S O U L B L I S S

Loading

Manache Shlok

Manache Shlok

ಶ್ರೀ ಸಮರ್ಥ ರಾಮದಾಸ ವಿರಚಿತ ಮನೋಪದೇ± À

ಗಣಾಧೀಶ ಜೋ ಈಶ ಸರ್ವಾಂ ಗುಣಾಂಚಾ|
ಮುಳಾರಂಭ ಆರಂಭ ತೋ ನಿರ್ಗುಣಾಚ ||
ನಮೂ ಶಾರದಾ ಮೂಳ ಚತ್ವಾರ ವಾಚಾ |
ಗಮೂ ಪಂಥ ಆನಂತ ಯಾ ರಾಘವಾಚಾ ||1||

ಗಣಗಳಧಿಪತಿ ನೀನು ನಮಿಸುವೆನು ನಿನಗೆ|
ಗುಣಗಳನು ಮೀರಿರುವ ಆದಿ ಪೂಜ್ಯನಿಗೆ||
ನಾಕು ವಾಣ ಯ ಜನನಿ ಶಾರದೆಗೆ ನಮಿಸಿ |
ಏಕ ರಾಮನ ಭಕ್ತಿ ಪಥ ಹಿಡಿವೆ ಬಯಸಿ ||1||

ಮನಾ ಸಜ್ಜನಾ ಭಕ್ತಿಪಂಥೇಚಿ ಜಾವೇ|
ತರೀ ಶ್ರೀಹರೀ ಪಾವಿಜೇತೋ ಸ್ವಭಾವೇ||
ಜನೀ ನಿಂದ್ಯ ತೇ ¸ Àರ್ವ ಸೋಡೂನಿ ದ್ಯಾವೇ|
ಜನೀ ವಂದ್ಯ ತೇ ¸ Àರ್ವ ಭಾವೇ P Àರಾವೇ||2||

ಸನ್ಮನವೆ ಭಕ್ತಿ ಮಾರ್ಗದಲಿ ಚಲಿಸುವುದು |
ತನ್ಮಯದಿ ಚಿನ್ಮಯನ ಸುಲಭ ಕಾಣುವುದು ||
ನಿಂದ್ಯವಹ ಕರ್ಮಗಳ ಬಿಡಲು ನಿರ್ಧರಿಸು |
ವಂದ್ಯವಹ ಕರ್ಮಗಳ ಮಾಡೆ ಹಟಧರಿಸು ||2||

ಪ್ರಭಾತೇ ಮನೀ ರಾಮ ಚಿಂತೀತ ಜಾವಾ |
ಫುಡೇ ವೈಖರೀ ರಾಮ ಆಧೀ ವದಾವಾ ||
ಸದಾಚಾರ ಹಾ ಥೋರ ಸಾಂಡೂನಯೇ ತೋ |
ಜನೀ ತೋಚಿ ತೋ ಮಾನವೀ ಧನ್ಯ ಹೋತೋ ||3||

ಘೋಷಿಸುವುದು ಬೆಳಗಿನಲಿ ರಾಮ ನಾಮವನು |
ಆಶೀಸುತ ಸಂತತವು ನೆನೆಯ ಬೇಕದನು ||
ಇದುವೆ ಹಿರಿದಾಚಾರ ಬಿಡಬೇಡ ವೆಂದೂ |
ಇದರಿಂದ ಮಾನವನು ಧನ್ಯ ನೆಂದೆಂದೂ ||3||

ದಿನಾಲು ನಸುಕಿನಲ್ಲಿ ರಾಮನ ಧ್ಯಾನ ಮಾಡುತ್ತಿರಬೇಕು ಹಾಗೂ ಆಮೇಲಾದರೂ ಪ್ರಾಮುಖ್ಯವಾಗಿ ವಾಣ ಯಿಂದ ರಾಮನಾಮವನ್ನು ಉಚ್ಚರಿಸಬೇಕು. ಇದಲ್ಲದೆ ಒಳ್ಳೇ ನಡತೆಯು ಶ್ರೇಷ್ಠವಾಗಿದ್ದು ಅದನ್ನು ಬಿಟ್ಟುಕೊಡಬಾರದು. ಹೀಗೆ ವರ್ತಿಸುವವನೊಬ್ಬನೇ ಮನುಜರಲ್ಲಿ ಧನ್ಯಾನಗುವನು.

ಮನಾ ವಾಸನಾ ದುಷ್ಟ ಕಾಮಾ ನಯೇರೇ |
ಮನಾ ಸರ್ವಥಾ ಪಾಪಬುದ್ಧೀ ನಕೋರೇ ||
ಮನಾ ಸರ್ವಥಾ*1ನೀತಿ ಸೋಡೂ ನಕೋ ಹೋ |
ಮನಾ ಅಂತರೀ ಸಾರ ವಿಚಾರ ರಾಹೋ ||4||

ದುಷ್ಟ ವಾಸನೆಯ ಕಾಮನೆ ವಿಹಿತ ವಲ್ಲ |
ಎಷ್ಟಾದರೂ ಪಾಪ ಕೆಡೆಯಿರಲು ಸಲ್ಲ ||
ನೀತಿ ನಿಯಮಗಳಂತೆ ನಿರುತ ನಡೆ ನೀನು |
ಪ್ರೀತಿಯಲಿ ಸುವಿಚಾರಗಳ ಮಾಡಲೇನು ||4||

ಹೇ ಮನವೇ, ಕಟ್ಟ ಬಯಕೆಯು ಕೆಲಸದ್ದಲ್ಲವಪ್ಪಾ! ನೀನೆಂದಿಗೂ ಪಾಪವಿಚಾರ ಮಾಡಲೇಬೇಡ ನೋಡು!! ಮನರಾಯಾ, ನೀನೆಂದಿಗೂ ನೀತಿ ಬಿಡಬೇಡವಯ್ಯಾ! ನಿನ್ನೊಳಗೆ ಶ್ರೇಷ್ಠ ವಿಚಾರವಿರಲಿ ತಂದೆ !!

ಮನಾ ಪಾಪ¸ ÀಂP Àಲ್ಪ ಸೋಡೂನಿ ದ್ಯಾವಾ |
ಮನಾ ಸತ್ಯ¸ ÀಂP Àಲ್ಪ ಜೀವೀ ಧರಾವಾ ||
ಮನಾ P Àಲ್ಪನಾ⧫2ತೇ ನಕೋ ವೀಷಂi ÀiÁಂಚೀ |
ವಿಕಾರೇ ಘಡೇ ಹೋ ಜನೀ ಸರ್ವ ಛೀ ಛೀ ||5||

ಮನವೆ ಪಾಪಗಳ ಸಂಕಲ್ಪ ಬಿಡಬೇಕು |
ಕೊನೆ ತನಕ ಸತ್ಯ ಸಂಕಲ್ಪವಿರಬೇಕು ||
ಇನಿತು ವಿಷಯಗಳ ಕಲ್ಪನೆ ಬೇಡ ನಿನಗೆ |
ಜನರು ನಿಂದಿಪರು ನಿನ್ನ ವಿಕಾರ ದೆಸೆಗೆ ||5||

ಮನವೇ, ಪಾಪದ ಕಲ್ಪನೆಯನ್ನು ಬಿಟ್ಟುಬಿಡತಕ್ಕದ್ದು ಹಾಗೂ ಸದಿಚ್ಛೆಯನ್ನು ದೃಢವಾಗಿ ಧರಿಸತಕ್ಕದ್ದು; ಹಾಗೆಯೇ ವಿಷಯಗಳ ಕಲ್ಪನೆಯಾದರೂ ತ್ಯಾಜ್ಯವಿರುತ್ತದೆ. ಯಾಕೆಂದರೆ ವಿಕಾರವಶದಿಂದ ಜನರಲ್ಲಿ ಛೀಪಟ್ಟಾಗುವದು!

ನಕೋರೇ ಮನಾ ಕ್ರೋಧ ಹಾ ಖೇದಕಾರೀ |
ನಕೋರೇ ಮನಾ ಕಾಮ ನಾನಾ ವಿಕಾರೀ ||ನಕೋರೇ ಮನಾ ಲೋಭ ಹಾ ಅಂಗಿಕಾರೂ |
ನಕೋರೇ ಮನಾ ಮತ್ಸರೂ ದಂಭ ಭಾರೂ ||6||

ಬೇಡವೈ ಕೋಪ ನಿನಗಲೆ ಖೇದ ಕರವು |
ಬೇಡ ಕಾಮವು ಬಹಳ ವೈಕಾರ ಕರವು ||
ಮನವೆ ಲೋಭವು ನಿನಗೆ ಹಿತವಾದುದಲ್ಲ |
ತನು ಮೋಹ ಮದ ಮತ್ಸರಗಳೆಂದು ಸಲ್ಲ ||6||

ಮನವೇ, ದುಃಖದಾಯಕವಾದ ಸಿಟ್ಟು, ಅನೇಕ ವಿಕಾರಯುಕ್ತ ಕಾಮ, ಧನಾಶೆ ಹಾಗೂ ಪ್ರಬಲವಾದ ಹೊಟ್ಟೇಕಿಚ್ಚು, ದಂಭಾ ಇವಾವುಗಳನ್ನೂ ಗ್ರಹಿಸಬೇಡವಪ್ಪಾ!

ಮನಾ ಶ್ರೇಷ್ಠಧಾರಿಷ್ಟಜೀವೀ ಧರಾವೇ |
ಮನಾ ಬೋಲಣೇ ನೀಚ ಸೋಶೀತ ಜಾವೇ ||
ಸ್ವಯೇ ¸ Àರ್ವದಾ ನಮ್ರ ವಾಚೇ ವದಾವೇ |
ಮನಾ ಸರ್ವ ಲೋಕಾಸಿರೇ ನೀವವಾವೇ ||7||

ಶ್ರೇಷ್ಠ ರಹ ಧೈರ್ಯವನು ನೀನು ಗಳಿಸುವುದು |
ಶ್ರೇಷ್ಠನಾಗೆ ಪರನಿಂದ್ಯೆಗಳ ಸೈರಿಪುದು |
ಮಾತಿನಲಿ ನಮ್ರತೆಯ ಪ್ರಕಟಿಸಲುಬೇಕು |
ರೀತಿಯಲಿ ಜನಪ್ರೀತಿ ಗಳಿಸಲೇಬೇಕು ||7||

ಮನವೇ, ಒಳಗೆ ಮಹತ್ತಾದ ಧೈರ್ಯತಳೆದು, ಅನ್ಯರಾಡುವ ಹೀನಮಾತುಗಳನ್ನು ಸಹಿಸುತ್ತಿರು ಹಾಗೂ ನೀನು ಯಾವಾಗಲೂ ವಾಣ ಯಿಂದ ವಿನಯದ ಭಾಷಣ ಮಾತಾಡಿ ಎಲ್ಲ ಜನರನ್ನೂ ಸಂತೋಷಗೊಳಿಸು.

ದೇಹೇ ತ್ಯಾಗಿತಾ ಕೀರ್ತಿ ಮಾಗೆ ಉರಾವೀ |
ಮನಾ ಸಜ್ಜನಾ ಹೇಚಿ ಕ್ರೀಯಾ ಧರಾವೀ |
ಮನಾ ಚಂದನಾಚೇ ಪರೀ ತ್ವಾ ಝಿಜಾವೇ |
ಪರೀ ಅಂತರೀ ಸಜ್ಜನಾ ನೀವವಾವೇ ||8||

ನಾಶವಹ ದೇಹ ಪತನವು ನಿರುತ ಸತ್ಯ |
ಲೇಸು ಮಾಡಲು ಕೀರ್ತಿಯುಳಿವಂಥ ಕೃತ್ಯ ||
ಬೆಂದು ಗಂಧವ ನೀವ ಚೆಂದನದ ತೆರದಿ |
ನೊಂದು ನೀ ಪರಸುಖವ ಸಾಧಿಪುದು ಜಗದಿ ||8||

ಸಭ್ಯ ಮನವೇ, ಶರೀರ ತೊಲಗಿದರೂ ಹಿಂದೆ ಕೀರ್ತಿಯುಳಿಯುವಂತಹ ನಡೆಯನ್ನು ಹಿಡಿ; ಗಂಧದಂತೆ ಸವೆದಾದರೂ ಸಾಧುಜನರ ಅಂತಃಕರಣವನ್ನು ಸಂತೋಷಗೊಳಿಸು!

ನಕೋರೆ ಮನಾ ದ್ರವ್ಯ ತೇ ಫೂಢಿಲಾಂಚೆ |
ಅತೀ ಸ್ವಾರ್ಥ ಬುದ್ಧೀ ನುರೇ ಪಾಪ ಸಾಚೇ ||
ಘಡೇ ಭೋಗಣೇ ಪಾಪ ತೇ P Àರ್ಮ ಖೋಟೇ |
ನ ಹೋತಾ ಮನಾಸಾರಿಖೇ ದುಃಖ ಮೋಠೆ ||9||

ಪರದ್ರವ್ಯಪಹರಣ ಪತನ ಕಾರಣವು |
ಪರಹಿಂಸೆ ಕಡು ಸ್ವಾರ್ಥ ಪಾಪ ಕಾರಣವು ||
ಕೆಟ್ಟ ಕರ್ಮದ ಕಸುವು ಕಡೆಗೆ ಕಾಡಿಪುದು |
ಇಷ್ಟದಂತಾಗದಿರೆ ಕ್ಲೇಶ ವಾಗುವುದು ||9||

ಮನವೇ, ಪರಧನದ ಅಭಿಲಾಷೆ ಮಾಡಬೇಡ, ಮಿತಿಮೀರಿದ ಸ್ವಾರ್ಥಬುದ್ಧಿಯೂ ಒಳ್ಳೇದಲ್ಲ; ಯಾಕೆಂದರೆ ಆದರಿಂದ ಪಾಪ ಸಂಗ್ರಹವಾಗುವದು ಹಾಗೂ ಆ ಕೆಟ್ಟ ಪಾಪಕರ್ಮದ ಫಲವನ್ನು ಅನುಭೋಗಿಸಬೇಕಾಗುವದು! ಒಟ್ಟಿಗೆ ಲೋಭ ಸ್ವಾರ್ಥಗಳಿಂದ ತನ್ನ ಇಚ್ಛೆಕೈಗೂಡದೆ ಭಯಂಕರ ದುಃಖವೇ ಪದರಿಗೆ ಬರುವದು!!

ಸದಾ ಸರ್ವದಾ ಪ್ರೀತಿ ರಾಮೀ ಧರಾವೀ |
ದುಃಖಾಚೀ ¸ À್ವಯೇ ಸಾಂಡಿ ಜೀವೀ P Àರಾವೀ ||
ದೇಹೇದುಃಖ ತೇ ಸೂಖ ಮಾನೀತ ಜಾವೇ |
ವಿವೇಕೇ*3ಸದಾ ಸಸ್ವರೂಪೀ ಭರಾವೇ ||10||

ರಾಮನಲಿ ಪ್ರೇಮ ದೃಢವಾಗಿ ನೆಲೆಸಿರಲಿ |
ನೇಮದಲಿ ಖಿನ್ನತೆಯು ನಾಶ ಹೊಂದಿರಲಿ ||
ವಿವಿಧ ದುಃಖಗಳನುಪಕಾರ ವೆಂದೆಣ ಸು |
ಸುವಿವೇಕಿಯಾಗಿ ನಿಜರೂಪದಲಿ ರಮಿಸು ||10||

ರಾಮನಲ್ಲಿ ನಿರಂತರ ಪ್ರೇಮವಿಟ್ಟು ತಾನೇ ತನ್ನೊಳಗೆ ದುಃಖ ತ್ಯಜಿಸಬೇಕು ಹಾಗೂ ಪ್ರಾರಬ್ಧಪ್ರಾಪ್ತ ಶಾರೀರಿಕ ದುಃಖವನ್ನು ಸುಖವೆಂದು ಭಾವಿಸುತ್ತ, ವಿಚಾರದಿಂದ ಯಾವಾಗಲೂ ಆತ್ಮಸ್ವರೂಪದಲ್ಲಿ ಸಮರಸವಾಗಬೇಕು.

ಜನೀ ಸರ್ವ¸ Àೂಖೀ ಅಸಾ ಕೋಣ ಆಹೇ |
ವಿಚಾರೇ ಮನಾ ತೂಚಿ ಶೋಧೂನಿ ಪಾಹೇ⧫🗐||
ಮನಾ ತ್ವಾಚಿರೇ ಪೂರ್ವ ಸಂಚೀತ ಕೇಲೇ |
ತಂi ÀiÁಸಾರಿಖೇ ಭೋಗಣೇ ಪ್ರಾಪ್ತಝಾಲೇ||11||

ನಿತ್ಯ ಸುಖಿಯಾದವನು ಜಗದಲ್ಲಿ ಸಿಗನು |
ಅತ್ಯಧಿಕ ಶೋಧಿಸುತ ನೀನರಿವುದಿದನು ||
ಪೂರ್ವ ಜನ್ಮದ ತನ್ನ ಕರ್ಮಫಲ ವೆಂತು |
ಓರ್ವನಿಗೂ ತಪ್ಪದನು ಭೋಗಿಸುವುದೆಂತು ||11||

ಮನವೇ, ಜನರಲ್ಲಿ ಎಲ್ಲ ತರದಿಂದಲೂ ಸುಖಿಯಾದವನು ಯಾವನಿರುವನಪ್ಪಾ? ನಿನೇ ವಿಚಾರದಿಂದ ಹುಡುಕಿ ನೋಡು, ಎಂದರೆ ಯಾವನೂ ಸರ್ವಸುಖಿಯಿಲ್ಲವೆನ್ನುವದು ಗೊತ್ತಾಗುವದು ! ಮನಾ, ಹಿಂದೆ ನೀನು ಕರ್ಮಸಂಚಯ ಮಾಡಿದ್ದರಿಂದಲೇ ಈಗ ಸುಖದುಃಖದ ಭೋಗ ಒದಗಿರುವದೆಂಬುದನ್ನು ನೆನಪಿಡು.

ಮನಾ ಮಾನಸೀ ದುಃಖ ಆಣೂ ನಕೋರೇ |
ಮನಾ ಸರ್ವಥಾ ಶೋP À ಚಿಂತಾ ನಕೋರೇ ||
ವಿವೇಕೇ ದೇಹೇಬುದ್ಧಿ ಸೋಡೂನಿ ದ್ಯಾವೀ |
ವಿದೇಹೀಪಣೇ ಮುಕ್ತಿ ಭೋಗೀತ ಜಾವೀ ||12||

ಕೊಡಲು ಬೇಡಾಸ್ಪದವ ದುಃಖಕಿನಿಲೆನಿತು |
ಎಡೆಬೇಡ ಚಿಂತೆ ಶೋಕಂಗಳಿಗೆ ಮರೆತು ||
ದೇಹಬುದ್ಧಿಯ ವಿವೇಕದಿ ಕಳಚಿ ಹಾಕು |
ಮೋಹ ಕಳೆದು ವಿದೇಹ ಸ್ಥಿತಿ ಗಳಿಸಬೇಕು ||12||

ಮನವೇ, ನಿನ್ನಲ್ಲಿ ದುಃಖ ತಂದುಕೊಳ್ಳಬೇಡ, ಗೋಳಾಟ- ಚಿಂತೆಯೆಂದಿಗೂ ಮಾಡಬೇಡ; ಆದರೆ ವಿಚಾರದಿಂದ ದೇಹವೇ ನಾನೆಂಬ ಅಹಂಕಾರವನ್ನು ತ್ಯಜಿಸಿಬಿಟ್ಟು ದೇಹಭಾವವಿರಹಿತನಾಗಿ ಮುಕ್ತಿಸುಖವನ್ನು ಅನುಭೋಗಿಸು.

ಮನಾ ಸಾಂಗ ಪಾ ರಾವಣಾ ಕಾಯ ಝಾಲೇ |
ಅಕಸ್ಮಾತ ತೇ ರಾಜ್ಯ ಸರ್ವೇ ಬುಡಾಲೇ ||ಮ್ಹಣೋನೀ P Àುಡೀ ವಾ¸ Àನಾ ಸಾಂಡಿ ವೇಗೀ |
ಬಳೇ ಲಾಗಲಾ ಕಾಳ ಹಾ ಪಾಠಿಲಾಗೀ ||13||

ಹಿಂದೆ ರಾವಣಗಾದ ಗತಿ ಏನು ಹೇಳು |
ಒಂದರ್ಧ ಗಳಿಗೆಯೊಳು ವೈಭವವು ಹಾಳು ||
ದುಷ್ಟವಾಸನೆಯ ಪಾಡು ನೋಡದೆಂತಿಹುದು ||
ಕಷ್ಟವಹ ಮೃತ್ಯುವನ್ನೆಳ ತರದೆ ಬಿಡದು ||13||

ಮನವೇ, ಮಹಾಬಲಿಷ್ಠ ರಾವಣನ ಗತಿ ಏನಾಯಿತು ಹೇಳು ನೋಡೋಣ? ಅವನ ರಾಜ್ಯ ಮೊದಲಾದ ಸರ್ವಸ್ವವೂ ಮುಳುಗಿ ಹೋಯಿತು! ಅದಕ್ಕಾಗಿ ಹೀನ ಕಾಮೇಚ್ಛೆಯನ್ನು ತೀವ್ರವೇ ತ್ಯಜಿಸು ಹಾಗೂ ಕಾಲನು ಎಲ್ಲರನ್ನೂ ವೇಗದಿಂದ ಬೆನ್ನಟ್ಟಿರುವನೆಂಬುದನ್ನು ಮರೆಯದಿರು.

ಜಿವಾ P Àರ್ಮಯೋಗೇ ಜನೀ ಜನ್ಮಝಾಲಾ |
ಪರೀ ಶೇವಟಿ ‘ಕಾಳಮೂಖೀ ನಿಮಾಲಾ’*6||
ಮಹಾಥೋರ ತೇ ಮೃತ್ಯುಪಂಥೇಚಿ ಗೇಲೇ ||
ಕಿತೀ ಏಕ ತೇ ಜನ್ಮಲೇ ಅಣ ಮೇಲೇ ||14||

ಕರ್ಮಕನುಗುಣ ಜನ್ಮ ಪಡೆಯುವುದು ಜೀವ |
ಧರ್ಮ ಬಾಹಿರನಾಗುವುದು ಬೇಡ ಹೇಮ ||
ಶ್ರೇಷ್ಠರೆಂಬರನು ಸಹ ಮೃತ್ಯು ಬಿಡಲಿಲ್ಲ |
ಲೋಕದೊಳು ಜನನ ಮರಣಕೆ ಲೆಕ್ಕವಿಲ್ಲ ||14||

ಜೀವನಿಗೆ ಅವನ ಕರ್ಮಾನುಸಾರವಾಗಿ ಜಗತ್ತಿನಲ್ಲಿ ಜನ್ಮ ಬಂದಿರುವದು. ಆದರೇನು, ಅವನು ಕೊನೆಗೆ ಮೃತ್ಯುವಿಗೆ ತುತಾಗುವನು! ಬಹಳ ದೊಡ್ಡವರೆನಿಸಿದವರು ಸಹ ಮರಣದ ದಾರಿಯಿಂದಲೇ ಹೋದರು! ಹೀಗೆ ಇಲ್ಲಿಯವರೆಗೆ ಹುಟ್ಟಿ ಸತ್ತು ಹೋದವರ ಸಂಖ್ಯೆ ಗಣ ಸಲಸಾಧ್ಯವು.!!

ಮನಾ ಪಾಹತಾ ಸತ್ಯ ಹೇ ಮೃತ್ಯು ಭೂಮೀ |
ಜಿತಾ ಬೋಲತೀ ಸರ್ವಹೀ ಜೀವ ಮೀ ಮೀ ||
ಚಿರಂಜೀವ ಹೇ ¸ Àರ್ವಹೀ ಮಾನಿತಾತೀ |
ಅಕಸ್ಮಾತ ಸಾಂಡೂನಿಯಾ ಸರ್ವ ಜಾತೀ ||15||

ನಂಬು ನೀನೀ ಜಗವು ಮೃತ್ಯು ಭುವಿಯೆಂದು |
ಇಂಬು ಕೊಡಬೇಡಹಂಕಾರ ಕೆಂದೆಂದು ||ಚಿರಂಜೀವಿ ನೀನೆಂಬುದನು ಮರೆಯಬೇಕು |
ಕರೆಯೆ ಮೃತ್ಯುವು ಬಿಟ್ಟು ಹೊರಡಲೇಬೇಕು ||15||

ಮನವೇ, ಇದು ಮೃತ್ಯು ಲೋಕವೆನ್ನುವದು ನಿಜವಷ್ಟೇ? ಹೀಗಿದ್ದರೂ ಮನುಷ್ಯರೆಲ್ಲ ತಮ್ಮ ಅಲ್ಪ ಜೀವನ ಕಾಲದಲ್ಲಿ ‘ನಾ-ನಾ’ ವೆನ್ನುವರು! ಇವರೆಲ್ಲರೂ ತಮ್ಮನ್ನು ಜಿರಂಜೀವಿಯೆಂದೇ ಭಾವಿಸುತ್ತಾರಲ್ಲ! ಆದರೆ ಆಕಸ್ಮಾತ್ತಾಗಿ ಎಲ್ಲವನ್ನೂ ಬಿಟ್ಟು ನಡೆಯುವರು!!

ಮರೇ ಏಕ ತ್ಯಾಚಾ ದುಜಾ ಶೋP À ವಾಹೇ |
ಅಕಸ್ಮಾತ ತೋ ಹೀ ಫುಢೆ ಜಾತ ಆಹೇ ||
ಪುರೇನಾ ಜನೀ ಲೋಭರೇ ಕ್ಷೋಭತ್ಯಾತೇ |
ಮ್ಹಣೋನೀ ಜನೀ ಮಾತುತಾ ಜನ್ಮಘೇತೇ ||16||

ಒಬ್ಬ ಸಾಯಲಳುವರು ಹಿಂದ ಕುಳಿದವರು |
ಒಬ್ಬರನು ಸಾವು ಬಿಡದೆಂದು ಮರೆಯುವದು |
ಆಸೆ ಕೆಡುಕೆಂದು ನೀ ತಿಳಿದು ನಂಬುವುದು|
ಆಸೆಯಲೆ ಜನ್ಮ ಬಿಡದಂತೆ ಬರುತಿಹುದು ||16||

ಒಬ್ಬನು ಸತ್ತರೆ ಇನ್ನೊಬ್ಬನು ಅಳುವನು, ಆದರೆ ಆ ಮತ್ತೊಬ್ಬನಾದರೂ ಮುಂದೆ ಒಮ್ಮೆಲೇ ಸತ್ತು ಹೋಗುವನು! ಹೀಗೆ ಬೇರೆಯವರಿಗಾಗಿ ಅಳುತ್ತ ತಾನು ಸಾಯುವದು ಮತ್ತು ಪುನಃ ಹುಟ್ಟಿಬರುವದು ಅವ್ಯಾಹತವಾಗಿ ಸಾಗಿದೆ! ನಿಜವೇ ಅದೆ. ಪ್ರಪಂಚದಲ್ಲಿ ಆಶೆಯೆಂದಿಗೂ ಪೂರೈಸುವದಿಲ್ಲವಷ್ಟೇ ಅಲ್ಲ, ಅದಕ್ಕೆ ಉರಿದೇಳಲು ಆಸ್ಪದ ಸಿಗುವದರಿಂದ ಜಗತ್ತಿನಲ್ಲಿ ತಿರುಗಿ ಜನ್ಮ ತಕ್ಕೊಳ್ಳಬೇಕಾಗುವದು.

ಮನೀ ಮಾನವಾ ವ್ಯರ್ಥ ಚಿಂತಾ ವಹಾತೇ |
ಅಕಸ್ಮಾತ ಹೋಣಾರ ಹೋವೂನಿ ಜಾತೇ ||
ಘಡೇ ಭೋಗಣೇ ಸರ್ವಹೀ P Àರ್ಮಯೋಗೇ |
ಮತಿಮಂದ ತೇ ಖೇದ ಮಾನೀ ವಿಯೋಗೇ ||17||

ಮಾಡುವನು ಮನುಜ ಮನದಲಿ ವ್ಯರ್ಥ ಚಿಂತೆ |
ಬೇಡಾದುದೇ ಬಹುದು ವಿಧಿ ನಿಯಮದಂತೆ ||
ಸುಖ ಸುಖ ಕರ್ಮಕನುಗುಣವೆ ಭೋಗಿಪನು |
ದುಃಖಿಪ ವಿಯೋಗದಲಿ ಮೂಢನೆನಿಸುವನು ||17||

ಮನುಜನು ಸುಮ್ಮನೆ ಮನದಲ್ಲಿ ಚಿಂತೆ ಮಾಡುವನು. ಆದರೆ ಆಗತಕ್ಕ ಘಟನೆಯೇನೋ ಆಕಸ್ಮಾತ್ತಾಗಿ ಆಗಿಯೇ ಹೋಗುವದು! ನಿಜವಾಗಿ ಸುಖದುಃಖಾದಿ ಭೋಗವೆಲ್ಲವೂ ಪ್ರಾರಬ್ಧಕರ್ಮಾನುಸಾರವಾಗಿ ಪ್ರಾಪ್ತವಾಗುತ್ತಿದ್ದು, ಮೂರ್ಖನು ಆ ಹಾನಿ ಇತ್ಯಾದಿಯಿಂದ ನಿರರ್ಥಕವಾಗಿ ಕೆಡಕೆನಿಸಿಕೊಳ್ಳುವನು!

ಮನಾ ರಾಘವೇವೀಣ ಆಶಾ ನಕೋರೇ |
ಮನಾ ಮಾನವಾಚೀ ನಕೋ ಕೀರ್ತಿ ತೂ ರೇ ||
ಜಯಾ ವಣ ್ತೀ ವೇದ ಶಾಸ್ತ್ರೇ ಪುರಾಣೇ |
ತಂi ÀiÁ ವಣ ್ತಾ ಸರ್ವಹೀ ಶ್ಲಾಘ್ಯವಾಣೇ ||18||

ಮನವೆ ರಾಮನನು ಬಿಟ್ಟಾಸೆ ಪಡಬೇಡ |
ಮನುಜ ಕೀರ್ತಿಯ ಹೊಗಳುವಾಯಾಸಬೇಡ ||
ವೇದದಲಿ ವಣ ್ಸಿಹ ರಾಮನನು ಹೊಗಳು |
ಖೇದ ಕಳೆಯುತಲಾಸೆ ಪೂರ್ಮವಾಗುವೊಲು ||18||

ಮನವೇ, ರಾಮನ ಹೊರತಾಗಿ ಬೇರೆ ಆಶೆ ಮಾಡಬೇಡ ಮತ್ತು ನೀನು ನರಸ್ತುತಿ ಮಾಡುವದೂ ಸಲ್ಲದು. ಯಾಕೆಂದರೆ ವೇದ-ಶಾಸ್ತ್ರ-ಪುರಾಣಗಳು ಹೋಗಳುತ್ತಿರುವ ಪರಮಾತ್ಮನನ್ನು ವಣ ್ೀಸುವದೇ ಪರಮಯೋಗ್ಯವು!

ಮನ ಸರ್ವಥಾ ಸತ್ಯ ಸಾಂಡೂ ನಕೋರೇ |
ಮನಾ ಸರ್ವಥಾ ಮಿಥ್ಯ ಮಾಂಡೂ ನಕೋರೇ ||
ಮನಾ ಸತ್ಯ ತೇ ¸ Àತ್ಯ ವಾಚೇ ವದಾವೇ |
ಮನಾ ಮಿಥ್ಯೆ ತೇ ಮಿಥ್ಯ ಸೋಡೂನಿ ದ್ಯಾವೇ ||19||

ಸತ್ಯವನು ನೀನೆಂದಿಗೂ ಬಿಡಲು ಬೇಡ |
ಮಿಥ್ಯವನು ಮಂಡಿಸುವ ಮರೆ ಮಾತು ಬೇಡ ||
ಮಿಥ್ಯ ಸತತ ಮಿಥ್ಯ ವೆಂದರಿತು ನಂಬು |
ಸತ್ಯ ವಚನಕ್ಕಿರಲಿ ಬಿಡದಂತೆ ಯಿಂಬು ||19||

ಮನವೇ, ಸತ್ಯವನ್ನೆಂದಿಗೂ ಬಿಡಬೇಡ ಹಾಗೂ ಮಿಥ್ಯವನ್ನೆಂದಿಗೂ ಪ್ರತಿಪಾದಿಸಬೇಡ. ಸತ್ಯವು ಯಾವಾಗಲೂ ಸತ್ಯವೇ ಹಾಗೂ ಮಿಥ್ಯವು ಯಾವಾಗಲೂ ಮಿಥ್ಯವೇ ಆಗಿದ್ದರಿಂದ ವಾಣ ಯಿಂದ ಸತ್ಯವನ್ನು ನುಡಿ ಹಾಗೂ ಅಸತ್ಯವನ್ನು ಬಿಟ್ಟು ಬಿಡು.

ಬಹೂ ಹಿಂಪುಟೀ ಹೋಯಿಜೇ ಮಾಯಪೋಟೀ |
ನಕೋರೇ ಮನಾ ಯಾತನಾ ತೇಚಿ ಮೋಠೀ ||
ನಿರೋಧೇ ಪಚೇ ಕೋಂಡಿಲೇ ಗರ್ಭವಾಸೀ |
ಅಧೋಮೂಖರೇ ದುಃಖ ತ್ಯಾ ಬಾಳಕಾಸೀ ||20||

ಗರ್ಭವಾಸದ ನೋವನೆಂತು ವಣ ್ಸಲಿ |
ಅರ್ಭತನ ರೂಪು ಸಾಕಿನ್ನು ಬರದಿರಲಿ ||ಬಂಧನವ ಬಯಸಿ ಬಲುಬೆಂದ ಬಗೆ ಹೇಗೆ |
ಅಂಧನೊಳಧೋಮುಖದಿ ಸಿಲುಕಿದ್ದ ಬೇಗೆ ||20||

ಮನವೇ, ತಾಯಿಯ ಗರ್ಭದಲ್ಲಿ ಜೀವನಿಗೆ ಉಂಟಾಗುವ ಸಂಕಟವನ್ನು ಏನು ಹೇಳಲಪ್ಪಾ? ಬೇಡ ಬೇಡ, ಅದು ಭಯಂಕರವಿರುವದು! ಗರ್ಭಕೋಶದಲ್ಲಿ ತಲೆ ಕೆಳಗಾಗಿ ಸಿಕ್ಕುಬಿದ್ದು ಬೇಯುತ್ತಿರುವ ಆ ಎಳೇ ಕಂದನಿಗೆ ಅಸಹ್ಯ ದುಃಖವಾಗುತ್ತದೆ !!

ಮನಾ ವಾಸನಾ ಚೂP Àವೀ ಯೇರಝರಾ |
ಮನಾ ಕಾಮನಾ ಸಾಂಡಿರೇ ದ್ರವ್ಯದಾರಾ |
ಮನಾ ಯಾತನಾ ಥೋರ ಹೇ ಗರ್ಭವಾಸೀ |
ಮನಾ ಸಜ್ಜನಾ ಭೇಟವೀ ರಾಘವಾಸಿ ||21||

ಕಾಮಿನೀ ಕಾಂಚನದ ಕಾಮ ಬಿಡಬೇಕು |
ಭೂಮಿಯಲಿ ಹುಬ್ಬ ಸಾಯುವುದುಳಿಯಬೇಕು ||
ಯಾತನೆಯ ಗರ್ಭವಾಸವ ಬಿಡಸಬೇಕು |
ರೀತಿಯಲಿ ರಾಮ ಭೇಟಿಯ ಪಡೆಯಬೇಕು ||21||

ಸದ್ಗುಣ ಮನವೇ, ಗರ್ಭವಾಸದ ದಾರುಣ ದುಃಖವನ್ನು ನೆನಸಿ ಹುಟ್ಟಿ ಬರಲು – ಮೃತ್ಯುಲೋಕಕ್ಕೆ ಸಾರಿಗೆಯಿಡಲು – ಕಾರಣವಾದ ವಾಸನೆಯನ್ನು ಹಾಗೂ ಕಾಮಕಾಂಚನದ ಆಶೆಯನ್ನು ತೊರೆಯಪ್ಪಾ ! ನನಗೆ ರಾಮನ ದರ್ಶನ ಮಾಡಿಸಪ್ಪಾ!

2. ಭಕ್ತಿಪg À ಉಪದೇಶ (22-66)
ಮನಾ ಸಜ್ಜನಾ ಹೀತ ಮಾಝೇ P Àರಾವೇ |
ರಘೂನಾಯಕಾ ದೃಢ ಚಿತ್ತೀ ಧರಾವೇ ||
ಮಹಾರಾಜ ತೋ ಸ್ವಾಮಿ ವಾಂi Àುೂ¸ Àುತಾಚಾ |
ಜನಾ ಉದ್ಧರೀ ನಾತ ಲೋP Àತ್ರಯಾಚಾ ||22||

ಸನ್ಮನವೆ ನಿನಗೆ ಹಿತವಾದುದನೆ ಮಾಡು |
ತನ್ಮಯದಿ ರಾಮನನು ಚಿಂತನೆಯ ಮಾಡು ||
ಪವನ ಸುತ ಸ್ವಾಮಿಯ ಸುಗುಣವನ್ನು ಹಾಡು |
ಭವ ಬಂಧ ಕಳೆವಂಥ ಶ್ರೀಪತಿಯ ನೋಡು ||22||

ಒಳ್ಳೆಯ ಮನವೇ, ಶ್ರೀರಾಮನನ್ನು ಹೃದಯಲ್ಲಿ ಸುಸ್ಥಿರಗೊಳಿಸಿ ನನ್ನ ಹಿತಸಾಧಿಸಿಕೊಡು ಹನುಮಂತನ ಒಡೆಯನೂ ತ್ರೈಲೋಕ್ಯಾಧಿಪತಿಯೂ ಆದ ರಾಮಪ್ರಭುವೇ ಸರ್ವ ಉದ್ಧಾರಕರ್ತನಿರುತ್ತಾನೆ!

ನ ಬೋಲೇ ಮನಾ ರಾಘವಾವೀಣ ಕಾಂಹೀ |
ಜನೀ ವಾವುಗೇ ಬೋಲತಾ ಸೌಖ್ಯ ನಾಹೀ ||
ಘಡೀ ನೇಘಡೀ ಕಾಳ ಆಯುಷ್ಯ ನೇತೋ |
ದೇಹಾಂತೀ ತುಲಾ ಕೋಣ ಸೋಡೂ ಪಹಾತೋ ||23||

ರಾಮನಲ್ಲದ ಬೇರೆ ಚಿಂತನೆಯ ತ್ಯಜಿಸು |ನೇಮವಿಲ್ಲದ ಹರಟೆ ಸುಖ ಹೇವ ಹೊಲಸು ||
ಕಾಲ ಕ್ಷಣಕ್ಷಣದ ಲೆಕ್ಕವ ಮಾಡುತಿಹನು |
ಕಾಲ ಪಾಶವ ಬಿಡಿಸೆ ಬೇರಾವ ನಿಹನು ||23||

ರಾಮಚಂದ್ರನ ಸ್ಮರಣೆ – ಕೀರ್ತನೆಯ ಹೊರತಾಗಿ ಮತ್ತೇನನ್ನೂ ನುಡಿಯಬೇಡ. ಜನರೊಡನೆ ನಿರರ್ಥಕವಾಗಿ ಮಾತಾಡುವದರಲ್ಲಿ ಏನೂ ಸುಖವಿಲ್ಲ! ಕಾಲನು ಪ್ರತಿ ಕ್ಷಣಕ್ಕೂ ನಿನ್ನ ಆಯುಷ್ಯವನ್ನು ಹರಣ ಮಾಡುತ್ತಿದ್ದು, ಮರಣಸಮಯಕ್ಕೆ ಆ ಹರಟೆಯ ಜನರಲ್ಲಿ ಯಾರು ನಿನ್ನನ್ನು ಬಿಡಿಸಲಿಕ್ಕೆ ಬರುವರು ನೋಡಪ್ಪಾ?

ರಘೂನಾಯಕಾವೀಣ ವಾಂi ÀiÁ ಶಿಣಾವೇ |
ಜನಾಸಾರಿಖೇ ವ್ಯರ್ಥ ಕಾ ವೋಸಣಾವೇ ||
ಸದಾ¸ Àರ್ವದಾ ನಾಮ*7ವಾಚೇ ವಸೂದೇ |
ಅಹಂತಾ ಮನೀ ಪಾಪಿಣ ೀ ತೇ ನ¸ Àೂದೇ ||24||

ರಾಮನಲ್ಲದ ಮಾತುಗಳ ಕಷ್ಟವೇಕೆ |
ಸಾಮಾನ್ಯ ನಂದದಲ್ಲೋಣ ಹರಟೆಯೇಕೆ |
ಅನು ದಿನದ ಮಾತಿನಲಿ ರಾಮ ನೆನಪಿರಲಿ |
ಮನ ವಿನ್ನಹಂಕಾರವೇ ನಂಟದಿರಲಿ ||24||

ಮನವೇ, ರಾಮಚಂದ್ರನನ್ನು ಬಿಟ್ಟು ಸುಮ್ಮನೆ ಏಕೆ ದಣ ಯುವಿ? ಅಜ್ಞ ಜನರಂತೆ ಸುಮ್ಮನೆ ಏಕೆ ಗಳಹುವಿ? ನಿನ್ನ ನಾಲಿಗೆಯಲ್ಲಿ ಯಾವಾಗಲೂ ನಾಮಸ್ಮರಣೆ ನೆಲೆಗೊಳ್ಳಲಿ ಹಾಗೂ ಪಾಪಿಷ್ಠೆಯಾದ ಅಹಂತೆಯು ನಿನ್ನಲ್ಲಿಮೋರೆ ತೋರಿಸದಿರಲಿ!

ಮನಾ ವೀಟ ಮಾನೂ ನಕೋ ಬೋಲಣ್ಕಾಚಾ |
ಫುಢೇ ಮಾನುತಾ ರಾಮ ಜೋಡೇಲ ಕೈಚಾ ||ಸುಖಾಚೀ ಘಡೀ ಲೋಟತಾ ‘ದುಃಖ’*8ಆಹೇ |
ಫುಡೇ ¸ Àರ್ವ ಜಾಯೀಲಕಾಂಹೀ ನ ರಾಹೇ ||25||

ಮನವೆನ್ನ ಬೋಧವನು ಕಡೆಗಣ ಸೆ ಸಲ್ಲ |
ಅನುಮಾನವಿರೆ ರಾಮ ಕಾಣಬರಲೊಲ್ಲ ||
ದುಃಖ ಓಡುತ್ತ ಬರುವುದು ಸುಖದ ಹಿಂದೆ |
ದುಃಖ ಬರೆ ಬರಿ ಶೂನ್ಯ ಜಗವೆಲ್ಲ ಮುಂದೆ ||25||

ಮನವೇ, ನನ್ನ ಉಪದೇಶದ ಮಾತುಗಳಿಗಾಗಿ ಬೇಜಾರ ಪಡಬೇಡ; ಹಾಗೆ ಮಾತು ಕೇಳಿದಿದ್ದರೆ ನಿನಗೆ ಯಾವ ಕಾಲಕ್ಕಾದರೂ ರಾಮನು ದೊರೆಯಬಹುದೇ? ಸುಖದಗಳಿಗೆ ಹೋಗುವಷ್ಟರಲ್ಲಿಯೇ ಹಿಂದೆ ದುಃಖ ಸಿದ್ಧವದೆ. ಕೊನೆಗಂತೂ ಎಲ್ಲವೂ ನಾಶವಾಗಿ ಏನೊಂದೂ ಉಳಿಯಲಾರದು!

ದೇಹೇ ರP À್ಷಣಾಕಾರಣೇ ಯತ್ನ ಕೇಲಾ |
ಪರೀ ಶೇವಟೀ ಕಾಳ ಘೇವೂನಿ ಗೇಲಾ ||
P Àರೀ ರೇ ಮನಾ ಭಕ್ತಿ ಂi ÀiÁ ರಾಘವಾಚೀ |
ಫುಢೇ ಅಂತರೀ ಸೋಡಿ ಚಿಂತಾ ಭವಾಚೀ ||26||

ನಾಶವಹ ದೇಹವನು ರಕ್ಷಿಸಲು ನೀನು |
ಪಾಶದಲಿ ಕಾಲನದ ಹಿಡಿವುದಿಲ್ಲೇನು ||
ದಿನವು ರಾಮನ ಚಿಂತಿಸಲು ಕಷ್ಟವೇನು |
ಮನವೆ ಭವ ಚಿಂತೆಯಳಿಯಲ್ಕುಳಿವುದೇನು ||26||

ಮನವೇ, ನೀನು ಶರೀರವನ್ನು ಸಂರಕ್ಷಿಸಬೇಕೆಂದು ಎಷ್ಟು ಪ್ರಯತ್ನ ಮಾಡಿದರೂ, ಕಾಲನು ಕೊನೆಗೆ ಅದನ್ನು ಒಯ್ದೇಬಿಡುವನು! ಎಂದ ಮೇಲೆ ಆ ಹವಣ ಕೆ ಬಿಟ್ಟು ನಮ್ಮ ರಾಮಚಂದ್ರನ ಭಕ್ತೀ ಮಾಡಪ್ಪಾ ಹಾಗೂ ಅದರಿಂದ ಜನ್ಮ ಮರಣದ ಚಿಂತೆಯನ್ನೇ ಅಳಿಯಪ್ಪಾ!

ಭವಾಚ್ಯಾ ಭಯೇ ಕಾಯ ಭೀತೋಸಿ ಲಂಡೀ |
ಧರೀರೆ ಮನಾ ಧೀರ ಧಾಕಾಸಿ ಸಾಂಡಿ ||
ರಘೂನಾಯಕಾಸಾರಿಖಾ ಸ್ವಾಮಿ ಶೀರೀ |
ನುಪೇಕ್ಷೀ P Àದಾ ಕೋಪಲ್ಯಾ ದಂಡಧಾರೀ ||27||

ಹೇಡಿ ಯಂದದಿ ಭವದ ಭೀತಿಯಿರಲೇಕೆ |
ಪಾಡುವಗೆ ರಾಮನನು ಭವ ಚಿಂತೆಯೇಕೆ ||ಕಾಲ ಕೋಪದಿ ಬಂದು ಹೆದರಿಸಿದವನು |
ಕಾಲನಾಶಕ ರಾಮ ರಕ್ಷಿಸುತ್ತಿಹನು ||27||

ಮನವೇ ಹೇಡಿಯಂತೆ ಜನ್ಮ – ಮರಣದ ಅಂಜಿಕೆಯಿಂದ ಏಕೆ ಕಾತುರಗೊಳ್ಳುವಿ? ಧೈರ್ಯ ತಾಳಿ ಎದೆವಡಿಕೆಯನ್ನು ದೂರೀಕರಿಸು. ರಾಮಚಂದ್ರನಂಥ ಒಡೆಯನು ನಿನ್ನ ರಕ್ಷಣೆಗಿರಲು, ಯಮನು ಬಾಧಿಸಬಂದಾಗ್ಗೆ ಅವನೆಂದಿಗೂ ನಿನ್ನ ಕೈಬಿಡನು!

ದೀನಾನಾಥಾ ಹಾ ರಾಮ ಕೋದಂಡಧಾರೀ |
ಫುಢೇ ದೇಖತಾ ಕಾಳ ಪೋಟೀ ಥರಾರೀ ||
ಮನಾ*9ವಾP À್ಯ ನೇಮಸ್ತ ಸತ್ಯ ಮಾನೀ |
ನುಪೇಕ್ಷೀ P Àದಾ ರಾಮ ದಾಸಾಭಿಮಾನೀ ||28||

ದೀನನಾಥನು ರಾಮ ಕೋದಂಡಧಾರಿ |
ದೀನನಾಗುವನು ಕಂಡರೆ ದಂಡಧಾರಿ ||
ತಾಪಸಿಗೆ ಸುಖವೀವುದಿದು ಸತ್ಯವಾಣ |
ಉಪೇಕ್ಷಿಪನು ರಾಮ ದಾಸಾಭಿಮಾನಿ ||28||

ಮನವೇ. ಧನುಷ್ಯ ಧರಿಸಿದ ದೀನರಕ್ಷಕ ರಾಮಚಂದ್ರನನ್ನು ನೋಡುತ್ತಲೇ ಯಮನು ಎದೆಯಲ್ಲಿ ನಡುಗುವನು! ಈ ನನ್ನ ನಿಶ್ಚಯದ ಹೇಳಿಕೆಯನ್ನು ಸತ್ಯವೆಂದು ತಿಳಿ. ತನ್ನ ಸೇವರಕ ಅಭಿಮಾನಿಯಾದ ರಾಮನು ತನ್ನವರನ್ನೆಂದಿಗೂ ಕೈಬಿಡನು!

ಪದೀ ರಾಘವಾಚೇ ಸದಾ ಬ್ರೀಡ ಗಾಜೇ |
ಬಳೇ ಭP À್ತರೀಪೂಶಿರೀ ಕಾಂಬಿ ವಾಜೇ ||
ಪುರೀ ವಾಹಿಲೀ ಸರ್ವ ಜೇಣೇ ವಿಮಾನೀ |
ನುಪೇಕ್ಷೀ P Àದಾ ರಾಮ ದಾಸಾಭಿಮಾನೀ ||29||

ಭಕ್ತನಿಗೆ ರಾಮನಾಮವೇ ರಕ್ಷೆಯಹುದು |
ಭಕ್ತ ಶತ್ರುವನು ಕೋದಂಡ ದಂಡಿಪುದು ||
ಆ ಪುರ ಜನರ ವಿಮಾನದಲೊಯ್ದಮಾನಿ |
ಉಪೇಕ್ಷಿಪನು ರಾಮ ದಾಸಾಭಿಮಾನಿ ||29||

ರಾಮಚಂದ್ರನ ಪದತಲದಲ್ಲಿ ಯಾವಾಗಲೂ ಬಿರುದು ಸಾರುತ್ತಿರುವದು; ಅಷ್ಟೇ ಅಲ್ಲದೆ, ಭಕ್ತರವೈರಿಗಳ ತಲೆಯೆಡೆಗೆ ಆತನ ಬಿಲ್ಲು ಟಣತ್ಕರಿಸುವದು!

ಅಯೋಧ್ಯಾ ನಗರವಾಸಿಗಳೆಲ್ಲರನ್ನೇ ವಿಮಾನದಲ್ಲಿ ಪರಂಧಾಮಕ್ಕೆ ಕರದೊಯ್ದ ಸೇವಕರ ಅಭಿಮಾನಿಯಾದ ರಾಮನು ತನ್ನವರನ್ನೆಂದಿಗೂ ಕೈಬಿಡನು|
ಸಮರ್ಥಾಚಿಯಾ ಸೇವಕಾ ವಕ್ರ ಪಾಹೇ |
ಅಸಾ ಸರ್ವ ಭೂಮಂಡಳೀ ಕೋಣ ಆಹೇ ||
ಜಯಾಚೀ ಲೀಲಾ ವಣ ್ತೀ ಲೋಕ ತೀನ್ಹೀ |
ನುಪೇಕ್ಷೀ P Àದಾ ರಾಮ ದಾಸಾಭಿಮಾನೀ ||30||

ಸಿರಿವಂತ ಸಾಮಥ್ರ್ಯ ಜನ ಸೇವಕರನು |
ಅರಿದುಪೇಕ್ಷಿಸುವತಾ ಜಗದಲಿ ಸಿಗನು ||
ಶ್ರೀಪತಿಯ ಹೊಗಳುವುದು ಮೂಲೋಕವಾಣ |
ಉಪೇಕ್ಷಿಸನು ರಾಮ ದಾಸಾಭಿಮಾನಿ ||30||

ಸರ್ವಶಕ್ತ ರಾಮಪ್ರಭುವಿನ ಸೇವಕರನ್ನು ವಕ್ರದೃಷ್ಟಿಯಿಂದ ನೋಡುವಂಥವನು ಇಡೀ ಜಗತ್ತಿನಲ್ಲಿಯೇ ಯಾವನಿರುವನು? ಅರ್ಥಾತ್ ಯಾವನೂ ಇಲ್ಲ. ಮೂರೂ ಲೋಕಗಳೇ ಲೀಲಾವರ್ಣನೆ ಮಾಡುತ್ತಿರುವ ದಾಸಾಭಿಮಾನೀ ರಾಮನು ತನ್ನವರನ್ನೆಂದಿಗೂ ಕೈಬಿಡನು!

ಮಹಾ ಸಂP Àಟೀ ಸೋಡಿಲೇ ದೇವ ಜೇಣೆ |
ಪ್ರತಾಪೇ ಬಳೇ ಆಗಳಾ ಸರ್ವಗೂಣೇ ||
ಜಯಾತೇ ¸ À್ಮರೇ ಶೈಲಜಾ ಶೂಲಪಾಣ ೀ |
ನುಪೇಕ್ಷೀ P Àದಾ ರಾಮ ದಾಸಾಭಿಮಾನೀ ||31||

ಬಲಶಾಲಿ ಬಲುಗುಣ ಯು ಭಕುತಿ ಗೊಲಿಯುವನು|
ಒಲಿದ ಸುಮನಸರ ಬಿಡುಗಡೆಯ ಕಾರಣನು ||
ತಾಪಹರಕಾರ ಜಪಿಪನು ಶೂಲಪಾಣ |
ಉಪೇಕ್ಷಿಸನು ರಾಮ ದಾಸಾಭಿಮಾನಿ ||31||

ರಾವಣನ ಸೆರೆಯಲ್ಲಿಯ ಭಯಂಕರ ದುಃಖದಿಂದ ದೇವತೆಗಳನ್ನು ಮುಕ್ತಗೊಳಿಸಿದವನೂ, ಪರಾಕ್ರಮ, ಸಾಮಥ್ರ್ಯ ಮೊದಲಾಗಿ ಎಲ್ಲದರಿಂದಲೂ ಸರ್ವಶೇಷ್ಠನೂ, ಶಿವ-ಪಾರ್ವತಿಯರಿಂದ ಧಾನಿಸಲ್ಪಡುತ್ತಿರುವವನೂ ಆದ ದಾಸಾಭಿಮಾನೀ ರಾಮನು ತನ್ನವರನ್ನೆಂದಿಗೂ ಕೈ ಬಿಡನು!

ಅಹಿಲ್ಯಾ ಶಿಳಾ ರಾಘವೇ ಮುP À್ತ ಕೇಲೀ |
ಪದೀ ಲಾಗತಾ ದಿವ್ಯ ಹೋವೂನಿ ಗೇಲೀ ||
ಜಯಾ ವಣ ್ತಾ ಶೀಣಲೀ ವೇದವಾಣ ೀ |
ನುಪೇಕ್ಷೀ P Àದಾ ರಾಮ ದಾಸಾಭಿಮಾನೀ ||32||

ಶಿಲೆಯಾಗಿ ಬಿದ್ದಹಲ್ಯೆಗೆ ಶಾಪ ಮುಕ್ತಿ |
ಚೆಲುವ ಪಾದವು ಸೋಂಕಲಾಯಿತದೆ ಶಕ್ತಿ ||
ರೂಪವಣ ್ಸೆ ಸೋತುದಲೆ ವೇದವಾಣ |
ಉಪೇಕ್ಷಿಸನು ರಾಮ ದಾಸಾಭಿಮಾನಿ ||32||

ರಾಮಚಂದ್ರನು ಶಿಲೆಯಾಗಿ ಬಿದ್ದ ಅಹಿಲ್ಯೆಯನ್ನು ಉದ್ದರಿಸಿದನು, ಕೇವಲ ರಾಘವನ ಚರಣಸ್ಪರ್ಶದಿಂದ ಅವಳು ದಿವ್ಯರೂಪತಾಳಿದಳು! ಇಂತಹ ಮಹಿಮೆಯ ಹಾಗೂ ವೇದವಾಣ ಗೂ ವಣ ್ಸಲು ಸಾಧ್ಯವಾದ ದಾಸಾಭಿಮಾನೀ ರಾಮನು ತನ್ನವರನ್ನೆಂದಿಗೂ ಕೈಬಿಡನು!

ವಸೇ ಮೇರುಮಾಂದಾರ ಹೇ ¸ Àೃಷ್ಟಿಲೀಲಾ |
ಶಶೀ ¸ Àೂರ್ಯ ತಾರಾಂಗಣೇ ಮೇಘಮಾಲಾ ||
ಚಿರಂಜೀವ ಕೇಲೆ ಜಗೀ ದಾ¸ À ದೋನ್ಹೀ |
ನುಪೇಕ್ಷೀ P Àದಾ ರಾಮ ದಾಸಾಭಿಮಾನೀ ||33||

ಮಂದಾರ ಮೇರು ಪರ್ವತ ಸೃಷ್ಟಿಲೀಲೆ |
ಚಂದ್ರರವಿ ವಿಸ್ತಾರ ನಕ್ಷತ್ರ ಮಾಲೆ ||
ವ್ಯಾಪಿಸಿದ ಲಿಬ್ಬರಿಗೆ ಚಿರಪದದದಾನಿ |
ಉಪೇಕ್ಷಿಸನು ರಾಮ ದಾಸಾಭಿಮಾನಿ ||33||

ಮೇರು-ಮಾಂದಾರಾದಿ ಪರ್ವತಗಳು, ಸೂರ್ಯ-ಚಂದ್ರರು ನಕ್ಷತ್ರ-ಸಮೂಹ, ಮೇಘಮಾಲೆಗಳು ಇವೆಲ್ಲವನ್ನೂ ಕೇವಲ ಲೀಲಾಜಾಲವಾಗಿ ನಿರ್ಮಿಸಿರುವ ಹಾಗೂ ಹನುಮಂತ ವಿಭೀಷಣರೆಂಬ ತನ್ನ ಇಬ್ಬರು ಸೇವಕರನ್ನು ಚಿರಂಜೀವಿಗಳನ್ನಾಗಿ ಮಾಡಿದ ಭಕ್ತಾಭಿಮಾನೀ ರಾಮನು ತನ್ನವರನ್ನೆಂದಿಗೂ ಕೈ ಬಿಡನು!

ಉಪೇಕ್ಷಾP Àದಾ ರಾಮರೂಪೀ ಅಸೇನಾ |
ಜಿವಾ ಮಾನವಾ ನಿಶ್ಚಯೋ ತೋ ವಸೇನಾ ||
ಶಿರೀ ಭಾರ ದಾಹೇನ ಬೋಲೇ ಪುರಾಣ ೀ ||
ನುಪೇಕ್ಷೀ P Àದಾ ರಾಮ ದಾಸಾಭಿಮಾನೀ ||34||

ರಾಮ ರೂಪಿಸಲು ಪೇಕ್ಷೆಯ ಲೇಶವಿಲ್ಲ |
ಪ್ರೇಮವಿಶ್ವಾಸ ಗಳಿನಿತು ನರನಿಗಿಲ್ಲ ||
ಕಾವು ದೆಂಬಗೆ ಯೋಗ ಕ್ಷೇಮಗಳ ದಾನಿ |
ಉಪೇಕ್ಷಿಸನು ರಾಮ ದಾಸಾಭಿಮಾನಿ ||34||

ರಾಮನು ಸಹಜ ಸ್ವಭಾವದಲ್ಲಿ ತಾತ್ಸಾರವೆಂದಿಗೂ ಇರಲಾರದು; ಆದರೆ ಅಜ್ಞಾನೀ ಮನುಜರಿಗೆ ಆ ತರದ ವಿಶ್ವಾಸವಿರುವದಿಲ್ಲ! ಪುರಾಣ – ಗೀತಾದಿ ಸ್ಮ øತಿ-ಗ್ರಂಥಗಳಲ್ಲಿ “ಭಕ್ತರ ಯೋಗಕ್ಷೇಮವನ್ನು ತಲೆಯ ಮೇಲೆ ಹೊರುವೆನೆಂದು*11ವಚನವಿತ್ತಿರುವ ದಾಸಾಭಿಮಾನೀ ರಾಮನು ತನ್ನವರನ್ನೆಂದಿಗೂ ಕೈಬಿಡನು !

ಅಸೇ ಹೋ ಜಯಾ ಅಂತರೀ ಭಾವ ಜೈಸಾ |
ವಸೇ ಹೋ ತಂi ÀiÁ ಅಂತರೀ ದೇವ ತೈಸಾ ||
ಅನನ್ಯಾಸಿ ರಕ್ಷಿತಸೇ ಚಾಪಪಾಣ ೀ |
ನುಪೇಕ್ಷೀ P Àದಾ ರಾಮ ದಾಸಾಭಿಮಾನೀ ||35||

ಭಕ್ತ ಶ್ರೇಷ್ಠರ ಯೋಗ್ಯ ಕಾಮನೆಯ ತಿಳಿದು |
ಯುಕ್ತಿಯಲಿ ಪೂರ್ಣಗೊಳಿಪನು ತಾನೆ ಬಗೆದು ||
ಪಾಪಿ ಪೊಗಳಲು ಪ್ರೇಮದಲಿ ಚಾಪಪಾಣ |
ಉಪೇಕ್ಷಿಸನು ರಾಮ ದಾಸಾಭಿಮಾನಿ ||35||

ಯಾವನಲ್ಲಿ ಎಂತಹ ಭಾವವಿರುವದೋ, ದೇವನಾದರೂ ಅವನಲ್ಲಿ ಅದೇ ರೀತಿಯಾಗಿ ವಾಸಿಸುವನು; ಶ್ರೀರಾಮನು ಅನನ್ಯ ಭಕ್ತರನ್ನು ಕಾಪಾಡುವಲ್ಲಿ ಸಂದೇಹವೇ ಇಲ್ಲ. ಆ ದಾಸಾಭಿಮಾನಿಯು ತನ್ನವರನ್ನೆಂದಿಗೂ ಕೈಬಿಡನು!

ಸದಾ ಸರ್ವದಾ ದೇವ ¸ Àನ್ನೀಧ ಆಹೇ |
P Àೃಪಾಳೂಪಣೇ ಅಲ್ಪ ಧಾರಿಷ್ಟ ಪಾಹೇ ||
ಸುಖಾನಂದ ಆನಂದ ಕೈವಲ್ಯದಾನೀ |
ನುಪೇಕ್ಷೀ P Àದಾ ರಾಮ ದಾಸಾಭಿಮಾನೀ ||36||

ನಿತ್ಯ ದೇವ ಸನಿಹದಲ್ಲಿದ್ದರೂ ಅವನು |
ಸ್ತುತ್ಯ ಭಜಕರನು ಬಹು ಪರೀಕ್ಷಸುತ್ತಿಹನು ||
ತಾಪರಿ ಪರಿಯೊಳಾನಂದ ಮೋಕ್ಷದಾನಿ |
ಉಪೇಕ್ಷಿಸನು ರಾಮ ದಾಸಾಭಿಮಾನಿ ||36||

ಯಾವಾಗಲಾದರೂ ದೇವನು ಭಕ್ತನ ಹತ್ತಿರವೇ ಇರುತ್ತಿದ್ದರೂ ದಯಾಳುತನದಿಂದ ಅವನ (ಭಕ್ತನ) ಸ್ವಲ್ಪ ಪರೀಕ್ಷೆ ಮಾಡುತ್ತಾನೆ! ಪರಿಪೂರ್ಣಾನಂದ ಮುಕ್ತಿದಾತನಾದ ದಾಸಾಭಿಮಾನೀ ರಾಮನು ತನ್ನವರನ್ನೆಂದಿಗೂ ಕೈ ಬಿಡನು!

ಸದಾ ಚP À್ರವಾಕಾಸಿ ಮಾರ್ತಂಡ ಜೈಸಾ |
ಉಡೀ ಘಾಲಿತೋ ¸ ÀಂP Àಟೀ ಸ್ವಾಮಿ ತೈಸಾ ||
ಹರೀ ಭಕ್ತಿಚಾ ಘಾವ ಗಾಜೇ ನಿಶಾಣ ೀ |
ಉಪೇಕ್ಷಿಸನು P Àದಾ ರಾಮ ದಾಸಾಭಿಮಾನೀ ||37||

ಚಕ್ರವಾಕದ ವಿರಹಕಾದಿತ್ಯ ಹೇಗೆ |
ಚಕ್ರಪಾಣ ಯು ಭಕ್ತ ಕಷ್ಟಕ್ಕೆ ಹಾಗೆ ||
ಆ ಪುಣ್ಯ ಭಕ್ತ ಸಾರುವ ಹರಿಯ ವಾಣ |
ಉಪೇಕ್ಷಿಸನು ರಾಮ ದಾಸಾಭಿಮಾನೀ ||37||

ಸೂರ್ಯನು ಚಕ್ರವಾಕ ಪಕ್ಷಿಯ ದುಃಖ ಪರಿಹರಿಸುವಂತೆ ರಾಮಪ್ರಭುವು ಭಕ್ತರ ಸಂಕಟ ಕಾಲದಲ್ಲಿ ಧುಮುಕಿ ದುಃಖ ನಾಶಮಾಡುವನು. ಈಶ್ವರ ಭಕ್ತಿಯ ದುಃಖನಾಶಕ ದೊಣ್ಣೆಯು ಪ್ರಕಟವಾಗಿ ಮರೆಯುತ್ತಿರುವದು ! ಒಟ್ಟಿಗೆ ದಾಸಾಭಿಮಾನೀ ರಾಮನು ತನ್ನವರನ್ನೆಂದಿಗೂ ಕೈಬಿಡನು!

ಮನಾ ಪ್ರಾರ್ಥನಾ ತೂಜಲಾ ಏಕ ಆಹೇ |
ರಘೂರಾಜ ‘ಅಂಕೀತ ಹೋವುನೀ ರಾಹೇ||
ಅವಜ್ಞಾP Àದಾ ಹೋ ಯದರ್ಥೀ ನ ಕೀಜೇ |
ಮನಾ ಸಜ್ಜನಾ ರಾಘವೀ ವಸ್ತಿ ಕೀಜೇ||38||

ಸನ್ಮನವೆ ನೀನೆನ್ನ ಪ್ರಾರ್ಥನೆಯ ಕೇಳು
ತನ್ಮಯದಿ ರಾಮ ಧ್ಯಾನವ ಮಾಡಿ ಹೇಳು
ಪ್ರೇಮ ನುಡಿಯಲ್ಲು ಪೇಕ್ಷೆಯನೇನು ಪಡದೆ
ರಾಮ ರೋಪದಿ ಲೀನವಾಗುವುದು ಬಿಡದೆ ||38||

ಮನವೇ, ನಿನಗೆ ನನ್ನದೊಂದು ಪ್ರಾರ್ಥನೆ ಏನೆಂದರೆ ‘ನೀನು ರಾಮಚಂದ್ರನ ಅಜ್ಞಾಧಾರಕನಾಗಿರು’ ಈ ಸಂಗತಿಗೆಂದಿಗೂ ತಾತ್ಸಾರ ಮಾಡಬೇಡ ಮತ್ತೆ ಸುಮನಾ, ರಾಮಸ್ವರೂಪದಲ್ಲಿ ವಾಸಮಾಡು.

ಜಯಾ ವಣ ್ತೀ ವೇದಶಾಸ್ತ್ರೇ ಪುರಾಣೇ |
ಜಯಾಚೇನಿ ಯೋಗೇ ಸಮಾಧಾನ ಬಾಣೇ ||
ತಂi ÀiÁಲಾಗಿ ಹೇ ¸ Àರ್ವ ಚಾಂಚಲ್ಯ ದೀಜೇ |
ಮನಾ ಸಜ್ಜನಾ ರಾಘವೀ ವಸ್ತಿ ಕೀಜೇ ||39||

ಆರನಾಮವ ವೇದಶಾಸ್ತ್ರ ಹೊಗಳುವುದೊ |
ಆರಯೋಗದಿ ಸಾಮಾಧಾನ ದೊರೆಯುವುದೊ ||
ಹೋಮ ಮಾಡಲ್ಲಿ ಚಾಂಚಲ್ಯವನು ಕ್ರಮದೆ |
ರಾಮರೂಪದಿ ಲೀನವಾಗುವುದು ಬಿಡದೆ ||39||

ಸಾಧು ಮನವೇ ಯಾವನನ್ನು 4 ವೇದ, 6 ಶಾಸ್ತ್ರ, 18 ಪುರಾಣಗಳು ವಣ ್ಸುತ್ತಿವೆಯೋ ಹಾಗೂ ಯಾರಿಂದ ಸಮಾಧಾನ ಬಿಂಬಿಸುವದೋ ಅಂತಹ ಶ್ರೀರಾಮನಿಗಾಗಿ ನಿನ್ನ ಎಲ್ಲ ಚಂಚಲತೆಯನ್ನು ತೊರೆದು, ಅವನಲ್ಲಿಯೇ ವಾಸಮಾಡು.

ಮನಾ ಪವಿಜೇ ಸರ್ವಹೀ ಸೂಖ ಜೇಥೇ |
ಅತೀ ಆದರೇ ಠೇ ವಿಜೇ ಲಕ್ಷತೇಥೇ ||
ವಿವೇಕೇ P Àುಡೀ P Àಲ್ಪನಾ ಪಾಲಟೀಜೇ |
ಮನಾ ಸಜ್ಜನಾ ರಾಘವೀ ವಸ್ತಿ ಕೀಜೇ ||40||

ಮನವೇ ನೋಡಲ್ಲಿ ಸುಖ ದಾವಾಸವೆಂದು |
ಕೊನೆಗಲ್ಲಿಯೇ ಲಕ್ಷ್ಯ ನಿಲಿ ಸೆಳೆದು ತಂದು ||
ಕಾಮ ಕಲ್ಪನೆ ವಿವೇಕದೊಳು ಬರಗೊಡದೆ |
ರಾಮ ರೂಪದಿ ಲೀನವಾಗುವುದು ಬಿಡದೆ ||40||

ಸನ್ಮನವೇ, ಎಲ್ಲಾ ಸುಖವೂ ಸಿಗುವ ಸ್ಥಾನದಲ್ಲಿಯೇ ಪ್ರೇಮದಿಂದ ಲಕ್ಷವಿಡಬೇಕಷ್ಟೇ? ಎಂದ ಮೇಲೆ ವಿಚಾರದಿಂದ ಹೀನ ಕಲ್ಪನೆಗಳನ್ನು ಪಲ್ಲಟಿಸಿ ರಾಮಸ್ವರೂಪದಲ್ಲಿ ವಾಸ ಮಾಡು.

ಬಹೂ ಹಿಂಡತಾ ಸೂಖ ಹೋಣಾರ ನಾಂಹೀ |
ಶಿಣಾವೇ ಪರೀ ನಾತುಡೇ ಹೀತ ಕಾಂಹೀ ||
ವಿಚಾರೀ ಬರೇ ಅಂತರಾ ಬೋಧವೀಜೇ |
ಮನಾ ಸಜ್ಜನಾ ರಾಘವೀ ವಸ್ತಿ ಕೀಜೇ ||41||

ಮನವೆ ಸ್ವೈರದಲಲೆಯೆ ಸೌಖ್ಯ ಸಿಗಲೊಲ್ಲ |
ತನುವಿ ಗಾಯಾಸವಲ್ಲದೆ ಲಾಭವಿಲ್ಲ ||
ಪ್ರೇಮ ದಿಂದಂತರಂಗಕೆ ತಿಳಿಸಿ ಕ್ರಮದೆ |
ರಾಮ ರೂಪದಿ ಲೀನವಾಗುವುದು ಬಿಡದೆ ||41||

ಸಜ್ಜನಾ ಮನವೇ, ಅತಿಯಾಗಿ ಅಲೆದಾಡುವದರಿಂದ ಸುಖವಾಗದು; ಅದರಿಂದ ಬರೇ ದಣ ವಾಗುತ್ತಿದ್ದು ನಿನ್ನ ಹಿತವೇನೂ ಕೈಗೂಡದು! ಅದಕ್ಕಾಗಿ ಅಂತಃಕರಣಕ್ಕೆ ಒಳ್ಳೇ ತಿಳಿಹೇಳಿ ರಾಮಸ್ವರೂಪದಲ್ಲಿ ವಾಸಮಾಡು.

ಬಹೂತಾಪರೀ ಹೇಚಿ ಆತಾ ಧರಾವೆ |
ರಘೂನಾಯಕಾ ಆಪುಲೇಸೇ P Àರಾವೇ ||
ದಿನಾನಾಥ ಹೇ ತೋಡರೀ ಬ್ರೀದ ಗಾಜೇ |
ಮನಾ ಸಜ್ಜನಾ ರಾಘವೀ ವಸ್ತಿ ಕೀಜೇ || ||42||

ಹೆಚ್ಚು ಹೇಳಿದರೆ ಸತ್ಯವು ತಿಳಿವು ದೇನು |
ನೆಚ್ಚಿ ನಾಮದಿ ನಿರುತ ನಿಂತು ಬಿಡು ನೀನು ||
ರಾಮ ನಲ್ಲದ ಮಾತ ವ್ಯರ್ಥ ನುಡಿ ಬೇಡ |
ನೇಮದಲಿ ನಿಜ ಧ್ಯಾಸ ಹೊಂದದಿರಬೇಡ ||42||

ಸದ್ಗುಣ ಮನವೇ, ಎಲ್ಲ ತರದಿಂದಲೂ ಸಾರಭೂತವಾಗಿರುವ ಇದನ್ನೊಂದೇ ಲಕ್ಷದಲ್ಲಿಡು – ರಾಮಪ್ರಭುವನ್ನು ನಿನ್ನವನಾಗಿ ಮಾಡಿಕೋ. ರಾಮಚಂದ್ರನು ದೀನರಕ್ಷಕನೆಂದು ಅವನ ಕಾಲ್ತೊಡಿಗೆಯೇ ಬಿರುದು ಸಾರುತ್ತಿರಲು ಆತನಲ್ಲಿ ವಾಸಮಾಡು.

ಮನಾ ಸಜ್ಜನಾ ಏಕ ಜೀವೀ ಧರಾವೇ |
ಜನೀ ಆಪುಲೇ ಹೀತ ತೂವಾ P Àರಾವೇ ||
ರಘೂನಾಯಕಾವೀಣ ಬೋಲೋ ನಕೋ ಹೋ |
ಸದಾ ಮಾನಸೀ ಹಾ ನಿಜಧ್ಯಾಸ ರಾಹೋ ||43||

ಪ್ರೀತಿಯಿಂದಾಲಿಸುವುದಾಪ್ತ ವಾಕ್ಯವನು |
ರೀತಿಯಲಿ ಸಾಧಿಸುವುದಾತ್ಮ ಜ್ಞಾನವನು ||
ರಾಮ ನಲ್ಲದ ಮಾತ ವ್ಯರ್ಥ ನುಡಿ ಬೇಡ |
ನೇಮದಲಿ ನಿಜ ಧ್ಯಾಸ ಹೊÀಂದದಿರಬೇಡ ||43||

ಸನ್ಮನವೇ, ನೀನು ಒಂದು ಮಾತನ್ನು ಗಟ್ಟಿಯಾಗಿ ಹಿಡಿ – ಅದೆಂದರೆ ಜಗತ್ತಿನಲ್ಲಿ ನಿನ್ನಹಿತ ಮಾಡಿಕೋ ಮತ್ತು ಸ್ವಹಿತ ಸಾಧಿಸಬೇಕಾದರೆ ರಾಮಚಂದ್ರನ ನಾಮ – ಗುಣಕೀರ್ತನೆ ಇತ್ಯಾದಿಯ ಹೊರತಾಗಿ ಅನ್ಯ ಮಾತುಗಳನ್ನು ಅಡಬೇಡವಪ್ಪಾ! ಯಾವಾಗಲೂ ನಿನ್ನಲ್ಲಿ ಇದೇ ಅನುಸಂಧಾನವಿರಲಿ.

ಮನಾರೇ ಜನೀ ಮೌನಮುದ್ರಾ ಧರಾವೀ |
P Àಥಾ ಆದರೇ ರಾಘವಾಚೀ P Àರಾವೀ ||
ನಸೇ ರಾಮ ತೇ ಧಾಮ ಸೋಡೂನಿ ದ್ಯಾವೇ |
ಸುಖಾಲಾಗೀ ಅರಣ್ಯ ಸೇವೀತ ಜಾವೇ ||44||

ತುಚ್ಛವಹ ಹರಟೆಗಿಂತಲೂ ಲೇಸು ಮಾನ |
ಸ್ವಚ್ಛ ಮನದಲಿ ಮಾಡು ರಾಮ ಕಥೆ ಧ್ಯಾನ ||
ರಾಮನರಿವಿರದ ಬಾಳದು ಕೇಡು ನೋಡು |
ಪ್ರೇಮ ಮಯ ವನವಾಸ ಬಹುಲೇಸು ನೋಡು ||44||

ಅಪ್ಪಾ ಮನವೇ, ಜನರಲ್ಲಿ ಮೂಕನಂತೆ ಇರುತ್ತ, ರಾಮನ ಕೀರ್ತನೆಯನ್ನು ತತ್ಪರತೆಯಿಂದ ಮಾಡು. ಅಷ್ಟೇ ಅಲ್ಲದೆ, ನೈಜ ಸುಖಪ್ರಾಪ್ತಿಗಾಗಿ ರಾಮಭಕ್ತಿಯಿಲ್ಲದ ಮನೆಯನ್ನು ಬಿಟ್ಟು ವನಕ್ಕೆ ಹೋಗುತ್ತಿರು!

ಜಯಾಚೇನಿ ಸಂಗೇ ಸಮಾಧಾನ ಭಂಗೇ |
ಅಹಂತಾ ಅಕಸ್ಮಾತ ಯೇವೂನಿ ಲಾಗೇ ||
ತಯೇ ಸಂಗತೀಚೀ ಜನೀ ಕೋಣ ಗೋಡೀ |
ಜಯೇ ¸ Àಂಗತೀನೆ ಮತೀ ರಾಮ ಸೋಡೀ ||45||

ಯಾರ ಜೊತೆಯಲ್ಲಿನ ಸಮಾಧಾನ ನಾಶ |
ಯಾರ ಜೊತೆಗಿರಲಂಹಕಾರ ದಾವೇಶ ||
ಇಂಥ ಜನತೆಯಲಿ ನಿನಗೇಕೆ ಪ್ರೀತಿ |
ಸಂತತವು ರಾಮನನು ಧ್ಯಾನಿವುದೆ ರೀತಿ ||45||

ತನ್ನ ಶಾಂತಿಗೆ ಭಂಗ ತರುವ ಹಾಗೂ ಒಮ್ಮೆಲೇ ಅಹಂಕಾರ ಅಂಟಿಕೊಳ್ಳುವ ಕುಜನ ಸಹವಾಸದಲ್ಲಿ ಸ್ವಾರಸ್ಯವೇನು? ಆ ಲೌಕಿಕ ಜನರ ಸಂಗತಿಯಿಂದ ಬುದ್ಧಿಯು ರಾಮನನ್ನೇ ತ್ಯಜಿಸುವದು!

ಮನಾ ಜೇ ಘಡೀ ರಾಘವಾವೀಣ ಗೇಲೀ |
ಜನೀ ಆಪುಲೀ ತೇ ತುವಾ ಹಾನಿ ಕೇಲೀ ||
ರಘೂನಾಯಾಕಾವೀಣ ತೋ ಸೀಣ ಆಹೇ |
ಜನೀ ದP À್ಷತೋ ಲP À್ಷಲಾª ÀÇನಿ ಪಾಹೇ ||46||

ಚಿಂತಿಸದೆ ರಾಮನನು ಕಳೆದಂಥ ವೇಳೆ |
ಸಂತೆ ಗೊಂದಲವಂತೆ ಬಹು ವ್ಯರ್ಥ ಕೇಳೆ ||
ರಾಮನನು ಮರೆತು ನೀ ಬರಿ ಶ್ರಮವ ಪಟ್ಟೆ |
ರಾಮ ಪಾದದಲಿ ನಿಲ್ಲುವುದಿನ್ನು ಗಟ್ಟೆ ||46||

ಮನವೇ, ರಾಮಚಿಂತನದ ಹೊರತಾಗಿ ಒಂದು ಕ್ಷಣವನ್ನು ಕಳೆದರೂ ಕೂಡ, ನೀನು ನಿನ್ನ ಹಾನಿ ಮಾಡಿಕೊಂಡಿಯೆಂದು ತಿಳಿ. ಯಾಕೆಂದರೆ ರಾಮಚಂದ್ರನನ್ನು ಬಿಟ್ಟು ಏನೆಲ್ಲವೂ ದಣ ವು ಮಾತ್ರವಾಗಿದೆ! ಜನರಲ್ಲಿ ಜಾಣನಾದವನ್ನೇ ಈ ಸಂಗತಿಯನ್ನು ಲಕ್ಷಗೊಟ್ಟು ನೋಡುವನು!

ಮನೀ ಲೋಚನೀ ಶ್ರೀಹರೀ ತೋಚಿ ಪಾಹೇ |
ಜನೀ ಜಾಣತಾ ಭP À್ತಹೋವೂನಿ ರಾಹೇ ||
ಗುಣ ೀ ಪ್ರೀತಿ ರಾಖೇ P À್ರಮೂ ಸಾಧನಾಚಾ |
ಜಗೀ ಧನ್ಯ ತೋ ದಾ¸ À ಸರ್ವೋತ್ತಮಾಚಾ*14 ||47||

ನರಹರಿಯನಾವ ನೆಲ್ಲೆಡೆಗೆ ನೋಡುವನೋ |
ನಿರುತ ಜ್ಞಾನವ ಗಳಿಸಿ ಭಕ್ತನಂತಿಹನೋ ||
ಸಗುಣ ಭಜನೆಯಲಾರ ಮನ ನಿತ್ಯವಾಸ |
ಜಗದಲ್ಲಿ ಬಲು ಧನ್ಯ ನಾ ರಾಮದಾಸ ||47||

ಮನದಲ್ಲಿಯೂ, ನಯನದಲ್ಲಿಯೂ ಭಗವಂತನನ್ನೇ ನೋಡುವ, ಜನರಲ್ಲಿ ಜ್ಞಾನೀ ಭಕ್ತನಾಗಿರುವ ಹಾಗೂ ಸಗುಣದಲ್ಲಿ ಪ್ರೇಮ ಧರಿಸಿ ಸಾಧನಕ್ರಮವನ್ನು ಆಚರಿಸುವ ರಾಮಭಕ್ತನು ಜಗತ್ತಿನಲ್ಲಿ ಧನ್ಯನಿರುತ್ತಾನೆ!

ಸದಾ ದೇವಕಾಜೀ ಝಿಜೇ ದೇಹ ಜ್ಯಾಚಾ |
ಸದಾ ರಾಮನಾಮೇ ವದೇ ನಿತ್ಯ ವಾಚಾ ||
ಸ್ವಧರ್ಮೇಚಿ ಚಾಲೇ ಸದಾ ಉತ್ತಮಾಚಾ |
ಜಗೀ ಧನ್ಯ ತೋ ದಾ¸ À ಸರ್ವೋತ್ತಮಾಚಾ ||48||

ದೇವಕಾರ್ಯಕೆ ದೇಹ ದಂಡಿಪನೆ ದಾಸ |
ದೇವ ಧ್ಯಾನದಿ ಯಾರ ಮನ ನಿತ್ಯ ವಾಸ ||
ಸುಗುಣನಿಗೆ ಧರ್ಮ ಪಾಲನೆಯ ವಿಶ್ವಾಸ |
ಜಗದಲ್ಲಿ ಬಲು ಧನ್ಯ ನಾ ರಾಮದಾಸ ||48||

ಯಾವಾಗಲೂ ಭಕ್ತಿಕಾರ್ಯದಲ್ಲಿಯೇ ದೇಹವನ್ನು ಸವೆಸುವ, ಸರ್ವದಾ ವಾಣ ಯಿಂದ ರಾಮನ ನಾಮಸ್ಮರಣೆಯನ್ನೇ ಮಾಡುವ ಹಾಗೂ ಶ್ರೇಷ್ಠ ಸ್ವಧರ್ಮದಿಂದಲೇ ನಡೆಯುವ ರಾಮಭಕ್ತನು ಜಗತ್ತಿನಲ್ಲಿ ಧನ್ಯನಿರುತ್ತಾನೆ!

ಸದಾ ಬೋಲಣ್ಯಾಸಾರಿಖೇ ಚಾಲತಾಹೇ |
ಆನೇಕೀ ಸದಾ ಏಕ ದೇವಾಸಿ ಪಾಹೇ ||
ಸಗೂಣ ೀ ಭಜೇ ಲೇಶ ನಾಂಹೀ ಭ್ರಮಾಚಾ |
ಜಗೀ ಧನ್ಯ ತೋ ದಾ¸ À ಸರ್ವೋತ್ತಮಾಚಾ ||49||

ಮಾತು ಮನದಂತೆಯೇ ಮಮತೆ ನಡೆಬೇಕು |
ಸೀತೆಯರಸನೇತದಲಿ ಕಾಣಬೇಕು ||
ಸಗುಣ ಪೂಜಕ ಗಡುದು ಭ್ರಮ ಪೂರ್ಣನಾಶ |
ಜಗದಲ್ಲಿ ಬಲು ಧನ್ಯನಾ ರಾಮದಾಸ ||49||

ಯಾವಾಗಲೂ ಮಾತಾಡಿದಂತೆ ನಡೆಯುವ ಸರ್ವರಲ್ಲಿಯೂ ಒಬ್ಬ ದೇವನನ್ನೇ ನೋಡುವ ಹಾಗೂ ಕಿಂಚಿತ್ತವೂ ಸಂಶಯವಿಲ್ಲದೆ ಸಗುಣ ಭಜನೆ ಮಾಡುವ ರಾಮಭಕ್ತನು ಜಗತ್ತಿನಲ್ಲಿ ಧನ್ಯನಿರುತ್ತಾನೆ !

ನಸೇ ಅಂತರೀ ‘ಕಾಮ ನಾನಾ’*15ವಿಕಾರೀ |
ಉದಾಸೀನ ತೋ ತಾಪಸೀ ಬ್ರಹ್ಮಚಾರೀ ||
ನಿವಾಲಾ ಮನೀ ಲೇಶ ನಾಂಹೀ ತಮಾಚಾ |
ಜಗೀ ಧನ್ಯರೋ ದಾ¸ À ಸರ್ವೋತ್ತಮಾಚಾ ||50||

ಕಾಮ ವಿಕಾರಗಳನವನು ದಮನ ಮಾಡಿಹನು |
ಬೊಮ್ಮಚಾರಿಯು ಉದಾಸೀನ ತಾಪಸನು |
ನಗುತ ಕಳೆದಿಹನು ತಮ ವಿರದಂತೆ ಲೇಶ |
ಜಗದಲ್ಲಿ ಬಲು ಧನ್ಯನಾ ರಾಮದಾಸ ||50||

ಒಳಗೆ ವಿವಿಧ ಚೇಷ್ಟೆಯ ಕಾಮವಿಲ್ಲದವನು, ನಿರಾತನು, ಶಮದಮಾದಿ ತಪವನ್ನಾಚರಿಸುವವನು, ಬ್ರಹ್ಮಚರ್ಯರತನು, ಮನದಲ್ಲಿ ಶಾಂತನಾದವನು, ತಮೋಗುಣ ಲವಲೇಶವೂ ಇಲ್ಲದವನು ಆದ ರಾಮಭಕ್ತನು ಜಗತ್ತಿನಲ್ಲಿ ಧನ್ಯನಿರುತ್ತಾನೆ!

ಮದೇ ಮತ್ಸರೇ ಸಾಂಡಿಲೀ ಸ್ವಾರ್ಥಬುದ್ಧೀ |
ಪ್ರಪಂಚೀಕ ನಾಂಹೀ ಜಯಾತೇ ಉಪಾಧೀ ||
ಸದಾ ಬೋಲಣೇ ನಮ್ರ ವಾಚಾ ಸುವಾಚಾ |
ಜಗೀ ಧನ್ಯ ತೋ ದಾ¸ À ಸರ್ವೋತ್ತಮಾಚಾ ||51||

ತತ್ವ ಚಿಂತೆಯಲವನು ವೇಳೆ ವ್ಯಯಿಸುವನು |
ಸತ್ವರದಿ ದಂಭವಾದರೆ ದೂರನವನು ||ನಿಗಮ ಸಾರವ ತಿಳಿಯೆ ಸಂವಾದ ದಾಶ |
ಜಗದಲ್ಲಿ ಬಲು ಧನ್ಯನಾ ರಾಮದಾಸ ||51||

ಮದ-ಮತ್ಸರ-ಸ್ವಾರ್ಥ ಬುದ್ಧಿಯನ್ನು ತ್ಯಜಿಸಿದ, ಸಂಸಾರಿಕ ಜೊಂಜಾಟವಿಲ್ಲದ ಹಾಗೂ ಯಾವಾಗಲೂ ಮೃದು-ಮಧುರವಾಗಿ ಮಾತಾಡುವ ರಾಮಭಕ್ತನು ಜಗತ್ತಿನಲ್ಲಿ ಧನ್ಯವಿರುತ್ತಾನೆ!

P À್ರಮೀ ವೇಳ ಜೋ ತತ್ತ್ವಚಿಂತಾನುವಾದೇ |
ನ ಲಿಂಪೇ P Àದಾ ದಂಭವಾದೇ ವಿವಾದೇ ||
P Àರೀ ಸೂಖ¸ Àಂವಾದ ಜೋ ಊಗಮಾಚಾ |
ಜಗೀ ಧನ್ಯ ತೋ ದಾ¸ À ಸರ್ವೋತ್ತಮಾಚಾ ||52||

ಸರಳ ತನದಲಿ ಜನಪ್ರೀತಿ ಗಳಿಸಿಹನು |
ವರಸತ್ಯ ನುಡಿಯುತ ವಿವೇಕಿಯಾಗಿಹನು ||
ಸುಗುಣ ಗಿಲ್ಲದ ಸತ್ಯವಾಚನವು ಲೇಶ |
ಜಗದಲ್ಲಿ ಬಲು ಧನ್ಯನಾ ರಾಮದಾಸ ||52||

ಪರತತ್ತ್ವದ ಚಿಂತನೆ – ಕಥನೆಯಲ್ಲಿ ವೇಳೆ ಗೆಳೆಯುವ, ದಾಂಭಿಕವಾದ ವಿವಾದಕ್ಕೆಂದಿಗೂ ಸೋಂಕದ ಹಾಗೂ ಮೂಲವಸ್ತುವಿನ ಬಗ್ಗೆ ಪ್ರೇಮದಿಂದ ವಿಚಾರವಿನಿಮಯ ಮಾಡುವ ರಾಮಭಕ್ತನು ಜಗತ್ತಿನಲ್ಲಿ ಧನ್ಯನಿರುತ್ತಾನೆ!

ಸದಾ ಆರ್ಜವೀ ಪ್ರೀಯ ಜೋ ಸರ್ವ ಲೋಕೀ |
ಸದಾ ಸರ್ವದಾ ಸತ್ಯವಾದೀ ವಿವೇಕೀ ||
ನ ಬೋಲೇ P Àದಾ ಮಿಥ್ಯ ವಾಚಾ ತ್ರಿವಾಚಾ |
ಜಗೀ ಧನ್ಯ ತೋ ದಾ¸ À ಸರ್ವೋತ್ತಮಾಚಾ ||53||

ಸರಳ ತನದಲಿ ಜನಪ್ರೀತಿ ಗಳಿಸಿಹನು |
ವರಸತ್ಯ ನುಡಿಯುತ ವಿವೇಕಿಯಾಗಿಹನು ||
ಸುಗುಣ ಗಿಲ್ಲದ ಸತ್ಯವಾಚನವು ಲೇಶ |
ಜಗದಲ್ಲಿ ಬಲು ಧನ್ಯನಾ ರಾಮದಾಸ ||53||

ಸರ್ವದಾ ವಿನಯಶೀಲನು, ಜನಪ್ರೀಯನು, ಯಾವಾಗಲೂ ಸತ್ಯವನ್ನು ಸಮರ್ಥಿಸುವವನು, ವಿಚಾರಿಯು, ತ್ರಿಕರಣಗಳಿಂದಲೂ ಎಂದಿಗೂ ಸುಳ್ಳು ಮಾತಾಡದವನು ಆದ ರಾಮಭಕ್ತನು ಜಗತ್ತಿನಲ್ಲಿ ಧನ್ಯನಿರುತ್ತಾನೆ!

ಸದಾ ಸೇವಿ ಅರಣ್ಯ ತಾರುಣ್ಯಕಾಳೀ |
ಮಿಳೇನಾ P Àದಾ P Àಲ್ಪನೇಚೇನಿ ಮೇಳೀ || ಚಳೇನಾ ಮನೀ ನಿಶ್ಚಯೋ ದೃಢ ಜ್ಯಾಚಾ |
ಜಗೀ ಧನ್ಯ ತೋ ದಾ¸ À ಸರ್ವೋತ್ತಮಾಚಾ ||54||

ಚರಿಸುವನು ಕಾನನದಿ ತಾರುಣ್ಯದಲ್ಲಿ |
ಇರಲೊಪ್ಪನವ ವಿಷಯ ಚಿಂತನೆಗಳಲ್ಲಿ ||
ಬಗೆಯ ನಿರ್ಧರವು ದೃಢತರ ತೋರಲಾಶ |
ಜಗದಲ್ಲಿ ಬಲು ಧನ್ಯನಾ ರಾಮದಾಸ ||54||

ಆಯುಷ್ಯದ ಭರದ ಕಾಲದಲ್ಲಿಯೇ ಕಲ್ಪನಾಜಾಲದಲ್ಲಿ ಸಿಲುಕದೆ ಸತತ ಏಕಾಂತ ಸೇವನೆ ಮಾಡುವ ಹಾಗೂ ಮನದಲ್ಲಿಯ ದೃಢನಿಶ್ಚಯವು ಅಭಂಗವಾಗಿರುವ ರಾಮಭಕ್ತನು ಜಗತ್ತಿನಲ್ಲಿ ಧನ್ಯನಿರುತ್ತಾನೆ!

ನಸೇ ಮಾನಸೀ ನಷ್ಟ ಆಶಾ ದುರಾಶಾ |
ವಸೇ ಅಂತರೀ ಪ್ರೇಮಪಾಶಾ ಪಿಪಾಶಾ ||
ಋಣ ೀ ದೇವ ಹಾ ಭಕ್ತಿಭಾವೇ ಜಯಾಚಾ |
ಜಗೀ ಧನ್ಯ ತೋ ದಾ¸ À ಸರ್ವೋತ್ತಮಾಚಾ ||55||

ಮನದಿ ದುಷ್ಟದುರಾಶೆ ಸ್ವಾರ್ಥ ಕೆಡೆಯಿಲ್ಲ |
ಮನ ಕೀಶ ಪ್ರೇಮ ದಾವೇಶ ಬಿಡಲೊಲ್ಲ ||
ನಗೆ ಮೊಗದ ಭಕ್ತನಿಗೆ ಋಣ ತಾನು ಮೇಶ |
ಜಗದಲ್ಲಿ ಬಲು ಧನ್ಯನಾ ರಾಮದಾಸ ||55||

ಮನದಲ್ಲಿ ದುಷ್ಟ ದುರಾಶೆಯಿಲ್ಲದವನು, ಆದರೆ ಅಂತರಂಗದಲ್ಲಿ ತೀವ್ರವಾದ ಈಶ ಪ್ರೇಮದ ತೃಷ್ಣೆಯಿದ್ದವನು ಹಾಗೂ ತನ್ನ ಅನನ್ಯ ಭಕ್ತಿಯಿಂದ ದೇವನನ್ನೇ ಋಣ ಮಾಡಿದವನು ಆದ ರಾಮಭಕ್ತನು ಜಾಗತ್ತಿನಲ್ಲಿ ಧನ್ಯನಿರುತ್ತಾನೆ.

ದೀನಾಚಾ ದಂi ÀiÁಳೂ ಮನಾಚಾ ಮವಾಳೂ |
ಸ್ನೇಹಾಳೂ P Àೃಪಾಳೂ ಜಗೀ ದಾಸಪಾಳೂ ||
ತಂi ÀiÁ ಅಂತರೀ ಕ್ರೋಧ ಸಂತಾಪ ಕೈಚಾ |
ಜಗೀ ಧನ್ಯ ತೋ ದಾ¸ À ಸರ್ವೋತ್ತಮಾಚಾ ||56||

ದೀನರೊಳು ದಯೆಯು ತನು ಮನದಿ ಕೋಮಲನು |
ದೀನ ಸಖನು ಕೃಪಾಳು ದಾಸ ಪಾಲಕನು |
ಹಗೆತನವು ರಾಗ ತಾಪಗಳಿಲ್ಲ ಲೇಶ |
ಜಗದಲ್ಲಿ ಬಲು ಧನ್ಯನಾ ರಾಮದಾಸ ||56||

ಬಡವರ ಮೇಲೆ ದಯೆ ತೋರುವವನು, ಕೋಮಲ ಮನಸ್ಸಿನವನು, ಸಖ್ಯಪರನು, ಕರುಣಾಳುವು, ತನ್ನನ್ನು ನಂಬಿದವರ ಪಾಲನಕರ್ತನು, ಸಿಟ್ಟು ಆಕ್ರೋಶದ ಲೇಶವೂ ಇಲ್ಲದವನು ಆದ ರಾಮಭಕ್ತನು ಜಗತ್ತಿನಲ್ಲಿ ಧನ್ಯನಿರುತ್ತಾನೆ !

ಜಗೀ ಹೋಯಿಜೇ ಧನ್ಯ ಯಾ ರಾಮನಾಮೇ |
ಕ್ರಿಯಾ ಭಕ್ತಿ ಉಪಾ¸ Àನಾ ನಿತ್ಯನೇಮೇ ||
ಉದಾಸೀನತಾ ತತ್ತ್ವತಾ ಸಾರ ಆಹೇ |
ಸದಾ ಸರ್ವದಾ ಮೋP Àಳೀ ವೃತ್ತಿ ರಾಹೇ ||57||

ಧನ್ಯನೈ ಮನುಜ ಜಪಿಸಲು ರಾಮನಾಮ |
ಗಣ್ಯ ಮಾಡಲು ಭಕ್ತ್ಯುಪಾಸನೆಯ ನೇಮ ||
ಅಹುದಾಲಿದುಸೀನತೆಯು ತತ್ವಗಳ ಸಾರ |
ಬಹುದು ಸಾಧಿಸೆ ವೃತ್ತಿ ಬಿಡುಗಡೆಯ ತೀರ ||57||

ಈ ಜಗತ್ತಿನಲ್ಲಿ ಸರ್ವಪ್ರಸಿದ್ಧವಾದ ರಾಮನಾಮದಿಂದಲೂ, ಕರ್ಮ-ಭಕ್ತಿ ಊಪಾಸನೆಯ (ಪೂಜಾದಿ ಕರ್ಮ, ಈಶ್ವರ ಪ್ರೇಮರೂಪೀ ಭಕ್ತಿ-ಭಜನೆ-ಕೀರ್ತನಾದಿ ಉಪಾಸನೆ) ನಿತ್ಯನೇಮದಿಂದಲೂ ಧನ್ಯರಾಗಬೇಕು. ಕರ್ಮಾದಿಗಳಿಂದ ಲಭಿಸುವ (ಮನಸ್ಸಿನ) ನಿದ್ರ್ವಂದ್ವ ಸ್ಥಿತಿಯೇ ಸರ್ವಶ್ರೇಷ್ಠವಾಗಿದ್ದು ಆದರಿಂದ ಚಿತ್ತವು ಎಲ್ಲಕಾಲಕ್ಕೂ ಮುಕ್ತವುಳಿಯುವದು.

ನಕೊ ವಾಸನಾ ವಿಷಯೀ ವೃತ್ತಿರೂಪೇ |
ಪದಾರ್ಥೀ ಜಡೇ ಕಾಮನಾ ಪೂರ್ವಪಾಪೇ ||
ಸದಾ ರಾಮ ನಿಷ್ಕಾಮ ಚಿಂತೀತ ಜಾವಾ |
ಮನಾ P Àಲ್ಪನಾ ಲೇಶ ತೋಹೀ ನಸಾವಾ ||58||

ಬಿಡು ವಿಷಯ ವಾಸನೆಯು ಬಹು ಕರ್ಮರೂಪ |
ಕೊಡವಿ ಹಾಕಲು ನರಗೆ ನಾಶ ಮನ ತಾಪ ||
ತೋರಿಪುದು ರಾಮನನು ನಿಷ್ಕಾಮ ಪ್ರೇಮ |
ಪಾರ ಕಾಣಲಳಿಯಲಿ ಕಲ್ಪನಾ ಕಾಮ ||58||

ಮೊದಲಿನ ಪಾಪದಿಂದಲೇ ಸ್ಥೂಲ ವಸ್ತುಗಳಲ್ಲಿ ಆಶೆ ನೆಲೆಸುತ್ತಿದ್ದು, ಅಂತಹ ಸೂಕ್ಷ್ಮ ವಿಷಯ ವಾಸನೆಯನ್ನು ತ್ಯಜಿಸಪ್ಪಾ! ಒಂದಿಷ್ಟೂ ಕಲ್ಪನೆಯನ್ನು ಇರಗೊಡದೆ ಯಾವಾಗಲೂ ಕಾಮನಾರಹಿತವಾಗಿ ರಾಮನನ್ನು ಧ್ಯಾನಿಸಪ್ಪಾ!

ಮನಾ P Àಲ್ಪನಾ P Àಲ್ಪಿತಾ ಕಲ್ಪಕೋಟೀ |
ನವ್ಹೇರೇ ನವ್ಹೇ ಸರ್ವಥಾ ರಾಮಭೇಟೀ ||
ಮನೀ ಕಾಮನಾ ರಾಮ ನಾಂಹೀ ಜಯಾಲಾ |
ಅತೀ ಆದರೇ ಪ್ರೇಮ ನಾಂಹೀ ತಯಾಲಾ ||59||

ಕಲ್ಪನೆಗಳಲ್ಲಿ ಕಳೆಯಲು ಕಲ್ಪಕೋಟಿ |
ಸ್ವಲ್ಪ ಸಹ ಸಿಕ್ಕದದು ಸವಿಶಿವನ ಭೇಟಿ ||
ಕಾಮ ಕೆಡೆಯಿರುವಲ್ಲಿ ರಾಮತಾ ನಿಲನು |
ಕಾಮನನು ಪ್ರೀತಿಸುವ ಗವನೆಂದು ಸಿಗನು ||59||

ಮನವೇ, ಕಲ್ಪನೆಗಳನ್ನು ಕಲ್ಪಿಸುತ್ತ ನಡೆದರೆ ಅವು ಅಸಂಖ್ಯವಾಗಿ ಬೆಳೆಯುತ್ತವೆ ಹಾಗೂ ಅದರಿಂದಲೆಂದಿಗೂ ರಾಮನ ಭೆಟ್ಟಿಯಾಗದು ! ಕಾಮನೆಯ ಮೂಲಕವಾಗಿ ಒಳಗೆ ರಾಮನಿಲ್ಲದವನಿಗೆ ಸದ್ಭಾವದ ಭಕ್ತಿಯೆಂದಿಗೂ ಉದಿಸಲಾರದು!

ಮನಾ ರಾಮ P Àಲ್ಪತರೂ ಕಾಮಧೇನೂ |
ನಿಧೀ ಸಾರ ಚಿಂತಾಮಣ ೀ ಕಾಯ ವಾನೂ ||
ಜಯಾಚೇನಿ ಯೋಗೇ ಘಡೇ ¸ Àರ್ವ ಸತ್ತಾ |
ತಂi ÀiÁ ಸಾಮ್ಯತಾ ಕಾಯಸೀ ಕೋಣ ಆತಾ ||60||

ಕಲ್ಪತರು ಧೇನು ಚಿಂತಾಮಣ ಯು ರಾಮ |
ಸ್ವಲ್ಪ ಭಕ್ತಿ ಗೊಲಿವನು ಪರಿ ಪೂರ್ಣಕಾಮ ||
ಶಿವನ ಯೋಗದಿ ಸರ್ವಜಗ ಸೃಷ್ಟಿಯಹುದು |
ಅವನ ಯೋಗಕೆ ಸಾಮ್ಯವೆಲ್ಲಿಯೂ ಸಿಗದು ||60||

ಮನವೇ, ಕಲ್ಪವೃಕ್ಷ – ಕಾಮಧೇನು – ಭಾಗ್ಯನಿಧಿ – ಚಿಂತಾಮಣ ಎಲ್ಲವೂ ಆಗಿರುವ ರಾಮನನ್ನು ಏನೆಂದು ವಣ ್ಸಲಿ? ಯಾವನಿಂದ ಸರ್ವಸಾಮಥ್ರ್ಯವು ನಡೆಯುವದೋ ಅಂತಹ ರಾಮಪ್ರಭುವಿಗೆ ಯಾರು ಏನು ಸಾಟಿ?

ಉಭಾ P Àಲ್ಪವೃಕ್ಷಾತಳೀ ದುಃಖ ವಾಹೇ |
ತಂi ÀiÁ ಅಂತರೀ ಸರ್ವದಾ ತೇಚಿ ರಾಹೇ ||
ಜನೀ ಸಜ್ಜನೀ ವಾದ ಹಾ ವಾಢವಾವಾ |
ಫುಢೇ ಮಾಗುತಾ ಶೋP À ಜೀವೀ ಧರಾವಾ ||61||

ಕಲ್ಪವೃಕ್ಷದ ಬುಡದಿ ದುಃಖಿಸಲು ನೀನು |
ಕಲ್ಪಿಸಿದ ತೆರದಲ್ಲಿ ದುಃಖ ಬರದೇನು ||
ಸಜ್ಜನರ ಕೂಡ ವಾದವ ಮಾಡೆ ನೀನು |
ಸಜ್ಜಾಗಿ ದುಃಖ ಪೀಡಿಪುದಲ್ಲವೇನು ||61||

ಇನ್ನು, ಕಲ್ಪವೃಕ್ಷದ ಕೆಳಗೆ ನಿಂತುಕೊಂಡು ದುಃಖವನ್ನು ಭಾವಿಸಿದರೆ, ಅವನಿಗೆ ನಿರಂತರವೂ ದುಃಖವೇ ಆಗುವದು! ಅದರಂತೆ ಸತ್ಪುರುಷರ ಬಳಿಗೆ ಹೋಗಿಯೂ ವಾದಕ್ಕೇ ಅಣ ಯಾದರೆ ಎಂದೆಂದಿಗೂ ದುಃಖಕ್ಕೆ ಭಾಗಿಯಾಗಲೇಬೇಕಾಗುತ್ತದೆ.

ನಿಜಧ್ಯಾಸ ತೋ ಸರ್ವ ತುಟೋನ ಗೇಲಾ |
ಬಳೇ ಅಂತರೀ ಶೋP Àಸಂತಾಪ ಠೇಲಾ ||
ಸುಖಾನಂದ ಆನಂದ ಭೇದೇ ಬುಡಾಲಾ |
ಮನೀ ನಿಶ್ಚಯೋ ಸರ್ವ ಖೇದೇ ಉಡಾಲಾ ||62||

ಮನವೆನೀ ನಿಲ್ಲದಿರೆ ನಿಜಧ್ಯಾನದಲ್ಲಿ |
ಕೊನೆಯಿರದ ಶೋಕ ತಾಪಗಳಳಿವುದೆಲ್ಲಿ ||
ಭೇದ ವೃತ್ತಿಯೊಳಗಾನಂದ ಸುಖ ನಾಶ |
ಖೇದ ವಿರೆ ಬಹುದೂರ ದೃಢಚಿತ್ತನಾಶ ||62||

ಆ ವಾದಿಗೆ ರಾಮನ ಅನುಸಂಧಾನವೆಲ್ಲ ಕಡಿದುಹೋಗಿ. ಅಂತಃಕರಣದಲ್ಲಿ ದುಃಖದುಮ್ಮಾನವೇ ಮನೆ ಮಾಡಿರುವದು ! ಭೇದಬುದ್ಧಿಯಿಂದ ಸುಖ ಸಂತೋಷ ಮುಳುಗಿ, ಆ ವಿಷಾದದಿಂದ ಅವನ ನಿಶ್ಚಯವೆಲ್ಲ ಹಾರಿ ಹೋಗಿರುವುದು!

ಘರೀ ಕಾಮಧೇನೂ ಫುಢೇ ತಾP À ಮಾಗೇ |
ಹರೀಬೋಧ ಸೋಡೂನಿ ವೀವಾದ ಲಾಗೇ ||
P Àರೀ ಸಾರ ಚಿಂತಾಮಣ ೀ ಕಾಚಖಂಡೇ |
ತಂi ÀiÁ ಮಾಗತಾ ದೇತ ಆಹೇ ಉದಂಡೇ ||63||

ಕಾಮಧೇನುವಿರೆ ಮಜ್ಜಿಗೆ ಬೇಡಿದಂತೆ |
ರಾಮಧ್ಯಾನವ ಬಿಟ್ಟು ವಾದಿಸುವ ಚಿಂತೆ ||
ಕರದಲಿಹ ಚಿಂತಾಮಣ ಯ ದೂರಿ ಮಾರಿ |
ಬರಿಯ ಗಾಜನು ಪಡೆದೆ ಎಲೋಮೂರ್ಖಧಾರಿ ||63||

ಜ್ಞಾನಿಗಳ ಭಕ್ತಿಯ ಉಪದೇಶವನ್ನು ಕೇಳದೇ, ಅವರೊಡನೆ ವಾದಿಸಲಿಕ್ಕೆ ಹತ್ತಿದರೆ, ಮನೆಯಲ್ಲಿ ಕಾಮಧೇನುವಿರಲು ಅದಕ್ಕೆ ಮಜ್ಜಿಗೆ ಬೇಡಿದಂತಾಗುತ್ತದೆ! ಬೇಡದರೆ ಬೇಕಾದಷ್ಟು ಕೊಡಬಲ್ಲ ಸರ್ವಶ್ರೇಷ್ಠ ಚಿಂತಾಮಣ ಯು ಕೈಯ್ಯಲ್ಲಿ ಇರಲಿಕ್ಕಾಗಿಯೂ ಅದನ್ನು ಕಾಜಿನ ತುಣುಕೆಂದು ಬಗೆದಂತಾಗುತ್ತದೆ!

ಅತೀ ಮೂಢ ತ್ಯಾ ದೃಢ ಬುದ್ಧೀ ಆಸೇನಾ |
ಅತೀ ಕಾಮ ತ್ಯಾ ರಾಮ ಚಿತ್ತೀ ವಸೇನಾ ||
ಅತೀ ಲೋಭ ತ್ಯಾ ಕ್ಷೋಭ ಹೋಯೀಲ ಜಾಣಾ |
ಅತೀ ವಿಷಯೀ ¸ Àರ್ವದಾ ದೈನ್ಯವಾಣಾ ||64||

ಅತಿ ಬುದ್ಧಿ ಹೀನನಿಗೆ ದೃಢ ಚಿತ್ತವಿಲ್ಲ |
ಅತಿ ಕಾಮಿ ನರಗೆ ರಾಮನ ಚಿಂತೆಯಿಲ್ಲ ||
ಅತಿ ಲೋಭಿಯಾಗಿರಲು ಶಾಂತ ಮನವಿಲ್ಲ |
ಅತಿ ವಿಷಯ ನರಗೆ ದೈನ್ಯತೆ ಬಿಡುವುದಿಲ್ಲ ||64||

ಪ್ರಪಂಚಾಸಕ್ತ ಭಕ್ತಹೀನರ ಸ್ಥಿತಿಯನ್ನು ನೋಡುತ್ತಿರಲಿಕ್ಕೆ, ಅತಿಶಯ ಮೂರ್ಖನಿಗೆ ಬುದ್ಧಿ ದೃಢವಿರದು, ಅತಿಶಯ ಕಾಮಾಧೀನನಿಗೆ ಮನದಲ್ಲಿ ರಾಮನಿರನು, ಅತಿಶಯ ಲೋಭಿಗೆ ದುಗುಡ ತಪ್ಪದು ಹಾಗೂ ಅತಿಶಯ ವಿಷಯಾಸಕ್ತನಿಗೆ ಯಾವಾಗಲೂ ದೀನತೆ ಬಿಡದು!

ನಕೋ ದೈನ್ಯವಾಣೇ ಜಿಣೇ ಭಕ್ತಿಊಣೇ |
ಅತೀ ಮೂರ್ಖ ತ್ಯಾ ಸರ್ವದಾ ದುಃಖ ದೂಣೇ ||
ಧರೀರೇ ಮನಾ ಆದರೇ ಪ್ರೀತಿ ರಾಮೀ |
ನಕೋ ವಾಸನಾ ಹೇಮಧಾಮೀ ವಿರಾಮೀ ||65||

ಭಕ್ತಿಯಿಲ್ಲದ ದೀನ ವಚನಕ್ಕೇ ನರ್ಥ |
ಮತ್ತೆ ಇಮ್ಮುಡಿ ದುಃಖಿಯಾ ಮೂರ್ಖ ವ್ಯರ್ಥ |
ರಾಮನನು ಪ್ರೀತಿಸುತ ಮನವೆ ನೆಲೆನಿಲ್ಲು |
ಹೇಮ ಹೆಗ್ಗಾಸಕ್ತಿ ಹರಿ ದೆಸೆದು ಗೆಲ್ಲು ||65||

ಮನವೇ, ಭಕ್ತಿವಿರಹಿತ ಹೀನದೀನ ಜೀವನ ಸಲ್ಲದು, ಅಂತಹ ಮೂಢನಿಗೆ ಯಾವ ಕಾಲಕ್ಕೂ ದುಃಖ ಇಮ್ಮಡಿಸುವದು! ಅದಕ್ಕಾಗಿ ಗೃಹ – ಕನಕಾದಿ ವಿಷಯಸುಖದಲ್ಲಿಆಶೆಯಿಡದೆ ರಾಮನಲ್ಲಿ ಅಂತಃಕರಣಪೂರ್ಣಕವಾದ ಪ್ರೇಮಧರಿಸು.

ನವ್ಹೇ ಸಾರ ಸಂಸಾರ ಹಾ ಘೊರ ಆಹೇ |
ಮನಾ ಸಜ್ಜನಾ ಸತ್ಯ ಶೋಧೂನಿ ಪಾಹೇ ||
ಜನೀ ವೀಷ ಖಾತಾ ಫುಡೇ ¸ Àೂಖ ಕೈಚೀ |
P Àರೀರೇ ಮನಾ ಧ್ಯಾನ ಯಾ ರಾಘವಾಚೇ ||66||

ಘೋರ ಸಂಸಾರವಿದು ಬಹು ದುಃಖ ಮಯವು |
ಪಾರ ಕಾಣಲು ಬೇಕು ಸತ್ಯ ಶೋಧನವು |
ಒಳಗೆ ವಿಷಯದ ವಿಷವು ಸುಖ ದೊರೆವುದೇನು |
ಬೆಳಗಿರಲಿ ಧ್ಯಾನಿಪುದು ರಾಮನನು ನೀನು ||66||

ಸಾಧು ಮನವೇ, ಈ ಸಂಸಾರವು ಅಸಾರವೂ ದುಃಖಮಯವು ಆಗಿದೆಯೆಂಬ ವಸ್ತುಸ್ಥಿತಿಯನ್ನು ಪರೀಕ್ಷಿಸಿ ಕಂಡುಕೊ. ವಿಷ ತಿಂದರೆಂದಾದರೂ ಆದರಿಂದ ಸುಖವಾದೀತೆ? ಸಾರಾಂಶ, ಸಂಸಾರದ ಆಶೆ ತೊರೆದ ರಾಮಚಂದ್ರನ ಧ್ಯಾನ ಮಾಡಪ್ಪಾ!.

3. ನಾಮª Àುಹಾತ್ಮೆ (ಶ್ಲೋಕ 67-101)
ಘನಶ್ಯಾಮ ಹಾ ರಾಮ ಲಾವಣ್ಯ ರೂಪೀ |
ಮಹಾಧೀರ ಗಂಭೀರ ಪೂರ್ಣಪ್ರತಾಪೀ ||
P Àರೀ ಸಂP Àಟೀ ಸೇವಕಾಚಾ P Àುಡಾವಾ |
ಪ್ರಭಾತೇ ಮನೀ ಆಮ ಚಿಂತೀತ ಜಾವಾ*16 ||67||

ಮೇಘ ಶ್ಯಾಮರಾಮ ಲಾವಣ್ಯ ರೂಪಿ |
ಮೇಘ ಗಂಭೀರನು ಪೂರ್ಣ ಪ್ರತಾಪಿ ||
ಕಳೆಯುವನು ಭಕ್ತ ಕಷ್ಟವ ತಿಳಿದು ತಾನು |
ಬೆಳಗಿರಲಿ ಧ್ಯಾನಿಪುದು ರಾಮನು ನೀನು ||67||

ಮೇಘದಂತೆ ನೀಲೀ ವರ್ಣದವನೂ, ನಯನಮನೋಹರನ್ನೊ ಶೂರ-ವೀರನೂ, ನಿಃಸೀಮ ತೇಜಸ್ವಿಯೂ, ಗಂಭೀರನೂ, ಸಂಕಟದಲ್ಲಿ ಭಕ್ತರನ್ನು ರಕ್ಷಣೆ ಮಾಡುವವನೂಆದ ಆ ಶ್ರೀರಾಮನನ್ನು ನಿತ್ಯವೂ ಪ್ರಾತಃಕಾಲದಲ್ಲಿ ನೆನೆಯುತ್ತಿರಬೇಕು.

ಬಳೇ ಆಗಳಾ ರಾಮ ಕೋದಂಡಧಾರೀ |
ಮಹಾ ಕಾಳ ವಿಕ್ರಾಳ ತೋಹೀ ಥರಾರೀ ||
ಫುಢೇ ಮಾನವಾ ಕಿಂP Àರಾ ಕೋಣ ಕೇಂವಾ |
ಪ್ರಭಾತೇ ಮನೀ ಆಮ ಚಿಂತೀತ ಜಾವಾ ||68||

ಅತಿ ಬಲಿಷ್ಠನು ರಾಮ ಕೋದಂಡಧಾರಿ |
ಧೃತಿಗೆಟ್ಟು ಧ್ಯಾನಿಸಲು ದಿಟ ದಂಡಧಾರಿ ||
ಬಳಿಕವನೆದುರು ನರನ ಬೆಲೆ ಲೆಕ್ಕವೇನು |
ಬೆಳಗಿನಲಿ ಧ್ಯಾನಿಪುದು ರಾಮನನು ನೀನು ||68||

ಮೀರಿದ ಸಾಮಥ್ರ್ಯವಂತನಾದ ಧನುಷ್ಯಧಾರೀ ರಾಮಪ್ರಭುವಿನೆದುರಿಗೆ ಭಯಂಕರವಾದ ಯಮನೂ ಗದಗದ ನಡುಗುವನು ! ಅಂದಮೇಲೆ ಯಃಕಶ್ಚಿತ ಮನುಷ್ಯದೇನು ಬಿಸಾತು? ಆದುದರಿಂದ ಅಭಿಮಾನ ತೊರೆದು ನಿತ್ಯವೂ ಪ್ರಾತಃಕಾಲದಲ್ಲಿ ಶ್ರೀರಾಮನನ್ನು ನೆನೆಯುತ್ತಿರಬೇಕು.

ಸುಖಾನಂದಕಾರೀ ನಿವಾರೀ ಭಂi ÀiÁತೇ |
ಜನೀ ಭಕ್ತಿಭಾವೇ ಭಜಾವೇ ತಯಾತೇ ||
ವಿವೇಕೇ ತ್ಯಜಾವಾ ಅನಾಚಾರ ಹೇವಾ |
ಪ್ರಭಾತೇ ಮನೀ ಆಮ ಚಿಂತೀತ ಜಾವಾ ||69||

ಸುಖದಾಯಕನು ರಾಮ ಭಯ ನಿವಾರಕನು |
ಸುಖದಿಂದ ಭಕ್ತನನವರತ ಭಜಿಸುವನು ||
ತಿಳಿದು ತಪ್ಪನು ತವಕದಲಿ ತಿದ್ದುವೇನು |
ಬೆಳಗಿನಲಿ ಧ್ಯಾನಿಪುದು ರಾಮನನು ನೀನು ||69||

ಭಯಹರಣ ಮಾಡಿ ಸುಖಸಂತೋಷವೀಯುವ ಪ್ರಭುವನ್ನು ಅನನ್ಯ ಭಕ್ತಿಯಿಂದ ಉಪಾಸಿಸುವುದೇ ಯುಕ್ತವಷ್ಟೇ? ಎಂದ ಮೇಲೆ ವಿಚಾರದಿಂದ ತನ್ನ ಅವನಡತೆಯ ಅಭಿಮಾನ ಬಿಟ್ಟು ನಿತ್ಯವೂ ಪ್ರಾತಃಕಾಲದಲ್ಲಿ ಶ್ರೀರಾಮನನ್ನು ನೆನೆಯುತ್ತಿರಬೇಕು.

ಸದಾ ರಾಮನಾಮೇ ವದಾ ಪೂರ್ಣಕಾಮೇ |
P Àದಾ ಬಾಧಿಜೇನಾ ಪದಾ ನಿತ್ಯಿನೇಮೇ ||
ಮದಾಲಸ್ಯ ಹಾ ಸರ್ವ ಸೋಡೂನಿ ದ್ಯಾವಾ |
ಪ್ರಭಾತೇ ಮನೀ ಆಮ ಚಿಂತೀತ ಜಾವಾ ||70||

ಭಜಿಸು ರಾಮನ ನಾಮವದೇ ಪೂರ್ಣಕಾಮ |
ನಿಜಪಾಪ ಬಾಧಿಪದು ಇಂತಿರಲು ನೇಮ ||
ಕಳಿತ ಮದ ಕಲಿದಲಸ ಕಳೆಯಬೇಕೇನು |
ಬೆಳಗಿನಲಿ ಧ್ಯಾನಿಪುದು ರಾಮನನು ನೀನು ||70||

ಇಚ್ಛಾಪೂರ್ಣ ಮಾಡುವ ರಾಮನಾಮಗಳನ್ನು ಯಾವಾಗಲೂ ಉಚ್ಚರಿಸಿರಿ. ನಾಮಸ್ಮರಣೆಯ ನಿಶ್ಯನಿಯಮದಿಂದ ಸಂಕಟಗಳೆಂದಿಗೂ ಗಾಸಿಮಾಡುವು! ಹೀಗಿರಲು ಒಣ ಗರ್ವ-ಆಲಸ್ಯವನ್ನು ಬಿಟ್ಟು ಕೊಟ್ಟು ನಿತ್ಯವೂ ಪ್ರಾತಃಕಾಲದಲ್ಲಿ ಶ್ರೀರಾಮನನ್ನು ನೆನೆಯುತ್ತಿರಬೇಕು.

ಜಯಾಚೇನಿ ನಾಮೇ ಮಹಾದೋಷ ಜಾತೀ |
ಜಯಾಚೇನಿ ನಾಮೇ ಗತೀ ಪಾವಿಜೇತಿ ||
ಜಯಾಚೇನಿ ನಾಮೇ ಘಡೇ ಪುಣ್ಯಠೇವಾ |
ಪ್ರಭಾತೇ ಮನೀ ಆಮ ಚಿಂತೀತ ಜಾವಾ ||71||

ಯಾರ ಲಿಧ್ಯಾನದಿ ಮಹಾ ಪಾಪಗಳ ನಾಶ |
ಯಾರ ಧ್ಯಾನದಿ ಸುಗತಿ ಲಾಭದಾಯಕ |
ಗಳಿಸಿ ಪುಣ್ಯದ ರಾಶಿ ಸುರಿಸಬೇಕೇನು |
ಬೆಳಗಿರಲಿ ಧ್ಯಾನಿಪುದು ರಾಮನನು ನೀನು ||71||

ಯಾರ ನಾಮದಿಂದ ದಾರುಣ ದೋಷಗಳ ಪರಿಹಾರವಾಗುವದೋ, ಶ್ರೇಷ್ಠ ಪದವಿ ದಒರೆಯುವವೋ, ಪುಣ್ಯಸಂಚಯವಾಗುವದೋ ಅಂತಹ ಶ್ರೀರಾಮನನ್ನು ನಿತ್ಯವೂ ಪ್ರಾತಃಕಾಲದಲ್ಲಿ ನೆನೆಯುತ್ತಿರಬೇಕು.

ನ ವೇಚೇ P Àದಾ ಗ್ರಂಥಿಚೇ ಅರ್ಥ ಕಾಂಹಿ |
ಮುಖೇ ನಾಮ ಉಚ್ಚಾರಿತಾ P Àಷ್ಟ ನಾಂಹಿ ||
ಮಹಾ ಘೋರ ಸಂಸಾರ ಶತ್ರೂ ಜಿಣಾವಾ |
ಪ್ರಭಾತೇ ಮನೀ ರಾಮ ಚಿಂತಿತ ಜಾವಾ ||72||

ನಾಮ ಜಪಿಸಲು ಹಣದ ವೆಚ್ಚ ಬೇಕಿಲ್ಲ |
ಪ್ರೇಮದಿಂದುಚ್ಚರಿಸೆ ಕಷ್ಟವೇನಿಲ್ಲ ||
ಬೆಳೆದ ಸಂಸಾರ ವೈರಿಯ ಪರಿವೆಯೇನು |
ಬೆಳಗಿನಲಿ ಧ್ಯಾನಿಪುದು ರಾಮನನು ನೀನು ||72||

ಬಾಯಿಯಿಂದ ನಾಮವನ್ನು ಅನ್ನಲಿಕ್ಕೆ ಪದರಿನ ಹಣವೇನು ವೆಚ್ಚವಾಗುವುದಿಲ್ಲ ಹಾಗೂ ಅದಕ್ಕೆ ಶ್ರಮವೂ ಇರುವುದಿಲ್ಲ ! ಎಂದ ಮೇಲೆ ಅತಿ ಭಯಂಕರವಾದ ಸಂಸಾರ ಶತ್ರುವನ್ನು ಗೆಲ್ಲುವದಕ್ಕಾಗಿ ಶ್ರೀರಾಮನನ್ನು ನಿತ್ಯವೂ ಪ್ರಾತಃಕಾಲದಲ್ಲಿ ನೆನೆಯುತ್ತಿರಬೇಕು.

ದೇಹೇದಂಡಣೇಚೇ ಮಹಾದುಃಖ ಆಹೇ |
ಮಹಾದುಃಖ; ತೇ ನಾಮ ಘೇತಾ ನ ರಾಹೇ ||
ಸದಾಶೀವ ಚಿಂತೀತಸೇ ದೇವದೇವಾ |
ಪ್ರಭಾತೇ ಮನೀ ರಾಮ ಚಿಂತೀತ ಜಾವಾ ||73||

ದುಡಿಯುವೆನೆ ದೇಹ ದಂಡಿಸಿ ದುಃಖವುಂಟು |
ತಡಿಯಲಿಕೆ ದುಃಖವನು ನಾಮ ಜಪವುಂಟು ||
ಕೆಳದಿ ಸಹ ಶಿವನು ಚಿಂತಿಪುದಲ್ಲ ವೇನು |
ಬೆಳಗಿನಲಿ ಧ್ಯಾನಿಪುದು ರಾಮನನು ನೀನು ||73||

ತಪ-ವ್ರತಾದಿ ದೇಹದಂಡನೆಯು ಅತ್ಯಂತ ದುಃಖದಾಯಕವಿರುತ್ತದೆ; ಆದರೆ ನಾಮ ತಕ್ಕೊಂಡರೆ ಇದ್ದ ದುಃಖಗಳೂ ಲಯಿಸುವವು ! ಪ್ರತ್ಯಕ್ಷಶಂಕರನೇ ಭಗವಂತನಾದ ಶ್ರೀರಾಮನ ಸ್ಮರಣೆ ಮಾಡುತ್ತಿರುವನು !! ಎಂದ ಮೇಲೆ ನಿತ್ಯವೂ ಪ್ರಾತಃಕಾಲದಲ್ಲಿ ಶ್ರೀರಾಮನನ್ನು ನೆನೆಯುತ್ತಿರಬೇಕು.

ಬಹುತಾಪರೀ ¸ ÀಂP Àಟೇ ಸಾಧನಾಚೀ |
ವೃತೇ ದಾನ ಉದ್ಯಾಪನೇ ತೀ ಧನಾಚೀ ||
ದಿನಾಚಾ ದಂi ÀiÁಳೂ ಮನೀ ಆಠವಾವಾ |
ಪ್ರಭಾತೇ ಮನೀ ಆಮ ಚಿಂತೀತ ಜಾವಾ ||74||

ಅತಿ ಕಷ್ಟ ಪಡಬೇಕು ಹಟಯೋಗದಲ್ಲಿ |
ಅತಿ ಧನದ ವ್ಯಯವುಂಟು ವ್ರತದಾನದಲ್ಲಿ ||
ನಳಿನ ನಾಭನ ನೆನೆಯುವಗೆ ನಷ್ಟವೇನು |
ಬೆಳಗಿನಲಿ ಧ್ಯಾನಿಪುದು ರಾಮನನು ನೀನು ||74||

ಅನ್ಯ ಸಾಧನಗಳಲ್ಲಿ ತರತರದ ಕಷ್ಟಗಳಿರುವವು; ವೃತ-ದಾನ-ಉದ್ಯಾಪನೆಗಳಂತೂ ಕೇವಲ ಹಣದಿಂದಲೇ ಸಾಧ್ಯವು! ಅದಕ್ಕಾಗಿ ಆ ಯಾವ ತೊಂದರೆಯಲ್ಲಿಯೂ ಬೀಳದೆ ದೀನಬಂಧುವಾದ ಶ್ರೀರಾಮನನ್ನು ನಿತ್ಯವೂ ಪ್ರಾತಃಕಾಲದಲ್ಲಿ ನೆನೆಯುತ್ತಿರಬೇಕು.

ಸಮಸ್ತಾಮಧೇ ಸಾರ ಸಾಚಾರ ಆಹೇ |
P Àಳೇನಾ ತರೀ ಸರ್ವ ಶೋಧೂನಿ ಪಾಹೇ ||
ಜಿವಾ ಸಂಶಯೋ ವಾವುಗಾ ತೋ ತೃಜಾವಾ |
ಪ್ರಭಾತೇ ಮನೀ ರಾಮ ಚಿಂತೀತ ಜಾವಾ ||75||

ಸಕಲಶಾಸ್ತ್ರದ ಸಾರ ಶ್ರೀರಾಮ ಧ್ಯಾನ |
ಯುಕುತಿಯಲಿ ಹುಡುಕಿ ತಿಳಿ ಧರಿಸಿ ನೀಮೌನ ||
ಉಳಿಯದೆಲೆ ಸಂಶಯಗಳಿಳಿಯಬೇಕೇನು |
ಬೆಳಗಿನಲಿ ಧ್ಯಾನಿಪುದು ರಾಮನನು ನೀನು ||75||

ಸತ್ಯವಾಗಿಯೂ, ಎಲ್ಲಾ ಸಾಧನೆಗಳಲ್ಲಿ ನಾಮಸ್ಮರಣೆ ಶ್ರೇಷ್ಠವಾಗಿದೆ. ನಿನಗೆ ಈ ಸಂಗತಿ ತಿಳಿಯದಿದ್ದರೆ ಎಲ್ಲವನ್ನೂ ಪರೀಕ್ಷಿಸಿ ನೋಡು ಹಾಗೂ ಸುಮ್ಮನೆ ತಥ್ಯ ಹೀನ ಸಂಶಯವನ್ನು ಬಿಟ್ಟುಕೊಟ್ಟು ನಿತ್ಯವೂ ಪ್ರಾತಃಕಾಲದಲ್ಲಿ ಶ್ರೀರಾಮನನ್ನು ನೆನೆಯುತ್ತಿರಬೇಕು.

ನವ್ಹೇ P Àರ್ಮ ನಾ ಧರ್ಮ ನಾ ಯೋಗ ಕಾಂಹೀ |
ನವ್ಹೇ ಭೋಗ ನಾ ತ್ಯಾಗ ನಾ ಸಾಂಗ ಪಾಹೀ ||
ಮ್ಹಣೇ ದಾಸ ವಿಶ್ವಾ¸ À ನಾಮೀ ಧರಾವಾ |
ಪ್ರಭಾತೇ ಮನೀ ರಾಮ ಚಿಂತೀತ ಜಾವಾ ||76||

ಯೋಗ ಕರ್ಮಾದಿಯೊಳು ಮನ ನಿಲ್ಲಲಿಲ್ಲ |
ಭೋಗ ತ್ಯಾಗವ ಪೂಣ ್ಸುವ ಶಕ್ತಿಯಿಲ್ಲ ||
ಕಳೆಯೆ ಮನ ಕಲ್ಮಷವ ನೀ ಬಯಸುವೇನು |
ಬೆಳಗಿನಲಿ ಧ್ಯಾನಿಪುದು ರಾಮನನು ನೀನು ||76||

ಪ್ರಪಂಚದಲ್ಲಿ ಕರ್ಮ, ಧರ್ಮಾಚರಣೆ, ಯೋಗ ಇವಾವದೊಂದೂ ಸರಿಯಾಗಿ ಸಾಧಿಸುವದಿಲ್ಲ; ಪೂರ್ಣ ಭೋಗವೂ ಸಾಧ್ಯವಿಲ್ಲ, ಪೂರ್ಣತ್ಯಾಗವೂ ಸಾಧ್ಯವಿಲ್ಲ ಇಂತಹ ಪರಿಸ್ಥಿತಿಯಿರುತ್ತದೆ. ಅದಕ್ಕಾಗಿ ರಾಮದಾಸರು ಹೇಳುವದೇನೆಂದರೆ ಕರ್ಮಾದಿಗಳ ಹವ್ಯಾಸ ಬಿಟ್ಟು ನಾಮಸ್ಮರಣೆಯಲ್ಲಿ ನಂಬಿಗೆ ಹಿಡಿಯಬೇಕು ಹಾಗೂ ನಿತ್ಯವೂ ಪ್ರಾತಃಕಾಲದಲ್ಲಿ ರಾಮನನ್ನು ನೆನೆಯುತ್ತಿರಬೇಕು.

P Àರೀ ಕಾಮ ನಿಷ್ಕಾಮ ಯಾ ರಾಘವಾಚೇ |
P Àರೀ ರೂಪ ಸ್ವರೂಪ ಸರ್ವಾ ಜಿವಾಚೇ |
P Àರೀ ಛಂದ ನಿದ್ವಂದ್ವ ಹೇ ಗೂಣ ಗಾತಾ |
ಹರೀ ಕೀರ್ತನೀ ವೃತ್ತಿ ವಿಶ್ವಾ¸ À ಹೋತಾ ||77||

ರಾಮ ಕಾಮಗೆ ಲಭ್ಯ ನಿಷ್ಕಾಮ ಬುದ್ಧಿ |
ನೇಮದಲಿ ಗಳಿಸುವನು ರಾಮ ಮಯ ಸಿದ್ಧಿ ||
ಹರಿಯ ಹೊಂದಲು ಬೇಕು ಹದನಾದ ಪ್ರೇಮ |
ಹರಿಯುವುದು ದ್ವಂದ್ವ ಮೀರಿದ ಗೆಲ್ಲ ಕಾಮ ||77||

ರಾಮನ ಕಾಮನೆಯು ಮನುಷ್ಯನನ್ನು ನಿಷ್ಕಾಮ ಮಾಡುವದು; ರಾಮನ ರೂಪವು ಅವನನ್ನು ಎಲ್ಲಾ ಜೀವಮಾತ್ರರ ಸ್ವರೂಪವನ್ನೇ ಮಾಡುವದು; ಕೀರ್ತನೆಯಲ್ಲಿ ದೃಢ ನಂಬಿಗೆಯಿಟ್ಟು ರಾಮನ ಗುಣಗಾನ ಮಾಡಿದರೆ ಆ ಒಲವು ಮನುಷ್ಯನನ್ನು ಸುಖ-ದುಃಖಾದಿ ದ್ವಂದ್ವಗಳಿಂದ ಮುಕ್ತ ಮಾಡುವದು.

ಅಹೋ ಜ್ಯಾ ನರಾ ರಾಮವಿಶ್ವಾ¸ À ನಾಂಹೀ |
ತಂi ÀiÁ ಪಾಮರಾ ಬಾಧಿಜೇ ¸ Àರ್ವ ಕಾಂಹೀ ||
ಮಹಾರಾಜ ತೋ ಸ್ವಾಮೀ ಕೈವಲ್ಯದಾತಾ |
ವೃಥಾ ವಾಹಣೆ ದೇಹ ಸಂಸಾರ ಚಿಂತಾ ||78||

ಆವನಿಗೆ ರಾಮನಲಿ ವಿಶ್ವಾಸ ವಿಲ್ಲ |
ಹೇವ ಭವ ದುಃಖ ವವನಿಗೆ ತಪ್ಪಲೊಲ್ಲ ||
ಸ್ವಾಮಿ ರಘುನಾಥನತಿ ಕರುಣ ಗುಣವಂತ |
ನಾಮ ಹರಿವುದು ದೇಹ ಸಂಸಾರ ಚಿಂತಾ ||78||

ನೋಡಿರಿ ! ರಾಮನಲ್ಲಿ ಭಕ್ತಿಯಿಲ್ಲದ ಹೀನ ಮನುಜನಿಗೆ ಏನೆಲ್ಲವೂ ಪೀಡೆ ಕೊಡುವವು ! ಮುಕ್ತಿದಾತ ಪ್ರಭುವಾದ ರಾಮರಾಯನನ್ನು ನಂಬದೆ ಶರೀರ ಹಾಗೂ ಪ್ರಪಂಚದ ಚಿಂತೆ ಹೊರುವದು ವ್ಯಥ ಶ್ರಮವಲ್ಲವೇ?

ಮನಾ ಪಾವನಾ ಭಾವನಾ ರಾಘವಾಚೀ |
ಧರೀ ಅಂತರೀ ಸೋಡಿ ಚಿಂತಾ ಭವಾಚೀ ||
ಭವಾಚೀ ಜಿವಾ ಮಾನವಾ ಭೂಲಿ ಠೇಲೀ |
ನಸೇ ವ¸ À್ತುಚೀ ಧಾರಣಾ ವೃರ್ಥ ಗೇಲೀ ||79||

ಮನವೆ ಶ್ರೀರಾಮನಲೆ ಭಾವನೆಯ ಹೊಂದು |
ನಿನಗೆ ಬೇಡವೋ ಭವದ ಚಿಂತೆಯೆಂದೆಂದು ||
ಚಿಂತೆ ಬುದ್ಧಿಯನ ನುದಿನವು ಭ್ರಮಿಸುವುದು |
ಸಂತೆಯಲಿ ದರ್ಶನವು ಮಾಯವಾಗುವುದು ||79||

ಮನವೇ, ನಿನ್ನೊಳಗೆ ರಾಮನ ಪವಿತ್ರ ಭಕ್ತಿಯನ್ನು ನೆಲೆಗೊಳಿಸಿ ಸಂಸಾರ ಚಿಂತೆಯನ್ನು ಎಸೆದುಬಿಡು. ನಿಜವಾಗಿ ಎಲ್ಲ ಜೀವರಿಗೆ ಬಂಧನದ ಬರೀ ಭ್ರಮೆಯೇ ಆಗಿದ್ದು, ಆ ಖೊಟ್ಟಿಸಂಸಾರದ ಗ್ರಹಣವು ನಿರರ್ಥಕವಾಯಿತು!

ಧರಾ ಶ್ರೀವರಾ ತ್ಯಾ ಹರಾ ಅಂತರಾತೇ |
ತರಾ ದುಸ್ತರಾ ತ್ಯಾ ಪರಾ ಸಾಗರಾತೇ ||
ಸರಾ ವೀಸರಾ ತ್ಯಾ ಭರಾ ದುರ್ಭರಾತೇ |
P Àರಾ ನೀP Àರಾ ತ್ಯಾ ಖರಾ ಮತ್ಸರಾತೇ ||80||

ಶಿವನಂತೆ ಹೃದಯದಲಿ ರಾಮನನು ನಿಲಿಸು |
ಭವ ಲೋಕ ಪಾರನನ್ನೆಡಬಿಡದೆ ಸ್ಮರಿಸು ||
ದುರ್ಭರದುದರಪೂರಣದಚಿಂತೆ ಬೇಡ |
ಬರ್ಬರದ ಮತ್ಸರವು ಮನಕೇನು ಬೇಡ ||80||

ಶಂಕರನ ಹೃದಯವಾಸಿಯಾದ ಸೀತಾಪತಿಯನ್ನು ಹಿಡಿಯಿರಿ, ಹಿಡಿದು ಕೊಳ್ಳಿರಿ ಹಾಗೂ ಕಠಿಣವಾದ ಪ್ರಪಂಚದ ಮಹಾ ಸಮುದ್ರವನ್ನು ದಾಟಿರಿ, ದಾಟಿಹೋಗಿರಿ! ಎಷ್ಟು ಹಾಕಿದರೂ ತುಂಬಲಾರದ ಲೋಭವನ್ನು ದೂಡಿರಿ, ದೂರಿಕರಿಸಿರಿ ಮತ್ತು ಮೂರ್ಖತನದ ಮತ್ಸರವನ್ನು ಬಡೆಯಿರಿ. ಸದೆಬಡೆಯಿರಿ!!

ಮನಾ ಮತ್ಸರೇ ನಾಮ ಸೋಡೂ ನಕೋಹೋ |
ಅತೀ ಆದರೇ ಹಾ ನಿಜಧ್ಯಾಸ ರಾಹೋ ||
ಸಮಸ್ತಾಮಧೇ ನಾಮ ಹೇ ಸಾರ ಆಹೇ |
ದುಜೀ ತೂಳಣಾ ತೂಳಿತಾಹೀ ನ ಸಾಹೇ ||81||

ಮತ್ಸರದಿ ಬಿಡಬೇಡ ಶ್ರೀರಾಮ ಧ್ಯಾನ |
ಉತ್ಸುಕದಿ ಸಾಧಕನು ಧ್ಯಾನದಲಿ ಲೀನ ||
ಸಾಧನಂಗಳ ಸಾರವನು ನಾಮ ಧ್ಯಾನ |
ಬೋಧಿಸಲು ಕಾಣದೈ ಬೇರೆಯುಪಮಾನ ||81||

ಮನರಾಯರೇ, ತಿರಸ್ಕಾರದಿಂದ ನಾಮವನ್ನು ಬಿಡಬೇಡಿರಪ್ಪಾ! ಆದರೆ ಒಳ್ಳೇ ಪ್ರೇಮದಿಂದ ಅದರ ಅನುಸಂಧಾನವಿಡಿರಿ ! ಎಲ್ಲ ಸಾಧನಗಳಲ್ಲಿಯೂ ನಾಮವು ಶ್ರೇಷ್ಠವಿದ್ದು, ಎರಡನೆಯ ಯಾವ ಸಾಧನವನ್ನು ಅದರೊಡನೆ ತೂಗಿನೋಡಿದರೂ, ನಾಮವೇನೂ ಒಳಗಾಗದು!!

ಬಹೂ ನಾಮ ಯಾ ರಾಮನಾಮೀ ತುಳೇನಾ |
ಅಭಾಗ್ಯಾ ನರಾ ಪಾಮರಾ ಹೇ P Àಳೇನಾ ||
ವಿಷಾ ಔಷಧೇ ಘೇತಲೇ ಪಾರ್ವತೀಶೇ |
ಜಿವಾ ಮಾನವಾ ಕಿಂP Àರಾ ಕೋಣ ಪೂಸೇ ||82||

ವಿವಿಧ ಮಂತ್ರಗಳೊಳು ಹಿರಿದು ರಾಮ ನಾಮ |
ಅವಿವೇಕಿ ಭೇದ ತಿಳಿಯನು ಲೋಷ್ಠ ಹೇಮ ||
ಹರಿದಾಹ ಶಮನಕ್ಕೆ ಸೇವಿಸಿದ ನಾಮ |
ಪರಸಾಧಿಸಲು ಬೇಕು ಬಹು ಶುದ್ಧ ಪ್ರೇಮ ||82||

ಬೇರೆ ಅನೇಕ ನಾಮಗಳಾವವೂ ರಾಮನಾಮದ ತೂಕಕ್ಕೆ ಬಾರವು ! ಆದರೆ ದೈವಹೀನ ಕ್ಷುದ್ರ ಮನುಜನಿಗೆ ಈ ಸಂಗತಿ ತಿಳಿಯಲೊಲ್ಲದು!! ಪ್ರತ್ಯಕ್ಷಶಂಕರನು ಹಾಲಾಹಲದ ವಿಷಕ್ಕೆ ರಾಮನಾಮದ ಔಷದ ತಕ್ಕೊಂಡನೆಂದ ಮೇಲೆ ಬಡಪಾಯಿಯಾದ ಮನುಷ್ಯನನ್ನು ಯಾರು ಕೇಳಬೇಕು?

ಜೇಣೇ ಜಾಳಿಲಾ ಕಾಮ ತೋ ರಾಮ ಧ್ಯಾತೋ |
ಉಮೇಸೀ ಅತೀ ಆದರೇ ಗೂಣ ಗಾತೋ ||
ಬಹೂ ಜ್ಞಾನ*17ವೈರಾಗ್ಯ ಸಾಮಥ್ರ್ಯ ಜೇಥೇ |
ಪರೀ ಅಂತರೀ ರಾಮವಿಶ್ವಾ¸ À⧫ 18ತೇಥೇ ||83||

ಕಾಮನನು ದಹಿಸಿರುವ ಹಿರಿಯೋಗಿ ಶಿವನು |
ರಾಮನನ್ನುಮೆಯೊಡನೆ ನಿರುತ ಧ್ಯಾನಿಪನು ||
ಜ್ಞಾನ ವೈರಾಗ್ಯ ರೂಪನಿಗಿಂಥ ಪ್ರೇಮ |
ಮಾನವಗೆ ಬೇಕೆಷ್ಟು ಹರಿ ಭಕ್ತಿನೇಮ ||83||

ಕಾಮನನ್ನು ದಹಿಸಿದ ಮಹಾದೇವನು ರಾಮನ ಧ್ಯಾನ ಮಾಡುವನು! ಹಾಗೂ ಪಾರ್ವತಿಯೊಡಗೂಡಿ ಆತನ ಗುಣಗಾನ ಮಾಡುವನು! ಜ್ಞಾನ-ವೈರಾಗ್ಯ ಬಲದ ನಿಧಿಯಾದ ಶಂಕರನಿಗೂ ರಾಮನಲ್ಲಿ ಇಷ್ಟು ಶ್ರದ್ಧೆಯಿರುವದು!!

ವಿಠೋನೇ ಶಿರೀ ವಾಹಿಲಾ ದೇವರಾಣಾ |
ತಂi ÀiÁ ಅಂತರೀ ಧ್ಯಾಸರೇ ತ್ಯಾಸಿ ನೇಣಾ ||
ನಿವಾಲಾ ಸ್ವಯೇ ತಾಪಸೀ ಚಂದ್ರಮೌಳೀ |
ಜಿವಾ ಸೋಡವೀ ರಾಮ ಹಾ ಅಂತಕಾಳೀ ||84||

ವಿಠ್ಠಲನ ಶಿರದಲ್ಲಿ ನೆಲೆನಿಂತ ಶಿವನು |
ಎಷ್ಟುಪರಿ ರಾಮ ಧ್ಯಾನವ ಮಾಡುತಿಹನು ||
ಇಂದುಧರನಿಗೆ ವಿಷಯದ ತಾಪ ವಳಿಸಿಹುದು |
ಕುಂದಿರದ ಮುಕ್ತಿಯನು ನರಗೆ ಕೊಡುತಿಹುದು ||84||

ವಿಠ್ಠಲನು ಮಹಾದೇವನನ್ನು ಪುಸ್ತಕದಲ್ಲಿ ಧರಿಸಿರುವನು, ಆದರೆ ಅಂತಹ ಮಹಾದೇವನಲ್ಲಿಯೂ ರಾಮನ ಧ್ಯಾನ ನೆಲೆಗೊಂಡಿದೆ; ಅವನನ್ನು (ರಾಮನನ್ನು) ಅರಿಯಿರಲ್ಲಾ ! ಗ್ಪಿಪೋಮೂರ್ತಿಯಾದ ಪ್ರತ್ಯಕ್ಷ ಶಂಕರನೇ ಶಾಂತಿ ಪಡೆದಿರಲು, ರಾಮನು ಜೀವರನ್ನು ಕೊನೆಗೆ ಮುಕ್ತ ಮಾಡುವನೆಂಬಲ್ಲಿ ಸಂದೇಹವೇನು?

ಭಜಾ ರಾಮ ವಿಶ್ರಾಮ ಯೋಗೇಶ್ವರಾಂಚಾ |
ಜಪೂ ನೇಮಿಲಾ ನೇಮ ಗೌರೀಹರಾಚಾ ||
ಸ್ವಯೇ ನೀವವೀ ತಾಪಸೀ ಚಂದ್ರಮೌಳೀ |
ತಮಾ ್ಹಸೋಡವೀ ರಾಮ ಹಾ ಅಂತಕಾಳೀ ||85||

ಯೋಗೇಶ್ವರನ ಶಾಂತಿ ಧಾಮವೇ ರಾಮ |
ಯೋಗೇಶ್ವರ ಗುಮೆಯ ಸಹ ಭಜಿಸುವುದು ನೇಮ||
ಉಗ ವಿಷ ತಾಪದಲು ಶಾಂತಿ ದೊರಕಿಹುದು |
ಅಗ್ರದಲಿ ಭಕ್ತನಿಗೆ ಮುಕ್ತಿ ಕೊಡುತಿಹುದು ||85||

ಯೋಗಿಶ್ರೇಷ್ಠರ ವಿಶ್ರಾಂತಿ ಸ್ಥಾನವಾದ ರಾಮನನ್ನು ಭಜಿಸಿರಿ. ಶಿವ-ಪಾರ್ವತಿಯರು ರಾಮನಜಪದ ನೇಮವನ್ನೇ ಇಟ್ಟುಕೊಂಡಿರುವರು! ಅಷ್ಟೇ ಅಲ್ಲದೆ, ಮಹಾ ತಪಸ್ವಿಯಾದ ಶಂಕರನೇ ಎಲ್ಲರಿಗೂ “ರಾಮನು ನಿಮ್ಮನ್ನು ಅಂತ್ಯಕಾಲದಲ್ಲಿ ಮುಕ್ತ ಮಾಡುವನೆಂದು ಸಂತೈಸುತ್ತಿರುವನು!!

ಮುಖೀ ರಾಮ ವಿಶ್ರಾಮ ತೇಥೇಚಿ ಆಹೇ |
ಸದಾನಂದ ಆನಂದ ಸೇವೂನಿ ರಾಹೇ ||
ತಂi ÀiÁವೀಣ ತೋ ಶೀಣ ¸ Àಂದೇಹಕಾರೀ |
ನಿಜಧಾಮ ಹೇ ನಾಮ ಶೋಕಾಪಹಾರೀ ||86||

ನಾಮ ಭಜನೆಯೊಳು ಸುಖವನು ಕಾಣುವುದು |
ನೇಮವಿರಲಾನಂದ ಸುಲಭ ದೊರೆಯುವುದು ||
ಏಕಾಗಿ ಕೆಡುವೆನೀ ಸಂದೇಹ ದೊಳಗೆ |
ಶೋಕ ರಹಿತಾನಂದವಿದೆ ನಂಬಿದವಗೆ ||86||

ಬಾಯಿಯಲ್ಲಿ ರಾಮನೆಂಬ ನಾಮವಿದ್ದರೆ ಅಲ್ಲಿಯೇ ವಿಶ್ರಾಂತಿಯಿರುವದು, ಯಾವಾಗಲೂ ಆ ಪರಮಾನಂದವನ್ನು ಅನುಭವಿಸುತ್ತಲಿರು. ಅದರ ಹೊರತಾಗಿ ಏನೆಲ್ಲವೂ ಸಂಶಯಮಯ ದಣ ವೇ ಸೈ !

ತನ್ನ ಮೂಲ ವಿಶ್ರಾಂತಿ ಸ್ಥಾನವೆನಿಸಿದ ಈ ನಾಮವು ದುಃಖವನ್ನು ಸಮೂಲ ನಾಶಗೊಳಿಸುವದು|
ಮುಖೀ ರಾಮ ತ್ಯಾ ಕಾಮ ಬಾಧೂ ಶಕೇನಾ |
ಗುಣೇ ಇಷ್ಟ ಧಾರಿಷ್ಟತ್ಯಾಚೇ ಚುಕೇನಾ ||
ಹರೀಭP À್ತ ತೋ ಶP À್ತಕಾಮಾಸ ಮಾರೀ |
ಜಗೀ ಧನ್ಯ ತೋ ಮಾರುತೀ ಬ್ರಹ್ಮಚಾರೀ ||87||

ಹರಿಭಕ್ತ ಕಾಮನನು ಸಹ ಜಯಿಸುವನು |
ಸರುವ ಸಂಕಟದಲ್ಲಿ ಸುಖವ ಸವಿಯುವನು ||
ಧೀರನಂತೆಯೇ ಮನದ ಭೀಷ್ಟ ಪಡೆಯುವುದು |
ಮಾರುತಿಯು ಜಗಕಿದರ ಸಾಕ್ಷಿಯಾಗಿಹನು ||87||

ಬಾಯಿಯಲ್ಲಿ ರಾಮನಾಮವಿದ್ದವನಿಗೆ ಕಾಮವು ಪೀಡಿಸಲಾರದು, ಮೋಹಕ ವಿಷಯಗಳಿಂದ ಅವನ ಧೈರ್ಯವು ಕುಂದದು ! ಸಾರಾಂಶ, ರಾಮ ಭಕ್ತನೇ ಕಾಮವನ್ನು ನಿರ್ನಾಮಗೊಳಿಸುವ ಶಕ್ತಿಪಡೆದಿದ್ದಾನೆ ! ಜಗತ್ತಿನಲ್ಲಿ ಆಂತಹ ಭಕ್ತಾಗ್ರಣ ಬ್ರಹ್ಮಚಾರೀ ಹನುಮಂತನು ಪ್ರಸಿದ್ಧನಷ್ಟೇ?

ಬಹೂ ಚಾಂಗಲೇ ನಾಮ ಯಾ ರಾಘವಾಚೇ |
ಅತೀ ಸಾಜಿರೇ ಸ್ವಲ್ಪ ಸೋಪೇ ಫುಕಾಜೇ ||
P Àರೀ ಮೂಳ ನಿರ್ಮೂಳ ಘೇತಾ ಭವಾಚೇ |
ಜಿವಾ ಮಾನವಾ ಹೇಚಿ ಕೈವಲ್ಯ ಸಾಚೇ ||88||

ಬಲು ಸೊಗಸು ಭಜಿಸಲೈ ಶ್ರೀರಾಮ ನಾಮ |
ಸುಲಭ ಕಳೆಯುವುದಕ್ಕೆ ಮನ ಗರ್ವಕಾಮ ||
ಜನನ ಮರಣದ ಬಂಧ ಬೇಗ ಬಿಡಿಸುವುದು |
ಮನುಜನಿಗೆ ಮೋಕ್ಷ ಸುಖ ಲಾಭ ನೀಡುವುದು ||88||

ಈ ರಾಮರಾಯನ ನಾಮವು ಬಹಳ ಉತ್ತಮವು, ಬಲು ಚಂದವು, ಚಿಕ್ಕದು, ಸುಲಭವು ಹಾಗೂ ಪುಕ್ಕಟೆಯು ಆಗಿದ್ದು, ನಾಮ ತಕ್ಕೊಂಡರೆ ಅದು ಸಂಸಾರಬಂಧನವನ್ನು ಬೇರು ಸಹಿತ ಕಿತ್ತೊಗೆಯುವದು ! ಮನುಜನಿಗೆ ಇದೇ ನಿಜವಾದ ಅಚಿತಿಮ ಸ್ಥಿತಿಯು!

ಜನೀ ಭೋಜನೀ ನಾಮ ವಾಚೇ ವದಾವೇ |
ಅತೀ ಆದರೇ ಗದ್ಯಘೋಷೇ ಮ್ಹಣಾವೇ ||
ಹರಿ ಚಿಂತನೇ ಅನ್ನ ಸೇವಿತ ಜಾವೇ |
ತರೀ ಶ್ರೀಹರೀ ಪಾವಿಜೇತೋ ಸ್ವಭಾವೇ ||89||

ಭೋಜನದ ಕಾಲದಲಿ ನಾಮ ಗರ್ಜಿಸುವುದು |
ಯೋಚಿಸಿದ ಕಾರ್ಯದಲಿ ನಿರುತ ನೆನೆಯುವುದು || ವಿವಿಧ ಭೋಗವನ್ನು ಹರಿಗಾಗಿ ಭೋಗಿಪುದು |
ಭುವಿಯಲ್ಲಿ ಹರಿಯನ್ನು ಇಂತು ಸಾಧಿಪುದು ||89||

ಊಟದ ಸಮಯದಲ್ಲಿ ವಾಣ ಯಿಂದ ನಾಮವನ್ನು ಉಚ್ಚರಿಸಬೇಕು, ಪ್ರೇಮಾತಿಶಯದಿಂದ ಗದ್ಯಪದ್ಯಗಳನ್ನು ಉಚ್ಚ ಸ್ವರದಿಂದ ಅನ್ನಬೇಕು ಹಾಗೂ ರಾಮನ ಸ್ಮರಣೆ ಮಾಡುತ್ತಅನ್ನ ಉಣ್ಣುತ್ತಿರಬೇಕು; ಹೀಗೆ ಮಾಡಿದರೆ ಸಹಜದಲ್ಲಿಯೇ ರಾಮನ ಪ್ರಾಪ್ತಿಯಾಗುತ್ತದೆ.

ನ ಯೇ ರಾಮ ವಾಣ ೀ ತಂi ÀiÁ ಥೋರ ಹಾಣ ೀ |
ಜನೀ ವ್ಯರ್ಥ ಪ್ರಾಣ ೀ ತಂi ÀiÁ ನಾಮ ಕಾಣ ೀ ||
ಹರೀ ನಾಮ ಹೇ ವೇದಶಾಸ್ತ್ರಿಪುರಾಣ ೀ |
ಬಹೂ ಆಗಳೇ ಬೋಲಿಲೀ ವ್ಯಾ¸ Àವಾಣ ೀ ||90||

ರಾಮನನು ನಂಬುನರ ಜನ್ಮದಲಿ ಪ್ರಾಣ |
ನೇಮದಲಿ ಭಜಿಸದಿರೆ ಬಲು ದೊಡ್ಡ ಹಾನಿ ||
ಹರಿ ಮಹಿಮೆಯನ್ನು ವೇದ ಪುರಾಣದಲ್ಲಿ |
ಪರಿ ವಿಧದಿ ಹಾಡಿಹನು ವ್ಯಾಸ ನೋಡಲ್ಲಿ ||90||

ನಾಲಿಗೆಯಿಂದ ರಾಮನಾಮ ನುಡಿಯದವನಿಗೆ ದೊಡ್ಡ ಘಾತವಾಗುವದು! ಅವನು ಜಗತ್ತಿನಲ್ಲಿ ತುಚ್ಛ ಜೀವಿಯೆನಿಸುವನು !! ಅದಿರಲಿ. ವ್ಯಾಸ ಋಷಿಗಳು ವೇದ-ಶಾಸ್ತ್ರ-ಪುರಾಣಗಳಲ್ಲಿ ನಾಮಮಹಿಮೆಯನ್ನು ಬಹಳ ವಣ ್ಸಿರುತ್ತಾರೆ.

ನಕೋ ವೀಟ ಮಾನೂ ರಘೂನಾಯಕಾಚಾ |
ಅತೀ ಆದರೇ ಬೋಲಿಜೇ ರಾಮ ವಾಚಾ ||
ನ ವೇಚೇ ಮುಖೀ ಸಾಪಡೇ ರೇ ಫುಕಾಚಾ |
P Àರೀ ಘೋಷ ತ್ಯಾ ಜಾನಕೀವಲ್ಲಭಾಚಾ ||91||

ರಾಮ ಧ್ಯಾನವು ವ್ಯರ್ಥ ವೆಂದೆಣ ಸಬೇಡ |
ನಾಮವನು ವಾಣ ಯಲಿ ಹಾಡದಿರಬೇಡ ||
ಮುಖದಿ ‘ರಾಮಾ’ ಎನಲು ವೆಚ್ಚವೇನಿಲ್ಲ |
ಸುಖವೀವ ನಾಮ ಘೋಷವ ಮಾಡಲಿಲ್ಲ ||91||

ರಾಮನ ವಿಷಯಕ್ಕೆ ಬೇಜಾರಪಡದೆ ಬಹುಪ್ರೀತಿಯಿಂದ ರಾಮನಾಮವನ್ನು ನುಡಿ. ಇದರಲ್ಲಿ ಹಣವೇನೂ ವೆಚ್ಚವಾಗದೆನಾಮವು ಪುಕ್ಕಟೆಯಾಗಿಯೇ ಲಭ್ಯವಿರುವದು, ಅದಕ್ಕಾಗಿ ಸೀತಾಪತಿಯ ನಾಮ ಘೋಷಮಾಡು!

ಅತೀ ಆದರೇ ¸ Àರ್ವಹೀ ನಾಮಘೋಷೇ |
ಗಿರೀ P Àಂದರೇ ಜಾಯಿಜೇ ದೂರಿ ದೋಷೇ*19||
ಹರೀ ತಿಷ್ಠತೂ ತೋಷಲಾ„ ನಾಮತೋಷೇ⧫|
ವಿಶೇಷೇ ಹರಾ ಮಾನಸೀ ರಾಮಪೀಸೇ ||92||

ಆದರದಿ ಮಾಡು ರಾಮನ ನಾಮ ಘೋಷ |
ಆದರಿಸದಿರಲೋಡುವುದು ಸರವ ದೊಷ ||
ರಾಮನನು ಭಜಿಪಲ್ಲಿ ಹರಿಯು ತೋರುವನು |
ರಾಮನಾಮಕೆ ಶಿವನು ಮಾರಿ ಹೋಗಿಹನು ||92||

ಭಕ್ತಿ ಪೂರ್ವಕವಾಗಿ ನಾಮ ಗರ್ಜಿಸುವದರಿಂದ ಎಲ್ಲ ದೋಷಗಳೂ ದೂರ ಗುಡ್ಡಗವ್ಹರಗಳಿಗೆ ಓಡಿಹೋಗುವವು ! ರಾಮನು ತನ್ನ ನಾಮೊಚ್ಚರಣೆಯಿಂದ ಸಂಪ್ರೀತನಾಗಿ ಒಲಿಯುವನು ! ಶಂಕರನಿಗಾದರೋ ಮನದಲ್ಲಿ ರಾಮನ ಹುಚ್ಚೇ ಹಿಡಿದಿರುವದು !!

ಜಗೀ ಪಾಹತಾ ರಾಮ● ಹಾ ಅನ್ನದಾತಾ |
ತಂi ÀiÁ ಲಾಗಲೀತ ತ್ತ್ವತಾ ಸಾರ ಚಿಂತಾ ||
ತಂi ÀiÁಚೇ ಮುಖೀ ನಾಮ ಘೇತಾ ಫುಕಾಚೇ |
ಮನಾ ಸಾಂಗಪಾರೇ ತುಝೇ ಕಾಯ ವೇಚೇ ||93||

ಭವಕೊಬ್ಬನೇ ದೇವ ನವನನ್ನು ದಾತಾ |
ಶಿವಗೆ ಜಗ ಚಿಂತೆ ಯಾತನೆ ಲೋಕದಾತಾ ||
ಮುಖದಿ ನಾಮವನುಚ್ಚರಿಸಲೇನು ಕಷ್ಟ |
ಸಖನಂತೆ ಸಲ್ಲಿಪನು ಸರ್ವಸುಖ ಸೃಷ್ಟ ||93||

ವಿಚಾರಿಸಿ ನೋಡಲು ಜಗತ್ತಿನಲ್ಲಿ ರಾಮನೇ ಅನ್ನ ಕೊಡುವವನಿದ್ದು, ಅವನಿಗೇ ಎಲ್ಲರ ಸಂರಕ್ಷಣೆಯ ಚಿಂತೆಯಿರುತ್ತದೆ! ಮನವೇ ಇಂತಹ ದಯಾಮಯ ರಾಮನ ವಿನಾಮೌಲ್ಯದ ನಾಮವನ್ನು ಬಾಯಿಯಿಂದ ಅನ್ನಲಿಕ್ಕೆ ನಿನ್ನದೇನು ಗಂಟು ಖರ್ಚಾಗುವದು ಹೇಳು ನೋಡೋಣ !!

ಚಿನ್ಹೀ ಲೋP À ಜಾಳೂ ಶಕೇ ಕೋಪ ಯೇತಾ |
ನಿವಾಲಾ ಹರೂ ತೋ ಮುಖೇ ನಾಮ ಘೇತಾ ||
ಜಪೇ ಆದರೇ ಪಾರ್ವತೀ ವಿಶ್ವಮಾತಾ |
ಮ್ಹಣೋನೀ ಮ್ಹಣಾ ತೇಚಿ ಹೇ ನಾಮ ಆತಾ ||94||

ಪ್ರಳಯದಲಿ ಮೂಲೋಕ ಸುಡಬಲ್ಲ ಶಿವನು |
ಕಳೆದು ತಾಪವ ಶಾಂತಿಯನನು ಭವಿಸುತಿಹನು ||
ಲೋಕ ಮಂಗಳೆ ಜಪಿಪ ರಾಮ ನಾಮವನು |
ಏಕೆ ಮರೆವನೋ ಮನಜ ತಿಳಿಯದಾಗಿಹೆನು ||94||

ಮೂರೂ ಲೋಕಗಳನ್ನು ಸುಟ್ಟುಬಿಡುವಂತಹ ಸಿಟ್ಟಿನವನಾದ ಶಂಕರನೇ ನಾಮ ತಕ್ಕೊಂಡು ಶಾಂತನಾದನು! ಲೋಕಜನನಿಯಾದ ಪಾರ್ವತಿಯಾದರೂ ಪ್ರೇಮದಿಂದ ನಾಮ ಜಪಿಸುತ್ತಿರುವಳು! ಅದಕ್ಕಾಗಿ ನೀವಾದರೂ ಇಂತಹ ಶ್ರೇಷ್ಠ ರಾಮನಾಮವನ್ನು ಉಚ್ಚರಿಸಿರಿ.

ಅಜಾಮೇಳ ಪಾಪೀ ವದೇ ಪುತ್ರಕಾಮೇ |
ತಂi ÀiÁ ಮುಕ್ತಿ ನಾರಾಂi Àುಣಾಚೇನಿ ನಾಮೇ ||
ಶುಕಾಕಾರಣೇ P Àುಂಟಣ ೀ ರಾಮ ವಾಣ ೀ |
ಮುಖೇ ಬೋಲತಾ ಖ್ಯಾತಿ ಝಾಲೀ ಪುರಾಣ ೀ ||95||

ಗಾತ್ರ ಬಿಡುತಲಿ ಪುತ್ರ ನಾರಾಯಣನನು |
ಮಾತ್ರ ನೆನೆದಜಮಿಳ ಮುಕ್ತಿ ಹೊಂದಿಹನು ||
ಗಿಳಿಯ ನೆವದಲಿ ವೇಶ್ಯೆ ವಿಠಲನ ನೆನೆದು |
ಇಳೆಯೊಳಗೆ ಮುಕ್ತಿ ಪಡೆದಿಹ ಖ್ಯಾತಿಯಹುದು ||95||

ಪಾಪಿಷ್ಟನಾದ ಅಜಾಮಿಳನು120ಮಗನ ಮೋಹದಿಂದ ‘ನಾರಾಯಣ’ನೆಂದು ನುಡಿದರೂ, ಆ ನಾಮೋಚ್ಚರಣೆಯ ಮಾತ್ರದಿಂದಲೇ ಮುಕ್ತಿಪಡೆದನು! ವೇಶ್ಯಯು ಗಿಳಿಗೆ ಕಲಿಸುವದಕ್ಕಾಗಿ ‘ರಾಮರಾಮ’ ನೆಂದು ಅಂದರೂ ಅಷ್ಟರಿಂದಲೇ ಪುರಾಣಪ್ರಸಿದ್ಧತೆ ಹೊಂದಿದಳು.

ಮಹಾಭP À್ತಪ್ರಲ್ಹಾದ ಹಾ ದೈತ್ಯP Àೂಳೀ |
ಜಪೇ ರಾಮನಾಮಾವಳೀ ನಿತ್ಯಕಾಳೀ ||
ಪಿತಾ ಪಾಪರೂಪೂ ತಂi ÀiÁ ದೇಖವೇನಾ |
ಜನೀ ದೈತ್ಯ ತೋ ನಾಮ ಮೂಖೇ ಮ್ಹಣೇನಾ ||96||

ದನುಜ ಕುಲದಲಿ ಬಂದ ಭಕ್ತ ಪ್ರಹ್ಲಾದ |
ಅನುದಿನವು ರಾಮ ಧ್ಯಾನದಿ ನಿರತನಾದ ||

201 ಅಜಾಮಿಳನ P Àಥೆ – ಅಜಾಮಿಳನೆಂಬ ಬ್ರಾಹ್ಮಣನು ದುರಾಚಾರಿಯಾಗಿ ಚಾಂಡಾಲ ಸ್ತ್ರೀಯಿಂದ 10 ಮಕ್ಕಳನ್ನು ಪಡೆದನು. ಅವರಲ್ಲಿ ಕಡೆಯವನಾದ ನಾರಾಯಣನ ಮೇಲೆ ಅತಿಶಯ ಪ್ರೀತಿಯಿತ್ತು. ಅಜಾಮಿಳನು ಮಗನನ್ನು ಕರೆಯುವ ಮೊದಲಾದ ಕಾರಣದಿಂದ ಮೇಲಿಂದ ಮೇಲೆ ‘ನಾರಾಯಣ’ನೆಂದು ಅನ್ನುತ್ತಿದ್ದನು ಮತ್ತು ಮರಣ ಸಮಯಕ್ಕೆ ಸಹ ‘ನಾರಾಯಣಾ’ ಎಂದು ಉಚ್ಚರಿಸಿಯೇ ಪ್ರಾಣ ಬಿಟ್ಟನು! ಆಗ ವಿಷ್ಣುದೂತರು ಬಂದು, ಅಜಾಮಿಳನ ಘೋರ ಪಾಪಕೃತ್ಯಗಳ ಫಲವಾಗಿ ಅವನನ್ನು ಯಮಲೋಕಕ್ಕೆ ಒಯ್ಯಲು ಬಂದ ಯಮದೂತರನ್ನು ಓಡಿಸಿ, ಅಜಾಮಿಳನನ್ನು ವೈಕುಂಠಕ್ಕೆ ಕರೆದೊಯ್ದರು!

ಅವನ ಪಿತ ಶ್ರೀಪತಿಯ ನಾಮವನು ಹಗೆದು |
ಭುವಿಯೊಳಪಕೀರ್ತಿಗಳ ಗಳಿಸಿದನು ಬಗೆದು ||96||

ರಾಕ್ಷಸಕುಲದಲ್ಲಿ ಹುಟ್ಟಿದ ಹರಿಭಕ್ತ ಪ್ರಲ್ಹಾದನು*21 ಸರ್ವದಾ ರಾಮನಾಮ ಜಪಿಸುತ್ತಿದ್ದನು; ಆದರೆ ಅವನ ಪಾಪಿಷ್ಟ ತಂದೆಗೆ ಅದು ತಡೆಯದಾಯಿತು! ಆ ಹಿರಣ್ಯ ಕಶ್ಯಪಾಸುರನು ಬಾಯಿಯಲ್ಲಿ ಎಂದಿಗೂ ತಪ್ಪಿ ಸಹ ನಾಮ ಉಚ್ಚರಿಸಲಿಲ್ಲ!!

ಮುಖೀ ನಾಮ ನಾಂಹೀ ತಂi ÀiÁ ಮುಕ್ತಿಕೈಚೀ |
ಅಹಂತಾ ಗುಣೇ ಯಾತನಾ ತೇ ಫುಕಾಚೀ ||
ಫುಡೇ ಅಂತ ಯೇಯೀಲ ತೋ ದೈನ್ಯವಾಣಾ |
ಮ್ಹಣೋನೀ ಮ್ಹಣಾರೇ ಮ್ಹಣಾದೇವರಾಣಾ ||97||

ಮುಖದಲ್ಲಿ ರಾಮ ಎನದಿರೆ ಮುಕ್ತಿ ಹೇಗೆ |
ಸಖನಹಂಕಾರ ವಿರೆ ಯಾತನೆಯ ಬೇಗೆ ||
ಮೃತ್ಯು ಬರುತಿಹುದೋಡಿ ಬೆಂಬತ್ತಿದಂತೆ |
ನಿತ್ಯ ರಾಮನ ಭಜಿಸುವವಗೇಕೆ ಚಿಂತೆ ||97||

ನಾಲಿಗೆಯಲ್ಲಿ ನಾಮಸ್ಮರಣೆ ಇಲ್ಲದವನಿಗೆ ಮುಕ್ತಿಯೆಲ್ಲಿಯದು? ಅಹಂಕಾರ ಮೂಲಕವಾಗಿ ಅವನು ಸುಮ್ಮನೆ ದುಃಖ ಭೋಗಿಸುವನಲ್ಲದೆ, ಕೊನೆಗೆ ಮರಣ ಕಾಲಕ್ಕೆ ಕರುಣಾಜನಕ ಸ್ಥಿತಿಯಾಗುತ್ತದೆ. ಅದಕ್ಕಾಗಿ ದೇಶದೇವೇಶ ರಾಮನೆಂದು ಅನ್ನಿರಪ್ಪ ಅನ್ನಿರಿ!

ಹರೀನಾಮ ನೇಮ¸ À್ತ ಪಾಷಾಣ ತಾರೀ |
ಬಹೂ ತಾರೀಲೇ ಮಾನವ ದೇಹಧಾರೀ ||
ತಂi ÀiÁ ರಾಮನಾಮೀ ಸದಾ ಜೋ ವಿಕಲ್ಪೀ |
ವದೇನಾ P Àದಾ ಜೀವ ತೋ ಪಾಪರೂಪೀ ||98||

ನಾಮ ಬಲದಿಂದ ಪಾಷಾಣ ತೇಲಿಹುದು |
ಭೂಮಿಯಲಿ ಭಕುತರಿಗೆ ಬಂಧ ಕಡಿದಿಹುದು ||
ಭಜಿಸದಿರೆ ನಾಮವನು ಮದ ಶಂಕೆಯಿಂದ |
ತ್ಯಜಿಸುವುದು ಪಾಪಿ ಜತೆಯನು ಜತನದಿಂದ ||98||

ರಾಮನಾಮವು ಕಲ್ಲನ್ನು ಸಹ ನಿಶ್ಚಿತವಾಗಿ ದಾಟಿಸುವದೆಂದ ಮೇಲೆ ಅದರಿಂದ ಮನುಷ್ಯರೆಷ್ಟೋ ಉದ್ಧಾರವಾಗಿರುವದೇನು ಅಚ್ಚರಿಯಲ್ಲ! ಆದರೆ ಅಂತಹ ಮಹಿಮಾಶಾಲಿ ರಾಮನಾಮದಲ್ಲಿಯೂ ಯಾವಾಗಲೂ ಸಂಶಯ ತಕ್ಕೊಳ್ಳುತ್ತ ನಾಮ ಉಚ್ಚರಿಸಲಾರದವನು ಕೇವಲ ಪಾಪಿಷ್ಠನೇ ಸೈ!

ಜಗೀ ಧನ್ಯ ವಾರಣಾಸೀ ಪುಣ್ಯರಾಶೀ |
ತಯೇ ಮಾಜಿ ಜಾತಾ ಗತೀ ಪೂರ್ವಜಾಸೀ ||
ಮುಖೇ ರಾಮನಾಮಾವಳೀ ನಿತ್ಯಕಾಳೀ |
ಜೀವಾ ಹೀತ ಸಾಂಗೇ ಸದಾ ಚಂದ್ರಮೌಳೀ ||99||

ತೀರ್ಥಂಗಳಲಿ ಪುಣ್ಯಕಾಶಿ ಬಲು ಹಿರಿದು |
ಯಾತ್ರೆಯಲಿ ಪಿತರಿಂಗೆ ಮೋಕ್ಷ ಲಭಿಸುವುದು ||
ನಾಮ ವುಚ್ಚರಿಸೆ ಮುಖದಲಿ ನಿತ್ಯಕಾಲ |
ಪಾಮರಗೆ ಹಿತವೆಂದ ಮೂಲೋಕ ಪಾಲ ||99||

ಜಗತ್ತಿನಲ್ಲಿ ಅತ್ಯಂತ ಪುಣ್ಯಮಯವಾದ ಕಾಶೀ ಕ್ಷೇತ್ರವಿರುವದು, ಅಲ್ಲಿಗೆ ಹೋದರೆ ಪೂರ್ವಜರ ಉದ್ಧಾರವಾಗುತ್ತದೆ, ಸರಿ ! ಆದರೆ ಕಾಶಿಯ ಅಧಿದೈವತನಾದ ಶಿವನೇ ಜೀವರಿಗೆ “ಸರ್ವದಾ ಮುಖದಿಂದ ರಾಮನಾಮ ಸ್ಮರಿಸಿರೆಂದು ಹಿತೋಪದೇಶ ಹೇಳುತ್ತಿರುವನು!

ಯೇಥಾಸಾಂಗ ರೇ P Àರ್ಮ ತೇ ಹೀ ಘಡೇನಾ |
ಘಡೇ P Àರ್ಮ ತೇ ಪುಣ್ಯ ಗಾಂಠೀ ಪಡೇನಾ ||
ದಂi ÀiÁ ಪಾಹತಾ ಸರ್ವ ಭೂತಿ ಅಸೇನಾ |
ಫುಕಾಚೇ ಮುಖಿ ನಾಮ ತೇ ಹೀ ವಸೇನಾ ||100||

ವೇದಕನು ಗುಣಕರ್ಮವನು ಮಾಡಲಿಲ್ಲ |
ಸಾಧಿಸಿದ ಕರ್ಮಫಲ ವೆಂತಾರು ಬಲ್ಲ ||
ಪ್ರಾಣ ಮಾತ್ರದಲಿ ದಯೆಯನು ತೋರಲಿಲ್ಲ |
ಹಾನಿ ಹರಣಕೆ ಹರಿಯನೀ ಭಜಿಸಲಿಲ್ಲ ||100||

ಸಾಂಗೋಪಾಂಗವಾಗಿ ಕರ್ಮವೂ ಘಡಿಸುವದಿಲ್ಲ, ಏನೂ ಘಡಿಸಿದ ಕರ್ಮದ ಪುಣ್ಯವೂ ಪದರಿಗೆ ಬೀಳುವದಿಲ್ಲ ಹಾಗೂ ಪ್ರಾಣ ಮಾತ್ರರಲ್ಲಿ ದಯೆಯೂ ಇರುವದಿಲ್ಲ! ಹೀಗೆಂದು ಪುಕ್ಕಟೆಯಾದ ನಾಮಸ್ಮರಣೆಯಾದರೂ ಮಾಡಬೇಕಲ್ಲ, ಅದೂ ಇಲ್ಲ!

ಜಯಾ ನಾವಡೇ ನಾಮ ತ್ಯಾಯೇ ಮ ಚಾಚೀ |
ವಿಕಲ್ಪೇ ಉಠೇ ತP ರ್À ತ್ಯಾ ನP ರ್À ಚೀ ಚೀ ||
ಮ್ಹಣೋನೀ ಅತೀ ಆದರೆ ನಾಮ ಘ್ಯಾವೇ |
ಮುಖೇ ಬೋಲತಾ ದೋಷ ಜಾತೀ ¸ À್ವಭಾವೇ ||101||

ನಾಮ ಭಕ್ತಿಯ ತೊರೆಯೆ ಯಾತನೆಯ ಭೋಗೆ |
ನಾಮ ವಾದಿಗೆ ಕಾದಿಹುದು ನರಕ ಭಾಗ ||
ಆದರದಿ ನಾಮವನು ಜಪಿಸು ಮುಖದಿಂದ |
ಖೇದ ಪಾಪಗಳಿಳಿದು ಲಭ್ಯ ಸುಖವೆಂದ ||101||

ನಾಮಸ್ಮರಣೆ ಸೇರದವನನ್ನು ಯಮನು ಗಾಸಿ ಮಾಡುವನು ! ಹಾಗೆ ದುರ್ಭಾವದಿಂದ ವಾದಿಸುವವನಿಗೆ ನರಕವೇ ಮೀಸರು !! ಛೀ ಛೀ ಅವನಿಗೆ !! ಈ ಸಂಗತಿಯನ್ನು ಮನದಂದು, ಪ್ರೇಮಪೂರ್ವಕವಾಗಿ ನಾಮ ತಕ್ಕೊಳ್ಳಬೇಕು; ನಾಮವನ್ನು ಉಚ್ಚರಿಸಿದರೆ ದೋಷಗಳು ತಾವಾಗಿಯೇ ತೊಲಗುವವು.

4. ಹರಿಕೀರ್ತನೆ ಇತ್ಯಾದಿ ¸ Àಗುಣ ಭಕ್ತಿ (ಶ್ಲೋಕ 102-135)
[ಸಗುಣ ಭಕ್ತಿ (ಶ್ಲೋಕ 102-107) ವಾದ ಮಾಡಬೇಡ (ಶ್ಲೋಕ 108-115), ದೇವನು ಭಕ್ತ ರಕ್ಷಕನಾಗಿದ್ದಾನೆ (ಶ್ಲೋಕ 106-127)- ಸಜ್ಜನ ಸಂಗತಿ (128-135)]

ಅತೀ ಲೀನತಾ ಸರ್ವಭಾವೇ ಸ್ವಭಾವೇ |
ಜನಾ ಸಜ್ಜನಾಲಾಗಿ ಸಂತೋಪವಾವೇ ||
ದೇಹೇ ಕಾರಣ ೀ ಸರ್ವ ಲಾವೀತ ಜಾವೇ |
ಸಗೂಣ ೀ ಅತೀ ಆದರೇಸೀ ಭಜಾವೇ ||102||

ವಿನಯದಲಿ ಮಾಡು ಲೋಕದ ಸೇವೆಯನ್ನು |
ದಿನದಿನವು ಗಳಿಸು ಸಂತರ ಪ್ರೀತಿಯನ್ನು ||
ಪರ ಕಾರ್ಯದಲಿ ದೇಹ ದಂಡಿಸಲು ಬೇಕು |
ವರ ಗುಣೋಪಾಸನೆಯ ಸ್ವೀಕರಿಸಬೇಕು ||102||

ಸಹಗುಣವಾದ ಅತ್ಯಂತ ನಮ್ರತೆಯಿಂದ ಜನತೆಯನ್ನು ಹಾಗೂ ವಿಶೇಷತಃ ಸತ್ಪುರುಷರನ್ನು ಆನಂದಗೊಳಿಸಬೇಕು ಮತ್ತು ಬಹು ಪ್ರೇಮದಿಂದ ಸಗುಣ ಭಜನೆ ಮಾಡುತ್ತ ಶರೀರವನ್ನು ಸಾರ್ಥಕಗೊಳಿಸಬೇಕು.

ಹರೀ ಕೀರ್ತನೀ ಪ್ರೀತಿ ರಾಮೀ ಧರಾವೀ |
ದೇಹೇಬುದ್ಧಿ ನಿರೂಪಣೇ ವೀಸರಾವೀ ||
ಪರದ್ರವ್ಯ ಆಣ ೀಕ ಕಾಂತಾ ಪರಾವೀ |
ಯದರ್ಥೀ ಮನಾ ಸಾಂಡಿ ಜೀವೀ P Àರಾವೀ ||103||

ಹರಿಯ ಕೀರ್ತನೆಯಲ್ಲಿ ಪ್ರೇಮ ನೆಲೆಸಿರಲಿ |
ಪರ ಬೋಧದಲಿ ದೇಹ ಬುದ್ಧಿಯಳಿದಿರಲಿ |
ಪರ ದ್ರವ್ಯ ಪರನಾರಿ ಮೋಹ ಬರದಿರಲಿ |
ವರ ನಾಮ ಸಾಧನೆಯು ಬಿಡದೆ ನಡೆದಿರಲಿ ||103||

ಮನವೇ, ಕೀರ್ತನದ ವೇಳೆಗೆ ರಾಮನಲ್ಲಿ ಭಕ್ತಿಯಿಡಬೇಕು ಹಾಗೂ ನಿರೂಪಣ ಸಮಯದಲ್ಲಿ ದೇಹಬುದ್ದಿಯನ್ನು ಮರೆಯಬೇಕು. ಇದಲ್ಲದೆ ಪರದ್ರವ್ಯ – ಪರಸ್ತ್ರೀಯನ್ನು ಮುನಃಪೂರ್ವಕ ತಯಾಗ ಮಾಡುವದವಶ್ಯವು.

ಕ್ರಿಯೇವೀಣ ನಾನಾಪರೀ ಬೋಲಿಜೇತೇ |
ಪರೀ ಚಿತ್ತ ದುಶ್ಚೀತ ತೇ ಲಾಜವೀತೇ ||
ಮನಾ P Àಲ್ಪನಾ ಧೀಟ ಸೈರಾಟ ಧಾವೇ |
ತಂi ÀiÁ ಮಾನವಾ ದೇವ ಕೈಸೇನಿ ಪಾವೇ ||104||

ಬೋಧಿಸಿದ ಪರಿತಾನೆ ನಡೆಯದವ ಮೂರ್ಖ |
ಶೋಧಿಸುತ ದುರ್ನಡತೆ ತಿದ್ದದವ ಮೂರ್ಖ ||
ಕಲ್ಪನೆಯ ರಾಜ್ಯದಲಿ ಮುಳುಗಿರಲು ನೀನು |
ಕಲ್ಪಾಂತ ಕಳೆದಿರುವೆ ದೇವ ಸಿಗ ತಾನು ||104||

ಆಚರಣೆಯಿಲ್ಲದೆ ಸುಮ್ಮನೇ ಜ್ಞಾನ ಹೇಳುತ್ತಾರೆ ! ಆದರೆ ಅವರ ವಿಷಯಾಸೆಯೇ ಅವರನ್ನು ಲಜ್ಜೆಗೀಡು ಮಾಡುವದು !! ಮನವೇ, ತೀವ್ರ ಓಟದ ಕಲ್ಪನೆಯ ಮನುಷ್ಯನಿಗೆ ಈಶಪ್ರಾಪ್ತಿ ಹೇಗೆ ಸಾಧ್ಯವು?

ವಿವೇಕೇ ಕ್ರಿಯಾ ಆಪುಲೀ ಪಾಲಟಾವೀ |
ಅತೀ ಆದರೇ ಶುದ್ಧಕ್ರಿಯಾ ಧರಾವೀ ||
ಜನೀ ಬೋಲಣ್ಯಾಸಾರಿಖೇ ಚಾಲ ಬಾಪಾ |
ಮನಾ P Àಲ್ಪನಾ ಸೋಡಿ ಸಂಸಾರತಾಪಾ ||105||

ತಪ್ಪು ನಡತೆಯ ತಿದ್ದು ಸುವಿವೇಕದಿಂದ |
ಒಪ್ಪಿ ಧರ್ಮದ ಮಾರ್ಗ ಹಿಡಿ ಪ್ರೀತಿಯಿಂದ ||
ನುಡಿವಂತೆ ನಿರುತ ನೀ ನಡೆದು ನೋಡಯ್ಯ |
ಕಡಿಯುವುದು ಸಂಸಾರ ದುಃಖ ನಿನಗಯ್ಯ ||105||

ಮನವೇ, ವಿಚಾರದಿಂದ ನಿನ್ನ ದುರ್ನಡತೆಯನ್ನು ಪಲ್ಲಟಿಸು ಹಾಗೂ ಒಳ್ಳೇ ಪ್ರೀತಿಯಿಂದ ಸದ್ವರ್ತನೆ ಅವಲಂಬಿಸು. ನೀನು ಜನರಲ್ಲಿ ಆಡಿದಂತೆಯೇ ನಡೆಯಪ್ಪಾ!

ಪ್ರಪಂಚ ದುಃಖಕ್ಕೆ ಕಾರಣವಾದ ಕಲ್ಪನೆಯನ್ನು ಕಳೆಯಪ್ಪಾ||
ಬರೀ ಸ್ನಾನ¸ Àಂಧ್ಯಾ P Àರೀ ಏP Àನಿಷ್ಠಾ |
ವಿವೇಕೇ ಮನಾ ಅವರೀ ಸ್ಥಾನಭ್ರಷ್ಟಾ ||ದಂi ÀiÁ ಸರ್ವಭೂತೀ ಜಯಾ ಮಾನವಾಲಾ |
ಸದಾ ಪ್ರೇಮಳೂ ಭಕ್ತಿಭಾವೇ ನಿವಾಲಾ*22 ||106||

ನಿಷ್ಟೆಯಿಂದಲೆ ಸ್ನಾನ ಸಂಧ್ಯಾದಿ ನೇಮ |
ಭ್ರಷ್ಟಮನ ತಿದ್ದಲಿಕೆ ಸುವಿವೇಕ ನಾಮ ||
ಸರ್ವತ್ರ ದಯೆ ತೋರೆ ಕಲಿಯತನದಿಂದ |
ಸರ್ವಬಗೆ ಶಾಂತಿ ಪ್ರೇಮಳ ನಡತೆಯಿಂದ ||106||

ಸ್ನಾನಸಂಧ್ಯಾದಿ ನಿತ್ಯ ಕರ್ಮಗಳನ್ನು ಶ್ರದ್ಧೆಯಿಂದ ಮಾಡುವವನು ಆತ್ಮಸ್ವರೂಪದಿಂದ ಚ್ಯುತವಾದ ಮನವನ್ನು ಆವರಿಸುವವನು, ಪ್ರಾಣ ಮಾತ್ರರಲ್ಲಿ ದಯೆಯುಳ್ಳವನು ಹಾಗೂ ಪ್ರೇಮಸೀಲನಾದವನೇ ಭಾವಭಕ್ತಿಯಿಂದ ಶಾಂತಿ ಪಡೆಯುವನು.

ಮನಾ ಕೋಪ ಅರೋಪಣಾ ತೇ ನಸಾವೀ |
ಮನಾ ಬುದ್ಧಿ ಹೇ ಸಾಧು¸ Àಂಗೀ ವಸಾವೀ ||
ಮನಾ ನµ À್ಟ ಚಾಂಡಾಳ ತೋ ಸಂಗ ತ್ಯಾಗಿ |
ಮನಾ ಹೋಯಿ ರೇ ಮೋP À್ಷಭಾಗೀ ವಿಭಾಗೀ ||107||

ಸನ್ಮನವೆ ಕೋಪ ಕಾಸ್ಪದ ನಿನಗೆ ಸಲ್ಲ |
ಸನ್ಮತಿಗಳೊಡಗೂಡಿ ಕಳೆ ಕಾಲವೆಲ್ಲ ||
ಪತನ ಕಾರಣ ದುಷ್ಟ ಸಹವಾಸ ತ್ಯಜಿಸು |
ಯತನದಲಿ ಮೋಕ್ಷವನು ಸಾಧಿಸಲು ಬಯಸು ||107||

ಮನವೇ, ನಿನ್ನಲ್ಲಿ ಸಿಟ್ಟು – ದೋಷವಿರಬಾರದು, ಆದರೆ ಸಂತಸಹವಾಸದಲ್ಲಿ ನಿನ್ನ ಪ್ರೀತಿಯಿರಬೇಕು. ಮನಾ, ನೀಚ ದುಃಸಂಗತಿಯನ್ನು ತ್ಯಜಿಸಿಬಿಟ್ಟು ಮುಕ್ತಿಗೆ ಅಧಿಕಾರಿಯಾಗಪ್ಪ!

ಸದಾ ಸರ್ವದಾ ಸಜ್ಜನಾಚೇ ನಿ ಯೋಗೇ
ಕ್ರಿಯಾ ಪಾಲಟೀ ಭಕ್ತಿಭಾವಾರ್ಥ ಲಾಗೇ ||
ಕ್ರಿಯೇವೀಣ ವಾಚಾಳತಾ ತೇನಿವಾರೀ |
ತುಟೇ ವಾದ ಸಂವಾದ ತೋ ಹೀತಕಾರೀ⧫ ||108||

ತಪ್ಪು ಮಾರ್ಗವನು ಬಿಡು ಸತ್ಸಂಗದಿಂದ |
ಒಪ್ಪು ಮಾರ್ಗವ ಹಿಡಿಯೆ ಲಭ್ಯವಾನಂದ ||
ಕೃತ್ಯವಿಲ್ಲದ ನುಡಿಯನರ್ಥಗಳ ದಾರಿ |
ಸತ್ಯ ತೋರುವ ವಾದ ನಿತ್ಯ ಹಿತಕಾರಿ ||108||

ಮನವೇ, ಸತತವಾದ ಸಜ್ಜನಸಂಗದಿಂದ ನಡತೆ ಪರಿವರ್ತನವಾಗಿ ಭಕ್ತಿಭಾವ ಉದಿಸುವದು; ಅದಕ್ಕಾಗಿ ನೀನು ನಡೆಯಿಲ್ಲದ ಬರೇ ಮಾತುಗಾರಿಕೆ ಬಿಟ್ಟು ಕೊಟ್ಟು ಎಲ್ಲಾ ಸಂಶಯವನ್ನು ಕಡಿಯುವ ಜಿಜ್ಞಾಸೆಯ ಸಂಭಾಷಣೆ ಮಾಡುವದೇ ಹಿತಕರವು!

ಜನೀ ವಾದ ವೇವಾದ ಸೊಡೂನಿ ದ್ಯಾವಾ |
ಜನೀ ಸೂಖ¸ Àಂವಾದ ಸೂಖೇ P Àರವಾ
ಜಗೀ ತೋಚಿ ತೋ ಶೋP Àಸಂತಾಪಹಾರಿ |
ತುಟೇ ವಾದ ಸಂವಾದ ತೋ ಹೀತಕಾರಿ ||109||

ಪಾಖಂಡ ವಾದವನು ಬಿಟ್ಟು ಬಿಡು ನೀನು |
ಸೌಖ್ಯತರ ಸಂವಾದವಿರೆ ಕೇಳಲೇನು ||
ತಥ್ಯ ತಿಳಿಸುವ ವಾದ ಮನ ದುಃಖ ಹಾರಿ |
ಸತ್ಯ ತೋರುವ ವಾದ ನಿತ್ಯ ಹಿತಕಾರೀ ||109||

ಜನರಲ್ಲಿ ಯಾರ ಸಂಗಡವಾದರೂ ವಾದವಿವಾದ ಮಾಡತಕ್ಕದ್ದಲ್ಲ, ಆದರೆ ಅವರೊಡನೆ ಸುಖಸಂಭಾಷಣೆಯನ್ನು ಬೇಕಾದಷ್ಟು ಮಾಡಬಹುದು! ಯಾಕೆಂದರೆ ಅಂತಹ ಪ್ರೇಮಪೂರ್ಣ ಚರ್ಚೆಯಿಂದಲೇ ದುಃಖ-ದುಮ್ಮಾನ ನಾಶವಾಗುವದು. ಸಾರಾಂಶ, ಎಲ್ಲ ಸಂಶಯ ಕಡಿಯುವ ಜಿಜ್ಞಾಸೆಯ ಸಂಭಾಷಣೆ ಮಾಡುವದೇ ಹಿತಕರವು.

ತುಟೇ ವಾದ ಸಂವಾದ ತ್ಯಾತೇ ಮ್ಹಣಾವೇ |
ವಿವೇಕೇ ಅಹಂಭಾವ ಯಾತೇ ಜಿಣಾವೇ ||
ಅಹಂತಾಗುಣೇ ವಾದ ನಾನಾ ವಿಕಾರೀ |
ತುಟೇ ವಾದ ಸಂವಾದ ತೋ ಹೀತಕಾರೀ ||110||

ಅಹಮಳಿಸುತ ವಿವೇಕವನು ತರುವ ವಾದ |
ಇಡದಲ್ಲಿ ಪೆಸರಾಂತ ಸುಖದ ಸಂವಾದ ||
ನಿತ್ಯಹಂಕಾರ ವಾದವು ಖೇದಕಾರಿ |
ಸತ್ಯ ತೋರುವ ವಾದ ನಿತ್ಯ ಹಿತಕಾರೀ ||110||

ನಾ-ನಿನೇಂದು ವಾದಿಸುವದು ಅಳಿದಾಗಲೇ ಅದು ಸಂವಾದವೆನಿಸುವದು. ಅಹಂಕಾರದಿಂದಲೇ ಕ್ರೋಧಾದಿ ವಿಕಾರಯುಕ್ತವಾದ ಬೆಳೆಯುವದರಿಂದ ವಿವೇಕದಿಂದ ‘ನಾ’ ನನ್ನು ಜಯಿಸಬೇಕು. ಒಟ್ಟಿಗೆ ಎಲ್ಲ ವಾದವಳಿದು ಮಾಡುವ ಜಿಜ್ಞಾಸೆಯ ಸಂಭಾಷಣೆಯೇ ಹಿತಕರವು!

ಹಿತಕಾರಣೇ ಬೋಲಣೇ ಸತ್ಯ ಆಹೇ |
ಹಿತಾಕಾರಣೇ ¸ Àರ್ವ ಶೋಧೂನಿ ಪಾಹೇ ||
ಹಿತಾಕಾರಣೇ ಬಂಡ ಪಾಖಾಂಡ ವಾರೀ |
ತುಟೇ ವಾದ ಸಂವಾದ ತೋ ಹೀತಕಾರೀ ||111||

ಹಿತಕಾಗಿ ಹೇಳುವೆನು ಹುದುಗಿರುವ ಸತ್ಯ |
ಹಿತದ ಹಂಬಲ ವಿರಲು ಹುಡುಕುವುದು ನಿತ್ಯ ||
ಸತ್ಯದರ್ಶನಕೆ ಪಾಖಂಡ ನುಡಿ ಮಾರಿ |
ಸತ್ಯ ತೋರುವ ವಾದ ನಿತ್ಯ ಹಿತಕಾರೀ ||111||

ಸ್ವಹಿತ ಸಾಧಿಸುವದಕ್ಕಾಗಿ ಮಾತಾಡುವದು ಅವಶ್ಯವೇ ಅದೆ. ಸ್ವಹಿತದ ಉದ್ದೇಶದಿಂದ ಎಲ್ಲವನ್ನೂ ಸೂಕ್ಷ್ಮ ವಿಚಾರ ಮಾಡಿ ದುಷ್ಟ ನಾಸ್ತಿಕತೆಯನ್ನು ನಿರಸನಮಾಡು. ಸಾರಾಂಶ. ಎಲ್ಲವಾದವಳಿಯುವಂತೆ ಸಂಭಾಷಣೆ ಮಾಡುವದೇ ಹಿತಕರವು!

ಜನೀ ಸಾಂಗತಾ ಐಕತಾ ಜನ್ಮ ಗೇಲಾ |
ಪರೀ ವಾದವೀವಾದ ತೈಸಾ ಚಿ ಠೇಲಾ ||
ಉಠೇ ಸಂಶಯೋ ವಾದ ಹಾ ದಂಭಭಾರೀ*24 |
ತುಟೇ ವಾದ ಸಂವಾದ ತೋ ಹೀತಕಾರಿ ||112||

ಆಗಿ ಹೋಗಿ ಹರೆಲ್ಲ ಹೇಳಿ ಕೇಳುವರು |
ಈಗ ಸಹ ವಿತಂಡದ ವಾದ ಬಯಸುವರು ||
ಮಿಥ್ಯ ಜನಿಸುವ ವಾದ ಮನದಂಭಕಾರಿ |
ಸತ್ಯ ತೋರುವ ವಾದ ನಿತ್ಯ ಹಿತಕಾರೀ ||112||

ಜನರಲ್ಲಿ ಬರೇ ಹೇಳ ಕೇಳುತ್ತಲೇ ಜನ್ಮ ಕಳೆಯಿತಾದರೂ ಮುಖ್ಯ ವಾದಗ್ರಸ್ತ ವಿಷಯವು ಹಾಗೆ ಉಳಿಯಿತು ! ಬರೇ ಸಂಶಯವನ್ನೇ ಬೆಳಿಸುವ ಚರ್ಚೆಯು ಮಹಾ ದಾಂಭಿಕತನವಿರುತ್ತದೆ ! ಅದಕ್ಕಾಗಿ ಎಲ್ಲ ವಾದವಳಿದು ಜಿಜ್ಞಾಸೆಯ ಸಂಭಾಷಣೆ ಮಾಡುವದೇ ಹಿತಕರವು !

ಜನೀ ಹೀತ ಪಂಡೀತ ಸಾಂಡೀತ ಗೇಲೇ |
ಅಹಂತಾಗುಣೇ ಬ್ರಹ್ಮ ರಾP À್ಷಸ ಝಾಲೇ ||
ತಂi ÀiÁಹೂನಿ ವ್ಯುತ್ಪನ್ನತೋ ಕೋಣ ಆಹೇ |
ಮನಾ ಸರ್ವ ಜಾಣ ೀವ ಸಾಂಡೂನೀ ರಾಹೇ ||113||

ಪಂಡಿತರು ಬಹುಮಂದಿ ಹಾನಿ ಹೊಂದಿಹರು |
ಮೊಂಡತನ ದಹಮಿರಲು ಬ್ರಹ್ಮರಾಕ್ಷಸರು |
ಶಿವನಂತೆ ಯಾರಿಹರು ಸಂಪೂರ್ಣ ಜ್ಞಾನಿ |
ಅವನ ಜ್ಞಾನಕೆ ಬೇಕಹಂಕಾರ ಹಾನಿ ||113||

ಪಂಡಿತರೆನ್ನುವವರು ತಮ್ಮ ನಿಜವಾದ ಕಲ್ಯಾಣವನ್ನು ದುರ್ಲಕ್ಷಿಸಿ, ಅಹಂಕಾರದಿಂದ ಬ್ರಹ್ಮರಾಕ್ಷಸರಾದರು ! ಆ ಪಂಡಿತರಿಗಿಂತಲೂ ಹೆಚ್ಚಿನ ವಿದ್ವತ್ತೆಯಾವನಿಗಿರುವದು? ಆದ್ದರಿಂದ ಮನವೇ ವೃಥಾ ಅಹಂಕಾರವೆಲ್ಲವನ್ನು ತ್ಯಜಿಸು.

ಫುಕಾಚೇ ಮುಖೀ ಬೋಲತಾ ಕಾಯ ವೇಚೇ |
ದಿಸೇಂದೀಸ ಅಭ್ಯಂತರೀ ಗರ್ವ ಸಾಚೇ ||
ಕ್ರಿಯೇವೀಣ ವಾಚಾಳತಾ ವ್ಯರ್ಥ ಆಹೇ |
ವಿಚಾರೇ ತುಝಾ ತೂಚಿ ಶೋಧೂನಿ ಪಾಹೇ ||114||

ಮಾತಿನಲಿ ಜ್ಞಾನ ಬೋಧಿಸಲೇನು ಕಷ್ಟ |
ನೀತಿ ನಡತೆಗಳಿರಲು ಮನಗರ್ವನಷ್ಟ ||
ಮಾತಿಗನುಗುಣ ನಡೆಯದಿರೆ ದೊಡ್ಡ ಹಾನಿ |
ರೀತಿಯಲಿ ಶೋಧಿಸುತ ನಿನ್ನ ತಿಳಿಪ್ರಾಣ ||114||

ಸುಮ್ಮಸುಮ್ಮನೇ ಉಪದೇಶ ಹೇಳಲಿಕ್ಕೆ ಯಾರಿಗೆ ಏನು ಖರ್ಚಾಗುವದು? ಆದರೆ ಅದರಿಂದ ದಿನದಿನಕ್ಕೂ ಗರ್ವ ಮಾತ್ರ ಹೆಚ್ಚಾಗುವದು ! ಸಾರಾಂಶ, ಕ್ರಿಯಾರಹಿತ ಬಡಬಡಿಕೆಯು ಏತಕ್ಕೂ ಬಾರದು!! ಈ ನಿಜ ಸಂಗತಿಯನ್ನು ನಿನ್ನದು ನೀನೇ ವಿಚಾರಮಾಡಿನೋಡು.

ತುಟೇವಾದ ಸಂವಾದ ತೇಥೇ P Àರಾವಾ |
ವಿವೇಕೇ ಅಹಂಭಾವ ಹಾ ಪಾಲಟಾವಾ ||
ಜನೀ ಬೋಲಣ್ಯಾಸಾರಖೇ ಆಚರಾವೇ |
ಕ್ರಿಯಾಪಾಲಟೇ ಭಕ್ತಿಪಂಥೇಚಿ ಜಾವೇ ||115||

ಸುವಿವೇಕದಿಂದಹಂಕೃತಿ ನಾಶ ಮಾಡು |
ಸುವಿವೇಕಿ ಯೊಡಗೂಡಿ ಸಂವಾದ ಹೂಡು ||
ನಡತೆ ಬೋಧಿಸಿದಪರಿ ಶುದ್ದವಾಗಿರಲಿ |
ಅಡಿಗಡಿಗೆ ತಿದ್ದಿ ದೃಢಭಕ್ತಿ ಬೆರತಿರಲಿ ||115||

ಸಾರಾಸಾರ ವಿವೇಕದಿಂದ ಅಹಂಕಾರವನ್ನು ಬಿಟ್ಟು, ಸಂಶಯ ಕಡಿಸುವ ಸತ್ಪುರುಷರಲ್ಲಿಯೇ ಆತ್ಮಹಿತದ ಸಂಭಾಷಣೆ ಮಾಡತಕ್ಕದ್ದು. ಅಲ್ಲದೆ, ಜನರಲ್ಲಿ ತಾನು ಮಾತಾಡಿದಂತೆಯೇ ನಡೆಯುತ್ತ, ಶುದ್ಧ ಕ್ರಿಯೆಯುಳ್ಳವನಾಗಿ ಭಕ್ತಿ ಮಾರ್ಗದಿಂದಲೇ ಹೋಗಬೇಕು.

ಬಹೂ ಪ್ರಾಪಿತಾ P Àಷ್ಟಲಾ ಅಂಬಋೂಷೀ |
ತಂi ÀiÁಚೇ ಸ್ವಯೇ ಶ್ರೀಹರೀ ಜ£ À್ಮ ಸೋಶೀ ||
ದಿಲಾ ಕ್ಷೀರಸಿಂಧೂ ತಂi ÀiÁ ಊಪಮಾನಿ |
ನುಪೇಕ್ಷೀ P Àದಾ ದೇವ ಭಕ್ತಾಭಿಮಾನೀ*25 ||116||

ದುರ್ವಾಸ ಶಾಪಕಂಬರೀಶ ಹೆದರಿರಲು |
ಸರ್ವೇಶನೊಪ್ಪಿದನು ಮಗನಾಗಿ ಬರಲು ||
ಉಪಮನ್ಯುಗೆ ಕ್ಷೀರ ಸಾಗರದ ದಾನಿ |
ಉಪೇಕ್ಷಿಸನು ರಾಮ ಭಕ್ತಾಭಿಮಾನಿ ||116||

ದೂರ್ವಾಸ ಋಷಿಯ ಶಾಪದಿಂದ ಅಂಬರೀಷ ರಾಜನು ವ್ಯಥೆಗೀದಾಗಿರಲು, ಸ್ವತಃ ಶ್ರೀ ವಿಷ್ಣುವೇ ಅವನ ಸಲುವಾಗಿ ಜನ್ಮ ಬೋಗಿಸಿದನು!226ಉಪಮನ್ಯುನಿಗೆ ಕ್ಷೀರ ಸಮುದ್ರವನ್ನೇ ದಯಪಾಲಿಸಿದನು!!327 ಇಂತಹ ಭಕ್ತ ಕೈವಾರಿಯಾದ ದೇವನು ತನ್ನ ಭಕ್ತರನ್ನೆಂದಿಗೂ ಅಲಕ್ಷ ಮಾಡನು!

25* ನುಪೇಕ್ಷೀ ಕದಾ ದೇವ ಭಕ್ತಾಭಿಮಾನೀ: 116-125 (10-ಶ್ಲೋಕ)
262 ಅಂಬರೀಷ ರಾಜನು ಮಹಾ ವಿಷ್ಣುಭಕ್ತನಾಗಿದ್ದನು. ಒಮ್ಮೆ ದೂರ್ವಾಸ ಋಷಿಯು ಅವನಲ್ಲಿಗೆ ಬಂದು, ಬೇಕಂತೇ ಭೋಜನಕ್ಕೆ ತಡಮಾಡಿ, ರಾಜನ ದ್ವಾದಶೀ ವ್ರತವನ್ನು ಕೆಡಿಸಲುದ್ಯುಕ್ತನಾದನು. ರಾಜನು ವೃತದ ಕಾಲ ಮೀರಬಾರದೆಂದು ದೇವರಿಗೆ ನೈವೇದ್ಯ ತೋರಿಸಿ, ತಾನು ತೀರ್ಥದಿಂದ ಪಾರಣ ೀ ಮಾಡಿದನು. ಕೋಪಿಷ್ಠ ಋಷಿಗೆ ಇದು ಸಹನವಾಗದೆ ಒಂದು ಕ್ರತ್ಯೆಯನ್ನು ರಾಜನ ಮೇಲೆ ಬಿಟ್ಟನು. ಆಗ ಅಂಬರೀಷನು ವಿವ್ಹಲನಾಗಿ ಭಗವಂತನಿಗೆ ಮೊರೆಯಿಡಲು, ವಿಷ್ಣುವಿನ ಸುದರ್ಶನ ಚಕ್ರವೇ ಅವನ ರಕ್ಷಣೆಗೆ ಬಂದು ಆ ಕ್ರತ್ಯೆಯನ್ನು ನಾಶಗೊಳಿಸಿದ್ದಲ್ಲದೆ ದುರ್ವಾಸನ ಬೆನ್ನಟ್ಟಿತು! ಋಷಿಯು ತ್ರಾಹಿ, ತ್ರಾಹಿ ಎಂದು ವಿಷ್ಣುವಿನ ಕಡೆಗೆ ಓಡಿದಾಗ “ನಾನು ಭಕ್ತಪರಾಧೀನನು, ಭಕ್ತರಿಗೆ ಮಾಡಿದ ಅಪರಾಧವನ್ನು ಭಕ್ತರೇ ಕ್ಷಮಿಸಬಲ್ಲರು|’’ ಎಂದು ಉದ್ಗರಿಸಿದನು. ಆಗ ದುರ್ವಾಸನು ಪಶ್ಚಾತ್ತಾಪದಿಂದ ಅಂಬರೀಷನಿಗೆ ಶರಣು ಹೋಗಿ ಚಕ್ರದಿಂದ ಬಿಡುಗಡೆಯಾದನು! (ವಿಷ್ಣುವು ಜನ್ಮತಕ್ಕೊಳ್ಳಬೇಕಾದ ಶಾಪವದು?)
273 ಉಪಮನ್ಯುವು ಒಬ್ಬ ಋಷಿಪುತ್ರನು. ಅವನ ತಾಯಿತಂದೆಗಳು ಕೇವಲ ಬಡತನದಲ್ಲಿ ಕಾಲಹರಣ ಮಾಡುತ್ತಿದ್ದುದರಿಂದ ಉಪಮನ್ಯುವು ಹೈನ – ಹಾಲನ್ನು ಎಂದಿಗೂ ಕಂಡಿರಲಿಲ್ಲ. ಅವನು ಒಮ್ಮೆ ತನ್ನ ಮಿತ್ರರೊಡನೆ ಅವರ ಆಶ್ರಮಕ್ಕೆ ಹೋಗಿರಲು, ಅಲ್ಲಿ ಹಾಲು ಕುಡಿಯಲಿಕ್ಕೆ ಕೊಟ್ಟರು. ಉಪಮನ್ಯವು ಮನೆಗೆ ಬಂದು ತಾಯಿಗೆ ಹಾಲು ಕೊಡೆಂದು ಹಟ ಹಿಡಿದನು! ತಾಯಿಯು ದುಃಖಿತಳಾಗಿ ನೀರಿನಲ್ಲಿ ಹಿಟ್ಟು ಕಲಿಸಿ ಅದನ್ನೇ ಹಾಲೆಂದು ಕೊಡಹೋಗಲು ಬಾಲಕನು ಅದು ಬೇರೆಯವರ ಆಶ್ರಮದಲ್ಲಿ ಕುಡಿದಂಥ ಹಾಲು ಅಲ್ಲವೆಂದು ಮತ್ತಿಷ್ಟು ಅಳಹತ್ತಿದನು!!

ಧ್ರುವೂ ಲೇಕರೂ ಲಿಬಾಪುಡೇ ದೈನ್ಯವಾಣೇ |
P Àೃಪಾ ಭಾಕಿತಾ ದೀಧಲೀ ಭೇಟಿ ಜೇಣೇ ||
ಚಿರಂಜೀವ ತಾರಾಂಗಣ ೀ ಪ್ರೇಮಖಾಣ ೀ |
ನುಪೇಕ್ಷೀ P Àದಾ ದೇವ ಭಕ್ತಾಭಿಮಾನೀ ||117||

ದ್ರುವ ದೈನ್ಯದಲಿ ಶ್ರೀಹರಿಯ ನೆನೆಯುತಿರಲಿ |
ದ್ರುವರೂಪ ತೋರಿದನು ಭೇಟಿಯೊದಗಿಸಲು ||
ಲೋಪವಾಗದ ಚಿರಪದವ ನಿತ್ತದಾನಿ |
ಉಪೇಕ್ಷಿಸನು ರಾಮ ಭಕ್ತಾಭಿಮಾನಿ ||117||

ಹೀನ ದೀನನಾದ ಧ್ರುವಕೂಸು ದೇವನ ಕರುಣೆಗಾಗಿ ಪ್ರಾರ್ಥಿಸುತ್ತಿರಲು ನಾರಾಯಣನು ಅದಕ್ಕೆ ಭೆಟ್ಟಿಕೊಟ್ಟನಲ್ಲದೆ, ಆ ತನ್ನ ಪ್ರೇಮದ ಖಣ ಗೆ ತಾರೆಗಳ ಮಂಡಲದಲ್ಲಿ ಶಾಶ್ವತ ಸ್ಥಾನ ಕೊಟ್ಟನು!428ಇಂತಹ ಭಕ್ತ ಕೈವಾರಿ ಯಾದ ದೇವನು ತನ್ನ ಭಕ್ತರನ್ನೆಂದಿಗೂ ಅಲಕ್ಷಮಾಡನು !
ತಾಯಿಯು ಉಪಮನ್ಯುವಿಗೆ – “ಕಂದಾ, ಹರಿಭಕ್ತಿ ಮಾಡಿ, ಅವನಿಂದ ಏನು ಬೇಕಾದುದನ್ನು ಪಡೆಯಬಹುದು!’’ ಎಂದು ಹೇಳಲು, ಉಪಮನ್ಯು ಬಾಲಕನು ದೃಢನಿಷ್ಠೆಯಿಂದ ವಿಷ್ಣುವಿನ ಧ್ಯಾನ ಮಾಡಿದನು. ಹಾಗೂ ವಿಷ್ಣುವನ್ನು ಒಲಿಸಿಕೊಂಡು ಕ್ಷೀರಸಾಗರವನ್ನೇ ಪಡೆದನು!À
284 ಉತ್ತಾನಪಾದ ರಾಜನಿಗೆ ಸುನೀತಿ, ಸುರುಚಿ ಎಂಬ ಇಬ್ಬರು ರಾಣ ಯರಿದ್ದರು. ಕಾಲಕ್ರಮೇಣದಿಂದ ಈರ್ವರಿಗೂ ಪುತ್ರರಾಗಲು ಹಿರಿಯಳ ಮಗನಿಗೆ ಧ್ರುವನೆಂತಲೂ ಕಿರಿಯಳ ಮಗನಿಗೆ ಉತ್ತಮನೆಂತಲೂ ಕರೆದರು. ಆದರೆ ರಾಜನು ಚಿಕ್ಕವಳಾದ ಸುರುಚಿಯನ್ನೇ ಪ್ರೀತಿಸುತ್ತ, ಅವಳ ಅಸೂಯಾಪರ ಬೋಧನೆಯಂತೆ ಸುನೀತಿಯನ್ನು ಮಗುವಿನೊಡನೆ ದೂರವಿಟ್ಟನು. ಧ್ರುವನು 5- 6 ವರ್ಷದವನಾಗಿರಲು ತಾಯಿಗೆ ತನ್ನ ತಂದೆ ಯಾರೆಂದು ಕೇಳಲು, ಸುನೀತಿಯು “ಈ ದೇಶವನ್ನಾಳುವ ರಾಜನು ನಿನ್ನ ತಂದೆ”ಯೆಂದು ಉತ್ತರ ಕೊಟ್ಟಳು. ಧ್ರುವನು ಹರ್ಷಿತನಾಗಿ ಅರಮನೆಗೆ ಹೋಗಿ ಪ್ರೀತಿಯಿಂದ ತಂದೆಯ ತೊಡೆಯ ಮೇಲೇರಿದನು. ರಾಜನು ತಾನಾಗೀ ಬಳಿಗೆ ಬಂದ ಮಗನನ್ನು ಕಂಡು ಮುದ್ದಿಸುತ್ತಿರಲು, ಸುರುಚಿಯು ಕ್ರೋಧಾವೇಶದಿಂದ ಧ್ರುವನನ್ನು ಒಡೆದು ನೆಲಕ್ಕೆ ಕೆಡವಿ, ತನ್ನ ಮಗನಾದ ಉತ್ತಮನಿಗೆ ಮಾತ್ರ ರಾಜನ ಅಂಕಾರೋಹಣದ ಭಾಗ್ಯವಿದೆಯೆಂದು ಹೀಯಾಳಿಸಿ ನುಡಿದಳು! ಅಸಹಾಯಕನಾಗಿ ರಾಜನಿಗೆ ಏನನ್ನೂ ಮಾಡಲಾಗಲಿಲ್ಲ.
ಧ್ರುವನು ಅಳುತ್ತಳುತ್ತ ತಾಯಿಯ ಹತ್ತಿರ ಬಂದು, ನಡೆದ ಎಲ್ಲ ಸಂಗತಿಯನ್ನು ಹೇಳಿದನು. ಆಗ ತಾಯಿಯು – “ಮಗನೇ, ನಾವು ಈಶ್ವರನಲ್ಲಿ ಬೇಡಿ ಬಂದಿಲ್ಲ! ಎಂದು ಉದ್ಗರಿಸಿದಳು.
ಧ್ರುವ – ತಾಯೀ, ಈಶ್ವರನೆಲ್ಲಿರುವನು? ನಾವು ಅವನಿಂದ ಈಗಲಾದರೂ ಪಡೆಯೋಣ. ಸುನೀತಿ – ಮಗೂ ಈಶ್ವರನು ಭೆಟ್ಟಿಯಾಗುವದು. ಸುಲಭವಲ್ಲ! ಅವನನ್ನು ಭಕ್ತಿಯಿಂದ ಬಹುಕಾಲ ಧ್ಯಾನಿಸಬೇಕು. ಅಂದರೆ ಮಾತ್ರ ಅವರ ದರ್ಶನ ಕೊಡುವನು.
ಧ್ರುವ – ಹಾಗಾದರೆ ನಾನು ಧ್ಯಾನಮಾಡಿ ದೇವನ ಪ್ರತ್ಯಕ್ಷ ದರ್ಶನ ಮಾಡಿಕೊಳ್ಳುವೆನು.
ಮೇಲಿನಂತೆ ಸಂಭಾಷಣೆಯಾದ ಬಳಿಕ ಧ್ರುವನು ‘ಈಶ್ವರ ದರ್ಶನವಾಗದೆ ತಿರುಗಿ ಬರಲಾರೆ’ನೆಂಬ ದೃಢನಿರ್ಧಾರದಿಂದ ಅಡವಿಗೆ ಹೋದನು. ಅಲ್ಲಿ ನಾರದ ಋಷಿಗಳು ಭೆಟ್ಟಿಯಾಗಿ ‘ಓಂ ನಮೋ ಭಗವತೇ ನಾರಾಯಣಾಯ’ ಎಂಬ ಮಂತ್ರೋಪದೇಶ ಮಾಡಿದರು. ಧ್ರುವನು ಅಚಲ ನಿಷ್ಠೆಯಿಂದ ಆ ನಿರ್ಜನ ವನದಲ್ಲಿ ಗುರೂ ಪದಿಷ್ಟ ಮಂತ್ರದ ಜಪ ಮಾಡ ಹತ್ತಿದನು. ವಿಷ್ಣುವು

ಗಜೇಂದ್ರೂ ಮಹಾಸಂP Àಟೀ ವಾಸ ಪಾಹೇ |
ತಂi ÀiÁಕಾರಣೇ ಶ್ರೀಹರೀ ಧಾವತಾಹೇ ||
ಉಡೀ ಘಾತಲಿ ಜಾಹಲಾ ಜೀವದಾನೀ |
ನುಪೇಕ್ಷೀ P Àದಾ ದೇವ ಭಕ್ತಾಭಿಮಾನೀ ||118||

ಸಂಕಟದಿ ಭಜಿಸುತಿರಲಂದು ಗಜರಾಜ |
ವೆಂಕಟೇಶನು ಬಂದ ಸ್ವೀಕರಿಸಿ ಪೂಜ ||
ಶಾಪ ಕಳೆದನು ಕರುಣದಲಿ ಚಕ್ರಪಾಣ |
ಉಪೇಕ್ಷಿಸನು ರಾಮ ಭಕ್ತಾಭಿಮಾನಿ ||118||

ಗಜೇಂದ್ರನು ಮೊಸಳೆಯಿಂದ ಭಯಂಕರ ವಿಪತ್ತಿನಲ್ಲಿ ಸಿಲುಕಿ, ವಿಮೋಚನೆಗಾಗಿ ಹಂಬಲಿಸುತ್ತಿರಲು, ಶ್ರೀ ಹರಿಯು ಅವನಿಗಾಗಿ ಓಡಿ ಬಂದನು! ದೇವನು ಒಮ್ಮೆಲೆ ಧುಮುಕಿ ಮೊಸಳೆಯನ್ನು ಕೊಂದು ಗಜೇಂದ್ರನಿಗೆ ಪ್ರಾಣದಾನ ಮಾಡಿದನು !529ಇಂತಹ ಭಕ್ತಕೈವಾರಿಯು ತನ್ನ ಭಕ್ತರನ್ನೆಂದಿಗೂ ಅಲಕ್ಷ ಮಾಡನು !
ಅಜಾಮೇಳ ಪಾಪೀ ತಂi ÀiÁ ಅಂತ ಆಲಾ |
ಕೈಪಾಳೂಪಣೇ ತೋ ಜನೀ ಮುP À್ತ ಕೇಲಾ ||
ಅನಾಥಾಸೀ ಆಧಾರ ಹಾ ಚP À್ರಪ್ರಾಣ ೀ |
ನುಪೇಕ್ಷೀ P Àದಾ ದೇವ ಭಕ್ತಾಭಿಮಾನೀ ||119||
ಅಜಮಿಳನು ಮರಣದಲಿ ಪುತ್ರನೆವದಿಂದ |
ಅಜಪಿತನ ನೆನೆಯಲೈ ಮುಕ್ತಿ ಭರದಿಂದ ||
ತಾಪನಾಶಕನವನು ಕೋದಂಡ ಪಾಣ |
ಉಪೇಕ್ಷಿಸನು ರಾಮ ಭಕ್ತಾಭಿಮಾನಿ ||119||
ಧ್ರುವಬಾಲಕನ ದೃಢಭಕ್ತಿಗೆ ಒಲಿದು ಪ್ರತ್ಯಕ್ಷ ದರ್ಶನ ಕೊಟ್ಟನು ಹಾಗೂ ಅವನಿಗೆ ತಂದೆಯ ರಾಜ್ಯವಲ್ಲದೆ ಗ್ರಹಗಳು ಅವಿರತ ಪ್ರದಕ್ಷಿಣೆ ಮಾಡುವ ಶಾಶ್ವತ ಸ್ಥಾನವನ್ನು ಅನುಗ್ರಹಿಸಿದನು.
295 ಅಗಸ್ತ್ಯ ಋಷಿಯ ಶಾಪದಿಂದ ಪಾಂಡ್ಯ ದೇಶದ ರಾಜನೊಬ್ಬನು ಆನೆಯಾಗಿ ಹುಟ್ಟಿದನು. ಒಮ್ಮೆ ಆ ಗಜವು ಸರೋವರದಲ್ಲಿ ಜಲಕ್ರೀಡೆಗೆ ಬಂದಾಗ, ಒಂದು ದೊಡ್ಡ ಮೊಸಳೆಯು ಅದರ ಕಾಲು ಹಿಡಿದು ಎಳೆಯಹತ್ತಿತು. ಗಜರಾಜನು ಎಷ್ಟು ಬಲಪ್ರಯೋಗ ಮಾಡಿದರೂ ಮೊಸಳೆಯಿಂದ ಬಿಡಿಸಿಕೊಳ್ಳುವದಾಗದೆ ವಿವ್ಹಲನಾಗಿರಲು, ಪೂರ್ವಜನ್ಮದ ಸ್ಮøತಿಯುಂಟಾಗಿ, ಸರೋವರದಲ್ಲಿ ಹತ್ತಿರವೇ ಇದ್ದ ಒಂದು ಕಮಲವನ್ನು ಸೊಂಡೆಯಲ್ಲಿ ಹಿಡಿದು, ಭಕ್ತಿಯಿದ ಆ ಕಮಲವನ್ನು ಭಗವಂತನಿಗೆ ಅರ್ಪಿಸಿ ಮೊರೆಯಿಟ್ಟನು! ಆಗ ವಿಷ್ಣುವು ಗರುಡಾರೂಢನಾಗಿ ಬಂದು, ಚಕ್ರದಿಂದ ಮೊಸಳೆಯನ್ನು ಛೇದಿಸಿ ಗಜೇಂದ್ರನ ಬಿಡುಗಡೆ ಮಾಡಿದನು.

95ನೇ ಶ್ಲೋಕದ ಟಿಪ್ಪಣ ಪುಟ 30 ನೋಡಿರಿ.

ಪಾಪಿಯಾದ ಅಜಾಮಿಳನ ಮರಣಕಾಲ ಬಂದಿರಲು: ಭಗವಂತನು ದಯೆಯಿಂದ ಅವನನ್ನು ಮುಕ್ತ ಮಾಡಿದನು ! *ಶ್ರೀ ಹರಿಯು ಅನನ್ಯ ಶರಣಾಗತರಿಗೆ ಆಧಾರನಿರುತ್ತಾನೆ. ಇಂತಹ ಭಕ್ತಕೈವಾರಿಯಾದ ದೇವನು ತನ್ನ ಭಕ್ತರನ್ನೆಂದಿಗೂ ಅಲಕ್ಷ ಮಾಡನು !

ವಿಧೀಕಾರಣೇ ಜಾಹಲಾ ಮತ್ತ್ವವೇಗೀ |
ಧರೀ P Àೂರ್ಮರೂಪೇ ಧರಾ ಪೃಷ್ಠಭಾಗೀ ||
ಜನಾ ರP À್ಷಣಾ ಕಾರ ಣೇ ನೀಚಯೋನೀ |
ನುಪೇಕ್ಷೀ P Àದಾ ದೇವ ಭಕ್ತಾಭಿಮಾನೀ ||120||

ವರಿಸಿದನು ವಿಧಿಗಾಗಿ ಮತ್ಸ್ಯ ರೂಪವನು |
ಧರಿಸೆ ಧರಣ ಯ ಕೂರ್ಮರೂಪ ನಾದವನು ||
ತಾಪರಿ ಜನಹಿತಕೆ ಪಡೆದ ನೀಚಯೋನಿ |
ಉಪೇಕ್ಷಿಸನು ರಾಮ ಭಕ್ತಾಭಿಮಾನಿ ||120||

ಬ್ರಹ್ಮದೇವನ ಸಲುವಾಗಿ ಮತ್ಸ್ಯಾವತಾರ ತಾಳಿದನ,306ಕೂರ್ಮರೂಪ ಧರಿಸಿ ಪೃಥ್ವಿಯನ್ನು ಬೆನ್ನ ಮೇಲೆ ಪೊತ್ತನು,317ಜನರ ರಕ್ಷಣೆಗಾಗಿ ಸೂಕರ ಜನ್ಮ ತಕ್ಕೊಂಡನು ! 328ಹೀಗೆ ಅವತಾರ ಧರಿಸಿದ ಭಕ್ತ ಕೈವಾರಿಯಾದ ದೇವನು ಭಕ್ತರನ್ನೆಂದಿಗೂ ಅಲಕ್ಷ ಮಾಡನು!

ಮಹಾಭP À್ತಪ್ರಲ್ಹಾದ ಹಾ P Àಷ್ಟವೀಲಾ |
ಮ್ಹಣೋನೀ ತಂi ÀiÁಕಾರಣೇ ಸಿಂಹ ಝಾಲಾ ||
ನಯೇ ಜ್ವಾಳ ವೀಶಾಳ ಸನ್ನೀಧ ಕೋಣ ೀ |
ನುಪೇಕ್ಷೀ P Àದಾ ದೇವ ಭಕ್ತಾಭಿಮಾನೀ ||121||

306 ಬ್ರಹ್ಮದೇವನು ಒಂದು ಕಲ್ಪದ ಕೊನೆಗೆ ನಿದ್ರಿಸಿರಲು, ಹಯಗ್ರೀವನೆಂಬ ದೈತ್ಯನು ವೇದಗಳನ್ನು ತುಡುಗು ಮಾಡಿ ಒಯ್ದನು! ಬ್ರಹ್ಮದೇವನು ಎಚ್ಚೆತ್ತ ಮೇಲೆ ವೇದಗಳನ್ನು ತಿರುಗಿ ಪಡೆಯುವದಕ್ಕಾಗಿ ವಿಷ್ಣುವಿನ ಆರಾಧನೆ ಮಾಡಿದನು. ಆಗ ವಿಷ್ಣುವು ಪ್ರಸನ್ನನಾಗಿ ಮೀನರೂಪ ಧಾರಣ ಮಾಡಿ, ಸಮುದ್ರದಲ್ಲಿ ಅಡಗಿಕೊಂಡು ಕುಳಿತ ಅಸುರನನ್ನು ವಧಿಸಿದನು. ಇದೇ ವಿಷ್ಣುವಿನ ದಶಾವತಾರಗಳಲ್ಲಿ 1ನೇಯದಾದ ಮತ್ಸ್ಯಾವತಾರವು. ಗ
317 ದೇವ-ದೈತ್ಯರು ಕೂಡಿಕೊಂಡು ಸಮುದ್ರವನ್ನು ಕಡೆಯುತ್ತಿರಲು. ಅವರು ಕಡಗೋಲಾಗಿ ಮಾಡಿದ ಭಾರವಾದ ಮೇರು ಪರ್ವತವು ರಸಾತಳಕ್ಕೆ ಇಳಿಯಹತ್ತಿತು! ದೇವತೆಗಳು ವಿಷ್ಣುವನ್ನು ಪ್ರಾರ್ಥಿಸಲು ಅವನು ಆವೆಯಾಗಿ ಮೇರುವಿಗೆ ಆಧಾರಕೊಟ್ಟು ಸಮುದ್ರ ಮಂಥನದ ಕಾರ್ಯ ನಡೆಸಲು ಆಸ್ಪದ ಮಾಡಿದನು! ಇದೇ ದಶಾವತಾರದಲ್ಲಿಯ 2ನೇಯ ಕೂರ್ಮಾವತಾರವು.
328 ಹಿರಣ್ಯಾಕ್ಷನೆಂಬ ದೈತ್ಯನು ಜಗತ್ತೆಲ್ಲವನ್ನು ಗೆದ್ದು ಜನರನ್ನು ಹಿಂಸಿಸುತ್ತಿರಲು ವಿಷ್ಣುವು ಕನಿಷ್ಟ ಪ್ರಾಣ ಯಾದ ಹಂದಿಯ ರೂಪತಾಳಿ ರಸಾತಳಕ್ಕೆ ಹೋಗುತ್ತಿದ್ದ ಪೃಥ್ವಿಯನ್ನು ಕೋರೆಗಳ ಮೇಲೆ ಧರಿಸಿ ರಕ್ಷಿಸಿ, ಹಿರಣ್ಯಾಕ್ಷನನ್ನು ಸಂಹರಿಸಿದನು. ಇದೇ ದಶಾವತಾರದಲ್ಲಿಯ 3ನೇಯ ವರಾಹಾವತಾರವು.

ಬಹುಪೀಡೆಯೊಳಗೆ ಹರಿಭಕ್ತ ಪ್ರಹ್ಲಾದ |
ಸಹನದಲಿ ಪ್ರಾರ್ಥಿಸೆ ನೃಸಿಂಹ ರೂಪಾದ ||
ರೂಪೋಗ್ರ ಕಂಜನಾ ನಿಜ ಭಕ್ತಜ್ಞಾನಿ |
ಉಪೇಕ್ಷಿಸನು ರಾಮ ಭಕ್ತಾಭಿಮಾನಿ ||121||

ಶ್ರೇಷ್ಠ ಭಕ್ತನಾದ ಪ್ರಲ್ಹಾದನು ಹಿಂಸೆಗೀಡಾಗಿರಲು, ಅವನ ಸಲುವಾಗಿ ನರಸಿಂಹನಾದನು ! 339ಆ ಕೆಂಡಕಾರುವ ಭಯಂಕರ ರೂಪದೆದುರಿಗೆ ಬರಲಿಕ್ಕೆ ಪ್ರಲ್ಹಾದನ ಹೊರತು ಯಾರಿಗೂ ಧೈರ್ಯವಾಗಲಿಲ್ಲ!! ಇಂತಹ ಭಕ್ತ ಕೈವಾರಿಯಾದ ದೇವನು ತನ್ನ ಭಕ್ತರನ್ನೆಂದಿಗೂ ಅಲಕ್ಷ ಮಾಡನು!

ಕೃಪಾ ಭಾಕಿತಾ ಚಾಹಲಾ ವಜ್ರಪಾಣ ೀ |
ತಂi ÀiÁಕಾರಣೇ ವಾಮನೂ ಚP À್ರಪಾಣ ೀ ||
ದ್ವಿಜಾಕಾರಣೇ ಭಾರ್ಗವ ಚಾಪಪಾಣ ೀ |
ನುಪೇಕ್ಷೀ P Àದಾ ದೇವ ಭಕ್ತಾಭಿಮಾನೀ ||122||

ಇಂದ್ರಗೊಲಿದವನಂದು ಬಹು ಪ್ರೇಮದಿಂದ |
ಚಂದ್ರಮುಖ ಬಂದ ವಾಮನ ರೂಪದಿಂದ |
ಕೋಪ ಭಾರ್ಗವನಾದ ದ್ವಿಜಹಿತಕೆ ಜ್ಞಾನಿ |
ಉಪೇಕ್ಷಿಸನು ರಾಮ ಭಕ್ತಾಭಿಮಾನಿ ||122||

339 ಅಸುರನಾದ ಹಿರಣ್ಯಕಶ್ಯಪುವು ತಪಸ್ಸು ಮಾಡಿ ಬ್ರಹ್ಮದೇವನಿಂದ “ತನಗೆ ಮನೆಯೊಳಗೆ ಮರಣ ಬರಬಾರದು, ಮನೆಯ ಹೊರಗೆ ಮರಣ ಬರಬಾರದು, ಹಗಲಿನಲ್ಲಿ ಮರಣ ಬರಬಾರದು, ರಾತ್ರಿಯಲ್ಲಿ ಮರಣ ಬರಬಾರದು; ಅದರಂತೆ ಮನುಷ್ಯನಿಂದಲೂ ಅಥವಾ ಪಶುವಿನಿಂದಲೂ ಮರಣವಾಗಬಾರದು. ಯಾವ ಆಯುಧದಿಂದಲೂ ಸಾಯಬಾರದು” ಮುಂತಾಗಿ ವರ ಪಡೆದನು. ಮತ್ತು ಅಜೇಯನಾಗಿ ಮಾನವ-ದೇವತೆಗಳೆಲ್ಲರಿಗೆ ಹಿಂಸೆಕೊಡಹತ್ತಿದನು!
ಹಿರಣ್ಯಕಶ್ಯಪುವಿನ ಸಾಧ್ವಿಯಾದ ಪತ್ನಿಯ ಹೊಟ್ಟೆಯಲ್ಲಿ ಮಹಾ ಭಕ್ತ ಪ್ರಲ್ಹಾದನು ಜನಿಸಿದನು! ಹಿರಣ್ಯಕಶ್ಯಪಾಸುರನು ವಿಷ್ಣುವಿನ ದ್ವೇಷಿಯಾಗಿದ್ದು ಪ್ರಲ್ಹಾದನಿಗಾದರೂ ವಿಷ್ಣುಭಕ್ತಿಯಿಂದ ಪರಾವೃತ್ತ ಮಾಡುವದಕ್ಕಾಗಿ ಅನೇಕ ರೀತಿ ತಿಳಿ ಹೇಳಿದರು. ಆದರೆ ಭಕ್ತ ಪ್ರಲ್ಹಾದನು ತಂದೆಯ ಮಾತು ಕೇಳದೆ ತಿರುಗಿ ಅವನಿಗೆ ಹರಿಭಕ್ತಿ ಮಾಡೆಂದು ಉಪದೇಶಿಸುತ್ತಿದ್ದನು! ಇದರಿಂದಾಗಿ ಹಿರಣ್ಯಕಶ್ಯಪನು ಕ್ರುದ್ಧನಾಗಿ ಕೊನೆಗೆ ಪ್ರಲ್ಹಾದನನ್ನು ಕೊಲ್ಲಬೇಕೆಂದು ಬೆಂಕಿಯಲ್ಲಿ ಹಾಕುವದು, ಹಾವು ಕಡಿಸುವದು, ವಿಷ ಕುಡಿಸುವದು ಮೊದಲಾದ ಎಲ್ಲ ಉಪಾಯಗಳನ್ನು ಮಾಡಿ ಅಯಶಸ್ವಿಯಾದನು. ಆಗ್ಗೆ ಅವನು ಸಂತಾಪಯುಕ್ತನಾಗಿ “ಪ್ರಲ್ಹಾದಾ, ಆ ನಿನ್ನ ಹರಿಯು ಇರುವನಾದರೂ ಎಲ್ಲಿ? ತೋರಿಸು!”
ಪ್ರಲ್ಹಾದ – “ಶ್ರೀಹರಿಯು ಸ್ಥಿರಚರವೆಲ್ಲವನ್ನು ವ್ಯಾಒಇಸಿರುವನು. ಅವನು ಇಲ್ಲದ ಸ್ಥಳವೇ ಇರುವದಿಲ್ಲ”.
ಹಿರಣ್ಯಕಶ್ಯಪು – ಏನು ಬೊಗಳುವಿ? ನಿನ್ನ ಶ್ರೀ ಹರಿಯು ಈ ಕಂಬದಲ್ಲಿರುವನೇ? ಪ್ರಲ್ಹಾದ – ಓಹೋ! ಇದ್ದೇ ಇರುವನು, ಹಿರಣ್ಯಕಶ್ಯಪು – ನಿನ್ನ ಅಚಿಜಬುರುಕ ಹರಿಯು ಕಂಬದಲ್ಲಿ ಅಡಗಿದ್ದರೆ, ಇಗೋ ಕಂಬವನ್ನು ಕಾಲಿನಿಂದ ಒದೆಯುವೆನು. ಅವನು ಹೊರಗೆ ಬರಲಿ! ಹೀಗೆಂದು ಬಲವಾಗಿ ಕಂಬವನ್ನು ಒದೆಯಲು ಸಿಡಿಲಿನಂತೆ ಸಪ್ತಳವಾಗಿ ಭಯಂಕರ ಆಕಾರದ ನರಸಿಂಹನು ಪ್ರಕಟವಾದನು! ನರ ಶರೀರ – ಸಿಂಹದ ತಲೆಯುಳ್ಳ ನರಸಿಂಹನು ಗರ್ಜಿಸುತ್ತಾ ಸಿಂಹ ನಖದಿಂದ ಹೊಸ್ತಿಲ
ಮೇಲೆ ಕುಳಿತು ಹಿರಣ್ಯ ಕಶ್ಯಪುವಿನ ವಧೆ ಮಾಡಿದನು! ಆಗ ಸಂಧ್ಯಾ ಸಮಯವಿದ್ದು ಬ್ರಹ್ಮ ದೇವನ ವರಕ್ಕಾದರೂ ಬಾಧೆ ಬರಲಿಲ್ಲಾ.
ಇಂದ್ರನು ದಯೆ ಯಾಚಿಸಲು ಅವನಿಗಾಗಿ ವಿಷ್ಣುವು ವಾಮನನಾದನು1034ಹಾಗೂ ಬ್ರಾಹ್ಮಣರ ರಕ್ಷಣೆಗಾಗಿ ಶಾóರ್ಙಪಾಣ ಯು ಪರಶುರಾಮ ಅವತಾರ ಧರಿಸಿದನು. 3511ಇಂತಹ ಭಕ್ತಕೈವಾರಿಯಾದ ದೇವನು ತನ್ನ ಭಕ್ತರನ್ನೆಂದಿಗೂ ಅಲಕ್ಷ ಮಾಡನು!

3410 ತ್ರೇತಾಯುಗದಲ್ಲಿ ಪ್ರಲ್ಹಾದನ ಪೌತ್ರನಾದ ಬಲಿರಾಜನು ಇಂದ್ರಪದವಿಯ ಪ್ರಾಪ್ತಿಗಾಗಿ 100 ಯಜ್ಞ ಜರುಗಿಸುವ ಸಂಕಲ್ಪ ಮಾಡಿ, ಯಜ್ಞಕಾರ್ಯ ಪ್ರಾರಂಭಿಸಿದನು. ಅವನ ಯಜ್ಞಗಳು ಭರದಿಂದ ಸಾಗಿರಲು ಇಂದ್ರನಿಗೆ ಚಿಂತೆಯುಂಟಾಗಿ ವಿಷ್ಣುವಿಗೆ ಮೊರೆಹೋದನು. ಆಗ ವಿಷ್ಣುವು ಕಶ್ಯಪ – ಅದಿತಿಯರ ಹೊಟ್ಟೆಯಲ್ಲಿ ವಾಮನನಾಗಿ ಜನಿಸಿ ಬಲಿಯ ಮಹತ್ವಾಕಾಂಕ್ಷೆಯನ್ನು ನಿಷ್ಫಲಗೊಳಿಸಿದನು. ಬಲಿರಾಜನು 99 ಯಜ್ಞಗಳನ್ನು ಮುಗಿಸಿ ಕೊನೆಯದನ್ನು ಸಮಾಪ್ತಗೊಳಿಸುವ ಕಾಲಕ್ಕೆ ವಾಮನ ಪಟುವು ಬಂದು ರಾಜನಿಗೆ 3 ಪಾದದ ಅಳತೆಯನ್ನು ಭೂಮಿಯನ್ನು ದಾನ ಬೇಡಿದನು! ದಾನಶೂರನಾದ ಬಲಿಯು ಇದು ಬಹಳ ಸ್ವಲ್ಪವೆಂದು ಅನ್ನುತ್ತ ದಾನದ ಸಂಕಲ್ಪೋದಕ ಬಿಡಲು ಸಿದ್ಧನಾದನು. ಆದರೆ ವಿಷ್ಣುವಿನ ಕಪಟವನ್ನರಿತ ದೈತ್ಯಗುರು ಶುಕ್ರಾಚಾರ್ಯರು ಹಾಗೆ ವಚನ ಕೊಡಬೇಡವೆಂದು ಎಷ್ಟು ಎಷ್ಟು ಹೇಳಿದರೂ ಬಲಿಯು ಕೇಳದಾಗಲು, ಅವರು ಸೂಕ್ಷ್ಮ ರೂಪದಿಂದ ಸಂಕಲ್ಪೋದಕದ ಗಿಂಡಿಯ ಸೊಂಡಿಯಲ್ಲಿ ಪ್ರವೇಶಿಸಿ ನೀರಿಗೆ ಅಡ್ಡವಾಗಿ ಕುಳಿತರು! ಬಲಿಯು ಕಡ್ಡಿಯಿಂದ ಸೊಂಡಿಯೊಳಗೆ ಚುಚ್ಚಲು ಅದು ಶುಕ್ರಾಚಾರ್ಯರ ಒಂದು ಕಣ ್ಣಗೆ ತಗಲಿ, ಅದು ಕುರುಡಾಯಿತು !! ಇರಲಿ, ಬಲಿರಾಜನು 3 ಪಾದ ಭೂಮಿಯನ್ನು ಕೊಡುವೆನೆಂದು ಉದಕ ಬಿಡುತ್ತಲೇ ವಾಮನನು ವಿರಾಟರೂಪ ಧಾರಣ ಮಾಡಿ ಒಂದು ಪಾದದಿಂದ ಪೃಥ್ವಿಯನ್ನೂ 2ನೇಯ ಪಾದದಿಂದ ಸ್ವರ್ಗವನ್ನೂ ವ್ಯಾಪಿಸಿದನು. ಮತ್ತು “3ನೇಯ ಪಾದಕ್ಕೆ ಭೂಮಿ ಎಲ್ಲಿರುವದು, ನನ್ನ ಪಾದವೆಲ್ಲಿಡಲಿ?” ಎಂದು ಕೇಳಲು, ಬಲಿಯು ತನ್ನ ಮಸ್ತಕದ ಮೇಲೆ ಪಾದವಿಡಲು ಪ್ರಾರ್ಥಿಸಿ ತಲೆಬಗಿ ಕುಳಿತನು!
ವಿರಾಟರೂಪೀ ವಾಮನನು ಬಲಿ ಚಕ್ರವರ್ತಿಯನ್ನು ತನ್ನ ಪಾದದಿಂದ ಪಾತಾಳಕ್ಕೆ ಮೆಟ್ಟಿ ಇಂದ್ರನನ್ನು ಭಯಮುಕ್ತ ಮಾಡಿದನು. ಹೀಗ ಅವತಾರ ಕಾರ್ಯ ಮಾಡಿದರೂ ಶ್ರೀ ಹರಿಯು ಬಲಿರಾಜನ ಶೀಲ – ದಾನಶೂರತೆ, ಭಕ್ತಿಗೆ ಮೆಚ್ಚಿ ಅವನಿಗೆ ಪಾತಾಳದ ರಾಜ್ಯವನ್ನು ಕೊಟ್ಟು, ಮುಂದಿನ ಮನ್ವಂತರದಲ್ಲಿ ಇಂದ್ರ ಪದವಿಯನ್ನು ಆಶ್ವಾಸಿಸಿದ್ದಲ್ಲದೆ “ನಾನು ಯಾವಾಗಲೂ ನಿನ್ನ ಬಾಗಿಲ ಕಾಯುತಿರುವೆ” ಎಂದು ವರ ಕೊಟ್ಟನು!
3511 ಒಂದು ಕಾಲಕ್ಕೆ ಕ್ಷತ್ರಿಯರು ಉನ್ಮತ್ತರಾಗಿ ಬ್ರಾಹ್ಮಣರನ್ನು ಗಾಸಿಗೊಳಿಸುತ್ತಿರಲು ವಿಷ್ಣುವು ಜಮದಗ್ನಿ – ರೇಣುಕಾ ಇವರಲ್ಲಿ ಪರಶುರಾಮನಾಗಿ ಅವತರಿಸಿ ಕ್ಷತ್ರಿಯರನ್ನು ನಾಶ ಮಾಡಿದನು. ಆಮದಗ್ನಿ ಋಷಿಯ ಹತ್ತಿರ ಕಾಮಧೇನುವಿದ್ದು ಅವರು ಅದರಿಂದ ಸಹಜವೇ ಅತಿಥಿಗಳ ಉತ್ಕøಷ್ಟ ಸತ್ಕಾರ ಮಾಡುತ್ತಿದ್ದರು! ಒಮ್ಮೆ ಆ ದೇಶದ ಕಾರ್ತವೀರ್ಯನೆಂಬ ಕ್ಷತ್ರಿಯ ರಾಜನು ಜಮದಗ್ನಿಯ ಆಶ್ರಮದಲ್ಲಿ ಪರಿವಾರದೊಂದಿಗೆ ರಾಜೋಚಿತ ಭೋಜನ ಮಾಡಿ ಸಂತುಷ್ಟನಾದನು. ಆದರೆ ಅವನು ಅಲ್ಲಿಯ ಕಾಮಧೇನುವಿನ ವೃತ್ತಾಂತವನ್ನು ಅರಿತು, ದುಷ್ಟಬುದ್ಧಿಯಿಂದ ಅದನ್ನು ಹರಣ ಮಾಡಿಕೊಂಡು ಹೋದನು. ಆಗ್ಗೆ ಪರಶುರಾಮನು ಆಶ್ರಮದಲ್ಲಿರಲಿಲ್ಲ.
ಕಾಮಧೇನುವನ್ನು ಬಲಾತ್ಕಾರವಾಗಿ ಒಯ್ದ ಮೇಲೆ ಪರಶುರಾಮನು ಆಶ್ರಮಕ್ಕೆ ಬಂದು ಎಲ್ಲ ವೃತ್ತಾಂತವನ್ನು ಕೇಳಿ ಕೋಪಾವಿಷ್ಟನಾದನು ಮತ್ತು ಕಾರ್ತವೀರ್ಯನ ರಾಜಧಾನಿಯಾದ ಮಾಹಿಷ್ಮತಿಗೆ ಹೋಗಿ, ರಾಜನನ್ನು ತನ್ನ ಕೊಡಲಿಯಿಂದ ಸಂಹರಿಸಿ ಕಾಮಧೇನುವನ್ನು ತಿರುಗಿ ತಕ್ಕೊಂಡು ಬಂದನು! ಆದರೆ ಕಾರ್ತವೀರ್ಯನ ಮಕ್ಕಳು ಅದರ ಸೇಡು ತೀರಿಸಿಕೊಳ್ಳಲು, ಪರಶುರಾಮನಿಲ್ಲದ ವೇಳೆಯಲ್ಲಿ ಆಶ್ರಮಕ್ಕೆ ಹೋಗಿ ಜಮದಗ್ನಿಯ ವಧೆ ಮಾಡಿದರು!!
ಪರಶುರಾಮನು ಪಿತೃವಧೆಯನ್ನು ಕಂಡು ಕೋಪೋದ್ರಿಕ್ತನಾಗಿ ಕ್ಷತ್ರಿಯರ ವಂಶವನ್ನೇ ನಾಶಗೊಳಿಸುವ ಪ್ರತಿಜ್ಞೆ ಮಾಡಿದನು. ಹಾಗೂ ಮೊದಲು ಕಾರ್ತವೀರ್ಯನ ಮಕ್ಕಳನ್ನು ಸಂಹರಿಸಿ, 21 ಸಾರೆ ಕ್ಷತ್ರಿಯರೊಡನೆ ಯುದ್ಧ ಮಾಡಿ ಅನೇಕರನ್ನು ಕೊಂದನು!

ಅಹಿಲೇ ಸತೀಲಾಗಿ ಅರಣ್ಯಪಂಥೇ |
P Àುಡಾವಾ ಫುಢೇ ದೇವ ಬಂದೀ ತಯಾತೇ ||
ಬಳೇ ಸೋಡಿತಾ ಘಾವ ಘಾಲೀ ನಿಶಾಣ ೀ |
ನುಪೇಕ್ಷೀ P Àದಾ ದೇವ ಭಕ್ತಾಭಿಮಾನೀ ||123||

ಕಡಿದಿಹನಹಲ್ಯೆಯು ಚಿರಶಾಪ ವಾಸ |
ಬಿಡಿಸಿದನು ಸುಮನಸರ ಬಂಧನದ ಪಾಶ ||
ಶಾಪ ಕಳೆಯಲು ರಾವಣನ ಕೊಂದ ಮಾನಿ |
ಉಪೇಕ್ಷಿಸನು ರಾಮ ಭಕ್ತಾಭಿಮಾನಿ ||123||

ರಾಮನು ವನವಾಸ ಕಾಲಕ್ಕೆ ಅರಣ್ಯದಲ್ಲಿ ಸಂಚರಿಸುತ್ತಿರುವಾಗ, ಶಿಲೆಯಾಗಿ ಬಿದ್ದ ಅಹಿಲ್ಯೆಯನ್ನು ಉದ್ಧರಿಸಿದನು. ಹಾಗೂ ರಾವಣನ ಸೆರೆಯಲ್ಲಿ ಬಿದ್ದ ದೇವತೆಗಳನ್ನು ಬಿಡಿಸಿ ಜಯಭೇರಿ ಹೊಡೆದನು ! ಇಂತಹ ಭಕ್ತ ಕೈವಾರಿಯಾದ ದೇವನು ತನ್ನ ಭಕ್ತರನ್ನೆಂದಿಗೂ ಅಲಕ್ಷಮಾಡನು!

ತಯೇ ದ್ರೌಪದೀಕಾರಣೇ ಲಾಗವೇಗೇ |
ತ್ವರೇ ಧಾವತೂ ಸರ್ವ ಸಾಂಡೂನಿ ಮಾಗೇ ||
P Àಲೀಲಾಗಿ ಝಾಲಾ ಅಸೇಬೌಧ್ಯ ಮೌನೀ |
ನುಪೇಕ್ಷೀ P Àದಾ ದೇವ ಭಕ್ತಾಭಿಮಾನೀ ||124||

ದೀನ ದ್ರೌಪದಿಯ ದನಿ ಕೇಳುತಲೆ ಬಂದ |
ಮಾನವುಳಿಸಲಿ ಕಕ್ಷಯೊಂಬರವ ತಂದ ||
ಕಾವುದಕೆ ಕಲಿಹಿತವ ತಾ ಬುದ್ಧ ಮೌನಿ |
ಉಪೇಕ್ಷಿಸನು ರಾಮ ಭಕ್ತಾಭಿಮಾನಿ ||124||

ಕೃಷ್ಣನು36ದ್ರೌಪದಿಯ ಮಾನರಕ್ಷಣೆಯ ಸಲುವಾಗಿ ಎಲ್ಲವನ್ನೂ ಹಿಂದೊಗೆದು ವೇಗದಿಂದ ಓಡಿಬಂದನು ಹಾಗೂ ಕಲಿಯುಗದಲ್ಲಿ ಮೌನವಹಿಸಿದ ಬುದ್ಧನಾದನು ! ಇಂತಹ ಭಕ್ತ ಕೈವಾರಿಯಾದ ದೇವನು ತನ್ನ ಭಕ್ತರನ್ನೆಂದಿಗೂ ಅಲಕ್ಷ ಮಾಡನು. ಮುಂದೆ ಪರಶುರಾಮನು, ಸೀತಾಸ್ವಯಂವರ ಮಾಡಿಕೊಂಡು ಮಹೋತ್ಸಾಹದಿಂದ ಬರುತ್ತಿದ್ದ ದಾಶರಥೀ ರಾಮನ ಮೇಲೆ ಏರಿ ಹೋದನು. ಆದರೆ ಆ ಸಮಯಕ್ಕೆ ಭಗವದಿಚ್ಛೆಯಿಂದಲೇ ಪರಶುರಾಮನಲ್ಲಿಯ ವಿಷ್ಣುತೇಜವು ಹೊರಹೊರಟು ಸೀತಾಪತಿ ರಾಮನಲ್ಲಿ ಪ್ರವೇಶಿಸಿದ್ದರಿಂದ ಪರಶುರಾಮನು ರಾಮನಿಂದ ಸೋತನು! ಅಲ್ಲಿಗೆ ಪರಶುರಾಮನ ಅವತಾರದ ಕಾರ್ಯ ಮುಗಿಯಿತು. 36 ಚರಿತ್ರೆಯು ಸರ್ವಶ್ರುತವಿದ್ದುದರಿಂದ ಇಲ್ಲಿ ಕಥಿಸಿಲ್ಲ.

ಅನಾಥಾ ದಿನಾ ಕಾರಣೇ ಜನ್ಮತಾಹೇ |
P Àಲಂಕೀ ಫುಢೇ ದೇವ ಹೋಣಾರ ಆಹೇ ||
ಜಯಾ ವಣ ್ತಾ ಶೀಣಲೀ ವೇದವಾಣ ೀ |
ನುಪೇಕ್ಷೀ P Àದಾ ದೇವ ಭಕ್ತಾಭಿಮಾನೀ ||125||

ದೀನರಕ್ಷಣೆಗವನು ಜನ್ಮತಾಳಿಹನು |
ಶ್ರೀನಾಥ ಜನಹಿತಕೆ ಕಲ್ಕಿಯಾಗುವನು ||
ಶ್ರೀಪತಿಯ ಹೊಗಳೆ ಸೋತುದು ವೇದವಾಣ |
ಉಪೇಕ್ಷಿಸನು ರಾಮ ಭಕ್ತಾಭಿಮಾನಿ ||125||

ಹೀಗೆ ಭಗವಂತನು ದೀನ ಅಸಹಾಯ ಜನರಿಗಾಗಿ ಅವತಾರ ತಕ್ಕೊಳ್ಳುವನು ಮತ್ತು ಮುಂದಯಾದರೂ ಕಲ್ಕಿಯು3712ಹುಟ್ಟಿ ಬರುವವನಿದ್ದಾನೆ! ಅವನನ್ನು ವಣ ್ಸಹೋಗಿ ವೇದಗಳು ದಣ ದವು ! ಇಂತಹ ಭಕ್ತಕೈವಾರಿಯಾದ ದೇವನು ತನ್ನ ಭಕ್ತರನ್ನೆಂದಿಗೂ ಅಲಕ್ಷಮಾಡನು.

ಜನಾಕಾರಣೇ ದೇವ ಲೀಲಾವತಾರೀ |
ಬಹುತಾ ಪರೀ ಆದರೇ ವೇಷಧಾರೀ ||
ತಂi ÀiÁ ನೇಣತೀ ತೇ ಜನ ಪಾಪರೂಪೀ |
ದುರಾತ್ಮೇ ಮಹಾನಷ್ಟ ಚಾಂಡಾಳ ಪಾಪೀ ||126||

ಭಕ್ತ ರಕ್ಷಮೆಗವನು ಲೀಲಾವತಾರಿ |
ಭಕ್ತಿಗೋಸುವ ಪ್ರಕಟಬಹು ವೇಷದಾರಿ ||
ಗುರುತಿಸಲು ಶ್ರಮಿಸಿದವ ಬಹು ಪಾಪರೂಪಿ |
ದುರುಳನವ ದುಷ್ಕರ್ಮಿ ದುರ್ದೈವಿ ಪಾಪಿ ||126||

ಜನತೆಯ ಸಲುವಾಗಿ ಪರಮಾತ್ಮನು ಅವತಾರಲೀಲೆ ಮಾಡುವನು, ಪ್ರೇಮದಿಂದ ತರತರ ರೂಪ ತಾಳುವನು ! ಇಂತಹ ದಯಾಳು ದೇವನನ್ನು ಅರಿಯದ ಜನರ ಪಾಪಿಗಳು, ದುಷ್ಟರು, ನೀಚರು, ಚಾಂಡಾಲರು ಆಗಿದ್ದಾರೆಂದು ತಿಳಿಯಬೇಕು!!

ಜಗೀ ಧನ್ಯ ತೋ ರಾಮಸೂಖೇ ನಿವಾಲಾ |
P Àಥಾ ಐಕತಾ ಸರ್ವ ತಲ್ಲೀನ ಝಾಲಾ ||
ದೇಹೇ ಭಾವನಾ ರಾಮಬೋಧೇ ಉಡಾಲೀ |
ಮನೋವಾ¸ Àನಾ ರಾಮರೂಪೀ ಬುಡಾಲೀ ||127|| ರಾಮ ಧ್ಯಾನದ ಸುಖದಲ್ಲಿರುವವನು ಧನ್ಯ |
ರಾಮ ಕತೆಯಲಿ ಲೀನನಾದವನೆ ಗಣ್ಯ ||

3712 ಮುಂದೆ ಶಂಬಲ ಗ್ರಾಮದಲ್ಲಿ ವಿಷ್ಣುಯಶ ಬ್ರಾಹ್ಮಣನ ಮನೆಯಲ್ಲಿ ಈ ಅವತಾರವಾಗುವದೆಂದು ಭಾಗವತದಲ್ಲಿ ಹೇಳಿದೆ.

ರಾಮನಲಿ ದೇಹ ಭಾವನೆ ಲಯಿಸಬೇಕು |
ಕಾಮ ಕನಸುಗಳನ್ನು ಕಳೆಯಲೇ ಬೇಕು ||127||

ರಾಮ ಕಥೆಯನ್ನು ಕೇಳುವದರಲ್ಲಿ ತನ್ಮಯನಾಗಿ ರಾಮಸುಖದಿಂದ ತೃಪ್ತಿ ಪಡೆದವನು ಜಗತ್ತಿನಲ್ಲಿ ಧನ್ಯನಿದ್ದಾನೆ ! ರಾಮನ ಅನುಭವದಿಂದ ಅವನ ದೇಹದ ಅರಿವು ಹಾರಿಹೋಗಿ, ಮನಸ್ಸಿನ ಸೂಕ್ಷ್ಮ ವಾಸನೆಯು ರಾಮಸ್ವರೂಪದಲ್ಲಿ ಮುಳುಗಿಬಿಟ್ಟಿರುವದು!

ಮನಾ ವಾಸನಾ ವಾಸುದೇವೀ ವಸೂದೇ |
ಮನಾ ಕಾಮನಾ ಕಾಮಸಂಗೀ ನ¸ Àೂದೇ ||
ಮನಾ P Àಲ್ಪನಾ ವಾಉಗೀ ತೇ ನ ಕೀಜೇ |
ಮನಾ ಸಜ್ಜನಾ, ಸಜ್ಜನೀ ವಸ್ತಿ ಕೀಜೆ ||128||

ಎಲ್ಲ ವಾಸನೆ ವಾಸುದೇವ ನಲ್ಲಿರಲಿ |
ಸಲ್ಲ ಕಾಮವು ನಿನಗೆ ಬಹುದೂರ ವಿರಲಿ ||
ವಿಷಯ ಕಲ್ಪನೆಯು ಹಿತವಲ್ಲ ನಿನಗಿನಿತು |
ವಶನಾಗಿ ಸತ್ಸಂಗ ಮಾಡಬೇಕರಿತು ||128||

ಮನವೇ, ವಾಸುದೇವನಲ್ಲಿಯೇ ನಿನ್ನ ಆಶೆಯಿರಲಿ, ಕಾಮಭೋಗಗಳಲ್ಲಿ ಇಚ್ಛೆಯಿಡಬೇಡ! ಸಂಭಾವಿತ ಮನವೇ, ನಿರರ್ಥಕವಾದ ವಿಷಯ ಕಲ್ಪನೆ ಮಾಡುವದು ಬಿಟ್ಟು ಸಂತರೊಡನೆಯೇ ಸಹವಾಸ ಮಾಡು.

ಗತೀಕಾರಣೇ ¸ Àಂಗತೀ ¸ Àಜ್ಜನಾಚೀ |
ಮತೀ ಪಾಲಟೀ ಸೂಮತೀ ದುರ್ಜನಾಚೀ ||
ರತೀನಾಯಿಕೇಚಾ ಪತೀ ನµ À್ಟ ಆಹೇ |
ಮ್ಹಣೋನೀ ಮನಾತೀತ ಹೋವೂನೀ ರಾಹೇ ||129||

ಸಜ್ಜನರ ಸಂಗ ಸದ್ಗತಿ ಸಾಧಿಸಲಿಕೆ |
ದುರ್ಜನರ ದುರ್ವೃತ್ತಿ ದೂರ ಮಾಡಲಿಕೆ |
ಕಾಮ ಕನಸುಗಳಿಂದ ಮನಕ್ಷೋಭೆಯಹುದು |
ಕಾಮ ಜಯಿಸುವ ನಿರ್ವಿಕಾರ ನಾಗುವುದು ||129||

ಸತ್ಸಂಗತಿಯಿಂದ ದುಷ್ಟ ಜನರ ಕುಬುದ್ಧಿಸಹ ಪರಿವರ್ತನೆಯಾಗುವದೆಂದ ಮೇಲೆ ತನ್ನ ಉದ್ಧಾರಕ್ಕಾಗಿ ಸಂತರ ಸಹವಾಸ ಅತ್ಯವಶ್ಯವು. ಅಲ್ಲದೆ ಕಾಮನು ದುರಾತ್ಮನಿದ್ದುದರಿಂದ ಅವನಿಗೆ ಆಸ್ಪದ ಸಿಗದಂತೆ ನಿರ್ವಿಕಲ್ಪ ಸ್ಥಿತಿಯಿಂದ ಇರುತ್ತಿರು !

ಮನಾ ಅಲ್ಪ ಸಂP Àಲ್ಪ ತೋಹೀ ನಸಾವಾ |
ಮನಾ ಸತ್ಯ ಸಂP Àಲ್ಪ ಚಿತ್ತೀ ವಸಾವಾ ||
ಜನೀ ಜಲ್ಫ ವೀಕಲ್ಪ ತೋಹೀ ತ್ಯಜವಾ |
ರಮಾಕಾಂತ ಏಕಾಂತಕಾಳೀ ಭಜಾವಾ ||130||

ಮಿಥ್ಯ ಸಂಕಲ್ಪ ಹಿತವಲ್ಲ ತಿಳಿ ನಿನಗೆ |
ಸತ್ಯ ಸಂಕಲ್ಪ ನೆಲಸಲಿ ಚಿತ್ತದೊಳಗೆ ||
ಒಣ ಹರಟೆಯಲ್ಲಿ ನಿಜ ಲಾಭವೇನಿಲ್ಲ |
ಗೊಣಗದಲೆ ರಾಮನನು ಜಪಿಸಬೇಕೆಲ್ಲ ||130||

ಮನವೇ, ಸ್ವಲ್ಪವೂ ಸಂಕಲ್ಪವಿಕಲ್ಪ ಮಾಡದೆ, ಅಂತಃಕರಣದಲ್ಲಿ ಸತ್ಯವಿಜಾರಧರಿಸು. ಜನರಲ್ಲಿಯ ಕುತ್ಸಿತ ಬಡಬಡಿಕೆಯನ್ನಾದರೂ ತ್ಯಜಿಸಿ, ಏಕಾಂತ ಸಮಯದಲ್ಲಿ ರಾಮನ ಭಜನೆ ಮಾಡು.

ಭಜಾಯಾ ಜನೀ ಪಾಹತಾ ರಾಮ ಏಕೂ |
P Àರೀ ಬಾಣ ಏಕೂ ಮುಖೀ ಶಬ್ದ ಏಕೂ ||
ಕ್ರಿಯಾ ಪಾಹತಾ ಉದ್ಧರೇ ಸರ್ವ ಲೋP Àೂ
ಧರಾ ಜಾನಕೀನಾಯಕಾಚಾ ವಿವೇಕೂ ||131||

ಏಕರಾಮನ ನಂಬಿ ಭಜಿಸುವುದು ನಿತ್ಯ |
ಏಕ ಬಾಣ್ಯೇಕ ವಚನಿಯು ರಾಮ ಸತ್ಯ |
ಅವನು ಕೃತಿಯಲಿ ಲೋಕಕಾದರ್ಶರೂಪ |
ಅವನ ಧ್ಯಾನಿಸೆ ನಾಶ ಸರ್ವಬಗೆತಾಪ ||131||

‘ಏಕವಚನೀ, ಏಕಬಾಣ ೀ’ ನಡೆಯಿಂದ ಅದ್ವಿತೀಯನಾದ ರಾಮಚಂದ್ರನ ಭಜನೆ ಮಾಡಿರಿ! ಅವನ ಚರಿತ್ರದ ಮನನದಿಂದಲೇ ಎಲ್ಲ ಜನರೂ ಕೃತಾರ್ಥರಾಗುವರು ! ಅಂತಹ ಸೀತಾಪತಿಯ ಆಚರಣೆಯನ್ನು ಅನುಸರಿಸಿರಿ.

ವಿಚಾರೂನಿ ಬೋಲೇ ವಿವಂಚೂನಿ ಚಾಲೇ |
ತಂi ÀiÁಚೇನಿ ಸಂತಪ್ತತೇಹೀ ನಿವಾಲೇ |
ಬರೇ ಶೋಧಿಲ್ಯಾವೀಣ ಬೋಲೋ ನಕೋಹೋ |
ಜನೀ ಚಾಲಣೇ ಶುದ್ಧ ನೇಮ¸ À್ತ ರಾಹೋ ||132||

ನಡೆನುಡಿಗಳಲ್ಲಿ ಬಹು ಶುದ್ಧವಾಗಿರಲಿ |
ಒಡನಾಡಿಗಳ ಮನದ ತಾಪ ಹರಿಸಿರಲಿ ||
ನುಡಿಯ ಬೇಡೆಲೋ ವಿಚಾರವ ಮಾಡದೇನೂ |
ಬಿಡಬೇಡ ನಡತೆ ಶುದ್ಧತೆಯನ್ನು ನೀನು ||132||

ವಿಚಾರಮ ಮಾಡಿ ಮಾತಾಡುವ ಹಾಗೂ ಹಿತಾಹಿತ ನೋಡಿ ನಡೆಯುವ ವಿವೇಕಿಯಿಂದೆ ತ್ರಿವಿಧ ತಾಪದಿಂದ ಬೆಂದವರೂ ಶಾಂತರಾಗುವರು ! ಅದಕ್ಕಾಗಿ ಅಪ್ಪಗಳಿರಾ, ನೀವಾದರೂ ಪೂರ್ಣ ವಿಚಾರ ಮಾಡದೇ ಏನೂ ಮಾತಾಡ ಬೇಡಿರಿ ಹಾಗೂ ನಿಮ್ಮ ನಡತೆಯಾದರೂ ಶುದ್ಧವೂ ನಿಯಮಿತವೂ ಆಗಿರಲಿ !

ಹರೀಭP À್ತ ವೀರಕ್ತ ವಿಜ್ಞಾನರಾಶೀ |
ಜೇಣೇ ಮಾನಸೀ ಸ್ಥಾಪಿಲೇ ನಿಶ್ಚಂi ÀiÁಸೀ ||
ತಂi ÀiÁ ದರ್ಶನೇ ¸ À್ಪರ್ಶನೇ ಪುಣ್ಯ ಜೋಡೇ |
ತಂi ÀiÁ ಭಾµ Àಣೇ ನµ À್ಟ ಸಂದೇಹ ಮೋಡೇ ||133||

ಹರಿ ಭಕ್ತ ನತಿ ವಿರಕ್ತ ವಿಜ್ಞಾನ ಮೂರ್ತಿ |
ಹರಿಭಾವ ದಲ್ಲವಗಲೆ ನಿಶ್ಚಯದ ಸ್ಫೂರ್ತಿ ||
ಇವನ ದರ್ಶನ ಸ್ಪರ್ಶನವು ಪುಣ್ಯಕಾರಿ |
ಅವನ ಜೊತೆಗೆ ಭಾಷಣೆಯು ಸಂದೇಹಹಾರಿ ||133||

ವೈರಾಗ್ಯವಂತನು, ಪೂರ್ಣ ಅನುಭವಿಯು, ಮನದಲ್ಲಿ ನಿಶ್ಚಯವನ್ನು ನಲೆಗೊಳಿಸಿದವನೂ ಆದ ರಾಮಭಕ್ತನ ದರ್ಶನ ಸ್ಪರ್ಶನದಿಂದ ಪುಣ್ಯ ಲಭಿಸುವದು ಹಾಗೂ ಅವನ ಸಂಭಾಷಣೆಯಿಂದ ಖೊಟ್ಟಿ ಸಂಶಯ ಕಡಿಯುವದು.

ನಸೇ ಗರ್ವ ಅಂಗೀ ¸ Àದಾ ವೀತರಾಗೀ |
P À್ಷಮಾ ಶಾಂತಿ ಭೋಗೀ ದಂi ÀiÁದP À್ಷ ಯೋಗೀ ||
ನಸೇ ಲೋಭ ನಾ ಕ್ಷೋಭ ನಾ ದೈನ್ಯವಾಣಾ |
ಇಂಹೀ ಲಕ್ಷಣ ೀ ಜಾಣ ಜೇ ಯೋಗಿರಾಣಾ ||134||

ಹಮ್ಮು ಮನ ದೊಳಗಿಲ್ಲದವನ ವೀತರಾಗಿ |
ಕ್ಷಮೆ ಶಾಂತಿ ದಯೆ ಯಿರಲ್ಕವ ದಕ್ಷಯೋಗಿ ||
ಮನಕೆ ದೈನ್ಯ ಕ್ಷೋಭೆ ಲೋಭಗಳೆ ಇಲ್ಲ |
ಘನವಾದ ಗುಣಗಳಿವು ಯೋಗಿಗಳಿಗೆಲ್ಲ ||134||

ಗರ್ವರಹಿತನು, ಅನಾಸಕ್ತನು, ಕ್ಷಮೆ-ಶಾಂತಿಯುಕ್ತನು, ದಯಾಪರನು; ಧನಾಶೆಯಾಗಲಿ, ಸಂತಾಪವಾಗಲಿ, ದೀನತೆಯಾಗಲಿ ಇಲ್ಲದವನು ಆಗಿರುವ ಈ ಲಕ್ಷಣಗಳಿಂದ ಯೋಗಿರಾಜನನ್ನು ಗುರುತಿಸಿರಿ.

ಧರೀ ರೇ ಮನಾ ಸಂಗತೀ ¸ Àಜ್ಜನಾಚೀ |
ಜೇಣೇ ವೃತ್ತಿ ಹೇ ಪಾಲಟೀ ದುರ್ಜನಾಚೀ ||
ಬಳೇ ಭಾವ ಸದ್ಬುದ್ಧಿ ಸನ್ಮಾರ್ಗ ಲಾಗೇ |
ಮಹಾ P À್ರೂರ ತೋ ಕಾಳ ವಿಕ್ರಾಳ ಭಂಗೇ ||135||

ಮನವೆ ಮೆಚ್ಚುತ ಮಾಡು ಸಜ್ಜನರ ಸಂಗ |
ದಿನ ದಿನವು ದುರ್ಜನರ ದುರ್ವೃತ್ತಿ ಭಂಗ ||
ಸನ್ಮಾರ್ಗ ಸದ್ಭುದ್ಧಿ ಸತತ ಸೂಚುವುದು |
ಸನ್ಮಾರ್ಗಿ ಸಹವಾಸ ಕಾಲ ಶೂಲವದು ||135||

ಎಲೋ ಮನವೇ, ದುಷ್ಟನ ಸ್ವಭಾವವನ್ನು ಪರಿವರ್ತನೆ ಮಾಡಬಲ್ಲ ಸತ್ಸಂಗತಿ ಹಿಡಿಯಪ್ಪಾ ! ಸತ್ಸಂಗತಿಯಿಂದ ಬಲುಮೆಯಾಗಿಯೇ ಭಕ್ತಿ – ಜ್ಞಾನದ ಶ್ರೇಷ್ಠದಾರಿ ದೊರೆತು, ಮಹಾಭಯಂಕರನಾದ ಯಮನೇ ನಾಶಹೊಂದುವನು.

5. Àತ್ಯ¸ À್ವರೂಪದ ಶೋಧ-ಜ್ಞಾನೋಪದೇಶ
(ಶ್ಲೋP À 136-177)
ಭಯೇ ವ್ಯಾಪಿಲೇ ಸರ್ವ ಬ್ರಹ್ಮಾಂಡ ಆಹೇ |
ಭಂi ÀiÁತೀತ ತೇ ¸ Àಂತ ಅನಂತ ಪಾಹೇ ||
ಜಯಾ ಪಾಹತಾ ದ್ವೈತ ಕಾಂಹೀ ದಿಸೇನಾ |
ಭಂi Àು ಮಾನಸೀ ಸರ್ವಥಾಹೀ ಆಸೇನಾ ||136||

ಭಯಭಾರಿ ಭೋರಿಡಲು ಬ್ರಹ್ಮಾಂಡದಲ್ಲಿ |
ಭಯವಳಿದ ಜ್ಞಾನಿಗತ್ಯಾನಂದವಲ್ಲಿ |
ಅನುಭವಕ್ಕದ್ವೈತ ಭಾವ ಕಾಣುವುದು |
ಮನದಲ್ಲಿ ಹುಡುಕೆ ಭಯ ಲೇಶವೂ ಸಿಗದು ||136||

ವಿಶ್ವವೆಲ್ಲವೂ ಭೀತಿಯಿಂದ ಆವರಿಸಿದ್ದು ಸತ್ಯಜ್ಞಾನಾನಂತ ಪರಬ್ರಹ್ಮವು ಮಾತ್ರ ನಿರ್ಭಯವಾಗಿದೆ. ಅದನ್ನು (ಬ್ರಹ್ಮವನ್ನು) ಅರಿತರೆ ಎಷ್ಟು ಮಾತ್ರವೂ ದ್ವೈತ ತೋರದು ಹಾಗೂ ಮನದಲ್ಲಿ ಭಯವೆಂದಿಗೂ ಉಳಿಯದು.

ಜಿವಾ ಶ್ರೇಷ್ಠತೇ ಸ್ಪಷ್ಟ ಸಾಂಗೋನಿ ಗೇಲೇ |
ಪರಿ ಜೀವ ಅಜ್ಞಾನ ತೈಸೇಚಿ ಠೇಲೇ ||
ದೇಹೇ ಬುದ್ಧಿಚೇ P Àರ್ಮ ಖೋಟೇ ಟಳೇನಾ |
ಜುನೇ ಠೇವಣೇ ಮೀಪಣೇ ಆP Àಳೇನಾ*38 ||137||

ತೋರಿಸಿರೆ ಗುರುವೀಶ ಪ್ರಾಪ್ತಿ ಬಗೆಯನ್ನು |
ಮೋರೆ ಮುರಿವನು ಮೂಢ ಮನುಜನವನಿನ್ನು ||
ಹಾನಿಕರ ದೇಹಾತ್ಮ ಬುದ್ಧಿಯಿರಲವಗೆ |
ಜ್ಞಾನ ನಿಧಿ ಕಾಣದದು ಮೂಢಬದ್ಧನಿಗೆ ||137||

ಶ್ರೇಷ್ಠರಾದ ಸಾಧುಸಂತರು ಜೀವರಿಗೆ ವಿಶದವಾಗಿ ಬೋಧಮಾಡಿ ಹೋಗಿದ್ದರೂ, ಜೀವರು ಹಾಗೆಯೇ ಅಜ್ಞಾನಿಗಳೇ ಉಳಿದರು ! ಅವರ ನಿರರ್ಥಕ ದೇಹಬುದ್ಧಿಯ ಕಾಯಕವೇನು ಅಳಿಯಲೊಲ್ಲದು ಹಾಗೂ ಕಳೆದುಹೋದ ಪುರಾತನ ನಿಧಿಯೇನು ಅಹಂಕಾರ ಮೂಲಕವಾಗಿ ಸಿಗಲೊಲ್ಲದು !

ಭ್ರಮೇ ನಾಢಳೇ ವಿತ್ತತೇ ಗುಪ್ತ ಝಾಲೇ |
ಜೀವಾ ಜನ್ಮದಾರಿದ್ರ್ಯ ಠಾP Àೂನೀ ಆಲೇ ||
ದೇಹೇಬುದ್ಧಿಚಾ ನಿಶ್ಚಯೋ ಜ್ಯಾ ಢಳೇನಾ
ಜುನೇ ಠೇವಣೇ ಮೀಪಣೇ ಆP Àಳೇನಾ ||138||

ಧನವ ಹೂತಿಟ್ಟೆಡೆಯು ತಿಳಿಯದಿರೆ ಹೇಗೆ |
ಜನನ ದಾರಿದ್ರ್ಯ ವಳಿಯುವುದಲ್ಲೋ ಹಾಗೆ ||
ಜ್ಞಾನದಲಿ ದೇಹಾತ್ಮದರಿವಳಿವವರೆಗೆ
ಜ್ಞಾನ ವಿಧಿ ಕಾಣದದು ಮೂಢಬದ್ಧನಿಗೆ ||138||

ಭ್ರಾಂತಿಯಿಂದ ತನ್ನ ಧನವೇ ತನಗೆ ಸಿಗದೆ ಅಡಗಿಹೋದಂತೆ, ಜೀವರಿಗೆ ತಪ್ಪದೆ ಹುಟ್ಟುದರಿದ್ರತೆ ಬಂದಿರುವದು ! ಅವರ ದೇಹತ್ಮಾಬುದ್ಧಿಯ ನಿಶ್ಚಯವೇನು ಸರಿಯಲೊಲ್ಲದು ಹಾಗೂ ಕಳೆದು ಹೋದ ಪುರಾತನ ನಿಧಿಯೇನು ಅಹಂಕಾರ ಮೂಲಕವಾಗಿ ಸಿಗಲೊಲ್ಲದು!

ಫುಡೇ ಪಾಹತಾ ಸರ್ವಹೀ ಕೋಂದಲೇಸೇ |
ಅಭಾಗ್ಯಾಸ ಹೇ ದೃಶ್ಯ ಪಾಷಾಣ ಭಾಸೇ ||
ಅಭಾವೇ P Àದಾ ಪುಣ್ಯ ಗಾಠೀ ಪಡೇನಾ |
ಜುನೇ ಠೇವಣೇ ಮೀಪಣೇ ಆP Àಳೇನಾ ||139||

ಆತ್ಮಧನ ನೋಡು ನಿನ್ನೆದುರಿನಲ್ಲಿಹುದು |
ಆತನನು ಲೋಷ್ಟವೆನಲೇನ ಹೇಳುವುದು ||
ಜ್ಞಾನದಿಂದ ಶ್ರದ್ಧೆ ತೊಳೆದಳಿವವರೆಗೆ |
ಜ್ಞಾನ ನಿಧಿ ಕಾಣದುದು ಮೂಢ ಬದ್ಧನಿಗೆ ||139||

ಎದುರಿಗೆ ತೋರುವದೇನೆಲ್ಲವೂ ಆತ್ಮಮಯವಿರುವದು; ಆದರೆ ದುರ್ದೈವಿಗಳಿಗೆ ಈ ಜಗತ್ತು ಕಲ್ಲು-ಮಣ್ಣಾಗಿಯೇ ಅನಿಸುವದು ! ಅವಿಶ್ವಾಸದಿಂದಲೇನು ಪುಣ್ಯ ಪದರಿಗೆ ಬೀಳದು ಹಾಗೂ ಕಳೆದುಹೋದ ಪುರಾತನ ನಿಧಿಯೇನು ಅಹಂಕಾರ ಮೂಲಕವಾಗಿ ಸಿಗಲೊಲ್ಲದು!

ಜಯಾಚೇ ತಯಾ ಚೂP Àಲೇ ಪ್ರಾಪ್ತನಾಂಹೀ |
ಗುಣೇ ಗೋವಿಲೇ ಜಾಹಲೇ ದುಃಖ ದೇಹೀ ||
ಗುಣಾ ವೇಗಳೀ ವೃತ್ತಿ ತೇಹೀ ವಳೇನಾ |
ಜುನೇ ಠೇವಣೇ ಮೀಪಣೇ ಆP Àಳೇನಾ ||140||

ಮನುಜಗಾತ್ಮಜ್ಞಾನ ಗುಪ್ತಧನ ವಹುದು |
ಗುಣಬಂಧವಳಿ ವನಕ ಮನವೆ ಕಾಣ ಸದು ||
ಹಾನಿಸಿ ಗುಣಾತೀತ ನಾಗದಿರಲವಗೆ |
ಜ್ಞಾನನಿಧಿ ಕಾಣದದು ಮೂಢ ಬದ್ಧನಿಗೆ ||140||

ತ್ರಿಗುಣದಿಂದ ಬಂಧಿತನಾಗಿ ದುಃಖ ಅನುಭವಿಸುತ್ತಿರುವ ಜೀವನಿಗೆ ಕಳೆದ ತನ್ನ ಸೊತ್ತೆ ತನಗೆ ಸಿಗದಾಗಿದೆ; ಅವನ ಮನಸ್ಥಿತಿಯೇನು ಗುಣಹಿತವಾಗಲೊಲ್ಲದು ಹಾಗೂ ಕಳೆದುಹೋದ ಪುರಾತನ ನಿಧಿಯು ಅಹಂಕಾರ ಮೂಲಕವಾಗಿ ಸಿಗಲೊಲ್ಲದು !

ಮ್ಹಣೇ ದಾಸ ಸಾಯಾಸ ತ್ಯಾಚೇ P Àರಾವೇ |
ಜನೀ ಜಾಣತಾ ಪಾಂi Àು ತ್ಯಾಚೇ ಧರಾವೇ ||
ಗುರೂ ಅಚಿಜನೇವೀಣ ತೇ ಆP Àಳೇನಾ |
ಜುನೇ ಠೇವಣೇ ಮೀಪಣೇ ಆP Àಳೇನಾ ||141||

ತನುಭಾವ ಕಳೆದು ಗುರುದಾಸ ನಾಗುವುದು |
ವಿನಯದಲಿ ಪಾದ ಸೇವೆಯನೆ ಮಾಡುವುದು ||
ಜ್ಞಾನಿ ಗುರುವಿನ ಕೃಪಾಂಜನ ಬಿಳ್ಪವರೆಗೆ |
ಜ್ಞಾನ ನಿಧಿ ಕಾಣವದು ಮೂಢ ಬದ್ಧನಿಗೆ ||141||

ಸಾರಾಂಶದಲ್ಲಿ ರಾಮದಾಸರು ಹೇಳುವದೇನೆಂದರೆ, ಆತ್ಮ ಪ್ರಾಪ್ತಿಗಾಗಿ ಜ್ಞಾನಿಗೆ ಶರಣು ಹೋಗಿ ಅವನ ಸೇವೆ ಮಾಡಬೇಕು. ಯಾಕೆಂದರೆ ಗುರು ಅಚಿಜನದ ಹೊರತಾಗಿಯೇನು ಅಹಂಕಾರದಿಂದ ಎರವಾದ ಪುರಾತನ ಆತ್ಮನಿಧಿಯು ಸಿಗಲಾರದು !

P Àಳೇನಾ P Àಳೇನಾ P Àಳೇನಾ ಢಳೇನಾ |
ಢಳೇ ನಾಢಳೇ ಸಂಶಯೋಹೀ ಢಳೇನಾ ||
ಗಳೇನಾ ಗಳೇನಾ ಅಹಂತಾ ಗಳೇನಾ |
ಬಳೇ ಆP Àಳೇನಾ ಮಿಳೇನಾ ಮಿಳೇನಾ ||142||

ತೋರದದು ತೋರದದು ಭಕ್ತಿ ತೊರೆದವಗೆ |
ದೂರವದು ದೂರವದು ಸಂಶಯಾತ್ಮನಿಗೆ ||
ಸರಿಯುವದು ಸರಿಯುವದು ಹಮ್ಮಿರುವವರೆಗೆ |
ದೊರೆಯದದು ದೊರೆಯದದು ಅತಿ ಮೊಂಡನರಗೆ ||142||

ಸ್ವಬುದ್ಧಿಯಿಂದ ಮಾಡಿದ ಸಾಧನಾದಿಗಳಿಂದ ಪರವಸ್ತುವೆಂದಿಗೂ ತಿಳಿಯದು ಸಂಶಯವೆಂದಿಗೂ ಅಳಿಯದು, ಅಹಂಕಾರವೆಂದಿಗೂ ತೊಲಗದು ಹಾಗೂ ಎಷ್ಟೇ ಸಾಹಪಟ್ಟರೂ ಆತ್ಮಪ್ರಾಪ್ತಿಯಾಗಲಾರದು !

ಅವಿದ್ಯಾಗುಣೇ ಮಾನವಾ ಊಮಜೇನಾ |
ಭ್ರಮೇ ಚೂP Àಲೇ ಹೀತ ತೇ ಆP Àಳೇನಾ ||
ಪರೀಕ್ಷೇವಿಣೇ ಬಾಂಧಿಲೇ ದೃಢ ನಾಣೇ |
ಪರೀ ಸತ್ಯ ಮಿಥ್ಯಾ ಅಸೇ ಕೋನಾ ಜಾಣೇ ||143||

ನರನಲ್ಲಹಂಕಾರ ವಜ್ಞಾನ ವಿರಲು |
ಮರೆತು ಭ್ರಮದಲ್ಲಿ ಸುಖಿಯೆಂದು ತಿಳಿಯುವೊಲು ||
ಖೊಟ್ಟ ನಾಣ್ಯವನು ಲಿನಿಜವೆಂದು ಬಗೆದಂತೆ |
ನಿಷ್ಠೆಯಲಿ ಸತ್ಯವನು ತಿಳಿಯದಿರೆ ಚಿಂತೆ ||143||

ಅಜ್ಞಾನದ ಮೂಲಕವಾಗಿ ಮನುಷ್ಯನಿಗೆ ಆತ್ಮನ ಅರಿವಾಗಲೊಲ್ಲದು ಹಾಗೂ ಭ್ರಮೆಯ ದೆಸೆಯಿಂದ ಕಳೆದು ಹೋದ ಆನಂದವು ಸಿಗಲೊಲ್ಲದು ! ಸಾರಾಂಶ, ದುಃಖ – ಬಂಧನಕ್ಕೆ ಅಜ್ಞಾನ ಹಾಗೂ ಭ್ರಮೆಯೇ ಕಾರಣವು. ನೆಟ್ಟಗೆ ಪರೀಕ್ಷಿಸದೆ ನಾಣ್ಯವನ್ನು ಪದರಿಗೆ ಕಟ್ಟಿದರೇನಂತೆ ! ಅದು ಖರೆಯೋ ಖೊಟ್ಟಿಯೋ ಯಾರು ಬಲ್ಲರು?

ಜಗೀ ಪಾಹತಾ ಸಾಚ ತೇ ಕಾಯ ಆಹೇ |
ಅತೀ ಆದರೇ ¸ Àತ್ಯ ಶೋಧೂನಿ ಪಾಹೇ |
ಫುಢೇ ಪಾಹತಾ ಪಾಹತಾ ದೇವ ಜೋಡೇ |
ಭ್ರಮ ಭ್ರಾಂತಿ ಅಜ್ಞಾನ*39ಹೇ ¸ Àರ್ವ ಮೋಡೇ ||144||

ಜಗದಲಿ ಸತ್ಯರೂಪವದೆಂತು ನೋಡು |
ಜಗದೀಶ ಜ್ಯೋತಿಯನ್ನನುಭವಿಸಿ ಪಾಡು ||
ನಿತ್ಯದೀಪರಿ ನಡೆಯುತಿರೆ ದೇವ ಕಾಣುವನು |
ಮಿಥ್ಯ ಭ್ರಮ ಹರಿಯುತಲೆ ಮುಕ್ತನಾಗುವನು ||144||

ಪರೀಕ್ಷಿಸಿ ನೋಡಿದರೆ ಜಗತ್ತಿನಲ್ಲಿ ಯಾವದು ಸತ್ಯವಿರುವದು? ಯಾವದೂ ಇಲ್ಲವಾದ್ದರಿಂದ ನೀನು ಒಳ್ಳೇ ಜಿಜ್ಞಾಸೆಯಿಂದ ಸತ್ಯವನ್ನು ಶೋಧಿಸಿ ನೋಡಪ್ಪಾ. ಬಿಡದೆ ಸತ್ಯದ ಶೋಧ ಮಾಡಿದರೆ ಸತ್ಯಸ್ವರೂಪೀ ದೇವನು ಲಭಿಸಿ ಅಜ್ಞಾನ ಬಯಲು ಭ್ರಾಂತಿಯೆಲ್ಲವೂ ಅಳಿಯುವದು.

ಸದಾ ವಿಷಯೋ ಚಿಂತಿತಾ ಜೀವ ಜಾಲಾ|
ಅಹಂಭಾವ ಅಜ್ಞಾನ ಜುನ್ಮಾಸಿ ಆಲಾ ||
ವಿವೇಕೇ ಸದಾ ಸ್ವಸ್ವರೂಪೀ ಭರಾವೇ |
ಜೀವಾ ಊಗಮೀ ಜನ್ಮ ನಾಂಹೀ ಸ್ವಭಾವೇ ||145||

ಚಿಂತಿಸಲು ವಿಷಯವನು ಪುನರ್ಜನ್ಮವಹುದು |
ಅಂತೆಯಜ್ಞಾನಹಂಕೃತಿ ಚಿತೆಗೆ ಬಹುದು ||
ಮೂಲರೂಪ ಗುರುತಿಸುತ ವಿವೇಕದಲ್ಲಿ |
ಮೂಲದಲಿ ಸೇರಿಬಿಡೆ ಜನುಮ ಮತ್ತೆಲ್ಲಿ ||145||

ಜೀವನು ಸತತವಾಗಿ ವಿಷಯ ಚಿಂತನೆ ಮಾಡುತ್ತಾ ಅಜ್ಞಾನ ಅಹಂಕಾರದಿಂದ ಜನ್ಮಕ್ಕೆ ಬಂದಿರುವನು ! ಆದರೆ ನಿಜವಾಗಿ ಅವನಿಗೆ ಮೂಲತಃ ಜನ್ಮವೇ ಇಲ್ಲದ್ದರಿಂದ, ವಿವೇಕದಿಂದ ಆ ತನ್ನ ಆತ್ಮ ಸ್ವರೂಪದಲ್ಲಿ ತನ್ಮಯನಾಗಬೇಕು.

ದಿಸೇ ಲೋಚನೀ ತೇ ನಸೇ P Àಲ್ಪಕೋಡೀ |
ಅಕಸ್ಮಾತ ಆಕಾರಲೇ ಕಾಳ ಮೋಡೀ ||
ಫುಢೇ ¸ Àರ್ವ ಜಾಯೀಲ ಕಾಂಹೀ ನ ರಾಹೇ |
ಮನಾ ಸಂತ ಅನಂತ ಶೋಧೂನಿ ಪಾಹೇ*40 ||146||

ದೃಶ್ಯ ಜಗವಿದನು ಶಾಶ್ವತ ವೆನಲು ಸಲ್ಲ |
ನಶ್ವರಕೆ ನಾಶವೆಂದಿಗೂ ತಪ್ಪಲಿಲ್ಲ |
ಕೊನೆಗೆ ಕಾಲನಲಿ ಕಳಿತು ಕಲೆವುದು ನೋಡು |
ಮನ ವಿನ್ನನಂತ ಸತ್ಯವ ಹುಡುಕಿ ಹಾಡು ||146||

ಕಣ ್ಣಗೆ ಕಾಣ ಸುವ ದೃಶ್ಯವು ಶಾಶ್ವತವಾಗಿ ಉಳಿಯಲಾರದು, ಆಕಾರಕ್ಕೆ ಬಂದ ಜಗತ್ತನ್ನು ಕಾಲನು ಒಮ್ಮಿಂದೊಮ್ಮೆಲೆ ನಾಶ ಮಾಡುವನು ! ಒಟ್ಟಿಗೆ, ಮುಂದೆ ಎಲ್ಲವೂ ನಾಶವಾಗಿ ಏನು ಉಳಿಯಲಾರದ ಕಾರಣದಿಂದ ಮನವೇ, ನಿತ್ಯ ಪರಿಪೂರ್ಣ ವಸ್ತುವನ್ನು ಶೋಧಿಸಿ ನೋಡು.

ಫುಟೇನಾ ತುಟೇನಾ ಚಳೇನಾ ಢಳೇನಾ |
ಸದಾ ಸಂಚಲೇ ಮೀಪಣೇ ತೇ P Àಳೇನಾ ||
ತಂi ÀiÁ ಏಕರೂಪಾಸಿ ದೂಜೇ ನ ಸಾಹೇ |
ಮನಾ ಸಂತ ಅನಂತ ಶೋಧೂನಿ ಪಾಹೇ ||147||

ನೋಡಲಿರೆ ಚರ್ಮ ಚಕ್ಷುವಿಗವನು ಸಿಗನು |
ನೋಡೆ ಜ್ಞಾನಾಕ್ಷಿಯೊಳು ನಿರತು ಗೋಚರನು ||
ಜನಿಸೆ ಜ್ಞಾನವು ತ್ರಿಪುಟಿಯಳಿಯುವುದು ನೋಡು |
ನವಿನ್ನನಂತ ಸತ್ಯವ ಹುಡುಕಿ ಹಾಡು ||147||

40* ಮನಾ ಸಂತ ಅನಂತ ಶೋಧೂನಿ ಪಾಹೇ: 146-150 (5 ಶ್ಲೋಕ)

ಸದ್ವಸ್ತುವಾದರೋ ಒಡೆಯದು, ಹರಿಯದು, ಚಲಿಸದು, ಅಲುಗಾಡದು ಹಾಗೂ ಯಾವಾಗಲೂ ಎಲ್ಲೆಡೆಯಲ್ಲಿ ನೆಲೆಸಿರುವದು; ಆದರೆ ಅಹಂಭಾವದಿಂದ ಅದು ತಿಳಿಯದಾಗಿದೆ ! ಆ ಏಕಮೇವ ವಸ್ತುವಿಗೆ ಎರಡನೇಯದೆನ್ನುವದೇ ಸಹಿಸದು !! ಮನವೇ ಇಂತಹ ನಿತ್ಯ ಪರಿಪೂರ್ಣ ವಸ್ತುವನ್ನು ಶೋಧಿಸಿ ನೋಡು.

ನಿರಾಕಾರ ಆಧಾರ ಬ್ರಹ್ಮಾದಿಕಾಂಚಾ |
ಜಯಾ ಸಾಂಗತಾ ಶೀಣಲೀ ವೇದವಾಚಾ ||
ವಿವೇಕೇ ತದಾಕಾರ ಹೋವುನಿ ರಾಹೆ |
ಮನಾ ಸಂತ ಅನಂತ ಶೋಧೂನಿ ಪಾಹೇ ||148||

ಆಧಾರ ನಹುದವನು ಮುಮೂರ್ತಿಗಳಿಗೆ |
ವೇದಕ್ಕಗೋಚರ ನಿರಾಕಾರ ಕಣ್ಗೆ |
ವನಜ ನಾಭನೊಳು ಲೀನ ವಿವೇಕಿ ನೋಡು |
ಮನವಿನ್ನನಂತ ಸತ್ಯವ ಹುಡುಕಿ ಹಾಡು ||148||

ಬ್ರಹ್ಮದೇವ ಮೊದಲಾದವರೆಲ್ಲರಿಗೂ ಆಧಾರವಾದ ನಿರಾಕಾರ ಬ್ರಹ್ಮವನ್ನು ವಣ ್ಸಹೋಗಿ ವೇದವಾಣ ಯೂ ದಣ ಯಿತು! ಅದಕ್ಕಾಗಿ ಮನವೇ, ಬ್ರಹ್ಮವನ್ನು ಬುದ್ಧಿಯಿಂದ ಗ್ರಹಿಸಲೆತ್ನಿಸದೇ ವಿವೇಕದಿಂದ ಬ್ರಹ್ಮರೂಪವಾಗಿ ನೆಲಿಸು – ಹೀಗೆ ನಿತ್ಯ ಪರಿಪೂರ್ಣ ವಸ್ತುವನ್ನು ಶೋಧಿಸಿ ನೋಡು.

ಜಗೀ ಪಾಹತಾ ಚರ್ಮಚಕ್ಷೀ ನ ಲಕ್ಷೇ |
ಜಗೀ ಪಾಹತಾ ಜ್ಞಾನಚಕ್ಷೀ ನ ರಕ್ಷೆ ||
ಜಗೀ ಪಾಹತಾ ಪಾಹಣೇ ಜಾತ ಆಹೇ |
ಮನಾ ಸಂತ ಅನಂತ ಶೋಧೂನಿ ಪಾಹೇ ||149||

ನೋಡಲಿರೆ ಚರ್ಮ ಚಕ್ಷುವಿಗವನು ಸಿಗನು |
ನೋಡೆ ಜ್ಞಾನಾಕ್ಷಿಯೊಳು ನಿರತು ಗೋಚರನು ||
ಜನಿಸೆ ಜ್ಞಾನವು ತ್ರಿಪುಟಿಯಳಿಯುವುದು ನೋಡು |
ನವಿನ್ನನಂತ ಸತ್ಯವ ಹುಡುಕಿ ಹಾಡು ||149||

ಸದ್ವಸ್ತುವನ್ನು ಚರ್ಮಚಕ್ಷುವಿನಿಂದ (ಸ್ಥೂಲ ಕಣ್ಣುಗಳಿಂದ) ನೋಡಲಿಕ್ಕೆ ಬಾರದು; ಆದರೆ ಜ್ಞಾನಚಕ್ಷುವಿನಿಂದ (ಜ್ಞಾನರೂಪೀ ಕಣ ್ಣನಿಂದ) ಅದನ್ನು ನಿರೀಕ್ಷಿಸಬಹುದು. ಆದರೆ ಎಲ್ಲ ಜನರ ನೋಟವು ದೃಶ್ಯ ಪದಾರ್ಥಗಳನ್ನು ನೋಡುವದರಲ್ಲಿಯೇ ವ್ಯರ್ಥವಾಗುತ್ತಿರುವದು ! ಮನವೇ, ನೀನು ವಿವೇಕದಿಂದ ಪರಿಪೂರ್ಣ ವಸ್ತುವನ್ನು ಶೋಧಿಸಿ ನೋಡು.

ನಸೇ ಪೀತ ನಾ ಶ್ವೇತ ನಾ ಶ್ಯಾಮ ಕಾಂಹೀ |
ನಸೇ ವ್ಯP À್ತ ಅವ್ಯP À್ತನಾ ನೀಳ ನಾಹಿ ||
ಮ್ಹಣೇ ದಾಸ ವಿಶ್ವಾ¸ Àತಾ ಮುಕ್ತಿ ಲಾಹೇ |
ಮನಾ ಸಂತ ಅನಂತ ಶೋಧೂನಿ ಪಾಹೇ ||150||

ಸಿತಪೀತ ಶ್ಯಾವಾದಿ ವರ್ಣವಿರಹಿತನು |
ಸತತ ವ್ಯಕ್ತಾವ್ಯಕ್ತಗಳ ಮೀರಿದವನು ||
ಜನುಮ ತಪ್ಪಿಬಲ್ಲ ಗುರುಸೇವೆ ಮಾಡು |
ಮನವಿನ್ನನಂತೆ ಸತ್ಯವ ಹುಡುಕಿ ಹಾಡು ||150||

ಆತ್ಮಸ್ವರೂಪವು ಹಳದೀ – ಬೆಳ್ಳಗೆ-ಕಪ್ಪು-ನೀಲಿ ಇತ್ಯಾದಿ ಯಾವ ಬಣ್ಣದುದಲ್ಲ; ಅಥವಾ ವ್ಯಕ್ತ (ಪ್ರಕಟ) – ಅವ್ಯಕ್ತ (ಅಪ್ರಕಟ)ವೂ ಅಲ್ಲ. ರಾಮದಾಸರು ಹೇಳುವದೇನೆಂದರೆ ಇಲ್ಲಿ ಮುಖ್ಯವಾಗಿ ಶ್ರದ್ಧೆಯಿಡುವದರಿಂದಲೇ ಮುಕ್ತಿ ಲಭಿಸುತ್ತದೆ. ಮನವೇ, ಈ ರೀತಿಯಾಗಿ ನಿತ್ಯ ಪರಿಪೂರ್ಣ ವಸ್ತುವನ್ನು ಶೋಧಿಸಿ ನೋಡು.

ಖರೇ ಶೋಧಿತಾ ಶೋಧಿತಾ ಶೋಧಿತಾಹೇ |
ಮನಾ ಬೋಧಿತಾ ಬೋಧಿತಾ ಬೋಧಿತಾಹೇ ||
ಪರೀ ಸರ್ವಹೀ ಸಜ್ಜನಾಚೆನಿ ಯೋಗೇ |
ಬರಾ ನಿಶ್ಚಯೋ ಪಾವಿಜೇ ಸಾನುರಾಗೇ ||151||

ಆತ್ಮನನು ಹುಡುಕುತಿರಲವ ದೊರೆಯಲೊಲ್ಲ |
ಆತನನು ಕೇಳಿ ತಿಳಿವುದು ಸಾಧ್ಯವಿಲ್ಲ ||
ಸದ್ಗುರು ವಿನಾಶ್ರಯ ವಿರದೆ ಕಾಣಲೊಲ್ಲ |
ಚಿದ್ಗುರುವು ಕೃಪೆ ದೋರದಿರೆ ದಾರಿಯಿಲ್ಲ ||151||

ಮನವೇ, ಎಲ್ಲರೂ ಸತ್ಯವನ್ನು ಬಹುಕಾಲ ಹಾಗೆಯೇ ಹುಡುಕುತ್ತಲೇ ಇರುವರು ಹಾಗೂ ಅದರ ಬಗ್ಗೆ ಎಷ್ಟೋ ಉಪದೇಶವಾದರೂ ಮಾಡುವರು ! ಆದರೆ ಸಂತ ಜನರ ಸಹವಾಸದಿಂದ ಮಾತ್ರ ಶ್ರವಣಾದಿ ಎಲ್ಲವೂ ಘಡಿಸಿ, ಸ್ಯದ ಯಥಾರ್ಥ ಜ್ಞಾನ ಲಭಿಸುವದು.

ಬಹುತಾಪರೀ P Àೂಸರೀ ತತ್ತ್ವ ಝಾಡಾ |
ಪರೀ ಪಾಹಿಜೇ ಅಂತರಿ ತೋ ನಿವಾಡಾ ||
ಮನಾ ಸಾರ ಸಾಚಾರ ತೇ ವೇಗಳೇ ರೇ |
ಸಮಸ್ತಾಮಧೇ ಏP À ತೇ ಆಗಳೇ ರೇ ||152||

ತತ್ವವಾದದ ಜಾಣ್ಮೆಯಲಿ ಲಾಭವಿಲ್ಲ |
ಸ್ವತ್ವ ಚಾತುರ್ಯಗಳಿಗವ ಸಿಕ್ಕೊಲೊಲ್ಲ ||
ನಿರ್ಲಿಪ್ತನನು ಕಾಣಲಾಚಾರಬೇಕು |
ನಿರ್ಲೇಪನಾಗೆ ಸತ್ಯದ ಬೋಧಬೇಕು ||152||

ತತ್ತ್ವ ಪರೀಕ್ಷೆಯು ಬಹಳ ಚಾತುರ್ಯದ ಕೆಲಸವಿದ್ದು, ತನ್ನಲ್ಲಿ ಬೇರೆ ಬೇರೆ ತತ್ತ್ವಗಳ ಸರಿಯಾದ ಜ್ಞಾನವು ಅವಶ್ಯವಿರುತ್ತದೆ. ಮನವೇ, ಹೀಗೆ ತತ್ತ್ವಗಳನ್ನು ತಿಳಿದರೂ ಸತ್ಯ ವಸ್ತುವು ಅವೆಲ್ಲಕ್ಕಿಂತ ಬೇರೆಯೇ ಇದ್ದು, ಅದು ಅವುಗಳಿಗಿಂತ ಅತ್ಯಂತ ಶ್ರೇಷ್ಠವೂ ಅಹುದು !

ನವ್ಹೇ ಪಿಂಡಜ್ಞಾನೇ ನವ್ಹೇ ತತ್ತ್ವಜ್ಞಾನೇ |
ಸಮಾಧಾನ ಕಾಂಹೀ ನವ್ಹೇ ತಾನಮಾನೇ ||
ನವ್ಹೇ ಯೋಗಯಾಗೇ ನವ್ಹೇ ಭೋಗತ್ಯಾಗೇ |
ಸಮಾಧಾನ ತೇ ¸ Àಜ್ಜನಾಚೇನಿ ಯೋಗೇ ||153||

ಪಿಂಡತ್ವ ಜ್ಞಾನದಿಂ ಲಭ್ಯವಲ್ಲ |
ಮೊಂಡ ಮನುಜಗೆ ಶಾಂತತೆಯು ದೊರೆವುದಿಲ್ಲ ||
ಯೋಗ ಯಾಗವು ತ್ಯಾಗ ಭೋಗ ತರಲಿಲ್ಲ |
ಯೋಗಿ ಗುರುವನು ಸೇವಿಸದೆ ಶಾಂತಿಯಿಲ್ಲ ||153||

ಶರೀರಜ್ಞಾನ, ಜಗತ್ತಿನಲ್ಲಿಯ ತತ್ತ್ವಗಳ ಜ್ಞಾನ, ಗಾಯನ, ವಾದನ, ಅಷ್ಟಾಂಗ ಯೋಗ, ಯಜ್ಞ, ವಿಷಯತ್ಯಾಗ ಇವಾವುದರಿಂದಲೂ ದೊರೆಯದ ಸಮಾಧಾನವು ಸಂತರಿಂದ ಲಭಿಸುತ್ತದೆ.

ಮಹಾವಾP À್ಯ ತತ್ತ್ವಾದಿಕೇ ಪಂಚಿP Àರ್ಣೇ |
ಖುಣೇ ಪಾವಿಜೇ ¸ Àಂತಸಂಗೇ ವಿವರ್ಣೇ ||
ದ್ವಿತೀಯೇಸಿ ಸಂಕೇತ ಜೋ ದಾವಿಜೇತೋ |
ತಂi ÀiÁ ಸಾಂಡುನೀ ಚಂದ್ರ ಮಾ ಭಾವಿಜೇತೋ ||154||

ಕಾಣದಿರೆ ಚಂದ್ರಮನು ಬೆರೆಯದರಂತೆ |
ಕಾಣ ಸುತ್ತಪಮಾನ ವಣ ್ಸುವದಲ್ಲೇ ||
ಮಹಾವಾಕ್ಯ ತತ್ವ ಪಂಚೀಕರಣಗಳನು |
ಇಹದಲ್ಲಿ ಗುರುವಚನದಲಿ ತಿಳಿಸುತಿಹನು ||154||

ಶುಕ್ಲಪಕ್ಷದ ಬಿದಿಗೆಯ ಸೂಕ್ಷ್ಮ ಚಂದ್ರನನ್ನು ದೃಷ್ಟಿಪಥದಲ್ಲಿ ತರುವದಕ್ಕಾಗಿ ಒಂದು ಗಿಡದ ಟೊಂಗೆಯಗುಂಟ ನೋಡಲಿಕ್ಕೆ ಹೇಳಲು, ವೀಕ್ಷಕನು ಶಾಖೆಯನ್ನು ಬಿಟ್ಟು ಚಂದ್ರನನ್ನು ನೋಡಲು
ಶಕ್ತನಾಗುವಂತೆ, ಸಂತರ ಪಂಚೀಕರಣ ಹಾಗೂ ತತ್ತ್ವಮಸಿ ಮಹಾವಾಕ್ಯದ ವಿವರಣೆಯಿಂದ ಆತ್ಮರಹಸ್ಯ ಹಸ್ತಗತವಾಗುವದು.

ದಿಸೇನಾ ಜನೀ ತೇಚಿ ಶೋಧೂನಿ ಆಹೇ |
ಬರೇ ಪಾಹತಾ ಗೂಜ ತೇಥೇ ಚಿ ಆಹೇ ||
P Àರೀ ಘೇವು ಜಾತಾ P Àದಾ ಆಢಳೇನಾ
ಜನೀ ಸರ್ವ ಕೋಂದಾಟಲೇ ತೇ P Àಳೇನಾ ||155||

ಸ್ಥೂಲ ದೃಶ್ಯಂಗಳೊಳು ತುಂಬಿದ್ದರಾತ |
ಸ್ಥೂಲ ಕಂಗಳಿಗೆ ಕಾಣನು ನೋಡೆ ತಾತ ||
ಮ್ಲಾನ ವದನವು ಬೇಡ ಕಣ್ಣೆದುರಿಗಿಹನು |
ಜ್ಞಾನ ದೃಷ್ಟಿಗೆ ಮಾತ್ರ ದೇವ ಗೋಚರನು ||155||

ಎಲ್ಲಿಯೂ ಕಾಣ ಸಲಾರದ ವಸ್ತುವನ್ನೇ ಕಂಡುಹಿಡಿ; ಜ್ಞಾನದೃಷ್ಟಿಯಿಂದ ಸರಿಯಾಗಿ ನೋಡಿದರೆ ಆ ರಹಸ್ಯವು ಅಲ್ಲಿಯೇ ಸಿದ್ಧವಿದೆ ! ಆದರೆ ಜಡ ವಸ್ತುವಿನಂತೆ ಅದನ್ನು ಕೈಯಿಂದ ಹಿಡಿಯಹೋದರೆ ಮಾತ್ರ ಅದೇನು ಸಿಗದು, ಎಲ್ಲರಲ್ಲಿಯೂ ತುಂಬಿಕೊಂಡಿದ್ದರೂ ಅದು ತಿಳಿಯದು !

ಮ್ಹಣೇ ಜಾಣತಾ ತೋ ಜನೀ ಮೂರ್ಖ ಪಾಹೇ |
ಅತಕ್ರ್ಯಾಸಿ ತರ್ಕೀ ಅಸಾ ಕೋಣ ಆಹೇ ||
ಜನೀ ಮೀಪಣೇ ಪಾಹತಾ ಪಾಹವೇನಾ |
ತಂi ÀiÁ ಲಕ್ಷಿತಾ ವೇಗಳೇ ರಾಹವೇನಾ ||156||

ತಿಳಿದೆ ಕಂಡಿಹೆನೆಂದು ಸಾರುವವ ಮೂರ್ಖ |
ತಿಳಿಸಲತಥ್ಯವನು ತಲ್ಲಣವು ತರ್ಕ ||
ಹಮ್ಮು ಭಾವವು ಸೋಂಕಿರಲು ಕಾಣನೆಂದೂ |
ಬ್ರಹ್ಮವನ್ನು ಕಾಣೆ ತದ್ರೂಪ ನೆಂದೆಂದು ||156||

“ನಾನು ಆತ್ಮವನ್ನು ತಿಳಿದಿರುವೆನೆಂದು ಅನ್ನುವವನು ಮೂರ್ಖನೇ ಸೈ! ಯಾಕೆಂದರೆ ಬುದ್ಧಿಗೆ ನಿಲುಕಲಾರದ ವಸ್ತುವನ್ನು ತಿಳಿಯಲು ಯಾವನು ಶಕ್ತನು? ಸತ್ಯವಾಗಿಯೂ ಅಹಂಕಾರ ಧರಿಸಿ ಆತ್ಮವಸ್ತುವನ್ನು ನೋಡಲಾಗದು ಹಾಗೂ ಆತನನ್ನು ಯಥಾರ್ಥವಾಗಿ ಲಕ್ಷಿಸಿದರೆ ತಾನು ಬೇರೆಯಾಗಿ ಉಳಿಯುವದೂ ಆಗದು !!!

ಬಹು ಶಾ¸ À್ತ್ರಧುಂಡಾಳಿತಾ ವಾಢ ಆಹೇ |
ಜಯಾ ನಿಶ್ಚಯೋ ಏP À ತೋಹೀ ನ ಸಾಹೇ ||
ಮತೀ ಭಾಂಡತೀ ಶಾಸ್ತ್ರಬೋಧೇ ವಿರೋಧೇ |
ಗತೀ ಖುಂಟಿತೀ ಜ್ಞಾನಬೋಧೇ*41ಪ್ರಬೋಧೇ ||157||

ಹುಡುಕುವಗೆ ಶಾಸ್ತ್ರ ಬಹು ವಿಸ್ತಾರವಹುದು |
ದುಡುಕುವವಗೇಕೆ ವಾಕ್ಯತೆಯಲ್ಲಿ ಸಿಗದು ||
ನಿನಗಹಿತ ಶಾಸ್ತ್ರ ಬೋಧ ವಿರೋಧ ವಾದ |
ಮನದ ಗತಿ ಕುಂಠಿತವು ದಿಸೆಜ್ಞಾನ ಬೋಧ ||157||

ಅನೇಕ ಶಾಸ್ತ್ರಗಳ ಅಭ್ಯಾಸವೊಂದು ಮಹಾರಣ್ಯವೇ ಅಹುದು ! ಅದರಲ್ಲಿ ಚರಿಸುವವನಿಗೆ ಒಂದು ನಿಶ್ಚಯವೂ ಗತಿಗಾಣುವುದಿಲ್ಲ !! ಆದರೆ ಮತವಾದಿಗಳು ಪರಸ್ಪರ ವಿರೋಧವಾದ ಶಾಸ್ತ್ರಜ್ಞಾನದಿಂದ ಸುಮ್ಮನೆ ಜಗಳಾಡುತ್ತಿರುವರು ! ಯಥಾರ್ಥ ಅನುಭವ ಜ್ಞಾನದಿಂದಲಾದರೋ ಬುದ್ಧಿಯ ಓಟವೇ ಮುಗಿದು ಶಾಂತಿ ಲಭಿಸುವದು.

ಶ್ರುತೀ ನ್ಯಾಂi Àು ಮೀಮಾಂಸಕೇ ತP ರ್Àಶಾಸ್ತ್ರೇ |
ಸ್ಮøತೀ ವೇದ ವೇದಾಂತವಾಕ್ಯೇ ವಿಚಿತ್ರೆ ||
ಸ್ವಯೇ ಶೇಷ ಮೌನವಲಾ ಸ್ಥೀರ ರಾಹೇ⧫🗐📄
ಮನಾ ಸರ್ವ ಜಾಣೇವ ಸಾಂಡೂನಿ ಪಾಹೇ●🗐🗏 ||158||

ಶುೃತಿ ನ್ಯಾಯ ಮೀಮಾಂಸಗಳು ತರ್ಕಶಾಸ್ತ್ರ |
ಸ್ಮøತಿ ವೇದಗಳ ವರ್ಣನೆಯು ಭಿನ್ನ ಸ್ತೋತ್ರ |
ಶೇಶ ವಣ ್ಸೆ ಸೋತುತಾ ಮೌನನಾದ |
ಕ್ಲೇಶಕರದಹಂಕೃತಿ ಕಳೆದು ತಿಳಿಬೋಧ ||158||

ಶಾಸ್ತ್ರವಿಸ್ತಾರವನ್ನಾದರೂ ಏನು ಹೇಳುವದು, ಋಗ್ವೇದಾದಿ 4 ವೇದಗಳು, ಪೂರ್ವಮೀಮಾಂಸಾ, ನ್ಯಾಯ-ವೈಶೇಷಿಕಾದಿ 6 ಶಾಸ್ತ್ರಗಳು, 18 ಪುರಾಣಾದಿ ಸ್ಮ ø ತಿಗ್ರಂಥಗಳು ಹಾಗೂ ಅವುಗಳಲ್ಲಿಯ ಚಮತ್ಕಾರಿಕ ವಿಭಿನ್ನಸಿದ್ಧಾಂತಗಳು !! ಇದೂ ಸಾಲದೆ ವಸ್ತುವಿನ ಬಗ್ಗೆ ಸಾವಿರ ನಾಲಿಗೆಯ ಶೇಷನೇ ಬೆಪ್ಪಗೆ ಕುಳಿತಿರಲು ಮನವೆ, ನಿನ್ನ ಜ್ಞಾನವೆಷ್ಟರದು? ಅದಕ್ಕಾಗಿ ಅರಿಯುವ ಹವ್ಯಾಸವನ್ನೆಲ್ಲತೊರೆದು ಆತ್ಮಸ್ವರೂಪವನ್ನು ಈಕ್ಷಿಸು.

41* ಪಾಠಭೇದ: ಶಾಸ್ತ್ರಬೋಧೇ.
42⧫ಪಾಠಭೇದ ಪಾಹೇ
43 ● ಪಾಠಭೇದ ರಾಹೇ

ಜೇಣೇ ಮಕ್ಷಿಕಾ ಭಕ್ಷಿಲೀ ಜಾಣ ವೇಚೀ |
ತಂi ÀiÁ ಭೋಜನಾಚೀ ರುಚೀ ಪ್ರಾಪ್ತಕೈಚೀ ||
ಅಹಂಭಾವ ಜ್ಯಾ ಮಾನಸೀಚಾ ವಿರೇನಾ |
ತಂi ÀiÁ ಜ್ಞಾನ ಹೇ ಅನ್ನ ಪೋಟೀ ಜಿರೇನಾ ||159||

ಅಹಮೆಂಬ ನೊಣವನ್ನು ನುಂಗಿರುವ ನರಗೆ |
ಮಹಜ್ಞಾನ ಭೋಜನವು ರುಚಿಪುದೆಂತವಗೆ ||
ಮನನೀಹಂಕಾರ ಕಿತ್ತೆಸೆವವರೆಗೆ |
ಘನ ಜ್ಞಾನ ಭೋಜನವು ಜೀಣ ್ಸದು ನಿನಗೆ ||159||

ಅಹಂಕಾರದ ನೊಣ ತಿಂದವನಿಗೆ ಜ್ಞಾನಾಮೃತ ಭೋಜನದ ಸವಿಯೆಲ್ಲಿಯದು ಬರಬೇಕು? ಚಿತ್ತದಲ್ಲಿಯ ಅಹಂಕಾರ ಅಳಿಯದವನಿಗೆ ಜ್ಞಾನರೂಪೀ ಅನ್ನವು ವಚನವಾಗದು !
ನಕೋ ರೇ ಮನಾ ವಾದ ಹಾ ಖೇದಕಾರೀ |
ನಕೋ ರೇ ಮನಾ ಭೇದ ನಾನಾ ವಿಕಾರೀ ||
ನಕೋ ರೇ ಮನಾ ಶೀಕಊ ಫೂಢಿಲಾಸೀ |
ಅಹಂಭಾವ ಜೋ ರಾಹಿಲಾ ತೂಜಪಾಸೀ ||160||

ಭೇದವತಿ ಖೇದ ಕರ ನಿನಗೆಂದು ಬೇಡ |
ವಾದವು ವಿಕಾರ ಕರವಡೆಯಿನಿತು ಬೇಡ ||
ನಿನ್ನೊಳಗಹಂಭಾವ ನೆಲೆಸಿರುವವರೆಗೆ |
ಇನ್ನು ಬೇಡುಪದೇಶ ಮಾಡುವುದು ಪರಗೆ ||160||

ಮನವೇ. ದುಃಖದಾಯಕ ವಾದವಿವಾದ ಮಾಡಬೇಡವಪ್ಪಾ! ಕೋಪಾದಿ ಅನೇಕ ವಿಕಾರಿಗಳಿಗೆ ಕಾರಣವಾಗುವ ‘ ಎದುರಿಗಿನವರು ಬೇರೆ’ ಎಂಬ ಭೇದ ಬುದ್ಧಿಯನ್ನು ತ್ಯಜಿಸಪ್ಪಾ ! ಮನವೇ, ನಿನ್ನಲ್ಲಿ ಇನ್ನೂ ಅಹಂಕಾರ ಮನೆ ಮಾಡಿದ್ದರಿಂದ ಅನ್ಯರಿಗೆ ಬುದ್ಧಿ ಕಲಿಸಲಿಕ್ಕೆ ಹೋಗಬೇಡ !

ಅಹಂತಾಗುಣೇ ¸ Àರ್ವಹೀ ದುಃಖ ಹೋತೇ |
ಮುಖೇ ಬೋಲಿಲೇ ಜ್ಞಾನ ತೇ ವ್ಯರ್ಥ ಜಾತೇ ||
ಸುಖೀ ರಾಹತಾ ಸರ್ವಹೀ ¸ Àೂಖ ಆಹೇ |
ಅಹಂತಾ ತುಝೀ ತೂಚಿ ಶೋಧೂನಿ ಪಾಹೇ ||161||

ಅಹಮಿರಲು ನಿನ್ನೊಳಗೆ ದುಃಖ ಜನಿಸುವುದು |
ಮಹಾಜ್ಞಾನದುಪದೇಶ ವ್ಯರ್ಥವಾಗುವುದು ||
ಮರೆಯದಲಹಂಕಾರ ಹುಡುಕಿ ಕೀಳುವುದು |
ಬೆರೆತಾತ್ಮರೂಪದಲಿ ಸುಖದಿ ಬಾಳುವುದು ||161||

ಅಹುದು, ಅಹಂಕಾರದಿಂದಲೇ ಎಲ್ಲ ದುಃಖವುಂಟಾಗುವದು ಹಾಗೂ ಬಾಯಿಯಿಂದ ಆಡಿದ ಜ್ಞಾನವು ನಿರರ್ಥಕವಾಗುವದು ! ನಿಜವಾಗಿಯೂ ಸುಖದಿಂದ ಇದ್ದರೆ ಎಲ್ಲವೂ ಸುಖಮಯವೇ ಇರುವದು; ಆದರೆ ಹಾಗೆ ಮಾಡಗೊಡದಿರುವದು ನಿನ್ನ ಅಹಂಕಾರವೇ ಎಂಬುದನ್ನು ಪರೀಕ್ಷಿಸಿ ನೋಡಿಕೋ.

ಅಹಂತಾಗುಣೇ ನೀತಿ ಸಾಂಡೀ ವಿವೇಕೀ |
ಅನೀತೀ ಬಳೇ ಶ್ಲಾಘ್ಯತಾ ಸರ್ವ ಲೋಕೀ ||
ಪರಿ ಅಂತರೀ ಸರ್ವಹೀ ಸಾP À್ಷ ಯೇತೇ |
ಪ್ರಮಾಣಾಂತರೀ ಬುದ್ಧಿ ಸಾಂಡೂನಿ ಜಾತೇ ||162||

ಜ್ಞಾನಿಗಹಮಿತಿ ನೀತಿ ಪತನವಾಗುವುದು |
ಮಾನಯುತಗದರೊಳಪಮಾನವಾಗುವುದು |
ಸುವಿವೇಕ ನಡೆಯಲಿ ಕುಂದ ತೋರುವುದು |
ಅವಿವೇಕಿ ತಿದ್ದದಿರಲೇನ ಹೇಳುವುದು ||163||

ವಿಚಾರಿಯೂ ಕೂಡ ಅಹಂಕಾರದಿಂದ ನೀತಿ ಬಿಟ್ಟು ನಡೆಯಹತ್ತುವನು ಹಾಗೂ ತನ್ನ ಅನೀತಿಯ ಪವರ್ತನದಿಂದಲೇ ಜನತೆಯ ಮಾನಸನ್ಮಾನ ಗಳಿಸುವನು ! ಅವನ ಅಂತರಂಗದಲ್ಲಿ ಅದೆಲ್ಲ ಹೊಳೆಯುತ್ತಿದ್ದರೂ ಸ್ವಾರ್ಥಮಯ ವಿಚಾರಗಳಿಂದ ಅವನ ವಿವೇಕ ದೂರವಾಗುತ್ತದೆ!

ದೇಹೇಬುದ್ಧಿಚಾ ನಿಶ್ಚಯೋ ದೃಢ ಜಾಲಾ|
ದೇಹಾತೀತ ತೇ ಹೀತ ಸಾಂಡಿತ ಗೇಲಾ ||
ದೇಹೇ ಬುದ್ಧಿತೇ ಆತ್ಮಬುದ್ಧೀ P Àರಾವೀ |
ಸದಾ ಸಂಗತೀ ¸ Àಜ್ಜನಾಚೀ ಧರಾವೀ*44 ||163||

ದೇಹ ಲಿಜೀವಗಳು ಬೇರೆಂಬರಿವಿನಿಂದ |
ದೇಹದರಿವನು ದಾಟುವುದು ದೂರವೆಂದ ||
ಸಚ್ಚಿದಾನಂದ ನೀನಾಗ ಬೇಕೇನು |
ನಿಚ್ಚ ಸಜ್ಜನ ಸಂಗವನು ಮಾಡು ನೀನು ||163||

ಮನುಷ್ಯನು ದೇಹವೇ ನಾನೆಂದು ದೃಢನಿಶ್ಚಯ ಮಾಡಿ, ದೇಹಭಾವದಾಚೆಗಿನ ಆತ್ಮಸುಖಕ್ಕೆ ಎರವಾಗಿರುವನು ! ಆದ್ದರಿಂದ ಈಗ ಅವನು ದೇಹಬುದ್ಧಿಯನ್ನು ಆತ್ಮಬುದ್ಧಿಯನ್ನಾಗಿ ಮಾರ್ಪಡಿಸಬೇಕು ಹಾಗೂ ಅದಕ್ಕಾಗಿ ನಿತ್ಯವೂ ಸಂತರ ಸಂಹವಾಸ ಮಾಡತಕ್ಕದ್ದು.

44* ಸದಾಸಂಗತೀ ಸಜ್ಜನಾಚೀ ಧರಾವೀ – 163-167 (5 ಶ್ಲೋಕ)

ಮನೇ P Àಲ್ಪಿಲಾವೀಷಯೋ ಸೋಡವಾವಾ |
ಮನೇ ದೇವ ನಿರ್ಗೂಣ ತೋವೋಳಖಾವಾ ||
ಮನೇ P Àಲ್ಪಿತಾ P Àಲ್ಪನಾ ತೇ ಸರಾವೀ |
ಸದಾ ಸಂಗತೀ ¸ Àಜ್ಜನಾಚೀ ಧರಾವೀ ||164||

ಮನವೆ ವಿಷಯದ ಚಿಂತನೆಯು ಬೇಡ ನಿನಗೆ |
ಅನುದಿನವು ಸುಖಿಸು ನಿರ್ಗುಣ ರೂಪದೊಳಗೆ ||
ಹುಚ್ಚು ಮದ ಕಲ್ಪನೆಯ ಕಳೆಯಬೇಕೇನು |
ನಿಚ್ಚ ಸಜ್ಜನ ಸಂಗವನು ಮಾಡು ನೀನು ||164||

ಮನವು ಕಲ್ಪಿಸಿದ ವಿಷಯವನ್ನು ಬಿಡಿಸಿ, ಅದೇ ಮನಸ್ಸಿನಿಂದಲೇ ನಿರ್ಗುಣ ಪರಮಾತ್ಮನನ್ನು ಗುರುತಿಸಬೇಕು. ಮನವು ಮತ್ತೆ ವಿಷಯ ಕಲ್ಪನೆಗಳಿಸಿದರೆ ಅದನ್ನು (ಕಲ್ಪನೆಯನ್ನು) ತಳ್ಳಿಹಾಕಬೇಕು ಹಾಗೂ ಇದೆಲ್ಲ ಸಾಧಿಸುವದಕ್ಕಾಗಿ ನಿತ್ಯವೂ ಸಂತರ ಸಹವಾಸ ಮಾಡತಕ್ಕದ್ದು.

ದೇಹಾದೀಕ ಪ್ರಪಂಚ ಹಾ ಚಿಂತಿಯೇಲಾ |
ಪರೀ ಅಂತರೀ ಲೋಭ ನಿಶ್ಚೀತ ಠೇಲಾ ||
ಹರೀಚಿಂತನೇ ಮುಕ್ತಿಕಾಂತಾ ವರಾವೀ |
ಸದಾ ಸಂಗತೀ ¸ Àಜ್ಜನಾಚೀ ಧರಾವೀ ||165||

ಸಂದೇಹವನು ಮನವೆ ಕಳೆದು ಬಿಡುಬೇಗ |
ಮುಂದೆ ನೀ ಬ್ರಹ್ಮರೂಪೇಂದರಿವುದಾಗ ||
ಇಚ್ಛಿಸಿ ಕಳೆವ ಕಾಲ ಫಲಿಸಬೇಕೇನು |
ನಿಚ್ಚ ಸಜ್ಜನ ಸಂಗವನು ಮಾಡು ನೀನು ||165||

ಶರೀರ-ಸ್ತ್ರೀ-ಪುತ್ರಾದಿ ಸಂಸಾರದ ಚಿಂತನೆಯಿಂದ ಅಂತಃಕರಣದಲ್ಲಿ ವಾಸನೆಯು ಬೇರೂರಿ, ಅದರಿಂದ ಜನ್ಮಮರಣದಲ್ಲಿ ಸಿಲುಕಬೇಕಾಗುವುದು ! ಆದರೆ ಅದಕ್ಕಿಂತಲೂ ಈಶ ಚಿಂತನೆ ಮಾಡಿ ಮುಕ್ತಿಸ್ತ್ರೀಯನ್ನು (ವಾಸನಾ ರಹಿತವಾಗಿ ಸಹಜಸ್ಥಿತಿಯಿಂದ ಇರುವ ಇರುವಿಕೆಯನ್ನು) ಪಡೆಯುವದು ಲೇಸಲ್ಲವೇ? ಈ ಉದ್ದೇಶದಿಂದ ನಿತ್ಯವೂ ಸಂತಹ ಸಹವಾಸ ಮಾಡತಕ್ಕದ್ದು.

ಅಹಂಕಾರ ವಿಸ್ತಾರಲಾ ಯಾ ದೇಹಾಚಾ |
ಸ್ತ್ರೀಂi ÀiÁ ಪುತ್ರ ಮಿತ್ರಾದಿಕೇ ಮೋಹ ತ್ಯಾಂಚಾ ||
ಬಳೇ ಭ್ರಾಂತಿ ಹೇ ಜನ್ಮಚಿಂತಾ ಹರಾವೀ |
ಸದಾ ಸಂಗತೀ ¸ Àಜ್ಜನಾಚೀ ಧರಾವೀ ||166||

ಬಲಿತಿರಲಹಂಕಾರ ಬದ್ಧನವ ಸತ್ಯ |
ಒಲಿದ ಸ್ತ್ರೀ ಪುತ್ರಾದಿ ವ್ಯಾಮೋಹ ಮಿಥ್ಯ ||
ಹೆಚ್ಚುತಿಹ ಭವ ಚಿಂತೆ ಕಳೆಯಬೇಕೇನು |
ನಿಚ್ಚ ಸಜ್ಜನ ಸಂಗವನು ಮಾಡು ನೀನು ||166||

ಈ ಶರೀರದ ಅಭಿಮಾನವೇ ಬೆಳೆದುಬಿಟ್ಟಿದ್ದು, ಅದರಿಂದ ಹೆಂಡತಿ, ಮಕ್ಕಳು, ಆಪ್ತರು, ಮಿತ್ರರು ಮೊದಲಾದವರ ಮೇಲೆ ಮೋಹವುಂಟಾಗಿರುವವದು. ಆದರೆ ಆ ಜನ್ಮವೂ ದುಃಖಕೊಡುವ ಈ ಭ್ರಮೆಯನ್ನು ನಿರಸನೆ ಮಾಡಲೇಬೇಕು. ಹಾಗೂ ಅದಕ್ಕಾಗಿ ನಿತ್ಯವೂ ಸಂತರ ಸಹವಾಸ ಮಾಡತಕ್ಕದ್ದು.

ಬರಾ ನಿಶ್ಚಯೋ ಶಾಶ್ವತಾಚಾ P Àರಾವಾ |
ಮ್ಹಣೇ ದಾಸ ಸಂದೇಹ ತೋ ವೀಸರಾವಾ ||
ಘಡೀನೇ ಘಡೀ ಸಾರ್ಥಕಾಚೀ P Àರಾವೀ |
ಸದಾ ಸಂಗತೀ ¸ Àಜ್ಜನಾಚೀ ಧರಾವೀ ||167||

ಸಂದೇಹವನು ಮನವೆ ಕಳೆದು ಬಿಡುಬೇಗ |
ಮುಂದೆ ನೀ ಬ್ರಹ್ಮರೂಪೇಂದರಿವುದಾಗ ||
ಇಚ್ಛಿಸಿ ಕಳೆವ ಕಾಲ ಫಲಿಸಬೇಕೇನು |
ನಿಚ್ಚ ಸಜ್ಜನ ಸಂಗವನು ಮಾಡು ನೀನು ||167||

ರಾಮ ದಾಸರು ಹೇಳುವದೇನೆಂದರೆ ಸಂಶಯವೆನ್ನುವದೇ ಮರೆತು ಹೋಗುವಷ್ಟು ಶಾಶ್ವತ ವಸ್ತುವಿನ ದೃಢನಿಶ್ಚಯ ಮಾಡಬೇಕು. ಹಾಗೂ ಅದಕ್ಕಾಗಿ ನಿತ್ಯವೂ ಸಂತರ ಸಹವಾಸ ಮಾಡಿ ಆಯುಷ್ಯದ ಪ್ರತಿಯೊಂದು ಕ್ಷಣವನ್ನೂ ಸಾರ್ಥಕ ಮಾಡಿಕೊಳ್ಳಬೇಕು.

P Àರೀ ವೃತ್ತಿ ಜೋ ¸ Àಂತ ತೋ ಸಂತ ಜಾಣಾ |
ದುರಾಶಾಗುಣೇ ಜೋ ನವ್ಹೇ ದೈ£ À್ಯವಾಣಾ ||
ಉಪಾಧೀ ದೇಹೇಬುದ್ಧಿತೇ ವಾಢವೀತೇ |
ಹರೀ ಸಜ್ಜನಾ ಕೇವಿ ಬಾಧೂ ಶಕೇ ತೇ ||168||

ಜ್ಞಾನ ದರ್ಶನವು ಸುವಿವೇಕದಿಮದಹುದು |
ಜ್ಞಾನ ದರಿವಿಲಿ ದೇಹ ಬುದ್ಧಿ ನಶಿಸುವುದು ||
ಸ್ಥಿರ ವಿರದೆ ಮನ ವೃತ್ತಿ ದೂರ ಕೋಡುತಿರೆ |
ತಿರುಗಳೆದು ನಿಲಿಸುವುದು ಗೆಲ್ವ ಬಯಕೆಯಿರೆ ||168||

ದುರಾಶೆಯಿಂದ ಹೀನದೀನನಾಗದೆ ಮನವನ್ನು ಶಾಂತ ಮಾಡುವವನೇ ನಿಜವಾದ ಸಂತನೆಂದು ತಿಳಿಯಿರಿ. ಪ್ರಾಪಂಚಿಕ ಕಾರ್ಯಾದಿಯು ಸಾಮಾನ್ಯತೆ ಧೇಹಬುದ್ಧಿಯನ್ನು ಬೆಳೆಸುವದಾದರೂ, ಶಾಂತ ಆತ್ಮಸ್ವರೂಪದಲ್ಲಿ ನೆಲಿಸಿದ ಸಂತರಿಗೆ ಅದೇನು ಪರಿಣಾಮ ಮಾಡೀತು?

ನಸೇ ಅಂತ ಆನಂತ ಸಂತಾ ಫುಸಾವಾ |
ಅಹಂಕಾರ ವಿಸ್ತಾರ ಹಾ ನೀರಸಾವಾ ||
ಗುಣೇವೀಣ ನಿರ್ಗೂಣ ತೋ ಆಠವಾವಾ
ದೇಹೇಬುದ್ಧಿಚಾ ಆಠವೋ ನಾಠವಾವಾ ||169||

ಸರ್ವಸಾರನು ಬ್ರಹ್ಮ ಗುಪ್ತನಾಗಿಹನು |
ಸರ್ವ ದೃಶ್ಯಗಳಿಗಾಭಾಸ ತೋರುವನು |
ಕಲ್ಪನಾತೀತ ನಿರಭಾಸ ನಿರ್ಗುಣನು |
ಸ್ವಲ್ಪ ಸಹ ಹಮ್ಮಿರಲು ಸಾಧಕಗು ಸಿಗನು ||169||

ನಾಶವಿಲ್ಲದ ಅನಂತ ವಸ್ತುವಿನ ಬಗ್ಗೆ ಸಂತರನ್ನು ಕೇಳಬೇಕು ಹಾಗೂ ಅಹಂಕಾರದಿಂದ ಬೆಳವಣ ಗೆಯಾದ ಅಸತ್ಯ ಪ್ರಪಂಚವನ್ನು ಖಂಡಿಸಬೇಕು. ದೇಹಭಾವವನ್ನು ಮೆರೆತು ಗುಣರಹಿತವಾದ ನಿರ್ಗುಣ ಬ್ರಹ್ಮಚಿಂತನೆ ಮಾಡಬೇಕು.

ದೇಹೇಬುದ್ಧಿಹೇ ಜ್ಞಾನಬೋಧೇ ತ್ಯಜಾವೀ |
ವಿವೇಕೇ ತಯೇ ವಸ್ತುಚೀ ಭೇಟಿಘ್ಯಾವೀ ||
ತದಾP Àರ ಹೇ ವೃತ್ತಿ ನಾಂಹೀ ಸ್ವಭಾವೇ |
ಮ್ಹಣೋನೀ ಸದಾ ತೇಚಿ ಶೋಧಿತ ಜಾವೇ ||170||

ಅಜ್ಞಾನವೇ ನೆಲೆಯು ವಿಷಯ ಕಲ್ಪನೆಗೆ |
ಸುಜ್ಞಾನವೇ ನೆಲೆಯು ಬ್ರಹ್ಮ ಕಲ್ಪನೆಗೆ ||
ಮೂಲ ಕಲ್ಪನೆಗೆ ತೋರುವುದೆರಡು ರೂಪ |
ಮೂಲದಲಿ ಲೀನ ಸುಜ್ಞನು ತೊಳೆದು ಪಾಪ ||170||

ಜ್ಞಾನದ ಉಪದೇಶ ಕೇಳಿ ದೇಹಾತ್ಮಬುದ್ಧಿಯನ್ನು ತೊರೆಯಬೇಕು ಹಾಗೂ ವಿವೇಕದಿಂದ ಆತ್ಮಸ್ವರೂಪದ ಭೇಟ್ಟಿತಕ್ಕೊಳ್ಳಬೇಕು. ಸಾಧಕನ ಮನವು ಸಹಜಗುಣವಾಗಿ ಆತ್ಮಾಕಾರ ಉಳಿಯುವದಿಲ್ಲವಾದ್ದರಿಂದ ನಿಧಿಧ್ಯಾಸದ ಬಗ್ಗೆ ಜಾಗರೂಕರಿರಬೇಕು.

ಅಸೇ ಸಾರ ಸಾಚಾರ ತೇ ಚೋರಲೇಸೇ |
ಇಹೀ ಲೋಚನೀ ಪಾಹತಾ ದೃಶ್ಯ ಭಾಸೇ ||
ನಿರಾಭಾ¸ À ನಿರ್ಗೂಣ ತೇ ಆP Àಳೇನಾ |
ಅಹಂತಾಗುಣೇ P Àಲ್ಪಿತಾಹೀ P Àಳೇನಾ ||171||

ಚಿದು ವ್ಯೋಮದೊಳಗೆ ದುರಹಂಕಾರ ರಾಹು|
ಉದಯಿಸಲು ಚಾಚುತಿಹುದು ಜ್ಞಾನ ಬಾಹು ||
ದಿಕ್ಕು ತೋಚದು ಕತ್ತಲೆಯು ಹೆಚ್ಚುತಿಹುದು |
ಸೊಕ್ಕಳಿದ ಮೇಲಲ್ಲಿ ಬ್ರಹ್ಮ ಕಾಣುವುದು ||171||

ಅತ್ಯಂತ ಶ್ರೇಷ್ಠವಾದ ಸತ್ಯವಸ್ತುವು ಗುಪ್ತವಾಗಿದ್ದು ಕಣ್ಣೆದುರಿಗೆ ಜಡಜಗತ್ತೇ ಭಾಸವಾಗುವದು ! ಆ ಭಾಸರಹಿತವಾದ ನಿರ್ಗುಣ ಸ್ವರೂಪದ ಆಕಲನೆಯಾಗಲೊಲ್ಲದು ಹಾಗೂ ತಾನೊಬ್ಬ ಜೀವನಾಗಿ ಬೇಕಾದಷ್ಟು ಕಲ್ಪಿಸಿದರೂ ಅದೇನು ತಿಳಿಯಲೊಲ್ಲದು!

ಸ್ಫುರೇ ವೀಷಯೀ P Àಲ್ಪನಾ ತೇ ಅವಿದ್ಯಾ |
ಸ್ಧುರೇ ಬ್ರಹ್ಮರೇ ಜಾಣ ಮಾಯಾ ಸುವಿದ್ಯಾ ||
ಮುಳೀ P Àಲ್ಪನಾ ದೋ ರೂಪೇ ತೇ ಚಿ ಝಾಲೀ |
ವಿವೇಕೇ ತರೀ ಸಸ್ವರೂಪೀ ಮಿಳಾಲೀ ||172||

ಅಜ್ಞಾನವೇ ನೆಲೆಯು ವಿಷಯ ಕಲ್ಪನೆಗೆ |
ಸುಜ್ಞಾನವೇ ನೆಲೆಯು ಬ್ರಹ್ಮ ಕಲ್ಪನೆಗೆ ||
ಮೂಲ ಕಲ್ಪನೆಗೆ ತೋರುವುದೆರಡು ರೂಪ |
ಮೂಲದಲಿ ಲೀನ ಸುಜ್ಞನು ತೊಳೆದು ಪಾಪ ||172||

ಮೂಲತಃ ಕಲ್ಪನಾರೂಪೀ ಮಾಯೆಯುವಿದ್ಯೆ – ಅವಿದ್ಯೆಯೆಂದು ಎರಡು ರೂಪದಿಂದ ನಿರ್ಮಾಣವಾಗಿದ್ದು, ವಿಷಯದತ್ತ ಕಲ್ಪನೆ ಹರಿಯುವದೇ ಅವಿದ್ಯಾ ಮಾಯೆಯು ಹಾಗೂ ಬ್ರಹ್ಮವು ಪ್ರತೀತಿಯಾಗುವದೇ ವಿದ್ಯಾಮಾಯೆಯು; ಆದರೆ ಜ್ಞಾನದ ವಿವೇಕದಿಂದ ಆ ಎರಡೂ ಬಗೆಯ ಕಲ್ಪನೆಯು ಆತ್ಮಸ್ವರೂಪದಲ್ಲಿ ಲಯವಾಗುವದು.

ಸ್ವರೂಪೀ ಉದೇಲಾ ಅಹಂಕಾರ ರಾಹೋ |
ತೇಣೇ ¸ Àರ್ವ ಆಚ್ಛಾದಿಲೇ ವ್ಯೋಮ ಪಾಹೋ ||
ದಿಶಾ ಪಾಹತಾ ತೇ ನಶಾ ವಾಢತಾಹೇ |
ವಿವೇಕೇ ವಿಚಾರೇ ವಿವಂಚೂನ ಪಾಹೇ ||173||

ಚಿದು ವ್ಯೋಮದೊಳಗೆ ದುರಹಂಕಾರ ರಾಹು|
ಉದಯಿಸಲು ಚಾಚುತಿಹುದು ಜ್ಞಾನ ಬಾಹು ||
ದಿಕ್ಕು ತೋಚದು ಕತ್ತಲೆಯು ಹೆಚ್ಚುತಿಹುದು |
ಸೊಕ್ಕಳಿದ ಮೇಲಲ್ಲಿ ಬ್ರಹ್ಮ ಕಾಣುವುದು ||173||

ಆತ್ಮಸ್ವರೂಪದಲ್ಲಿ ಅಹಂಕಾರರೂಪೀ ರಾಹುವು ಉದಯವಾಗಿ ಚಿದಾಕಾಶವೆಲ್ಲವನ್ನು ಆವರಿಸಿಬಿಟ್ಟಿರುವನು ! ಎತ್ತ ನೋಡಿದರೂ ಅಜ್ಞಾನರೂಪೀ ಕಗ್ಗತ್ತಲೆ ವ್ಯಾಪಿಸಿದೆ !! ನಿಜಸ್ಥಿತಿಯನ್ನು ವಿವೇಕದಿಂದ ಚನ್ನಾಗಿ ವಿಚಾರ ಮಾಡಿನೋಡಿರಿ.

ಜಯಾ ಚP À್ಷುನೇ ಲಕ್ಷಿತಾ ಅಲಕ್ಷವೇನಾ |
ಭವಾ ಭಕ್ಷಿತಾ ರಕ್ಷಿತಾ ರP À್ಷವೇನಾ ||
P À್ಷಂi ÀiÁತೀತ ತೋ ಅಕ್ಷಯೀ ಮೋಕ್ಷದೇತೋ |
ದಂi ÀiÁದP À್ಷತೋ ಸಾಕ್ಷಿನೇ ಪP À್ಷ ಘೇತೋ ||174||

ಕಣ ್ಣನಲಿ ಕಾಣಬಯಸಲು ದೇವ ಸಿಗನು |
ಬಣ್ಣ ಜಗದಾಗು ಇದು ಹೋಗು ಕಾರಣನು |
ಅಕ್ಷಯದ ಮೋಕ್ಷ ಕೊಡೆ ದಕ್ಷನಾಗಿಹನು |
ಪಕ್ಷ ವಹಿಪನು ಭಕ್ತ ಪ್ರೇಮದಿಂದವನು ||174||

ನಿರ್ಗುಣ ಆತ್ಮನನ್ನು ಕಣ ್ಣನಿಂದ ನೋಡಹೋದರೆ ಕಾಣ ಸಲಾರನು; ಆದರೂ ಅವನು ತನ್ನ ಜ್ಞಾನದಿಂದ ಸಂಸಾರ ದುಃಖವನ್ನು ನಾಶಮಾಡಲನುವಾದರೆ ಅದನ್ನು ಯಾರೂ ಉಳಿಸಲಾರರು ! ಸಾಕ್ಷಿಯಾಗಿ ದಯಾದಿ ಗುಣಗಳನ್ನು ಧರಿಸಿರುವ ಆತ್ಮದೇವನು ತನ್ನ ಭಕ್ತನಿಗೆ ಒಲಿದು ಸಾಯುಜ್ಯ ಮುಕ್ತಿಯನ್ನು ಕೊಡುವನು.

ವಿಧೀ ನಿರ್ಮಿತಾ ಲೀಹಿತೋ ¸ Àರ್ವ ಭಾಳೀ |
ಪರೀ ಲೀಹಿತೋ ಕೋಣ ತ್ಯಾಚೆ P Àಪಾಳೀ ||
ಹರೂ ಜಾಳಿತೋ ಲೋP À ಸಂಹಾರಕಾಳೀ |
ಪರೀ ಶೇವಟೀ ಶಂP Àರಾ ಕೋಣ ಜಾಳೀ ||175||

ವಿಧಿ ಲೋಕ ನಿರ್ಮಿತಿಗೆ ಮೂಲ ಕಾರಣವನು |
ವಿಧಿಯ ನಿರ್ಮಿಪನು ಸಹ ಬೇರೊಬ್ಬನಿಹನು ||
ಹರ ಪ್ರಲಯದಲಿ ಮೂಲೋಕ ದಹಿಸುವನು |
ಹರನ ದಹಿಪನು ಕೂಡ ಬೇರೊಬ್ಬನಿಹನು ||175||

ಬ್ರಹ್ಮದೇವನು ಹುಟ್ಟಿಸುವಾಗ ಎಲ್ಲರ ಹಣೆಯಬರಹ ಬರೆಯುತ್ತಾನಂತೆ; ಆದರೆ ಬ್ರಹ್ಮನ ಹಣೆಯ ಮೇಲೆ ಯಾವನು ಬರೆಯುವನು? ಹಾಗೆಯೇ ಶಂಕರನು ಪ್ರಲಯಕಾಲಕ್ಕೆ ಜಗತ್ತನ್ನು ಸುಡುವನಂತೆ; ಆದರೆ ಕೊನೆಗೆ ಶಂಕರನನ್ನು ಯಾವನು ದಹಿಸುವನು?

ಜಗೀ ದ್ವಾದಶಾದಿತ್ಯ ಹೇ ರುದ್ರಅಕ್ರಾ |
ಅಸಂಖ್ಯಾತ ಸಂಖ್ಯಾ ಕರೀ ಕೋಣ ಶಕ್ರಾ ||
ಜಗೀ ದೇವ ಧುಂಡಾಳಿತಾ ಆಢಳೇನಾ |
ಜನೀ ಮುಖ್ಯ ತೋ ಕೋಣ ಕೈಸಾ ಕಳೆನಾ ||176||

ದ್ವಾದಶಾದಿತ್ಯ ರೇಖಾದಶರು ರೌದ್ರ |
ವಾದಿಸಲಸಂಖ್ಯಾತ ರಿಂದ್ರ ದೇವೇಂದ್ರ ||
ಇವರ ನಾರನು ಮೂಲ ದೇವನೆನೆ ಬರದು |
ಅವನಾರು, ಹೇಗೆ, ತಿಳಿಯಲು ಸುಲಭಸಿಗದು ||176||

ವಿಶ್ವದಲ್ಲಿ 12 ಆದಿತ್ಯರು, 11 ರುದ್ರರು, ಅಸಂಖ್ಯ ಇಂದ್ರರು ಮೊದಲಾದ ದೇವತೆಗಳಿದ್ದಾರೆ ! ಆದರೆ ಎಷ್ಟು ಶೋಧಿಸಿದರೂ ಒಬ್ಬ ದೇವನೇನು ಸಿಗಲೊಲ್ಲನು, ಮುಖ್ಯ ದೇವನಾರೆಂಬುದೇನು ತಿಳಿಯಲೊಲ್ಲದು !

ತುಟೇನಾ ಫುಟೇನಾ P Àದಾ ದೇವರಾಣಾ |
ಚಳೇನಾ ಢಳೇನಾ P Àದಾ ದೈನ್ಯವಾಣಾ ||
P Àಳೇನಾ P Àಳೇನಾ P Àದಾ ಲೋಚನಾಸೀ |
ವಸೇನಾ ದಿಸೇನಾ ಜನೀ ಮೀಪಣಾಸೀ ||177||

ಮುರಿಯಲ್ಕೆ ಸುಡಲಿಕ್ಕೆ ನೆನೆಯಿಸಲು ಸಿಗನು |
ಸ್ಥಿರ ನಾದರುವೆ ಸರ್ವಶಕ್ತ ನಾಗಿಹನು |
ನೋಡಲಿಕೆ ಚರ್ಮಚಕ್ಷುವಿಗೆಂದು ಸಿಗನು |
ಮೂಢನಲಿ ಹಮ್ಮಿರಲು ದೂರ ಸರಿಯುವನು ||177||

ಮುಖ್ಯ ದೇವನಾದರೋ ಎಂದಿಗೂ ಹರಿಯನು, ಒಡೆಯನು, ದೀನತೆಯಿಂದ ಚಲಿಸನು, ಅಲುಗಾಡನು ! ಅವನೇನು ದೃಷ್ಟಿಗೆಂದಿಗೂ ತಿಳಿಯನು, ಅಹಂಭಾವಕ್ಕೆ ಕಾಣ ಸನು – ಅಲ್ಲಿ ವಾಸಿಸನು !

ಸದ್ಗುರುವಿನ ಅವಶ್ಯಕತೆ – ಸದ್ಗುರು ಲಕ್ಷಣ

6. (ಶ್ಲೋP À 178-184)

ಜಯಾ ಮಾನಲಾ ದೇವ ತೋ ಪೂಜಿತಾಹೇ |
ಪರೀ ದೇವ ಶೋಧೂನಿ ಕೋಣ ೀ ನ ಪಾಹೇ ||
ಜಿಗೀ ಪಾಹತಾ ದೇವ ಕೋಟ್ಯಾ£ Àುಕೋಟಿ |
ಜಯಾ ಮಾನಲೀ ಭಕ್ತಿ ಜೇ ತೇಚಿ ಮೋಠೀ ||178||

ಇಷ್ಟದಲಿ ಭಕ್ತ ಹರಿಪೂಜೆ ಮಾಡುವನು |
ಇಷ್ಟಮೂರ್ತಿಯೊಳಗಾನಂದ ಕಾಣುವನು ||
ಭಕ್ತಿಗನುಗುಣದೇವ ಕೋಟ್ಯಾನು ಕೋಟಿ |
ಭಕ್ತ ಗೊದಗಿಪನು ಬಹು ಪ್ರೀತಿಯಲಿ ಭೇಟಿ ||178||

ಪ್ರತಿಯೊಬ್ಬನು ತನಗೆ ಇಷ್ಟವಿದ್ದ ದೇವನ ಭಕ್ತಿ ಮಾಡುವನೇನೋ ಸರಿ, ಆದರೆ ಯಾವನೂ ದೇವರ ಸ್ವರೂಪವನ್ನು ವಿಚಾರಮಾಡಿ ನೋಡುವದಿಲ್ಲ ! ಜಗತ್ತಿನಲ್ಲಿಯಂತೂ ಕೋಟ್ಯಾವಧಿ ದೇವರಿದ್ದು ಯಾರಿಗೆ ಯಾವ ದೇವರ ಭಕ್ತಿ ಸೇರಿತೋ ಅದೇ ದೊಡ್ಡದಾಯಿತು !

ತಿನ್ಹೀ ಲೋಕ ಜೇಥೂನಿ ನಿರ್ಮಾಣ ಝಾಲೆ |
ತಂi ÀiÁ ದೇವರಾಯಾಸಿ ಕೋಣ ೀ ನ ಬೋಲೇ ||
ಜಗೀ ಥೋರಲಾ ದೇವ ತೋ ಚೋರಲಾಸೇ |
ಗುರೂವೀಣ ತೋ ಸರ್ವಥಾಹೀ ನ ದೀಸೇ ||179||

ಮೂಲೋಕ ಸೃಷ್ಟಿ ಕಾರಣ ಬ್ರಹ್ಮನಹುದು |
ಮೂಲ ಮೂರುತಿ ಮರೆವು ಮೂಢನಿಗೆ ಬಹುದು |
ಚರ್ಮ ಚಕ್ಷುವಿಗಂತು ಗೊಚರಿಸನವನು |
ಮರ್ಮ ತಿಳಿಸಲು ಗುರುವು ಶೀಘ್ರ ಕಾಣುವನು ||179||

ಮೂರೂ ಲೋಕಗಳ ನಿರ್ಮಿತಿಗೆ ಕಾರಣನಾದ ಸರ್ವಶ್ರೇಷ್ಠ ದೇವನ ಬಗ್ಗೆ ಯಾರೂ ವಿಚಾರ ಮಾಡುವದಿಲ್ಲ ! ಆ ದೇವಾಧಿದೇವನಾದರೋ ಅಡಗಿಕೊಂಡಿದ್ದು ಗುರುಗಳ ಹೊರತಾಗಿಯೇನು ಅವನ ದರ್ಶನವಾಗದು.

ಗುರೂ ಪಾಹತಾ ‘ಪಾಹತಾ ಲಕ್ಷ ಕೋಟೀ’*|
ಬಹೂಸಾಲ ಮಂತ್ರಾವಳೀ ಶಕ್ತಿಮೋಠೀ ||
ದುನೀ ಕಾಮನಾ ಚೇಟಕೇ ಧಾತಮಾತಾ |
ಜನೀ ವ್ಯರ್ಥರೇ ತೋ ನವ್ಹೇ ಮುಕ್ತಿದಾತಾ ||180||

ಬಹು ಕಾಣುವರು ಛದ್ಮ ಗುರು ಲೋಕದಲ್ಲಿ |
ಬಹು ಶಕ್ತಿಯನು ತೋರಿಪರು ಮಂತ್ರದಲ್ಲಿ ||
ರಾಮ ತೃಪ್ತಿಗೆ ಚೇಟಿ ವಿದ್ಯೆ ಹಿಡಿದಿಹರು |
ಪ್ರೇಮದಾಶ್ರಯ ವ್ಯರ್ಥ ಮುಕ್ತಿಯನು ಕೊಡರು ||180||

ಇನ್ನು ಗುರುಗಳನ್ನು ಶೋಧಿಸಹತ್ತಿದರೆ ಬಹಳ ಸಾಮಥ್ರ್ಯವಂತವೆಂದು ವಿವಿಧ ಮಂತ್ರಗಳನ್ನು ಉಪದೇಶಿಸುವ ಕೋಟ್ಯಾವಧಿ ಗುರುಗಳಿರುತ್ತಾರೆ. ಆದರೆ ಅಂತಹ ಚೇಟಕೀ ಇತ್ಯಾದಿ ಪ್ರಯೋಗ ಮಾಡುವ ಕಾಮನಿಕ ಗುರುವು ನಿರರ್ಥಕನಿದ್ದು ಅವನೇನು ಮುಕ್ತಿಕೊಡಲರಿಯನು !

ನವ್ಹೇ ಚೇಟಕೀ ಚಾಳಕೂ ದ್ರವ್ಯಭೋಂದೂ |
ನವ್ಹೇ ನಿಂದP Àೂ ಮತ್ಸರೂ ಭಕ್ತಿಮಂದೂ ||
ನವ್ಹೇ ಉನ್ಮತೂ ವೇಸನೀ ಸಂಗಬಾಧೂ |
ಜನೀ ಜ್ಞಾನಿಯಾ ತೋ ಚಿ ಸಾಧೂ ಆಗಾಧೂ ||181||

ಮೋಸಗಾರನು ಲೋಭಿ ಕ್ರೂರ ಚೀಟಕಿಯು |
ಹೇಸದಿಹ ಹಿಂಸಕಿಯು, ಹೀನ ಮತ್ಸರಿಯು ||
ಹಾನಿಕರ, ಮತ್ತ, ವ್ಯಸನಿಯು, ಛದ್ಮ ಗುರುವು |
ಜ್ಞಾನಿಯ ಪರಂಪಾರ ಮಹಿಮ ಸದ್ಗುರುವು ||181||

ಚೇಟಕೀ ವಿದ್ಯೆಯವನಲ್ಲದ, ಮೋಸಗಾರನಲ್ಲದ, ದ್ರವ್ಯ ಅಪಹರಿಸದ, ನಿಂದೆ ಮಾಡದ, ಹೊಟ್ಟೇಕಿಚ್ಚು ಇಲ್ಲದ ಭಕ್ತಿಹೀನನಲ್ಲದ, ಕೊಬ್ಬಿರದ, ವ್ಯಸನಾಧೀನನಲ್ಲದ, ಸಂಗತಿಯಿಂದ ಹಾನಿಯನ್ನೇ ತಾರದ ಇವೆಲ್ಲ ಅವಗುಣರಹತನಾದ ಜ್ಞಾನಿಯು ಮಾತ್ರ ಮಹಿಮಾಶಾಲಿ ಗುರುವೆನಿಸಬಲ್ಲನು !

ನವ್ಹೇ ವಾಉಗೀ ಚಾಹುಟೀ ಕಾಮ ಪೋಟೀ |
ಕ್ರಿಯೇವೀಣ ವಾಚಾಳತಾ ತೇಚಿ ಮೋಠೀ ||
ಮುಖೇ ಬೋಲಣ್ಯಾಸಾರಿಖೇ ಚಾಲತಾಹೇ |
ಮನಾ ಸದ್ಗುರೂ ತೋಚಿ ಶೋಧೂನಿ ಪಾಹೇ ||182||

45* 45ಪಾಠಭೇದ – ಲಕ್ಷಕೋಟ್ಯಾನುಕೋಟೀ

ಕಾಮಿ ಮನದಲಿ, ತನ್ನ ಹೊಗಳಿ ಕೊಳ್ಳುವನು |
ನೇಮವಿಲ್ಲದೆ ನುಡಿಯೆ ಛದ್ಮ ಗುರುವವನು |
ಮಾತು ಮನದಂತೆಯೇ ನಡೆಯುತಿರೆ ಧನ್ಯ |
ನೀತಿಯಿರಲವನೆ ತಿಳಿ ಸದ್ಗುರುವು ಗಣ್ಯ ||182||

ಮನವೇ, ಹೊಟ್ಟೆಯಲ್ಲಿ ಆಶೆ ಇಟ್ಟುಕೊಂಡು ಮೇಲೆ ನಿರರ್ಥಕಗಳಹುವದೇನು ಸದ್ಗುರು ಲಕ್ಷಣವಲ್ಲ; ಅದು ಕೇವಲ ಕ್ರಿಯಾರಹಿತ ಬಡಬಡಿಕೆಯೇ ಸೈ ! ಆದರೆ ಬಾಯಿಯಿಂದ ನುಡಿದಂತೆ ನಡೆಯುವವನೇ ನಿಜವಾದ ಸದ್ಗುರುವೆಂದು ಕಂಡುಹಿಡಿ.

ಜನೀ ಭP À್ತಜ್ಞಾನೀ ವಿವೇಕೀ ವಿರಾಗೀ |
P Àೃಪಾಳೂ ಮನಸ್ವೀ P À್ಷಮಾವಂತ ಯೋಗೀ ||
ಪ್ರಭೂ ದP À್ಷ ವ್ಯುತ್ಪನ್ನ ಚಾತುರ್ಯ ಜಾಣೇ |
ತಂi ÀiÁಚೇನಿ ಯೋಗೇ ಸಮಾಧಾನ ಬಾಣೇ ||183||

ಸದ್ಗುರುವು ಜ್ಞಾನಿ, ಭಕ್ತ, ವಿವೇಕಿ, ತ್ಯಾಗಿ |
ಚಿದ್ಗುಣ ಯು ಕ್ಷಮೆ, ಶಾಂತಿ, ದಯೆಯಿರಲು ಹೋಗಿ ||
ಶಾಸ್ತ್ರಶೀಲನು ಶೂರಸಮ ಪ್ರೇಮಯುತನು |
ಆಶ್ರಯದ ಭಕ್ತನಿಗೆ ಶಾಂತಿದಾಯಕನು ||183||

ಜ್ಞಾನೀ ಭಕ್ತನು, ವಿವೇಕ – ವೈರಾಗ್ಯಶಾಲಿಯು, ದಯಾಲುವು, ಸ್ವತಂತ್ರನು, ಕ್ಷಮಾಶೀಲನು, ಧ್ಯಾನನಿಷ್ಠನು, ಸಮರ್ಥನು, ದಕ್ಷನು, ಶಾಸ್ತ್ರ ಅರಿತವನು ಹಾಗೂ ವ್ಯವಹಾರಚತುರನು ಇವೆಲ್ಲ ಲಕ್ಷಣಯುಕ್ತ ಗುರುವಿನಿಂದಲೇ ಶಾಂತಿ ಲಭಿಸುವುದು.

ನವ್ಹೇ ತೇಚಿ ಝಾಲೇ ನಸೇ ತೇಚಿ ಆಲೇ |
P Àಳೋ ಲಾಗಲೇ ¸ Àಜ್ಜನಾಚೇನಿ ಬೋಲೇ ||
ಅನಿರ್ವಾಚ್ಯ ತೇ ವಾಚ್ಯ ವಾಚೇ ವದಾವೇ |
ಮನಾ ಸಂತ ಅನಂತ ಶೋಧೀತ ಜಾವೇ ||184||

ನಿರ್ವಿಕಾರನು ಬ್ರಹ್ಮರೂಪ ವಿರಹಿತನು |
ಸರ್ವ ಬೋಧವನು ಗುರು ಸುಲಭ ತಿಳಿಸುವನು ||
ನುಡಿ ಬಿಟ್ಟರೆ ನಿರ್ವಾಚ್ಯನ ತಿಳಿವುದೆಂತು |
ಬಿಡದೆ ಗುರುಬೋಧವ ಮನನ ಮಾಡೆ ಬರಿತು ||184||

‘ಅಸತ್ಯ ಮಾಯೆಯೇ ನಿರ್ಮಾಣವಾಗಿದೆ, ನಿಜವಾಗಿ ಇಲ್ಲದುದೇ ಎದುರಾಗಿದೆ’ ಯೆಂಬ ಸಂಗತಿಯು ಸತ್ಪುರುಷರ ಬೋಧದಿಂದ ತಿಳಿಯಹತ್ತಿತ್ತು. ಮನವೇ, ಹೀಗೆ ಮಾಯೆಯನ್ನು ಅರಿತ ಮೇಲೆ