Uncategorized
  1. Intro
  2. Intro2

ಗೀತಾಧ್ಯಾನವು

ಓಂ ಪಾರ್ಥಾಯ ಪ್ರತಿಬೋಧಿತಾಂ ಭಗವತಾನಾರಾಯಣೇನ ಸ್ವಯಮ್ |
ವ್ಯಾಸೇನ ಗ್ರಥಿತಾಂ ಪುರಾಣಮುನಿನಾ ಮಧ್ಯೇ ಮಹಾಭಾರತಮ್ |

ಅದ್ವೈತಾಮೃತವರ್ಷಿಣೀಂ ಭಗವತೀಮûಷ್ಟಾದಶಾಧ್ಯಾಯಿನೀಂ | |
ಮಂಬತ್ವಾಮನುಸಂದಧಾಮಿ ಭಗವದ್ಗೀತೆ ಭವದ್ವೇûಷಿಣೀಮ್ || 1 ||

ಅರ್ಥ : ಶ್ರೀಮನ್ನಾರಾಯಣನೇ ಸ್ವತಃ ಅರ್ಜುನನಿಗೆ ಬೋಧಿಸಿರುವ, ಪುರಾತನ ಋûಷಿಯಾದ ವ್ಯಾಸರು ಮಹಾಭಾರತ ಮಧ್ಯದಲ್ಲಿ ಜೋಡಿಸಿರುವ, ಅದ್ವೈತ ತತ್ವದ ಅಮೃತಧಾರೆಯನ್ನು ಸುರಿಸುತ್ತಿರುವ, ಹದಿನೆಂಟು ಅಧ್ಯಾಯಗಳಿಂದ ಕೂಡಿರುವ ಸಂಸಾರ ಬಂಧವನ್ನು ಬಿಡಿಸುವ ಓಂ, ಗೀತಾಮಾತೆಯೇ’ ನಾನು ನಿನ್ನ ಧ್ಯಾನವನ್ನು ಮಾಡುತ್ತೇನೆ.
ಭಗವದ್ಗೀತೆಯನ್ನು ಜಗತ್ತಿನ ತಾಯಿ (ಜಗದಂಬೆ) ಎಂದು ಭಾವಿಸಿ ಮೊಟ್ಟಮೊದಲು ಅವಳ ಧ್ಯಾನವನ್ನು ಮಾಡಲಾಗಿದೆ. ಗೀತೆಯಲ್ಲಿ ಶ್ರದ್ಧ, ಭಕ್ತಿ, ಗೌರವಗಳನ್ನು ಬೆಳೆಯಿಸಿಕೊಂಡರೆ ಅದನ್ನು ಓದಿ ಅದರಲ್ಲಿರುವ ಜ್ಞಾನವನ್ನು ತಿಳಿದುಕೊಳ್ಳುವುದು ಸುಲಭವಾಗುತ್ತದೆ. ಎಲ್ಲಾ ಉಪನಿಷತ್ತುಗಳಂತೆ ಗೀತೆಯೂ ಸಹ ಗುರು-ಶಿಷ್ಯ ಸಂವಾದ ರೂಪದಲ್ಲಿ ಹೇಳಲ್ಪಟ್ಟಿದೆ. ಇದನ್ನು ಬೋಧಿಸುವವನು ಜಗತ್ತಿನ ಗುರುವಾದ ಶ್ರೀಮನ್ನಾರಾಯಣನು. ಆದರೆ ಶಿಷ್ಯನು ಮಾತ್ರ ಆಧ್ಯಾತ್ಮಿಕ ಜ್ಞಾನಾಭಿಲಾಷೆಯುಳ್ಳವನಾಗಿರದೆ, ಸಂಸಾರದ ಆಶೆ-ಆಕಾಂಕ್ಷೆಗಳಿಂದ ತುಂಬಿ ಸುಖ-ದುಃಖಗಳನ್ನು ಅನುಭವಿಸುತ್ತಿರುವ ರಾಜಕುವರನಾಗಿದ್ದಾನೆ.

ಇವನು ತನ್ನ ಮಾನಸಿಕ ಶಾಂತಿಯನ್ನೂ ವಿಚಾರಶಕ್ತಿಯನ್ನೂ ಕಳೆದುಕೊಂಡು, ಧೈರ್ಯಗುಂದಿ, ತನ್ನ ಧರ್ಮವನ್ನು ತಿಳಿಯಲಾರದೆ ಯುದ್ಧಕ್ಕೆ ಹೆದರಿ ಓಡಿಹೋಗಬೇಕೆಂಬ ಸ್ಥಿತಿಯಲ್ಲಿದ್ದಾನೆ. ನಮ್ಮ ನಿತ್ಯ ವ್ಯವಹಾರದಲ್ಲಿ ನಾವು ಅನೇಕವಾಗಿ ಇಂತಹ ಪರಿಸ್ಥಿತಿಯಲ್ಲಿ ಸಿಕ್ಕು ತತ್ತರಿಸುತ್ತೇವೆ. ಈ ಸ್ಥಿತಿಯಲ್ಲಿರುವ ಅರ್ಜುನನ ಮಾನಸಿಕ ಮಟ್ಟಕ್ಕೆ, ಸುಲಭವಾಗಿ ತಿಳಿಯುವಂತೆ ಗೀತೆಯು ಸ್ವತಃ ನಾರಾಯಣನಿಂದ ಬೋಧಿಸಲ್ಪಟ್ಟಿದೆ. ಇಂತಹ ಶ್ರೇಷ್ಠ ಗುರುವು ಸಿಗಲಾರನು. ಇದರಲ್ಲಿಂiÀi ಬೋಧವು ಸಾಮಾನ್ಯ ಮಾನವನಿಗೆ ಸಹ ಸುಲಭವಾಗಿ ತಿಳಿಯುವಂತಿದೆ. ಶ್ರೀ ಕೃಷ್ಣನು ಬೋಧಿಸಿದ ಈ ಉಪದೇಶವನ್ನು ಸ್ವತಃ ಕೇಳಿದ ಸಂಜಯನು ತಾನು ಕೇಳಿದಂತೆ ವರದಿ ಮಾಡಿದ್ದಾನೆ.

ಮಹಾಪಂಡಿತರೂ, ಅಪರೋಕ್ಷ ಜ್ಞಾನಿಗಳೂ ಆದ ವೇದವ್ಯಾಸರು ಎಲ್ಲಾ ವೇದಗಳನ್ನೂ ಬ್ರಹ್ಮಸೂತ್ರಗಳನ್ನೂ ಸಂಗ್ರಹಿಸಿ ಮಹಾಭಾರತವನ್ನು ಬರೆಯುವಾಗ ಆದರ ಮಧ್ಯದಲ್ಲಿ ಶ್ರೀಮದ್ಭವದ್ಗೀತೆಯನ್ನು ಜೋಡಿಸಿದ್ದಾರೆ. ವ್ಯಾಸರ ಲೇಖನಿಯಿಂದ ಹೊರಬಿದ್ದ ಗೀತೆಯು ಸಾಹಿತ್ಯ
ದೃಷ್ಟಿಯಿಂದ ಕಾವ್ಯದೃಷ್ಟಿಯಿಂದ ಹಾಗೂ ವೇದಾಂತ ದೃಷ್ಟಿಯಿಂದ ಸರ್ವೋತ್ತಮ ಕೃತಿಯಾಗಿದೆ. ಇದರಲ್ಲಿ ಅದ್ವೈತ ತತ್ವವನ್ನು ಅಂದರೆ ಜೀವ ಮತ್ತು ಪರಮಾತ್ಮ ಇವರಿಬ್ಬರೂ ಒಬ್ಬನೇ ಎಂಬ ತತ್ವವನ್ನು ಪ್ರತಿಪಾದಿಸಲಾಗಿದೆ. ಈ ಜ್ಞಾನವನ್ನು ತಿಳಿದು ಕೊಳ್ಳುವುದರಿಂದ ಜೀವನು ತನ್ನ ಶರೀರ ಮನಸ್ಸು ಬುದ್ದಿಗಳ ಮುಖಾಂತರ ಅನುಭವಿಸುತ್ತಿರುವ ಸುಖ ದುಃಖಾದಿಗಳನ್ನು ಕಳಚಿಕೊಂಡು, ತಾನೇ ಪರಮಾತ್ಮ ಎಂಬ ಅಖಂಡ ಜ್ಞಾನವನ್ನು ಆನಂದವನ್ನೂ ಅನುಭವಿಸಲು ಸಮರ್ಥನಾಗುತ್ತಾನೆ .

ನಮೋಸ್ತುತೇ ವ್ಯಾಸವಿಶಾಲ ಬುದ್ದೇ ಪುಲ್ಲಾರವಿಂದಾಯತ ಪತ್ರನೇತ್ರ |
ಯೇನತ್ವಯಾ ಭಾರತ ತೈಲಪೂರ್ಣ ಪ್ರಜ್ವಾಲತೋ ಜ್ಞಾನಮಯ ಪ್ರದೀಪ: || 2 ||

ಅರ್ಥ : ವಿಶಾಲವಾದ ಬುದ್ಧಿಯುಳ್ಳ ವ್ಯಾಸನೇ ನಿನಗೆ ನಮಸ್ಕಾರವು. ನೀನು ಅರಳಿದ ಕಮಲದ ಹೂವಿನ ದಳಗಳಂತೆ ಅಗಲವಾದ ಕಣ್ಣುಗಳುಳ್ಳವನು ನೀನು ಜ್ಞಾನ ಎಂಬ ದೀಪವನ್ನು ಮಹಾಭಾರತ ಎಂಬ ತೈಲದಿಂದ ತುಂಬಿ ಪ್ರಜ್ವಲಿಸಿದ್ದೀಯೆ. ನಿನಗೆ ನಮಸ್ಕಾರವು.

ಪ್ರಪನ್ನ ಪಾರಿಜಾತಾಯ ತೋತ್ರವೇತ್ರೈಕಪಾಣಯೇ |
ಜ್ಞಾನಮುದ್ರಾಯ ಕೃಷ್ಣಾಯ ಗೀತಾಮೃತದುಹೇ ನಮಃ || 3 ||

ಅರ್ಥ : ಶರಣಾಗತರಾದವರಿಗೆ ಇಷ್ಟಾರ್ಥಗಳನ್ನು ಸಲ್ಲಿಸುವ ಒಂದು ಕೈಯ್ಯಲ್ಲಿ ಬಾರಕೊಲುನ್ನೂ ಮತ್ತೊಂದು ಕೈಯಲ್ಲಿ ಬೆತ್ತವನ್ನೂ ಹಿಡಿದುಕೊಂಡಿರುವ ಜ್ಞಾನಮುದ್ರೆಯುಳ್ಳ ಗೀತಾಮೃತ ಎಂಬ ಹಾಲನ್ನು ಕರೆದಿರುವ ಶ್ರೀಕೃಷ್ಣನಿಗೆ ನಮಸ್ಕಾರವು .
ಗೀತೆಯನ್ನು ಉಪದೇಶಿಸಿದ ಕೃಷ್ಣನಲ್ಲಿ ಭಕ್ತಿಯನ್ನು ಮೈಗೂವಿಸಿಕೊಂಡರೆ ಅವನ ಉಪದೇಶದಲ್ಲಿ ಶ್ರದ್ಧೆ ಹುಟ್ಟುತ್ತದೆ ಮತ್ತು ಅದನ್ನು ಚೆನ್ನಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಇಲ್ಲಿ ಕೃಷ್ಣನನ್ನು ನಮಸ್ಕರಿಸಲಾಗಿದೆ. ದೇವಲೋಕದ ಪಾರಿಜಾತ ಎಂಬ ವೃಕ್ಷವುಂಟು . ಅದರ ಬುಡಕ್ಕೆ ಹೋದವರಿಗೆಲ್ಲಾ ಇಷ್ಟಾರ್ಥಗಳನ್ನು ಪೂರೈಸುವಂತೆ, ಕೃಷ್ಣನು ಶರಣಾಗತರಾದವರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ. ಶ್ರೀಕೃಷ್ಣನು, ಗೋಪಾಲಕನೆಂಬುದನ್ನು ಸೂಚಿಸುವುದಕ್ಕೆ ಬೆತ್ತವನ್ನು ಸಾರಥಿ ಎಂಬುದನ್ನು ಸೂಚಿಸುವುದಕ್ಕೆ ಬಾರಕೋಲನ್ನು ಹಿಡಿದುಕೊಂಡಿದ್ದಾನೆ. ಆತ್ಮಜ್ಞಾನಾನಂದ ಸ್ಥಿತಿಯಲ್ಲಿರುವುದನ್ನು ಜ್ಞಾನಮುದ್ರೆಯು ಸೂಚಿಸುತ್ತದೆ.

ಸರ್ವೋಪನಿಷದೋಗಾವೋ ದೊಗ್ಥಾ ಗೋಪಾಲನಂದನ: |
ಪಾರ್ಥೋವತ್ಯಃ ಸುಧೀರ್ಭೋಕ್ತಾದುಗ್ಧಂಗೀತಾಮೃತಂ ಮಹತ್ || 4 ||

ಅರ್ಥ : ಪಾರ್ಥನೆಂಬ ಕರುವುಳ್ಳ ಉಪನಿಷತ್ ಎಂ¨ ಗೋವುಗಳಿಂದ ಗೋಪಾಲನಂದನಾದ ಶ್ರೀಕೃಷ್ಣನು ಶ್ರೇಷ್ಠವಾದ ಗೀತಾಮೃತ ಎಂಬ ಹಾಲನ್ನು ಕರೆದಿದ್ದಾನೆ. ಇದನ್ನು ಉಂಡು ಅನುಭವಿಸುವವರು ಬುದ್ಧಿವಂತರಾದ ಮಾನವರು.
ಭಗವದ್ಗೀತೋಪದೇಶವನ್ನು ಹಾಲಿಗೆ ಹೋಲಿಸಿರುವುದು ತುಂಬಾ ಅರ್ಥವತ್ತಾಗಿದೆ. ಹಾಲು, ಬಾಲಕರು, ತರುಣರು, ವೃದ್ಧರು, ರೋಗಿಗಳು, ದುರ್ಬಲರು, ಪೈಲ್ವಾನರು, ಮೇಧಾವಿಗಳು ಎಲ್ಲರಿಗೂ ಉಪಯುಕ್ತವಾದ ಪೌಷ್ಟಿಕ ಆಹಾರವಾಗಿದೆ. ಹೀಗೆ ಸರ್ವರಿಗೂ ಉಪಯುಕ್ತವಾದ ಆಹಾರವು ಬೇರೊಂದಿಲ್ಲ. ಗೀತೋಪದೇಶಗಳು ಸಹ ಜಾತಿಭೇದ, ದೇಶಭೇದ, ಲಿಂಗಭೇದ, ಕಾಲಭೇದಗಳಿಲ್ಲದೆ ಇಡೀ ಪ್ರಪಂಚದಲ್ಲಿರುವ ಎಲ್ಲಾ ಜನೆತೆಗೂ ಉಪಯುಕ್ತವಾಗಿದೆ. ಪ್ರತಿಯೊಬ್ಬರೂ ತನ್ನ ಶಕ್ತಿ ಸಾಮಥ್ರ್ಯಗಳಿಗನುಸಾರವಾಗಿ ಈ ಬೋಧದ ಲಾಭವನ್ನು ಪಡೆಯಬಹುದಾಗಿದೆ.

ವಸುದೇವ ಸುತಂದೇವಂ ಕಂಸಜಾಣೂರಮರ್ದನಮ್ |
ದೇವಕೀಪರಮಾನಂದಂ ಕೃಷ್ಣಂವಂದೇ ಜಗದ್ಗುರುಮ್ || 5 ||

ಅರ್ಥ : ವಸುದೇವನ ಮಗನಾದ, ಕಂಸಜಾಣೂರರನ್ನೂ ಕೊಂದಿರುವ, ದೇವಕಿಗೆ ಪರಮಾನಂದವನ್ನುಂಟು ಮಾಡುವ, ಜಗದ್ಗುರುವಾದ ಕೃಷ್ಣನನ್ನು ನಮಸ್ಕರಿಸುತ್ತೇನೆ.

ಭೀಷ್ಮದ್ರೋಣತಟಾಜಯದ್ರಥ ಜಲಾಗಾಂಧಾರ ನೀಲೋತ್ಪಲಾ (ಪಲಾ) |
ಶಲ್ಯಗ್ರಾಹವತೀ ಕೃಪೇಣವಹನೀ ಕರ್ಣೀನವೇಲಾಕುಲಾ
ಅಶ್ವತ್ಥಾಮ ವಿಕರ್ಣಘೋರಮಕರಾದುರ್ಯೋಧನಾವರ್ತಿನೀ |
ಸೋತ್ರೀರ್ಣಖಲು ಪಾಂಡವೈರಣನದೀ ಕೈವರ್ತಕಃ ಕೇಶವಃ || 6 ||

ಅರ್ಥ : ಮಹಾಭಾರತ ಯುದ್ಧವನ್ನು ನದಿಗೆ ಹೋಲಿಸಿ ಈ ರಣನದಿಯ ವರ್ಣನೆಯನ್ನು ಮಾಡಲಾಗಿದೆ. ಭೀಷ್ಮ ಮತ್ತು ದ್ರೋಣ ಇವರಿಬ್ಬರು ರಣನದಿಯ ಎಡಬಲ ದಂಡೆಗಳು. ಜಯದ್ರಥನು ನದಿಯ ನೀರು. ಗಾಂಧಾರ ರಾಜನು ಈ ನದಿಯ ಮಧ್ಯದಲ್ಲಿರುವ ನೀಲಿಕಮಲ. (ನಿಲೋಪಲಾ ಎಂಬ ಶಬ್ದವನ್ನಿಟ್ಟುಕೊಂಡರೆ – ನದಿಯ ಮಧ್ಯದಲ್ಲಿರುವ ನೀಲಿಯ ಕಲ್ಲು ಬಂಡೆ), ಶಲ್ಯನು ದೊಡ್ಡ ಮೊಸಳೆಯು (ತಿಮಿಂಗಿಲ), ಕೃಷ್ಣನು ನೀರಿನ ಪ್ರವಾಹ, ಕರ್ಣನು ನೀರಿನ ದೊಡ್ಡತೆರೆಯು, ಅಶ್ವತ್ಥಾಮ ಮತ್ತು ವಿಕರ್ಣ ಇವರು ಭಯಂಕರವಾದ ಮೊಸಳೆಗಳು, ದುರ್ಯೋಧನನು ನೀರಿನ ಸುಳಿಯು. ಇಂತಹ ಭಯಂಕರವಾದ ರಣನದಿಯಲ್ಲಿ ಉತ್ತಮನಾವಿಕನಾದ ಕೇಶವನು, ಪಾಂಡವರನ್ನು ಈ ದಡದಿಂದ ಆ ದಡಕ್ಕೆ ಸುಖವಾಗಿ ದಾಟಿಸಿ ಪಾರುಮಾಡಿದನು.

ಪಾರಾಶರ್ಯವಚಃ ಸರೋಜಮಮಲಂ ಗೀತಾರ್ಥಗಂಧೋತ್ಕಟಂ
ನಾನಾಖ್ಯಾನಕ ಕೇಸರಂ ಹರಿಕಥಾ ಸಂಬೋಧನಾ ಚೋದಿತಮ್ |
ಲೋಕೇ ಸಜ್ಜನ ಷಟ್ಪದೈರಹರಹಃ ಪೇಪೀಯ್ ಮಾನಂ ಮುದಾ
ಭೂಯೊದ್ಭಾರತ ಪಂಕಜಂ ಕಲಿಮಲ ಪ್ರಧ್ವಂಸಿನ ಶ್ರೇಯಸೇ || 7 ||

ಅರ್ಥ : ಮಹಾಭಾರತದ ಇನ್ನೊಂದು ಮುಖವನ್ನು ಇಲ್ಲಿ ವರ್ಣಿಸಿ ಅದನ್ನು ಪರಿಶುದ್ಧವಾದ ಕಮಲದ ಹೂವಿಗೆ ಹೋಲಿಸಲಾಗಿದೆ. ಈ ಕಮಲದ ಹೂವಿಗೆ ಮಧುರವಾದ ವಾಸನೆಯು ಭಾವನೆಗರ್ಭಿತವಾದ ಗೀತೆಯ ಬೋದದಿಂದ ಬಂದಿದೆ. ಮಹಾಭಾರತದಲ್ಲಿ ಬಂದಿರುವ ನಾನಾವಿಧವಾದ ಕಥೆಗಳು ಕಮಲದ ಹೂವಿಗೆ ಕೇಸರಗಳು ಹರಿಯ ಕಥೆಗಳಿಂದ ಈ ಹೂವು ಪಕ್ವವಾಗಿ ಅರಳಿದೆ. ಲೋಕದಲ್ಲಿರುವ ಸಜ್ಜನರೆಂಬ ಭ್ರಮರಗಳು ಪ್ರತಿದಿನವೂ ಈ ಕಮಲದಲ್ಲಿರುವ ಮಕರಂದವನ್ನು ಪ್ರೇಮದಿಂದ ಪಾನಮಾಡುತ್ತಾರೆ. ತಮ್ಮಲ್ಲಿರುವ ಅಜ್ಞಾನವನ್ನು ಕಳೆದುಕೊಂಡು ಶ್ರೇಯಸ್ಸನ್ನು ಸಂಪಾದಿಸಬೇಕೆನ್ನುವವರಿಗೆ ಈ ಭಾರತ ಕಮಲವು ಅವರ ಬಯಕೆಯನ್ನೂ ಪೂರೈಸಲಿ .
ಸಜ್ಜನರು, ಐದು ಇಂದ್ರಿಯಗಳು ಮತ್ತು ಮನಸ್ಸು ಎಂಬ ಆರು ಕಾಲುಗಳಿಂದ ಗೀತಾ ಬೋಧವೆಂಬ ಮಕರಂದವನ್ನು ಹೀರಿಕೊಳ್ಳುವುದರಿಂದ ಇವರನ್ನು ಷಟ್ಪದಿ (ಭ್ರಮರ) ಗಳಿಗೆ ಹೋಲಿಸಲಾಗಿದೆ.

ಮೂಕಂ ಕರೋತಿಚಾಲಂ ಪಂಗುಂಲಂಘಯತೇಗಿರಿಮ್ |
ಯತ್ಕೃಪಾತಮಹಂ ವಂದೇ ಪರಮಾನಂದ ಮಾಧವಮ್ || 8 ||

ಅರ್ಥ : ಯಾವ ಪರಮಾನಂದದಾಯಕನಾದ ಮಾಧವನ ಕೃಪೆಯಿದ್ದರೆ, ಮೂಕನು ವಾಚಾಳಿಯಾಗಬಲ್ಲನೋ, ಕುಂಟನು ಪರ್ವತವನ್ನು ಏರಿಹೋಗಬಲ್ಲನೋ, ಅಂತಹ ಮಾಧವನನ್ನು ನಮಸ್ಕರಿಸುತ್ತೇನೆ.

ಯಂ ಬ್ರಹ್ಮಾವರುಣೇಂದ್ರ ರುದ್ರಮರುತಃ ಸ್ತುನ್ವಂತಿ ದಿವ್ಯೈಃ ಸ್ವವ್ಯಃ |
ವೇದೈಃ ಸಾಂಗಪದಕ್ರಮೋಪನಿûದೈಃ ಗಾಯಂತಿಯಂ ಸಾಮಗಾಃ |
ಧಾನಾವಸ್ಥಿತತದ್ಗತೇನ ಮನಸಾ ಪಶ್ಯಂತಿಯಂ ಯೋಗಿನೋ
ಯಸ್ಯಾಂತಂ ನವಿದುಃ ಸುರಾಸುರಗಣಾಃ ದೇವಾಯ ತಸ್ಮೆ ೈ ನಮಃ || 9 ||

ಅರ್ಥ : ಬ್ರಹ್ಮ , ವರುಣ, ಇಂದ್ರ, ರುದ್ರ, ಮರುತ್ ಇವರು ದಿವ್ಯವಾದ ಸ್ತೋತ್ರಗಳಿಂದ ಹೊಗಳುತ್ತಿರುವ, ಸಾಮವೇದವನ್ನು ಗಾನ ಮಾಡುವವರು ಕ್ರಮ ಮತ್ತು ತಾಳಬದ್ಧವಾಗಿ ಹಾಡುತ್ತಿರುವ, ಧ್ಯಾನಸ್ಥಿತರಾದ ಯೋಗಿಗಳು. ಏಕಾಗ್ರಮನಸ್ಸಿನಿಂದ ತಮ್ಮ ಪರಮಧ್ಯೇಯವನ್ನು ಪ್ರತ್ಯಕ್ಷವಾಗಿ ನೋಡುತ್ತಿರುವ, ಮತ್ತು ಯಾವನ ತುದಿಯನ್ನು ದೇವತೆಗಳಾಗಲೀ, ಅಸುರರಾಗಲೀ ತಿಳಿಯಲಾರರೋ, ಅಂತಹ ದೇವಾಧಿದೇವನಿಗೆ ನಮಸ್ಕಾರವು .