S O U L B L I S S

Loading

Devi Stotram

Devi Stotram

Vishnu Bapat

Write something worth reading

Or do something worth writing

-Benjamin Franklin

Devi Stotram in Sanskrit composed by Shridhara Swami-ji, translation into kannada by Vishnu Rao Bapat

॥ಶ್ರೀ ದೇವೀ ಸ್ತೋತ್ರಮ್॥

ಗುರುರ್ ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ  ಮಹೇಶ್ವರಃ।

ಗುರುಸ್ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ   

ಗುರುಃಬ್ರಹ್ಮಾ ಗುರುಃ ವಿಷ್ಣುಃ ಗುರುಃ ದೇವಃ ಮಹೆಶ್ವರಃ – ಸದ್ಗುರುವು ಬ್ರಹ್ಮಾ, ವಿಷ್ಣು, ದೇವ ಮತ್ತು ಮಹೇಶ್ವರ ಇವರೆಲ್ಲರೂ ಆಗಿದ್ದಾನೆ. ಗುರುವೇ  ದೇಹವೆತ್ತಿಬಂದ  ಪರಬ್ರಹ್ಮನೂ ಕೂಡ. ಅಂತಹ ಗುರುವಿಗೆ ನಾನು ನಮಸ್ಕರುಸುತ್ತೇನೆ. ಮೊದಲನೆಯ ಸಾಲಿನಲ್ಲಿ ಹೇಳಿದ ಬ್ರಹ್ಮಾನಿಗೂ ಎರಡನೆಯ ಸಾಲಿನಲ್ಲಿ ಹೇಳಿದ ಬ್ರಹ್ಮನಿಗೂ ವ್ಯತ್ಯಾಸವೇನು? ಮೊದಲು ಹೇಳಿದ ಬ್ರಹ್ಮಾ ತ್ರಿಮೂರ್ತಿಗಳಲ್ಲಿ ಒಬ್ಬನು. ಅಂದರೆ ಆತನಿಗೆ ಆಕಾರ, ಗುಣಗಳುಂಟು. ಪರಬ್ರಹ್ಮನು ನಿರಾಕಾರ, ನಿರ್ಗುಣ ತತ್ವ. ಅವನು ಜಗತ್ತೆನ್ನೆಲ್ಲ ವ್ಯಾಪಿಸಿರುತ್ತಾನೆ.

ಓಮ್  ನಮಃ ಶಾಂತಾಯ ದಿವ್ಯಾಯ ಸತ್ಯಧರ್ಮ ಸ್ವರೂಪಿಣೇ 

ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋನಮಃ

ಶ್ರೀಧರಾಯ ನಮೋನಮಃ – ಶ್ರಿಧರನಿಗೆ ಅನೇಕಾನೇಕ ನಮಸ್ಕಾರಗಳುಈತನ ಲಕ್ಷಣಗಳು ನಾಲ್ಕು. ಅವು ಹೀಗಿವೆ. ಶಾಂತಾಯ –ಶಾಂತಮೂರ್ತಿ, ದಿವ್ಯಾಯ –ದೇವಸ್ವರೂಪ, ಪವಿತ್ರ. ಸತ್ಯಧರ್ಮ ಸ್ವರೂಪಿಣೇ –ಅವನ ನಿಜ ಲಕ್ಷಣವೆಂದರೆ ಸತ್ಯ ಮತ್ತು ಧರ್ಮ. ಸ್ವಾನಂದಾಮೃತ ತೃಪ್ತಾಯ –ಅವನು ಯಾವುದರಿಂದ ತೃಪ್ತನಾಗುವನು? ಅವನ ತೃಪ್ತಿಗೆ ಪ್ರಾಪಂಚಿಕ ಯಾವ ವಸ್ತುವೂ ಬೇಕಿಲ್ಲ. ಅಮೃತರೂಪವಾದ ಅತ್ಮಾನಂದವೇ ಸಾಕು. ಅದು ಸದಾಕಾಲ ಆತನಲ್ಲಿಯೇ ಅಡಕವಾಗಿದೆ.  ಅಂತಹ ಶ್ರಿಧರನಿಗೆ ಅನೇಕಾನೇಕ ನಮಸ್ಕಾರಗಳು.

ಸಂಸ್ಕೃತ ಪದಗಳ ಉಚ್ಚಾರದಬಗ್ಗೆ ಎರಡು ಮಾತು 

ಗುರುರ್ ಬ್ರಹ್ಮಾ’ ಎಂಬ ಸಂಧಿ ಪದವಿದೆ.  ಇದನ್ನು ವಿಂಗಡಿಸಿದಾಗ ಗುರುಃ ಬ್ರಹ್ಮಾ ಎಂದಾಗುತ್ತದೆ. ಬ್ರಹ್ಮಾ ಪದವನ್ನು ಬ್ರಹ್ಮ ಎಂದು ಅನ್ನಬಾರದು. ಬ್ರಹ್ಮ ಎಂದರೆ ನಿರ್ಗುಣ ಚೇತನ; ನಪುಂಸಕ ಲಿಂಗ ಬ್ರಹ್ಮಾ ಅಥವಾ ಬ್ರಹ್ಮಾಜೀ ಈ ಪದವು ಬ್ರಹ್ಮಲೊಕದಲ್ಲಿ ವಾಸವಾಗಿರುವ ಚತುರ್ಮುಖ ಬ್ರಹ್ಮನಿಗೆ ಸೇರುತ್ತದೆ. ಇದು ಪುಲ್ಲಿಂಗ.

ಓಮ್’ ನಲ್ಲಿಯ ‘ಮ’ ಅಕ್ಷರವು ಅರ್ಧಾಕ್ಷರವಿದೆ. ಓಮ್  ಸ್ವರವನ್ನು ಹೇಳುವಾಗ ಕೆಲವರು ಓಮ್ಮ ಅಥವ ಓsಮ ಎಂದು ತಪ್ಪಾಗಿ ಹೇಳುತ್ತಾರೆ. ‘ಶಾಂತಾಯ, ದಿವ್ಯಾಯ’ ಈ ಪದಗಳು ಅಕಾರಾಂತವಾಗಿವೆ. ಕಡೆಯ ಅಕ್ಷರವಾದ ’ಯ’ ಇದನ್ನು ವಿನಾಯಕ ಪದದಲ್ಲಿನ ’ಯ” ದಂತೆ ಉಚ್ಚಾರ ಮಾಡಬೇಕು. ಅನಸೂಯಾ ದಲ್ಲಿನ ’ಯಾ” ದಂತೆ ಹೇಳಬಾರದು. ಸ್ವರೂಪಿಣೇ –ಸ್ವರೂಪಿಣೆ -ಈ ಎರಡೂ ಪದಗಳನ್ನು ನೀವೇ ಸ್ವತಃ ಹೇಳಿ ನೊಡಿ. ಸ್ವರೂಪಿಣೇ ಎಂದು ಸ್ಪಷ್ಟವಾಗಿ ಮಂತ್ರದಲ್ಲಿ ಹೇಳಬೇಕು. ದೇವೀ ಈ ಪದವು ಈಕಾರಾಂತ ಸ್ತ್ರೀಲಿಂಗ. ಬಾಯಿತುಂಬಾ ಶ್ರೀ ದೇವೀ ಎಂದು ಉಚ್ಚಾರ ಮಾಡಿ.

ಶ್ರೀ ದೇವೀ ಸ್ತೋತ್ರದ ಬಗ್ಗೆ ಎರಡು ಮಾತು

ಸಾಗರ ತಾಲೂಕಿನ ವರದಹ½î ಗ್ರಾಮದಲ್ಲಿ ಶ್ರೀ ದುರ್ಗಾಂಬಾ ಗುಡಿ ಇದೆ. ಈ ಸ್ತೋತ್ರವನ್ನುಶ್ರೀ ಶ್ರೀ ಸ್ವಾಮೀಗಳು ಈ ದೇವೀಯಕುರಿತು ಬರೆದಿದ್ದಾರೆ. ದೇವೀ ಸ್ತೋತ್ರವು ಅರ್ಥಗರ್ಭಿತವಾಗಿದೆ. ನಿರಾಕಾರ ನಿರ್ಗುಣ ಸಚ್ಚಿದಾನಂದ ಸ್ವರೂಪನಾದ ಪರಬ್ರಹ್ಮನನ್ನು ಅರಿಯುವ ಬಗೆ ಹೇಗೆ? ಅವನು ಅಗೋಚರ. ಕಣ್ಣು ಕಿವಿ ನಾಲಿಗೆ, ಮೂಗು ಮುಂತಾದ ಇಂದ್ರಿಯಗಳಿಗೆ ದೊರಕುವ ವಿಷಯವಲ್ಲ. ಅವನನ್ನು ಅನುಭವದಿಂದ ಮಾತ್ರ ತಿಳಿಯಬೇಕು.  ಸಕ್ಕರೆಯ ಸಿಹಿಯು ತಿಂದು ಅನುಭವಿಸಿದವನಿಗೇ ಗೊತ್ತು ತಾನೆ! ಈ ಕಾರಣದಿಂದ ಸ್ವಾಮೀಗಳು ದೇವೀಯನ್ನು ಕುರಿತು, “ಅಮ್ಮಾ! ನೀನು ನಿರ್ಗುಣ ಸ್ವರೂಪಳು; ಲಿಂಗಭೇದವಿಲ್ಲ, ಆದರೂ ಕೂಡ ನಾನು ನಿನ್ನನ್ನು ತಾಯೀ ಎಂದೆ ಪೂಜಿಸುವೆನು; ನನಗೆ ತಾಯಿಯ ಮಮತೆ ಗೊತ್ತಿದೆ; ಪರಬ್ರಹ್ಮನ ಸ್ವರೂಪ ಗೊತ್ತಿಲ್ಲ, ಆದ್ದರಿಂದ ನೀನೇ ನನಗೆ ದಾರಿ ತೋರಿಸು” ಎಂದು ಈ ಸ್ತೊತ್ರದಲ್ಲಿ ಪ್ರಾರ್ಥಿಸುತ್ತಾರೆ.

ಕೊನೆಯದಾಗಿ ಈ ಮಂತ್ರಗಳನ್ನು ಹೇಳುವಾಗ ಸುಖಾಸನದಲ್ಲಿ ಕುಳಿತು, ಧ್ಯಾನಾಸಕ್ತರಾಗಿ,  ಸಾವಕಾಶವಾಗಿ, ಸ್ಫುಟವಾಗಿ, ಸ್ಪಷ್ಟವಾಗಿ ಉಚ್ಚಾರ ಮಾಡಬೇಕು. ಒಂದು ಪದವನ್ನು ಉಚ್ಚ ಸ್ವರದಲ್ಲಿಯೂ ಮತ್ತೊಂದನ್ನು ನೀಚ ಸ್ವರದಲ್ಲಿಯೂ ಹೇಳುವುದು ತಪ್ಪಾಗುತ್ತದೆ. ಸ್ತೋತ್ರವನ್ನು ಏಕ ಸ್ವರದಿಂದ ಸಮ ಧ್ವನಿಯಲ್ಲಿ ಹೇಳಬೇಕು. ಎಲ್ಲಾ ಶ್ಲೋಕಗಳ ಶಬ್ದಾರ್ಥ ಮತ್ತು ಭಾವಾರ್ಥಗಳನ್ನು ಮನನ ಮಾಡಿಕೊಂಡು ನಂತರ ಪಾರಾಯಣ ಮಾಡಬೇಕು. ಸ್ತೋತ್ರವನ್ನು ಬಾಯಿಪಾಠಮಾಡಿ ಕಲಿತರೆ ಒಳ್ಳೆಯದು. ಇದನ್ನು ಪ್ರತಿನಿತ್ಯ ಹೇಳಬೇಕೆಂದು ಸ್ವತಃ ಸ್ವಾಮಿಗಳೇ ಅಪ್ಪಣೆ  ಮಾಡಿದ್ದಾರೆ.

ಶ್ರೀ ದೇವೀ ಸ್ತೋತ್ರಮ್

ಪರಾವಿದ್ಯಾರೂಪಾಂ ನಿಗಮವನಶೊಭಾಂ ಸ್ಮರಹರಾಂ

ಪರಭ್ರಹ್ಮಾಕಾರಾಂ ನಿಜಕರುಣದೃಷ್ಟ್ಯಾsವನಕರಾಂ

ಕೃಪಾಪಾಂಗಾಂ ಶಾಂತಾಂ ದಿವಿಜಗಣಸಂಸೇವ್ಯಚರಣಾಂ

ಚಿದಾನಂದಾಂ ದೇವೀಂ ಮುನಿಜನನುತಾಂ ನೌಮಿ ಸತತಂ ॥೧॥

ಪರಾವಿದ್ಯಾರೂಪಾಮ್– ವಿದ್ಯೆಗಳಲ್ಲಿ ಪರಾವಿದ್ಯೆ ಮತ್ತು ಅಪರಾ ವಿದ್ಯೆ ಹೀಗೆ ಎರಡು ವಿಧ. ಪರಾವಿದ್ಯೆ ಎಂದರೆ ನಿರಾಕಾರ ನಿರ್ಗುಣ ಈಶ್ವರನ ಧ್ಯಾನ. ಅಪರಾ ವಿದ್ಯೆ ಎಂದರೆ ಸಾಕಾರ ಸಗುಣ ಈಶ್ವರನ ಆರಾಧನೆ. ರಾಮ, ಕೃಷ್ಣ ಮುಂತಾದವರು ಅಪರಾ ದೇವರು. ಅವರಿಗೆ ಕೈ, ಕಾಲು ಬಣ್ಣ ಆಯುಧಗಳಿವೆ. ಹೇ ದೇವೀ ನೀನು ಸಾಕ್ಷಾತ್ ಪರಾವಿದ್ಯೆಯ ಸ್ವರೂಪಳು ನಿಗಮವನಶೊಭಾಮ್– ವೇದಗಳೆಂಬ ವನದಲ್ಲಿ ಸುಶೊಭಿಸುತ್ತಿರುವ ಸ್ಮರಹರಾಮ್ – ಈ ದೇಹ ಮನಸ್ಸು ಬುದ್ಧಿಗಳೇ ನಾನೆಂಬ ಅಜ್ನ್ಯಾನದ ನೆನಪನ್ನು ನಾಶಮಾಡುವಂತಹ ಪರಭ್ರಹ್ಮಾಕಾರಾಮ್ -ಪರಬ್ರಹ್ಮ ಸ್ವರೂಪಳಾದ ನಿಜಕರುಣದೃಷ್ಟ್ಯಾ ಅವನಕರಾಮ್ –ಕರುಣೆ ತುಂಬಿದ ನೋಟದಿಂದ ಜಗತ್ತನ್ನು ಆಶೀರ್ವದಿಸುವ ಕೃಪಾ ಅಪಾಂಗಾಮ್– ಕರುಣೆಯನ್ನು ಮೈಗೂಡಿಸಿಕೊಂಡಿರುವ ಶಾಂತಾಮ್ -ಶಾಂತಮೂರ್ತಿಯಾದ ದಿವಿಜಗಣಸಂಸೇವ್ಯಚರಣಾಮ್ -ಯಾರ ಪಾದಗಳನ್ನು ದೇವತೆಗಳು ಪೂಜಿಸುತ್ತಾರೋ ಅಂತಹ ಚಿದಾನಂದಾಮ್-ಸದಾಕಾಲ ಆನಂದಮಯಿಯಾದ ಮುನಿಜ–  ನನುತಾಮ್ಮುನಿಜನರಿಂದ ವಂದಿತಳಾದ ದೇವೀಮ್– ದೇವೀಯನ್ನು ನೌಮಿ (ನಮಾಮಿ) ಸತತಮ್– ಸದಾ ವಂದಿಸುತ್ತೇನೆ.

ಹೇ ದೇವೀ ನೀನು ಪರಮಾರ್ಥ ಪ್ರಾಪ್ತಿಗೆ ಸಾಧನವಾದ ಪರಾವಿದ್ಯಾ ಸ್ವರೂಪಳುವೇದಗಳೆಂಬ ಉದ್ಯಾನದಲ್ಲಿ ರಾರಾಜಿಸುತ್ತೀಯೆನಿನ್ನ ಸ್ಮರಣೆ ಮಾತ್ರದಿಂದಲೇ ನನ್ನ ಅಜ್ನ್ಯಾನವು  ನಾಶವಾಗುತ್ತದೆ.  ನೀನು ಪರಬ್ರಹ್ಮ ಸ್ವರೂಪಿಣಿನಿನ್ನ ಕುರುಣೆ ತುಂಬಿದ ನೋಟದಿಂದ ಜಗತ್ತನ್ನೇ ಆಶೀರ್ವದಿಸುತ್ತಿರುವೆ.  ನಿನ್ನ ಚರಣಗಳನ್ನು ದೇವತೆಗಳು ಪೂಜಿಸುತ್ತಾರೆಕರುಣಾಕರ ನೋಟಶಾಂತ ಸ್ವಭಾವಸ್ವಾನಂದದಲ್ಲಿಯೇ ತಲ್ಲೀನಳಾಗಿ ಇರುವಂತಹ ನಿನ್ನನ್ನು ನಾನು ಸದಾ ವಂದಿಸುವೆನು.

ರಮೋಮಾವಾಣೀತಿ ತ್ರಿವಿಧಮಪಿ ರೂಪಂ ತವ ಶುಭೇ

ಪರಬ್ರಹ್ಮಾಕಾರಂ ಪ್ರಕಟಯತಿ ಸಚ್ಚಿತ್ಸುಖಪದೈಃ 

ಶಿವೇ ಸ್ಮಾರಂ ಸ್ಮಾರಂ ತವ ವಿಮಲರೂಪಂ ನಿಜಸುಖಂ

ನಯೇ ಕಾಲಂ ಮಾತಃ ಶ್ರುತಿಮಥಿತತತ್ವಾರ್ಥಕಲಿತಃ 

ರಮಾ ಉಮಾ ವಾಣೀ ಇತಿ : ರಮಾ, ಉಮಾ ವಾಣೀ ಹೀಗೆ ತವ ಶುಭೇ -ನಿನ್ನ ಶುಭವಾದ  ತ್ರಿವಿಧಮ್ ಅಪಿ ರೂಪಮ್ – ಮೂರು ನಾಮ ರೂಪಗಳು  ಪರಬ್ರಹ್ಮಾಕಾರಮ್ –ಪರಬ್ರಹ್ಮ ತತ್ವವನ್ನು ಸಚ್ಚಿತ್ಸುಖಪದೈಃ –ಸತ್, ಚಿತ್, ಸುಖ ಅಥವಾ ಆನಂದ ಎಂಬ ಮೂರು ಪದಗಳಿಂದ ಪ್ರಕಟಯತಿ ಪ್ರಕಟಿಸುತ್ತವೆ. ಶಿವೇ – ಮಂಗಳ ಸ್ವರೂಪಳೇ ತವ ವಿಮಲರೂಪಮ್ ನಿಜಸುಖಮ್ –ಆನಂದಮಯವಾದ, ಹಾಗೂ ಸುಖಕರವಾದ ನಿನ್ನ ನಿರ್ಮಲ ರೂಪವನ್ನು ಸ್ಮಾರಮ್ ಸ್ಮಾರಮ್ – ನೆನೆಯುತ್ತ ನೆನೆಯುತ್ತಾ  ಶ್ರುತಿಮಥಿತತತ್ವಾರ್ಥಕಲಿತಃ – ವೇದಗಳಲ್ಲಿ ಪ್ರತಿಪಾದಿಸಿರುವ ಪರತತ್ವವನ್ನು ಚಿಂತಿಸುತ್ತ ನಯೇ ಕಾಲಮ್ ಮಾತಃ –ಅಮ್ಮಾ, ನಾನು ಕಾಲ ಕಳೆಯುತ್ತೇನೆ.

ಪರಬ್ರಹ್ಮನ ಸ್ವರೂಪವಾದ ಸತ್ ಚಿತ್ ಆನಂದಗಳು ನಿನ್ನ ಮೂರು ಶುಭ ನಾಮಧೇಯಗಳಾದ  ರಮಾಉಮಾವಾಣೀ ಎಂದು ಪ್ರಕಟವಾಗಿವೆ.  ತಾಯೇಮಂಗಳ ಸ್ವರೂಪಳೇ, ನಿನ್ನ ವಿಮಲವಾದ ಸಚ್ಚಿದಾನಂದ ಸ್ವರೂಪವನ್ನು ನೆನೆಸುತ್ತ ನೆನೆಸುತ್ತ, ವೇದಗಳಲ್ಲಿ ಪ್ರತಿಪಾದಿಸಿರುವ ಪರತತ್ವವನ್ನು ಚಿಂತಿಸುತ್ತ ನಾನು ಕಾಲ ಕಳೆಯುತ್ತೇನೆ.

 ರೂಪಂ ನೋ ಲಿಂಗಂ ಶ್ರುತಿಷುಗದಿತಂ ಬ್ರಹ್ಮಣ ಇತಿ

ಪರಂಸ್ವಾರ್ಥಾಯ ತ್ವಾಂ ಮಮ ಜನನಿ ಸಂಬೊಧ್ಯಕಲಯೇ 

ಭವೇ ಪುತ್ರಸ್ನೇಹಾದವಸಿ ಹಿ ಮಮಾಶೇಯಮಖಿಲಾ

ಯಥಾ ಮಾತೃಸ್ನೇಹೋ ವಿದಿತ ಇತಿ ನೋ ಬ್ರಹ್ಮ  ತಥಾ 

 ರೂಪಮ್  ಲಿಂಗಮ್ -ನಿನಗೆ ರೂಪವೂ ಇಲ್ಲ, ಲಿಂಗವೂ ಇಲ್ಲ, ಶ್ರುತಿಷುಗದಿತಂ ಬ್ರಹ್ಮಣ ಇತಿ – ಶ್ರುತಿಗಳಲ್ಲಿ ಹೇಳಿದಂತೆ ನೀನು ಶುದ್ಧ ಬ್ರಹ್ಮತತ್ವ. ಆನಂದ ಘನ ಮಾತ್ರ. ಇದು ನನಗೆ ಗೊತ್ತು. ಪರಮ್ ಸ್ವಾರ್ಥಾಯ ತ್ವಾಮ್ ಮಮ ಜನನೀ’ ಸಂಬೊಧ್ಯಕಲಯೇ -ಆದರೂ ನನ್ನ ಸ್ವಾರ್ಥಕ್ಕಾಗಿ ನಿನ್ನನ್ನು ’ಓ ಜನನಿ’ (ಜನ್ಮದಾತೆ) ಎಂದೇ ಕರೆಯುವೆನು. ಭವೇ ಪುತ್ರಸ್ನೇಹಾತ್ -ಅಮ್ಮಾ! ಪುತ್ರ ವಾತ್ಸಲ್ಯದಿಂದ, ಅವಸಿ -ನನ್ನನ್ನು ಕಾಪಾಡುತ್ತಿಯೇ ಹಿ -ಇಷ್ಟೇ ಇಯಮ್ -ಇದು ಅಖಿಲಾ -ಸರ್ವ ಮಮ -ನನ್ನ ಆಶಾ –ಇಚ್ಚೆ. ಯಥಾ ಮಾತೃ ಸ್ನೇಹೋ ವಿದಿತ -ತಾಯಿಯು ಮುದ್ದು ಮಗುವನ್ನು ಅಕ್ಕರೆಯಿಂದ ಕಾಣುತ್ತಾಳೆ ಎಂಬುದಷ್ಟೇ ನನಗೆ ಗೊತ್ತು ಇತಿ ನಃ ಬ್ರಹ್ಮ  ತಥಾ ಆದರೆ ನಿರಾಕಾರ ಬ್ರಹ್ಮಸ್ವರೂಪ ತಿಳಿದಿಲ್ಲ.

ನಿನಗೆ ಲಿಂಗ ಭೇದವಿಲ್ಲಶ್ರುತಿಗಳಲ್ಲಿ ನಿನ್ನನ್ನು ಶುದ್ಧಬ್ರಹ್ಮ ಸ್ವರೂಪವೆಂದು ವರ್ಣಿಸಿದ್ದಾರೆ.  ನನಗೆ ತಾಯಿಯ ವಾತ್ಸಲ್ಯದ ಅರಿವಿದೆಆದರೆ ನಿರ್ಗುಣ ನಿರಾಕಾರ ಪರತತ್ವವನ್ನು ನಾನು ತಿಳಿಯಲಾರೆಆದ್ದರಿಂದ ನನ್ನ ಸ್ವಾರ್ಥಕ್ಕಾಗಿ ನಿನ್ನನ್ನು ಜನ್ಮದಾತೇ” ಎಂದೇ ಕರೆಯುತ್ತೇನೆಅಮ್ಮಾನೀನೂ ಕೂಡ

ನನ್ನನ್ನು ಮುದ್ದು ಕಂದನಂತೆ ಕಾಪಾಡು. ಇಷ್ಟೇ ನನ್ನ ಆಸೆ.

ತ್ರಯಾಣಾಂ ಲಿಂಗಾನಾಂ ಶ್ರುತಿಷು ತವ ನಾಮಾನಿ ವಿಮಲೇ

ಪರಂ ಮಾತೃಸ್ನೇಹಾದಭಿಹಿತಮ್ ಸ್ವಹಿತದೃಕ್ 

ಯಥಾ ಮಾತಾ ಸ್ನಿಹ್ಯೇತ್ತದಪಿ ಮಯಿ ತೇ ಪ್ರೀತಿರಧಿಕಾ

 ಮಾತಾ ಬ್ರಹ್ಮೈಕ್ಯಂ ಕಿಲ ವಿತನುತೇ ತ್ವಂ   ತಥಾ ॥ 

ವಿಮಲೇ – ಹೇ ನಿರ್ಮಲ ಸ್ವರೂಪದವಳೇ! ಶ್ರುತಿಷು -ವೇದಗಳಲ್ಲಿ ತವ ನಾಮಾನಿ -ನಿನ್ನ ಹೆಸರುಗಳು ತ್ರಯಾಣಾಂ ಲಿಂಗಾನಾಮ್ -ಮೂರೂ ಲಿಂಗಗಳಲ್ಲಿ (ಪುಲ್ಲಿಂಗ, ಸ್ರೀಲಿಂಗ ಮತ್ತು ನಪುಂಸಕ) ಕರೆಯಲ್ಪಟ್ಟಿವೆಪರಮ್ ಮಾತೃಸ್ನೇಹಾತ್ -ನನ್ನ ಮಾತೃಪ್ರೀತಿಯಿಂದ ಅಭಿಹಿತಮ್ ಇದಮ್ ಸ್ವಹಿತದೃಕ್ – ನನ್ನ ಹಿತದೃಷ್ಟಿಯಿಂದಲೇ ಹೇಳುತ್ತೇನೆ  ಯಥಾ ಮಾತಾ ಸ್ನಿಹ್ಯೇತ್ – ತಾಯಿಯು ತನ್ನ ಕಂದನನ್ನು ಪ್ರೀತಿಸುವಂತೆ  ತತ್ ಅಪಿ ಮಯಿ ತೇ ಪ್ರೀತಿರಧಿಕಾ – ಅದಕ್ಕಿಂತಲೂ ಹೆಚ್ಚು ನಿನಗೆ ನನ್ನ ಮೇಲೆ ಮಮತೆ.  ಮಾತಾ ಬ್ರಹ್ಮೈಕ್ಯಂ ಕಿಲವಿತನುತೇ  –ತಾಯಿಯ ಪ್ರೀತಿ ಪ್ರಾಪಂಚಿಕ ಬಂಧನವನ್ನು ಉಂಟು ಮಾಡುತ್ತದೆ, ಪರತತ್ವವನ್ನು ತಿಳಿಸಿಕೊಡುವುದಿಲ್ಲ.  ತ್ವಂ   ತಥಾ ಆದರೆ ನಿನ್ನ ಪ್ರೀತಿ ಹಾಗಲ್ಲ. ನನ್ನನ್ನು ಸಂಸಾರ ಬಂಧನದಿಂದ ವಿಮುಕ್ತನನ್ನಾಗಿ ಮಾಡುತ್ತದೆ.

ಹೇ ವಿಮಲ ಸ್ವರೂಪಿಣೇ!  ವೇದಗಳಲ್ಲಿ ನಿನ್ನ ಹೆಸರನ್ನು ಮೂರೂ ಲಿಂಗಗಳಲ್ಲಿ ಕರೆಯುತ್ತಾರೆ. ಆದರೂ ಸಹ ನಿನ್ನನ್ನು ತಾಯಿ ಎಂದೇ ಕರೆಯುವೆನುಇದರಲ್ಲಿ ನನ್ನ ಸ್ವಾರ್ಥವಿದೆನೀನು ನನ್ನನ್ನು ತಾಯಿಗಿಂತಲೂ ಹೆಚ್ಚಾಗಿ ಪ್ರೀತಿ ಮಾಡುವೆತಾಯಿಯ ಪ್ರೇಮದಿಂದ  ಸಂಸಾರ ಬಂಧನ ಉಂಟಾಗುತ್ತದೆಪರತತ್ತ್ವವು ದೊರಕುವುದಿಲ್ಲಆದರೆ ನಿನ್ನ ಪ್ರೇಮದಿಂದ  ಬ್ರಹ್ಮತ್ವದ ಅನುಭವವಾಗಿ ನಾನೂ ಪರಬ್ರಹ್ಮನೇ ಆಗುವೆನು.

ಅಪಿ ಬ್ರಹ್ಮಾಕಾರಾದಪಿ  ನಿಜಶಕ್ತೇರ್ವಿಭವತಃ

 ಮಾತುಸ್ತಚ್ಛ್ರೇಷ್ಟಮ್ ಕಿಮಪಿ ಕಿಲ ಜಾನೇ ಸ್ಪುಟಮಿದಮ್ 

ಯಯಾ ಶಕ್ತ್ಯಾಕೋsಪಿ ಪ್ರಭವತಿ  ಸಾ ತ್ವಂ ಭವಹರೇ

ತ್ವಮೇವೈಕಂ ಬ್ರಹ್ಮ ಸ್ವಯಮಭಿಹಿತಂ ಭೇದರಹಿತಂ ॥ 

ಅಪಿ ಬ್ರಹ್ಮಾಕಾರಾದಪಿ –ನೀನು ಬ್ರಹ್ಮಸ್ವರೂಪಳಾಗಿರುವೆ. ಭವತಃ ನಿಜಶಕ್ತೇಃ– ನೀನು ಶಕ್ತಿಸ್ವರೂಪಳಾಗಿರುವೆ.   ಮಾತುಃ ತತ್ ಶ್ರೇಷ್ಟಮ್ ಕಿಮ್ ಅಪಿ ಕಿಲ ಜಾನೇ – ತಾಯಿಗಿಂತ ದೊಡ್ಡದಾದ ಇನ್ನೊಂದು ವಸ್ತು ನನಗೆ ಗೊತ್ತಿಲ್ಲ.  ಸ್ಫುಟಮ್ ಇದಮ್ -ಇದು ನಿಶ್ಚಿತ. ಯಯಾ ಶಕ್ತ್ಯಾ ಕಃ ಅಪಿ ಪ್ರಭವತಿ – ಯಾವ ವ್ಯಕ್ತಿಗತವಾಗಿರುವ ಶಕ್ತಿಗಳಿಗಿಂತ ಪ್ರಭಾವಶಾಲಿಯಾದ ಶಕ್ತಿ ಅಂದರೆ ಎಲ್ಲಾ ಶಕ್ತಿಗಳಿಗೆ ದೊರಕುವ ಮೂಲ ಶಕ್ತಿ ಒಂದುಂಟೋ  ಸಾ ತ್ವಂ -ಆ ಶಕ್ತಿ ನೀನೇ ಆಗಿರುವೆ. ಮನುಷ್ಯರಲ್ಲಿ ಮೂರು ವಿಧವಾದ ಶಕ್ತಿಗಳಿವೆ. ಜ್ನಾನಶಕ್ತಿ, ಇಚ್ಚಾಶಕ್ತಿ,  ಕ್ರಿಯಾಶಕ್ತಿ,  ಈ  ಏಲ್ಲಾ ಶಕ್ತಿಗಳಿಗೂ ನೀನೇ ಶಕ್ತಿ ಪ್ರದಾನ ಮಾಡುವೆ. ಭವಹರೇ -ಸಂಸಾರ ಬಂಧನಗಳಿಂದ ಬಿಡುಗಡೆ ಮಾಡುವವಳೇ  ತ್ವಮ್ ಏವ ಏಕಮ್ ಬ್ರಹ್ಮ – ನೀನೇ ಏಕಮಾತ್ರ ಬ್ರಹ್ಮತತ್ವ. ಭೇದರಹಿತಮ್ – ಜೇವ ಮತ್ತು ಪರಮಾತ್ಮ ಎಂದು ಭೇದವಿಲ್ಲದ ಬ್ರಹ್ಮತತ್ವ. ಸ್ವಯಮ್ ಅಭಿಹಿತಮ್ – ಇದು ಸಹಜವಾಗಿಯೇ ಗೊತ್ತಾಗುತ್ತದೆ.

ಅಮ್ಮಾ ಇನ್ನೇನು ಹೆಚ್ಚಿಗೆ ಹೇಳುವುದು? ನೀನು ಬ್ರಹ್ಮಸ್ವರೂಪಳಾಗಿರುವೆ ಶಕ್ತಿಸ್ವರೂಪಳಾಗಿರುವೆ.  ಜ್ನಾನಶಕ್ತಿಇಚ್ಚಾಶಕ್ತಿಕ್ರಿಯಾಶಕ್ತಿ ಏಲ್ಲಾ ಶಕ್ತಿಗಳಿಗೂ ನೀನೇ ಶಕ್ತಿ ಪ್ರದಾನ ಮಾಡುವೆನೀನೇ ಸಕಲ ಶಕ್ತಿಗಳಿಗೂ ಆಧಾರ ನೀನು ಸಂಸಾರ ಬಂಧನಗಳಿಂದ ಬಿಡುಗಡೆ ಮಾಡುವವಳುಭೇದಶೂನ್ಯವಾದ ಬ್ರಹ್ಮತತ್ವವೂ ಕೂಡಾ ನೀನೇಆದರೂ ತಾಯಿಗಿಂತ ಮಿಗಿಲಾದ ಮತ್ತೊಂದು ಶ್ರೇಷ್ಠ ವಸ್ತುವನ್ನು ನಾನರಿಯೆನುಆದ್ದರಿಂದ ನಾನು ನಿನ್ನನ್ನು ಮಾತಾ ಎಂದೇ ಸಂಬೊಧಿಸುವೆನು.

ತದೇಕಂ ತೇ ರೂಪಂ  ಬಹುವಿಧತಯಾ ವೇದಕಥಿತಂ

ಸ್ವಭಕ್ತ್ಯಾ ಸೇವಂತೇ ಸಕಲಜನಸೌಖ್ಯಂ ವಿತನುಷೇ 

ತ್ವಮೇಕಾ ವಿಶ್ವಾದೌ ತ್ವಮಿಹ ಸಕಲಾಂತರ್ಬಹಿರಪಿ

ತ್ವಮೈವೈಕಾಚಾಂತೇ ಸಕಲಮುಪಸಂಹೃತ್ಯ  ರಮಸೇ ॥ 

ತತ್ ಏಕಮ್ ತೇ ರೂಪಮ್ – ನಿನ್ನ ಆ ರೂಪ ಒಂದೇ ಬಹುವಿಧತಯಾ ವೇದಕಥಿತಮ್ – ವೇದಗಳಲ್ಲಿ ಅನೇಕ ವಿಧವಾಗಿ ವರ್ಣಿತವಾಗಿವೆ. ಸ್ವಭಕ್ತ್ಯಾ ಸೇವಂತೇ – ಭಕ್ತಿಯಿಂದ ಸೇವಿಸುವ ಸಕಲಜನಸೌಖ್ಯಮ್ ವಿತನುಷೇ – ಎಲ್ಲ ಸಾಧಕರಿಗೂ ಸುಖವನ್ನು ಕರುಣಿಸುವೆ. ತ್ವಮ್ ಇಹ ಸಕಲಾಂತರ್ ಬಹಿಃ ಅಪಿ – ಈ ಜಗತ್ತಿನ ಒಳಗೂ ಹೊರಗೂ, ಎಲ್ಲೆಲ್ಲೂ ನೀನೇ.  ತ್ವಮ್ ಏಕಾ ವಿಶ್ವ ಆದೌ – ಸೃಷ್ಟಿಯ ಮೊದಲೂ ನೀನೊಬ್ಬಳೇ ಇದ್ದೆ; ತ್ವಮ್ ಏಕಾ  ಅಂತೇ – ನೀನೊಬ್ಬಳೇ ಕೊನೆಯಲ್ಲಿ, ಪ್ರಳಯದಲ್ಲಿ ಸಕಲಮುಪಸಂಹೃತ್ಯ ರಮಸೇ – ಸಕಲ ಸೃಷ್ಟಿಯನ್ನು ಸಂಹರಿಸಿ ರಮಿಸುವೆ.

ವಸ್ತುತಃ ನೀನು ನಿರಾಕಾರ ನಿರ್ಗುಣ ಬ್ರಹ್ಮತತ್ವಆದರೂ ವೇದಗಳು ನಿನ್ನನ್ನು ಬಹುವಿಧವಾಗಿ ಪ್ರಶಂಸಿವೆಭಕ್ತರು ಯಾವ ರೂಪದಿಂದ ನಿನ್ನನ್ನು ಆರಾಧಿಸುತ್ತಾರೋ ಅದೇ ರೂಪದಿಂದಲೇ   ಅವರನ್ನು ಅನುಗ್ರಹಿಸುವೆಜಗತ್ತಿನ ಒಳಗೂ ಹೊರಗೂಎಲ್ಲೆಲ್ಲೂ ನೀನೇ ವ್ಯಾಪಿಸುರುವೆಸೃಷ್ಟಿಯ ಆದಿಯಲ್ಲಿ ನೀನು ಒಬ್ಬಳೇ ಇದ್ದೆಅಂತ್ಯದಲ್ಲಿ  ಜಗತ್ತನ್ನು ನಾಶಮಾಡಿ ನೀನೊಬ್ಬಳೇ ರಮಿಸುವೆ.

ತ್ವಮಿಂದ್ರಸ್ತ್ವಂಬ್ರಹ್ಮಾ ರವಿರಪಿ  ಚಂದ್ರೋ ಹರಿಹರೌ

ನರಸ್ತ್ವಂ ನಾರೀ  ತ್ವಂ ಸಕಲದಿವಿಜಾ ದೇವ್ಯ ಇತಿ ಯಾಃ 

ಧೃತಿಃ ಪ್ರಜ್ನ್ಯಾಮೇಧಾ ಮತಿರಪಿ ಗತಿಸ್ತ್ವಂ ಶ್ರುತಿನುತೇ

ತ್ವಮೇವಂ ಯದ್ಭೂತಮ್ ಭವದಿತಿ ಭವಿಷ್ಯತ್ತದಪಿಚ  

ತ್ವಮ್ –ನೀನೇ  ಇಂದ್ರಃ -ಇಂದ್ರ ಬ್ರಹ್ಮಾ -ಬ್ರಹ್ಮಾ ರವಿಃ– ಸೂರ್ಯ ಚಂದ್ರಃ -ಚಂದ್ರ ಅಪಿ -ಕೂಡ ತ್ವಮ್ -ನೀನೇ  ಹರಿಹರೌ ಹರಿ ಮತ್ತು ಹರ,  ತ್ವಮ್ -ನೀನೇ  ನರಃ ಗಂಡಸು ತ್ವಮ್ -ನೀನೇ ನಾರೀ –ಹೆಂಗಸು ತ್ವಮ್ -ನೀನೇ ಸಕಲ ದಿವಿಜಾ ದೇವ್ಯ ಇತಿ – ನೀನೇ ಎಲ್ಲ ದೇವತೆಗಳೂ ಕೂಡ. ಶ್ರುತಿನುತೇ –ಶ್ರುತಿಗಳಲ್ಲಿ ಹೇಳಿದಂತಹ  ಯಾ -ಯಾವ ಧೃತಿಃಧೃತಿ (ನಿಲವು ಬದಲಾವಣೆ ಮಾಡದಿರುವುದು) ಪ್ರಜ್ನ್ಯಾ ಪ್ರಜ್ನ್ಯಾ(ಅರಿವು) ಮೇಧಾ – ಮೇಧಾ (ಗ್ರಹಣ ಶಕ್ತಿ, ಧಾರಣ ಶಕ್ತಿ)  ಮತಿಃ – ಬುದ್ಧಿ, ಮನಸ್ಸು ಅಹಂಕಾರ ಮುಂತಾದವುಗಳು ಉಂಟೋ  ಅಂತಹ ಗತಿಃ ಅಪಿ – ಗುರಿ ಕೂಡ ನೀನೇ. ತ್ವಮ್ ಏವ -ನೀನೇ ಯತ್ ಭೂತಮ್ –ಹಿಂದೆ ಆದದ್ದೆಲ್ಲವೂ ಭವತ್ ಇತಿ – ಈಗ ಆಗುತ್ತಿರುವುದು ಯತ್ ಭವಿಷ್ಯತಿ ತತ್ ಅಪಿ  –ಮುಂದೆ ಆಗುವವು ಎಲ್ಲವೂ ಕೂಡ ನೀನೇ.

 ತಾಯಿವೇದಗಳಲ್ಲಿ ವರ್ಣಿಸಿರುವ ಇಂದ್ರಬ್ರಹ್ಮಾ ರವಿಚಂದ್ರಹರಿಹರರು ಎಲ್ಲವೂ ನೀನೇ.. ನೀನೇ ಗಂಡುನೀನೇ ಹೆಣ್ಣುಎಲ್ಲ ದೇವತೆಗಳೂ ನೀನೇ.. ಶ್ರುತಿಗಳಲ್ಲಿ ಅಪ್ಪಣೆ ಕೊಡಿಸಿದಂತಹ  ಯಾವ ಧೃತಿಪ್ರಜ್ನೆಪ್ರತಿಭೆಮನಸ್ಸು, ಬುದ್ಧಿಗಳುಂಟೋ ಅವುಗಳೆಲ್ಲವೂ ನೀನೇ..  ಅವುಗಳ ಗುರಿ ನೀನೇಈಗ ಇರುವುದೆಲ್ಲ ನೀನೇಮುಂದೆ ಆಗುವುದೆಲ್ಲ ನೀನೇಜಗತ್ತಿಗೆ ಆಧಾರ ನೀನೇ..

ಯಥಾಬ್ದೌ ಫೇನಃಸ್ಯಾತ್ವಯಿ ಜಗದಿದಂ ಯಜ್ಜಡಮಿತಿ

ತರಂಗಃ ಕಲ್ಲೊಲಸ್ತ್ವಯಿ ಜನನಿ ಚೇಶೊsಪರ ಇಮೌ 

ಯಥಾಭ್ದಿಃ ಸ್ಯಾದೇಕಸ್ತ್ರಿಭಿರಪಿ  ರೂಪೈರ್ಭವಮುದೇ

ತ್ವಮೇಕಾ ಚಿನ್ಮಾತಾ ಸುಖಜಲಧಿರೇಭಿಸ್ತ್ರಿಭಿರಪಿ  

ಯಥಾ –ಹೇಗೆ ಅಬ್ಧೌ -ಸಮುದ್ರದಲ್ಲಿ ಫೇನಃ (ಜಡವಾದ) ನೊರೆ, ಬುರುಗು ಸ್ಯಾತ್ ಇವೆಯೋ ತಥಾ -ಹಾಗೇ ಇದಮ್  ಜಗತ್ ಪ್ರಪಂಚವು ಜಡಮ್ – ಜಡವಾದದ್ದು, ಅಂದರೆ ಚೇತನಾ ವಿರಹಿತವಾದದ್ದು ಮತ್ತು ನಶ್ವರ; ನೊರೆಯಂತೆ ನಾಶವಾಗಿ ನೀರಿನೊಂದಿಗೆ ಲೀನವಾಗಿ ಬಿಡುತ್ತದೆ. ಇತಿ -ಈ ರೀತಿ ತಿಳಿಯಬೇಕು. ಯಥಾ -ಹೇಗೆ ಅಬ್ಧೌ – ಸಮುದ್ರದಲ್ಲಿ ತರಂಗಃ -ಅಲೆಗಳು;  ತೆರೆಗಳು ಕಲ್ಲೋಲಃ  ಸುಳಿಗಳು ಸ್ಯಾತ್ –ಇವೆಯೋ (ತಥಾ –ಹಾಗೆ)  ತ್ವಯಿ -ನಿನ್ನಲ್ಲಿ ಜನನಿ -ತಾಯಿಯೇ ಈಶಃ –ಈಶ್ವರ  -ಮತ್ತು ಅಪರಃ – ಜೀವ ಇಮೌ– ಇವರಿಬ್ಬರೂ ಅಡಕವಾಗಿದ್ದಾರೆ.  ಜೀವ ಮತ್ತು ಈಶ್ವರ ಇವರಿಬ್ಬರೂ ಬೇರೆ ಬೇರೆ ಅಲ್ಲ. ಸಣ್ಣ ತೆರೆ ಮತ್ತು ಸುಳಿಗಳಂತೆ ಒಂದೇ ಆಗಿದ್ದಾರೆ. ಯಥಾ -ಹೇಗೆ ಅಭ್ಧಿಃ – ಸಮುದ್ರವು  ಏಕಸ್ಯಾತ್ – ಒಂದೇ ಆದರೂ  ತ್ರಿಭಿಃ ಅಪಿ -ಮೂರೂಸಹ ರೂಪೈಃ -ರೂಪಗಳಿಂದ ಅಂದರೆ, ನೊರೆ, ತೆರೆ ಮತ್ತು ಸುಳಿಗಳು ಈ ಮೂರೂ ರೂಪಗಳಿಂದ ಹೇಗೆ ಬೇರೆ ಬೇರೆಯಾಗಿ ಕಾಣಿಸುವುದೋ (ತಥಾ –ಹಾಗೆ) ತ್ವಮ್ -ನೀನು ಏಕಾ -ಒಬ್ಬಳೇ ಅಪಿ -ಆದರೂ ಭವಮುದೇ – ಜನರ ಆನಂದಕ್ಕಾಗಿ ಚಿನ್ಮಾತಾ  ಜ್ನ್ಯಾನ ಸ್ವರೂಪಳಾದ ಮಾತೆಯೇ  (ಚಿತ್ -ಜ್ನ್ಯಾನ ಮಾತಾ-ತಾಯಿಯೇ)   ಇರುವು, ಅರಿವು ಮತ್ತು ಆನಂದಗಳೆಂಬ (ಸತ್, ಚಿತ್, ಆನಂದ) ತ್ರಿಭಿಃ ಏಭಿಃ -ಈ ಮೂರೂ ರೂಪಗಳಿಂದ ಸುಖಜಲಧಿಃ – ಆನಂದಮಯ ಕಡಲಿನಲ್ಲಿ ರಾರಾಜುಸುವೆ.

ಹೇ ತಾಯಿಹೇಗೆ ಜಡವಾದ ಬುರುಗು ಕಡಲಿನಲ್ಲಿಯೇ ಹುಟ್ಟಿಅಲ್ಲೇ ಬೆಳದು ಅಲ್ಲೇ ನಾಶವಾಗುವುದೋ, ಹಾಗೆಯೇ  ಜಡವಾದ ಜಗತ್ತು ನಿನ್ನಲ್ಲಿಯೇ ಹುಟ್ಟಿ ಬೆಳದು ನಾಶವಾಗುವುದು ಹೇಗೆ ತೆರೆಗಳೂ,  ಸುಳಿಗಳು ಇವುಗಳಲ್ಲಿ ಭೇದವಿಲ್ಲವೋಹಾಗೆಯೇ ಜೀವ ಮತ್ತು ಈಶ್ವರ ಇವರಿಬ್ಬರಲ್ಲೂ  ಭೇದವಿಲ್ಲ ಜಗತ್ತಿನ ಸೃಷ್ಟಿಸ್ಥಿತಿ ಲಯಗಳಿಗೆ ನೀನೇ ಆಧಾರ. ಹೇಗೆ ಕಡಲು ನೊರೆತೆರೆಸುಳಿಗಳೆಂಬ ಮೂರು ರೂಪಗಳಿಂದ ಕಾಣಿಸಿಕೊಳ್ಳುವುದೋ ಹಾಗೆಯೇ,  ತಾಯೇನೀನೂ  ಕೂಡ ಸತ್ಚಿತ್ಆನಂದಗಳೆಂಬ ಮೂರು ರೂಪಗಳಿಂದ ಒಬ್ಬಳೇ ಕಾಣಿಸುಕೊಳ್ಳುವೆ.

ದೇವೀಸ್ತೋತ್ರಮಿದಂ ಪುಣ್ಯಂ ಪವಿತ್ರಂ ಭುವಿ ಪಾವನಂ

ಪಾವಯತ್ಯಖಿಲಾನ್ ಜೀವಾನ್ ಗಂಗೇವಕಿಲ ಸರ್ವದಾ  

ಇದಮ್ -ಈ ದೇವೀ ಸ್ತೋತ್ರಮ್ – ದೇವೀ ಸ್ತೋತ್ರವು ಪುಣ್ಯಮ್ -ಪುಣ್ಯಕರವಾದದ್ದು ಪವಿತ್ರಮ್ -ಪವಿತ್ರವೂ ಭುವಿ– ಭೂಮಂಡಲವನ್ನು ಅಖಿಲಾನ್ ಜೀವಾನ್ ಸಮಸ್ತ ಜೀವರಾಶಿಗಳನ್ನು ಗಂಗಾ ಇವ ಕಿಲ –ಗಂಗಾಜಲದಂತೆ ಖಂಡಿತವಾಗಿ ಸರ್ವದಾ-ಯಾವಾಗಲೂ ಪಾವಯತಿ -ಪವಿತ್ರ ಗೊಳಿಸುತ್ತದೆ

 ದೇವೀ ಸ್ತೊತ್ರವು ಪುಣ್ಯಕರವಾದದ್ದು,  ಭೂಮಂಡಲವನ್ನು ಪವಿತ್ರಗೊಳಿಸುತ್ತದೆಸಮಸ್ತ ಜೀವರಾಶಿಗಳನ್ನು ಗಂಗಾಜಲದಂತೆ ಖಂಡಿತವಾಗಿಯೂ ಯಾವಾಗಲೂ ಶುದ್ಧಗೊಳಿಸುತ್ತದೆ.

ಇತಿ ಶ್ರೀ ಸಮರ್ಥರಾಮದಾಸಾನುಗ್ರಹಿತ ಶ್ರೀಶ್ರೀಧರ ಸ್ವಾಮಿಭಿಃ ವಿರಚಿತಮ್ ದೇವೀ ಸ್ತೋತ್ರಂ ಸಂಪೂರ್ಣ್ಂ 

ಇಲ್ಲಿಗೆ ಶ್ರೀ ಸಮರ್ಥರಾಮದಾಸರಿಂದ ಅನುಗ್ರಹಿಸಲ್ಪಟ್ಟ ಶ್ರೀ ಶ್ರೀಧರ ಸ್ವಾಮೀಗಳಿಂದ ರಚಿಸಲ್ಪಟ್ಟ ಶ್ರೀದೇವೀ ಸ್ತೊತ್ರವು ಮುಗಿಯಿತು.

ಶ್ರೀ ದೇವೀ ಸ್ತೋತ್ರಮ್

ಪರಾವಿದ್ಯಾರೂಪಾಂ ನಿಗಮವನಶೊಭಾಂ ಸ್ಮರಹರಾಂ

ಪರಭ್ರಹ್ಮಾಕಾರಾಂ ನಿಜಕರುಣದೃಷ್ಟ್ಯಾsವನಕರಾಂ

ಕೃಪಾಪಾಂಗಾಂ ಶಾಂತಾಂ ದಿವಿಜಗಣಸಂಸೇವ್ಯಚರಣಾಂ

ಚಿದಾನಂದಾಂ ದೇವೀಂ ಮುನಿಜನನುತಾಂ ನೌಮಿ ಸತತಂ ॥೧॥

ರಮೋಮಾವಾಣೀತಿ ತ್ರಿವಿಧಮಪಿ ರೂಪಂ ತವ ಶುಭೇ

ಪರಬ್ರಹ್ಮಾಕಾರಂ ಪ್ರಕಟಯತಿ ಸಚ್ಚಿತ್ಸುಖಪದೈಃ 

ಶಿವೇ ಸ್ಮಾರಂ ಸ್ಮಾರಂ ತವ ವಿಮಲರೂಪಂ ನಿಜಸುಖಂ

ನಯೇ ಕಾಲಂ ಮಾತಃ ಶ್ರುತಿಮಥಿತತತ್ವಾರ್ಥಕಲಿತಃ 

 ರೂಪಂ ನೋ ಲಿಂಗಂ ಶ್ರುತಿಷುಗದಿತಂ ಬ್ರಹ್ಮಣ ಇತಿ

ಪರಂ ಸ್ವಾರ್ಥಾಯ ತ್ವಾಂ ಮಮ ಜನನಿ ಸಂಬೊಧ್ಯಕಲಯೇ 

ಭವೇ ಪುತ್ರಸ್ನೇಹಾದವಸಿ ಹಿ ಮಮಾಶೇಯಮಖಿಲಾ

ಯಥಾ ಮಾತೃಸ್ನೇಹೋ ವಿದಿತ ಇತಿ ನೋ ಬ್ರಹ್ಮ  ತಥಾ 

ತ್ರಯಾಣಾಂ ಲಿಂಗಾನಾಂ ಶ್ರುತಿಷು ತವ ನಾಮಾನಿ ವಿಮಲೇ

ಪರಂ ಮಾತೃಸ್ನೇಹಾದಭಿಹಿತಮ್ ಸ್ವಹಿತದೃಕ್ 

ಯಥಾ ಮಾತಾ ಸ್ನಿಹ್ಯೇತ್ತದಪಿ ಮಯಿ ತೇ ಪ್ರೀತಿರಧಿಕಾ

 ಮಾತಾ ಬ್ರಹ್ಮೈಕ್ಯಂ ಕಿಲ ವಿತನುತೇ ತ್ವಂ   ತಥಾ ॥ 

ಅಪಿ ಬ್ರಹ್ಮಾಕಾರಾದಪಿ  ನಿಜಶಕ್ತೇರ್ವಿಭವತಃ

 ಮಾತುಸ್ತಚ್ಛ್ರೇಷ್ಟಮ್ ಕಿಮಪಿ ಕಿಲ ಜಾನೇ ಸ್ಪುಟಮಿದಮ್ 

ಯಯಾ ಶಕ್ತ್ಯಾಕೋsಪಿ ಪ್ರಭವತಿ  ಸಾ ತ್ವಂ ಭವಹರೇ

ತ್ವಮೇವೈಕಂ ಬ್ರಹ್ಮ ಸ್ವಯಮಭಿಹಿತಂ ಭೇದರಹಿತಂ ॥ 

ತದೇಕಂ ತೇ ರೂಪಂ  ಬಹುವಿಧತಯಾ ವೇದಕಥಿತಂ

ಸ್ವಭಕ್ತ್ಯಾ ಸೇವಂತೇ ಸಕಲಜನಸೌಖ್ಯಂ ವಿತನುಷೇ 

ತ್ವಮೇಕಾ ವಿಶ್ವಾದೌ ತ್ವಮಿಹ ಸಕಲಾಂತರ್ಬಹಿರಪಿ

ತ್ವಮೈವೈಕಾಚಾಂತೇ ಸಕಲಮುಪಸಂಹೃತ್ಯ  ರಮಸೇ ॥ 

ತ್ವಮಿಂದ್ರಸ್ತ್ವಂಬ್ರಹ್ಮಾ ರವಿರಪಿ  ಚಂದ್ರೋ ಹರಿಹರೌ

ನರಸ್ತ್ವಂ ನಾರೀ  ತ್ವಂ ಸಕಲದಿವಿಜಾ ದೇವ್ಯ ಇತಿ ಯಾಃ 

ಧೃತಿಃ ಪ್ರಜ್ನ್ಯಾಮೇಧಾ ಮತಿರಪಿ ಗತಿಸ್ತ್ವಂ ಶ್ರುತಿನುತೇ

ತ್ವಮೇವಂ ಯದ್ಭೂತಮ್ ಭವದಿತಿ ಭವಿಷ್ಯತ್ತದಪಿಚ  

ಯಥಾಬ್ದೌ ಫೇನಃಸ್ಯಾತ್ವಯಿ ಜಗದಿದಂ ಯಜ್ಜಡಮಿತಿ

ತರಂಗಃ ಕಲ್ಲೊಲಸ್ತ್ವಯಿ ಜನನಿ ಚೇಶೊsಪರ ಇಮೌ 

ಯಥಾಭ್ದಿಃ ಸ್ಯಾದೇಕಸ್ತ್ರಿಭಿರಪಿ  ರೂಪೈರ್ಭವಮುದೇ

ತ್ವಮೇಕಾ ಚಿನ್ಮಾತಾ ಸುಖಜಲಧಿರೇಭಿಸ್ತ್ರಿಭಿರಪಿ ॥ 

ದೇವೀಸ್ತೋತ್ರಮಿದಂ ಪುಣ್ಯಂ ಪವಿತ್ರಂ ಭುವಿ ಪಾವನಂ

ಪಾವಯತ್ಯಖಿಲಾನ್ ಜೀವಾನ್ ಗಂಗೇವಕಿಲ ಸರ್ವದಾ  

ಇತಿ ಶ್ರೀ ಸಮರ್ಥರಾಮದಾಸಾನುಗ್ರಹಿತ ಶ್ರೀಶ್ರೀಧರ ಸ್ವಾಮಿಭಿಃ ವಿರಚಿತಮ್ ದೇವೀ ಸ್ತೋತ್ರಂ ಸಂಪೂರ್ಣ್ಂ