Uncategorized
  1. Intro
  2. Intro2
Swami Chinmayaanda’s Commentary into Kannada

ಶ್ರೀ ಭಗವದ್ಗೀತಾ
ಸ್ವಾಮೀ ಚಿನ್ಮಯಾನಂದರ ಕೃತಿಯ ಕನ್ನಡ ಭಾವಾನುಸಾರ

ಅನುವಾದಕ : ವೈದ್ಯ ವಿನಾಯಕ ರಾವ್ ಬಾಪಟ್
ಕೃತಜ್ಞತೆ

ಮೂಕಂ ಕರೋತಿವಾಚಾಲಂ ಪಂಗುಂಲಂಘಯತೇಗಿರಿಮ್
ಯತ್ಕೃಷಾತಮಹಂವಂದೇ ಪರಮಾನಂದ ಮಾಧಮಮ್ |

ಎಂಬ ಆಶ್ವಾಸನೆಗೆ ಪ್ರತ್ಯಕ್ಷ ಅನುಭವದ ನಿದರ್ಶನ ಈ ಅನುವಾದ ಮುಂಬಯಿಯಲ್ಲಿ ಮೂವತ್ತು ಒಳರೋಗಿಗಳನ್ನೊಳಗೊಂಡ ಸಂಶೋಧನಾ ಚಿಕಿತ್ಸಾಲಯದ ಪ್ರಧಾನ ಚಿಕಿತ್ಸಕನಾಗಿ ಕೆಲಸ ಮಾಡುತ್ತಿದ್ದ ಒತ್ತಡದ ಕಾರ್ಯದ ಮಧ್ಯದಲ್ಲಿ 102 ದಿವಸಗಳಷ್ಟು ಅಲ್ಪಕಾಲದಲ್ಲಿ, ಸುಮಾರು 1000 ಪುಟಗಳಷ್ಟು ಮೂಲವ್ಯಾಖ್ಯಾನವನ್ನು ಓದಿ, ಜೀರ್ಣಿಸಿಕೊಂಡು, ಅನುವಾದ ಕಾರ್ಯವನ್ನು ಮುಗಿಸಿದುದು, ಪರಮಾತ್ಮನಕೃಪೆಯಿಂದ ಮಾತ್ರ ಸಾಧ್ಯವಾಯಿತೆಂದು ನನ್ನ ದೃಢವಾದ ನಂಬಿಕೆ. ಕೈತಪ್ಪಿನಿಂದ ಉಳಿದ 2-3 ಪುಟಗಳನ್ನು ಮುಂದೆ ಎಷ್ಟೇ ಪ್ರಯತ್ನ ಮಾಡಿದಾಗ್ಯೂ ಒಪ್ಪಿತವಾಗುವಂತೆ ಅನುವಾದ ಮಾಡಲಾಗದುದೂ, ನಂತರ ಆತನ ಕೃಪಾವೃಷ್ಟಿ ಒದಗಿದಾಗ ಕೇವಲ ಅರ್ಧಗಂಟೆಯಲ್ಲಿ ಅನುವಾದವನ್ನು ಮುಗಿಸಿದುದೂ ನನ್ನ ನಂಬಿಕೆಯನ್ನು ದೃಢಪಡಿಸುತ್ತದೆ. ಇಷ್ಟು ಸ್ವಲ್ಪ ಕಾಲದಲ್ಲಿ ಈ ಕಾರ್ಯವು ಮುಗಿದುದನ್ನು ಕೇಳಿ ಶ್ರೀ ಶ್ರೀಚಿನ್ಮಯಾನಂದಜೀಯವರು ಆಶ್ಚರ್ಯವನ್ನು ವ್ಯಕ್ತಪಡಿಸಿದರು. ಅಲ್ಪನಾದ ನನ್ನಿಂದ ಈ ಮಹತ್ಕಾರ್ಯವನ್ನು ಮಾಡಿಸಿದುದಕ್ಕಾಗಿ ಪರಮಾತ್ಮನಿಗೆ ಮೊಟ್ಟಮೊದಲನೆ ಕೃತಜ್ಞತೆ.

ಅನುವಾದ ಕಾರ್ಯವು ನಡೆದಿರುವಾಗ, ಗೃಹಕೃತ್ಯದ ನಿರ್ವಹಣೆಯ ಜವಾಬ್ದಾರಿಯು ನನ್ನ ಮೇಲೆ ಸ್ವಲ್ಪವೂ ಬೀಳದಂತೆ, ಎಲ್ಲವನ್ನೂ ವ್ಯವಸ್ಥಿತವಾಗಿ ನಿರ್ವಹಿಸಿ ಈ ಕಾರ್ಯದಲ್ಲಿ ಪೆÇ್ರೀತ್ಸಾಹವನ್ನು ಕೊಟ್ಟ ನನ್ನ ಸಹಧರ್ಮಿಣಿಗೆ ಕೃತಜ್ಞತೆಯನ್ನು ಸಲ್ಲಿಸದೆ ಇರಲಾರೆ. ಅಂತೆಯೇ ಚಿಕಿತ್ಸಾಲಯದ ನನ್ನ ಜವಾಬ್ದಾರಿಯ ನಿರ್ವಹಣೆಯಲ್ಲಿ ಯಾವ ಲೋಪದೋಷಗಳಾಗಲೀ, ಆಕ್ಷೇಪಗಳಾಗಲೀ ಬಾರದಂತೆ ಸಹಕರಿಸಿದ ನನ್ನ ಸಹೋದ್ಯೋಗಿಗಳಿಗೂ, ಇತg Àಕಾರ್ಯಕರ್ತರಿಗೂ ಕೃತಜ್ಞತೆಯನ್ನು ವ್ಯಕ್ತಪಡಿಸಲೇಬೇಕು .
ಚಿನ್ಮಯಾಮಿಶನ್ನಿನವರು ಈ ಕೃತಿಯನ್ನು ಅಚ್ಚು ಹಾಕಿಸಲು ಸುಮಾರು ಹತ್ತು ವರ್ಷಗಳ ಹಿಂದೆಯೇ ಒಪ್ಪಿದ್ದರು. ನಾನಾ ವಿಘ್ನಗಳಿಂದಾಗಿ ಇಷ್ಟು ದೀರ್ಘಕಾಲದವರೆಗೆ ಅದನ್ನು ಕಾರ್ಯರೂಪಕ್ಕೆ ತರಲಾಗಲಿಲ್ಲ. ಶ್ರೀ||ಶ್ರೀ|| ಸ್ವಾಮೀದಯಾನಂzಜೀಯವರ ಅನುಗ್ರಹದಿಂದ ಅದು ಈಗ ಬೆಳಕನ್ನು ಕಾಣುತ್ತಿದೆ. ಅವರಿಗೂ ಈ ಪ್ರಕಟಣೆಯ ಜವಬ್ದಾರಿಯನ್ನು ಹೊತ್ತ ಚಿನ್ಮಯ ಮಿಶನ್ನಿನವರಿಗೂ ನನ್ನ ಕೃತಜ್ಞತೆಗಳು.
ಈ ಕೃತಿಯು ಭಾವಾನುವಾದ. ಇದರಲ್ಲಿ ಲೋಪದೋಷಗಳೇನಾದರೂ ಕಂಡರೆ, ವಿಮರ್ಶಕರು ತಿಳಿಸಿದಲ್ಲಿ ಅವರ ಸಲಹೆಯನ್ನು ಕೃತಜ್ಞತೆ ಸ್ವೀಕರಿಸಲಾಗುವುದು. ಓಂ ತತ್ಸತ್.

ಮಾರ್ಚ್ 1977 ಬೆಂಗಳೂರು – 19 ವಿನಾಯಕರಾವ್ ಬಾಪಟ್

ಈ ಕೃತಿಯನ್ನು ನನ್ನ ಪೂಜ್ಯ ತಂದೆಯವರಾದ ದಿ|| ವಿನಾಯಕ್‍ರಾವ್ ಬಾಪಟ್‍ರವರು ಮೇ 1966 ರಲ್ಲಿ ಪೂರ್ತಿಗೊಳಿಸಿದರು. ಸ್ವಾಮೀ ಚಿನ್ಮಯಾನಂದಜೀಯವರು ಇದನ್ನು ಅಚ್ಚು ಹಾಕಲು ಒಪ್ಪಿಕೊಂಡರು. ಕಾರಣಾಂತರದಿಂದ ಇದನ್ನು ಅಚ್ಚುಗೊಳಿಸಲಾಗಲಿಲ್ಲ. 1977 ರಲ್ಲಿ ಸ್ವಾಮೀ ದಯಾನಂದಜೀಯವರು ಅನುಗ್ರಹ ಮಾಡಿ ಪುಸ್ತಕವನ್ನು ಛಾಪಿಸಲು ಒಪ್ಪಿಕೊಂಡರು. ಅದೇನೋ ವಿಘ್ನ ಬಂದು ಈ ಕೆಲಸ ಕೈಬಿಟ್ಟು ಹೋಯಿತು.

ಪುಸ್ತಕವನ್ನು ಛಾಪಿಸುವ ಯೋಜನೆಯು ಕಾರ್ಯಗತವಾಗಲಿಲ್ಲ. ಎಲ್ಲಾ ಪರಮಾತ್ಮನ ಇಚ್ಛೆ. ಸ್ವಾಮೀ ಚಿನ್ಮಯಾನಂದಜೀಯವರ ಇಷ್ಟು ಉತ್ತಮವಾದ ಭಾಷ್ಯವು ಕನ್ನಡದ ಸಾಧಕರಿಗೆ ಲಭ್ಯವಾಗಲೆಂದು ಈಗ ಅಂತರ್ಜಾಲದಲ್ಲಿ ಹಾಕಲಾಗಿದೆ. ಸಾಧಕರಿಗೆ ಉಪಯೋಗವಾದೀತೆಂಬ ಆಸೆ ಇದೆ.

ಬೆಂಗಳೂರು – 560 085 ವಿಷ್ಣುರಾವ್ ಬಾಪಟ್
ಜುಲೈ 2022