಾನೇತದ್ಗುಹ್ಯಮಹಂ ಪರಮ್ |
ಯೋಗಂ ಯೋಗೇಶ್ವರಾತ್ಕøಷ್ಣಾತ್ಸಾಕ್ಷಾತ್ಕಥಯತಃ ಸ್ವಯಮ್ || 75 ||
ಅರ್ಥ :- ಯೋಗೇಶ್ವರನಾದ ಕೃಷ್ಣನು ತಾನೇ ಸ್ವತಃ ಉಪದೇಶಮಾಡಿದ ಗುಟ್ಟಾದ ಮತ್ತು ಶ್ರೇಷ್ಠವಾದ ಈ ಯೋಗವನ್ನು ನಾನು ವೇದವ್ಯಾಸರ ಕೃಪೆಯಿಂದ ಕೇಳಲು ಸಮರ್ಥನಾದೆನು.
ಮಹಾಭಾರತ ಯುದ್ಧವು ಪ್ರಾರಂಭವಾಗುವ ಮೊದಲು, ಧೃತರಾಷ್ಟ್ರನ ಅಪೇಕ್ಷೆಯಂತೆ, ವ್ಯಾಸರು, ಸಂಜಯನಿಗೆ ಅರಮನೆಯಲ್ಲಿ ಕುಳಿತುಕೊಂಡೇ ಯುದ್ಧದಲ್ಲಿ ನಡೆಯುವ ಘಟನೆಗಳನ್ನು ನೋಡಬಲ್ಲ ಹಾಗೂ ಎಲ್ಲಾ ಮಾತುಗಳನ್ನೂ ಕೇಳಬಲ್ಲ ಯೋಗಶಕ್ತಿಯನ್ನು ದಯಪಾಲಿಸಿ, ತಾನು ಕಂಡುದದನ್ನು ಹಾಗೂ ಕೇಳಿದುದನ್ನು ಧೃತರಾಷ್ಟ್ರನಿಗೆ ವರದಿ ಮಾಡಬೇಕೆಂದು ಹೇಳಿದ್ದರು. ಈಗ ಸಂಜಯನು ವ್ಯಾಸರ ಅನುಗ್ರಹಕ್ಕಾಗಿ ಅವರನ್ನು ಮನಸಾ ವಂದಿಸುತ್ತಾನೆ.

ರಾಜನ್ಸಂಸ್ಮøತ್ಯ ಸಂಸ್ಮøತ್ಯ ಸಂವಾದಮಿಮಮದ್ಭುತಮ್ |
ಕೇಶವಾರ್ಜುನಯೋಃ ಪುಣ್ಯಂ ಹೃಶ್ಯಾಮಿ ಚ ಮುಹುರ್ಮುಹುಃ || 76 ||

ಅರ್ಥ :- ರಾಜನೇ, ಕೇಶವ ಮತ್ತು ಅರ್ಜುನ ಇವರಿಬ್ಬರಲ್ಲಿ ನಡೆದ ಅದ್ಬುತವೂ, ಪುಣ್ಯಕರವೂ ಆದ ಸಂಭಾಷಣೆಯನ್ನು ಜ್ಞಾಪಕಮಾಡಿಕೊಂಡ ಹಾಗೆ ನನ್ನಲ್ಲಿ ಪುನಃ ಪುನಃ ಸಂತೋಷವು ಉಕ್ಕೇರಿಬರುತ್ತಿದೆ.
ಗೀತೆಯನ್ನು ಹೇಗೆ ಹೀಗೆ ಓದ ಬೇಕೆಂಬುದನ್ನು ಇಲ್ಲಿ ಪರೋಕ್ಷವಾಗಿ ಹೇಳಲಾಗಿದೆ. ಸಂಜಯನು ಗೀತೋಪದೇಶವನ್ನು ಪದೇಪದೇ ಜ್ಞಾಪಕಮಾಡಿಕೊಂಡಂತೆ ಸಾಧಕನು ಗೀತೆಯನ್ನು ಪುನಃ ಪುನಃ ಓದಿ ಅರ್ಥಮಾಡಿಕೊಂಡು, ಮನನ ಮಾಡಬೇಕು. ಪದೇ ಪದೇ ಮನನ ಮಾಡುವುದರಿಂದ ಸಂಜಯನಿಗಾದಂತೆ ರೋಮಾಂಚನವುಂಟಾಗುತ್ತದೆ. ಜ್ಞಾನವು ದೃಢವಾಗಿ, ಶ್ರದ್ಧೆಯು ಬಲಿತು ಅವನು ತನ್ನ ಸಾಧನೆಯನ್ನು ಬಲಗೊಳಿಸಲು ಸಹಾಯವಾಗುತ್ತದೆ.

ತಚ್ಚ ಸಂಸ್ಕøತ್ಯ ಸಂಸ್ಕøತ್ಯ ರೂಪಮತ್ಯದ್ಭುತಂ ಹರೇಃ |
ವಿಸ್ಮಯೋ ಮೇ ಮಹಾನ್ ರಾಜನ್ ಹೃಷ್ಯಾಮಿ ಚ ಪುನಃ ಪುನಃ|| 77 ||
ಅರ್ಥ :- ರಾಜನೇ, ಹರಿಯ ಅದ್ಭುತವಾದ ಆ ವಿಶ್ವರೂಪವನ್ನು ಜ್ಞಾಪಿಸಿಕೊಂಡ ಹಾಗೆಲ್ಲಾ ನನಗೆ ಮಹಾದಾಶ್ಚರ್ಯವಾಗುತ್ತದೆ ಮತ್ತು ಪುನಃ ಪುನಃ ಆನಂದವುಕ್ಕೇರುತ್ತದೆ.
ಗೀತೆಯ ಉಪದೇಶವು ಬುದ್ಧಿಗೆ ಹಿಡಿದಂತೆ, ವಿಶ್ವರೂಪದರ್ಶನವು ಹೃದಯಕ್ಕೆ ಒಪ್ಪಿತವಾಗುತ್ತದೆ – ಆಪ್ಯಾಯಮಾನವಾಗುತ್ತದೆ.
ಯತ್ರ ಯೋಗೇಶ್ವರಃ ಕೃಷ್ಣೋಯತ್ರ ಪಾರ್ಥೋ ಧನುರ್ಧರಾ |
ತತ್ರ ಶ್ರೀರ್ವಿಜಯೋ ಭೂತಿಧ್ರ್ರುವಾ ನೀತಿರ್ಮತಿರ್ಮಮ || 78 ||
ಅರ್ಥ :- ಯೋಗೇಶ್ವರನಾದ ಕೃಷ್ಣನು, ಮತ್ತು ಧನುರ್ಧಾರಿಯಾದ ಪಾರ್ಥನು ಎಲ್ಲಿದ್ದಾರೋ ಅಲ್ಲಿ ಜಯ, ಸುಖ ಮತ್ತು ಸ್ಥಿರವಾದ ನೀತಿ ಇವು ನೆಲೆಸುತ್ತವೆ. ಇದು ನನ್ನ ಅಭಿಮತವು.
ಸಂಜಯನು ಗೀತೆಯ ಉಪದೇಶವನ್ನು ಕೇಳಿ ಆನಂದದಿಂದ ಉಕ್ಕೇರಿ ಅದರ ಮಹಾತ್ಮೆಯನ್ನು ವರ್ಣಿಸಲು ಪ್ರಾರಂಭಿಸಿದನು. ಮುಂದೆ ಅವನು ಕೊನೆಯ ವಾಕ್ಯದಲ್ಲಿ ತನ್ನ ಮನಸ್ಸಿನ ಭಾವವನ್ನು ಸಂಗ್ರಹವಾಗಿ ಹೇಳಿದ್ದಾನೆ.
ಗೀತೆಯ ಕೊನೆಯ ಶಬ್ದವು ‘ಮಮ’ ಎಂದಿದೆ. ಅಂತೆಯೇ ಮೊದಲನೆಯ ಶಬ್ದವು ‘ಧರ್ಮ’ ಎಂದಿದೆ. ಕೆಲವರು ಇವೆರಡನ್ನೂ ಸೇರಿಸಿ ಗೀತೆಯು, ‘ಮಮಧರ್ಮ’ ಅಂದರೆ ನನ್ನ ಧರ್ಮ ಎಂದು ಅರ್ಥ ಮಾಡುತ್ತಾರೆ. ಗೀತೆಯು ಪ್ರತಿಯೊಬ್ಬನಿಗೂ ತನ್ನ ಧರ್ಮವನ್ನುಪದೇಶಿಸಿ, ಆತ್ಮಜ್ಞಾನವನ್ನು ಪಡೆಯುವ ದಾರಿಯನ್ನು ಬೋಧಿಸುವುದರಿಂದ ಈ ಅರ್ಥವು ಭಾವಪೂರಿತವಾಗಿದೆ.
ಓಂ ತತ್ಸದಿತಿ
ಶ್ರೀಮದ್ಭಗವದ್ಗೀತಾಸೂಪನಿಪತ್ಸು ಬ್ರಹ್ಮವಿದ್ಯಾಯಾಂ ಯೋಗ ಶಾಸ್ತ್ರೇ
ಶ್ರೀಕೃಷ್ಣಾರ್ಜುನ ಸಂವಾದೇ ಮೋಕ್ಷಸನ್ಯಾಸಯೋಗೋನಾಮ…
ಅಷ್ಟಾದಶೋ„ಧ್ಯಾಯಃ
******

ಶ್ರೀಮದ್ಭಗವದ್ಗೀತೆಯ ಈ ಕೊನೆಯ ಅಧ್ಯಾಯದಲ್ಲಿ ಇದುವರೆಗಿನ ಉಪದೇಶದ ಸಾರವು ಸಂಗ್ರಹಿತವಾಗಿ ವರ್ಣಿಸಲ್ಪಟ್ಟಿದೆ.